ಬಿಗ್ ಬಾಸ್ ಹಿಂದಿ ಸೀಸನ್ 20ರ (Bigg boss Hindi) ಇತ್ತೀಚಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಭಾಟಿಯಾ ತಮ್ಮ ಹೊಸ ಲುಕ್‌ನಿಂದ ಗಮನ ಸೆಳೆದಿದ್ದಾರೆ. ಹೌಸ್ ಆಫ್ ಮಸಾಬಾ ಸೀರೆಯಲ್ಲಿ ಕಾಣಿಸಿಕೊಂಡಿರುವ ತಮನ್ನಾ (Tamannaah Bhatia), ಹಬ್ಬದ ಲುಕ್‌ಗೆ ರಿಚ್ ಹಾಗೂ ಟ್ರೆಡಿಷನಲ್ ಟಚ್ ನೀಡಿದ್ದಾರೆ.
ತಮನ್ನಾ ಧರಿಸಿದ್ದ ಡೀಪ್ ವೈನ್ ಬಣ್ಣದ ಸೀರೆ ಇದೀಗ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ‘ಅಲ್ಬೆಲಾ ಸಾಜನ್’ ಎಂದು ಕರೆಯಲಾಗುವ ಈ ಸೀರೆಯ ಬೆಲೆ ಹೌಸ್ ಆಫ್ ಮಸಾಬಾ ವೆಬ್‌ಸೈಟ್‌ನಲ್ಲಿ ಬರೋಬ್ಬರಿ 1,85,000 ರೂ. ಇದೆ.
ಗೋಲ್ಡ್ ಟಚ್, ಪ್ರಿಂಟ್‌ಗಳು, ವೆಲ್ವೆಟ್ ಟಚ್
ಡೀಪ್ ಮರೂನ್ ಬೇಸ್ ಹೊಂದಿರುವ ಈ ಸೀರೆಯಲ್ಲಿ ಕಪ್ಪು ಮತ್ತು ಚಿನ್ನದ ಬಣ್ಣದ ಪ್ರಿಂಟೆಡ್ ಮೋಟಿಫ್‌ಗಳಿವೆ. ಸೀರೆಯ ಗಡಿ ಹಾಗೂ ಪಲ್ಲಿನಲ್ಲಿ ಚಿನ್ನದ ಅಲಂಕಾರವಿದೆ. ಜೊತೆಗೆ ವೆಲ್ವೆಟ್ ಡಿಟೇಲಿಂಗ್ ಕೂಡ ಸೀರೆಯ ಲುಕ್‌ಗೆ ಇನ್ನಷ್ಟು ರಿಚ್‌ನೆಸ್ ನೀಡಿದೆ. ನಾಣ್ಯ ಮತ್ತು ಕೌರಿ ಶೆಲ್‌ಗಳ ವಿವರಗಳಿರುವ ಲೇಸ್ ಬಾರ್ಡರ್ ಸೀರೆಯ ಪ್ರಮುಖ ಆಕರ್ಷಣೆಯಾಗಿದೆ. ಹೀಗಾಗಿ ಸೀರೆ ಒಂದೇ ಬಣ್ಣದಲ್ಲಿದ್ದರೂ ಲುಕ್ ತುಂಬಾ ಹೆವಿ ಹಾಗೂ ಗ್ರ್ಯಾಂಡ್ ಆಗಿ ಕಾಣುತ್ತದೆ. ಇದನ್ನೂ ಓದಿ: AI ಮನುಷ್ಯನನ್ನೇ ಕೊಲ್ಲುವ ಮಟ್ಟಕ್ಕೆ ಅಪಾಯಕಾರಿಯಾಗಬಹುದಾ?
ತಮನ್ನಾ ಕೂಡ ಈ ಲುಕ್ ಅನ್ನು ‘ಮಾಡರ್ನ್ ಇಂಡಿಯನ್ ಗ್ಲಾಮರ್’ ಎಂದು ಬಣ್ಣಿಸಿದ್ದಾರೆ. ಲೇಸ್ ಬಾರ್ಡರ್, ಗೋಲ್ಡ್ ಎಂಬ್ರಾಯಿಡರಿ, ಪ್ರಿಂಟೆಡ್ ಮೋಟಿಫ್‌ಗಳು ಹಾಗೂ ವೆಲ್ವೆಟ್ ಡಿಟೇಲಿಂಗ್ ಈ ಲುಕ್‌ನ ಹೈಲೈಟ್‌ಗಳಾಗಿವೆ.
ಮಾಡರ್ನ್ ಟಚ್ ಕೊಟ್ಟ ಬ್ಲೌಸ್
ಸೀರೆಗೆ ಮ್ಯಾಚ್ ಆಗುವ ವೈನ್ ಬಣ್ಣದ ಫಿಟ್ಟೆಡ್ ಬ್ಲೌಸ್ ಅನ್ನು ತಮನ್ನಾ ಧರಿಸಿದ್ದರು. ಸ್ವೀಟ್‌ಹಾರ್ಟ್ ನೆಕ್‌ಲೈನ್ ಮತ್ತು ಸಣ್ಣ ಕ್ಯಾಪ್ ಸ್ಲೀವ್ಸ್ ಬ್ಲೌಸ್‌ನಲ್ಲಿವೆ. ನೆಕ್‌ಲೈನ್ ಮತ್ತು ಸ್ಲೀವ್ಸ್ ಬಳಿ ಗೋಲ್ಡ್ ಎಂಬ್ರಾಯಿಡರಿ ಇದೆ. ಸೊಂಟದ ಬಳಿ ಇರುವ ದೊಡ್ಡ ಕಸೂತಿ ಮೋಟಿಫ್ ಕೂಡ ಗಮನ ಸೆಳೆಯುತ್ತದೆ. ಈ ಬ್ಲೌಸ್‌ನಿಂದ ಇಡೀ ಲುಕ್ ತುಂಬಾ ಸಾಂಪ್ರದಾಯಿಕವಾಗಿ ಕಾಣದೆ ಮಾಡರ್ನ್ ಟಚ್ ಪಡೆದುಕೊಂಡಿದೆ. ಇದನ್ನೂ ಓದಿ: ಜೈಲಿನಲ್ಲಿ 5 ಸಜಾಬಂಧಿಗಳಿರುವ ಬ್ಯಾರಕ್‌ಗೆ ಪವಿತ್ರಾ ಗೌಡ ಶಿಫ್ಟ್; ಇಂದು ಜಾಮೀನು ಅರ್ಜಿ ವಿಚಾರಣೆ
ನೀಲಿ-ಹಸಿರು ಆಭರಣವೇ ಹೈಲೈಟ್
ಸೀರೆಯೊಂದಿಗೆ ತಮನ್ನಾ ಆಯ್ಕೆ ಮಾಡಿಕೊಂಡಿರುವ ಆಭರಣ ಕೂಡ ವಿಭಿನ್ನವಾಗಿದೆ. ನೀಲಿ ಮತ್ತು ಹಸಿರು ಬಣ್ಣದ ಸ್ಟೇಟ್‌ಮೆಂಟ್ ಇಯರಿಂಗ್ಸ್ ಧರಿಸಿದ್ದರು.
ಮರೂನ್ ಮತ್ತು ಗೋಲ್ಡ್ ಬಣ್ಣದ ಸೀರೆಗೆ ಈ ಕೂಲ್ ಟೋನ್ ಆಭರಣಗಳು ಒಳ್ಳೆಯ ಕಾಂಟ್ರಾಸ್ಟ್ ನೀಡಿವೆ. ಆಭರಣವನ್ನು ಸೀರೆಯ ಬಣ್ಣಕ್ಕೆ ಸಂಪೂರ್ಣವಾಗಿ ಮ್ಯಾಚ್ ಮಾಡದೆ ವಿಭಿನ್ನ ಬಣ್ಣ ಆಯ್ಕೆ ಮಾಡಿಕೊಂಡಿರುವುದು ಲುಕ್‌ಗೆ ಫ್ರೆಶ್ ಫೀಲ್ ನೀಡಿದೆ. ಸಣ್ಣ ಬಿಂದಿ, ಸಾಫ್ಟ್ ಮೇಕಪ್ ಮತ್ತು ಮಧ್ಯಭಾಗದಲ್ಲಿ ಬಿಡಿಸಿರುವ ಉದ್ದನೆಯ ಕಂದು ಬಣ್ಣದ ಕೂದಲನ್ನು ಸಾಫ್ಟ್ ವೇವ್ಸ್‌ನಲ್ಲಿ ಸ್ಟೈಲ್ ಮಾಡಿದ್ದಾರೆ. ಮೇಕಪ್ ಹಾಗೂ ಹೇರ್‌ಸ್ಟೈಲ್ ಅನ್ನು ಸಿಂಪಲ್ ಆಗಿ ಇಟ್ಟು ಸೀರೆ ಮತ್ತು ಬ್ಲೌಸ್‌ಗೆ ಹೆಚ್ಚು ಫೋಕಸ್ ನೀಡಿದ್ದಾರೆ.

