ಹಾವೇರಿ: ಕಾಡುಹಂದಿಗಳ (Wild boar) ಕಾಟದಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಇಟ್ಟಿದ್ದ ನಾಡಬಾಂಬ್ (Bomb) ಸೇವಿಸಿ ಎರಡು ಶ್ವಾನಗಳು ಹಾಗೂ ಒಂದು ನರಿ ಸಾವನ್ನಪ್ಪಿದ್ದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದ ಸಮೀಪ ನಡೆದಿದೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ಬೇಸತ್ತ ಕೆಲ ರೈತರು ಕಾಡುಹಂದಿಗಳನ್ನು ತಡೆಯುವ ಉದ್ದೇಶದಿಂದ ನಾಡಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗಳೂರು ನಮ್ಮ ದೇಶಕ್ಕೇ ಚಿನ್ನದ ಮೊಟ್ಟೆ ಇಡುವ ಕೋಳಿ, ಇನ್ನಷ್ಟು ಸುಧಾರಣೆ ಮಾಡಬೇಕು: ಕೃಷ್ಣ ಬೈರೇಗೌಡ
ಕಾಡುಹಂದಿಗಳ ಬದಲಾಗಿ ಎರಡು ಶ್ವಾನಗಳು ಹಾಗೂ ಒಂದು ನರಿ ಆ ಸ್ಫೋಟಕವನ್ನು ಸೇವಿಸಿದ್ದರಿಂದ ಸಾವನ್ನಪ್ಪಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: Nepal Flood Horror | 288 ಭಾರತೀಯರು ನಾಪತ್ತೆ, 21 ತಮಿಳಿಗರ ರಕ್ಷಣೆ – ರಾಜ್ಯವಾರು ಮಾಹಿತಿ ಹಂಚಿಕೊಂಡ ಎಂಇಎ
