ದೋಹಾ: ಕತಾರ್‌ನ (Qatar) ಪ್ರಮುಖ ನೈಸರ್ಗಿಕ ಅನಿಲ (Natural Gas) ರಫ್ತು ಕೇಂದ್ರವಾದ ರಾಸ್ ಲಾಫನ್ (Ras Laffan) ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರೀ ಸ್ಫೋಟದಿಂದ (Explosion) ಕನಿಷ್ಠ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಯುದ್ಧದ ಸಂದರ್ಭದಲ್ಲಿ ನಡೆಸಿದ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಅನಿಲ ರಫ್ತು ಕಾರ್ಯಾಚರಣೆಯನ್ನು ಪುನರಾರಂಭಿಸಲು ಕಾರ್ಮಿಕರು ಪ್ರಯತ್ನಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಶಾಂತಿ ಮಾತುಕತೆಯಿಂದ ಇರಾನ್ ಹೊರ ನಡೆದ ಬೆನ್ನಲ್ಲೇ ಮತ್ತೆ ಕಚ್ಚಾ ತೈಲ ದರ ಏರಿಕೆ
ವಿಶ್ವದ ಅಗ್ರ ನೈಸರ್ಗಿಕ ಅನಿಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಕತಾರ್‌ನ ಈ ಪ್ರಮುಖ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮತ್ತಷ್ಟು ಅನಿಶ್ಚಿತತೆ ಉಂಟುಮಾಡುವ ಸಾಧ್ಯತೆಯಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ನಿಯಂತ್ರಣದ ಕಾರಣದಿಂದ ಕತಾರ್ ತನ್ನ ಅನಿಲ ರಫ್ತು ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಇದನ್ನೂ ಓದಿ: ಮನೆಯ ಬೀಗ ಮುರಿದು ಕಳ್ಳತನ – 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ದೋಚಿ ಪರಾರಿ
ಯುದ್ಧಕ್ಕೆ ಶಾಶ್ವತ ಅಂತ್ಯ ಕಾಣಿಸುವ ಕುರಿತು ಮಾತುಕತೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾನ್ ತನ್ನ ನಿಯಂತ್ರಣವನ್ನು ಸಡಿಲಗೊಳಿಸಿದ ನಂತರ, ಕತಾರ್ ಮತ್ತೆ ರಫ್ತು ಟರ್ಮಿನಲ್ ಕಾರ್ಯಾರಂಭಿಸಲು ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆ ಭಾನುವಾರ ರಾತ್ರಿ ರಫ್ತು ಕಾರ್ಯಾಚರಣೆಗಳನ್ನು ಮರುಪ್ರಾರಂಭಿಸುವ ವೇಳೆ ಬರ್ಝಾನ್ ಅನಿಲ ಪೂರೈಕೆ ಘಟಕದಲ್ಲಿ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡಿದೆ ಎಂದು ಸರ್ಕಾರಿ ಸ್ವಾಮ್ಯದ ಕತಾರ್ ಎನರ್ಜಿ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಟ್ರಂಪ್ ಧಮಕಿಗೆ ಇರಾನ್ ಕೆಂಡ: ಶಾಂತಿ ಮಾತುಕತೆ ವೇದಿಕೆಯಿಂದ ಇರಾನ್ ಹೊರ ನಡೆದಿದ್ದು ಯಾಕೆ?
ಸ್ಫೋಟದಿಂದ ಉಂಟಾದ ಹಾನಿಯ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಆರಂಭದಲ್ಲಿ ಕೆಲವೇ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಕೆಲವೇ ಗಂಟೆಗಳ ಬಳಿಕ ಕತಾರ್ ಆಂತರಿಕ ಸಚಿವಾಲಯ ಗಾಯಾಳುಗಳ ಸಂಖ್ಯೆ 54ಕ್ಕೆ ಏರಿರುವುದಾಗಿ ಹಾಗೂ 18 ಮಂದಿ ನಾಪತ್ತೆಯಾಗಿರುವುದಾಗಿ ಪ್ರಕಟಿಸಿದೆ. ಇದನ್ನೂ ಓದಿ: ಆರಂಭದಲ್ಲೇ ಮಾವಿನ ಹಣ್ಣಿನ ದರ ಕುಸಿತ – ಬೆಂಬಲ ಬೆಲೆಗೆ ಆಗ್ರಹಿಸಿ ಇಂದು ಕೋಲಾರ ಬಂದ್
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಸ್ಫೋಟದ ನಿಖರ ಕಾರಣ ಹಾಗೂ ಹಾನಿಯ ಪ್ರಮಾಣ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: 51 ವರ್ಷಗಳಿಂದ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ದೇವಸ್ಥಾನ ಮತ್ತೆ ಗೋಚರ!
