Monday, 19th August 2019

Recent News

ಕೊನೆಯಲ್ಲಿ ಧೋನಿ ಸಿಕ್ಸರ್, 6 ವಿಕೆಟ್‍ಗಳಿಂದ ಗೆದ್ದ ಭಾರತ

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿಟ್ಟಿದೆ.

ಮೊದಲ ಏಕದಿನ ಪಂದ್ಯದಲ್ಲಿ ಬಾಲನ್ನು ವ್ಯರ್ಥ ಮಾಡಿದ್ದರಿಂದಲೇ ಸೋಲಾಯ್ತು ಎಂದು ಟೀಕೆಗೆ ಗುರಿಯಾಗಿದ್ದ ಧೋನಿ ಇಂದು ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ.

299 ರನ್ ಗಳ ಗುರಿಯನ್ನು ಬೆನ್ಟಟ್ಟಿದ ಭಾರತಕ್ಕೆ ಕೊನೆಯ 18 ಎಸೆತಗಳಲ್ಲಿ 25 ರನ್ ಬೇಕಿತ್ತು. 48ನೇ ಓವರ್ ನಲ್ಲಿ 9 ರನ್ ಬಂದರೆ 49ನೇ ಓವರ್ ನಲ್ಲಿ 9 ರನ್ ಬಂದಿತ್ತು. ಕೊನೆಯ 6 ಎಸೆತಗಳಲ್ಲಿ 7 ರನ್ ಬೇಕಿತ್ತು. ಬೆಹಂಡ್ರೂಫ್ ಎಸೆದ ಮೊದಲ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಧೋನಿ ಒತ್ತಡವನ್ನು ಕಡಿಮೆ ಮಾಡಿದರು. ಈ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದ ಧೋನಿ ಎರಡನೇ ಎಸೆತದಲ್ಲಿ ಒಂಟಿ ರನ್ ತೆಗೆಯುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು. ಈ ಮೂಲಕ ಮತ್ತೊಮ್ಮೆ ತಾನೊಬ್ಬ ಯಶಸ್ವಿ ಮ್ಯಾಚ್ ಫಿನಿಶರ್ ಎಂಬುದನ್ನು ತೋರಿಸಿಕೊಟ್ಟರು.

ಧೋನಿ 55 ರನ್(54 ಎಸೆತ, 2 ಸಿಕ್ಸರ್), ದಿನೇಶ್ ಕಾರ್ತಿಕ್ 25 ರನ್( 14 ಎಸೆತ, 2 ಬೌಂಡರಿ) ಹೊಡೆದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 57 ರನ್ ಗಳ ಜೊತೆಯಾಟವಾಡಿ ಗೆಲುವು ತಂದರು. 40 ಓವರ್ ಮುಕ್ತಾಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತ್ತು. 60 ಎಸೆತಗಳಲ್ಲಿ 83 ರನ್ ಗಳಿಸಬೇಕಾದ ಒತ್ತಡದಲ್ಲಿತ್ತು. 45 ಓವರ್ ನಲ್ಲಿ ಧೋನಿ ಲಯನ್ ಎಸೆತವನ್ನು ಸಿಕ್ಸರ್ ಅಟ್ಟಿದ್ದರು. 30 ಎಸೆತಗಳಲ್ಲಿ 44 ರನ್ ಗಳಿಸಬೇಕಿತ್ತು.

ಇದಕ್ಕೂ  ಮೊದಲು 108 ಎಸೆತಗಳಲ್ಲಿ ಶತಕ ಹೊಡೆದ ಕೊಹ್ಲಿ 104 ರನ್(112 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ರೋಹಿತ್ ಶರ್ಮಾ 43 ರನ್(52 ಎಸೆತ, 2 ಡರಿ, 2 ಸಿಕ್ಸರ್), ಶಿಖರ್ ಧವನ್ 32 ರನ್( 28 ಎಸೆತ, 5 ಬೌಂಡರಿ) ಅಂಬಾಟಿ ರಾಯುಡು 24 ರನ್(36 ಎಸೆತ, 2 ಬೌಂಡರಿ) ಹೊಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಶೇನ್ ಮಾರ್ಶ್ ಅವರ ಶತಕದಿಂದಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತ್ತು. ಮಾರ್ಶ್ 131 ರನ್(123 ಎಸೆತ, 11 ಬೌಂಡರಿ, 3 ಸಿಕ್ಸರ್) ಹೊಡೆದರೆ ಮ್ಯಾಕ್ಸ್ ವೆಲ್ 48 ರನ್(37 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರು. ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

 

Leave a Reply

Your email address will not be published. Required fields are marked *