Connect with us

Bengaluru City

ರಾಜ್ಯದಲ್ಲಿಂದು 1,936 ಮಂದಿಗೆ ಕೊರೊನಾ ಸೋಂಕು – ಮರಣ ಪ್ರಮಾಣ ಶೇ.0.96

Published

on

– ಜಿಲ್ಲೆಗಳಲ್ಲಿ ಎರಡಂಕಿಗೆ ಇಳಿಕೆಯಾದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಇಂದು 1,936 ಮಂದಿಗೆ ಸೋಂಕು ತಗುಲಿದೆ. ಇಂದು ಕೊರೊನಾಗೆ 19 ಸೋಂಕಿತರು ಮರಣ ಹೊಂದಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರು ಸಂಖ್ಯೆ 8,04,485ಕ್ಕೆ ಏರಿಕೆಯಾಗಿದ್ದು, 32,936 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 11,410ಕ್ಕೆ ಏರಿಕೆಯಾಗಿದ್ದು, ಶೇಕಡವಾರು ಮರಣ ಪ್ರಮಾಣ 0.96ಕ್ಕೆ ಇಳಿಕೆಯಾಗಿದೆ. ಕೋವಿಡ್ 19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.2.31ಕ್ಕೆ ಇಳಿದಿದೆ. ಇಂದು 84,965 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 22, ಬಳ್ಳಾರಿ 37, ಬೆಳಗಾವಿ 34, ಬೆಂಗಳೂರು ಗ್ರಾಮಾಂತರ 93, ಬೆಂಗಳೂರು ನಗರ 978, ಬೀದರ್ 3, ಚಾಮರಾಜನಗರ 12, ಚಿಕ್ಕಬಳ್ಳಾಪುರ 56, ಚಿಕ್ಕಮಗಳೂರು 7, ಚಿತ್ರದುರ್ಗ 69, ದಕ್ಷಿಣ ಕನ್ನಡ 18, ದಾವಣಗೆರೆ 19, ಧಾರವಾಡ 33, ಗದಗ 4, ಹಾಸನ 48, ಹಾವೇರಿ 13, ಕಲಬುರಗಿ 34, ಕೊಡಗು 14, ಕೋಲಾರ 52, ಕೊಪ್ಪಳ 16, ಮಂಡ್ಯ 73, ಮೈಸೂರು 95, ರಾಯಚೂರು 20, ರಾಮನಗರ 3, ಶಿವಮೊಗ್ಗ 28, ತುಮಕೂರು 65, ಉಡುಪಿ 29, ಉತ್ತರ ಕನ್ನಡ 47, ವಿಜಯಪುರ 38 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *