ತಿರುವನಂತಪುರಂ: ಕಂಪ್ಯೂಟರ್ ತರಗತಿಗೆ ತೆರಳುತ್ತಿದ್ದ 21 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ 15ರ ಬಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಮಲ್ಪಪುರಂ ಜಿಲ್ಲೆಯಲ್ಲಿ ನಡೆದಿದೆ.
Advertisement
ಮಹಿಳೆ ತಡರಾತ್ರಿ ಕಂಪ್ಯೂಟರ್ ತರಗತಿಗೆ ತೆರಳುತ್ತಿದ್ದರು. ಈ ವೇಳೆ ಆಕೆಯನ್ನು ಬಾಲಕ ಹಿಂಬಾಲಿಸಿದ್ದಾನೆ. ನಂತರ ಆಕೆಯನ್ನು ರಸ್ತೆ ಪಕ್ಕದ ತೋಟಕ್ಕೆ ಎಳೆದೊಯ್ದಿದ್ದಾನೆ. ಮಹಿಳೆಯ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿ, ಆಕೆಯ ಕೈಗಳನ್ನು ದುಪ್ಪಟ್ಟದಿಂದ ಕಟ್ಟಿಹಾಕಿ, ಉಸಿರುಗಟ್ಟಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಕೊನೆಗೂ ಮಹಿಳೆ ಆತನಿಂದ ತಪ್ಪಿಸಿಕೊಂಡು ಹತ್ತಿರದ ಮನೆಯೊಂದಕ್ಕೆ ಓಡಿ ಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುಜಿತ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯಕ್ಕೆ ಹತ್ತು ರೂ. ನೀಡದ್ದಕ್ಕೆ ಸ್ನೇಹಿತನನ್ನೇ ಕೊಂದ್ರು
Advertisement
ಆರೋಪಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಬುಧವಾರ ಆತನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದರು. ನಂತರ ವೈದ್ಯಕೀಯ ಪರೀಕ್ಷೆಗಾಗಿ ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್- ನೆಟ್ಟಿಗರಿಂದ ತರಾಟೆ!
Advertisement
Advertisement
ಘಟನೆ ಸಂಬಂಧ ಸಂತ್ರಸ್ತೆಯಿಂದ ಸಂಪೂರ್ಣ ವಿವರ ಪಡೆದುಕೊಂಡಿದ್ದೇವೆ. ಸಂತ್ರಸ್ತೆಗೆ ಆರೋಪಿಯ ಪರಿಚಯವಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.