DistrictsHaveriLatestMain Post

ವಿದ್ಯುತ್ ತಂತಿ ತಗುಲಿ 11 ಸಾವಿರ ರೂ. ಭತ್ತದ ಹುಲ್ಲು ಸುಟ್ಟು ಭಸ್ಮ

ಹಾವೇರಿ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿದ್ದು, ಭತ್ತದ ಹುಲ್ಲು ಧಗಧಗನೆ ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಬಳಿ ಇರೋ ಕುಡುಪಲಿ-ಕಡೂರು ರಸ್ತೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಗಿಹಳ್ಳಿ ಗ್ರಾಮ ನಿವಾಸಿಯಾಗಿರುವ, ರುದ್ರಪ್ಪ ಮಕರಿ ಅವರಿಗೆ ಸೇರಿದ ಭತ್ತದ ಹುಲ್ಲು ಇದಾಗಿದೆ. ಬೆಂಕಿ ಹೊತ್ತಿಕೊಂಡಿದ್ದನ್ನ ಗಮನಿಸಿ ಟ್ರ್ಯಾಕ್ಟರ್ ನಿಂದ ಭತ್ತದ ಹುಲ್ಲು ಕೆಳಗಿಳಿಸಿ ಪ್ರಾಣಹಾನಿ ಮತ್ತು ವಾಹನ ಹಾನಿಯನ್ನು ರೈತರು ತಪ್ಪಿಸಿದ್ದಾರೆ. ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಕರಕಲು ಆಗಿದೆ.

ಹನ್ನೊಂದು ಸಾವಿರ ರುಪಾಯಿ ಮೌಲ್ಯದ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರೈತರೊಬ್ಬರಿಂದ ಭತ್ತದ ಹುಲ್ಲು ಖರೀದಿಸಿ ತರುತ್ತಿದ್ದ ವೇಳೆ ದುರ್ಘಟನೆ ಈ ನಡೆದಿದೆ. ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದರಿಂದ ವಾಹನಗಳ ಓಡಾಟಕ್ಕೆ ಆಗುತ್ತಿದ್ದ ತೊಂದರೆಯಾಗಿದೆ. ಇದನ್ನೂ ಓದಿ:  ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

ರಸ್ತೆ ಪಕ್ಕಕ್ಕೆ ಬೆಂಕಿ ಹೊತ್ತಿಕೊಂಡಿರೋ ಭತ್ತದ ಹುಲ್ಲು ಸರಿಸಿ ಬಸ್ ದಾಟಿಸಿದ ಬಸ್ಸಿನಲ್ಲಿದ್ದ ಪ್ರಯಾಣಿಕರು. ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದ್ದರೂ ಇನ್ನೂ ಬೆಂಕಿ ಉರಿಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಇನ್ನೂವರೆಗೂ ಬಂದಿಲ್ಲ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

Leave a Reply

Your email address will not be published.

Back to top button