ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಕೆ ಮಾಡೋದಾಗಿ ಬಿಜೆಪಿ ನಾಯಕ ಸಿಟಿ ರವಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಈಗಾಗಲೇ ಮಾಹಿತಿಗಳನ್ನು ಸಂಗ್ರಹ ಮಾಡಿದ್ದೇವೆ. ನಾವು ಮೂರು ಜನ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿರುವ ಮಾಹಿತಿಗಳ ಕುರಿತಾಗಿ ಚರ್ಚೆ ನಡೆಸಿ ವರದಿ ತಯಾರು ಮಾಡುತ್ತೇವೆ. ವರದಿ ತಯಾರು ಮಾಡಿದ ನಂತರ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ನಾಯಕರಿಗೆ ಈ ವರದಿಯನ್ನು ಕೊಡುವ ಕೆಲಸ ಮಾಡುತ್ತೇವೆ. ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರ ಕರೆ ಮೇಲೆ ಆರ್.ಅಶೋಕ್ (R Ashok) ಹಾಗೂ ವಿಜಯೇಂದ್ರ (BY Vijayendra) ಅವರು ಹೋಗಿದ್ದಾರೆ. ಹೆಚ್ಚಿನ ಮಾಹಿತಿ ನನ್ನ ಬಳಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಬೇಕಾದಷ್ಟು ಕೆಲಸ ಇದೆ, ಆ ಕಡೆ ಗಮನ ಕೊಡಲಿ: ಸಿ.ಟಿ ರವಿ
ರಾಜ್ಯಾಧ್ಯಕ್ಷರ ಧರ್ಮಸ್ಥಳ (Dharmasthala) ಹೇಳಿಕೆ ಕುರಿತಂತೆ ಸಾರ್ವಜನಿಕವಾಗಿ ಹೇಳೋಕೆ ನನ್ನ ಬಳಿ ಏನೂ ಇಲ್ಲ. ನಮಗೆ ವಹಿಸಿರುವ ಕೆಲಸ ಸತ್ಯಶೋಧನೆಯ ಮೂಲಕ ವರದಿಯನ್ನು ಕೊಡೋದು. ಇವತ್ತು ಪ್ರಾಥಮಿಕ ವರದಿಯನ್ನ ರೆಡಿ ಮಾಡಿ, ರಾಜ್ಯಧ್ಯಕ್ಷರು ಬಂದ ಮೇಲೆ ಕೊಡುತ್ತೇವೆ. ಆಮೇಲೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಕೆಲವು ಕಾಲಗಳ ನಂತರ ಕೊಡುತ್ತೇವೆ. ಅಧ್ಯಕ್ಷರು ದೆಹಲಿಯಲ್ಲಿ ಇದ್ದಾರೆ. ಅವರು ಬಂದ ಮೇಲೆ ಪ್ರಾಥಮಿಕ ವರದಿ ಕೊಡ್ತೀವಿ. ಈಗಲೇ ಕೊಡಬೇಕು ಅಂದರೆ ಟೆಕ್ನಾಲಜಿ ಇದೆ. ಅದರ ಮೂಲಕ ರವಾನೆ ಮಾಡ್ತೀನಿ. ನಾವು ಕಲೆ ಹಾಕಿರುವ ಮಾಹಿತಿಯನ್ನು ಸಮಾಲೋಚನೆ ಮಾಡಿ, ಅಂತಿಮ ವರದಿ ಸಿದ್ದಮಾಡಿ ಕೊಡ್ತೀವಿ ಎಂದು ಹೇಳಿದ್ದಾರೆ.
ಸದಾನಂದಗೌಡ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳಿಂದ ಮಾಹಿತಿ ಸಂಗ್ರಹ ಮಾಡಿದ್ದೇವೆ. ಸಾಂದರ್ಭಿಕ ಸಾಕ್ಷಿ ಕಲೆ ಹಾಕಿದ್ದೇವೆ. ಸದಾನಂದಗೌಡರು ಅಲ್ಲದೆ ಬೇರೆ ಅವರ ಹೇಳಿರೋದು ಪರಾಮರ್ಶೆ ಮಾಡಿದ್ದೀವಿ. ಬಳಿಕ ಪ್ರಾಥಮಿಕ ವರದಿ ಕೊಡ್ತೀವಿ. ಅಮೇಲೆ ಅಂತಿಮ ವರದಿ ಕೊಡ್ತೀವಿ. ಗುಪ್ತ ಮತದಾನ ಆಗಿರೋದ್ರಿಂದ ನಿರ್ದಿಷ್ಟವಾಗಿ ಇವನೇ ಅಪರಾಧಿ ಅಂತ ಹೇಳೋಕೆ ಸಾಧ್ಯವಿಲ್ಲ. ಅನುಮಾನಿಸಬಹುದು. ಸಾಂದರ್ಭಿಕ ಸಾಕ್ಷಿ ಕಲೆ ಹಾಕಿ, ಇವರ ಬಗ್ಗೆ ಹೆಚ್ಚಿನ ನಿಗಾವಹಿಸಿ, ವರದಿ ಕೊಡ್ತೀವಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪರಿಷತ್ ಚುನಾವಣೆ ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ: ಅರಗ ಜ್ಞಾನೇಂದ್ರ
ಕ್ರಾಸ್ಟ್ ವೋಟ್ ಹಾಕಿದವರ ಮೇಲೆ ಯಾವ ರೀತಿ ಕ್ರಮ ಆಗುತ್ತೆ ಎಂಬ ಪ್ರಶ್ನೆಗೆ, ಎನ್‌ಡಿಎ ಕಡೆಯಿಂದ 12 ಮತಗಳು ಕ್ರಾಸ್ ಆಗಿರೋದು ಸ್ಪಷ್ಟ. ಬಿಜೆಪಿದೇ ಅನ್ನೋದು 4, ಎನ್‌ಡಿಎ ಅನ್ನೋದು 8. ಇದರಲ್ಲಿ ಯಾರು ಹಾಕಿದ್ದಾರೆ ಅನ್ನೋದು ಸುಲಭವಾಗಿ ಪತ್ತೆ ಆಗೋದಿಲ್ಲ. ವರದಿ ಆದ ನಂತರ ಏನು ಆಗಬೇಕು ಅಂತ ಪಕ್ಷದ ಶಿಸ್ತು ಸಮಿತಿ ಮತ್ತು ವರಿಷ್ಠರಿಗೆ ಸೇರಿದ್ದು. ನಮ್ಮ ಕೆಲಸ ಮಾಹಿತಿ ಸಂಗ್ರಹ ಮಾಡೋದು. ಅದನ್ನ ಮಾಡಿಕೊಡ್ತೀವಿ ಎಂದಿದ್ದಾರೆ.
ಸಮಿತಿಯಲ್ಲಿ ಶಾಸಕ ಮಹೇಶ್ ತೆಂಗಿನಕಾಯಿ ಇರೋದಕ್ಕೆ ಆಕ್ಷೇಪ ವಿಚಾರಕ್ಕೆ, ಈ ಸಮಿತಿ ರಚನೆ ಮಾಡಿದ್ದು ರಾಜ್ಯಾಧ್ಯಕ್ಷರು. ಸಮಿತಿ ರಚನೆ ಮಾಡಿದ ಹಿನ್ನೆಲೆ ನಾವು ಕೆಲಸ ಮಾಡ್ತಿದ್ದೇವೆ. ಉಳಿದ ಸಂಗತಿಗಳ ಬಗ್ಗೆ ನಾನೇನು ಹೇಳೋಕೆ ಬಯಸಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: ಮಂಗಳೂರಿನ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ಸಚಿವ ಯು.ಟಿ. ಖಾದರ್ ಸಂತಾಪ
