ಹಾವೇರಿಯಲ್ಲಿ ಕೆಎಸ್‌ಆರ್‌ಪಿಯ ಇಬ್ಬರು ಪೊಲೀಸರು ಸೇರಿ 56 ಮಂದಿಗೆ ಸೋಂಕು ದೃಢ

– ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆ

ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ 56 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಿಗ್ಗಾಂವಿ ತಾಲೂಕಿನ ಗಂಗಿಬಾವಿಯಲ್ಲಿರೋ ಕೆಎಸ್‌ಆರ್‌ಪಿ ಬಟಾಲಿಯನ್ ನ ಇಬ್ಬರು ಕೆಎಸ್‌ಆರ್‌ಪಿ ಪೊಲೀಸರಿಗೆ ಸೇರಿದಂತೆ 8 ಜನರಿಗೆ ಸೋಂಕು ದೃಢಪಟ್ಟಿದೆ.

- Advertisement -

ತುಮಕೂರು ಕೆಎಸ್‌ಆರ್‌ಪಿ ಘಟಕದಿಂದ ವರ್ಗಾವಣೆ ಆಗಿ ಇಬ್ಬರು ಶಿಗ್ಗಾಂವಿಯ ಕೆಎಸ್‌ಆರ್‌ಪಿ ಪೊಲೀಸರಿಗೆ ಸೋಂಕು ವಕ್ಕರಿಸಿದೆ. ರಾಣೆಬೆನ್ನೂರಿನ ಹೆರಿಗೆ ಆಸ್ಪತ್ರೆಯ ಸ್ಟಾಪ್ ನರ್ಸ್ ಮತ್ತು ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಹಾಗೂ ಬೆಂಗಳೂರಿನಿಂದ ಬಂದಿದ್ದ ರಾಣೆಬೆನ್ನೂರಿನ ಓರ್ವ ನಿವಾಸಿಗೆ ಕೊರೊನಾ ಅಂಟಿದೆ.

- Advertisement -

ರೋಗಿ 25830 – 55 ವರ್ಷದ ಪ್ರಾಥಮಿಕ ಸಂಪರ್ಕ ಇರೋ 33 ಜನರಿಗೆ ಸೋಂಕು ವಕ್ಕರಿಸಿದೆ. 55 ವರ್ಷದ ವ್ಯಕ್ತಿಯ ಮಗನ ಮದುವೆ ಮತ್ತು ಪೂಜೆಗೆ ಹೋದ 33 ಜನರು ಸೇರಿದಂತೆ ಒಟ್ಟು ರಾಣೇಬೆನ್ನೂರಿನಲ್ಲಿ 36 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾವೇರಿಯಲ್ಲಿ ಓರ್ವ ಆಶಾ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದ್ದು, 12 ಜನರಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆಯಾಗಿದೆ.

- Advertisement -