Connect with us

Corona

ಚೀನಿ ವೈರಸ್ ಎಫೆಕ್ಟ್: ಗಣೇಶ ಉತ್ಸವದಿಂದ ಹಿಂದೆ ಸರಿದ ಮಂಡಳಿ

Published

on

ಮುಂಬೈ: ದೇಶದ್ಯಾಂತ ಕೊರೊನಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ನಡೆಯಬೇಕಿದ್ದ ಹಲವು ಹಬ್ಬಗಳ ಆಚರಣೆಯನ್ನು ಕೈಬಿಡಲಾಗಿದ್ದರೆ, ಕೆಲ ಆಚರಣೆಗಳನ್ನು ಸಾರ್ವಜನಿಕರನ್ನು ದೂರವಿಟ್ಟು ನಡೆಸಲಾಗಿದೆ. ಆದರೆ ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಕಾರಣದಿಂದ ಈ ಬಾರಿಯ ಗಣೇಶ ಉತ್ಸವ ಆಯೋಜಿಸುವುದಿಲ್ಲ ಎಂದು ಲಾಲ್‍ಬೌಚಾ ರಾಜಾ ಗಣೇಶ ಉತ್ಸವ ಮಂಡಳಿ ಘೋಷಣೆ ಮಾಡಿದೆ.

ಮುಂಬೈನಲ್ಲಿ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ವಿನಾಯಕನಿಗೆ ನವರಾತ್ರಿ ವಿಶೇಷ ಪೂಜೆ ಕೈಗೊಂಡು ಭಾರೀ ಸಂಖ್ಯೆಯ ಜನರೊಂದಿಗೆ ಗಣೇಶಮೂರ್ತಿಯ ವಿಸರ್ಜನ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆದರೆ ಈ ಬಾರಿ ವಿನಾಯಕನ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಲಿದೆ.

Advertisement
Continue Reading Below

ಮುಂಬೈನಲ್ಲಿ ಕೊರೊನಾ ಉತ್ಸವ ಏರ್ಪಡಿಸುವ ಸ್ಥಳಗಳಲ್ಲಿ ಸದ್ಯ ಕೊರೊನಾ ಕಾರಣದಿಂದ ರಕ್ತ ಮತ್ತು ಪ್ಲಾಸ್ಮಾ ದಾನ ಮಾಡುವ ಕ್ಯಾಪ್‍ಗಳನ್ನು ನಿರ್ವಹಿಸಲಾಗುತ್ತಿದೆ. ಕಳೆದ ವರ್ಷ ಚಂದ್ರಯಾನ-2 ವಿಶೇಷವಾಗಿ ನಿರ್ಮಿಸಿದ್ದ ಗಣೇಶ ಉತ್ಸವ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಈಗಾಗಲೇ ಹಲವು ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಜನರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಾಧಿಸದಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಗಣೇಶ ಮೂರ್ತಿ ನಿರ್ಮಾಣ ಮಾಡುವ ಉತ್ಸವ ಕಮಿಟಿ ಅಧ್ಯಕ್ಷರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *