Monday, 18th June 2018

Recent News

ಟಿವಿ ಸ್ಫೋಟ: 16ರ ಬಾಲಕಿ ಸಾವು

ಕೊಪ್ಪಳ: ಟಿವಿ ಸ್ಫೋಟಗೊಂಡು ಬಾಲಕಿಯೊಬ್ಬಳು ಬಲಿಯಾದ ದುರ್ಘಟನೆ ಕೊಪ್ಪಳ ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ವಿಶಾಲಾಕ್ಷಿ (16) ಮೃತ ಬಾಲಕಿ. ಟಿವಿ ಸ್ಫೋಟಗೊಂಡ ಪರಿಣಾಮ ವಿಶಾಲಾಕ್ಷಿ ಧರಿಸಿದ್ದ ಬಟ್ಟೆ, ದೇಹ ಸುಟ್ಟಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ವಿಶಾಲಾಕ್ಷಿ ದೇಹದ ಮೇಲ್ಭಾಗ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟಿದ್ದು, ಮುಖ ಗುರುತು ಸಿಗದಂತಾಗಿದೆ. ಶಾರ್ಟ್ ಸಕ್ಯೂರ್ಟನಿಂದ ಟಿವಿ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತ ಬಾಲಕಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *