ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ (Dharwad) ಬಂದಿದ್ದ ಯುವಕನೋರ್ವ ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಯಾದಗಿರಿ (Yadgiri) ಜಿಲ್ಲೆಯ ಸುರಪುರದ (Surapura) ಮೂಲದ ಮಾರುತಿ (25) ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಪಡೆಯಲು ಮಾರುತಿ ಧಾರವಾಡಕ್ಕೆ ಬಂದಿದ್ದ. ಕಳೆದ ಮೂರು ವರ್ಷದಿಂದ ಧಾರವಾಡದಲ್ಲೇ ಇದ್ದು ತರಬೇತಿ ಪಡೆಯುತ್ತಿದ್ದ. ಇದನ್ನೂ ಓದಿ: ಸುಪ್ರೀಂನಲ್ಲಿ ಹಿನ್ನಡೆಯಾದ್ರೂ ಮತ್ತೆ ಭಾರತದ ಮೇಲೆ ಟ್ರಂಪ್ ಸುಂಕಾಸ್ತ್ರ!
ಧಾರವಾಡದಲ್ಲೇ ರೂಮ್ ಮಾಡಿಕೊಂಡು ವಾಸವಿದ್ದ ಮಾರುತಿಗೆ ಮಂಗಳವಾರ ರಾತ್ರಿ ರೂಮ್‌ನಲ್ಲೇ ಹೃದಯಾಘಾತವಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: EXCLUSIVE | ಡಿಕೆಶಿ ಜೊತೆ 13 ಮಂದಿ ಪ್ರಮಾಣವಚನ – ಯಾರಿಗೆ ಯಾವ ಖಾತೆ?
