ಲಕ್ನೋ: ಹೇಮಾ ಮಾಲಿನಿ ಕುರಿತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ (Randeep Surjewala) ಅವರ ವಿವಾದಾತ್ಮಕ ಹೇಳಿಕೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕಿಡಿಕಾರಿದ್ದಾರೆ.
ಗುರುವಾರ ಮಥುರಾದಲ್ಲಿ (Mathura) ಹೇಮಾ ಮಾಲಿನಿ (Hema Malini) ಪರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ಕಾಂಗ್ರೆಸ್ ನಾಯಕರು ಅಸಭ್ಯ ಹೇಳಿಕೆಗಳನ್ನು ನೀಡುವ ಮೂಲಕ ಭಾರತದ ಅರ್ಧದಷ್ಟು ಜನಸಂಖ್ಯೆಯನ್ನು ಅವಮಾನಿಸಲು ಮುಂದಾಗಿದ್ದಾರೆ ಎಂದು ಸುರ್ಜೇವಾಲಾ ಅವರ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು.
Advertisement
Advertisement
ಇದು ರಾಧಾರಾಣಿಯ ನಾಡು, ಯಮುನಾ ಮಯ್ಯನ ನಾಡು ಎಂಬ ಅರಿವು ಕಾಂಗ್ರೆಸ್ ಮತ್ತು ಮೈತ್ರಿಕೂಟದ ಜನತೆಗೆ ಇರಬೇಕು. ಅವರ ಆಶೀರ್ವಾದ ಈ ನೆಲದ ಮೇಲಿದೆ. ನೀವು ಅರ್ಧದಷ್ಟು ಜನಸಂಖ್ಯೆಯನ್ನು ಅವಮಾನಿಸಿದರೆ, ಮುಂದೆ ನೀವು ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬಂತಹ ಪಾಠವನ್ನು ಇಡೀ ಭಾರತಕ್ಕೆ ಕಲಿಸಲಾಗುತ್ತದೆ.
Advertisement
ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಆದರೆ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಅನಗತ್ಯವಾಗಿ ಮಾತೃಶಕ್ತಿಯನ್ನು ಅವಮಾನಿಸಬೇಕು ಎಂದಲ್ಲ. ಇದನ್ನು ನಮ್ಮ ಸಮಾಜ ಎಂದಿಗೂ ಒಪ್ಪುವುದಿಲ್ಲ. ಅಭಿಪ್ರಾಯಗಳೊಂದಿಗೆ ಒಪ್ಪಿಗೆ ಮತ್ತು ಭಿನ್ನಾಭಿಪ್ರಾಯ ಇರಬಹುದು. ಆದರೆ ನಾವು ಕಲೆ, ಸಂಸ್ಕೃತಿ, ರಾಷ್ಟ್ರೀಯತೆ ಅಥವಾ ಯಾವುದೇ ಜಾತಿಯನ್ನು ಗುರಿಯಾಗಿಸಲು ಸಾಧ್ಯವಿಲ್ಲ. ಯಾರಾದರೂ ನಿಮ್ಮನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದರೆ, ನೀವು ನಿಮಗಾಗಿ ಗುಂಡಿಯನ್ನು ಅಗೆಯುತ್ತೀರಿ ಎಂದು ಯೋಗಿ ಕಿಡಿಕಾರಿದರು.
Advertisement
ಬೇರೆ ಯಾವ ಪಕ್ಷಕ್ಕೂ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಎರವಲು ಪಡೆದು ಅಭ್ಯರ್ಥಿಗಳನ್ನು ಕರೆತರುತ್ತಿದ್ದಾರೆ. ಆದರೆ ಎರವಲು ಪಡೆದರೂ ಅಭ್ಯರ್ಥಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಕಾಂಗ್ರೆಸ್ ನಾಯಕರು ತಾಳ್ಮೆ ಕಳೆದುಕೊಂಡಿದ್ದಾರೆ ಎಂದರು. ಇದನ್ನೂ ಓದಿ: ನಾನು ಸನಾತನ ವಿರೋಧಿ ಘೋಷಣೆ ಕೂಗಲ್ಲ – ಕಾಂಗ್ರೆಸ್‌ಗೆ ಗೌರವ್ ವಲ್ಲಭ್ ರಾಜೀನಾಮೆ
60 ವರ್ಷಗಳ ಕಾಲ ದೇಶವನ್ನು ಆಳುವ ಅವಕಾಶ ಕಾಂಗ್ರೆಸ್‌ಗೆ ಸಿಕ್ಕಿದೆ. ಕಾಶಿ ವಿಶ್ವನಾಥ ಧಾಮವನ್ನು ಏಕೆ ನಿರ್ಮಿಸಬಾರದು? 60 ವರ್ಷಗಳ ಕಾಲ ಕಾಶಿಯನ್ನು ಪ್ರತಿನಿಧಿಸಿದರು. ಅಲ್ಲಿ ಯಾಕೆ ಯೋಚಿಸಬಾರದು. ಮಥುರಾ-ವೃಂದಾವನದ ಬಗ್ಗೆ ಏಕೆ ಯೋಚಿಸಬಾರದು ಎಂದು ಯೋಗಿ ಪ್ರಶ್ನಿಸಿದರು.
ಸುರ್ಜೇವಾಲಾ ಹೇಳಿದ್ದೇನು..?: ಕೈತಾಲ್‌ನ ಫರಾಲ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸುರ್ಜೇವಾಲಾ ಅವರು, ಮಥುರಾದ ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ ಕುರಿತಾಗಿ ಕೆಟ್ಟ ಹಾಗೂ ಅಶ್ಲೀಲ ಹೇಳಿಕೆ ನೀಡಿದ್ದರು. ನಾವು ಶಾಸಕರು/ಸಂಸದರನ್ನು ಯಾಕೆ ಆಯ್ಕೆ ಮಾಡುತ್ತೇವೆ? ಅವರು ನಮ್ಮ ದನಿಯನ್ನು ಅಲ್ಲಿ ಕೇಳಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ನಮ್ಮ ಮನವಿಗಳು ಅಲ್ಲಿ ಸಲ್ಲಿಕೆಯಾಗಬೇಕು. ಆದರೆ ಇವರು ಹೇಮಾ ಮಾಲಿನಿ ರೀತಿಯಲ್ಲ. ಹೇಮಾ ಮಾಲಿನಿ ಅವರನ್ನು ನೆಕ್ಕೋಕೆ ಸಂಸದರನ್ನಾಗಿ ಮಾಡಿದ್ದಾರೆ ಎಂದಿದ್ದರು.
ಸುರ್ಜೇವಾಲಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯಿತು. ಈ ಬೆನ್ನಲ್ಲೇ ಸುರ್ಜೆವಾಲಾ ಅವರ ಸ್ತ್ರೀ ದ್ವೇಷಿ ಹೇಳಿಕೆಯ ವಿರುದ್ಧ ಬಿಜೆಪಿ ಕಿಡಿಕಾರಿದೆ. ಬಳಿಕ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಸುರ್ಜೇವಾಲಾ ಅವರು ಬಿಜೆಪಿ (BJP) ಮೇಲೆ ದೊಡ್ಡ ಆರೋಪ ಮಾಡಿದ್ದರು.