Public TV - Latest Kannada News, Public TV Kannada Live, Public TV News https://publictv.in Public Tv Covers The Latest Bengaluru News, Mysuru News, Hubballi News, Dharwad News, Belagavi News & National News in Kannada. We Provide Latest Kannada News Thu, 04 May 2023 18:46:35 +0000 en-US 1.2 https://publictv.in https://publictv.in 1 https://wordpress.org/?v=6.2 https://publictv.in/wp-content/uploads/2023/02/cropped-20230201_073548_0000-32x32.png Public TV – Latest Kannada News, Public TV Kannada Live, Public TV News https://publictv.in 32 32 <![CDATA[ರಾಜ್ಯದ ಹವಾಮಾನ ವರದಿ: 01-05-2023]]> https://publictv.in/karnataka-state-daily-weather-report-01-05-2023/ Mon, 01 May 2023 00:31:44 +0000 https://publictv.in/?p=1061532 ರಾಜ್ಯದಲ್ಲಿಂದು ಸಹ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದ ಪಶ್ಚಿಮ ಭಾಗದಿಂದ ದಕ್ಷಿಣ ಒಳನಾಡಿನತ್ತ ಗಾಳಿ ಬೀಸುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಬೆಂಗಳೂರು, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 27-21 ಮಂಗಳೂರು: 33-26 ಶಿವಮೊಗ್ಗ: 34-22 ಬೆಳಗಾವಿ: 34-19 ಮೈಸೂರು: 29-21 ಮಂಡ್ಯ: 30-22 ಮಡಿಕೇರಿ: 25-17 ರಾಮನಗರ: 29-22 ಹಾಸನ: 29-20 ಚಾಮರಾಜನಗರ: 29-22 ಚಿಕ್ಕಬಳ್ಳಾಪುರ: 28-21 ಕೋಲಾರ: 27-21 ತುಮಕೂರು: 29-21 ಉಡುಪಿ: 34-26 ಕಾರವಾರ: 34-26 ಚಿಕ್ಕಮಗಳೂರು: 33-26 ದಾವಣಗೆರೆ: 34-22 ಹುಬ್ಬಳ್ಳಿ: 36-21 ಚಿತ್ರದುರ್ಗ: 33-22 ಹಾವೇರಿ: 36-22 ಬಳ್ಳಾರಿ: 34-24 ಗದಗ: 34-22 ಕೊಪ್ಪಳ: 34-33 weather ರಾಯಚೂರು: 33-23 ಯಾದಗಿರಿ: 34-24 ವಿಜಯಪುರ: 34-23 ಬೀದರ್: 31-22 ಕಲಬುರಗಿ: 33-23 ಬಾಗಲಕೋಟೆ: 35-23]]> 1061532 0 0 0 <![CDATA[ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್]]> https://publictv.in/definitely-try-garlic-rice-if-you-have-leftover-rice/ Mon, 01 May 2023 02:30:12 +0000 https://publictv.in/?p=1061582 ನೆಯಲ್ಲಿ ಆಗಾಗ ಅನ್ನ ಉಳಿದು ಹೋಗೋದು ಸಾಮಾನ್ಯ. ರಾತ್ರಿ ಹೆಚ್ಚಾದ ಅನ್ನ ಬೆಳಗ್ಗೆ ಚಿತ್ರಾನ್ನ ಮಾಡೋದು ಎಲ್ಲರಿಗೂ ಗೊತ್ತು. ಆದರೆ ಪ್ರತಿ ಬಾರಿ ಚಿತ್ರಾನ್ನ ಮಾಡಿದ್ರೆ ಯಾರಿಗೆ ತಾನೇ ಬೋರ್ ಎನಿಸಲ್ಲ? ಮುಂದಿನ ಬಾರಿ ಉಳಿದು ಹೋದ ಅನ್ನದಿಂದ ಬೆಳ್ಳುಳ್ಳಿ ರೈಸ್ ಮಾಡೋದು ಖಂಡಿತಾ ಮರೆಯಬೇಡಿ. ಇದು ಮಾಡೋಕೆ ತುಂಬಾ ಸುಲಭವಾಗಿದ್ದು, ಮುಂದೆ ಅನ್ನ ಉಳಿದು ಹೋದಾಗ ಪದೇ ಪದೇ ಇದನ್ನು ಖಂಡಿತ ಮಾಡುತ್ತಲೇ ಇರುತ್ತೀರಿ.

ಬೇಕಾಗುವ ಪದಾರ್ಥಗಳು: ಎಣ್ಣೆ - 1 ಟೀಸ್ಪೂನ್ ಬೆಣ್ಣೆ - ಅರ್ಧ ಟೀಸ್ಪೂನ್ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ - 3 ಹೆಚ್ಚಿದ ಈರುಳ್ಳಿ - ಅರ್ಧ ಕಪ್ ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ - ಕಾಲು ಕಪ್ ಹೆಚ್ಚಿದ ಮಶ್ರೂಮ್ - 3 ಅನ್ನ - 3 ಕಪ್ ಉಪ್ಪು - ರುಚಿಗೆ ತಕ್ಕಷ್ಟು ಸೋಯಾ ಸಾಸ್ - ಒಂದೂವರೆ ಟೀಸ್ಪೂನ್ ಕರಿ ಮೆಣಸಿನಪುಡಿ - ಅರ್ಧ ಟೀಸ್ಪೂನ್ ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

ಮಾಡುವ ವಿಧಾನ: * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಬಳಿಕ ಬೆಳ್ಳುಳ್ಳಿಯನ್ನು ತೆಗೆದು ಪಕ್ಕಕ್ಕಿಡಿ. * ಈಗ ಉರಿಯನ್ನು ಹೆಚ್ಚಿಸಿ, ಅದೇ ಪ್ಯಾನ್‌ಗೆ ಬೆಣ್ಣೆ ಸೇರಿಸಿ, ಅದು ಕರಗಿದ ಬಳಿಕ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿದುಕೊಳ್ಳಿ. * ಬಳಿಕ ಮಶ್ರೂಮ್ ಸೇರಿಸಿ 2-3 ನಿಮಿಷ ಬೇಯಿಸಿಕೊಳ್ಳಿ. * ಬಳಿಕ ಉಪ್ಪು ಸೇರಿಸಿ ಮಿಶ್ರಣ ಮಾಡಿ. * ಈಗ ಅನ್ನವನ್ನು ಪ್ಯಾನ್‌ಗೆ ಹಾಕಿ 2-3 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. * ಬಳಿಕ ಸೋಯಾ ಸಾಸ್, ಕರಿ ಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ. * ಈಗ ಹುರಿದಿಟ್ಟಿದ್ದ ಬೆಳ್ಳುಳ್ಳಿ ಹಾಗೂ ಸ್ಪ್ರಿಂಗ್ ಆನಿಯನ್ ಅನ್ನು ಸೇರಿಸಿ ಮಿಕ್ಸ್ ಮಾಡಿ. * ಇದೀಗ ರುಚಿಕರ ಬೆಳ್ಳುಳ್ಳಿ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಗುಜರಾತಿ ಬಟಾಟಾ ಪೋಹಾ

]]>
1061582 0 0 0
<![CDATA[ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ - ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ]]> https://publictv.in/ipl-2023-mumbai-indians-beat-rajasthan-royals-by-six-wickets-in-indian-premier-league/ Sun, 30 Apr 2023 18:35:09 +0000 https://publictv.in/?p=1061655 ಮುಂಬೈ: ಟಿಮ್‌ ಡೇವಿಡ್‌ (Tim David ) ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸ್‌ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್‌ (Rajasthan Royals ) ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 6 ವಿಕೆಟ್‌ಗಳ ಜಯ ಸಾಧಿಸಿದೆ.

ಗೆಲ್ಲಲು 213 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 214 ರನ್‌ ಹೊಡೆದು ಪಂದ್ಯವನ್ನು ಗೆದ್ದುಕೊಂಡಿತು.

ಕೊನೆಯ 24 ಎಸೆತಗಳಲ್ಲಿ ಮುಂಬೈ ಗೆಲ್ಲಲು 57 ರನ್‌ಗಳ ಅಗತ್ಯವಿತ್ತು. 17 ನೇ ಓವರ್‌ನಲ್ಲಿ 14 ರನ್‌, 18ನೇ ಓವರ್‌ನಲ್ಲಿ 11 ರನ್‌, 19ನೇ ಓವರ್‌ನಲ್ಲಿ 15 ರನ್‌ ಬಂದಿತ್ತು. ಕೊನೆ 6 ಎಸೆತಗಳಲ್ಲಿ 17 ರನ್‌ ಬೇಕಿತ್ತು. ಜೇಸನ್‌ ಹೋಲ್ಡರ್‌ ಎಸೆತ ಪ್ರಥಮ ಮೂರು ಎಸೆತವನ್ನು ಟಿಮ್‌ ಡೇವಿಡ್‌ ಸಿಕ್ಸರ್‌ಗೆ ಅಟ್ಟಿ ಜಯವನ್ನು ತಂದುಕೊಟ್ಟರು. ಟಿಮ್‌ ಡೇವಿಡ್‌ ಮತ್ತು ತಿಲಕ್‌ ವರ್ಮಾ ಮುರಿಯದ 5ನೇ ವಿಕೆಟಿಗೆ 23 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿದ ಪರಿಣಾಮ ಮುಂಬೈ ಜಯದ ನಗೆ ಬೀರಿದೆ.

ಟಿಮ್‌ ಡೇವಿಡ್‌ ಔಟಾಗದೇ 45 ರನ್‌(14 ಎಸೆತ, 2 ಬೌಂಡರಿ, 5 ಸಿಕ್ಸ್‌), ತಿಲಕ್‌ ವರ್ಮಾ ಔಟಾಗದೇ 29 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದರು.

ರೋಹಿತ್‌ ಶರ್ಮಾ ಕೇವಲ 3 ರನ್‌ಗಳಿಸಿ ಔಟಾದರೂ ಮಧ್ಯಮ ಇಶನ್‌ ಕಿಶನ್‌ ಮತ್ತು ಕ್ಯಾಮರೂನ್‌ ಗ್ರೀನ್‌ ಎರಡನೇ ವಿಕೆಟಿಗೆ 38 ಎಸೆತಗಳಲ್ಲಿ 62 ರನ್‌ ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಾಲ್ಕನೇಯ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮಾ 31 ಎಸೆತಗಳಲ್ಲಿ 51 ರನ್‌ ಜೊತೆಯಾಟವಾಡಿದರು.

ಇಶನ್‌ ಕಿಶನ್‌ 28 ರನ್‌(23 ಎಸೆತ, 4 ಬೌಂಡರಿ), ಕ್ಯಾಮರೂನ್‌ ಗ್ರೀನ್‌ 44 ರನ್‌(26 ಎಸೆತ, 4 ಬೌಂಡರಿ, 2 ಸಿಕ್ಸರ್)‌, ಸೂರ್ಯಕುಮಾರ್‌ ಯಾದವ್‌ 55 ರನ್‌( 29 ಎಸೆತ, 8 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ ಉತ್ತಮ ಆರಂಭ ಪಡೆದು ಮೊದಲ ವಿಕೆಟಿಗೆ 72 ರನ್‌ ಗಳಿಸಿತು. ಜೋಸ್‌ ಬಟ್ಲರ್‌ 18 ರನ್‌ ಗಳಿಸಿ ಔಟಾದರು. ಒಂದು ಕಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಯಶಸ್ವಿ ಜೈಸ್ವಾಲ್ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿ ಶತಕ ಹೊಡೆದರು.

ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಜೈಸ್ವಾಲ್‌ 32 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 53 ಎಸೆತಗಳಲ್ಲಿ ಶತಕ ಬಾರಿಸಿದರು. ಅಂತಿಮವಾಗಿ 62 ಎಸೆತಗಳಲ್ಲಿ 124 ರನ್‌ (16 ಬೌಂಡರಿ, 8 ಸಿಕ್ಸರ್‌) ಹೊಡೆದು 19.4 ಓವರ್‌ನಲ್ಲಿ ಔಟಾದರು. 124 ರನ್‌ ಹೊಡೆಯುವ ಮೂಲಕ ಈ ಐಪಿಎಲ್‌ನ ಗರಿಷ್ಠ ವೈಯಕ್ತಿಕ ಸ್ಕೋರ್‌ ಜೊತೆಗೆ ಒಟ್ಟು 428 ರನ್‌ ಹೊಡೆಯುವ ಮೂಲಕ ಆರೇಂಜ್‌ ಕ್ಯಾಪ್‌ ಧರಿಸಿದರು.

ಸಂಜು ಸ್ಯಾಮ್ಸನ್‌ 14 ರನ್‌, ಜೇಸನ್‌ ಹೋಲ್ಡರ್‌ 11 ರನ್‌ ಗಳಿಸಿ ಔಟಾದರು. ಇತರ ರೂಪದಲ್ಲೇ 25 ರನ್( ಬೈ1, ಲೆಗ್‌ಬೈ 7, ನೋಬಾಲ್‌ 1, ವೈಡ್‌ 16) ಬಂದಿದ್ದರಿಂದ ರಾಜಸ್ಥಾನ 7 ವಿಕೆಟ್‌ ನಷ್ಟಕ್ಕೆ 212 ರನ್‌ ಹೊಡೆಯಿತು.

]]>
1061655 0 0 0
<![CDATA[ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ - 25+ ಸ್ಥಾನ ಗೆಲ್ಲಲು ರಣತಂತ್ರ]]> https://publictv.in/karnataka-election-2023-pm-narendra-modi-eyes-old-mysuru-seats/ Mon, 01 May 2023 02:22:36 +0000 https://publictv.in/?p=1061667 ಬೆಂಗಳೂರು: ಹಳೇ ಮೈಸೂರು (Old Mysuru) ಭಾಗದಲ್ಲಿ ಕಾಂಗ್ರೆಸ್- ಜೆಡಿಎಸ್‍ಗೆ (Congresss- JDS) ನೇರ ಠಕ್ಕರ್ ಕೊಟ್ಟು ಮತ ಬೇಟೆಯಾಡಿರುವ ಮೋದಿ (PM Narendra Modi) ಕಾಂಗ್ರೆಸ್-ಜೆಡಿಎಸ್ ಅಸ್ಥಿರದ ಪ್ರತೀಕ ಅಂತ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಸಮಯದಲ್ಲಿ ಎರಡೂ ಪಕ್ಷಗಳು ಡಬ್ಲ್ಯೂ ಡಬ್ಲ್ಯೂಎಫ್‌ ರೀತಿ ಕಾದಾಡಿ ನಂತರ ಇಬ್ಬರು ಒಂದಾಗುತ್ತಾರೆ. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಕನಸು ಕಾಣುತ್ತಿದೆ. ಜೆಡಿಎಸ್‌ ಕಾಂಗ್ರೆಸ್‌ನ ಬಿ ಟೀಂ ಎಂದು ಹೇಳುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯೇ ಪರ್ಯಾಯ ಪಕ್ಷ ಎಂದು ದಾಳ ಉರುಳಿಸಿದ್ದಾರೆ.

ನಮೋ ಸಂದೇಶ ಏನು? ಕರಾವಳಿ, ಬೆಂಗಳೂರು ನಗರ, ಮಧ್ಯ ಕರ್ನಾಟಕ ಸೇರಿದಂತೆ ಹಲವು ಕಡೆ ಬಿಜೆಪಿ ಭದ್ರವಾಗಿದ್ದರೂ ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆದಿಲ್ಲ. ಈ ಕಾರಣಕ್ಕೆ ಇಲ್ಲಿ ಬಿಜೆಪಿ ಸಂಘಟನೆಯಾಗಲು ಜೆಡಿಎಸ್ ಜೊತೆ ಯಾವುದೇ ಒಳ ಒಪ್ಪಂದ, ಅಡ್ಜೆಸ್ಟ್‌ಮೆಂಟ್‌ ಪಾಲಿಟಿಕ್ಸ್ ಇಲ್ಲ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ.  ಇದನ್ನೂ ಓದಿ: ಡಿಕೆಶಿ ಸಿಎಂ; ರಾಹುಲ್‌ ಅಭಯ : ಕಾಂಗ್ರೆಸ್‌ ಇನ್‌ಸೈಡ್‌ ಸುದ್ದಿ ರಿವೀಲ್‌ ಮಾಡಿದ ಅಮಿತ್‌ ಶಾ

ಕಾಂಗ್ರೆಸ್-ಜೆಡಿಎಸ್ ನಮಗೆ ಸಮಾನ ವಿರೋಧಿಗಳು. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಹುದ್ದೆಯ ಕನಸು ಕಾಣುತ್ತಿದೆ. ಜೆಡಿಎಸ್, ಕಾಂಗ್ರೆಸ್‍ನಂತೆ ಕುಟುಂಬ ರಾಜಕೀಯಕ್ಕೆ ಬಿಜೆಪಿಯಲ್ಲಿ ಅವಕಾಶ ಇಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಸಂದೇಶ ಕಳುಹಿಸುವ ಯತ್ನ ಮಾಡಿದ್ದಾರೆ.

ಇತ್ತೀಚೆಗೆ ಪಕ್ಷ ಸೇರಿದವರ ಮೂಲಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ದಳಪತಿಗಳ ಹಿಡಿತದಿಂದ ಒಕ್ಕಲಿಗ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಸುಮಲತಾ, ವರ್ತೂರು ಪ್ರಕಾಶ್, ಮುದ್ದಹನುಮೇಗೌಡ, ಎಲ್.ಆರ್ ಶಿವರಾಮೇಗೌಡ, ಅಶೋಕ್ ಜಯರಾಮ್ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೊಸ ಆಶಯದೊಂದಿಗೆ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಹಳೇ ಮೈಸೂರು ಭಾಗದಲ್ಲಿ 11 ಕ್ಷೇತ್ರ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 25+ ಸ್ಥಾನಕ್ಕಾಗಿ ಬಿಜೆಪಿ ಶತಾಯಗತಾಯ ಹೋರಾಟ ಮಾಡುತ್ತಿದೆ.

ಎಷ್ಟು ಸ್ಥಾನಗಳಿವೆ? ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಹಳೇ ಮೈಸೂರು ಭಾಗ ಎಂದು ಕರೆಯಲಾಗುತ್ತದೆ. ಒಟ್ಟುಇಲ್ಲಿ 57 ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್‌ 19, ಜೆಡಿಎಸ್‌ 27, ಇತರರು 2 ಸ್ಥಾನವನ್ನು ಗೆದ್ದಿದ್ದರು.

]]>
1061667 0 0 0
<![CDATA[ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ]]> https://publictv.in/lpg-cylinder-price-rates-of-19kg-cylinder-slashed/ Mon, 01 May 2023 02:56:42 +0000 https://publictv.in/?p=1061673 ನವದೆಹಲಿ: ಕಾರ್ಮಿಕರ ದಿನದಂದು ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ (Commercial Cylinder) ಬೆಲೆ (Price) ಭಾರೀ ಇಳಿಕೆ ಕಂಡಿದ್ದು, 171. 50 ರೂ. ಕಡಿತಗೊಂಡಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ.

ಈ ಹಿಂದೆ ಏಪ್ರಿಲ್‌ನಲ್ಲಿ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ನ ಬೆಲೆಗಳನ್ನು 92 ರೂ. ಇಳಿಕೆ ಮಾಡಿತ್ತು. ಇದೀಗ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿದ್ದು, ಪುನಃ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಇದನ್ನೂ ಓದಿ: ಮಧು ಬಂಗಾರಪ್ಪ ಗೆದ್ದರೆ, ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುತ್ತೇನೆ: ಶಿವಣ್ಣ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 1856.50 ರೂ. ಆಗಿದೆ. ಈ ಹಿಂದೆ 2,028 ರೂ. ಇತ್ತು. ಅದೇ ರೀತಿ ಮುಂಬೈನಲ್ಲಿ (Mumbai) ಈ ಮೊದಲು 1,980 ರೂ. ಇದ್ದು, ಇದೀಗ ಇದರ ಬೆಲೆ 1,808.50 ರೂ. ಆಗಿದೆ. ಚೆನ್ನೈನಲ್ಲಿ (Chennai) ವಾಣಿಜ್ಯ ಸಿಲಿಂಡರ್‌ನ ಬೆಲೆ ಈ ಮೊದಲು 2,192.50 ರೂ. ಇದ್ದು, ಇದೀಗ 2,021.50 ರೂ. ಆಗಿದೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

]]>
1061673 0 0 0
<![CDATA[ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ - ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ]]> https://publictv.in/rain-alerts-announced-for-next-3-days-in-bengaluru-and-other-districts-because-of-whirlwind-in-arabian-sea/ Mon, 01 May 2023 03:16:12 +0000 https://publictv.in/?p=1061681 ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಬೆಂಗಳೂರು (Bengaluru) ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಲವು ದಿನಗಳಿಂದ ಉರಿ ಬಿಸಿಲಲ್ಲಿ ಬೆಂದಿದ್ದ ನಗರಕ್ಕೆ ಭಾನುವಾರ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರಿನಲ್ಲಿ ಭಾನುವಾರ 2 ಸೆಂ.ಮೀ ಮಳೆ ದಾಖಲಾಗಿದೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಮಳೆಯ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ರಾಯಚೂರು, ದಾವಣಗೆರೆ, ಚಾಮರಾಜನಗರ, ರಾಮನಗರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ತುಮಕೂರು, ಹಾಸನ, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಕೊಂಚ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

ಉತ್ತರ ಒಳನಾಡಿಗೆ ಇಂದಿನಿಂದ ಎರಡು ದಿನಗಳ ಮಳೆಯ ಅಲರ್ಟ್ ನೀಡಲಾಗಿದ್ದು, ಬೀದರ್, ಕಲಬುರುಗಿ, ಯಾದಗಿರಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ. ಅಲ್ಲದೇ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

]]>
1061681 0 0 0
<![CDATA[ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!]]> https://publictv.in/narendra-modi-mysore-roadshow-mobile-phone-thrown-at-his-vehicle-returned-to-the-woman/ Mon, 01 May 2023 03:44:54 +0000 https://publictv.in/?p=1061684 ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ (Mysuru) ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮೋದಿಯತ್ತ ಹೂವಿನ ದಳಗಳೊಂದಿಗೆ ಎಸೆದಿದ್ದ ಮೊಬೈಲ್ (Mobile) ಫೋನ್ ಅನ್ನು ಮಹಿಳೆಗೆ ವಾಪಸ್ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯ ಪ್ರಚಾರದ ರಂಗು ತುಂಬಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 4 ಕಿ.ಮೀವರೆಗೆ ರೋಡ್ ಶೋ (Road Show) ನಡೆಸಿ ಗಮನ ಸೆಳೆದಿದ್ದರು. ರೋಡ್ ಶೋದ ರಸ್ತೆಯ ಇಕ್ಕೆಲಗಳಗಲ್ಲಿ ಬಿಜೆಪಿ (BJP) ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ಅಷ್ಟೇ ಅಲ್ಲದೇ ಮೋದಿ, ಮೋದಿ ಎಂದು ಕೂಗಿ ಸಂಭ್ರಮಿಸಿದ್ದರು. ದಾರಿಯುದ್ದಕ್ಕೂ ಮೋದಿಗೆ ಹೂ ಸುರಿಸಿದರು. ಆದರೆ ಚಿಕ್ಕಗಡಿಯಾರದ ಬಳಿ ಹೂಗಳ ಮಧ್ಯೆ ಅಚಾನಕ್ ಆಗಿ ಮೊಬೈಲ್‍ವೊಂದು ತೂರಿ ಬಂದಿತ್ತು.

ಮೊಬೈಲ್ ಬಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು. ಅದನ್ನು ಸ್ವತಃ ಮೋದಿ ಹಾಗೂ ಎಸ್‍ಪಿಜಿಯವರು ಗಮನಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಅವರು ರೋಡ್ ಶೋ ವೇಳೆಯೇ ಮೊಬೈಲ್ ಅನ್ನು ಹಿಂದಿರುಗಿಸುವಂತೆ ಸನ್ನೆಯನ್ನು ಮಾಡಿದ್ದರು. ಆದರೆ ಮೊಬೈಲ್ ಪ್ರಚಾರದ ವಾಹನದ ಮೇಲ್ಗಡೆ ಬಿದ್ದಿದ್ದರಿಂದ ಯಾವುದೇ ಅನಾಹುತಗಳು ಆಗಿರಲಿಲ್ಲ. ಆದರೂ ರೋಡ್ ಶೋ ವೇಳೆ ಪ್ರಧಾನಿ ಮೋದಿಗೆ ಭದ್ರತಾ ಲೋಪ ಆಗಿದೆಯಾ ಎನ್ನುವ ಚರ್ಚೆಯೂ ಹುಟ್ಟುಹಾಕಿತ್ತು. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ – ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ

ಇದೀಗ ಘಟನೆಗೆ ಸಂಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮೊಬೈಲ್ ಫೋನ್ ಎಸೆದವರು ಮಹಿಳಾ ಬಿಜೆಪಿ ಕಾರ್ಯಕರ್ತೆಯಾಗಿದ್ದಾರೆ. ಅವರು ದುರುದ್ದೇಶದಿಂದ ಮೊಬೈಲ್ ಅನ್ನು ಎಸೆದಿಲ್ಲ, ಬದಲಿಗೆ ಹೂ ದಳಗಳನ್ನು ಎಸೆಯುವಾಗ ಆಕಸ್ಮಿಕವಾಗಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಎಸ್‍ಪಿಜಿಯವರು ಮೊಬೈಲ್ ಅನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

]]>
1061684 0 0 0
<![CDATA[ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ]]> https://publictv.in/karnataka-election-2023-actress-ramya-campaigns-for-congress-candidates/ Mon, 01 May 2023 04:19:38 +0000 https://publictv.in/?p=1061688 ಬೆಂಗಳೂರು: ಕಾಂಗ್ರೆಸ್ (Congress) ಸ್ಟಾರ್ ಪ್ರಚಾರಕಿಯಾಗಿರುವ ಮಾಜಿ ಸಂಸದೆ, ನಟಿ ರಮ್ಯಾ (Ramya) ಚುನಾವಣೆ ಸಲುವಾಗಿ ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

ಚುನಾವಣೆ (Election) ಸಂದರ್ಭದಲ್ಲಿ ಜನರ ಮತಗಳನ್ನು ತನ್ನತ್ತ ಸೆಳೆಯುವ ಸಲುವಾಗಿ ವಿವಿಧ ಪಕ್ಷಗಳು ಸ್ಟಾರ್ ಪ್ರಚಾರಕರ ಮೂಲಕ ಮತಯಾಚನೆ ಮಾಡಿಸುತ್ತಾರೆ. ಅದರಂತೆ ನಟಿ ರಮ್ಯಾ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಮೇ 4ರಂದು ರಮ್ಯಾ ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!

ಮೇ 6ರಂದು ಬಬಲೇಶ್ವರ (Babaleshwar) ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ರಮ್ಯಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಪರ ಮತಯಾಚಿಸಲಿದ್ದಾರೆ. ನಂತರ ಬೆಂಗಳೂರಿನ (Bengaluru) ಸರ್ವಜ್ಞ ನಗರದಲ್ಲಿ (Sarvagnanagar) ಕೆ.ಜೆ.ಜಾರ್ಜ್ (K.J.George) ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ ಮಂಡ್ಯ (Mandya) ಜಿಲ್ಲೆಯಲ್ಲೂ ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

]]>
1061688 0 0 0
<![CDATA[ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ - ಯಾರಾಗ್ತಾರೆ ಸಾಮ್ರಾಟ?]]> https://publictv.in/karnataka-election-2023-beluru-political-view/ Mon, 01 May 2023 05:58:04 +0000 https://publictv.in/?p=1061692 ಹಾಸನ: ಬೇಲೂರು ಹಾಸನ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಯಗಚಿ ನದಿಯ ದಂಡೆಯಲ್ಲಿರುವ ಬೇಲೂರು ಚನ್ನಕೇಶವ ದೇವಾಲಯಕ್ಕೆ ಪ್ರಸಿದ್ಧಿ. ಹೊಯ್ಸಳರ ಕಾಲದ ಈ ದೇವಾಲಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ತನ್ನದೇ ಆದ ಇತಿಹಾಸ ಹೊಂದಿರುವ ಬೇಲೂರು ಈಗ ರಾಜಕೀಯವಾಗಿ ಸುದ್ದಿಯಲ್ಲಿದೆ. 2023ರ ಚುನಾವಣೆಗೆ ಬೇಲೂರು ಕ್ಷೇತ್ರ ಸಜ್ಜಾಗಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು ಅಖಾಡಕ್ಕೆ ಇಳಿದಿದ್ದಾರೆ.

ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್, ತಲಾ ಮೂರು ಬಾರಿ ಜನತಾ ಪಕ್ಷ ಮತ್ತು ಜೆಡಿಎಸ್, ಒಮ್ಮೊಮ್ಮೆ ಬಿಜೆಪಿ ಮತ್ತು ಸ್ವತಂತ್ರರು ಗೆದ್ದಿದ್ದಾರೆ. ಇದನ್ನೂ ಓದಿ: ‘ಹೊಳೆ’ಯನ್ನು ಈಜಿ ‘ನರಸೀಪುರ’ ದಡ ಸೇರುವವರ‍್ಯಾರು?

ಕಣದಲ್ಲಿರುವ ಪೈಲ್ವಾನರು ಕೆ.ಎಸ್.ಲಿಂಗೇಶ್ (ಜೆಡಿಎಸ್) ಬಿ.ಶಿವರಾಂ (ಕಾಂಗ್ರೆಸ್) ಹುಲ್ಲಹಳ್ಳಿ ಸುರೇಶ್ (ಬಿಜೆಪಿ)

ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಕೆ.ಎಸ್.ಲಿಂಗೇಶ್: ವೀರಶೈವ ಸಮುದಾಯದ ಪ್ರತಿನಿಧಿ. ಕಳೆದ ಬಾರಿ ಮೊದಲ ಬಾರಿಗೆ ಶಾಸಕರಾಗಿ ಪರವಾಗಿಲ್ಲ ಎಂಬಂತೆ ಕೆಲಸ ಮಾಡಿರುವುದು. ಬಂಡಾಯ ಇಲ್ಲದೇ ಇರುವುದು. ರಣಘಟ್ಟ ಯೋಜನೆ ಕಾರ್ಯಗತ ಮಾಡಿದ್ದು ಇವರಿಗೆ ಚುನಾವಣೆಯಲ್ಲಿ ಮತ ಸೆಳೆಯಲು ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಅಂಶವೆಂದರೆ, ರಬ್ಬರ್ ಸ್ಟಾಂಪ್ ರೀತಿ ಕೆಲಸ ಮಾಡುತ್ತಾರೆ. ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳಲ್ಲ ಎಂಬುದಾಗಿದೆ.

ಬಿ.ಶಿವರಾಂ: ಹಿರಿಯ ರಾಜಕಾರಣಿ, ಮಾಜಿ ಸಚಿವರು, ಪಕ್ಷದ ಹಿನ್ನೆಲೆ ಇವರಿಗೆ ವರದಾನವಾಗಲಿದೆ. ನಕಾರಾತ್ಮಕ ಅಂಶಗಳೆಂದರೆ, ಹೊರಗಿನವರು ಎಂಬ ದೂರು. ಎಲ್ಲರಿಗೂ ಸ್ಪಂದಿಸಲ್ಲ, ಎಲ್ಲರೊಂದಿಗೂ ಬೆರೆಯಲ್ಲ ಎಂಬ ಆರೋಪವಿದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದಲ್ಲಿ ಇವರ ವಿರುದ್ಧವಾಗಿ ಬಂಡಾಯ ಪ್ರಬಲ ಆಗಿದೆ. ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಿಲ್ಲ – ಯಾರ ಪಾಲಾಗಲಿದೆ ಅರಕಲಗೂಡು ಕ್ಷೇತ್ರ?

ಹುಲ್ಲಹಳ್ಳಿ ಸುರೇಶ್: ಕಳೆದ ಬಾರಿಯ ಸೋಲಿನ ಅನುಕಂಪ, ಕೊರೊನಾ ಇತ್ಯಾದಿ ಸಂದರ್ಭದಲ್ಲಿ ಸಹಾಯ ಮಾಡಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್‌ ಅಂಶವೆಂದರೆ, ಬಂಡಾಯದ ಬೇಗುದಿ. ಹೊರಗಿನವರು ಎಂಬ ಕೂಗಿದೆ. ಈ ಕ್ಷೇತ್ರದಲ್ಲಿ ಹೊರಗಿನವರು ಮತ್ತು ಒಳಗಿನವರು ಎಂಬ ವಿಷಯ ಮತ್ತು ಅಭಿವೃದ್ಧಿ ವಿಚಾರವೇ ಮುಖ್ಯವಾಗಲಿದೆ.

ಜಾತಿ ಲೆಕ್ಕಾಚಾರ ಏನು? ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಲಿಂಗಾಯತ ಸಮುದಾಯದ 54,000 ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ಎಸ್‌ಸಿ 28,000, ಎಸ್ಟಿ 17,000 ಸಾವಿರ ಸೇರಿ ಪರಿಶಿಷ್ಟ ಜಾತಿ/ಪಂಗಡದ 45 ಸಾವಿರ ಮತದಾರರಿದ್ದಾರೆ. ನಂತರದ ಸ್ಥಾನದಲ್ಲಿ 30 ಸಾವಿರ ಒಕ್ಕಲಿಗ ಮತದಾರರಿದ್ದಾರೆ. ಉಳಿದಂತೆ ಕುರುಬ 15,000, ಮುಸ್ಲಿಮರ ಮತ 10,000 ಇದೆ. ಒಟ್ಟು 1,79,330 ಮತದಾರರಿರುವ ಕ್ಷೇತ್ರದಲ್ಲಿ 91,236 ಮಂದಿ ಪುರುಷ, 88,094 ಮಂದಿ ಮಹಿಳಾ ಮತದಾರರಿದ್ದಾರೆ.

]]>
1061692 0 0 0
<![CDATA[ಪ್ರಧಾನಿ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಮೂದಲಿಕೆ]]> https://publictv.in/karnataka-election-2023-pm-narendra-modi-nalayak-person-priyank-kharge/ Mon, 01 May 2023 04:55:11 +0000 https://publictv.in/?p=1061693 ಕಲಬುರಗಿ:ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಗ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge) ನಾಲಾಯಕ್‌ ಎಂದು ಮೂದಲಿಸಿದ್ದಾರೆ.

ಮೋದಿ ಸೇಡಂ ಮಳಖೇಡಕ್ಕೆ ಬಂದಾಗ ಬಂಜಾರಾ (Banjara) ಸಮಾಜದವರಿಗೆ ನಿಮ್ಮ ಸಮಾಜದ ಮಗ ದೆಹಲಿಯಲ್ಲಿದ್ದಾನೆ ಎಂದು ಹೇಳಿದ್ದರು. ಆದರೆ ಈಗ ಬಂಜಾರಾ ಸಮುದಾಯದವರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಲಾಗಿದೆ. ಇಂತಹ ನಾಲಾಯಕ್‌ ಮಗನಿದ್ದರೆ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದ್ದಾರೆ.

ದೇಶ ನಡೆಸುವುದು ಮಾತ್ರವಲ್ಲ. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯುವುದಿಲ್ಲ ಎಂದು ಹೇಳಿದರು.

ಮೋದಿ ಅವರು 91 ಬಾರಿ‌ ಕಾಂಗ್ರೆಸ್ ನಿಂದಿಸಿದ ಬಗ್ಗೆ ಮಾತನಾಡುವುದಕ್ಕೆ ಸಮಯವಿದೆ. ಆದರೆ ಗುತ್ತಿಗೆದಾರರ ಸಂಘ, ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣ, ಗೂಳಿಹಟ್ಟಿ ಶೇಖರ್ ಅವರ ಪತ್ರದ ಬಗ್ಗೆ ಉತ್ತರ ಕೊಟ್ಟಿಲ್ಲ. ಬಿಜೆಪಿಯ ಶಾಸಕ ವಿರೂಪಾಕ್ಷಪ್ಪ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮೋದಿ ಮಾತನಾಡಬೇಕು ಎಂದರು.

ಸುದ್ದಿಗೋಷ್ಠಿಯ ಕೊನೆಗೆ ನಾನು ಮೋದಿಗೆ ಹಾಗೆ ಅಂದಿಲ್ಲ. ನನಗೆ ವೈಯಕ್ತಿಕ ನಿಂದನೆಗಿಂತ ನನ್ನ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು ಎಂದು ಪ್ರಿಯಾಂಕ್‌ ಖರ್ಗೆ ತನ್ನ ನಾಲಾಯಕ್ ಹೇಳಿಕೆಗೆ ಸಮಜಾಯಿಷಿ ನೀಡಿದರು.

]]>
1061693 0 0 0
<![CDATA[ಹಳ್ಳದಲ್ಲಿ‌ ಕೊಚ್ಚಿ ಹೋಗಿದ್ದ ಒಂದೇ ಕುಟುಂಬದ ಮೂವರ ಮೃತದೇಹಗಳು ಪತ್ತೆ]]> https://publictv.in/three-members-of-the-same-family-were-death-washed-away-in-the-canal-bidar/ Mon, 01 May 2023 04:54:31 +0000 https://publictv.in/?p=1061694 ಬೀದರ್ : ಧಾರಾಕಾರ ಅಕಾಲಿಕ ಮಳೆಯಿಂದಾಗಿ (Rain) ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೂವರ ಮೃತದೇಹಗಳು ಪತ್ತೆಯಾದ ಘಟನೆ ಬೀದರ್‌ (Bidar) ಜಿಲ್ಲೆಯಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ್ ಗ್ರಾಮದ ಬಳಿ ಘಟನೆ ನಡೆದಿದೆ. ಸುನಂದಾ (45), ಮಗ ಸುಮಿತ್ (11), ಹಾಗೂ ಐಶ್ವರ್ಯ (16) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ‌‍‌‌. ಭಾನುವಾರ ಕೃಷಿ ಕೆಲಸಕ್ಕಾಗಿ ನಾಲ್ವರು ಜಮೀನು ಕೆಲಸಕ್ಕೆ ಹೋಗಿ ಮನೆಗೆ ವಾಪಸಾಗುವಾಗ ಹಳ್ಳದಲ್ಲಿ ನೀರಿನ ರಭಸಕ್ಕೆ ತಾಯಿ ಹಾಗೂ ಇಬ್ಬರು ಮಕ್ಕಳು‌ ಸೇರಿದಂತೆ ಒಂದೇ ಕುಟುಂಬದ ಮೂವರು ಕೊಚ್ಚಿ ಹೋಗಿದ್ದಾರೆ. ಆದರೆ ಸುನಂದಾ ಪತಿ ಈಜಿ ದಡ ಸೇರಿದರು. ಇದನ್ನೂ ಓದಿ: ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!

ಘಟನೆಯಾದ ಸ್ಥಳದಿಂದ 1 ಕಿ.ಮೀ ದೂರದಲ್ಲಿ ಮೃತದೇಹಗಳು ಪತ್ತೆಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭಾನುವಾರ ಸಂಜೆಯಿಂದ ರಾತ್ರಿವರೆಗೆ ಅಗ್ನಿ ಶಾಮದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ಆದರೂ ಮೃತದೇಹಗಳು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗಿನ ಜಾವ ಮತ್ತೆ ಶೋಧ ಕಾರ್ಯ ಮುಂದುವರಿಸಿದಾಗ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಠಾಣಾಕೂಸುನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ

]]>
1061694 0 0 0
<![CDATA[ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ - 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ]]> https://publictv.in/centre-blocks-14-apps-reportedly-used-to-receive-messages-from-pakistan/ Mon, 01 May 2023 05:38:54 +0000 https://publictv.in/?p=1061702 ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ (Government of India) ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರ ನಡುವೆ ಸಂವಹನ ನಡೆಸಲು ಬಳಕೆಯಾಗುತ್ತಿದ್ದ 14 ಅಪ್ಲಿಕೇಷನ್‍ಗಳನ್ನು ಕೇಂದ್ರ ನಿಷೇಧಿಸಿದೆ.

ನಿಷೇಧಿಸಲಾದ ಎಲ್ಲಾ ಅಪ್ಲಿಕೇಷನ್‍ಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ (Terrorist Activities) ತೊಡಗಿದ್ದ ವ್ಯಕ್ತಿಗಳೊಂದಿಗೆ ಸಂದೇಶ ರವಾನಿಸಲು (Messaging Applications) ಬಳಕೆಯಾಗುತ್ತಿತ್ತು. ಈ ಬಗ್ಗೆ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸೂಕ್ತ ಮಾಹಿತಿ ನೀಡಿದ್ದವು. ಗುಪ್ತಚರ ಸಂಸ್ಥೆಗಳು (Security and Intelligence Agencies) ಸೂಚಿಸಿದ್ದ ಅಪ್ಲಿಕೇಷನ್‍ಗಳಲ್ಲಿ ಪಾಕಿಸ್ತಾನದಿಂದ (Pakistan) ಸೂಚನೆಗಳು ರವಾನೆಯಾಗುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

ನಿಷೇಧಿತ ಅಪ್ಲಿಕೇಷನ್‍ಗಳು: ಕ್ರಿಪ್‍ವೈಸರ್, ಎನಿಗ್ಮಾ, ಸೇಫ್‍ಸ್ವಿಸ್, ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‍ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ನಿಷೇಧಿತ ಅಪ್ಲಿಕೇಷನ್‍ಗಳಾಗಿವೆ.

ಏ.20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ್ದ ಗ್ರೇನೆಡ್ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು. ಈ ವೇಳೆ ಉಗ್ರರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿತ್ತು. ಇದನ್ನೂ ಓದಿ: ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

]]>
1061702 0 0 0
<![CDATA[ಪಬ್ಲಿಕ್ ಟಿವಿಯ ಬದ್ರುದ್ದೀನ್‌ಗೆ ಒಲಿದ ಕಾಸರಗೋಡು ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ]]> https://publictv.in/public-tv-senior-journalist-badruddin-mani-recieved-endowment-award-by-the-kasargod-journalist-association/ Mon, 01 May 2023 05:48:55 +0000 https://publictv.in/?p=1061704 ಬೆಂಗಳೂರು: ಕಾಸರಗೋಡು (Kasargod) ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ (Endowment) ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಕೇರಳದ (Kerala) ಕೊಚ್ಚಿಯಲ್ಲಿ ಭಾನುವಾರ ನಡೆಯಿತು.

ಈ ವೇಳೆ ಪಬ್ಲಿಕ್ ಟಿವಿಯ (Public TV) ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ (Badruddin Mani) ಅವರಿಗೆ ಕೆ.ವಿ.ಆರ್.ಠ್ಯಾಗೋರ್ ಸ್ಮರಣಾರ್ಥ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಹಾಗೂ ಡಾ.ವೆಂಕಟೇಶ್ ತುಪ್ಪಿಲ್ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಮೂದಲಿಕೆ

ಬದ್ರುದ್ದೀನ್ ಮಾಣಿ ಅವರು 2014ರಿಂದ ಪಬ್ಲಿಕ್ ಟಿವಿಯಲ್ಲಿ ರಾಜಕೀಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಮಾಧ್ಯಮದಲ್ಲಿ (Media) ಸರಿ ಸುಮಾರು 3 ದಶಕಗಳ ಕಾಲ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ

ಮಾರ್ಚ್ 21ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆಯವರು ಪ್ರಶಸ್ತಿಗಳನ್ನು ಘೋಷಿಸಿದ್ದರು. ದತ್ತಿನಿಧಿ ಪ್ರಶಸ್ತಿಗೆ 12 ಮಂದಿ ಪತ್ರಕರ್ತರು ಭಾಜನರಾಗಿದ್ದರು. ಈ ಕಾರ್ಯಕ್ರಮವು ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ತಲಾ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

]]>
1061704 0 0 0
<![CDATA[ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್]]> https://publictv.in/karnataka-election-2023-manifesto-released-by-bjp/ Mon, 01 May 2023 06:07:13 +0000 https://publictv.in/?p=1061714 - ಏಕರೂಪ ನಾಗರಿಕ ಸಂಹಿತೆ ಜಾರಿ - ಪ್ರತಿ ವಾರ್ಡ್‍ಗಳಲ್ಲಿ ಅಟಲ್ ಆಹಾರ ಕೇಂದ್ರ

ಬೆಂಗಳೂರು: ಬಿಪಿಎಲ್ (BPL) ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಪ್ರಣಾಳಿಕೆ ರಚಿಸಿರುವ ಸಚಿವ ಡಾ.ಸುಧಾಕರ್ ನೇತೃತ್ವದ ಸಮಿತಿಯು ವಿವಿಧ ವಲಯಗಳ ನಿರೀಕ್ಷೆಗಳು, ಅಗತ್ಯತೆಗಳ ಕುರಿತು ವಲಯವಾರು ತಜ್ಞರ ಜೊತೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿ, ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?: ಬಿಪಿಎಲ್ ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ.

ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‍ಗಳಲ್ಲಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪಿಸುತ್ತೇವೆ. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಮೂದಲಿಕೆ

ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಶ್ರೀ ಅನ್ನ- ಸಿರಿ ಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುತ್ತೇವೆ.

ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುತ್ತೇವೆ.

ರಾಜ್ಯದಾದ್ಯಂತ ನಿವೇಶನ ರಹಿತ, ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.

ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯನ್ನು ಪ್ರಾರಂಭಿಸುತ್ತೇವೆ. ಈ ಯೋಜನೆಯಡಿ ಎಸ್‍ಸಿ, ಎಸ್‍ಟಿ ಸಮುದಾಯದ ಮಹಿಳೆಯರು 5 ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ - 10 ಸಾವಿರದವರೆಗೆ ತಾಳಿಯಾಗುವ ಠೇವಣಿ ನೀಡುತ್ತೇವೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸುಲಲಿತ ಜೀವನಕ್ಕೆ ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುತ್ತೇವೆ ಹಾಗೂ ಕಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತೇವೆ.

ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಇದರಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲಾಗುತ್ತದೆ.

ಸಮನ್ವಯ ಯೋಜನೆ ಇದರಡಿ ತ್ವರಿತಗತಿಯಲ್ಲಿ SME ಗಳು ಮತ್ತು ITI ಗಳ ನಡುವೆ ಸಮನ್ವಯತೆ ಸಾಧಿಸುತ್ತೇವೆ. ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತೇವೆ.

ಐಎಎಸ್, ಕೆಎಎಸ್, ಬ್ಯಾಂಕಿಂಗ್, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ ಮಹತ್ವಾಕಾ೦ಕ್ಷೆಯ ಯುವಜನರಿಗೆ ವೃತ್ತಿ ಬೆಂಬಲವನ್ನು ಒದಗಿಸುತ್ತೇವೆ. ಇದನ್ನೂ ಓದಿ: ಹಳ್ಳದಲ್ಲಿ‌ ಕೊಚ್ಚಿ ಹೋಗಿದ್ದ ಒಂದೇ ಕುಟುಂಬದ ಮೂವರ ಮೃತದೇಹಗಳು ಪತ್ತೆ

ಮಿಷನ್ ಸ್ವಾಸ್ಥ್ಯ ಕರ್ನಾಟಕದ ಅಡಿ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‍ನಲ್ಲಿ ಲ್ಯಾಬೊರೇಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪಿಸುತ್ತೇವೆ. ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯ ಕಲ್ಪಿಸುತ್ತೇವೆ.

ನಮ್ಮ ಮುಂದಿನ ಪೀಳಿಗೆಗಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ಅದನ್ನು ರಾಜ್ಯ ರಾಜಧಾನಿ ಪ್ರದೇಶ ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತೇವೆ. ಸುಲಲಿತ ಜೀವನಕ್ಕೆ ಅನುವುಮಾಡಿಕೊಡುವ ಸುಸಂಘಟಿತ ಸಾರಿಗೆ ಜಾಲ ಸೃಷ್ಟಿಸುತ್ತೇವೆ. ಅಲ್ಲದೇ, ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್‍ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುತ್ತೇವೆ.

ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾಜಿರ್ಂಗ್ ಸ್ಟೇಷನ್‍ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‍ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್‍ಗಳಾಗಿ ಪರಿವರ್ತಿಸುತ್ತೇವೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ಇಬಿ ಸಿಟಿ ಅಭಿವೃದ್ಧಿಗೊಳಿಸುವುದು.

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 30,000 ಕೋಟಿ ಮೊತ್ತದ ಕೆ-ಅಗ್ರಿ ಫಂಡ್ ಸ್ಥಾಪಿಸುತ್ತೇವೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುತ್ತೇವೆ. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತೇವೆ. ಜತೆಗೆ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‍ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್‍ಗಳನ್ನು ಸ್ಥಾಪಿಸುತ್ತೇವೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಅರವಿಂದ್ ಲಿಂಬಾವಳಿ, ಶೋಭಾರಂದ್ಲಾಜೆ, ಧಮೇರ್‍ಂದ್ರ ಪ್ರಧಾನ್ ಇತರರಿದ್ದರು.

]]>
1061714 0 0 0
<![CDATA[ಬಿಗ್ ಬುಲೆಟಿನ್ 01 May 2023 ಭಾಗ-1]]> https://publictv.in/?p=1062148 https://publictv.in/?p=1062148 1062148 0 0 0 <![CDATA[ಲಕ್ನೋಗೆ ಡಬಲ್‌ ಶಾಕ್‌ - ಕೆ.ಎಲ್‌ ರಾಹುಲ್‌ ಟೂರ್ನಿಯಿಂದಲೇ ಔಟ್‌?]]> https://publictv.in/?p=1062711 https://publictv.in/?p=1062711 1062711 0 0 0 <![CDATA[ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ - ಸುಮಲತಾ ಗೆಲುವಿಗೆ ಸಿದ್ದು ಪಶ್ಚಾತಾಪ]]> https://publictv.in/?p=1062754 https://publictv.in/?p=1062754 - ಅಚ್ಚೇ ಬಂತೇನ್ರಪ್ಪ - ಸಿದ್ದು ಪಂಚ್

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ, ಆದ್ರೆ ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ ಈವಾಗ ನನಗೆ ಅನಿಸ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸುಮಲತಾ ಗೆಲುವಿಗೆ ಪಶ್ಚಾತಾಪ ಸೂಚಿಸಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಚಲುವರಾಯಸ್ವಾಮಿ, ನರೇಂದ್ರ ಎಲ್ಲರಿಗೂ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಆದ್ರೆ ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ, ನನಗೆ ಈಗ ಅನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

ಮುಂದವರಿದು, ಬಿಜೆಪಿ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಬೀದಿ ಬೀದಿಯಲ್ಲಿ ಭ್ರಷ್ಟಚಾರದ ವಿಚಾರ ಚರ್ಚೆಯಾಗ್ತಿದೆ. ವಿಧಾನಸೌಧದ ಪ್ರತಿಗೋಡೆಗಳೂ ದುಡ್ಡು ದುಡ್ಡು ಅನ್ನುತ್ತಿವೆ. ಇಂತಹ 40 ಪರ್ಸೆಂಟ್ ಸರ್ಕಾರ ಇರಬೇಕಾ? ಮೋದಿ ಅಚ್ಚೇದಿನ್ ಆಯೇಗಾ ಅಂತಾರಲ್ಲ, ನಿಮಗೇನಾದ್ರು ಅಚ್ಚೇ ಬಂತೇನ್ರಪ್ಪ.? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅತ್ತೆ-ಸೊಸೆ ಜಗಳವಾಡುವ ಕೆಲಸವನ್ನು ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ: ಸಿಎಂ ಇಬ್ರಾಹಿಂ

ನಾಗಮಂಗಲ ಜನತೆ ತುಂಬಾ ಸಜ್ಜನರಿದ್ದಾರೆ. ನಿಮ್ಮ ಉತ್ಸಾಹ ನೋಡಿದ್ರೆ ನಮ್ಮ ಅಭ್ಯರ್ಥಿ ಚಲುವರಾಯಸ್ವಾಮಿ ಗೆಲ್ಲೋದು ಸೂರ್ಯ ಚಂದ್ರರಷ್ಟೇ ಸತ್ಯ ಅನ್ನಿಸುತ್ತಿದೆ. ಅವರು ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಕೂಡ ಒಬ್ಬರು. ಚೆಲುವರಾಯಸ್ವಾಮಿಗೆ ನಾಯಕತ್ವದ ಗುಣ ಇದೆ. ಅಂತಹವರನ್ನ ನೀವು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದ್ದಾರೆ.

ಅತಂತ್ರ ಬರಲಿ ಅಂತಾ ಕಾಯ್ತಿದ್ದಾರೆ: ಇದೇ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಜೆಡಿಎಸ್‌ನವರು ಅವಕಾಶವಾದಿಗಳು. ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ. ಯಾವುದೇ ಪೂರ್ಣ ಪ್ರಮಾಣದ ಸರ್ಕಾರ ಬರದಿರಲಿ ಅಂತಾ ನಿತ್ಯವೂ ಹೋಮ, ಹವನ, ಪೂಜೆ ಮಾಡ್ತಿದ್ದಾರೆ. ಎರಡೂ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬರಲಿ ಅಂತಾ ಪೂಜೆ ಮಾಡಿಸ್ತಿದ್ದಾರೆ. ಅವಕಾಶ ಸಿಕ್ಕರೇ ಕಾಂಗ್ರೆಸ್ ಜೊತೆಯಾದ್ರೂ ಹೋಗ್ತಾರೆ, ಬಿಜೆಪಿ ಜೊತೆಯಾದ್ರೂ ಹೋಗ್ತಾರೆ. ಈ ಬಾರಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಬೀಗಿದ್ದಾರೆ.

]]>
1062754 0 0 0
<![CDATA[ದಿನ ಭವಿಷ್ಯ 05-05-2023]]> https://publictv.in/?p=1063102 Fri, 05 May 2023 00:00:57 +0000 https://publictv.in/?p=1063102 ಸಂವತ್ಸರ : ಶೋಭಕೃತ್ ಋತು : ವಸಂತ ಅಯನ : ಉತ್ತರಾಯಣ ಮಾಸ : ವೈಶಾಖ ಪಕ್ಷ : ಶುಕ್ಲ ತಿಥಿ : ಪೌರ್ಣಮೀ - 11 : 00 PM ನಕ್ಷತ್ರ : ಸ್ವಾತಿ ರಾಹುಕಾಲ : 10 : 41 AM - 12 : 16 PM ಗುಳಿಕಕಾಲ : 7 : 32 AM - 9 : 07 AM ಯಮಗಂಡಕಾಲ : 3 : 25 PM - 5 : 00 PM ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಪೋಷಕರ ಆರೋಗ್ಯದಲ್ಲಿ ಕಾಳಜಿ ವಹಿಸಿ, ಹೊಸದನ್ನು ಕಲಿಯುವ ಅವಕಾಶವಿರುತ್ತದೆ ವೃಷಭ: ಭಾವೋದ್ರೇಕಗಳು ಉಂಟಾಗುತ್ತದೆ, ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ, ಅನಗತ್ಯ ಒತ್ತಡ, ಸಹವರ್ತಿಗಳಿಂದ ಅಪಾಯ ಕಟಕ: ಅಧಿಕ ಶ್ರಮ, ಮಧ್ಯಮ ಧನಾರ್ಜನೆ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ, ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕನ್ಯಾ: ಮಕ್ಕಳಿಂದ ತೃಪ್ತಿ, ಅನಿರೀಕ್ಷಿತ ಖರ್ಚು, ದುಡುಕಿನ ನಿರ್ಧಾರಗಳು ಬೇಡ ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ದೃಢ ತೀರ್ಮಾನದಲ್ಲಿ ವಿಫಲ, ಉದ್ಯೋಗದಲ್ಲಿ ಬಡ್ತಿ ವೃಶ್ಚಿಕ: ಅನಾವಶ್ಯಕ ವಾದ-ವಿವಾದ ವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ ಧನು: ಆದಾಯದಲ್ಲಿ ಇಳಿಕೆ ಕಂಡುಬರಲಿದೆ, ಪರರಿಂದ ತೊಂದರೆ ಎದುರಿಸುವಿರಿ, ಆರೋಗ್ಯ ಗಮನಿಸಿ ಮಕರ: ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು, ಎಚ್ಚರಿಕೆಯ ನಡೆ ಅಗತ್ಯ, ವಿದ್ಯಾರ್ಥಿಗಳಿಗೆ ಯಶಸ್ಸು ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ ಮೀನ: ಸಮಸ್ಯೆಗಳಿಗೆ ಅಂತ್ಯಕಾಣಬಹುದು, ಯೋಜನೆಗೆ ಗಮನ ಹರಿಸಬೇಕು, ಆರ್ಥಿಕ ಲಾಭ]]> 1063102 0 0 0 <![CDATA[ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್]]> https://publictv.in/?p=1063162 Fri, 05 May 2023 02:30:36 +0000 https://publictv.in/?p=1063162 ಹೂಕೋಸು ಅಥವಾ ಗೋಬಿಯ ಯಾವುದೇ ಖಾದ್ಯವನ್ನು ರುಚಿಕರವಾಗಿ ತಯಾರಿಸಬಹುದು. ಅಡುಗೆ ಮನೆಯಲ್ಲಿ ಹೊಸ ತರಕಾರಿಗಳು ಯಾವುದೂ ಇಲ್ಲ ಎನಿಸಿದರೆ ಈ ತರಕಾರಿಯನ್ನು ಖರೀದಿಸೋದು ಬೆಸ್ಟ್. ಬೇಕೆನಿಸಿದಾಗ ರುಚಿ ರುಚಿಯಾದ ಸ್ನ್ಯಾಕ್ಸ್ ತಯಾರಿಸಲು ಇದು ಪರ್ಫೆಕ್ಟ್ ಆಗಿರುತ್ತದೆ. ನಾವಿಂದು ಸಿಹಿ, ಹುಳಿ, ಮಸಾಲೆಯುಕ್ತ ರುಚಿಕರವಾದ ಗೋಬಿ ಬೈಟ್ಸ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಇದನ್ನು ಸಂಜೆ ವೇಳೆ ಸ್ನ್ಯಾಕ್ಸ್ ಆಗಿ ಸವಿಯಬಹುದು.

ಬೇಕಾಗುವ ಪದಾರ್ಥಗಳು: ಕತ್ತರಿಸಿ ಶುಚಿಗೊಳಿಸಿದ ಹೂಕೋಸು - 1 (ಸುಮಾರು 500 ಗ್ರಾಂ) ಎಣ್ಣೆ - 2 ಟೀಸ್ಪೂನ್ ಟೊಮೆಟೊ ಕೆಚಪ್ - 4 ಟೀಸ್ಪೂನ್ ಚಿಲ್ಲಿ ಸಾಸ್ - 2 ಟೀಸ್ಪೂನ್ ಕಂದು ಸಕ್ಕರೆ - 1 ಟೀಸ್ಪೂನ್ ಉಪ್ಪು - ರುಚಿಗೆ ತಕ್ಕಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

ಮಾಡುವ ವಿಧಾನ: * ಮೊದಲಿಗೆ ಏರ್ ಫ್ರೈಯರ್ ಅನ್ನು ಪೂರ್ವಭಾವಿಯಾಗಿ 350 ಡಿಗ್ರಿ ಎಫ್‌ಗೆ 5 ನಿಮಿಷಗಳ ಕಾಲ ಕಾಯಿಸಿಕೊಳ್ಳಿ. * ಕತ್ತರಿಸಿ ಶುಚಿಗೊಳಿಸಿದ ಹೂಕೋಸನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ ಅದಕ್ಕೆ ಎಣ್ಣೆ ಚಿಮುಕಿಸಿ ಕೈಗಳಿಂದ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ. * ಈಗ ಹೂಕೋಸನ್ನು ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಹಾಕಿ ಸಮವಾಗಿ ಹರಡಿ. ಹೆಚ್ಚುವರಿ ಹೂಕೋಸು ಇದ್ದರೆ ಬ್ಯಾಚ್‌ಗಳಲ್ಲಿ ಕಾಯಿಸಿಕೊಳ್ಳಬಹುದು. * ಹೂಕೋಸುಗಳನ್ನು 8 ನಿಮಿಷಗಳ ಕಾಲ ಫ್ರೈ ಮಾಡಿ. * ಗೋಬಿ ಫ್ರೈ ಆಗುತ್ತಿರುವ ವೇಳೆ ಸಾಸ್ ಅನ್ನು ತಯಾರಿಸಿ. ಅದಕ್ಕಾಗಿ ಒಂದು ಬೌಲ್‌ನಲ್ಲಿ ಕೆಚಪ್, ಚಿಲ್ಲಿ ಸಾಸ್, ಸಕ್ಕರೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. * ಈಗ ಹೂಕೋಸು ಭಾಗಶಃ ಬೆಂದಿರುತ್ತದೆ. ಇದನ್ನು ಬೌಲ್‌ಗೆ ಹಾಕಿ ಸಾಸ್‌ನೊಂದಿಗೆ ಚೆನ್ನಾಗಿ ಲೇಪನವಾಗುವವರೆಗೆ ಮಿಶ್ರಣ ಮಾಡಿ. * ಈಗ ಮತ್ತೆ ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಹೂಕೋಸನ್ನು ಹಾಕಿ, ಹರಡಿ 370 ಡಿಗ್ರಿ ಎಫ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ. ಸುಮಾರು 8 ನಿಮಿಷಗಳ ನಡುವೆ ಒಮ್ಮೆ ಟಾಸ್ ಮಾಡಿ. * ಇದೀಗ ಗೋಬಿ ಬೈಟ್ಸ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಹಾದ ಸಮಯದಲ್ಲಿ ಗೋಬಿ ಬೈಟ್ಸ್ ಅನ್ನು ಆನಂದಿಸಿ. ಇದನ್ನೂ ಓದಿ: ಉಳಿದ ಇಡ್ಲಿಗಳಿಂದ ಮಾಡಿ ಇಡ್ಲಿ ಮಂಚೂರಿಯನ್

]]>
1063162 0 0 0
<![CDATA[ರಾಜ್ಯದ ಹವಾಮಾನ ವರದಿ: 05-05-2023]]> https://publictv.in/?p=1063175 Fri, 05 May 2023 00:30:47 +0000 https://publictv.in/?p=1063175 ಳೆದ ವಾರದಿಂದ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಇದರಿಂದ ಭೂಮಿ ತಂಪೇರಿದ್ದು, ಹಲವು ಕಡೆ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದಾದ್ಯಂತ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಅಲ್ಲದೇ ಒಡಿಶಾದಲ್ಲಿ ಮೋಚಾ ಚಂಡಮಾರುತ ಅಪ್ಪಳಿಸಲಿದ್ದು, ಇದರ ಪರಿಣಾಮ ಕರ್ನಾಟಕದಲ್ಲೂ ಇರಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ: ಬೆಂಗಳೂರು: 29-21 ಮಂಗಳೂರು: 33-26 ಶಿವಮೊಗ್ಗ: 35-22 ಬೆಳಗಾವಿ: 34-21 ಮೈಸೂರು: 32-22 ಮಂಡ್ಯ: 32-23

ಮಡಿಕೇರಿ: 28-18 ರಾಮನಗರ: 31-22 ಹಾಸನ: 31-20 ಚಾಮರಾಜನಗರ: 31-22 ಚಿಕ್ಕಬಳ್ಳಾಪುರ: 28-21

ಕೋಲಾರ: 29-22 ತುಮಕೂರು: 30-22 ಉಡುಪಿ: 33-26 ಕಾರವಾರ: 33-27 ಚಿಕ್ಕಮಗಳೂರು: 30-19 ದಾವಣಗೆರೆ: 36-23

ಹುಬ್ಬಳ್ಳಿ: 36-22 ಚಿತ್ರದುರ್ಗ: 34-22 ಹಾವೇರಿ: 36-22 ಬಳ್ಳಾರಿ: 34-25 ಗದಗ: 36-23 ಕೊಪ್ಪಳ: 36-24

ರಾಯಚೂರು: 34-25 ಯಾದಗಿರಿ: 34-25 ವಿಜಯಪುರ: 36-24 ಬೀದರ್: 32-23 ಕಲಬುರಗಿ: 34-25 ಬಾಗಲಕೋಟೆ: 37-24

]]>
1063175 0 0 0
<![CDATA[ಬಾಕ್ಸ್ ಆಫೀಸಿನಲ್ಲಿ ಪೊನ್ನಿಯನ್ ಸೆಲ್ವನ್-2 ಬಾಚಿದ್ದೆಷ್ಟು?]]> https://publictv.in/how-much-did-ponnion-selvan-2-do-at-the-box-office/ Mon, 01 May 2023 06:12:28 +0000 https://publictv.in/?p=1061691 ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಸಾರಥ್ಯದಲ್ಲಿ ಮೂಡಿಬಂದ ಪೊನ್ನಿಯಿನ್ ಸೆಲ್ವನ್-2 (Ponniyin Selvan 2) ಸಿನಿಮಾ ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇದೇ ಶುಕ್ರವಾರ ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಮೆಚ್ಚುಗೆಯ ಮಹಾಪೂರ ವ್ಯಕ್ತಪಡಿಸುತ್ತಿದ್ದಾರೆ. ಬಾಕ್ಸಾಫೀಸ್ (Box Office) ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿರುವ ಪಿಎಸ್-2, ರಿಲೀಸ್ ಆದ ಮೂರು ದಿನದಲ್ಲಿಯೇ ನೂರು ಕೋಟಿ ಕಲೆಕ್ಷನ್ ಮಾಡಿದೆ.  ಇಳಯದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿರುವ ಪಿಎಸ್-2 ಹೊಸ ದಾಖಲೆ ಬರೆಯುನ್ನು ತನ್ನದಾಗಿಸಿಕೊಳ್ಳುತ್ತಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯಿನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ.  ಜಯಂರವಿ, ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್​, ಪ್ರಕಾಶ್ ರಾಜ್​ ಸೇರಿದಂತೆ ಹಲವರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ಪೊನ್ನಿಯಿನ್‌ ಸೆಲ್ವನ್‌ ಆಧಾರಿಸಿದ ಈ ಕಥೆಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆದ ಅಭಿಮಾನಿ

ಚೋಳ ಸಾಮ್ರಾಜ್ಯದ ಗತವೈಭವ ಸಾರುವ ಈ ಸಿನಿಮಾ ಮೇಕಿಂಗ್, ತಾರಾ ಬಳಗ, ಸಂಗೀತ, ನಟನೆ ಎಲ್ಲದರಲ್ಲಿಯೂ ನೋಡುಗರ ಗಮನಸೆಳೆಯುತ್ತಿದೆ. ಲೈಕಾ ಪ್ರೊಡಕ್ಷನ್ಸ್‌ ಮತ್ತು ಮದ್ರಾಸ್‌ ಟಾಕೀಸ್‌ ಬ್ಯಾನರ್‌ನಡಿ ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.

ಕಳೆ ವರ್ಷ ಸೆಪ್ಟೆಂಬರ್ 30 ರಂದು ರಿಲೀಸ್ ಆಗಿದ್ದ ಪೊನ್ನಿಯನ್ ಸೆಲ್ವನ್ ಮೊದಲ ಭಾಗ ಬರೋಬ್ಬರಿ 500 ಕೋಟಿ ಲೂಟಿ ಮಾಡಿತ್ತು. ಈಗ ತೆರೆಗೆ ಬಂದಿರುವ ಸಿಕ್ವೇಲ್ ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.

]]>
1061691 0 0 0
<![CDATA[ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ]]> https://publictv.in/actress-rashmika-mandanna-gets-38-million-followers-on-social-media/ Mon, 01 May 2023 06:10:09 +0000 https://publictv.in/?p=1061718 ನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಡಿಮ್ಯಾಂಡ್‌ನಲ್ಲಿರುವ ನಾಯಕಿ. ದಿನದಿಂದ ದಿನಕ್ಕೆ ರಶ್ಮಿಕಾ ಫ್ಯಾನ್ ಬೇಸ್ ಹಿರಿದಾಗುತ್ತಲೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ.

ಕನ್ನಡದ 'ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ವೃತ್ತಿ ಬದುಕಿಗೆ ಶುರು ಮಾಡಿದ ನಟಿ ಇಂದು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬೇಡಿಕೆಯ ನಟಿಯಾಗಿ ಸದ್ದು ಮಾಡ್ತಿದ್ದಾರೆ.

ಈ ಕಾಂಟ್ರವರ್ಸಿ ಲೇಡಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಜನಪ್ರಿಯತೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದೀಗ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ 38 ಮಿಲಿಯನ್ ರೀಚ್ ಆಗಿದೆ. ಈ ಮೂಲಕ ಹೊಸ ದಾಖಲೆಯನ್ನ ಶ್ರೀವಲ್ಲಿ ಬರೆದಿದ್ದಾರೆ. 38 ಮಿಲಿಯನ್ ಅಂದ್ರೆ 3.8 ಕೋಟಿ ಹಿಂಬಾಲಕರನ್ನ ನಟಿ ಹೊಂದಿದ್ದಾರೆ. ಇದನ್ನೂ ಓದಿ:ಬ್ರಾ ಧರಿಸದೇ ಬಂದ ನಟಿ ಇಶಾ ಗುಪ್ತಾ ಟ್ರೋಲ್

ಇನ್ನೂ ಬಾಲಿವುಡ್‌ನಲ್ಲಿ ರಶ್ಮಿಕಾ ನಟಿಸಿರುವ ಸಿನಿಮಾ ಸೋತಿದ್ದರು ಕೂಡ ಅವರಿಗೆ ಬೇಡಿಕೆಯಿದೆ. ಇದೀಗ ವಿಕ್ಕಿ ಕೌಶಲ್ ಜೊತೆ ಮರಾಠ ಸಾಮ್ರಾಜ್ಯದ ರಾಣಿಯ ಪಾತ್ರದಲ್ಲಿ ನಟಿಸಲು ರಶ್ಮಿಕಾಗೆ ಬುಲಾವ್ ಬಂದಿದೆ. ತೆಲುಗಿನ ರೈನ್‌ಬೋ, ಪುಷ್ಪ 2, ಅನಿಮಲ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿದೆ.

]]>
1061718 0 0 0
<![CDATA['ದಿ ಕೇರಳ ಸ್ಟೋರಿ' ಸಿನಿಮಾ ವಿರೋಧಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್]]> https://publictv.in/kerala-cm-pinarayi-vijayan-opposed-the-movie-the-kerala-story/ Mon, 01 May 2023 06:29:37 +0000 https://publictv.in/?p=1061734 ಲಯಾಳಂನಲ್ಲಿ ತಯಾರಾದ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾದಾಚೆ ಈ ಸಿನಿಮಾವನ್ನು ರಾಜಕಾರಣದ ಪಡಸಾಲೆಗೆ ಎಳೆದು ತಂದಿರುವ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಕೂಡ ಚಿತ್ರವನ್ನು ವಿರೋಧಿಸಿದ್ದಾರೆ. ಹಲವಾರು ತಪ್ಪು ಕಲ್ಪನೆಗಳನ್ನು ಈ ಸಿನಿಮಾದಲ್ಲಿ ಬಿಂಬಿಸಿರುವುದರಿಂದ ಕೇರಳಕ್ಕೆ ಇದು ಕೆಟ್ಟ ಹೆಸರು ತರುತ್ತಿದೆ ಎಂದಿದ್ದಾರೆ.  ಮೇ 5 ರಂದು ದೇಶದಾದ್ಯಂತ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ತಡೆಯುವಂತೆ ಕೇರಳ ಕಾಂಗ್ರೆಸ್ (Congress) ಪಕ್ಷ ಸರಕಾರವನ್ನು ಒತ್ತಾಯಿಸಿದೆ. ಹಸಿ ಸುಳ್ಳುಗಳೇ ತುಂಬಿರುವ ಈ ಸಿನಿಮಾ ಸಮಾಜವನ್ನು ಹಾದಿ ತಪ್ಪಿಸುವುದರಿಂದ ಚಿತ್ರವನ್ನು ರಿಲೀಸ್ ಮಾಡಲು ಬಿಡಬಾರದು ಎಂದು ಮನವಿ ಸಲ್ಲಿಸಿದೆ.

ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ. ಇದನ್ನೂ ಓದಿ:ಪತಿ ಸಿದ್‌ಗಾಗಿ ಕೈಯಾರೇ ಉಪಾಹಾರ ರೆಡಿ ಮಾಡಿದ ಕಿಯಾರಾ

ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರು ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ (Love Jihad) ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

]]>
1061734 0 0 0
<![CDATA[ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವಣ್ಣನ ಪುತ್ರಿ ನಿವೇದಿತಾ]]> https://publictv.in/shivannas-daughter-nivedita-is-making-her-debut-film/ Mon, 01 May 2023 06:43:24 +0000 https://publictv.in/?p=1061741 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಯುವ ಸಿನಿಮೋತ್ಸಾಹಿಗಳಿಗೆ ಸದಾ ಬೆನ್ನು ತಟ್ಟುತ್ತಾ ಮುಂದೆ ಸಾಗುವ ಕನ್ನಡ ಚಿತ್ರರಂಗದ ಮಾಸ್ ಲೀಡರ್. ಹೊಸ ಚಿತ್ರತಂಡಕ್ಕೆ ಬಲವಾಗಿ ನಿಲ್ಲುವ ಶಿವಣ್ಣನ ಹಾದಿಯಲ್ಲಿ ಮಗಳು ನಿವೇದಿತಾ (Niveditha) ಕೂಡ ಹೆಜ್ಜೆ ಇಟ್ಟಿದ್ದಾರೆ. ಹೇಳಿ ಕೇಳಿ ಕಲೆ ದೊಡ್ಮನೆ ಕುಟುಂಬದಲ್ಲಿ ರಕ್ತಗತವಾಗಿ ಬಂದಿದೆ. ಇಡೀ ಕುಟುಂಬ ಕಲಾಸೇವೆಯಲ್ಲಿ ನಿರತರಾಗಿದ್ದಾರೆ. ಅಂದು ಅಣ್ಣಾವ್ರು ತೆರೆಮೇಲೆ ರಾರಾಜಿಸುತ್ತಿದ್ದರೆ, ತೆರೆ ಹಿಂದೆ ಅವರ ಬೆನ್ನೆಲುಬಾಗಿ ನಿರ್ಮಾಣ ಸಂಸ್ಥೆಯಡಿ ದುಡಿಯುತ್ತಿದ್ದವರು ಪಾರ್ವತಮ್ಮ ಪೂರ್ಣಿಮಾ ಎಂಟರ್ ಪ್ರೈಸನ್ ನಡಿ ಪಾರ್ವತಮ್ಮ ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದೇ ಲೆಗಸಿ ಈಗ ಮುಂದುವರೆದಿದೆ.

ಗೀತಾ ಪಿಕ್ಚರ್ಸ್ ನಡಿ ಗೀತಾ ಶಿವರಾಜ್ ಕುಮಾರ್, ಪಿಆರ್‌ಕೆ ಪ್ರೊಡಕ್ಷನ್ ನಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಈಗ ಶಿವಣ್ಣನ ದ್ವಿತೀಯ ಪುತ್ರಿ ನಿವೇದಿತಾ ತಮ್ಮದೇ ಒಡೆತನದ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಇದನ್ನು ಓದಿ:ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ

ಶ್ರೀ ಮುತ್ತು ಸಿನಿ ಸರ್ವಿಸ್ ನಿವೇದಿತಾ ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ಸೃಷ್ಟಿಯಾಗಿರುವ ನಿರ್ಮಾಣ ಸಂಸ್ಥೆ. ಈ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ- ಮೂರು ವೆಬ್ ಸೀರೀಸ್‌ಗಳು ಹೊರ ಬಂದಿವೆ. ಈಗ ಇದೇ ಬ್ಯಾನರ್ ನಡಿ ನಿವೇದಿತಾ ಸಿನಿಮಾ ನಿರ್ಮಾಣಕ್ಕೆ (Produce) ಮುಂದಾಗಿದ್ದಾರೆ. ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಮೇ 1ರಂದು ಒಂದು ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ ಎಂಬ ಪೋಸ್ಟರ್ ಮೂಲಕ ತಮ್ಮ ಹೊಸ ಹೆಜ್ಜೆಯ ಬಗ್ಗೆ ತಿಳಿಸಿದ್ದಾರೆ.

ನಿವೇದಿತಾ ಒಡೆತನದ ಶ್ರೀ ಮುತ್ತು ಸಿನಿ ಸರ್ವಿಸ್ ನಡಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾಗೆ ವಂಶಿ ಸಾರಥಿ. ಈ ಹಿಂದೆ 'ಮಾಯಾಬಜಾರ್' ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ವಂಶಿ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಟನಾಗಿ ಬರುತ್ತಿದ್ದಾರೆ. ಜೊತೆಗೆ ನಿರ್ದೇಶನ ಕೂಡ ಮಾಡ್ತಿದ್ದಾರೆ.

ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನ ದಾರಿಯಲಿ' ಸಿನಿಮಾದ ಛಾಯಾಗ್ರಹಕ ಅಭಿಲಾಷ್ ಕಲ್ಲಟ್ಟಿ ಕ್ಯಾಮೆರಾ ಸೆರೆಹಿಡಿಯಲಿದ್ದು, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಜಯ್ ರಾಮ್ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

]]>
1061741 0 0 0
<![CDATA[ಹಾಳು ಬಾವಿಯಲ್ಲಿ ವೃದ್ಧೆಯ ಶವ ಪತ್ತೆ]]> https://publictv.in/old-womans-body-found-in-well-in-vijayapura/ Mon, 01 May 2023 06:41:40 +0000 https://publictv.in/?p=1061742 (ಸಾಂದರ್ಭಿಕ ಚಿತ್ರ)

ವಿಜಯಪುರ: ಹಾಳು ಬಾವಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

ಶೇಖವ್ವ ತಾಯಿ ನರಳು ಮೃತ ದುರ್ದೈವಿ. ದೇವರಹಿಪ್ಪರಗಿ ಪಟ್ಟಣದ ಉಪ್ಪಳೇ ಅವರ ಹಾಳು ಬಾವಿಯಲ್ಲಿ ಶವ ಪತ್ತೆಯಾಗಿದೆ. ಬೆಳಗ್ಗೆ ಗ್ರಾಮಸ್ಥರು ಬಾವಿ ಸಮೀಪ ಹೋದಾಗ ವಿಷಯ ತಿಳಿದಿದೆ. ಇವರ ಸಾವಿಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದಾಗಿ ನೇಣಿಗೆ ಶರಣಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ 

ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಟ್ಟಡದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

]]>
1061742 0 0 0
<![CDATA[ಮದುವೆ ಮನೆಯಲ್ಲಿ ಸಾವಿನ ಸೂತಕ - ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು]]> https://publictv.in/man-dies-after-falling-into-vessel-of-boiling-rasam-at-tamil-nadu-wedding/ Mon, 01 May 2023 06:54:32 +0000 https://publictv.in/?p=1061749 ಇದನ್ನೂ ಓದಿ: ಹಾಳು ಬಾವಿಯಲ್ಲಿ ವೃದ್ಧೆಯ ಶವ ಪತ್ತೆ ಅಡುಗೆ ಕೆಲಸಕ್ಕೆ ಅರೆಕಾಲಿಕ ಕೆಲಸಗಾರನಾಗಿದ್ದ. ಮದುವೆ ಸಮಾರಂಭದಲ್ಲಿ ಊಟ ಬಡಿಸುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ರಸಂ ಪಾತ್ರೆಯೊಳಗೆ ಬಿದ್ದು ಮೃತಪಟ್ಟಿದ್ದಾನೆ. ತೀವ್ರ ಸುಟ್ಟಗಾಯಗಳಾಗಿರುವ ಸಂತ್ರಸ್ತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಟ್ಟಿದ್ದ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ]]> 1061749 0 0 0 <![CDATA[ಬಂದೂಕುಗಳು ಕಾಯುತ್ತಿವೆ, ಆತಂಕವಾಗುತ್ತಿದೆ : ನಟ ಸಲ್ಮಾನ್ ಖಾನ್]]> https://publictv.in/guns-are-waiting-getting-anxious-actor-salman-khan/ Mon, 01 May 2023 06:46:39 +0000 https://publictv.in/?p=1061751 ಲಾರೆನ್ಸ್ ಬಿಷ್ಣೋಯ್ ಅಂಡ್ ಗ್ಯಾಂಗ್ ಜೀವ ಬೆದರಿಕೆ ಹಾಕಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಸಲ್ಮಾನ್ ಖಾನ್, ‘ನನ್ನನ್ನು ಬಂದೂಕುಗಳು ಕಾಯುತ್ತಿವೆ. ಸಾಕಷ್ಟು ಭಯದಲ್ಲಿ ಬದುಕುತ್ತಿರುವೆ. ಯಾಕೆ ಅವರು ನನಗೆ ಗನ್ ಪಾಯಿಂಟ್ ಇಡುತ್ತಿದ್ದಾರೆ ಎನ್ನುವುದು ಇನ್ನೂ ಅರ್ಥವಾಗುತ್ತಿಲ್ಲ. ಮುಗಿದು ಹೋದ ಪ್ರಕರಣವನ್ನು ಮತ್ತೆ ಮತ್ತೆ ಕೆದುಕುತ್ತಿದ್ದಾರೆ’ ಎಂದಿದ್ದಾರೆ.

ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ (Mumbai) ಪೊಲೀಸರು (Police) ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ:ಪತಿ ಸಿದ್‌ಗಾಗಿ ಕೈಯಾರೇ ಉಪಾಹಾರ ರೆಡಿ ಮಾಡಿದ ಕಿಯಾರಾ

ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

]]>
1061751 0 0 0
<![CDATA[ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ - ಸುಪ್ರೀಂ ತೀರ್ಪು]]> https://publictv.in/can-grant-divorce-without-6-month-wait-supreme-court-order/ Mon, 01 May 2023 07:03:43 +0000 https://publictv.in/?p=1061757 ನವದೆಹಲಿ: ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕಾಗಿ (Divorce) ಆರು ತಿಂಗಳ ಕಡ್ಡಾಯವಾಗಿ ಕಾಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.

ಪತಿ ಹಾಗೂ ಪತ್ನಿಯ ಒಪ್ಪಿಗೆ ಇದ್ದಾಗ ಕೌಟುಂಬಿಕ ನ್ಯಾಯಾಲಯವನ್ನು ಒಪ್ಪಿಸದೇ ಮದುವೆಯನ್ನು ರದ್ದು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ (Constitution Bench) ಸಂವಿಧಾನದ 142ನೇ (Article 142) ವಿಧಿಯನ್ನು ಬಳಸಿಕೊಂಡು ಈ ತೀರ್ಪು ನೀಡಿದೆ.

ಹಿಂದೂ ವಿವಾಹ ಕಾಯ್ದೆಯ  (Hindu Marriage Act) ಸೆಕ್ಷನ್ 13 ಬಿ ಅಡಿಯಲ್ಲಿ ಸೂಚಿಸಿದಂತೆ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕಾಗಿ ಕಡ್ಡಾಯ ಕಾಯುವ ಅವಧಿಯನ್ನು ರದ್ದುಗೊಳಿಸಬೇಕೆಂದು ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.

ಏನಿದು 142ನೇ ವಿಧಿ? ತನ್ನ ಮುಂದೆ ಬಾಕಿ ಇರುವ ಯಾವುದೇ ವಿಷಯ ಅಥವಾ ವಿಷಯದಲ್ಲಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಲು ಸುಪ್ರೀಂ ಕೋರ್ಟ್ 142ನೇ ವಿಧಿಯನ್ನು ಬಳಸುತ್ತದೆ. "ಸುಪ್ರೀಂ ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯ ವ್ಯಾಯಾಮದಲ್ಲಿ, ತನ್ನ ಮುಂದೆ ಬಾಕಿ ಉಳಿದಿರುವ ಯಾವುದೇ ವಿಷಯ ಅಥವಾ ವಿಷಯದಲ್ಲಿ ಪೂರ್ಣ ನ್ಯಾಯವನ್ನು ಮಾಡಲು ಅಗತ್ಯವಾದ ಆದೇಶವನ್ನು ನೀಡಬಹುದು ಅಥವಾ ಅಂತಹ ಆದೇಶವನ್ನು ಮಾಡಬಹುದು ಎಂದು ಹೇಳುತ್ತದೆ. ಸುಪ್ರೀಂ ಕೋರ್ಟ್ ಈಗ ಈ ವಿಧಿಯನ್ನು ಬಳಸಿಕೊಂಡು ಮಹತ್ವದ ತೀರ್ಪು ನೀಡಿದೆ. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

]]>
1061757 0 0 0
<![CDATA[ಖ್ಯಾ ತ ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ]]> https://publictv.in/famous-choreographer-chaitanya-committed-suicide/ Mon, 01 May 2023 07:11:22 +0000 https://publictv.in/?p=1061765 ತೆಲುಗು (Telugu) ಸಿನಿಮಾ ರಂಗದ ಖ್ಯಾತ ಕೋರಿಯೊಗ್ರಾಫರ್ (Choreographer) ಚೈತನ್ಯ (Chaitanya) ಸಾಲಬಾಧೆ ತಾಳದೇ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಸಾಕಷ್ಟು ಸಾಲ ಮಾಡಿಕೊಂಡಿದ್ದ ಚೈತನ್ಯ ಅದನ್ನು ತೀರಿಸಲಾಗದೆ ಹಲವು ದಿನಗಳಿಂದ ಮನನೊಂದಿದ್ದರು ಎನ್ನಲಾಗುತ್ತಿದೆ. ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಅವರು ಈ ಸಾವಿಗೆ ಸಾಲವೇ ಕಾರಣವೆಂದು ಹೇಳಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಅವರು ವಾಸವಿದ್ದು, ಸಾಯುವುದಕ್ಕೂ ಮುನ್ನ ವಿಡಿಯೋವೊಂದನ್ನು ಮಾಡಿದ್ದಾರೆ. ‘ನನ್ನ ತಂದೆ ತಾಯಿ ಹಾಗೂ ಸಹೋದರಿ ಚೆನ್ನಾಗಿ ನೋಡಿಕೊಂಡರು. ಆದರೆ, ನಾನು ಅನಿವಾರ್ಯ ಕಾರಣಗಳಿಂದಾಗಿ ಸಾಲ ಮಾಡಿಕೊಂಡೆ. ಅದನ್ನು ತೀರಿಸಲು ಕಷ್ಟವಾಯಿತು. ಹಾಗಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ. ನೆಲ್ಲೂರಿನಲ್ಲಿ ಇಂದು ನನ್ನ ಕೊನೆಯ ದಿನ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ಓದಿ:ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ

ತೆಲುಗಿನ ಜನಪ್ರಿಯ ಡ್ಯಾನ್ಸ್ ಶೋ ‘ಧೀ’ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಅವರು, ಪ್ರಭುದೇವ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ್ದಾರೆ. ಅಲ್ಲದೇ, ಅನೇಕ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. ಚೈತನ್ಯ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.

]]>
1061765 0 0 0
<![CDATA[ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? - ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ]]> https://publictv.in/karnataka-assembly-election-2023-who-will-win-in-alur-sakleshpur-constituency/ Mon, 01 May 2023 07:39:40 +0000 https://publictv.in/?p=1061783 ಹಾಸನ: ಜೆಡಿಎಸ್‍ನ ಭದ್ರಕೋಟೆಯಾಗಿರುವ ಆಲೂರು -ಸಕಲೇಶಪುರ (Sakleshpur) ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಫೈಟ್ ಇದೆ. ಮೀಸಲು ಕ್ಷೇತ್ರದಲ್ಲಿ ಕಾಡಾನೆ ಸಮಸ್ಯೆ ಬಗೆಹರಿಸದೇ ಇರುವುದು ಹಾಗೂ ಅಭಿವೃದ್ಧಿಗೆ ವಿಷಯವೇ ನಿರ್ಣಾಯಕ ಆಗಲಿದೆ. 2023ರ ವಿಧಾನಸಭಾ ಚುನಾವಣೆಗೆ ರಣಕಣ ಸಿದ್ಧವಾಗಿದ್ದು, ಆಲೂರು -ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಕುತೂಹಲ ಮೂಡಿಸಿದೆ.

ಈ ಕ್ಷೇತ್ರದಲ್ಲಿ 5 ಬಾರಿ ಕಾಂಗ್ರೆಸ್ (Congress), 4 ಬಾರಿ ಜೆಡಿಎಸ್ (JDS), 2 ಬಾರಿ ಬಿಜೆಪಿ (BJP), ತಲಾ 1 ಬಾರಿ ಜನತಾಪಕ್ಷ ಹಾಗೂ ಸ್ವತಂತ್ರರು ಗೆದ್ದಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು: ಹೆಚ್.ಕೆ.ಕುಮಾರಸ್ವಾಮಿ (ಜೆಡಿಎಸ್) ಮುರಳಿ ಮೋಹನ್ (ಕಾಂಗ್ರೆಸ್) ಸಿಮೆಂಟ್ ಮಂಜು (ಬಿಜೆಪಿ)

ಹೆಚ್.ಕೆ.ಕುಮಾರಸ್ವಾಮಿ: ಜೆಡಿಎಸ್ ಅಭ್ಯರ್ಥಿ ಹೆಚ್.ಕೆ ಕುಮಾರಸ್ವಾಮಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಸೌಮ್ಯ ಸ್ವಭಾವದ ರಾಜಕಾರಣಿ, ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿದ್ದಾರೆ. ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗುವಲ್ಲಿ ವಿಫಲ, ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಲು ಒತ್ತಡ ಹಾಕಿಲ್ಲ, ಮಲೆನಾಡು ಭಾಗದ ಹಿರಿಮೆಗೆ ತಕ್ಕಂತೆ ಕೆಲಸ ಮಾಡದೇ ಇರುವ ವಿಷಯಗಳ ಇವರ ಹಿನ್ನಡೆಗೆ ಕಾರಣವಾಗಬಹುದು.

ಮುರುಳಿ ಮೋಹನ್ : ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಅವರು ಸೌಮ್ಯ ಸ್ವಭಾವದವರಾಗಿದ್ದಾರೆ. ಪಕ್ಷದ ಹಿನ್ನೆಲೆ, ಕೊರೊನಾ ಸಂದರ್ಭದಿಂದಲೂ ಕ್ಷೇತ್ರದಲ್ಲೇ ಓಡಾಡುತ್ತಿರುವುದು ಮುರುಳಿ ಮೋಹನ್ ಅವರ ಧನಾತ್ಮಕ ಅಂಶವಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಬಂಡಾಯದ ಬಿಸಿ ಎದ್ದಿದೆ. ಹೊರಗಿನವರು ಎಂಬ ಅಪವಾದವಿದೆ, ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

ಸಿಮೆಂಟ್ ಮಂಜು: ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರು ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಹಾಸನ ಶಾಸಕ ಪ್ರೀತಂಗೌಡ ಅವರ ಸಂಪೂರ್ಣ ಬೆಂಬಲ ನೀಡುತ್ತಿರುವುದು ಸಿಮೆಂಟ್ ಮಂಜುಗೆ ಧನಾತ್ಮಕ ಅಂಶವಾಗಿದೆ. ಬಿಜೆಪಿಯ ಹೊಸ ಮುಖವಾಗಿದ್ದು ಇಡೀ ಕ್ಷೇತ್ರವನ್ನು ಸುತ್ತಾಡಿಲ್ಲ ಎಂಬ ಆರೋಪವಿದೆ. ಕ್ಷೇತ್ರದಲ್ಲಿ ಸಂಘಟನೆ ಕೊರತೆಯೂ ಇದೆ.

ಜಾತಿ ಲೆಕ್ಕಾಚಾರ ಏನು?: ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ 40 ಸಾವಿರ, ಪರಿಶಿಷ್ಟ ಪಂಗಡದ 20 ಸಾವಿರ ಮತದಾರರಿದ್ದಾರೆ. ಉಳಿದಂತೆ ಲಿಂಗಾಯತ ಸಮುದಾಯದ 45,000 ಹಾಗೂ ಒಕ್ಕಲಿಗ ಸಮುದಾಯದ 55,000 ಮತಗಳಿವೆ. 18 ಸಾವಿರ ಮುಸ್ಲಿಂ ಮತಗಳಿವೆ. ಪರಿಶಿಷ್ಟರ ಜೊತೆಗೆ ಲಿಂಗಾಯತ, ಒಕ್ಕಲಿಗ ಹಾಗೂ ಮುಸ್ಲಿಂ ಮತಗಳು ಯಾರ ಪರ ಬೀಳುತ್ತವೆಯೋ ಅವರ ಗೆಲುವು ನಿರಾಯಾಸವಾಗಲಿದೆ. ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಒಟ್ಟು 2,00,649 ಮತದಾರರಿದ್ದಾರೆ. ಇವರಲ್ಲಿ 1,00,449 ಪುರುಷರು, 1,00,197 ಮಹಿಳೆಯರಿದ್ದಾರೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

]]>
1061783 0 0 0
<![CDATA[ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್]]> https://publictv.in/actress-janhvi-kapoor-signed-another-telugu-movie-with-akhil-akkinei-directing-by-anil-kumar/ Mon, 01 May 2023 07:34:50 +0000 https://publictv.in/?p=1061784 ಹುಭಾಷಾ ನಟಿಯಾಗಿ ಶ್ರೀದೇವಿ ಕಪೂರ್ (Sridevi Kapoor)  ಜನಪ್ರಿಯತೆ ಗಳಿಸಿದ್ದರು. ಅಮ್ಮನ ಹಾದಿಯಲ್ಲೇ ಪುತ್ರಿ ಜಾನ್ವಿ ಕಪೂರ್ (Janhavi Kapoor) ಕೂಡ ಹೆಜ್ಜೆ ಇಡ್ತಿದ್ದಾರೆ. ದಕ್ಷಿಣದ ಸಿನಿಮಾಗಳತ್ತ ಜಾನ್ವಿ ಕಪೂರ್ ಹೆಚ್ಚು ಗಮನ ನೀಡ್ತಿದ್ದಾರೆ.

ಮಿಲಿ, ಗುಡ್ ಲಕ್ ಜರ‍್ರಿ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ (Bollywood) ಮೋಡಿ ಮಾಡಿರುವ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇದೀಗ ತೆಲುಗಿನತ್ತ ಮುಖ ಮಾಡಿದ್ದಾರೆ. ಶ್ರೀದೇವಿ ಅವರು ಹೇಗೆ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನ ಏರಿದ್ರೋ ಅದೇ ರೀತಿ ಸೌತ್ ಸಿನಿಮಾ ಸ್ಕ್ರಿಪ್ಟ್‌ಗಳಿಗೆ ಜಾನ್ವಿ ಹೆಚ್ಚಿನ ಪ್ರಾಮುಖ್ಯತೆ ನೀಡ್ತಿದ್ದಾರೆ. ಇದನ್ನೂ ಓದಿ:ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವಣ್ಣನ ಪುತ್ರಿ ನಿವೇದಿತಾ

ಇದೀಗ ಜ್ಯೂನಿಯರ್ ಎನ್‌ಟಿಆರ್ (Jr.ntr) ಜೊತೆಗಿನ ಸಿನಿಮಾ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಂಪರ್ ಆಫರ್‌ನ್ನ ನಟಿ ತಮ್ಮದಾಗಿಸಿಕೊಂಡಿದ್ದಾರೆ. ಜಾನ್ವಿ ಇದೀಗ ಮತ್ತೊಬ್ಬ ತೆಲುಗಿನ ನಟನ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಜಾನ್ವಿ ಕಮಾಲ್‌ ಮಾಡಲಿದ್ದಾರೆ.

ಹೊಸ ಸಿನಿಮಾಗೆ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಗೆ (Akhil Akkineni)  ನಾಯಕಿಯಾಗಿ ಜಾನ್ವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಯುವ ನಿರ್ದೇಶಕ ಅನಿಲ್ ಕುಮಾರ್ (Anil Kumar) ನಿರ್ದೇಶನದಲ್ಲಿ ಅಖಿಲ್- ಜಾನ್ವಿ ಆಕ್ಟ್ ಮಾಡಲಿದ್ದಾರೆ. ಅನಿಲ್ ಈ ಹಿಂದೆ ಪ್ರಭಾಸ್ ನಟನೆಯ 'ಸಾಹೋ' (Saho) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

ಮೊದಲ ಬಾರಿಗೆ ಜಾನ್ವಿ- ಅಖಿಲ್‌ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಫ್ರೆಶ್‌ ಫೇರ್‌ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

]]>
1061784 0 0 0
<![CDATA[‘ದಿ ಕೇರಳ ಸ್ಟೋರಿ’ ನಿಷೇಧ ನಾನು ಒಪ್ಪುವುದಿಲ್ಲ: ನಟ ಚೇತನ್]]> https://publictv.in/i-dont-agree-with-the-kerala-story-ban-actor-chetan/ Mon, 01 May 2023 07:30:49 +0000 https://publictv.in/?p=1061786 ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾವನ್ನು ನಿಷೇಧ ಮಾಡಬೇಕು ಎನ್ನುವ ಕೂಗು ಜೋರಾಗುತ್ತಿದೆ. ಕೇರಳದ ಸಿಪಿಐ(ಎಂ), ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮತ್ತು ಸಂಘಟನೆಗಳು ಈ ಸಿನಿಮಾದ ಪ್ರದರ್ಶನವನ್ನು ನಿಲ್ಲಿಸುವಂತೆ ಆಗ್ರಹಿಸಿವೆ. ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ವಿರೋಧದ ಅಖಾಡಕ್ಕೆ ಇಳಿದಿದ್ದಾರೆ. ಈ ನಡೆಯನ್ನು ಕನ್ನಡದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಖಂಡಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್ (Chetan),  ‘ವಿವಾದಾತ್ಮಕ ಚಿತ್ರ ದಿ ಕೇರಳ ಸ್ಟೋರಿ ಮೇ 5 ರಂದು ತೆರೆಗೆ ಬರಲಿದೆ.  ನಾನು ಈ ಹಿಂದೆ ಸಮುದಾಯದ/ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮದುವೆಯಾಗದೇ ಮಗುವನ್ನು ಪಡೆಯುವ ಆಸೆ ಇತ್ತು- ಸಲ್ಮಾನ್‌ ಖಾನ್‌

ಈ ಸಿನಿಮಾ ವಿವಾದ ಆಗುವುದಕ್ಕೆ ಕಾರಣ  ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರು ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿದೆ. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆಗಳು ಇವೆ.

]]>
1061786 0 0 0
<![CDATA[ಸಾ.ರಾ. ಬಾಸ್‌ಗೆ ದೇಶ ಕಾಯುವ ಸೈನಿಕನಿಂದ ಮೊದಲ ಮತ - ವೋಟ್‌ ಹಾಕಿ ಬ್ಯಾಲೆಟ್‌ ಪೇಪರ್‌ ಪ್ರದರ್ಶಿಸಿದ ಯೋಧನ ಫೋಟೋ ವೈರಲ್‌]]> https://publictv.in/a-soldier-shows-ballot-paper-after-vote-to-sa-ra-mahesh-photo-viral-karnataka-election-2023/ Mon, 01 May 2023 07:44:03 +0000 https://publictv.in/?p=1061790 ಮೈಸೂರು: ಮತ ಹಾಕಿ ಬ್ಯಾಲೆಟ್‌ ಪೇಪರ್‌ ಜೊತೆಗೆ ಯೋಧರೊಬ್ಬರು ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮತ ಹಾಕಿರುವ ಬ್ಯಾಲೆಟ್‌ ಪೇಪರನ್ನು ಯೋಧ ಪ್ರದರ್ಶಿಸುತ್ತಿದ್ದಾರೆ. ಆ ಫೋಟೋದೊಂದಿಗೆ, ನಮ್ಮ "ಸಾ.ರಾ. ಬಾಸ್‌"ಗೆ ಮೊದಲ ಮತ. ನಮ್ಮ ದೇಶ ಕಾಯುವ ಸೈನಿಕನಿಂದ ಜೈ ಹಿಂದ್‌ ಎಂಬ ಅಡಿಬರಹವಿದೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

ಈ ಯೋಧ ಕೆ.ಆರ್.ನಗರದ ಕ್ಷೇತ್ರದ ಮತದಾರ ಎಂಬುದು ಪೋಸ್ಟ್‌ನಿಂದ ತಿಳಿದುಬಂದಿದೆ. ಕರ್ತವ್ಯದ ಹಿನ್ನಲೆಯಲ್ಲಿ ಹೊರ ರಾಜ್ಯದಿಂದ ಅಂಚೆ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಯೋಧ ಯಾರು ಮತ್ತು ಎಲ್ಲಿಂದ ಮತ ಹಾಕಿದ್ದಾರೆ ಎಂಬುದನ್ನ ಚುನಾವಣಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

ಇದೇ ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರು, ಬೇರೆ ಬೇರೆ ಕಡೆಯಿರುವ ಸರ್ಕಾರಿ ನೌಕರರು ತಾವು ಇರುವಲ್ಲಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

ಕೆ.ಆರ್.ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ.ಮಹೇಶ್ (Sa.Ra.Mahesh) (ಜೆಡಿಎಸ್), ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ (ಕಾಂಗ್ರೆಸ್), ಹೊಸಹಳ್ಳಿ ವೆಂಕಟೇಶ್ (ಬಿಜೆಪಿ) ಕಣದಲ್ಲಿದ್ದಾರೆ.

]]>
1061790 0 0 0
<![CDATA[ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ - ವೀಡಿಯೋ ವೈರಲ್]]> https://publictv.in/karnataka-election-2023-jds-mlc-bhojegowda-asks-supporters-to-vote-for-congress-candidate-in-chikkamagaluru/ Mon, 01 May 2023 07:44:51 +0000 https://publictv.in/?p=1061797 ಚಿಕ್ಕಮಗಳೂರು: ಜೆಡಿಎಸ್ (JDS) ಮುಖಂಡ ಭೋಜೆಗೌಡ (Bhojegowda) ಕಾಂಗ್ರೆಸ್ (Congress) ಪರ ಬಹಿರಂಗ ಪ್ರಚಾರದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಆಪ್ತರಾಗಿರುವ ಎಂಎಲ್‍ಸಿ ಭೋಜೇಗೌಡ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಯ ಮುಂದೆ ಕುಳಿತು ಪ್ರಚಾರ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ಶಾಸಕ ಸಿ.ಟಿ.ರವಿಯವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಬೇಕು. ಸಿದ್ದರಾಮಯ್ಯ ಹಾಗೂ ದೇವೇಗೌಡರಿಗೆ ಅವಮಾನ ಮಾಡಿದವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ? 

ಸಿ.ಟಿ ರವಿ, ಸಿದ್ದರಾಮಯ್ಯನವರನ್ನು (Siddaramaiah) ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಿ ಎನ್ನುತ್ತಾರೆ. ಅಲ್ಲದೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಗ್ಗೆಯೂ ಮಾತನಾಡುತ್ತಾರೆ. ಅವರಿಗೆ ಮತದಾರರು ಪಾಠ ಕಲಿಸಬೇಕು. ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದ್ದರೆ, ಸಿದ್ದರಾಮಯ್ಯರಿಗೆ ಅವಮಾನ ಮಾಡಿದವರಿಗೆ ಬುದ್ಧಿ ಕಲಿಸಿ. ಇಲ್ಲದಿದ್ದರೆ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಸಹ ಭೋಜೇಗೌಡರು ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದ್ದ ವೀಡಿಯೋ ವೈರಲ್ ಆಗಿತ್ತು. ಇದರಿಂದ ಜೆಡಿಎಸ್‍ನಲ್ಲಿ ಗೊಂದಲ ಉಂಟಾಗಿತ್ತು. ಅಲ್ಲದೆ ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದರು. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

]]>
1061797 0 0 0
<![CDATA[ಮೋದಿಯದ್ದು ಬರೀ ಬುರುಡೇ ಭಾಷಣ, ಸರ್ಪ ಯಾವಾಗಲೂ ಡೇಂಜರ್: ಹೆಚ್‌ಡಿಕೆ ವಾಗ್ದಾಳಿ]]> https://publictv.in/karnataka-election-2023-hd-kumaraswamy-slams-against-narendra-modi-in-bagalkote/ Mon, 01 May 2023 08:05:26 +0000 https://publictv.in/?p=1061825 ಬಾಗಲಕೋಟೆ: ಮೋದಿ (Narendra Modi) ಭಾಷಣ ಎಲ್ಲಾ ಸಂತೆ ಭಾಷಣ. ಯಾವುದೂ ಜಾರಿಗೆ ತರಲು ಗೊತ್ತಿಲ್ಲ. ಬರೀ ಬುರುಡೆ ಭಾಷಣ ಮಾಡಿ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumarswamy) ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ರಾಷ್ಟ್ರನಾಯಕರು ರಾಜ್ಯದಲ್ಲಿ ಟಿಕಾಣಿ ಹೂಡಿ ಪ್ರಚಾರ ಮಾಡುತ್ತಿರುವ ವಿಚಾರವಾಗಿ ಬಾದಮಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೆಲ್ಲಾ 9ನೇ ತಾರೀಕಿನವರೆಗೂ ಇರುತ್ತಾರೆ. ಆಮೇಲೆ ಕರ್ನಾಟಕದಲ್ಲಿ ಏನಾಗಿದೆ ಎಂದು ಕೇಳಲು ಬರುತ್ತಾರಾ? ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರನಾಯಕರು ರಾಜ್ಯಕ್ಕೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಸಹ ಬಂದಿದ್ದಾರೆ. ಚುನಾವಣೆ ಮುಗಿದ ಮೇಲೆ ಕರ್ನಾಟಕಕ್ಕೆ ಟಾಟಾ ಮಾಡಿ ಹೋಗುತ್ತಾರೆ. ಮತ್ತೆ ಬರೋದು ಲೋಕಸಭಾ ಚುನಾವಣೆಯ ವೇಳೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ – ವೀಡಿಯೋ ವೈರಲ್

ಜನರ ಒಳಿತಿಗಾಗಿ ನಾನು ಸರ್ಪ ಆಗಲು ಸಿದ್ಧ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಪ ಆಗೋದಾದರೆ ಆಗಲಿ. ಆದರೆ ಸರ್ಪ ಯಾವಾಗಲೂ ಡೇಂಜರ್. ಅದು ಜನಕ್ಕೆ ಆದರೂ ಅಷ್ಟೇ. ಇನ್ನೊಬ್ಬರಿಗೆ ಆದರೂ ಅಷ್ಟೇ. ನಾನು ಸರ್ಪ, ವಿಷಕನ್ಯೆ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಇವೆಲ್ಲಾ ಇವತ್ತಿನ ರಾಜಕಾರಣದಲ್ಲಿ ಅವಶ್ಯಕತೆ ಇರಲಿಲ್ಲ. ನಮ್ಮ ರಾಜ್ಯದಲ್ಲಿ ಅಕಾಲಿಕ ಮಳೆ ಆಗಿ ರೈತರ ಬೆಳೆ ನಾಶವಾಗಿದೆ. ಆ ಬಗ್ಗೆ ಚರ್ಚೆ ಆಗಬೇಕು. ಆ ಬಗ್ಗೆ ಚರ್ಚೆ ಮಾಡದೇ ಯಾವುದೋ ವಿಷಕನ್ಯೆ, ವಿಷಸರ್ಪದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಜನರ ಬದುಕನ್ನು ಸರಿಪಡಿಸಿಕೊಡುತ್ತಾರಾ ಇವರು ಎಂದು ಹರಿಹಾಯ್ದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ

ಮೋದಿ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಎನ್ನುತ್ತಾರೆ. ಲೂಟಿ ಹೊಡೆಯುವುದೇ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯಾ? ಯಾರು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಾರೋ ಅದು ಬಿಜೆಪಿಗೆ ಮತ್ತು ನರೇಂದ್ರ ಮೋದಿಯವರಿಗೆ ಅಭಿವೃದ್ಧಿ. ಅದು ಡಬಲ್ ಎಂಜಿನ್ ಸರ್ಕಾರ ಇದ್ರೆ ಮಾತ್ರ ಸಾಧ್ಯ ಎಂಬುದು ಅವರ ಮಾತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

ಜೆಡಿಎಸ್ (JDS) ಕಾಂಗ್ರೆಸ್‌ನ ಬಿ ಟೀಮ್ ಎಂಬ ಬಿಜೆಪಿ ಆರೋಪದ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್‌ನ ಬಿ ಟೀಮ್ ಎನ್ನುತ್ತಾರೆ. ಕಾಂಗ್ರೆಸ್‌ನ ಸಿದ್ದರಾಮಯ್ಯ (Siddaramaiah) ಕೂಡಾ ಜೆಡಿಎಸ್ ಬಿ ಟೀಮ್ ಎನ್ನುತ್ತಿದ್ದಾರೆ. ನಾನು ಯಾವ ಟೀಮ್ ಎಂದು ಹೇಳಲಿ? ನಾನು ಜನತೆಯ ಬಿ ಟೀಮ್. ನಾನು ರಾಜ್ಯದ ಕನ್ನಡಿಗರ ಬಿ ಟೀಮ್ ಎಂದರು. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

]]>
1061825 0 0 0
<![CDATA[ಆರೋಗ್ಯದಲ್ಲಿ ಚೇತರಿಕೆ, ಸದ್ಯದಲ್ಲೇ ಶ್ರೀಮುರಳಿ ಶೂಟಿಂಗ್‌ಗೆ ಹಾಜರ್]]> https://publictv.in/srimurali-releases-dhanya-ramkumars-new-movie-poster-talks-about-injury-which-he-had-while-shooting/ Mon, 01 May 2023 08:12:02 +0000 https://publictv.in/?p=1061829 ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಅವರು ಇತ್ತೀಚಿಗೆ ಧನ್ಯಾ ರಾಮ್‌ಕುಮಾರ್ (Dhanya Ramkumar) ಅವರ ಹೊಸ ಚಿತ್ರಕ್ಕೆ ಸಾಥ್ ನೀಡುವ ಮೂಲಕ ಸುದ್ದಿಯಲ್ಲಿದ್ದರು. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಹಾಗೆಯೇ ಫ್ಯಾನ್ಸ್‌ಗೆ ನಟ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಈ ವರ್ಷ ಜನವರಿಯಲ್ಲಿ ನಟ ಶ್ರೀಮುರಳಿ ಅವರಿಗೆ 'ಬಘೀರ' (Bhageera Film) ಸಿನಿಮಾದ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟಾಗಿತ್ತು. ರಾಕ್‌ಲೈನ್ ಸ್ಟುಡಿಯೋದಲ್ಲಿ ಸಿನಿಮಾಗಾಗಿ ಸ್ಟಂಟ್ಸ್ ಮಾಡುವ ವೇಳೆ ಶ್ರೀಮುರಳಿ ಅವರಿಗೆ ಗಾಯಗಳಾಗಿತ್ತು. ಇದೀಗ ಅವರು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

ಇತ್ತೀಚಿಗೆ ಕಾಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಎಲ್ಲಾ ನಿನಗಾಗಿ' (Ella Ninagagi) ಚಿತ್ರದ ಟೈಟಲ್ ರಿವೀಲ್ ಮಾಡಿಕೊಡುವ ಮೂಲಕ ಧನ್ಯಾ ರಾಮ್‌ಕುಮಾರ್ ಟೀಂ ಶುಭಕೋರಿದ್ದರು. ಈ ವೇಳೆ ಶ್ರೀಮುರಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಬಹಳ ಕಷ್ಟವಾದ ಸ್ಟಂಟ್ಸ್‌ಗಳನೆಲ್ಲಾ ಆರಾಮಾಗಿ ಮಾಡಿದ್ದೇನೆ. ಆದರೆ ಈ ಸಣ್ಣ ಸ್ಟಂಟ್ ಮಾಡಲು ಹೋಗಿ 3 ತಿಂಗಳು ರೆಸ್ಟ್ ತೆಗೆದುಕೊಳ್ಳುವಂತಾಯ್ತು. ಈಗ ಚೇತರಿಸಿಕೊಂಡಿದ್ದೇನೆ. ಮೇ ಮೊದಲ ವಾರದಲ್ಲಿ ಮತ್ತೆ ಬಘೀರ ಸಿನಿಮಾದ ಚಿತ್ರೀಕರಣಕ್ಕೆ ಹೋಗಲಿದ್ದೇನೆ ಎಂದು ಸಿಹಿಸುದ್ದಿ ನೀಡಿದ್ದಾರೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ 'ಬಘೀರ' ಚಿತ್ರದಲ್ಲಿ ಶ್ರೀಮುರಳಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ರುಕ್ಮಿಣಿ ವಸಂತ್ (Rukmini Vasanth) ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಜಿಎಫ್ (KGF) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ (Prashanth Neel) ಬರೆದ ಕಥೆಗೆ ಡಾ.ಸೂರಿ ನಿರ್ದೇಶನ ಮಾಡ್ತಿದ್ದಾರೆ.

]]>
1061829 0 0 0
<![CDATA[ಸೋಮಣ್ಣಗೆ ಲೋ ಬಿಪಿ]]> https://publictv.in/karnataka-election-2023-low-bp-for-somanna-in-chamarajanagar/ Mon, 01 May 2023 08:24:10 +0000 https://publictv.in/?p=1061840 ಚಾಮರಾಜನಗರ: ಎರಡು ಕಡೆಯಲ್ಲೂ ಸತತ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸಚಿವ ವಿ. ಸೋಮಣ್ಣಗೆ ಲೋ ಬಿಪಿ ಆಗಿ ತಲೆ ಸುತ್ತು ಬಂದ ಪ್ರಸಂಗ ಇಂದು ನಡೆಯಿತು.

ರಾಜ್ಯ ವಿಧಾನಸಭಾ ಚುನಾವಣೆಗೆ (Election) ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೂ ವರುಣಾ (Varuna), ಚಾಮರಾಜನಗರ (Chamarajanagara) ಎರಡು ಕ್ಷೇತ್ರದಲ್ಲೂ ವಿ. ಸೋಮಣ್ಣ (V Somanna) ಅವರು ಬೀರುಸಿನ ನಡೆಸುತ್ತಿದ್ದಾರೆ. ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೊಮಣ್ಣಗೆ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದಿದೆ. ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಸೋಮಣ್ಣ ಅವರನ್ನು ಚಾಮರಾಜನಗರ ಕೋಡಿಮೊಳೆ ಗ್ರಾಮದಲ್ಲಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಸ್ವಲ್ಪ ಲೋ ಬಿಪಿ. ನಂಗೆ ತಲೆ ಸುತ್ತು ಬಂತು. ಹಾಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ. ವೈದ್ಯರು ಬಂದು ಚೆಕ್ ಮಾಡಿದರು. ರಕ್ತದೊತ್ತಡ 70ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ

]]>
1061840 0 0 0
<![CDATA[ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ ನಟ ಕಿಶೋರ್]]> https://publictv.in/actor-kishore-expressed-outrage-against-bbmp/ Mon, 01 May 2023 08:56:09 +0000 https://publictv.in/?p=1061845 ಕಾಂತಾರ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟ ಕಿಶೋರ್ (Kishor), ಬಿಬಿಎಂಪಿ (BBMP) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರಕೆರೆ (Devarakere) ಕುರಿತಂತೆ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ದೇವರಕೆರೆ ಉಳಿಸುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ.

ಬೆಂಗಳೂರು (Bangalore) ದಕ್ಷಿಣ ಭಾಗದಲ್ಲಿರುವ ದೇವರಕೆರೆಗೆ 1000 ವರ್ಷಗಳ ಇತಿಹಾಸವಿದೆ. ಇದು ಹೊಯ್ಸಳ ಕಾಲದ ಕೆರೆ ಎಂದು ಹೇಳಲಾಗುತ್ತದೆ. ಮೊದಲು ಈ ಕೆರೆಯು ಅರಣ್ಯ ಇಲಾಖೆಯ ಸುಪರ್ದಿಯಲ್ಲಿತ್ತು. ಹತ್ತು ವರ್ಷಗಳ ಹಿಂದೆಯಷ್ಟೇ ಅರಣ್ಯ ಇಲಾಖೆಯು ಈ ಕೆರೆಯನ್ನು ಬಿಬಿಎಂಪಿ ಹಸ್ತಾಂತರ ಮಾಡಲಾಗಿದೆಯಂತೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದಾಗ ಶುದ್ಧ ನೀರಿನಿಂದ ಈ ಕೆರೆಯು ತುಂಬಿರುತ್ತಿತ್ತು ಎಂದಿದ್ದಾರೆ ಕಿಶೋರ್.

ಬಿಬಿಎಂಪಿ ತೆಕ್ಕೆಗೆ ಈ ಕೆರೆಯು ಯಾವಾಗ ಬಂತೋ ಅಲ್ಲಿಂದ ಹದಗೆಡಲು ಶುರುವಾಯಿತು ಎನ್ನುವುದು ಕಿಶೋರ್ ಆರೋಪ. ಅಭಿವೃದ್ಧಿ ಹೆಸರಿನಲ್ಲಿ ಈ ಕೆರೆಯನ್ನು ಕೊಂದುಬಿಟ್ಟಿದೆ ಬಿಬಿಎಂಪಿ ಎಂದಿದ್ದಾರೆ ನಟ. ಈ ಕೆರೆಯು ಹಾಳಾಗುವುದಕ್ಕೆ ಅನಗತ್ಯ ಕಾಮಗಾರಿಗಳಂತೆ. ಅಭಿವೃದ್ಧಿ ಹೆಸರಿನಲ್ಲಿ ಕೇವಲ ಐದೇ ಐದು ವರ್ಷದಲ್ಲಿ ಕೆರೆಯನ್ನು ಸಾಯಿಸಿದ್ದಾರೆ ಎನ್ನುವುದು ಕಿಶೋರ್ ಆರೋಪ.  ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

ಕಿಶೋರ್ ಕಾಳಜಿಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡದೊಂದು ಆಂದೋಲನವೇ ಶುರುವಾಗಬೇಕು ಎಂದಿದ್ದಾರೆ. ಸ್ಥಳೀಯ ನಿವಾಸಿಗಳು ಈ ಕೆರೆಯ ಕುರಿತು ದೊಡ್ಡಮಟ್ಟದಲ್ಲೇ ಧ್ವನಿ ಎತ್ತಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

]]>
1061845 0 0 0
<![CDATA[ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ]]> https://publictv.in/kangana-said-the-country-is-in-safe-hands-there-is-no-need-to-fear-salman/ Mon, 01 May 2023 09:17:47 +0000 https://publictv.in/?p=1061854 ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಕುರಿತಂತೆ ರಾಷ್ಟಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯೆ ನೀಡಿದ್ದಾರೆ. ‘ಈ ದೇಶವು ಅಮಿತಾ ಶಾ ಮತ್ತು ನರೇಂದ್ರ ಮೋದಿ ಅವರ ಸುರಕ್ಷಿತರ ಕೈಯಲ್ಲಿದೆ. ದೇಶವು ಸುರಕ್ಷಿತರ ಕೈಯಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ನನಗೂ ಈ ಹಿಂದೆ ಜೀವ ಬೆದರಿಕೆ ಕರೆ ಬಂದಿತ್ತು. ನನಗೂ ಭದ್ರತೆ ನೀಡಲಾಗಿತ್ತು’ ಎಂದು ಹೇಳಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಅಂಡ್ ಗ್ಯಾಂಗ್ ಜೀವ ಬೆದರಿಕೆ ಹಾಕಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಸಲ್ಮಾನ್ ಖಾನ್, ‘ನನ್ನನ್ನು ಬಂದೂಕುಗಳು ಕಾಯುತ್ತಿವೆ. ಸಾಕಷ್ಟು ಭಯದಲ್ಲಿ ಬದುಕುತ್ತಿರುವೆ. ಯಾಕೆ ಅವರು ನನಗೆ ಗನ್ ಪಾಯಿಂಟ್ ಇಡುತ್ತಿದ್ದಾರೆ ಎನ್ನುವುದು ಇನ್ನೂ ಅರ್ಥವಾಗುತ್ತಿಲ್ಲ. ಮುಗಿದು ಹೋದ ಪ್ರಕರಣವನ್ನು ಮತ್ತೆ ಮತ್ತೆ ಕೆದುಕುತ್ತಿದ್ದಾರೆ’ ಎಂದಿದ್ದಾರೆ.

ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ (Mumbai) ಪೊಲೀಸರು (Police) ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

]]>
1061854 0 0 0
<![CDATA[ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ - ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್]]> https://publictv.in/missionaries-spreading-christianity-not-illegal-unless-it-is-against-public-order-health-or-morality-tamil-nadu-to-supreme-court/ Mon, 01 May 2023 09:31:39 +0000 https://publictv.in/?p=1061865 ಚೆನ್ನೈ: ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವ ಮಿಷನರಿಗಳು (Christian Mission) ಕಾನೂನುಬಾಹಿರ ಅಥವಾ ಅಸಾಂವಿಧಾನಿಕವಲ್ಲ ಎಂದು ತಮಿಳುನಾಡು ಸರ್ಕಾರ (Government of Tamil Nadu) ಸುಪ್ರೀಂ ಕೋರ್ಟ್‍ಗೆ (Supreme Court) ಅಫಿಡವಿಟ್ ಸಲ್ಲಿಸಿದೆ.

ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧಾರ್ಮಿಕ ನಂಬಿಕೆಯನ್ನು ಪ್ರಚಾರ ಮಾಡುವ ಮತ್ತು ಇತರರಿಗೆ ಬೋಧಿಸುವ ಹಕ್ಕನ್ನು ನೀಡುತ್ತದೆ. ಮಿಷನರಿಗಳು ಸಾರ್ವಜನಿಕ ಸುವ್ಯವಸ್ಥೆ ಅಥವಾ ನೈತಿಕತೆಯ ವಿರುದ್ಧವಾಗಿಲ್ಲ. ಆದರೆ ಬೆದರಿಕೆ, ವಂಚನೆ, ಉಡುಗೊರೆಗಳ ಮೂಲಕ, ಮಾಟಮಂತ್ರ ಅಥವಾ ಮೂಢನಂಬಿಕೆಯ ಮೂಲಕ ಆಮಿಷ ಒಡ್ಡುವ ಧಾರ್ಮಿಕ ಮತಾಂತರವು ಅನ್ಯಾಯ ಮತ್ತು ಶೋಷಣೆ ಎನಿಸಿಕೊಳ್ಳುತ್ತದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

ಧರ್ಮವನ್ನು ಪ್ರಸರಿಸುವ ಕಾರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಭಾರತ ಜಾತ್ಯತೀತ ರಾಷ್ಟ್ರವಾಗಿ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇದರಿಂದ ವ್ಯಕ್ತಿ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿರುವುದರಿಂದ ಆತನ ನಿರ್ಧಾರವನ್ನು ತಡೆಯಲಾಗುವುದಿಲ್ಲ ಎಂದಿದೆ.

ದೇಶದಲ್ಲಿ ಹಲವಾರು ಧರ್ಮಗಳು ಆಚರಣೆಯಲ್ಲಿವೆ. ಅಲ್ಲದೆ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಆಯ್ದುಕೊಳಬಹುದು. ತನ್ನ ಧರ್ಮವನ್ನು ಶಾಂತಿಯುತವಾಗಿ ಆಚರಿಸಲು ಮತ್ತು ಪ್ರಚಾರ ಮಾಡಲು ಅವಕಾಶವಿದೆ ಇದನ್ನು ಹತ್ತಿಕ್ಕಲಾಗುವುದಿಲ್ಲ. ಮತಾಂತರ ವಿರೋಧಿ ಕಾನೂನುಗಳು ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಧಾರ್ಮಿಕ ಮತಾಂತರದ ವಿರುದ್ಧ ಬಿಜೆಪಿ (BJP) ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಪ್ರತಿಕ್ರಿಯೆಯಾಗಿ ತಮಿಳುನಾಡು ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಅರ್ಜಿದಾರರು ಬಿಜೆಪಿಯ ಸದಸ್ಯರಾಗಿದ್ದಾರೆ. ಕೆಲವು ಧರ್ಮಗಳನ್ನು ನಿಂದಿಸಲು ಮತ್ತು ಅವರ ನೀತಿಗಳಿಗೆ ಅನುಗುಣವಾಗಿ ಆದೇಶಗಳನ್ನು ಪಡೆಯಲು ನ್ಯಾಯಾಲಯವನ್ನು ಬಳಸುತ್ತಿದ್ದಾರೆ. ಸೆಕ್ಷನ್ 153 ಎ ಅಡಿಯಲ್ಲಿ (ಧರ್ಮ, ಜನಾಂಗಗಳ ನಡುವೆ ದ್ವೇಷ ಬಿತ್ತುವ ಪ್ರಕರಣದಲ್ಲಿ) ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯು ಅವರ ವಿರುದ್ಧ ಬಾಕಿಯಿದೆ. ಅರ್ಜಿದಾರರು ಶುದ್ಧ ಹಸ್ತಗಳೊಂದಿಗೆ ಈ ನ್ಯಾಯಾಲಯದ ಮುಂದೆ ಬಂದಿಲ್ಲ. ದೇಶದಲ್ಲಿ ದ್ವೇಷದ ಮೂಲಕ ಸಮಾಜವನ್ನು ವಿಭಜಿಸುವ ಉದ್ದೇಶದಿಂದ ನಿರ್ದಿಷ್ಟ ಸಮುದಾಯದ ಮೇಲೆ ದಾಳಿ ಮಾಡುವುದು, ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ಉತ್ತೇಜಿಸುವುದು ಅರ್ಜಿದಾರರ ಉದ್ದೇಶವಾಗಿದೆ ಎಂದು ಸರ್ಕಾರ ಅಫಿಡವಿಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

]]>
1061865 0 0 0
<![CDATA[ಸಿಂಧನೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮಳೆ ಆತಂಕ]]> https://publictv.in/rain-fear-for-prime-minister-narendra-modis-program-in-sindhanur/ Mon, 01 May 2023 09:39:29 +0000 https://publictv.in/?p=1061852 ರಾಯಚೂರು: ಪ್ರಧಾನಿ ಮೋದಿ (Narendra Modi) 2ನೇ ಹಂತದಲ್ಲಿ ಕಲ್ಯಾಣ ಕರ್ನಾಟಕದಲ್ಲಿ (Karnataka) ಭರ್ಜರಿ ಮತಬೇಟೆಗೆ ಮುಂದಾಗಿದ್ದಾರೆ. ಆದರೆ ಮೇ 2 ರಂದು ನಿಗದಿಯಾಗಿದ್ದ ರಾಯಚೂರಿನ (Raichur) ಸಿಂಧನೂರು (Sindhanur) ಕಾರ್ಯಕ್ರಮಕ್ಕೆ ಮಳೆ ಆತಂಕ ಎದುರಾಗಿದೆ. ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ನಲ್ಲಿ ಸಿದ್ಧಗೊಳ್ಳುತ್ತಿದ್ದ ವೇದಿಕೆ ಮಳೆ, ಬಿರುಗಾಳಿಗೆ ಕುಸಿದು ಬಿದ್ದಿದೆ.

ಸಿಂಧನೂರು ಬಿಜೆಪಿ (BJP) ಅಭ್ಯರ್ಥಿ ಕೆ ಕರಿಯಪ್ಪ ಪರ ಮತಬೇಟೆ ನಡೆಸುವ ಜೊತೆ ರಾಯಚೂರು ಕೊಪ್ಪಳ ಜಿಲ್ಲೆಯ 8 ರಿಂದ 10 ಕ್ಷೇತ್ರಗಳ ಟಾರ್ಗೆಟ್‌ನೊಂದಿಗೆ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಮಳೆ ಆತಂಕದ ಹಿನ್ನೆಲೆ ವೇದಿಕೆ ಕಾರ್ಯಕ್ರಮ ರದ್ದಾದರೆ ರೋಡ್ ಶೋ (Road Show) ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಮೇ 2 ರಂದು ಮಧ್ಯಾಹ್ನ 2:30 ಕ್ಕೆ ಮೋದಿ ಕಾರ್ಯಕ್ರಮ ನಿಗದಿಯಾಗಿದೆ. ಆದರೆ ಈಗ ಮಳೆಯಿಂದಾಗಿ ಸಮಾವೇಶದ ಸ್ಥಳದಲ್ಲಿ ನೀರು ನಿಂತು ಅಸ್ತವ್ಯಸ್ತವಾಗಿದೆ. ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮಕ್ಕೆ ಪರ್ಯಾಯ ಸ್ಥಳದ ಬಗ್ಗೆ ಚರ್ಚೆ ನಡೆದಿದೆ. ಸಿಂಧನೂರು ಹೊರವಲಯದ ಹೊಸಳ್ಳಿ ಕ್ಯಾಂಪ್ ಬಳಿ 36 ಎಕರೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿದ್ದವು. 5 ಎಕರೆ ಪ್ರದೇಶದಲ್ಲಿ ಮುಖ್ಯ ವೇದಿಕೆ, ಆಸನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 4 ಲಕ್ಷ ಜನ ಸೇರುವ ನಿರೀಕ್ಷೆಯೊಂದಿಗೆ ಕಾರ್ಯಕ್ರಮ ತಯಾರಿ ನಡೆದಿತ್ತು. ಆದರೆ ಮಳೆ ಎಲ್ಲದಕ್ಕೂ ಅಡ್ಡಿಪಡಿಸಿದೆ. ಇದನ್ನೂ ಓದಿ: ಮೋದಿಯದ್ದು ಬರೀ ಬುರುಡೇ ಭಾಷಣ, ಸರ್ಪ ಯಾವಾಗಲೂ ಡೇಂಜರ್: ಹೆಚ್‌ಡಿಕೆ ವಾಗ್ದಾಳಿ

ಸಮಾವೇಶದ ಸ್ಥಳ ಮಳೆ, ಬಿರುಗಾಳಿಯಿಂದ ಕೆಸರುಗದ್ದೆಯಂತಾಗಿದ್ದು ಮೊರಂ ತುಂಬುವ ಕೆಲಸ ನಡೆದಿದೆ. ಸಾಧ್ಯವಾದಷ್ಟು ಸೋಮವಾರ ಸಂಜೆಯೊಳಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ರದ್ದಾಗದಂತೆ ವ್ಯವಸ್ಥೆ ಮಾಡಲು ಆಯೋಜಕರು ಮುಂದಾಗಿದ್ದಾರೆ.

ಸದ್ಯ ಕಾರ್ಯಕ್ರಮದಲ್ಲಿ ಹೊಸ ಬದಲಾವಣೆಗಳು ಇಲ್ಲದ ಹಿನ್ನೆಲೆ ವೇದಿಕೆ ಸಿದ್ಧತೆ ಕಾರ್ಯ ಮುಂದುವರಿದಿದೆ. ಇಂದು ಸಹ ಮಳೆ ಸುರಿದರೆ ವೇದಿಕೆ ಕಾರ್ಯಕ್ರಮ ನಡೆಯುವುದು ಅನುಮಾನ ಎನ್ನಲಾಗಿದೆ. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ

]]>
1061852 0 0 0
<![CDATA[ಮೊಬೈಲ್‌ ಕೊಡದ್ದಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆಗೈದ ಪಾನಮತ್ತ ಮಹಿಳೆ]]> https://publictv.in/young-man-murdered-by-a-drunken-woman-in-belagavi/ Mon, 01 May 2023 09:47:21 +0000 https://publictv.in/?p=1061853 ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಮದ್ಯವ್ಯಸನಿ ಮಹಿಳೆ (Alcohol Woman) ಯೊಬ್ಬಳು ಯುವಕನನ್ನು ಹತ್ಯೆಗೈದ ಘಟನೆ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ನಡೆದಿದೆ.

ನಾಗರಾಜ್ ರಾಗಿಪಾಟೀಲ್ (25) ಹತ್ಯೆಯಾದ ಯುವಕ. ಬೆಳಗಾವಿ (Belagavi) ತಾಲೂಕಿನ ತಾರಿಹಾಳ ನಿವಾಸಿಯಾಗಿರುವ ಈತನನ್ನು, ಕಂಗ್ರಾಳಿ ಕೆ.ಹೆಚ್. ಗ್ರಾಮದ ನಿವಾಸಿ ಜಯಶ್ರೀ ಪವಾರ್(40) ಭಾನುವಾರ ರಾತ್ರಿ ಹತ್ಯೆಗೈದಿದ್ದಾಳೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

ಮಹಾರಾಷ್ಟ್ರ(Maharastra) ದ ಕರಾಡ್‍ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ನಾಗರಾಜ್, ಸ್ವಗ್ರಾಮ ತಾರಿಹಾಳದಲ್ಲಿ ರಾಮೇಶ್ವರ ದೇವರ ಜಾತ್ರೆಗೆ ಆಗಮಿಸಿದ್ದನು. ಭಾನುವಾರ ಸ್ನೇಹಿತನ ಜೊತೆ ಬಟ್ಟೆ ತರಲು ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಚವ್ಹಾಟ ಗಲ್ಲಿ ಕಾರ್ನರ್‍ನಲ್ಲಿ ಸ್ನೇಹಿತನ ಜೊತೆ ನಿಂತಿದ್ದನು.

ಹೀಗೆ ನಿಂತಿದ್ದವನ ಬಳಿ ಬಂದ ಮದ್ಯವ್ಯಸನಿ ಜಯಶ್ರಿ, ಮೊಬೈಲ್ (Mobile) ನೀಡುವಂತೆ ಕಿರಿಕ್ ಮಾಡಿದ್ದಾಳೆ. ಯಾಕೆ ಮೊಬೈಲ್ ಎಂದು ಪ್ರಶ್ನಿಸುತ್ತಿದ್ದಂತೆಯೇ ಜಯಶ್ರೀ ಪವಾರ್ ಚಾಕುವಿನಿಂದ ನಾಗರಾಜ್ ಎದೆಗೆ ಚುಚ್ಚಿದ್ದಾಳೆ. ಕೂಡಲೇ ಗಾಯಾಳು ನಾಗರಾಜ್‍ನನ್ನ ಸ್ನೇಹಿತ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದನು.

ಆದರೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಗರಾಜ್ ಸಾವನ್ನಪ್ಪಿದ್ದಾನೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

]]>
1061853 0 0 0
<![CDATA[ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ]]> https://publictv.in/actress-lakshmi-rai-hot-photoshoot/ Mon, 01 May 2023 09:39:48 +0000 https://publictv.in/?p=1061864 ಬಹುಭಾಷಾ ನಟಿ ಲಕ್ಷ್ಮಿ ರೈ (Lakshmi Rai) ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಈ ನಡುವೆ ಪ್ರವಾಸ ಹೋಗಿದ್ದ ನಟಿಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಹಾಟ್ ಫೋಟೋಶೂಟ್‌ನಿಂದ ಇದೀಗ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ:ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ
 
View this post on Instagram
 

A post shared by Raai Laxmi (@iamraailaxmi)

ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ (Kanchana) ಸೇರಿದಂತೆ ಹಲವರು ಚಿತ್ರದಲ್ಲಿ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಅವಕಾಶಗಳು ಸಿಗದೇ ಇದ್ದಾಗ ಐಟಂ ಡ್ಯಾನ್ಸ್‌ಗೆ ಬೆಳಗಾವಿ ಸುಂದರಿ ಸೊಂಟ ಬಳುಕಿಸಿದ್ದರು. ಇದೀಗ ಪ್ರವಾಸದಲ್ಲಿ ಲಕ್ಷ್ಮಿ ರೈ ಸಮಯ ಕಳೆಯುತ್ತಿದ್ದಾರೆ. ಪಡ್ಡೆ ಹೈಕ್ಳಿಗೆ ಬೋಲ್ಡ್ ಫೋಟೋಗಳಿಂದ ನಟಿ ಹಾಟ್ ಟ್ರೀಟ್ ನೀಡಿದ್ದಾರೆ. ನೀಲಿ ಬಣ್ಣದ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
 
View this post on Instagram
 

A post shared by Raai Laxmi (@iamraailaxmi)

ಈ ವರ್ಷ ಆನಂದ ಭೈರವಿ, ಗ್ಯಾಂಗ್‌ಸ್ಟಾರ್ 21 ಸೇರಿದಂತೆ ಹಲವು ಸಿನಿಮಾಗಳು ನಟಿ ಲಕ್ಷ್ಮಿ ರೈ ಕೈಯಲ್ಲಿದೆ. ಹೊಸ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿಮಾರಂಗದಲ್ಲಿ ಅವರು ಆಕ್ಟೀವ್ ಆಗಿದ್ದಾರೆ.  ]]>
1061864 0 0 0
<![CDATA[ಬಿಎಸ್‍ವೈರನ್ನ ಬಿಜೆಪಿ ನಾಯಕರು ಹೆದರಿಸಿ ಪ್ರಚಾರ ಮಾಡಿಸುತ್ತಿದ್ದಾರೆ: ಎಂ.ಬಿ ಪಾಟೀಲ್]]> https://publictv.in/mb-patil-allegations-campaign-by-bjp-leaders-to-scare-bs-yediyurappa/ Mon, 01 May 2023 10:00:23 +0000 https://publictv.in/?p=1061920 ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ (BS Yediyurappa) ಬಿಜೆಪಿ ನಾಯಕರು ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಹೊಸ ಬಾಂಬ್ ಸಿಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ (BJP) ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತ ನಾಯಕರನ್ನು ಮುಗಿಸಲು ಲಿಂಗಾಯತರನ್ನೇ ಬಳಸುತ್ತಿದ್ದಾರೆ. ಲಿಂಗಾಯತರ ನಡುವೆ ಒಡಕು ಮೂಡಿಸಿದ್ದಾರೆ. ಯಡಿಯೂರಪ್ಪ ತನ್ನ ಮಗನ ಭವಿಷ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿದರು. ಆಗಲೂ ಬಲಿಯಾದರು, ಈಗ ಬಿಜೆಪಿ ಸರ್ಕಾರ ತಂದು ಬಲಿ ಆಗಿದ್ದಾರೆ. ಬಿಜೆಪಿ ಸವದಿಗೆ ಟಿಕೆಟ್ ಭರವಸೆ ಕೊಟ್ಟಿತ್ತು. ಆದರೂ ಅವರಿಗೆ ಟಿಕೆಟ್‍ನ್ನೇ ಕೊಡಲಿಲ್ಲ, ಟಿಕೆಟ್ ತಪ್ಪಿಸಿದರು. ಲಿಂಗಾಯತ ಸಮುದಾಯವನ್ನು ಉಪಯೋಗಿಸಿ ಕೈಬಿಟ್ಟಿದ್ದಾರೆ. ಬಿಜೆಪಿ ಹಿಡನ್ ಅಜೆಂಡಾ ವರ್ಕೌಟ್ ಆಗಿದೆ. ಹಾಗಾಗಿ ಈ ಬಾರಿ ಲಿಂಗಾಯತರು ಕಾಂಗ್ರೆಸ್ ಪರ ಬರುತ್ತಾರೆ. ಮರಳಿ ಮನೆಗೆ ಅಂತ ವಾಪಸ್ಸು ಬರುತ್ತಾರೆ. ಬಿಜೆಪಿ ಸರ್ಕಾರ ಬರಲ್ಲ ಅಂತ ಗೊತ್ತಾಗಿದೆ. ಆದ್ದರಿಂದ ಮೋದಿ, ಅಮಿತ್ ಶಾ ರಾಜ್ಯದಲ್ಲಿ ಮನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದರು. ಯಡಿಯೂರಪ್ಪನವರಿಗೆ ಅನಾರೋಗ್ಯವೇನಾದ್ರೂ ಇತ್ತಾ? ಇವತ್ತಿಗೂ ದಷ್ಟಪುಷ್ಟವಾಗಿಯೇ ಇದ್ದಾರೆ. ಆದರೆ ಯಡಿಯೂರಪ್ಪ ತೆಗೆದ ಅಜೆಂಡಾ ಅವರದ್ದು ಬೇರೆ ಇತ್ತು. ಕುಮಾರಸ್ವಾಮಿಯವರ ಯಾಕೆ ಅಂತ ಹೇಳಿದ್ದಾರೆ. ಸುದೀರ್ಘವಾಗಿ ಮಾತನಾಡಿದ್ದಾರೆ. ನಾವೆಲ್ಲಾ ತಿರುಗಿ ಬೀಳ್ತಾರೆ ಅನ್ನೋ ಕಾರಣವಾಗಿದೆ. ಹಾಗಾಗಿ ಬೊಮ್ಮಾಯಿಯವರಿಗೆ ಸಿಎಂ ಮಾಡಿದರು. ಇಲ್ಲವಾದರೆ ಅವರ ಉದ್ದೇಶವೇ ಬೇರೆ ಇತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿಯದ್ದು ಬರೀ ಬುರುಡೇ ಭಾಷಣ, ಸರ್ಪ ಯಾವಾಗಲೂ ಡೇಂಜರ್: ಹೆಚ್‌ಡಿಕೆ ವಾಗ್ದಾಳಿ

ಜಗದೀಶ್ ಶೆಟ್ಟರ್‍ಗೆ ಇನ್ನೂ 66 ವರ್ಷ. ಆದರೆ 75 ಆದ ತಿಪ್ಪಾರೆಡ್ಡಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಟ್ಟಿದ್ದಾರೆ. ಸುರೇಶ್ ಕುಮಾರ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ ಯಾಕೆ ಶೆಟ್ಟರ್, ಸವದಿಗೆ ಟಿಕೆಟ್ ತಪ್ಪಿಸಿದ್ದು? ಶೆಟ್ಟರ್ ಸಿಎಂ ಆಗಿದ್ದಂತವರು. ಬೊಮ್ಮಾಯಿ ಸರ್ಕಾರದಲ್ಲಿ ಶೆಟ್ಟರ್ ಸಚಿವರಾಗಲಿಲ್ಲ. ಸಚಿವ ಸ್ಥಾನವನ್ನು ಅವರು ತ್ಯಾಗ ಮಾಡಿದರು. ಲಿಂಗಾಯತ ಸಮುದಾಯಕ್ಕೆ ಎಲ್ಲವೂ ಅರ್ಥವಾಗಿದೆ. ಬಿಜೆಪಿ ಹಿಡನ್ ಅಜೆಂಡಾ ಗೊತ್ತಾಗಿದೆ. ಲಿಂಗಾಯತರ ವಿಚಾರದಲ್ಲಿ ಗಾಬರಿಗೊಂಡಿದ್ದಾರೆ. 40% ಭ್ರಷ್ಟಾಚಾರದಲ್ಲೂ ಆತಂಕಗೊಂಡಿದ್ದಾರೆ. ಅದಕ್ಕೆ ಮೋದಿ, ಅಮಿತ್ ಶಾ ಶಾಶ್ವತವಾಗಿ ಮಾಡಿದ್ದಾರೆ. ಅವರನ್ನೇ ಸಿಎಂ ಮಾಡೋ ಮಟ್ಟಕ್ಕೆ ಇಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ – ವೀಡಿಯೋ ವೈರಲ್

]]>
1061920 0 0 0
<![CDATA[ರಾಹುಲ್ ಗಾಂಧಿ ಯಂಗ್‌ಸ್ಟರ್ - ಹೆಚ್.ಡಿ.ದೇವೇಗೌಡ]]> https://publictv.in/rahul-gandhi-is-a-youngster-says-h-d-devegowda/ Mon, 01 May 2023 10:17:04 +0000 https://publictv.in/?p=1061921 ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ಯಂಗ್‌ಸ್ಟರ್. ಅವರು ಬೇಕಾದರೆ ಏನಾದರೂ ಮಾತನಾಡಲಿ ಎಂದು ಜೆಡಿಎಸ್ (JDS) ವರಿಷ್ಠ ಹೆಚ್.ಡಿ.ದೇವೇಗೌಡ (H.D.Deve gowda) ಹೇಳಿದರು.

ಜೆಡಿಎಸ್ ಕಾಂಗ್ರೆಸ್‌ನ (Conrgess) 'ಬಿ' ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ರಾಹುಲ್ ಗಾಂಧಿ ಜೆಡಿಎಸ್‌ ಬಿಜೆಪಿಯ 'ಬಿ' ಟೀಂ ಎಂದು ಹೇಳಿದ್ದರು. ಈ ಬಾರಿ ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಎತ್ತರಕ್ಕೆ ಬೆಳೆದ ನಾಯಕ. ಅವರು ಹಾಗೆ ಮಾತಾಡೋದು ಸರಿನಾ? ಅವರಿಗೆ ಬಿಡ್ತೀನಿ. ರಾಹುಲ್ ಗಾಂಧಿ ಯಂಗ್‌ಸ್ಟರ್, ಅವರು ಬೇಕಾದ್ರೆ ಏನಾದ್ರು ಮಾತಾಡಲಿ. ಮೋದಿ ಅವರು ಹಾಗೆ ಹೇಳಿದ್ದನ್ನು ಅವರಿಗೆ ಬಿಡ್ತೀನಿ. ನಾನೇನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಮಣ್ಣಗೆ ಲೋ ಬಿಪಿ

ಮಾಡಿದ್ದಾರೆ ಇಡೀ ರಾಷ್ಟ್ರಕ್ಕೆ ಗೊತ್ತು. ನಾನು ಏನೇನು ಮಾಡಿದ್ದೇನೆ ಅಂತ ಪುಸ್ತಕ ಬಂದಿದೆ. ಹಲವಾರು ವಿಷಯ ಅದರಲ್ಲಿ ಇದೆ. ಮುಸ್ಲಿಂ ಮೀಸಲಾತಿ, ಮಹಿಳೆಯರ ಮೀಸಲಾತಿ, ವಾಲ್ಮೀಕಿ ಮೀಸಲಾತಿ, ಈದ್ಗಾ ವಿಚಾರ ಏನೇನು ಮಾಡಿದ್ದೇನೆ ನೋಡಲಿ. ದೊಡ್ಡವರ ಹೇಳಿದ್ದಾರೆ ಹೇಳಲಿ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ಗೆ ಹಾಕೋ ಒಂದೊಂದು ವೋಟು ಕಾಂಗ್ರೆಸ್‌ಗೆ ಹಾಕಿದಂತೆ ಅನ್ನೋ ಮೋದಿ ಹೇಳಿಕೆ ಕುರಿತು ಮಾತನಾಡಿ, ಮೋದಿ ಅವರು ಹಾಗೆ ಹೇಳಲು ಅಧಿಕಾರ ಇದೆ. ಸ್ವಾತಂತ್ರ‍್ಯ ಇದೆ ಹೇಳಲಿ. ಮಾತಾಡೋಕೆ ಸ್ವಾತಂತ್ರ‍್ಯ ಇದೆ, ಮಾತಾಡಲಿ ಸಂತೋಷ. ರಾಜ್ಯಕ್ಕೆ ಪದೇ ಪದೇ ಮೋದಿ ಬರುವುದರಿಂದ ನಮಗೇನು ತೊಂದರೆ ಇಲ್ಲ. ಆನಂದವಾಗಿ ಅವರು ರಾಜ್ಯಕ್ಕೆ ಬರಲಿ. ಚುನಾವಣೆ ಮುಗಿಯೋವರೆಗೂ ಬರಲಿ. ಚುನಾವಣೆ ಮುಗಿದ ಮೇಲೂ ಲೋಕಸಭೆ ಚುನಾವಣೆಗೂ ಬರಲಿ. ನಮಗೇನು ತೊಂದರೆ ಇಲ್ಲ. ಮೋದಿ ನನಗಿಂತ ಯಂಗ್ ಇದ್ದಾರೆ. ನನಗೂ ಅವರಿಗೂ 15 ವರ್ಷ ವ್ಯತ್ಯಾಸ ಇದೆ. ಕರ್ನಾಟಕದ ಮಹಾ ಜನತೆಯ ಸಮಸ್ಯೆ ಬಗೆಹರಿಸೋಕೆ ಅವರು ಬಂದರೆ ನನಗೆ ಸಂತೋಷ ಎಂದು ಕುಟುಕಿದರು. ಇದನ್ನೂ ಓದಿ: ಸಾ.ರಾ. ಬಾಸ್‌ಗೆ ದೇಶ ಕಾಯುವ ಸೈನಿಕನಿಂದ ಮೊದಲ ಮತ – ವೋಟ್‌ ಹಾಕಿ ಬ್ಯಾಲೆಟ್‌ ಪೇಪರ್‌ ಪ್ರದರ್ಶಿಸಿದ ಯೋಧನ ಫೋಟೋ ವೈರಲ್‌

ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ದೇವೇಗೌಡರು ನಿರಾಕರಿಸಿದರು.

]]>
1061921 0 0 0
<![CDATA[ಚುನಾವಣಾ ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ]]> https://publictv.in/rahul-gandhi-stop-speech-when-he-listening-namaz/ Mon, 01 May 2023 10:09:34 +0000 https://publictv.in/?p=1061922 ತುಮಕೂರು: ಜಿಲ್ಲೆಯ ತುರುವೆರೆಗೆ ಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಬೆಮೆಲ್ ಕಾಂತರಾಜು ಪರ ರಾಹುಲ್ ಗಾಂಧಿ (Rahul Gandhi) ಅಬ್ಬರದ ಪ್ರಚಾರ ನಡೆಸಿದರು. ಬಳಿಕ ಇಲ್ಲಿನ ಗುರುಭವನ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದರು.

ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ನಮಾಜ್ (Namazz) ಮಾಡುತ್ತಿದ್ದರು. ಈ ವೇಳೆ ನಮಾಜ್‌ ಕೂಗು ಕೇಳಿಬರುತ್ತಿದ್ದಂತೆ ತಮ್ಮ ಭಾಷಣಕ್ಕೆ ಬ್ರೇಕ್ ಹಾಕಿದ್ದ ರಾಹುಲ್ ನಮಾಜ್ ಮುಗಿದ ಬಳಿಕ ಭಾಷಣ ಆರಂಭಿಸಿದರು. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ

ಕಳೆದ ಬಾರಿ ನೀವು ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ಆದ್ರೆ ಅವರು ಶಾಸಕರನ್ನ ಖರೀದಿ ಮಾಡಿ ಅಧಿಕಾರಕ್ಕೆ ಬಂದರು, ಈ ಮೂಲಕ ಲೋಕ ತಂತ್ರವನ್ನೇ ಹಾಳು ಮಾಡಿದರು. ಕಳೆದ 3 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಸಣ್ಣ ಸಣ್ಣ ಕೆಲಸಕ್ಕೂ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ಹಣ ನೀಡುವ ಬದಲು ನಿಮ್ಮ ಜೇಬಿಗೆ ಕತ್ತರಿ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿಗೂ ಗೊತ್ತು ಎಂದು ಕುಟುಕಿದರು. ಇದನ್ನೂ ಓದಿ: ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ

ಬಿಜೆಪಿ ಶಾಸಕರೊಬ್ಬರೇ `ಈಗಿನ ಸಿಎಂ 2 ಸಾವಿರ ಕೋಟಿ ಕೊಟ್ಟು ಸಿಎಂ ಆಗಿದ್ದಾರೆ' ಅಂತಾ ಸಾರ್ವಜನಿಕವಾಗಿ ಹೇಳಿದ್ದಾರೆ. ಕರ್ನಾಟಕದ ಜನರ ಮತ ಕೇಳಲು ಬರುವ ನೀವು, ಭ್ರಷ್ಟಚಾರ ತಡೆಯಲು ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಇಲ್ಲಿನ ಜನಕ್ಕೆ ಹೇಳಿ, ಕರ್ನಾಟಕದ ಜನತೆ ಕಟ್ಟಿದ ಟ್ಯಾಕ್ಸ್ ಹಣವನ್ನು ವಾಪಸ್ ಕೊಡಲಿಲ್ಲ ಅನ್ನೋದನ್ನು ಹೇಳಿ.. ಗೋವಾ - ಕರ್ನಾಟಕ ನಡುವಿನ ನೀರಿನ ಸಂಘರ್ಷಕ್ಕೆ ಏನು ಮಾಡಿದ್ರಿ ಅಂತಾ ಹೇಳಿ.. ರಾಜ್ಯದಲ್ಲಿ ಕಳೆದ 3 ವರ್ಷ ನಿಮ್ಮ ಸರ್ಕಾರ ಏನು ಮಾಡಿದೆ ಅಂತ ಹೇಳಿ... ಏಕೆಂದರೆ ಚುನಾವಣೆ ನಡೆಯುತ್ತಿರುವುದು ನಿಮಗೋಸ್ಕರ ಅಲ್ಲ, ಕರ್ನಾಟಕದ ಭವಿಷ್ಯಕ್ಕಾಗಿ ಎಂದು ಹೇಳಿದ್ದಾರೆ.

]]>
1061922 0 0 0
<![CDATA[Hombale Films: ತಲೈವಾಗೆ 'ವಿಕ್ರಮ್‌' ನಿರ್ದೇಶಕ ಆ್ಯಕ್ಷನ್ ಕಟ್?]]> https://publictv.in/hombale-films-next-movie-with-rajinikanth-and-star-director-lokesh-kanagaraj/ Mon, 01 May 2023 10:24:29 +0000 https://publictv.in/?p=1061925 ಕೆಜಿಎಫ್, ಕೆಜಿಎಫ್ 2 (KGF2), ಕಾಂತಾರ (Kantara) ಅಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಹೊಂಬಾಳೆ ಫಿಲ್ಮ್ಸ್ ಟೀಮ್ ಯಶ್, ಪ್ರಭಾಸ್, ರಿಷಬ್, ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ಗೆ (Rajanikanth) ನಿರ್ದೇಶಕನ ಮಾಡಲು ಪ್ರತಿಭಾನ್ವಿತ ನಿರ್ದೇಶಕ ಲೋಕೇಶ್ ಕನಕರಾಜ್‌ಗೆ (Lokesh Kanagaraj) ಗಾಳ ಹಾಕಿದ್ದಾರೆ.

ಸೂಪರ್ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿ ಅದ್ಭುತ ಸಿನಿಮಾಗಳನ್ನ ಕೊಟ್ಟಿರೋ ಹೊಂಬಾಳೆ ಟೀಮ್ ಇದೀಗ ತಲೈವಾ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ರಜಿನಿಕಾಂತ್ ಜೊತೆ ಸಿನಿಮಾ ಮಾಡುವ ವಿಚಾರ ಕೆಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಈ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ

'ವಿಕ್ರಮ್' (Vikram) ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಚಿತ್ರ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡಿದೆ. ರಜನಿಕಾಂತ್‌ಗಾಗಿಯೇ ಲೋಕೇಶ್ ಈಗಾಗಲೇ ಕಥೆ ಮಾಡಿದ್ದಾರೆ. ತಲೈವಾ 171ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಅವರು ಲೋಕೇಶ್ ಕಥೆ ಕೇಳಿ ಓಕೆ ಎಂದಿದ್ದಾರೆ ಅಂತೆ.

ಲೋಕೇಶ್ ಕನಕರಾಜ್- ರಜನಿಕಾಂತ್ ಜೊತೆ ಸಿನಿಮಾ ಮೂಡಿ ಬರಲಿರುವ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಅಥವಾ ಜಸ್ಟ್ ಗಾಸಿಪ್ ಸುದ್ದಿನಾ ಎಂಬುದನ್ನ ಮುಂದಿನ ದಿನಗಳಲ್ಲಿ ಹೊಂಬಾಳೆ ಟೀಮ್ (Hombale Films) ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.

]]>
1061925 0 0 0
<![CDATA[ವಿನಾಶದ ಅಂಚಿನಲ್ಲಿ ಕಾಂಗ್ರೆಸ್ - ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಅವರಿಗೆ ಸೋಲೇ: ಅರುಣ್ ಸಿಂಗ್]]> https://publictv.in/karnataka-election-2023-congress-will-loses-wherever-priyanka-and-rahul-gandhi-goes-says-arun-singh/ Mon, 01 May 2023 10:37:17 +0000 https://publictv.in/?p=1061943 - ಕಾಂಗ್ರೆಸ್ ಏನೇ ಗ್ಯಾರಂಟಿ ನೀಡಿದರೂ ಜನ ನಂಬಲ್ಲ

ಬಾಗಲಕೋಟೆ: ದೇಶದಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯವರು ಎಷ್ಟೇ ಚುನಾವಣಾ ಪ್ರಚಾರ ಮಾಡಿದರೂ ಪೂರ್ತಿಯಾಗಿ ಕಾಂಗ್ರೆಸ್ (Congress) ಪಕ್ಷ ವಿನಾಶ ಹೊಂದುತ್ತದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಏನೇ ಮಾಡಿದರೂ ಏನೇ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದರೂ ಜನರು ನಂಬುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು.

ಬಾಗಲಕೋಟೆ (Bagalkote) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ಚುನಾವಣೆಯ ನೇತೃತ್ವವನ್ನು ವಹಿಸಿದ್ದ ಪ್ರಿಯಾಂಕಾ ಗಾಂಧಿ ಜನರಿಗೆ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದ್ದರು. ಉತ್ತರಪ್ರದೇಶದ 403 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದರು. ಇದರಿಂದ ಕಾಂಗ್ರೆಸ್ ಸಾಧನೆ ಎನೆಂದು ತಿಳಿಯುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಮುಗಿದುಹೋದ ಅಧ್ಯಾಯವಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ ಪಕ್ಷ ಯಾವುದೇ ಘೋಷಣೆ ಮಾಡಿದರೂ ಅದು ಪೂರ್ಣಗೊಳಿಸುವುದಿಲ್ಲ. ನಾವು ಬಡವರ ಕಲ್ಯಾಣ, ಮಧ್ಯಮ ವರ್ಗಕ್ಕಾಗಿ ಅವರ ಉತ್ತೇಜನಕ್ಕಾಗಿ ಭರವಸೆ ನೀಡುತ್ತೇವೆ. ಈಗ ಅರ್ಧ ಲೀ. ನಂದಿನಿ ಹಾಲು, ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಆದರೆ ಕಾಂಗ್ರೆಸ್ ಘೋಷಣೆಗಳು ಬಜೆಟ್‌ಗೆ ವರ್ಕೌಟ್ ಆಗುವುದಿಲ್ಲ. ಈಗಾಗಲೇ ಕಾಂಗ್ರೆಸ್ ಉತ್ತರಾಖಂಡ, ಗೋವಾ, ಅಸ್ಸಾಂ ಉತ್ತರಪ್ರದೇಶದಲ್ಲಿ ಪ್ರತಿ ರಾಜ್ಯದಲ್ಲೂ ಆಗಿದೆ ಎಂದರು.

ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ಬಿಜೆಪಿ ಘೋಷಣೆ ಮಾಡುತ್ತದೆ. ಈ ಸಂಬಂಧ ಬಿಜೆಪಿ ಸರ್ಕಾರ ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ಜಾರಿಗೆ ಕಟಿಬದ್ಧವಾಗಿದೆ. ಈಗಾಗಲೇ ಉತ್ತರಾಖಂಡದಲ್ಲಿ ಸಮಿತಿ ರಚನೆ ಮಾಡಿದೆ. ಈಗಾಗಲೇ ಕೋಡ್ ರಚನೆ ಪ್ರಕ್ರಿಯೆ ನಡೆದಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ ಅಲ್ಲಿ ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಜಿಲ್ಲೆಯ 7 ಅಭ್ಯರ್ಥಿಗಳಾದ ಬಾಗಲಕೋಟೆಯ ವೀರಣ್ಣ ಚರಂತಿಮಠ, ಹುನಗುಂದದ ದೊಡ್ಡನಗೌಡ ಪಾಟೀಲ್, ಬೀಳಗಿಯ ಮುರುಗೇಶ್ ನಿರಾಣಿ, ಮುಧೋಳದ ಗೋವಿಂದ ಕಾರಜೋಳ, ಜಮಖಂಡಿ ಜಗದೀಶ್ ಗುಡಗುಂಟಿ, ಬಾದಾಮಿಯ ದೊಡ್ಡನಗೌಡ ಪಾಟೀಲ್, ತೇರದಾಳದ ಸಿದ್ದು ಸವದಿ, ಸಂಸದ ಪಿಸಿ ಗದ್ದಿಗೌಡರ, ವಿಪ ಮಾಜಿ ಸದಸ್ಯ ನಾರಾಯಣ ಸಾ ಬಾಂಢಗೆ ಮತ್ತಿತರರು ಇದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ

]]>
1061943 0 0 0
<![CDATA[ಅಭಿಮಾನಿ ಬಳಗವೇ ನಮ್ಮ ಆನೆ ಬಲ - ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ]]> https://publictv.in/kichcha-sudeepa-roadshow-in-belagavi-kittur-constituency/ Mon, 01 May 2023 10:29:12 +0000 https://publictv.in/?p=1061948 ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಪರ ನಟ ಕಿಚ್ಚ ಸುದೀಪ್‌ (Kichcha Sudeepa) ಅದ್ಧೂರಿ ಪ್ರಚಾರ ನಡೆಸಿದರು. ನಟ ಕಿಚ್ಚ ಸುದೀಪ್‌ ನೋಡಲು ಅಭಿಮಾನಿಗಳು ರಸ್ತೆಯುದ್ಧಕ್ಕೂ ಮುಗಿಬೀಳುತ್ತಿದ್ದರು.  ಕಿತ್ತೂರು ಕ್ಷೇತ್ರದ (Kittur Constituency) ನೇಸರಗಿ ಗ್ರಾಮದಲ್ಲಿ ರೋಡ್‌ಶೋ (Sudeepa RoadShow) ಬಳಿಕ ಮಾತನಾಡಿದ ಕಿಚ್ಚ ಸುದೀಪ್‌, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಪ್ರಚಾರಕ್ಕೆ ಬಂದಿರುವುದು ನನಗೂ ಖುಷಿಯಿದೆ. ಸಲವೂ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಿತ್ತೂರು ರಾಣಿ ಚೆನ್ನಮ್ಮನ ಊರಿಗೆ ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ಥ್ಯಾಂಕ್ ಯೂ. ಜನರು, ಅಭಿಮಾನಿ ಬಳಗವೇ ನಮ್ಮ ಆನೆ ಬಲ. ನೀವು ಪ್ರೀತಿ ತೋರಿದ ರೀತಿ ನಾನು ಯಾವತ್ತೂ ಮರೆಯಲ್ಲ. ಕಿತ್ತೂರು ಅಭಿವೃದ್ದಿಯಲ್ಲಿ 5ನೇ ಸ್ಥಾನದಲ್ಲಿದೆ ಅಂದ್ರೆ ಅದು ಸುಮ್ನೆ ಅಲ್ಲ. ಅಭಿವೃದ್ಧಿ ಮಾಡಲು ಸಾಕಷ್ಟು ಅಡೆತಡೆಗಳು ಇರುತ್ತವೆ, ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಹಾಂತೇಶ ದೊಡ್ಡಗೌಡರ ಅವರ ಪ್ರಚಾರಕ್ಕೆ ಬಂದಿದ್ದು ನನಗೂ ಖುಷಿಯಿದೆ. ಈ ಸಲವೂ ಅವರಿಗೇ ಬೆಂಬಲಿಸಿ ಎಂದು ಕೋರಿದರು.

ಇದೇ ವೇಳೆ ʻಗೆದ್ದೆ ಗೆಲ್ಲುವೇ ಒಂದು ದಿನ ಗೆಲ್ಲಲೇಬೇಕು ಒಳ್ಳೆತನʼಎನ್ನುವ ʻಸ್ವಾತಿಮುತ್ತುʼ ಚಿತ್ರದ ಗೀತೆಯ ಸಾಲನ್ನು ಹೇಳುತ್ತಾ ನಿಮ್ಮೆಲ್ಲರಲ್ಲೂ ಒಂದು ಒಳ್ಳೆತನವಿದೆ. ಆ ಒಳ್ಳೆತನ ಸದಾ ಗೆಲ್ಲಲಿ ಎಂದು ನುಡಿದರು.

]]>
1061948 0 0 0
<![CDATA[ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು]]> https://publictv.in/assembly-elections-2023-sudeep-road-show-canceled-again/ Mon, 01 May 2023 10:33:40 +0000 https://publictv.in/?p=1061949 ಕಿಚ್ಚ ಸುದೀಪ್ (Sudeep) ಇಂದು ಬೆಳಗಾವಿ (Belgaum) ಜಿಲ್ಲೆಯ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ತೆರಳಿದ್ದಾರೆ. ಇಂದು ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಅವರು ರೋಡ್ ಶೋ (Road Show) ನಡೆಸಬೇಕಿತ್ತು. ಅದರಲ್ಲಿ ಒಂದು ರದ್ದಾಗಿದೆ (Canceled). ಬೆಳಗಾವಿ ಜಿಲ್ಲೆಯ, ಬೆಳಗಾವಿ ಗ್ರಾಮೀಣ ಕ್ಷೇತ್ರ ಪ್ರಚಾರದ ರೋಡ್ ಶೋ ತಾರೀಹಾಳದಲ್ಲಿ ನಡೆಯಬೇಕಿತ್ತು. ಅದು ರದ್ದಾಗಿದೆ.

ಬೆಳಗ್ಗೆ 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಕಿಚ್ಚ ರೋಡ್ ಶೋ ನಡೆಸಿದರು. ಅದು ಮುಗಿಯುತ್ತಿದ್ದಂತೆಯೇ ಅವರು ತಾರೀಹಾಳ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ, ಯುವಕನೊಬ್ಬನ ಹತ್ಯೆಯಾದ ಕಾರಣದಿಂದಾಗಿ ರೋಡ್ ಶೋ ರದ್ದಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನ ಮರ್ಡರ್ ಆಗಿರುವ ಕಾರಣದಿಂದಾಗಿ ರದ್ದು ಪಡಿಸಲಾಗಿದೆ. ಇದನ್ನೂ ಓದಿ:ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ

ಮಧ್ಯಾಹ್ನ 1 ಗಂಟೆಗೆ ತಾರೀಹಾಳದಲ್ಲಿ ರೋಡ್ ಶೋ ನಡೆಯಬೇಕಿತ್ತು. ರದ್ದಾಗಿದ್ದರಿಂದ ಆ ಸಮಯದಲ್ಲಿ ಊಟ ಮುಗಿಸಿಕೊಂಡು ಯಮಕನಮರಡಿ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ವಂಟಮೂರಿ ಗ್ರಾಮದಲ್ಲಿ ಕಿಚ್ಚ ರೋಡ್ ಶೋ ನಡೆಸಿದ್ದಾರೆ. ಅಲ್ಲಿಂದ ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ರೋಡ್ ಶೋ ಮಾಡಬೇಕಿದೆ.

ಎರಡು ದಿನಗಳ ಹಿಂದೆಯೂ ಎರಡು ಕ್ಷೇತ್ರಗಳ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲು ಆಗಿರಲಿಲ್ಲ. ನವಲಗುಂದ ಮತ್ತು ಗದಗ ಕ್ಷೇತ್ರಗಳಿಗೆ ನಿಗದಿ ಆಗಿದ್ದ ಕಾರ್ಯಕ್ರಮದಲ್ಲಿ ವ್ಯತ್ಯಾಸವುಂಟಾಗಿದ್ದರಿಂದ  ಆ ಎರಡೂ ರೋಡ್ ಶೋಗಳು ಮೊನ್ನೆಯಷ್ಟೇ ರದ್ದಾಗಿದ್ದವು. ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮತ್ತೆ ಇಂದು ಸುದೀಪ್ ಪ್ರಚಾರಕ್ಕೆ ತೆರಳಿದ್ದರು.

]]>
1061949 0 0 0
<![CDATA[ಮೇ 13ಕ್ಕೆ ಸಿದ್ದರಾಮಯ್ಯ ಸೋಲಿನ ಜೊತೆಗೆ ಮುಸ್ಲಿಮ್‌ ಓಲೈಕೆ ಅಂತ್ಯ : ಪ್ರತಾಪ್‌ ಸಿಂಹ]]> https://publictv.in/karnataka-assembly-election-2023-pratap-simha-lashes-out-siddaramaiah/ Mon, 01 May 2023 10:42:55 +0000 https://publictv.in/?p=1061954 ಮಡಿಕೇರಿ: ಮುಸ್ಲಿಮರ ಓಲೈಕೆ ಮಾಡುವ ಕೆಲಸಕ್ಕೆ 2023 ಮೇ 13ರಂದು ಸಿದ್ದರಾಮಯ್ಯ (Siddaramaiah) ಅವರ ಜೊತೆಗೆ ಅಂತ್ಯ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು.

ಕೊಡಗಿನ ಸೋಮವಾರಪೇಟೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ಮತಯಾಚನೆಗೆ ಆಗಮಿಸಿದ ಬಳಿಕ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರು ಜಾತಿವಾದಿಯಾಗಿದ್ದಾರೆ. ವೀರಶೈವ ಅವರನ್ನು ಒಡೆಯುವ ಕೆಲಸ ಹಾಗೂ ಹಿಂದೂಗಳನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಮುಸ್ಲಿಂ ಅವರ ಓಲೈಕೆ ಮಾಡುವ ಕೆಲಸಕ್ಕೆ 2023 ಮೇ 13 ರಂದು ಸಿದ್ದರಾಮಯ್ಯ ಅವರ ಜೊತೆಗೆ ಕೊನೆಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹತಾಶೆ ಹಾಗೂ ಭಯದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ನಾವು ವರುಣ ಕ್ಷೇತ್ರದಲ್ಲಿ ಮತವನ್ನು ಕೇಳಲು ಹೋದ್ರೆ ಅಲ್ಲಿ ಕಾರ್ಯಕರ್ತರನ್ನು ಬಿಟ್ಟು ಛೀಮಾರಿ ಹಾಕಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

ಸಿದ್ದರಾಮಯ್ಯ ಹುಂಡಿಯಲ್ಲಿ ರಾಮ ಭಕ್ತರಿಗೆ ಬೆಲೆ ಇದೆ, ಹೊರತು ರಾಮ ವಿರೋಧಿಗಳಿಗೆ ಬೆಲೆ ಇಲ್ಲ. ರಾಮನ ಬಂಟನಾದ ಆಂಜನೇಯನ ಹುಟ್ಟಿದ್ದು ಯಾವಾಗ ಅನ್ನೊದು ಗೊತ್ತ ಎಂದು ಪ್ರಶ್ನೆ ಮಾಡಿದವರನ್ನು ವರುಣಾ ಕ್ಷೇತ್ರದ ಜನರು ಆಶೀರ್ವಾದ ಮಾಡುವುದಿಲ್ಲ. ಅವರಿಗೆ ತಕ್ಕ ಪಾಠಗಳನ್ನು ಜನ ಕಲಿಸುತ್ತಾರೆ. 13 ನೇ ದಿನಾಂಕದಂದು ಬರುವ ಫಲಿತಾಂಶ ಸೋಮಣ್ಣ ಅವರು ಗೆಲವು ಅಗಿರುತ್ತದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ

]]>
1061954 0 0 0
<![CDATA[ಸುಧಾಕರ್ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ: ಜಮೀರ್]]> https://publictv.in/karnataka-election-2023-sudhakar-is-limited-to-only-one-field-says-zameer-ahmed-khan/ Mon, 01 May 2023 10:59:15 +0000 https://publictv.in/?p=1061958 ಯಾದಗಿರಿ: ಬಿಜೆಪಿ (BJP) ಯಲ್ಲಿ ದೊಡ್ಡ ಕಾಮಿಡಿ ಪೀಸ್ ಅಂದ್ರೆ ಅದು ಸುಧಾಕರ್ (K sSudhakar). ಅವರ ಕ್ಷೇತ್ರ ಬಿಟ್ಟು ಎಲ್ಲಾದರೂ ಅಲ್ಲಾಡಿದ್ದಾರಾ..?, ಬೇರೆ ಕ್ಷೇತ್ರಕ್ಕೆ ಹೋಗಿದ್ದಾರಾ?. ನನ್ನ ಬಗ್ಗೆ ಮಾತಾಡ್ತಾರಲ್ಲ, ನಾನು ಕಾಂಗ್ರೆಸ್ ಪಕ್ಷದಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದೀನಿ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು.

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣಕ್ಕೆ ಆಗಮಿಸಿ ಶಹಾಪುರ ಕಾಂಗ್ರೆಸ್ (Congress) ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಪರ ಮತಬೇಟೆ ಮಾಡಿ, ಶಹಾಪುರ ಪಟ್ಟಣದ ಅಂಜುಮೀನ್ ಶಾಲಾ ಮೈದಾನದಲ್ಲಿ ಬಹಿರಂಗ ಸಮಾವೇಶದಲ್ಲಿ ಜಮೀರ್ ಭಾಗಿಯಾದರು. ಈ ವೇಳೆ ಮಾತನಾಡಿ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ ಅವರು, ಸುಧಾಕರ್ ಅವರು ಒಂದು ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಮಾತಾಡೋಕೆ ಬರುತ್ತೆ ಅಂತ ಏನು ಬೇಕಾದರೂ ಮಾತನಾಡುವುದಲ್ಲ. ಮಾತಾಡಬೇಕಾದ್ರೆ ಸ್ವಲ್ಪ ಯೋಚನೆ ಮಾಡಿ ಮಾತಾಡಬೇಕಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ

ಇದೇ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಅದು ನಾಮಾಕಾವಸ್ತೆಯಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ತಕ್ಕಂತೆ ಅನುಷ್ಠಾನಗೊಳಿಸಿದ್ದಾರೆ. ಬಿಜೆಪಿ ಪ್ರಣಾಳಿಕೆ ಯಾವಾಗಲೂ ಅನುಷ್ಠಾನಕ್ಕೆ ಬಂದೇ ಇಲ್ಲ. 7 ಕೆ.ಜಿ ಅಕ್ಕಿಯನ್ನು 4 ಕೆ.ಜಿ ಮಾಡಿದ್ದಾರೆ. ಈಗ ಚುನಾವಣೆ ಅಂತ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಹಾಲು, ಅಕ್ಕಿ, ಗೋಧಿ ಏನು ಕೊಟ್ಟರೂ ಬರಲ್ಲ ಅಂತ ಅವರಿಗೆ ಗೊತ್ತಿದೆ. ಅಮಿತ್ ಶಾ, ಮೋದಿ ಪದೇ ಪದೇ ಯಾಕ್ ಬರುತ್ತಿದ್ದಾರೆ. ಇವರು ಸಾಧನೆ ಮಾಡಿದ್ರೆ ಅದನ್ನು ತೋರಿಸಿ. ರಾಜ್ಯದ ಜನರಿಗೆ ಡಬಲ್ ಇಂಜಿನ್ ಸರ್ಕಾರ ಬೇಕಾಗಿಲ್ಲ, ಸಿಂಗಲ್ ಇಂಜಿನ್ ಕಾಂಗ್ರೆಸ್ ಸರ್ಕಾರ ಸಾಕು ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

]]>
1061958 0 0 0
<![CDATA[ಪ್ರತಾಪ್ ಸಿಂಹ ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಟಾಂಗ್]]> https://publictv.in/karnataka-election-2023-no-star-campaigner-infront-of-prathap-simha-says-prathap-simha-in-somwarpet/ Mon, 01 May 2023 10:56:44 +0000 https://publictv.in/?p=1061962 ಮಡಿಕೇರಿ: ಪ್ರತಾಪ್ ಸಿಂಹ (Prathap Simha) ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ. ವರುಣಾ (Varuna) ಕ್ಷೇತ್ರಕ್ಕೆ ರಮ್ಯಾ ಮತ್ತು ದುನಿಯಾ ವಿಜಿ ಬರಲಿ. ನಾನು ಬರುತ್ತೇನೆ. ಯಾರಿಗೆ ಜೈಕಾರ ಹಾಕುತ್ತಾರೆ ಎನ್ನುವುದನ್ನು ನೋಡಲಿ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯಗೆ (Siddaramaiah) ಟಾಂಗ್ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ಸಿದ್ದರಾಮಯ್ಯ ಪರ ದುನಿಯಾ ವಿಜಯ್ ಮತ್ತು ರಮ್ಯಾ ಪ್ರಚಾರದ ವಿಚಾರವಾಗಿ ಕೊಡಗಿನ (Kodagu) ಸೋಮವಾರಪೇಟೆಯಲ್ಲಿ (Somwarpet) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ (MallikarjunKharge) ಬಂದಿದ್ದಾರಾ? ಅವರು ಮೈಸೂರಿಗೆ (Mysuru) ಬಂದು ಕ್ಯಾಂಪೇನ್ ಮಾಡಿ ಅಲ್ಲಿಂದ ಹಾಗೆ ಹೋಗುತ್ತಾರೆ. ಖರ್ಗೆಯವರನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯ ಮುಂದಾಗಿದ್ದರು. ಹಾಗೆಯೇ ಕೊರಟಗೆರೆಯಲ್ಲಿ 2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿ ಒಬ್ಬ ದಲಿತ ನಾಯಕನ್ನು ಮುಗಿಸುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೇ 13ಕ್ಕೆ ಸಿದ್ದರಾಮಯ್ಯ ಸೋಲಿನ ಜೊತೆಗೆ ಮುಸ್ಲಿಮ್‌ ಓಲೈಕೆ ಅಂತ್ಯ : ಪ್ರತಾಪ್‌ ಸಿಂಹ

ಡಿ.ಕೆ.ಶಿವಕುಮಾರ್ ಅವರು ಸಹಾ ಮೈಸೂರಿಗೆ ಬರುತ್ತಾರೆ ಆದರೆ ವರುಣಾ ಕ್ಷೇತ್ರಕ್ಕೆ ಹೋಗುವುದಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಅದಕ್ಕೆ ಕೆ.ಹೆಚ್.ಮುನಿಯಪ್ಪ, ಆಂಜನೇಯ ಸೇರಿದಂತೆ ಯಾರೂ ವರುಣಾದತ್ತ ಬರೋದಿಲ್ಲ. ಸಿದ್ದರಾಮಯ್ಯ ಮುಸ್ಲಿಂ ಅವರ ಓಲೈಕೆ ಮಾಡುವುದು ಬಿಟ್ಟರೆ ಬೇರೆ ಯಾವುದೇ ಕಾಳಜಿ ಇಲ್ಲ. ಅದು ಅವರ ಪಕ್ಷದವರಿಗೂ ಗೊತ್ತು. ಹಾಗಾಗಿ ದುನಿಯಾ ವಿಜಿ ಮತ್ತು ರಮ್ಯಾ ಬರೋದಕ್ಕೂ ಖರ್ಗೆ, ಪರಮೇಶ್ವರ್ ಅವರು ಬರೋದಕ್ಕೂ ಇರುವ ವ್ಯತ್ಯಾಸ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿನಾಶದ ಅಂಚಿನಲ್ಲಿ ಕಾಂಗ್ರೆಸ್ – ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಅವರಿಗೆ ಸೋಲೇ: ಅರುಣ್ ಸಿಂಗ್

ವರುಣಾ ಕ್ಷೇತ್ರದಲ್ಲಿ ಸೋಮಣ್ಣಗೆ ಜೈಕಾರ ಹಾಕುತ್ತಾರಾ ಅಥವಾ ಸಿದ್ದರಾಮಯ್ಯಗೆ ಜೈಕಾರ ಹಾಕುತ್ತಾರಾ ಎಂಬುದು ನಿಮಗೆ ಗೊತ್ತಾಗುತ್ತದೆ. ವರುಣಾಕ್ಷೇತ್ರದಲ್ಲಿ ಈಗಾಗಲೇ ಒಂದು ಘೋಷವಾಕ್ಯವನ್ನು ಎಲ್ಲರೂ ಹೇಳುತ್ತಿದ್ದಾರೆ. ಸೋಮಣ್ಣಗೆ ವೋಟು, ಸಿದ್ದರಾಮಯ್ಯಗೆ ಏಟು ಎಂದು ಜನಗಳೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

]]>
1061962 0 0 0
<![CDATA[ಕ್ರಿಕೆಟ್ ಕನಸಿಗಾಗಿ ಪಾನಿ ಪುರಿ ಮಾರಾಟ ಮಾಡಿದ್ದೆ - ಜೈಸ್ವಾಲ್]]> https://publictv.in/from-selling-pani-puri-to-scoring-maiden-ipl-hundred-yashasvi-jaiswal-has-come-a-long-way/ Mon, 01 May 2023 11:03:34 +0000 https://publictv.in/?p=1061965 ಮುಂಬೈ: ಕ್ರಿಕೆಟ್ ಕನಸನ್ನು ನನಸಾಗಿಸಲು ರಸ್ತೆ ಬದಿಯಲ್ಲಿ ಪಾನಿ ಪುರಿ ಮಾರುತ್ತಿದ್ದೆ ಎಂದು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಹೇಳಿಕೊಂಡಿರುವ ಹಳೇಯ ಸುದ್ದಿ ಈಗ ವೈರಲ್ ಆಗಿದೆ.

ಭಾನುವಾರದ ಮುಂಬೈ ವಿರುದ್ಧದ ಐಪಿಎಲ್ (IPL) ಪಂದ್ಯದಲ್ಲಿ ಜೈಸ್ವಾಲ್ 62 ಎಸೆತಗಳಿಗೆ 124 ರನ್ ಗಳಿಸಿದರು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‍ಮನ್ ಮತ್ತು ಮಾಜಿ ಹೈದರಾಬಾದ್ (Sunrisers Hyderabad) ತಂಡದ ಮಾಜಿ ಕೋಚ್ ಟಾಮ್ (Tom Moody) ವಿಶೇಷ ಪ್ರತಿಭೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

ಜೈಸ್ವಾಲ್ ಐಪಿಎಲ್‍ನಲ್ಲಿ ಗಳಿಸಿದ ಚೊಚ್ಚಲ ಶತಕವು ಪ್ರಸಕ್ತ ಋತುವಿನ ಅತ್ಯಧಿಕ ಸ್ಕೋರ್ ಮಾತ್ರವಲ್ಲದೆ ಒಟ್ಟು 9 ಪಂದ್ಯಗಳಿಂದ 428 ರನ್ ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ಸಿಕ್ಕಿದೆ.

ಜೈಸ್ವಾಲ್ ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಟೀಂ ಇಂಡಿಯಾ ಹಾಗೂ ರಾಜಸ್ಥಾನ ತಂಡಕ್ಕೆ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 213 ರನ್‍ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಹೊಡೆದು 6 ವಿಕೆಟ್‍ಗಳ ಜಯವನ್ನು ಸಾಧಿಸಿತು.

ಪಾನಿ ಪುರಿ ಕತೆ: 11 ವರ್ಷದವರಾಗಿದ್ದಾಗ ನಾನು ಹೆತ್ತವರಿಲ್ಲದೆ ಮುಂಬೈಗೆ (Mumbai) ತೆರಳಿದ್ದೆ. ಅಲ್ಲಿ ಚಿಕ್ಕಪ್ಪನ ಜೊತೆ ಗುಡಿಸಿಲಿನಲ್ಲಿ ವಾಸವಾಗಿದ್ದೆ. ನಂತರ ಬೇರೆ ಕಡೆ ತೆರಳಲು ಹೇಳಿದರು. ನಂತರ ಆಜಾದ್ ಮೈದಾನ (ಮುಂಬೈ ಕ್ರೀಡಾ ಮೈದಾನ) ಬಳಿಯ ಟೆಂಟ್‍ನಲ್ಲಿ ಉಳಿಯಲು ಪ್ರಾರಂಭಿಸಿದೆ. ಹಗಲಿನಲ್ಲಿ ಅಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಆಹಾರದ ಖರ್ಚಿಗಾಗಿ ರಾತ್ರಿ ವೇಳೆ ಪಾನಿ ಪುರಿ ಮಾರಾಟ ಮಾಡುತ್ತಿದ್ದೆ ಎಂದು ಜೈಸ್ವಾಲ್ 2020ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದನ್ನೂ ಓದಿ: ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

]]>
1061965 0 0 0
<![CDATA[ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?]]> https://publictv.in/actor-nagachaitanya-life-biggest-regret-post-divorce-from-samantha/ Mon, 01 May 2023 11:10:11 +0000 https://publictv.in/?p=1061969 ಟಾಲಿವುಡ್‌ನ ಬೆಸ್ಟ್ ಜೋಡಿ ಎಂದೇ ಖ್ಯಾತಿ ಗಳಿಸಿದ್ದ ಸಮಂತಾ- ನಾಗ್‌ಚೈತನ್ಯ (Nagachaitanya) ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಶಾಕ್ ನೀಡಿದ್ದರು. ಡಿವೋರ್ಸ್ ಪಡೆದು ಒಂದು ವರ್ಷ ಕಳೆದರೂ ತವರ ಬಗ್ಗೆ ಗಾಸಿಪ್ ಹಬ್ಬೋದು ಮಾತ್ರ ಕಮ್ಮಿಯಾಗಿಲ್ಲ. ಇದೀಗ ಸಮಂತಾ (Samantha) ಜೊತೆಗಿನ ಡಿವೋರ್ಸ್ (Divorce) ನಿರ್ಧಾರದ ಬಗ್ಗೆ ಬೇಸರವಿದ್ಯಾ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ಸ್ಯಾಮ್- ನಾಗ್ ಅವರ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳತ್ತ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಸಿನಿಮಾ- ಹೊಸ ಮನೆ ಶುಭಾರಂಭ, ಶೋಭಿತಾ ಜೊತೆ ಡೇಟಿಂಗ್ ಅಂತಾ ಸುದ್ದಿಯಲ್ಲಿದ್ದಾರೆ. ಸಮಂತಾ ಬಾಲಿವುಡ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

ನಟ ನಾಗಚೈತನ್ಯ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಹಲವು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ನಿಮ್ಮ ಜೀವನದ ಯಾವ ನಿರ್ಧಾರದ ಬಗ್ಗೆ ವಿಷಾದವಿದೆ (Regret) ಎಂದು ಕೇಳಲಾಗಿದೆ.

ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆ ನನಗೆ ಬೇಸರವಿಲ್ಲ. ಎಲ್ಲವೂ ಒಂದು ರೀತಿಯ ಪಾಠ ಎಂದು ಹೇಳಿದ್ದಾರೆ. ನಾಗ್ ಉತ್ತರಕ್ಕೆ ಫ್ಯಾನ್ಸ್ ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ. ಸಮಂತಾ ಜೊತೆಗಿನ ಡಿವೋರ್ಸ್ಗೆ ವಿಷಾದವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

]]>
1061969 0 0 0
<![CDATA[ಬಿಗ್ ಬಾಸ್ ಸ್ಪರ್ಧಿ, ನಟಿ ವನಿತಾ ವಿಜಯ್ ಕುಮಾರ್ 3ನೇ ಪತಿ ನಿಧನ]]> https://publictv.in/bigg-boss-contestant-actress-vanitha-vijay-kumars-3rd-husband-passes-away/ Mon, 01 May 2023 11:06:03 +0000 https://publictv.in/?p=1061972 ಟಿ ಹಾಗೂ ಬಿಗ್ ಬಾಸ್ (Bigg Boss) ಸ್ಪರ್ಧಿ ವನಿತಾ ವಿಜಯ್ ಕುಮಾರ್ (Vanitha Vijay Kumar) ಲಾಕ್ ಡೌನ್ ಸಮಯದಲ್ಲಿ ಸಿಂಪಲ್ ಆಗಿ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆಗಲೇ ಇಬ್ಬರು ಗಂಡಂದಿರನ್ನು ತೊರೆದಿದ್ದ ವನಿತಾಗೆ ಅದು ಮೂರನೇ ಮದುವೆ ಆಗಿತ್ತು. ಮೂರನೇ ಗಂಡನಾಗಿದ್ದ ಪೀಟರ್ ಪೌಲ್ ಆಗಲೇ ಮದುವೆ ಆಗಿದ್ದರಿಂದ ಆತನ ಪತಿ ಬೀದಿ ರಂಪ, ಹಾದಿ ರಂಪ ಮಾಡಿದ್ದರು.

ಈ ಮದುವೆ ಆರೇಳು ತಿಂಗಳು ಕೂಡ ಉಳಿಯಲಿಲ್ಲ. ಪೀಟರ್ ಪೌಲ್ (Peter Paul) ರನ್ನು ತೊರೆದು ಮತ್ತೊಂದು ಮದುವೆ ಆಗುವ ಸೂಚನೆಯನ್ನೂ ನೀಡಿದ್ದರು ವನಿತಾ ವಿಜಯ್ ಕುಮಾರ್.  ಇದೀಗ ಪೀಟರ್ ಪೌಲ್ ನಿಧನ (Passed Away) ಹೊಂದಿರುವ ಸುದ್ದಿಯನ್ನು ವನಿತಾ ಅವರೇ ಪ್ರಕಟಿಸಿದ್ದಾರೆ. ಈ ಕುರಿತು ಅವರು ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ.

ಪೀಟರ್ ಆಸ್ಪತ್ರೆಯಲ್ಲಿದ್ದಾಗ ಸ್ವತಃ ವನಿತಾ ಅವರೇ ಖರ್ಚು ವೆಚ್ಚ ನೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವನಿತಾರಿಂದ ದೂರವಾದ ನಂತರ ಪೀಟರ್ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಪಡ್ಡೆಹೈಕ್ಳಿಗೆ ಬೋಲ್ಡ್‌ ಲುಕ್‌ನಿಂದ ಹಾಟ್‌ ಟ್ರೀಟ್‌ ನೀಡಿದ ಲಕ್ಷ್ಮಿ ರೈ

ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ಪೌಲ್‍, ಅನಾರೋಗ್ಯದ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ಫಲಕಾರಿಯಾಗದೇ ಪೀಟರ್ ನಿಧನಹೊಂದಿದ್ದಾರೆ. ಈ ಕುರಿತು ಪತ್ರ ಬರೆದಿರುವ ವನಿತಾ, ‘ನಿಮಗೆ ಶಾಂತಿ ಸಿಗಲಿ. ನೀವು ಬಯಸಿದ ನೆಮ್ಮದಿಯ ಜಾಗಕ್ಕೆ ಹೋಗಿರುತ್ತೀರಿ ಎನ್ನುವ ವಿಶ್ವಾಸ ನನಗಿದೆ’ ಎಂದು ಬರೆದಿದ್ದಾರೆ.

]]>
1061972 0 0 0
<![CDATA[ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು]]> https://publictv.in/accident-on-mysuru-bengaluru-expressway-three-youths-died-at-ramanagara/ Mon, 01 May 2023 11:14:36 +0000 https://publictv.in/?p=1061983 ರಾಮನಗರ: ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ (Mysuru Bengaluru Expressway) ಭೀಕರ ಅಪಘಾತ (Accident) ಸಂಭವಿಸಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ ಘಟನೆ ನಡೆದಿದೆ.

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳಿಗೆ ಬ್ರೇಕ್ ಇಲ್ಲದಂತಾಗಿದೆ. ನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಲೇ ಇವೆ. ಸೋಮವಾರ ರಾಮನಗರ (Ramanagara) ತಾಲೂಕಿನ ಜಯಪುರ ಗೇಟ್ ಬಳಿ ರಸ್ತೆ ಅಪಘಾತ ಸಂಭವಿಸಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಟಾಂಗ್

ಬೆಂಗಳೂರಿನಿಂದ (Bengaluru) ಮೈಸೂರಿಗೆ (Mysuru) ಮೂವರು ಯುವಕರು ಒಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೆಟ್ಟು ನಿಂತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದು ಕೆಳಗೆ ಬಿದ್ದ ಯುವಕರ ಮೇಲೆ ವೇಗವಾಗಿ ಬಂದ ಮತ್ತೊಂದು ಕಾರು ಕೂಡಾ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಇದನ್ನೂ ಓದಿ: ಸುಧಾಕರ್ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ: ಜಮೀರ್

]]>
1061983 0 0 0
<![CDATA[IPLನಲ್ಲಿ ಮತ್ತೆ ನೋಬಾಲ್‌ ವಿವಾದ - ಮುಂಬೈ ಇಂಡಿಯನ್ಸ್‌ ವಿರುದ್ಧ ಅಭಿಮಾನಿಗಳು ಕೆಂಡ]]> https://publictv.in/yashasvi-jaiswal-noball-controversy-in-ipl-2023/ Mon, 01 May 2023 11:25:31 +0000 https://publictv.in/?p=1061990 ಮುಂಬೈ: ಐಪಿಎಲ್‌ನಲ್ಲಿ (IPL 2023) ನೋಬಾಲ್‌ ವಿವಾದಗಳು (Noball Controversy) ಆಗಾಗ್ಗೆ ನಡೆಯುತ್ತಲೇ ಇವೆ. 16ನೇ ಆವೃತ್ತಿಯಲ್ಲೂ ಭಾನುವಾರ (ಏ.30) ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವಿನ ಪಂದ್ಯದಲ್ಲಿ ಶತಕ ಸಿಡಿಸಿದ ರಾಜಸ್ಥಾನ್‌ ತಂಡದ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಔಟಾದ ರೀತಿ ವಿವಾದಕ್ಕೆ ಕಾರಣವಾಗಿದೆ.

ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಿದ ಯಶಸ್ವಿ ಜೈಸ್ವಾಲ್‌ 62 ಎಸೆತಗಳಲ್ಲಿ 16 ಬೌಂಡರಿ, 8 ಸಿಕ್ಸರ್‌ ನೊಂದಿಗೆ 124 ರನ್‌ ಚಚ್ಚಿದರು. ಕೊನೆಯ ಓವರ್‌ನಲ್ಲಿ ಮುಂಬೈ ಬೌಲರ್‌ ಅರ್ಶದ್‌ ಖಾನ್‌ ಎಸೆದ 4ನೇ ಎಸೆತದಲ್ಲಿ ಯಶಸ್ವಿ ಕ್ಯಾಚ್‌ ನೀಡಿ ಔಟಾದರು. ಈ ಔಟ್‌ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

ಏಕೆಂದರೆ ಯಶಸ್ವಿ ಜೈಸ್ವಾಲ್‌ ಎದುರಿಸಿದ 20ನೇ ಓವರ್‌ನ 4ನೇ ಎಸೆತವು ಸೊಂಟಕ್ಕಿಂತಲೂ ಮೇಲ್ಭಾಗಕ್ಕೆ ಬಂದಿತ್ತು. ಯಶಸ್ವಿ ಕ್ರೀಸ್‌ ಒಳಗೆಯೇ ನಿಂತು ಬ್ಯಾಟಿಂಗ್‌ ಮಾಡಿದ್ದರು. ಡಿಆರ್‌ಎಸ್‌ನಲ್ಲೂ ಸ್ಕ್ರೀನ್‌ನಲ್ಲೂ ಬಾಲ್‌ ವಿಕೆಟ್‌ನಿಂದ ಮೇಲೆ ಇರುವುದು ಕಂಡುಬಂದಿತ್ತು. ಆದರೂ ಅಂಪೈರ್‌ ಔಟ್‌ ಎಂದೇ ತೀರ್ಪು ನೀಡಿದರು. ಅಂಪೈರ್‌ ತೀರ್ಪಿನ ವಿರುದ್ಧ ಇದೀಗ ಕ್ರಿಕೆಟ್‌ ಅಭಿಮಾನಿಗಳು ಸಿಡಿಸಿದ್ದಾರೆ. ಯಶಸ್ವಿ ಜೈಸ್ವಾಲ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

ಎಲ್ಲ ತಂಡಗಳು ಕ್ರಿಕೆಟ್‌ನಲ್ಲಿ ಪ್ಲೇಯಿಂಗ್‌ ಇಲವೆನ್‌ನಲ್ಲಿ 11 ಜನರೊಂದಿಗೆ ಕಣಕ್ಕಿಳಿದರೆ, ಮುಂಬೈ ಮಾತ್ರ 13 ಪ್ಲೇಯರ್‌ಗಳೊಂದಿಗೆ ಕಣಕ್ಕಿಳಿಯುತ್ತೆ. 11 ಜನ ಫೀಲ್ಡಿಂಗ್‌ ಮಾಡಿದರೆ, ಉಳಿದ ಇಬ್ಬರು ಅಂಪೈರ್‌ ಮಾಡುತ್ತಾರೆ. ಆದ್ದರಿಂದ ತೀರ್ಪು ಮುಂಬೈ ಪರವಾಗಿಯೇ ಇರುತ್ತದೆ ಎಂದು ಟಾಂಗ್‌ ಕೊಟ್ಟಿದ್ದಾರೆ.

Rishabh-Pant-1 ipl

ನೋಬಾಲ್‌ ವಿವಾದಗಳು ಇದೇ ಮೊದಲೇನಲ್ಲ: ಕಳೆದ ವರ್ಷ ರಾಜಸ್ಥಾನ್‌ ರಾಯಲ್ಸ್‌ ಹಾಗೂ ರಿಷಭ್‌ ಪಂತ್‌ ನಾಯಕತ್ವದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಇದೇ ರೀತಿ ನೋಬಾಲ್‌ ವಿವಾದ ನಡೆದಿತ್ತು. ಆ ನಂತರ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅಪೀಲ್‌ ಮಾಡಿದ ನಂತರ ಅಂಪೈರ್‌ ನೋಬಾಲ್‌ ನೀಡಿದ್ದು, ಭಾರೀ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ವರ್ಷ ನಡೆದ‌ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲೂ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ನೋಬಾಲ್‌ ಆಗಿದ್ದರೂ ಶಫಾಲಿ ವರ್ಮಾ ಅವರದ್ದು ಔಟ್‌ ಎಂದು ತೀರ್ಪು ನೀಡಲಾಗಿತ್ತು.

]]>
1061990 0 0 0
<![CDATA[ರಸ್ತೆಯಿಂದ ಉರುಳಿದ 2 ಕಾರುಗಳು ಮರಕ್ಕೆ ಡಿಕ್ಕಿ - ಐವರ ಸಾವು, ಹಲವರಿಗೆ ಗಾಯ]]> https://publictv.in/5-dead-and-many-injured-in-felling-of-2-cars-from-the-road-and-collided-in-the-tree/ Mon, 01 May 2023 11:37:17 +0000 https://publictv.in/?p=1061995 ಸಾಂದರ್ಭಿಕ ಚಿತ್ರ)

ಜೈಪುರ: ಎರಡು ಕಾರುಗಳು ರಸ್ತೆಯಿಂದ ಉರುಳಿ ಬಿದ್ದು ಮರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ರಾಜಸ್ಥಾನದ (Rajasthan) ಹನುಮಾನ್‌ಗಢದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಹರಿಯಾಣದಿಂದ (Haryana) ಗೊಗಮೇಡಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ತಿರುವಿನಲ್ಲಿ ಕಾರು ನಿಯಂತ್ರಿಸಲು ಸಾಧ್ಯವಾಗದೆ ರಸ್ತೆಯಿಂದ ಉರುಳಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ರಾತ್ರಿಯಾಗಿದ್ದರಿಂದ ಕಾರು ಚಾಲಕರು ತಿರುವು ಇರುವುದನ್ನು ಗಮನಿಸದೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಅತಿ ವೇಗವಾಗಿ ಬಂದಿದ್ದರಿಂದ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಮೊಬೈಲ್‌ ಕೊಡದ್ದಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆಗೈದ ಪಾನಮತ್ತ ಮಹಿಳೆ

ಭಿರಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

]]>
1061995 0 0 0
<![CDATA[ಭಾರತದ ಪ್ರಗತಿಗೆ ಗುಜರಾತ್‌ ವಿಶೇಷ ಕೊಡುಗೆ ನೀಡಿದೆ - ರಾಹುಲ್‌ ಗಾಂಧಿ]]> https://publictv.in/gujarat-has-a-special-contribution-to-indias-progress-says-rahul-gandhi/ Mon, 01 May 2023 11:42:34 +0000 https://publictv.in/?p=1061998 ನವದೆಹಲಿ: ಗುಜರಾತ್ (Gujarat Day) ತನ್ನ ಸಂಸ್ಥಾಪನಾ ದಿನವನ್ನು ಮೇ 1 ರಂದು "ಗುಜರಾತ್ ಗೌರವ ದಿನ" ಎಂದು ಆಚರಿಸುತ್ತದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಗುಜರಾತ್ ಜನತೆಗೆ ಶುಭಾಶಯ ತಿಳಿಸಿದ್ದಾರೆ.

ಸೋಮವಾರ ಟ್ವೀಟ್‌ ಮಾಡಿರುವ ಅವರು, "ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾನ್ ನಾಯಕರ ಜನ್ಮಸ್ಥಳವಾದ ಗುಜರಾತ್ ಭಾರತದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ. ಗುಜರಾತ್ ದಿನದಂದು ಗುಜರಾತ್ ಜನತೆಗೆ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಜನರಿಗೆ ಶುಭಾಶಯ ತಿಳಿಸಿದ್ದಾರೆ. ಗುಜರಾತ್ ತನ್ನ ಸರ್ವತೋಮುಖ ಪ್ರಗತಿ ಮತ್ತು ಅದರ ವಿಶಿಷ್ಟ ಸಂಸ್ಕೃತಿಯಿಂದಾಗಿ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯ ಹೊಸ ಮೈಲುಗಲ್ಲು ಸಾಧಿಸುತ್ತದೆ ಎಂದು ಹೇಳಿದ್ದಾರೆ.

ಮೇ 1, 1960 ರಂದು ಗುಜರಾತ್ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಗುಜರಾತಿಗಳು ಅದರತ್ತ ಮುನ್ನಡೆದಿದ್ದಾರೆ. ಅಭಿವೃದ್ಧಿ, ಭೂಕಂಪ, ಪ್ರವಾಹ, ಕೊರೊನಾ ಸಾಂಕ್ರಾಮಿಕ.. ಹೀಗೆ ನಾನಾ ವಿಪತ್ತುಗಳನ್ನು ಗುಜರಾತಿಗಳು ದೃಢಸಂಕಲ್ಪದಿಂದ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

ಪ್ರಧಾನಿ ನೇತೃತ್ವದಲ್ಲಿ ಗುಜರಾತ್ ಅಭಿವೃದ್ಧಿಯ ಮಾದರಿ ರಾಜ್ಯ ಎಂದು ದೇಶ ಮತ್ತು ಜಗತ್ತಿಗೆ ತೋರಿಸಿದೆ. ಗುಜರಾತ್‌ನ ಈ ಅಭಿವೃದ್ಧಿ ಪಯಣವನ್ನು ಮುಂದುವರಿಸಲು ನಮಗೆ ಜನಾದೇಶವೂ ಇದೆ. ಎಲ್ಲಾ ಜನರ ಪ್ರೀತಿಯ ಋಣ ನಮ್ಮ ಮೇಲಿದೆ ಎಂದು ಸ್ಮರಿಸಿದ್ದಾರೆ.

]]>
1061998 0 0 0
<![CDATA[ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ: ಜಗದೀಶ್ ಶೆಟ್ಟರ್ ಗುಡುಗು]]> https://publictv.in/its-not-gujarat-its-karnataka-to-beat-me-jagdish-shettar/ Mon, 01 May 2023 13:28:55 +0000 https://publictv.in/?p=1061976 ಕೊಪ್ಪಳ: ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ ಎಂದು ಅಮಿತ್ ಶಾ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ತೀರುಗೇಟು ನೀಡಿದ್ದಾರೆ.

ಕೊಪ್ಪಳ(Koppala) ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಶೆಟ್ಟರ್, ಸವದಿ 50 ಸಾವಿರ ಮತಗಳ ಅಂತರದಿಂದ ಸೋಲ್ತಾರೆ ಎನ್ನೋ ಅಮಿತ್ ಶಾ (Amitshah) ಹೇಳಿಕೆಗೆ ತೀರುಗೇಟು ನೀಡಿದರು. ಹುಬ್ಬಳ್ಳಿಯ ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ (Hubballi) ಜನ ಏನು ಅಂತ ನಂಗೆ ಗೊತ್ತಿದೆ. ನಾನೇನು ಎನ್ನೋದು ನನ್ನ ಜನತೆಗೆ ಗೊತ್ತಿದೆ. ನಾನು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನನ್ನ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಮಾಡಿದ್ದೇ ಬಿಜೆಪಿ. ರಾಜ್ಯದ ಕೆಲವೇ ಕೆಲವು ಜನರ ಕಪಿಮುಷ್ಠಿಯಲ್ಲಿ ಬಿಜೆಪಿ ಇದೆ. ನಂಗೆ ಎಲ್ಲಾ ಕೊಟ್ಟಿದ್ದೀವಿ ಅಂತಾರೆ. ನಮ್ಮ ಕುಟುಂಬ ಬಿಜೆಪಿಗೆ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ (BJP) ಕಟ್ಟೋಕೆ ಶೆಟ್ಟರ್ ಶ್ರಮವಿದೆ. ನಂಗೆ ಒಬ್ಬ ಎಂಎಲ್‍ಎ ರೀತಿ ಪತ್ರ ಬರೀರಿ ಅಂತಾರೆ. ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಇನ್ನು ರಾಜಕೀಯಕ್ಕೆ ಬಂದಿರಲಿಲ್ಲ. ಅಂತವರು ನಂಗೆ ಎಲೆಕ್ಷನ್ ನಿಲ್ಲಬೇಡ ಅಂತಾರೆ ಎಂದು ಮತ್ತೊಮ್ಮೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ (Rahul Gandhi) ನಂಗೆ ಒಂದ್ ಮಾತು ಹೇಳಿದ್ರು. ಶೆಟ್ರೆ ನೀವು ಭ್ರಷ್ಟಾಚಾರಿ ಅಲ್ಲ ಅದಿಕ್ಕೆ ನಿಮಗೆ ಟಿಕೆಟ್ ಕೊಟ್ಟಿಲ್ಲ ಅಂದ್ರು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತು. ಅಷ್ಟೇ ಏಕೆ ಆರು ಬಾರಿ ಗೆಲ್ಲಿಸಿದ ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಅದಕ್ಕೆ ನಾನು ಸಿಡಿದೆದ್ದೆ, ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಇದ್ದರೂ ಸತ್ತಂಗೆ. ಅದು ಗುಲಾಮಗಿರಿಯ ಸಂಕೇತ ಎಂದು ಸಿಡಿಮಿಡಿಗೊಂಡರು. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಹಣವನ್ನ ಜನರಿಗೆ ವಾಪಸ್‌ ಕೊಡ್ತೀವಿ – ರಾಗಾ

ಮತ್ತೆ ಬಿಜೆಪಿಯಿಂದ ಗೆದ್ರೆ ನಂಬರ್ 1 ಸ್ಥಾನಕ್ಕೆ ಬರ್ತೀನಿ ಅನ್ನೋ ಆತಂಕ ಕೆಲವರಲ್ಲಿ ಶುರುವಾಯಿತು. ಹೀಗಾಗೇ ನನ್ನನ್ನ ಹೊರಗಡೆ ಕಳಿಸೋಕೆ ಸಂಚು ರೂಪಿಸಲಾಯಿತು. ಬಿಎಸ್ ವೈ ಮನೆಗೆ ಹೊಂಟ್ರು, ಶೆಟ್ಟರ್ ನ ಆಚೆ ಹಾಕಿದ್ರೆ ಇಡೀ ಪಾರ್ಟಿ ತಮ್ಮ ಕೈಯಲ್ಲೂ ಬರುತ್ತೆ ಎಂಬ ಹಿಡನ್ ಅಜೆಂಡಾವಿತ್ತು. ನಂಗೆ ಯಾವ ಅಧಿಕಾರದ ಆಮಿಷವಿಲ್ಲ. ನನ್ನನ್ನ ಕಾಂಗ್ರೆಸ್ ಗೌರವಯುತವಾಗಿ ನಡೆಸಿ ಕೊಂಡರೆ ಸಾಕು ಎಂದಿದ್ದೀನಿ. ಕಾಂಗ್ರೆಸ್ ಅದನ್ನ ಮಾಡುತ್ತಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 140ಕ್ಕೂ ಸೀಟ್‍ನಿಂದ ಗೆಲ್ಲುತ್ತೆ. ಜನ ನಂಗೆ ಅನೇಕ ಜನ ಹೇಳ್ತಿದ್ದಾರೆ. ಶೆಟ್ಟರ್ ನೀವು ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೀರಿ ನಿಮಗೆ ಶಹಬ್ಬಾಶ್ ಅಂತಿದ್ದಾರೆ. ಅಷ್ಟೇ ಸಾಕು ನನ್ನ 30 ವರ್ಷದ ರಾಜಕೀಯ ಜೀವನಕ್ಕೆ. ಶೆಟ್ಟರ್ ಸೋಲಿಸೋಕೆ ಘಟಾನುಘಟಿಗಳು ನನ್ನ ಸೋಲಿಸೋಕೆ ಚಾಲೆಂಜ್ ಮಾಡಿದ್ದಾರೆ. ಅದನ್ನ ಮೆಟ್ಟಿನಿಂತು ಗೆದ್ದು ಬರುತ್ತೇನೆ ಎಂದು ಅಮಿತ್ ಶಾ ಚಾಲೆಂಜ್ ಗೆ ಟಾಂಗ್ ನೀಡಿದರು.

ಕುಟುಂಬ ರಾಜಕೀಯಿಲ್ಲ ಅಂತಾರೆ. ನಿಮ್ಮ ಸೊಸೆಗೆ ಟಿಕೆಟ್ ಕೊಡ್ತೀನಿ, ನಿಮ್ಮ ಪತ್ನಿಗೆ ಟಿಕೆಟ್ ಕೊಡ್ತೀನಿ ಎನ್ನೋದು ಯಾಕೆ..?. ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಚಿತ್ತಾಪುರದಲ್ಲಿ 80 ಕ್ರಿಮಿನಲ್ ಕೇಸ್ ಇರೋ ರೌಡಿ ಶೀಟರ್ ಗೆ ಟಿಕೆಟ್ ನೀಡಿದ್ದಾರೆ. ಬಿಜೆಪಿ ಪ್ರಣಾಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಈಗಾಗಲೇ ಕಾಂಗ್ರೆಸ್ ಐದು ಗ್ಯಾರೆಂಟಿ ನೀಡಿದೆ. ಅದು ಜನಮಾನಸದಲ್ಲಿ ನಾಟಿದೆ. ಅದಕ್ಕಿಂತ ಹೊಸ ಯೋಜನೆ ಬಿಜೆಪಿಯಲಿಲ್ಲ. ನಂಗೆ ಮಾಜಿ ಸಿಎಂ ಎನ್ನೋ ಹಣೆ ಪಟ್ಟಿ ಬಂದಿದೆ. ಮತ್ತೆ ನಾನು ಅಧಿಕಾರದ ಆಸೆಯಿಲ್ಲ ಎಂದರು.

]]>
1061976 0 0 0
<![CDATA[ಮತ್ತೊಂದು ಸಿನಿಮಾ ಘೋಷಣೆ ಮಾಡಿದ ‘ಮ್ಯಾಟ್ನಿ’ ನಿರ್ಮಾಪಕ]]> https://publictv.in/the-producer-of-matney-announced-another-movie/ Mon, 01 May 2023 11:50:19 +0000 https://publictv.in/?p=1062005 ತೀಶ್ ನೀನಾಸಂ ಹಾಗೂ ರಚಿತಾ ರಾಮ್ ಕಾಂಬಿನೇಷನ್ ನ 'ಮ್ಯಾಟ್ನಿ’ (Matney) ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನೇನು ಬಿಡುಗಡೆಗೂ ಈ ಸಿನಿಮಾವನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ಸಮಯದಲ್ಲಿ ನಿರ್ಮಾಪಕರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರವನ್ನು ಕಾಶಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾಗೆ ‘ಎಲ್ಲಾ ನಿನಗಾಗಿ’ (Ella Ninagagi) ಎಂದು ಟೈಟಲ್ ಇಡಲಾಗಿದ್ದು, ಇದನ್ನು ವಿದ್ಯಾ ಶ್ರೀಮುರಳಿ ಅರ್ಪಿಸುತ್ತಿದ್ದಾರೆ. F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಆರ್ಕಾಟ್ (Arcot) ಚಿತ್ರದ ನಾಯಕನಾದರೆ, ಧನ್ಯ ರಾಮಕುಮಾರ್ (Dhanya Ram Kumar) ನಾಯಕಿ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

ಇತ್ತೀಚೆಗೆ ಈ ನೂತನ ಚಿತ್ರದ‌ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿದ್ದು, ಖ್ಯಾತ ನಟ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮೇ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

]]>
1062005 0 0 0
<![CDATA[ತಂಗಿ ಮದುವೆ ಮಾಡಿ ಮುಗಿಸಿದ ‌'ಬಿಗ್‌ ಬಾಸ್' ಕವಿತಾ ಗೌಡ]]> https://publictv.in/actress-kavitha-gowda-sister-monisha-and-shobith-marriage-photos/ Mon, 01 May 2023 11:57:18 +0000 https://publictv.in/?p=1062009 ಟಿವಿ ಲೋಕದಲ್ಲಿ ಅಭಿಮಾನಿಗಳಿಗೆ 'ಲಕ್ಷ್ಮಿ ಬಾರಮ್ಮ' (Lakshmi Baramma) ಚಿನ್ನು ಎಂದೇ ಫೇಮಸ್ ಆಗಿದ್ದ ಕವಿತಾ ಗೌಡ (Kavitha Gowda) ಅವರು ತಮ್ಮ ಮುದ್ದಿನ ತಂಗಿ ಮೋನಿಷಾ (Monisha Gowda) ಅವರ ಮದುವೆ ಮಾಡಿ ಮುಗಿಸಿದ್ದಾರೆ.

ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಚಂದನ್ ಗೌಡ ಜೊತೆ ಹೋಟೆಲ್ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ.

ಇದೀಗ ಕವಿತಾ ಗೌಡ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮುದ್ದಿನ ತಂಗಿ ಮೋನಿಷಾ ಗೌಡ ಅವರ ಮದುವೆಯನ್ನ ಶೋಭಿತ್‌ (Shobith) ಎಂಬುವವರ ಸರಳವಾಗಿ ಬೆಂಗಳೂರಿನಲ್ಲಿ ಮಾಡಿ ಮುಗಿಸಿದ್ದಾರೆ. ನವಜೋಡಿಯ ಫೋಟೋವನ್ನ ನಟ ಚಂದನ್ ಕುಮಾರ್ ಶೇರ್ ಮಾಡಿ, ಶುಭಹಾರೈಸಿದ್ದಾರೆ.

]]>
1062009 0 0 0
<![CDATA[ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ - ಅಪ್ರಾಪ್ತ ಆರೋಪಿಗೆ ಜಾಮೀನು]]> https://publictv.in/allahabad-high-court-grants-bail-to-16-year-old-boy-accused-of-killing-mother-for-not-letting-him-play-pubg/ Mon, 01 May 2023 12:25:52 +0000 https://publictv.in/?p=1062018 ಲಕ್ನೋ: ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ (Pistol) ಬಳಸಿ ತಾಯಿಯನ್ನು ಕೊಂದಿದ್ದ ಅಪ್ರಾಪ್ತ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಇತ್ತೀಚೆಗೆ ಜಾಮೀನು (Bail) ಮಂಜೂರು ಮಾಡಿದೆ.

ಆರೋಪಿಯು ಅಪ್ರಾಪ್ತನಾಗಿದ್ದು, ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಪರಿಗಣಿಸಿದ ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ನೀಡಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

ಈಗ ಇರುವ ಯಾವ ಸಾಕ್ಷಿಗಳೂ ಸೂಕ್ತವಾಗಿಲ್ಲ. ಪ್ರಕರಣದಲ್ಲಿ ಆರೋಪಿಯ ಅಜ್ಜಿ ದೂರು ದಾಖಲಿಸಿದ್ದು, ಅವರು ಪ್ರತ್ಯಕ್ಷ ಸಾಕ್ಷಿಯಲ್ಲ. ಇನ್ನುಳಿದ ಸಾಕ್ಷಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿಲ್ಲ. ಕೇವಲ ಆರೋಪಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಆರೋಪಿಗೆ ಘಟನೆ ನಡೆದಾಗ 16 ವರ್ಷ. ಇದು ಬಾಲ ನ್ಯಾಯ ಮಂಡಳಿಯ ದೋಷಾರೋಪ ಪಟ್ಟಿಯಲ್ಲಿಯೂ ಸ್ಪಷ್ಟವಾಗಿದೆ. ಇದರಿಂದಾಗಿ ಆತನನ್ನು ಅಪ್ರಾಪ್ತ ಎಂದು ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಿ ಆತನನ್ನು ಬಂಧಿಸಲಾಗಿತ್ತು. ಆರೋಪಿ ಜಾಮೀನಿಗಾಗಿ ಜಿಲ್ಲಾ ನ್ಯಾಯಲಯದ ಮೊರೆ ಹೋಗಿದ್ದ. ಆದರೆ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆರೋಪಿ, ಲಕ್ನೋದ (Lucknow) ಪೋಕ್ಸೊ ನ್ಯಾಯಾಲಯದ (POCSO Court) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (Additional District & Sessions Court) ತೀರ್ಪಿನ ವಿರುದ್ಧ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

ಏನಾಗಿತ್ತು? ಜೂನ್ 2022 ರಲ್ಲಿ ಪಬ್‍ಜಿ ಆಡುವುದನ್ನು ತಡೆದ ಕಾರಣಕ್ಕಾಗಿ ಆರೋಪಿ ತಾಯಿಯನ್ನು ಕೊಲೆಗೈದಿದ್ದ ಎಂದು ಆರೋಪಿಸಲಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಮೃತರ ಶವ ಪತ್ತೆಯಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆರೋಪಿಯು ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ ಹಾಗೂ ಅಪರಾಧ ಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಮನವರಿಕೆಯಾದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಯು ಜೂನ್ 8, 2022 ರಿಂದ ಬಾಲಾಪರಾಧಿಗಳ ರಕ್ಷಣಾ ಗೃಹದಲ್ಲಿದ್ದಾನೆ (Child Protection Home). ಅವನ ತಂದೆ ತನ್ನ ಮಗನ ಮೇಲೆ ನಿಗಾ ಇಡುತ್ತಾರೆ ಎಂಬ ಅಂಶವನ್ನು ಸಹ ನ್ಯಾಯಾಲಯ ಉಲ್ಲೇಖಿಸಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

]]>
1062018 0 0 0
<![CDATA[ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ - ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್]]> https://publictv.in/rahul-gandhi-half-mental-basanagouda-patil-yatnal-controversial-statement/ Mon, 01 May 2023 12:25:43 +0000 https://publictv.in/?p=1062021 ಧಾರವಾಡ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) `ಮೋದಿ ವಿಷದ ಹಾವು ಇದ್ದಂತೆ' ಎಂದು ಹೇಳಿಕೆ ನೀಡಿದ ಬಳಿಕ ಹರಿಹಾಯ್ದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) `ಸೋನಿಯಾ ಗಾಂಧಿ ವಿಷಕನ್ಯೆನಾ?' ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ ಎಂದು ಹೇಳುವ ಮೂಲಕ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.

ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಹುಚ್ಚ ಅಲ್ಲ, ಅರೆಹುಚ್ಚ. ಪಾಕಿಸ್ತಾನಿಗಳೇ ಬೆಂಬಲಕೊಡಿ ಮೋದಿಯವರನ್ನ (Narendra Modi) ದೇಶದಿಂದ ಹೊರಗೆ ಹಾಕ್ತೀವಿ ಅಂತಾರೆ. ದೇಶದ ಬಗ್ಗೆ ಕಾಳಜಿ ಇಲ್ಲದವರನ್ನ ಅರೆಹುಚ್ಚ ಅನ್ನದೆ ಗ್ರೇಟ್ ಸ್ಕಾಲರ್ ಅನ್ಬೇಕಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?

ಇವತ್ತು ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಹಗುರವಾಗಿ ಮಾತನಾಡಿದ್ದಾನೆ. ಅವರ ಪಕ್ಷದಲ್ಲೇ ಮೂರು ಬಿಟ್ಟವರು ಇದ್ದಾರೆ. ಆದ್ರೆ ಮೋದಿ 150 ಕೋಟಿ ಜನರ ಆಶೀರ್ವಾದ ಪಡೆದು ಪ್ರಧಾನಿಯಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು

ಕ್ವಂಯ್ ಅಂದ್ರೆ ಎನ್‌ಕೌಂಟರ್: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉತ್ತರಪ್ರದೇಶದ ಮಾದರಿ ಜಾರಿಗೆ ಬರಲಿದೆ. ಕ್ವಂಯ್ ಅಂದ್ರೆ ಎನ್‌ಕೌಂಟರ್ ಆಗುತ್ತೆ, ಭಾರತದ ವಿರುದ್ಧ ಮಾತನಾಡಿದ್ರೆ ಢಂ ಢಂ ಮಾಡ್ತೀವಿ, ರೋಡ್ ಮೇಲೆಯೇ ಡಿಷ್ಕ್ಯಾಂ ಆಗುತ್ತೆ ಮುಂದೆ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.

]]>
1062021 0 0 0
<![CDATA[ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಹಣವನ್ನ ಜನರಿಗೆ ವಾಪಸ್‌ ಕೊಡ್ತೀವಿ - ರಾಗಾ]]> https://publictv.in/if-congress-comes-to-power-will-return-the-bjp-government-looted-money-to-the-people-says-rahul-gandhi/ Mon, 01 May 2023 12:54:49 +0000 https://publictv.in/?p=1062039 ಚಾಮರಾಜನಗರ: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಬಿಜೆಪಿ (BJP) ಸರ್ಕಾರ ಎಷ್ಟು ಲೂಟಿ ಮಾಡಿದೆಯೋ ಅಷ್ಟನ್ನೂ ಜನರಿಗೆ ವಾಪಸ್ ಕೊಡ್ತೀವಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದರು.

ನಗರದಲ್ಲಿ ಕಾಂಗ್ರೆಸ್‌ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಪ್ರಕಾರ ಆಯ್ಕೆಯಾಗಿರುವ ಸರ್ಕಾರವಲ್ಲ. ಶಾಸಕರನ್ನು ಖರೀದಿಸಿ ಕದ್ದು ರಚನೆ ಮಾಡಿರುವ ಸರ್ಕಾರ. ಶಾಸಕ ‌ಮಾಡಾಳ್ ವಿರೂಪಾಕ್ಷಪ್ಪ ಮಗನ ಬಳಿ 8 ಕೋಟಿ ಸಿಕ್ತು. ಪಿಎಸ್‌ಐ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ಹೀಗೆ ಹಗರಣಗಳ ಪಟ್ಟಿಯೇ ಇದೆ. ಆದರೆ ಕರ್ನಾಟಕಕ್ಕೆ ಬರುತ್ತಿರುವ ಮೋದಿ ಈ ಭ್ರಷ್ಟಾಚಾರದ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ – ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್

40% ಕಮಿಷನ್ ಆರೋಪದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಮೋದಿಯವರೇ? ಯಾರನ್ನು ಜೈಲಿಗೆ ಕಳಿಸಿದ್ದೀರಿ, ಏನು ತನಿಖೆ ಮಾಡಿದ್ದೀರಿ ಎಂದು ಪ್ರಧಾನಿ ಮೋದಿ (Narendra Modi) ಅವರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಎಲ್ಲ ನಾಯಕರ ಹೆಸರನ್ನು ಹೇಳುತ್ತದೆ. ಆದರೆ ಬಿಜೆಪಿ ನರೇಂದ್ರ ಮೋದಿ ಅವರ ಹೆಸರನ್ನು ಬಿಟ್ಟು ಬೇರೆ ಹೆಸರು ಹೇಳುತ್ತಿಲ್ಲ. ಯಡಿಯೂರಪ್ಪ ಅಂತಹ ನಾಯಕರ ಹೆಸರನ್ನು ಹೇಳುತ್ತಿಲ್ಲ. ಮೋದಿಯವರೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಿ. ಜನರ ಬಗ್ಗೆ ಮಾತನಾಡಲು ಶುರು ಮಾಡಿ ಟಾಂಗ್‌ ಕೊಟ್ಟರು. ಇದನ್ನೂ ಓದಿ: ಪ್ರತಾಪ್ ಸಿಂಹ ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಟಾಂಗ್

ಬಿಜೆಪಿಗೆ 40 ನೇ ನಂಬರ್ ಬಗ್ಗೆ ಬಹಳ ಪ್ರೀತಿ ಇದೆ. ಏನು ಮಾಡಿದರೂ 40% ಕಮಿಷನ್ ಪಡೀತಾರೆ. ಹಾಗಾಗಿ ನೀವು ಅವರಿಗೆ 40 ಸ್ಥಾನ ಮಾತ್ರ ನೀಡಿ. ಕಾಂಗ್ರೆಸ್‌‌ಗೆ 150 ಸ್ಥಾನ ನೀಡಿ. ನಮ್ಮ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಭ್ರಷ್ಟಾಚಾರಿ ಅಲ್ಲ. ಅವರ ಹತ್ತಿರ ನೂರಾರು ಕೋಟಿ ಇಲ್ಲ. ಅದರೆ ಬಿಜೆಪಿ ಅಭ್ಯರ್ಥಿ ಸಚಿವರಾಗಿದ್ದವರು, ಶ್ರೀಮಂತರಾಗಿದ್ದಾರೆ ಎಂದು ಆರೋಪಿಸಿದರು.

]]>
1062039 0 0 0
<![CDATA[ಕಾರ್ಖಾನೆಗಳಲ್ಲಿ ದಿನಕ್ಕೆ 12 ಗಂಟೆ ಕೆಲಸ - ಕಾಯ್ದೆಯನ್ನು ಹಿಂತೆಗೆದುಕೊಂಡ ತಮಿಳುನಾಡು ಸರ್ಕಾರ]]> https://publictv.in/tamil-nadu-government-withdraws-12-hour-shifts-a-day-rule-in-factories/ Mon, 01 May 2023 12:53:11 +0000 https://publictv.in/?p=1062040 ಚೆನ್ನೈ: ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗೆ ವಿಸ್ತರಿಸಿದ್ದ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು (Factories Amendment Act 2023) ಕಾರ್ಮಿಕರ (Labor)  ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin) ಸೋಮವಾರ ಹೇಳಿದ್ದಾರೆ.

ಮೇ ಡೇ ಪಾರ್ಕ್‌ನಲ್ಲಿ ಮೇ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಕಾರ್ಖಾನೆಗಳ ತಿದ್ದುಪಡಿ ಕಾಯಿದೆ 2023, ಕೈಗಾರಿಕೆಗಳಿಗೆ ದಿನಕ್ಕೆ 12 ಗಂಟೆ ಎಂದರೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಗಳವರೆಗೆ ಇದ್ದ ಕೆಲಸದ ಸಮಯವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಮಿಕರ ಕಲ್ಯಾಣ ದೃಷ್ಟಿಯಿಂದ ನಾವು ಯಾವುದೇ ಪರಿಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗಾರಿಕೆಗಳು ಬೆಳೆಯಬೇಕು ಮತ್ತು ಕಾರ್ಮಿಕರ ಏಳಿಗೆಯಾಗಬೇಕು. ನಾನು ಎಂದಿಗೂ ಮಣಿಯುವುದನ್ನು ಅವಮಾನ ಎಂದು ಪರಿಗಣಿಸಲ್ಲ. ನಾನು ಅದನ್ನು ಹೆಮ್ಮೆಯ ವಿಷಯ ಎಂದು ಪರಿಗಣಿಸಿದ್ದೇನೆ. ಏಕೆಂದರೆ ಶಾಸನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಮಸೂದೆಯನ್ನು ಹಿಂಪಡೆಯಲು ಧೈರ್ಯ ಬೇಕಾಗುತ್ತದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ – ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್

ಏಪ್ರಿಲ್ 21 ರಂದು ತಮಿಳುನಾಡು ವಿಧಾನಸಭೆಯು ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು ಅಂಗೀಕರಿಸಿತು. ಇದು ರಾಜ್ಯದಾದ್ಯಂತ ಕಾರ್ಖಾನೆಗಳಲ್ಲಿನ ಉದ್ಯೋಗಿಗಳಿಗೆ 12 ಗಂಟೆಗಳವರೆಗೆ ಕಡ್ಡಾಯ ಕೆಲಸದ ಸಮಯವನ್ನು ವಿಸ್ತರಿಸಿತ್ತು. ಆದರೆ ಈ ಕಾಯ್ದೆ ವಿರುದ್ಧ ಹಲವು ವಿಪಕ್ಷಗಳು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಹಿನ್ನೆಲೆ ಕಾರ್ಮಿಕರ ಹಿತದೃಷ್ಟಿಯಿಂದ ಇದನ್ನು ಹಿತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಾರತದ ಪ್ರಗತಿಗೆ ಗುಜರಾತ್‌ ವಿಶೇಷ ಕೊಡುಗೆ ನೀಡಿದೆ – ರಾಹುಲ್‌ ಗಾಂಧಿ

]]>
1062040 0 0 0
<![CDATA[ನಾನು ಜಾತಿ ಪರ ಬಂದಿದ್ದೇನೆ ಅಂದ್ಕೋಬೇಡಿ : ಕಿಚ್ಚ ಸುದೀಪ್ ಮನವಿ]]> https://publictv.in/i-have-come-for-caste-and-dont-deny-it-kiccha-sudeep/ Mon, 01 May 2023 13:13:27 +0000 https://publictv.in/?p=1062047 ಬಿಜೆಪಿ (BJP) ಪ್ರಚಾರಕ್ಕೆ ಹೋದಲ್ಲಿ ನಾನು ಬರಿ ಜಾತಿ (Caste) ಪರ ಬಂದಿದ್ದೇನೆ ಅನ್ಕೋಬೇಡಿ ಎಂದು ನಟ ಸುದೀಪ್ (Sudeep) ಮನವಿ ಮಾಡಿದ್ದಾರೆ. ಯಮಕನಮರಡಿ (Yamakanamaradi) ಕ್ಷೇತ್ರದ ವಂಟಮೂರಿ ಗ್ರಾಮದಲ್ಲಿ ರೋಡ್ ಶೋ ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಸುದೀಪ್,  ‘ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ’ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಸುದೀಪ್, ‘ಇನ್ನೂ ಯಮಕನಮರಡಿ ಅಭ್ಯರ್ಥಿ ಬಸವರಾಜ ಹುಂದ್ರಿ ಬಡ ಕುಟುಂಬದಿಂದ ಬಂದಿದ್ದಾರೆ. ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಸಹಕಾರ ಹಾಗೂ ಸೇವೆ ಮಾಡಲು ಬಸವರಾಜ‌ ಹುಂದ್ರಿ ಅವರಿಗೆ ಅವಕಾಶ ಕೊಡಿ. ಮತ ಹಾಕಿ ಗೆಲ್ಲಿಸುವದು ಅಷ್ಟೆ ಅಲ್ಲ ಅವರ ಕಡೆಯಿಂದ ಕೆಲಸ ಮಾಡಿಸಿಕೊಳ್ಳುವುದು ಮುಖ್ಯ. ಈ ಊರಲ್ಲಿ ಸರಿಯಾಗಿ ರಸ್ತೆ ಇಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ತುಂಬಾನೇ ಕೆಲಸ ಬಾಕಿ ಇದೆ. ಗೆದ್ದರೆ ಇಲ್ಲಿ ಕೆಲಸಗಳನ್ನು ಮಾಡಿಕೊಡಿತೀರಾ ಸರ್ ಎಂದು ಅಭ್ಯರ್ಥಿಯನ್ನೇ’ ಸುದೀಪ್ ಕೇಳಿದರು. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

ಎಲ್ಲ ಕೆಲಸಗಳನ್ನು ಮಾಡುತ್ತೇನೆ ನನಗೆ ಆಶೀರ್ವಾದ ಮಾಡಿ ಎಂದ ಬಸವರಾಜ ಹುಂದ್ರಿ (Basavaraja Hundri), ಕೆಲಸ ಮಾಡಲಿಲ್ಲಾ ಅಂದ್ರೆ ನಾನೇ ಬರತೀನಿ ಸರ್, ಜನ‌ ನಮ್ಮವರಿದ್ದಾರೆ. ಬಿಟ್ಟು ಕೊಡಲು ಆಗುವುದಿಲ್ಲ ಎಂದು ಸುದೀಪ್ ಹೇಳಿದರು. 25 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅಂದ್ರೆ ನಿಮ್ಮಿಂದಾ. ನನ್ನ ಮೊದಲನೇ ಪ್ರೀತಿ ಕನ್ನಡ, ಕನ್ನಡಚಿತ್ರರಂಗ, ಅಭಿಮಾನಿಗಳು. ನನ್ನ ತಂದೆ ತಾಯಿ ಹೆಸರಿಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲಾ. ಆದರೆ ಕಿಚ್ಚ ಕಿಚ್ಚ ಎನ್ನುವ ಹೊಸ ಜನ್ಮ ಕೊಟ್ಟಿದ್ದೀರಾ ನೀವೆಲ್ಲ. ಕೊನೆವರೆಗೂ ಅದನ್ನ ಕಾಪಾಡಿಕೊಂಡು ಹೋಗುತ್ತೇನೆ ಎಂದರು.

ಅಭಿಮಾನಿಗಳು ಸುದೀಪ್ ಗೆ ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಒತ್ತಾಯ ಮಾಡಿದರು.  ಮದಕರಿ ಚಿತ್ರದ ಡೈಲಾಗ್ ನೀವು ಕೇಳತೀರಾ. ಆದರೆ ಅದನ್ನ ಹೇಳಿದರೆ ಜಾತಿ ಬಗ್ಗೆ ಮಾತಾಡತೀನಿ ಅನ್ಕೋತಾರೆ. ಇದು ಯಾವ ನ್ಯಾಯ ಎಂದ ಸುದೀಪ್ ಬಳಿಕ  ಅಭಿಮಾನಿಗಳ ಒತ್ತಾಯದ ಮೇರೆಗೆ ಮದಕರಿ ಚಿತ್ರದ ಡೈಲಾಗ್  ಹೇಳಿದರು‌.

]]>
1062047 0 0 0
<![CDATA[ಪ್ರಧಾನಿ ಮೋದಿ ನಾಲಾಯಕ್‌ ಹೇಳಿಕೆ - ಪ್ರಿಯಾಂಕ್‌ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು]]> https://publictv.in/bjp-files-complaint-with-election-commission-against-congress-mla-priyank-kharge-for-his-naalayak-son-jibe-at-pm-modi/ Mon, 01 May 2023 13:44:31 +0000 https://publictv.in/?p=1062050 ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು "ನಾಲಾಯಕ್‌ ಮಗ" (Naalayak Son) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge) ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪ್ರಿಯಾಂಕ್‌ ಗಾಂಧಿ ಈ ಹೇಳಿಕೆ ನೀಡಿದ್ದರು. ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌: ಪ್ರಿಯಾಂಕ್‌ ಖರ್ಗೆ ಮೂದಲಿಕೆ

ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್‌ ಖರ್ಗೆ ಅವರು ಪ್ರಧಾನಿಗಳ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಆ ಮೂಲಕ ಮಾದರಿ ನೀತಿ ಸಂಹಿತೆ ನಿಯಮ ಉಲ್ಲಂಘಿಸಿದ್ದಾರೆ. "ನಾಲಾಯಕ್‌" ಎಂದರೆ ಅಪ್ರಯೋಜಕ ಎಂದರ್ಥ. ಅಂತಹ ಪದವನ್ನು ಈ ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಧಾನಿಗಳ ವಿರುದ್ಧ ಬಳಸಿರುವುದು ಅಕ್ಷಮ್ಯ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗಳನ್ನು ವಿಷದ ಹಾವು ಎಂದು ನಿಂದಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಖರ್ಗೆ ಅವರ ಪುತ್ರರೂ ಆದ ಶಾಸಕ ಪ್ರಿಯಾಂಕ್‌ ಖರ್ಗೆ ಮತ್ತೊಂದು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಅವರು ಆಯೋಗಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ: ಜಗದೀಶ್ ಶೆಟ್ಟರ್ ಗುಡುಗು

ಸುದ್ದಿಗೋಷ್ಠಿಯ ಕೊನೆಗೆ ನಾನು ಮೋದಿಗೆ ಹಾಗೆ ಅಂದಿಲ್ಲ. ನನಗೆ ವೈಯಕ್ತಿಕ ನಿಂದನೆಗಿಂತ ನನ್ನ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು ಎಂದು ಪ್ರಿಯಾಂಕ್‌ ಖರ್ಗೆ ತನ್ನ ನಾಲಾಯಕ್ ಹೇಳಿಕೆಗೆ ಸಮಜಾಯಿಷಿ ನೀಡಿದ್ದರು.

]]>
1062050 0 0 0
<![CDATA[ತಪ್ಪೆಲ್ಲ ನನ್ನದೇ ಎಂದು ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್]]> https://publictv.in/actor-salman-khan-reacts-about-his-ex-girlfriends/ Mon, 01 May 2023 13:35:15 +0000 https://publictv.in/?p=1062052 ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಸಿನಿಮಾದ ಸೋಲಿನ ನಂತರ ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದಿದ್ದಾರೆ. 'ತಪ್ಪೆಲ್ಲ ನನ್ನದೇ ಎಂದು ತಾವು ಪ್ರೀತಿಯಲ್ಲಿ ಎಡವಿದ್ದು ಎಲ್ಲಿ' ಎಂದು ಬಾಯ್ಬಿಟ್ಟಿದ್ದಾರೆ.

ಇತ್ತೀಚಿಗೆ ತೆರೆಯ ಕಂಡ ಸಿನಿಮಾ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ನಿರೀಕ್ಷಿಸಿದ ಹಾಗೆ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡಲಿಲ್ಲ. ಸಲ್ಮಾನ್ ಖಾನ್ ಅವರೇ ನಟಿಸಿ, ನಿರ್ಮಾಣ ಮಾಡಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಳೆಯ ರಿಲೇಶನ್‌ಶಿಪ್ ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಇಂದು ನನ್ನ ಎಲ್ಲಾ ಎಕ್ಸ್‌ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ ಎಂದಿದ್ದಾರೆ.

ಪ್ರೀತಿಯಲ್ಲಿ ನಾನು ದುರಾದೃಷ್ಟವಂತ. ಎಲ್ಲರೂ ಒಳ್ಳೆಯವರಾಗಿದ್ದರು. ಆದರೆ, ತಪ್ಪು ನನ್ನದೇ. ಮೊದಲ ವ್ಯಕ್ತಿ ಬಿಟ್ಟು ಹೋದಾಗ ತಪ್ಪು ಅವರದ್ದು ಅನಿಸುತ್ತದೆ. ಇದು ಪದೇಪದೇ ರಿಪೀಟ್ ಆದಾಗ ಅನುಮಾನ ಬರುತ್ತದೆ. ತಪ್ಪು ಅವರದ್ದೋ ಅಥವಾ ನನ್ನದೋ ಎನ್ನುವ ಪ್ರಶ್ನೆ ಮೂಡುತ್ತದೆ. ನನ್ನ ಜೀವನದಲ್ಲಿ ವಿಶೇಷವಾದ ಯಾರಾದರೂ ಬರಬಹುದು ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಹೆಚ್ಚೆಚ್ಚು ಮಂದಿ ನಮ್ಮನ್ನು ಬಿಟ್ಟು ಹೋದರು ಎಂದರೆ ಆಗ ತಪ್ಪು ನಮ್ಮದೇ ಅನ್ನೋದು ಖಚಿತವಾಗುತ್ತದೆ. ಅವರಲ್ಲಿ ಯಾವುದೇ ತಪ್ಪಿರಲಿಲ್ಲ. ತಪ್ಪೆಲ್ಲ ನನ್ನದೇ. ಅವರು ಅಂದುಕೊಂಡ ರೀತಿಯ ಜೀವನ, ಖುಷಿಯನ್ನು ನನಗೆ ನೀಡಲು ಆಗದಿದ್ದರೆ ಎನ್ನುವ ಭಯ ಇದ್ದೇ ಇತ್ತು. ನನ್ನನ್ನು ಬಿಟ್ಟು ಹೋದ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಐಶ್ವರ್ಯ ರೈ(Aishwarya Rai), ಕತ್ರಿನಾ ಕೈಫ್ (Katrina Kaif) ಬಗ್ಗೆ ಪರೋಕ್ಷವಾಗಿ ನಟ ಮಾತನಾಡಿದ್ದಾರೆ.

]]>
1062052 0 0 0
<![CDATA[ಆಟವಾಡ್ತಿದ್ದಾಗ ಕಾರಿನ ಡೋರ್ ಲಾಕ್- 8 ವರ್ಷದ ಬಾಲಕಿ ದುರ್ಮರಣ]]> https://publictv.in/8-year-old-girl-gets-locked-in-car-dies-of-suffocation-in-kakinada-andhra-pradesh/ Mon, 01 May 2023 14:33:02 +0000 https://publictv.in/?p=1062063 ಹೈದರಾಬಾದ್: 8 ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಆಂಧ್ರಪ್ರದೇಶ (Andhrapradesh) ದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ ಇಂದು (ಸೋಮವಾರ) ಕಾರಿ (Car) ನೊಳಗೆ ತನ್ನ ಪಾಡಿಗೆ ಆಟವಾಡುತ್ತಿದ್ದಳು. ಈ ವೇಳೆ ಕಾರಿನ ಡೋರ್ ಲಾಕ್ ಆಗಿ ಬಾಲಕಿ (Girl) ಒಳಗೆ ಸಿಲುಕಿಕೊಂಡಿದ್ದಾಳೆ. ಪರಿಣಾಮ ಉಸಿರಾಡಲು ಸಾಧ್ಯವಾಗದೇ ದುರ್ಮರಣಕ್ಕೀಡಾಗಿದ್ದಾಳೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು

ಇತ್ತ ಸಂಜೆಯಾದರೂ ಬಾಲಕಿ ಕಾಣದೆ ಇದ್ದಾಗ ಆಕೆಯ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಎಲ್ಲಾ ಕಡೆ ಹುಡುಕಾಡಿದರೂ ಬಾಲಕಿ ಕಾಣಿಸಲಿಲ್ಲ. ಕೊನೆಗೆ ಮನೆ ಪಕ್ಕ ನಿಲ್ಲಿಸಿದ್ದ ಕಾರನ್ನು ಚೆಕ್ ಮಾಡಿದ್ದಾರೆ. ಈ ವೇಳೆ ಬಾಲಕಿ ಕಾರಿನೊಳಗೆ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಉಸಿರುಗಟ್ಟಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಕಿಯ ತಂದೆ ನಿಧನ ಹೊಂದಿದ್ದರು. ಸದ್ಯ ಮೃತಪಟ್ಟ ಬಾಲಕಿ ತನ್ನ 11 ವರ್ಷದ ಸಹೋದರನ ಜೊತೆ ತಾಯಿಯೊಂದಿಗೆ ವಾಸವಾಗಿದ್ದಳು. ಪತಿ ತೀರಿಕೊಂಡ ದುಃಖದಲ್ಲಿದ್ದ ಆದಿಲಕ್ಷ್ಮಿಗೆ ಗ್ರಾಮಸ್ಥರು ಸಾಂತ್ವನ ಹೇಳುತ್ತಿದ್ದಂತೆಯೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ.

]]>
1062063 0 0 0
<![CDATA[ಮೋದಿಗೆ ಬಂದೋಬಸ್ತ್ ನೀಡಿದ್ದ ಏಂಜಲ್‍ಗೆ ಅದ್ದೂರಿ ಸೆಂಡಾಫ್]]> https://publictv.in/farewell-for-police-dog-angel-who-retired-after-eight-years-of-duty-in-the-dog-force-kolar/ Mon, 01 May 2023 13:48:37 +0000 https://publictv.in/?p=1062064 ಕೋಲಾರ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ವಾನಕ್ಕೆ (Police Dog) ಕೆಜಿಎಫ್ ಠಾಣೆ ಪೊಲೀಸ್ (KGF Police Station) ಅಧಿಕಾರಿಗಳು ಸನ್ಮಾನಿಸಿ ಅದ್ದೂರಿಯಾಗಿ ಸೋಮವಾರ ಬೀಳ್ಕೊಡಿಗೆ (Farewell) ನೀಡಿದ್ದಾರೆ.

ಕೊನೆಯದಾಗಿ ಭಾನುವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮದಲ್ಲಿ ಏಂಜಲ್ ಭದ್ರತಾ ಕಾರ್ಯನಿರ್ವಹಿಸಿತ್ತು. ಅಲ್ಲದೆ ಹಲವಾರು ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡಿದ್ದಾಗ ಏಂಜಲ್ ಕಾರ್ಯ ನಿರ್ವಹಿಸಿತ್ತು. ಪೊಲೀಸ್ ಇಲಾಖೆಯ ಏಂಜಲ್‍ಗೆ ಈಗ ಕೆಜಿಎಫ್ ಎಸ್ಪಿ ಧರಣಿದೇವಿಯವರು ಅದ್ದೂರಿಯಾಗಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

2015ರಲ್ಲಿ ಸೇವೆಗೆ ಸೇರಿದ್ದ ಏಂಜಲ್, ಲ್ಯಾಬ್ರಡರ್ ತಳಿಯ ಹೆಣ್ಣು ಶ್ವಾನ. ಬಾಂಬ್ ಸೇರಿದಂತೆ ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿತ್ತು. ಕಳೆದ ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಸೇವೆ ಸಲ್ಲಿಸಿತ್ತು.

ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ, ಕೇಂದ್ರದ ಮಂತ್ರಿಗಳು, ಗಣ್ಯ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಿದ್ದ ಏಂಜಲ್ ಅತ್ಯುನ್ನತ ಸೇವೆ ಸಲ್ಲಿಸಿ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

]]>
1062064 0 0 0
<![CDATA['ಮನ್ ಕಿ ಬಾತ್' ಕಾರ್ಯಕ್ರಮಕ್ಕೆ 830 ಕೋಟಿ ಖರ್ಚಾಗಿದೆ ಎಂದ ಆಪ್ ಮುಖ್ಯಸ್ಥನ ವಿರುದ್ಧ ಕೇಸ್]]> https://publictv.in/case-against-aap-chief-saying-that-830-crore-was-spent-on-mann-ki-baat-program/ Mon, 01 May 2023 13:50:59 +0000 https://publictv.in/?p=1062065 ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) 'ಮನ್ ಕಿ ಬಾತ್' (Mann Ki Baat) ರೇಡಿಯೋ ಕಾರ್ಯಕ್ರಮದ 100 ಸಂಚಿಕೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ 830 ಕೋಟಿ ರೂ. ಹಣವನ್ನು ಖರ್ಚು ಮಾಡಿದೆ ಎಂದು ಟ್ವೀಟ್ ಮಾಡಿದ್ದ ಆಮ್ ಆದ್ಮಿ ಪಕ್ಷದ (AAP) ಗುಜರಾತ್ ಅಧ್ಯಕ್ಷ ಇಸುದನ್ ಗಧ್ವಿ (Isudan Gadhvi) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಸುದನ್ ಗಧ್ವಿ ಅವರು ಯಾವುದೇ ಆಧಾರಗಳಿಲ್ಲದೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಈ ವಿಚಾರ ತಿಳಿದು ಬಂದ ತಕ್ಷಣವೇ ಶನಿವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 26 ರಂದು ಟ್ವೀಟ್ ಮಾಡಿದ್ದ ಗಧ್ವಿ, ಮನ್ ಕಿ ಬಾತ್‌ನ 1 ಸಂಚಿಕೆಗೆ 8.3 ಕೋಟಿ ರೂ. ವೆಚ್ಚವಾಗುತ್ತದೆ. ಹಾಗಾದರೆ ಕೇಂದ್ರ ಇದುವರೆಗೆ ಮನ್ ಕಿ ಬಾತ್‌ನ 100 ಸಂಚಿಕೆಗಳಿಗೆ 830 ಕೋಟಿ ರೂ. ಖರ್ಚು ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌ ಹೇಳಿಕೆ – ಪ್ರಿಯಾಂಕ್‌ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

ಈ ಟ್ವೀಟ್ ಗಮನಕ್ಕೆ ಬರುತ್ತಿದ್ದಂತೆ ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಏಪ್ರಿಲ್ 29ರಂದು ಗಧ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಸೈಬರ್ ಕ್ರೈಂ ಸಹಾಯಕ ಪೊಲೀಸ್ ಆಯುಕ್ತ ಜೆಎಂ ಯಾದವ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 100ನೇ ಸಂಚಿಕೆ ಭಾನುವಾರ ಪ್ರಸಾರವಾಯಿತು. ಇದೀಗ ಗಧ್ವಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿರುವುದಕ್ಕೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಇಂತಹ ಸುಳ್ಳು ಎಫ್‌ಐಆರ್‌ಗಳ ಮೂಲಕ ಆಡಳಿತಾರೂಢ ಬಿಜೆಪಿ ತನ್ನ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಹಣವನ್ನ ಜನರಿಗೆ ವಾಪಸ್‌ ಕೊಡ್ತೀವಿ – ರಾಗಾ

]]>
1062065 0 0 0
<![CDATA[ಈ ಬಾರಿ ದಾಖಲೆಯ GST ಸಂಗ್ರಹ - 1.87 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?]]> https://publictv.in/at-1-87-lakh-crore-gst-collection-for-april-2023/ Mon, 01 May 2023 14:12:53 +0000 https://publictv.in/?p=1062074 ನವದೆಹಲಿ: ಈ ಬಾರಿಯ ಏಪ್ರಿಲ್‌ ತಿಂಗಳಿನಲ್ಲಿ ದಾಖಲೆಯ 1.87 ಲಕ್ಷ ಕೋಟಿ  ರೂ. ಜಿಎಸ್‌ಟಿ (GST) ಸಂಗ್ರಹವಾಗಿದ್ದು, ದೇಶದಲ್ಲಿ ಜಾರಿಯಾದ ಬಳಿಕ ಇದೇ ಮೊದಲಬಾರಿಗೆ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ (Ministry of Finance) ಸೋಮವಾರ ತಿಳಿಸಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆ ನಂತರ ಕಳೆದ ಅಕ್ಟೋಬರ್‌ನಲ್ಲಿ 1.48 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, 2ನೇ ಬಾರಿಗೆ ಅತಿಹೆಚ್ಚು ಸಂಗ್ರಹವಾದ ಜಿಎಸ್‌ಟಿ ಪ್ರಮಾಣವಾಗಿತ್ತು. ಆದ್ರೆ 2023ರ ಕಳೆದ ಏಪ್ರಿಲ್‌ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಹಿಂದೆಂಗಿತಲೂ ಅತ್ಯಧಿಕ 19,495 ಕೋಟಿ ರೂ. ಅಂದ್ರೆ ಶೇ.12 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಅಂತ್ಯಕ್ರಿಯೆಗೆ GST ಸುಳ್ಳೆಂದ ಕೇಂದ್ರ ಸರ್ಕಾರ- ತೆರಿಗೆ ವಾಪಸ್‍ಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

 

ಕಳೆದ ತಿಂಗಳು ಏಪ್ರಿಲ್‌ 20 ರಂದು ಒಂದೇ ದಿನದಲ್ಲಿ 68,228 ಕೋಟಿ ರೂ. ಸಂಗ್ರಹವಾಗಿದೆ. ಇದು ಈವರೆಗೆ ಒಂದೇ ದಿನದಲ್ಲಿ ಸಂಗ್ರಹವಾದ ಅತಿಹೆಚ್ಚು ಜಿಎಸ್‌ಟಿ ಪ್ರಮಾಣವಾಗಿದೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

 

ರಾಜ್ಯದ ತೆರಿಗೆ ಶೇ.33 ರಷ್ಟು ಹೆಚ್ಚಳ: ಕರ್ನಾಟಕದಲ್ಲಿ (Karnataka) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.23 ರಷ್ಟು ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. 14,593 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 11,820 ಕೋಟಿ ರೂ. ಸಂಗ್ರಹವಾಗಿತ್ತು. ಇದನ್ನೂ ಓದಿ: ಒಂದೇ ತಿಂಗಳಲ್ಲಿ 6,085 ಕೋಟಿ GST ಸಂಗ್ರಹ – ಸಿಎಂ ಬೊಮ್ಮಾಯಿ

 

ಇನ್ನೂ ರಾಜ್ಯಗಳ ಪೈಕಿ ಈ ಬಾರಿಯೂ ಮಹಾರಾಷ್ಟ್ರದಲ್ಲಿ (Maharashtra) ಅತ್ಯಂತ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ 27,495 ಕೋಟಿ ರೂ. ಸಂಗ್ರಹವಾಗಿದ್ದ ಮಹಾರಾಷ್ಟ್ರಕ್ಕೆ 33,196 ಕೋಟಿ ಜಿಎಸ್‌ಟಿ ಹರಿದುಬಂದಿದ್ದು, ಕಳೆದ ವರ್ಷಕ್ಕಿಂತ ಶೇ.21 ರಷ್ಟು ಹೆಚ್ಚಾಗಿದೆ. ಗುಜರಾತ್ (Gujarat) 11,721 ಕೋಟಿ ರೂ., ತಮಿಳುನಾಡು (Tamil Nadu) 11,559 ಕೋಟಿ ರೂ., ಪಶ್ಚಿಮ ಬಂಗಾಳ (West Bengal) 6,447 ಕೋಟಿ ರೂ., ಹರ್ಯಾಣ 10,035 ಕೋಟಿ ರೂ., ಉತ್ತರಪ್ರದೇಶ 10,320 ಕೋಟಿ ರೂ. ಹಾಗೂ ಹಾಗೂ ತೆಲಂಗಾಣ 5,622 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದೆ.

]]>
1062074 0 0 0
<![CDATA[ಗೃಹ ಪ್ರವೇಶದ ಸಂಭ್ರಮದಲ್ಲಿ 'ರಾಧಾ ರಮಣ' ನಟಿ ಕಾವ್ಯ ಗೌಡ]]> https://publictv.in/radha-ramana-serial-heroine-kavya-gowda-house-warming-photos/ Mon, 01 May 2023 14:21:43 +0000 https://publictv.in/?p=1062076 ರಾಧಾ ರಮಣ (Radha Ramana), ಮೀರಾ ಮಾಧವ, ಶುಭವಿವಾಹ ಸೀರಿಯಲ್‌ಗಳ ಮೂಲಕ ಮನೆ ಮಾತಾದ ನಟಿ ಕಾವ್ಯ ಗೌಡ (Kavya Gowda) ನೂತನ ಮನೆಗೆ ಕಾಲಿಟ್ಟಿದ್ದಾರೆ. ಗೃಹ ಪ್ರವೇಶದ (House Warming) ಸಂಭ್ರಮದಲ್ಲಿದ್ದಾರೆ ನಟಿ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

'ಬಕಾಸುರ' ಚಿತ್ರ ಖ್ಯಾತಿಯ ನಟಿ ಕಾವ್ಯ ಅವರು ಉದ್ಯಮಿ ಸೋಮಶೇಖರ್ (Somashekar) ಜೊತೆ 2021ರಲ್ಲಿ ಮೇ 13ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಗುರು ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ. ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡು ಜ್ಯುವೆಲ್ಲರಿ ಡಿಸೈನರ್ ಆಗಿ ಕಾವ್ಯ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ತಪ್ಪೆಲ್ಲ ನನ್ನದೇ ಎಂದು ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್

ಮದುವೆಯಾಗಿ ಒಂದು ವರ್ಷವಾಗುವ ಮುಂಚೆಯೇ ಇದೀಗ ಹೊಸ ಮನೆಗೆ ಕಾವ್ಯ ಗೌಡ ದಂಪತಿ ಪಾದಾರ್ಪಣೆ ಮಾಡಿದ್ದಾರೆ. ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿ ಮಿಂಚಿದ್ದಾರೆ. ನಟಿ ಕಾವ್ಯ ಕೂಡ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸವ್ಯಸಾಚಿ ಸೀರೆಯಲ್ಲಿ ನಟಿ ಕಾವ್ಯ ಮಿಂಚಿದ್ದಾರೆ.

ಕಾವ್ಯ ದಂಪತಿ ಅವರ ಮನೆ ನೋಡುಗರ ಗಮನ ಸೆಳೆಯುತ್ತಿದೆ. ಮನೆಯಲ್ಲಿ ಎಲ್ಲಾ ಕಡೆ ಮರದ ತುಂಡಿನಿಂದ ವಿನ್ಯಾಸ ಮಾಡಿದ ಹಾಗೇ ಕಾಣುತ್ತಿದೆ. ಮನೆ ಕಟ್ಟಿಸಿದ ರೀತಿ ವಿಭಿನ್ನವಾಗಿದೆ. ನಟಿಯ ಹೊಸ ಮನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

]]>
1062076 0 0 0
<![CDATA[ನನ್ನ ಆತ್ಮೀಯರ ಮೇಲೆ ಐಟಿ ರೇಡ್ ಮಾಡುವ ಹುನ್ನಾರ ನಡೆದಿದೆ: ವಿನಯ್ ಕುಲಕರ್ಣಿ]]> https://publictv.in/there-is-a-conspiracy-to-it-raid-on-my-dear-ones-says-vinay-kulkarni/ Mon, 01 May 2023 14:40:35 +0000 https://publictv.in/?p=1062086 ಬೆಳಗಾವಿ: ಇವತ್ತು ಕೋರ್ಟ್ ನನಗೆ ಧಾರವಾಡ (Dharwad) ಜಿಲ್ಲಾ ಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ. ಹೊರಗಡೆ ಇದ್ದುಕೊಂಡೇ ನಾನು ಚುನಾವಣೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಹೇಳಿದರು.

ಬೆಳಗಾವಿ (Belagavi)  ಜಿಲ್ಲೆಯ ಕಿತ್ತೂರಿನಲ್ಲಿ ಮನೆ ಮಾಡಿಕೊಂಡು ಇರುವ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ವಿನಯ್ ಕುಲಕರ್ಣಿ, ಕ್ಷೇತ್ರದ ಜನ ಇದೀಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮರಳಿ ನನಗೆ ಅವಕಾಶ ಕೊಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ನನ್ನ ಮೇಲೆ ಬಿಜೆಪಿ (BJP) ಷಡ್ಯಂತ್ರ ನಡೆಸಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಏಕೆಂದರೆ ಕೋರ್ಟ್‌ನಲ್ಲಿ ಯರ‍್ಯಾರು ಬಂದು ಕುಳಿತಿರುತ್ತಾರೆ ಎಂಬುದನ್ನು ನೀವು ನೋಡಿದರೆ ನಿಮಗೇ ಗೊತ್ತಾಗುತ್ತದೆ. ನಾನು ಅಷ್ಟೇ ಅಲ್ಲ ರಾಜ್ಯದ ಅನೇಕ ನಾಯಕರ ಮೇಲೆ ಬಿಜೆಪಿ ಷಡ್ಯಂತ್ರ ನಡೆಸಿದೆ. ಇಂದಿಗೂ ಅನೇಕರ ಮೇಲೆ ಐಟಿ ರೇಡ್ ಮಾಡಿಸಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಪಿಎ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಅವರು ಹೊರಗಡೆ ಬರದಂತೆ ಮಾಡಿದರು ಎಂದು ಆರೋಪಿಸಿದರು.

ನನ್ನ ಅವಧಿಯಲ್ಲಿ ಆದಂತಹ ಕೆಲಸಗಳನ್ನು ಮುಂದಿಟ್ಟುಕೊಂಡು ನನ್ನ ಪತ್ನಿ ಹಾಗೂ ಕಾರ್ಯಕರ್ತರು ಮತ ಕೇಳುತ್ತಿದ್ದಾರೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ನಾವು ಕೊಟ್ಟಂತಹ ಯೋಜನೆಗಳು ಇಂದು ನನ್ನ ಕೈ ಹಿಡಿಯುತ್ತಿವೆ. ಕಳೆದ 5 ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನೇ ಮಾಡಿಲ್ಲ. ಒಂದೂ ಜನಸಂಪರ್ಕ ಸಭೆ ನಡೆಸಿಲ್ಲ. ಕಾಂಗ್ರೆಸ್‌ಗೆ ಬೆಂಬಲ ನೀಡಿದಂತಹವರಿಗೆ ಕಿರುಕುಳ ನೀಡುವ ಕೆಲಸ ಮಾಡಿದ್ದಾರೆ. 1 ಲಕ್ಷ ರೂ. ಕೊಟ್ಟವರಿಗೆ ಮಾತ್ರ ಮನೆ ಹಾಕಿಸಿಕೊಟ್ಟಿದ್ದಾರೆ ಎಂದರು.

ವಿನಯ್ ಕುಲಕರ್ಣಿ ಯಾರು ಎಂಬುದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಬಿಜೆಪಿಯವರು ಹಾಲಿನಲ್ಲಿ ಹರಳು ಒಗೆಯುವ ಕೆಲಸ ಮಾಡಿದ್ದಾರೆ. ಇಂದು ಕ್ಷೇತ್ರದಲ್ಲಿ ನನ್ನ ಪತ್ನಿಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಎಲ್ಲರೂ ಆಕೆಯನ್ನು ಮನೆಯ ಮಗಳಂತೆ ಕಾಣುತ್ತಿದ್ದಾರೆ. ನಾನು ಜಿಲ್ಲೆಯ ಹೊರಗಿದ್ದರೂ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಪರ ಅಲೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌ ಹೇಳಿಕೆ – ಪ್ರಿಯಾಂಕ್‌ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

ಈಗಿನ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ಯಾವ ಸರ್ಕಾರವೂ ಮಾಡಿಲ್ಲ. ನಾನು ಮಾಡಿದ ಕೆರೆಗೆ ನೀರು ತುಂಬಿಸುವ ಕೆಲಸ, ಮಂದಿರ ನಿರ್ಮಾಣ ಸೇರಿದಂತೆ ಇತ್ಯಾದಿ ಕೆಲಸಗಳಿಗೆ ಬಿಜೆಪಿ ಶಾಸಕರು ತಮ್ಮ ಹೆಸರು ಹಾಕಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಯಾವುದೇ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ನನ್ನ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಸಿದ್ದರಾಮಯ್ಯ ಒಬ್ಬರು ನನ್ನ ಕ್ಷೇತ್ರಕ್ಕೆ ಬರುತ್ತೇನೆ ಎಂದಿದ್ದಾರೆ. ದುಂದುವೆಚ್ಚ ಮಾಡುವವನು ನಾನಲ್ಲ ಎಂದರು.

ಸುದೀಪ್ ಅವರು ಕರೆಕ್ಟ್ ಆಗಿಯೇ ಹೇಳಿದ್ದಾರೆ. ಅಭಿವೃದ್ಧಿ ಯಾರು ಮಾಡುತ್ತಾರೋ ಅವರಿಗೆ ಮತ ಹಾಕಿ ಎಂದಿದ್ದಾರೆ. ಅದು ಕರೆಕ್ಟ್ ಆಗಿಯೇ ಇದೆ. ಇಂದಿಗೂ ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ಕಾಲ್ ರೆಕಾರ್ಡ್ ಮಾಡಲಾಗುತ್ತಿದೆ. ನಾವು ಏನಾದರೂ ಮಾತನಾಡಿದರೆ ಅದು 10 ನಿಮಿಷಕ್ಕೆ ಬಿಜೆಪಿಯವರಿಗೆ ಮಾಹಿತಿ ಮುಟ್ಟುತ್ತದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆದ್ದರಿಂದ ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಅವಶ್ಯವಿದೆ. ಈ ಬಾರಿ ನಾವು 146 ಸೀಟುಗಳನ್ನು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ: ಜಗದೀಶ್ ಶೆಟ್ಟರ್ ಗುಡುಗು

]]>
1062086 0 0 0
<![CDATA[ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ - ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ]]> https://publictv.in/virat-kohli-is-a-swagger-rashmika-mandanna-says/ Mon, 01 May 2023 14:57:46 +0000 https://publictv.in/?p=1062092 ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ (RCB) ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ.

ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು ಇವರಾಗಿದ್ದಾರೆ. ಪ್ರತಿ ಮ್ಯಾಚ್‌ ನಡೆದಾಗಲೂ ಆರ್‌ಸಿಬಿ ಅಭಿಮಾನಿಗಳು ಸುದ್ದಿಯಲ್ಲಿರುತ್ತಾರೆ. ಕಳೆದ 15 ಆವೃತ್ತಿಗಳಲ್ಲಿ ಒಮ್ಮೆಯೂ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲವಾದರೂ ಅಭಿಮಾನಿಗಳ ಪ್ರೀತಿ, ಬಲ, ನಂಬಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಒಂದಲ್ಲ ಒಂದು ದಿನ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: IPLನಲ್ಲಿ ಮತ್ತೆ ನೋಬಾಲ್‌ ವಿವಾದ – ಮುಂಬೈ ಇಂಡಿಯನ್ಸ್‌ ವಿರುದ್ಧ ಅಭಿಮಾನಿಗಳು ಕೆಂಡ

ಅದೇ ರೀತಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಸಹ ಆರ್‌ಸಿಬಿ ಆಟಗಾರರಿಗೆ ಫ್ಯಾನ್‌ ಆಗಿದ್ದಾರೆ. ಈ ಕುರಿತು ರಶ್ಮಿಕಾ ಮಂದಣ್ಣ ಮಾತನಾಡಿರುವ ವೀಡಿಯೋ ತುಣುಕನ್ನು ಸ್ಟಾರ್‌ಸ್ಪೋಟ್ಸ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ನಾನು ಬೆಂಗಳೂರಿನ ಹುಡುಗಿ, ಕರ್ನಾಟಕದ ಹುಡುಗಿ, ಈ ಸಲ ಕಪ್‌ ನಮ್ದೆ ಎಂಬ ಘೋಷಣೆ ಕೇಳುತ್ತಲೇ ಇದ್ದೇನೆ. ನನ್ನ ನೆಚ್ಚಿನ ತಂಡ ಸಹ ಆರ್‌ಸಿಬಿ, ಈಬಾರಿಯಾದರು ಕಪ್‌ ಗೆಲ್ಲಬೇಕೆಂಬುದು ನಮ್ಮೆಲ್ಲರ ಆಸೆ. ಹಾಗೆಯೇ ವಿರಾಟ್‌ ಕೊಹ್ಲಿ (Virat Kohli) ಸರ್‌ ನನ್ನ ಫೇವ್ರೆಟ್‌ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

16ನೇ ಐಪಿಎಲ್‌ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲೇ ರಶ್ಮಿಕಾ ಭರ್ಜರಿ ನೃತ್ಯ ಪ್ರದರ್ಶನ ನೀಡಿದ್ದರು.

]]>
1062092 0 0 0
<![CDATA[ಕಾಂಗ್ರೆಸ್‍ನ ಗ್ಯಾರಂಟಿಗಳು ಮೆಹಂದಿಯಷ್ಟೇ ಗ್ಯಾರಂಟಿ: ಸುಧಾಕರ್ ವ್ಯಂಗ್ಯ]]> https://publictv.in/congress-guarantees-are-like-mehandi-says-sudhakar/ Mon, 01 May 2023 15:19:58 +0000 https://publictv.in/?p=1062097 ಚಿಕ್ಕಬಳ್ಳಾಪುರ: ಬಿಜೆಪಿ ಪ್ರಣಾಳಿಕೆ (BJP Manifesto) ಗಳ ಬಗ್ಗೆ ಕಾಂಗ್ರೆಸ್ (Congress) ನಾಯಕರ ಟೀಕೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ (Sudhakar) ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‍ನ ಗ್ಯಾರಂಟಿಗಳನ್ನ ಮೆಹಂದಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನ ಜನ ನಂಬಲು ತಯಾರಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗಾಗಿ ಏನೂ ಮಾಡಲಿಲ್ಲ. ಕೃಷಿ ಸಮ್ಮಾನ್, ಆಯುಷ್ಮಾನ್, ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದು ಯಾರು? ಬಿಜೆಪಿ ಮೇಲೆ ಭರವಸೆ ಇದೆ. ನರೇಂದ್ರ ಮೋದಿ (Narendra Modi) ಯೇ ಜನರಿಗೆ ಭರವಸೆ. ಡಿಕೆಶಿ (DK Shivakumar), ಸಿದ್ದರಾಮಯ್ಯ (Siddaramaiah), ರಾಹುಲ್ ಗಾಂಧಿ (Rahul Gandhi) ಮಾತು ಜನ ಕೇಳೋಕೆ ತಯಾರಿಲ್ಲ ಎಂದರು. ಇದನ್ನೂ ಓದಿ: ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ 830 ಕೋಟಿ ಖರ್ಚಾಗಿದೆ ಎಂದ ಆಪ್ ಮುಖ್ಯಸ್ಥನ ವಿರುದ್ಧ ಕೇಸ್

ಈ ವೇಳೆ ನರೇಂದ್ರ ಮೋದಿ ನಾಲಾಯಕ್ ಎಂಬ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಈ ಮಾತು ಪ್ರಿಯಾಂಕ್ ಖರ್ಗೆಯವರಿಗೆ ಸೂಕ್ತ ಎಂದರು ಇನ್ನು ಬಿಜೆಪಿಗೆ ಕೇವಲ 40 ಸೀಟು ಮಾತ್ರ ಕೊಡಿ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಾಪ 2019 ರಲ್ಲಿ ಇಡೀ ದೇಶ ಸಂಚಾರ ಮಾಡಿ 44 ಸೀಟು ತಂದ ರೆಕಾರ್ಡ್ ಅವರದ್ದು. ಅವರ ರೆಕಾರ್ಡ್ ಬಗ್ಗೆ ಈಗ ಅವರೇ ಮಾತಾಡ್ತಿದ್ದಾರೆ ಅಂತ ವ್ಯಂಗ್ಯವಾಡಿದರು.

ನೆಹರು ಕುಟುಂಬದ 4ನೇ ಕುಡಿ 400 ಸೀಟಿಂದ 44 ಸೀಟಿಗೆ ತಂದವರು ರಾಹುಲ್ ಗಾಂಧಿ. 100 ಸೀಟಿಂದ 330ಕ್ಕೆ ತಗೊಂಡು ಹೋದವರು ನರೇಂದ್ರ ಮೋದಿ. ಪಾಪ ರಾಹುಲ್ ಗಾಂಧಿಗೆ ಸಲಹೆಗಾರರು ಸರಿ ಇಲ್ಲ. ಸಲಹೆಗಾರರಾಗಿ ನನ್ನಂತವನನ್ನ ಇಟ್ಕೊಳೋಕೆ ಹೇಳಿ. ವಾಸ್ತವಕ್ಕೆ ಹತ್ತಿರ ಮಾತಾಡಬೇಕು ಎಂದರು.

]]>
1062097 0 0 0
<![CDATA[ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ - ಬ್ರಿಜ್‌ಭೂಷಣ್ ಭಾವುಕ ಹೇಳಿಕೆ]]> https://publictv.in/hang-me-but-dont-stop-wrestling-says-brij-bhushan-sharan-singh/ Mon, 01 May 2023 15:38:32 +0000 https://publictv.in/?p=1062106 ನವದೆಹಲಿ: ಕುಸ್ತಿಪಟುಗಳಿಂದ (Wrestlers) ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ಭಾವುಕ ಹೇಳಿಕೆಯೊಂದನ್ನ ನೀಡಿದ್ದಾರೆ.

ಕಳೆದ 4 ತಿಂಗಳಿನಿಂದ ಕುಸ್ತಿ ಕ್ರೀಡೆ ಸ್ಥಗಿತಗೊಂಡಿದೆ. ನನ್ನನ್ನ ಗಲ್ಲಿಗೇರಿಸಿದರೂ ಏರಲು ಸಿದ್ಧನಿದ್ದೇನೆ. ನನ್ನ ನೇಣಿಗೆ ಬೇಕಾದರೂ ಹಾಕಿ ಆದ್ರೆ ಕುಸ್ತಿ ಚಟುವಟಿಕೆ ಮಾತ್ರ ನಿಲ್ಲಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ

ಟಾಪ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಸಾಕ್ಷಿ ಮಲಿಕ್ ಮತ್ತು ಭಜರಂಗ್ ಪೂನಿಯಾ (Bajrang Punia) ಸೇರಿದಂತೆ ಹಲವು ಮಂದಿ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಿ, ಫೆಡರೇಶನ್‌ನಿಂದ ಹೊರಹಾಕುವಂತೆ ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದಾರೆ. ಅಧ್ಯಕ್ಷರು ಮಹಿಳಾ ಗ್ರಾಫ್ಲರ್‌ಗಳನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹಲವು ದಿನಗಳಿಂದ ಪ್ರತಿಭಟನೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಂಪಿಯನ್‌ಶಿಪ್‌ ಸೇರಿದಂತೆ ಇನ್ನಿತರ ಶಿಬಿರಗಳು ಬಂದ್‌ ಆಗಿವೆ.

ಈ ಕುರಿತು ಸೋಮವಾರ ಮಾತನಾಡಿರುವ ಬ್ರಿಜ್‌ ಭೂಷಣ್‌, ಕುಸ್ತಿ ಚಟುವಟಿಕೆಯನ್ನು ನಿಲ್ಲಿಸುವುದು ಕೆಡೆಟ್ ಮತ್ತು ಜೂನಿಯರ್ ಕುಸ್ತಿಪಟುಗಳ ಭವಿಷ್ಯಕ್ಕೆ ಹಾನಿಕಾರಕವಾಗಿದೆ. ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ. ಹೊಸ ಕೆಡೆಟ್‌ಗಳಿಗೆ ಅವಕಾಶ ನೀಡಿ. ಸರ್ಕಾರ ಅಥವಾ ಡಬ್ಲ್ಯೂಎಫ್‌ಐ ನಿಂದ ಯಾರೇ ಕುಸ್ತಿ ಚಟುವಟಿಕೆಗಳನ್ನು ಆಯೋಜಿಸಿದರೂ ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಇಂದು ಸುಪ್ರೀಂ ನಲ್ಲಿ ವಿಚಾರಣೆ

ಈ ಮೊದಲು ಯಾವುದೇ ಕಾರಣಕ್ಕೂ ತಮ್ಮ ಸ್ಥಾನವನ್ನು ತೊರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ಭೂಷಣ್‌, ಇದೀಗ ಪ್ರತಿಭಟನಾಕಾರರು ಶಾಂತಿಯುತವಾಗಿ ಮನೆಗೆ ಹಿಂದಿರುಗಿದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ. ಆದ್ರೆ ಕುಸ್ತಿಪಟುಗಳು ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

ಏನಿದು ಕೇಸ್? ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಡಬ್ಲ್ಯುಎಫ್‌ಐ ಅಧಿಕಾರಿಗಳು ಅಥ್ಲೀಟ್‌ಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿವಿಧ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಈ ವರ್ಷದ ಆರಂಭದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಡಬ್ಲ್ಯುಎಫ್‌ಐ ಅಧ್ಯಕ್ಷರನ್ನ ಕೆಲಸದಿಂದ ವಜಾಗೊಳಿಸುವವರೆಗೆ ನಾವು ಯಾವುದೇ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದೂ ಘೋಷಿಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವರು ಪ್ರತಿಭಟನಾನಿರತ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದಾದ ಬಳಿಕ ಕುಸ್ತಿಪಟುಗಳು ಪ್ರತಿಭಟನೆ ಕೈಬಿಟ್ಟಿದ್ದರು. ಇದೀಗ ಮತ್ತೆ ಪ್ರತಿಭಟನೆಗಿಳಿದಿರುವ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆಹೋದ ಬಳಿಕ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿ 7 ಮಹಿಳೆಯರಿಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಿದ್ದಾರೆ. ತನಿಖೆ ಮುಂದುವರಿದಿದೆ.

]]>
1062106 0 0 0
<![CDATA[ವೋಟ್‌ ಹಾಕಿ ಸೈ ಎನಿಸಿಕೊಂಡ 104ರ ವೃದ್ಧೆ - ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಶುರು]]> https://publictv.in/104-year-old-woman-voting-in-uttar-kannada/ Mon, 01 May 2023 16:04:05 +0000 https://publictv.in/?p=1062110 ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ (Voting) ಪ್ರಾರಂಭವಾಗಿದೆ. ಅರ್ರೆ ಮೇ 10ಕ್ಕೆ ಮತದಾನ ಅಲ್ವೆ ಎಂದು ನೀವು ಹೇಳಬಹುದು.

ಚುನಾವಣಾ ಆಯೋಗ ಇದೇ ಮೊದಲಬಾರಿಗೆ ರಾಜ್ಯದಲ್ಲಿ ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಯೋವೃದ್ಧರು ತಮ್ಮ ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನದ ಪ್ರಕ್ರಿಯೆಯನ್ನು ಏಪ್ರಿಲ್ 29 ರಿಂದ ಪ್ರಾರಂಭಿಸಲಾಗಿದ್ದು, ಮೇ 6 ರಂದು ಕೊನೆಗೊಳ್ಳಲಿದೆ. ಇದನ್ನೂ ಓದಿ: ಧರ್ಮ, ಜಾತಿ ವಿಭಜನೆ ಬಿಜೆಪಿಗೆ ಲಾಭ, ಜನರಿಗಲ್ಲ: ಪ್ರಿಯಾಂಕಾ ಗಾಂಧಿ

104ರ ವೃದ್ಧೆ ಮತದಾನ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹಿತ್ಲಳ್ಳಿ ಗ್ರಾಮದ 104ರ ವೃದ್ಧೆ ಸುಬ್ಬಿ ಗೋಪಾಲಕೃಷ್ಣ ಭಟ್ ಅವರು ತಮ್ಮ ಮನೆಯಿಂದಲೇ ಮತವನ್ನು ಚಲಾಯಿಸಿದ್ದು ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಮತದಾರರು ಇವರಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಭ್ರಷ್ಟ ನಾಯಕರನ್ನು ಜೈಲಿಗೆ ಕಳುಹಿಸುತ್ತೇವೆ: ಬಿಕೆ ಹರಿಪ್ರಸಾದ್

ಜಿಲ್ಲೆಯಲ್ಲಿ ಎಷ್ಟಿದ್ದಾರೆ ಮತದಾರರು? * ಅಂಗವಿಕಲ ಮತದಾರರ ಸಂಖ್ಯೆ- 14,724 * 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ - 27,399

ಎಲ್ಲಿ ಎಷ್ಟು ಮತದಾನ ? * 80 ವರ್ಷ ಮೇಲ್ಪಟ್ಟವರಲ್ಲಿ ಮತಚಲಾಯಿಸಿದವರ ಸಂಖ್ಯೆ- 681 * ಅಂಗವಿಕಲರು ಚಲಾಯಿಸಿದ ಮತಗಳು- 176 * ಒಟ್ಟುಮತದಾನ - 857

]]>
1062110 0 0 0
<![CDATA[ದಿನ ಭವಿಷ್ಯ 02-05-2023]]> https://publictv.in/daily-horoscope-02-05-2023/ Tue, 02 May 2023 00:13:21 +0000 https://publictv.in/?p=1061933 ಸಂವತ್ಸರ : ಶೋಭಕೃತ್ ಋತು : ವಸಂತ ಅಯನ : ಉತ್ತರಾಯಣ ಮಾಸ : ವೈಶಾಖ ಪಕ್ಷ : ಶುಕ್ಲ ತಿಥಿ : ದ್ವಾದಶೀ ನಕ್ಷತ್ರ : ಉತ್ತರಾ ರಾಹುಕಾಲ - ಮಧ್ಯಾಹ್ನ 03:25 ರಿಂದ 5:00ರವರೆಗೆ ಗುಳಿಕಕಾಲ - ಮಧ್ಯಾಹ್ನ 12:16 ರಿಂದ 01:51ವರೆಗೆ ಯಮಗಂಡಕಾಲ - ಬೆಳಗ್ಗೆ 09:07 ರಿಂದ 10:42 ವರೆಗೆ ಮೇಷ: ವ್ಯಾಪಾರಿಗಳಿಗೆ ಲಾಭ, ವಾಹನದಲ್ಲಿ ಎಚ್ಚರ, ಉದ್ಯಮಿಗಳಿಗೆ ಶ್ರಮ ವೃಷಭ: ಆರ್ಥಿಕತೆಯಲ್ಲಿ ಸುಧಾರಣೆ, ಉದ್ಯೋಗ ಬದಲಿಸದಿರಿ, ಸಾಲ ನೀಡದಿರಿ ಮಿಥುನ: ವಿಗ್ರಹ ವ್ಯಾಪಾರಿಗಳಿಗೆ ಆದಾಯ, ಮರಗೆಲಸದಲ್ಲಿ ಲಾಭ, ಸಮಸ್ಯೆ ಬಗೆಹರಿಸುವ ಪ್ರಯತ್ನ ಕರ್ಕಾಟಕ: ವೈವಾಹಿಕ ಜೀವನದಲ್ಲಿ ಮಧ್ಯಮ, ಸರ್ಕಾರಿ ವಲಯದಲ್ಲಿ ಗೌರವ, ವಿವಾದದಿಂದ ದೂರವಿದೆ ಸಿಂಹ: ಜನಸೇವಾಧಾರಿತ ಕೆಲಸದಲ್ಲಿ ಆದಾಯ, ವಾಣಿಜ್ಯ ಬೆಳೆಗಾರರಿಗೆ ಲಾಭ, ದೈವ ಕಾರ್ಯದಲ್ಲಿ ಆಸಕ್ತಿ ಕನ್ಯಾ: ಸಭೆ ಸಮಾರಂಭಗಳ ಅನುಷ್ಠಾನ, ಆಂತರಿಕ ಶತ್ರುಗಳ ಕಿರಿಕಿರಿ, ಹಣಕಾಸಿನ ಸಮಸ್ಯೆ ತುಲಾ : ವ್ಯವಹಾರದಲ್ಲಿ ನಷ್ಟ, ವಧು-ವರಾನ್ವೇಷಣೆ ಕೇಂದ್ರದವರೆಗೆ ಆದಾಯ, ದ್ರವ ಪದಾರ್ಥಗಳ ವ್ಯಾಪಾರದಲ್ಲಿ ಲಾಭ ವೃಶ್ಚಿಕ: ಗಾಯಗೊಳ್ಳುವ ಸಂಭವ, ಆಸ್ತಿ ಖರೀದಿಯ ಯೋಚನೆ, ಮಾತಿನಲ್ಲಿ ಎಚ್ಚರ ಧನಸ್ಸು: ಆರೋಗ್ಯದಲ್ಲಿ ಸ್ಥಿರತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಧ್ಯಮದವರಿಗೆ ಕೆಲಸದಿಂದ ಆದಾಯ ಮಕರ: ಸರ್ಕಾರಿ ಅಧಿಕಾರಿಗಳಿಗೆ ಒತ್ತಡ, ವಸ್ತುಗಳ ನವೀಕರಣದಿಂದ ಲಾಭ, ಹೂಡಿಕೆಯಿಂದ ಲಾಭ ಕುಂಭ: ರೈತರಿಗೆ ಶುಭ, ಆಹಾರದಲ್ಲಿ ಎಚ್ಚರ, ಮದುವೆಯ ಯೋಗವಿದೆ ಮೀನ: ಪಶುಸಂಗೋಪನೆಯಲ್ಲಿ ಆದಾಯ, ಸ್ವಂತ ವ್ಯಾಪಾರದಲ್ಲಿ ಯಶಸ್ಸು, ಪರಿಸರ ಕಾಳಜಿಯಲ್ಲಿ ಆಸಕ್ತಿ]]> 1061933 0 0 0 <![CDATA[ರಾಜ್ಯದ ಹವಾಮಾನ ವರದಿ: 02-05-2023]]> https://publictv.in/karnataka-weather-report-02-05-2023/ Tue, 02 May 2023 00:30:01 +0000 https://publictv.in/?p=1062020 ಭಾನುವಾರ ತಡರಾತ್ರಿ ಬೆಂಗಳೂರು ನಗರದಲ್ಲಿ ಮಳೆಯಾಗಿದ್ದು, 2 ಸೆಂ.ಮೀ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಹಾಗೂ ಬೆಂಗಳೂರಿನಲ್ಲಿ ಮಳೆಯ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಇನ್ನು ಮೂರು ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ: ಬೆಂಗಳೂರು: 28-21 ಮಂಗಳೂರು: 33-27 ಶಿವಮೊಗ್ಗ: 35-22 ಬೆಳಗಾವಿ: 34-19 ಮೈಸೂರು: 31-22 ಮಂಡ್ಯ: 31-22

ಮಡಿಕೇರಿ: 27-17 ರಾಮನಗರ: 31-22 ಹಾಸನ: 31-20 ಚಾಮರಾಜನಗರ: 30-22 ಚಿಕ್ಕಬಳ್ಳಾಪುರ: 28-20

ಕೋಲಾರ: 28-22 ತುಮಕೂರು: 31-21 ಉಡುಪಿ: 34-26 ಕಾರವಾರ: 34-26 ಚಿಕ್ಕಮಗಳೂರು: 30-19 ದಾವಣಗೆರೆ: 35-22

ಹುಬ್ಬಳ್ಳಿ: 36-21 ಚಿತ್ರದುರ್ಗ: 33-21 ಹಾವೇರಿ: 36-22 ಬಳ್ಳಾರಿ: 34-24 ಗದಗ: 36-22 ಕೊಪ್ಪಳ: 35-23

ರಾಯಚೂರು: 33-24 ಯಾದಗಿರಿ: 33-23 ವಿಜಯಪುರ: 35-23 ಬೀದರ್: 31-22 ಕಲಬುರಗಿ: 34-23 ಬಾಗಲಕೋಟೆ: 36-23

]]>
1062020 0 0 0
<![CDATA[ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ]]> https://publictv.in/rangeela-barfi-recipe/ Tue, 02 May 2023 02:30:56 +0000 https://publictv.in/?p=1062025 ಸಿಹಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಸಿಹಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಕಡಿಮೆ ಸಮಯದಲ್ಲಿ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ನಮ್ಮ ರೆಸಿಪಿಯ ಹೆಸರು ರಂಗೀಲಾ ಬರ್ಫಿ. ಹಾಗಿದ್ದರೆ ಇದನ್ನು ಹೇಗೆ ಮಾಡೋದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್

ಬೇಕಾಗುವ ಸಾಮಗ್ರಿಗಳು: ಹಾಲಿನ ಪೌಡರ್- 2 ಕಪ್ ಹಾಲು- 1 ಕಪ್ ಸಕ್ಕರೆ- ಅರ್ಧ ಕಪ್ ತುಪ್ಪ- ಅರ್ಧ ಕಪ್ ಕಲರ್ ಪೌಡರ್- ಸ್ವಲ್ಪ ಏಲಕ್ಕಿ ಪುಡಿ- ಸ್ವಲ್ಪ

ಮಾಡುವ ವಿಧಾನ:

  • ಮೊದಲಿಗೆ ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಅದನ್ನು ಕರಗಿಸಿಕೊಳ್ಳಿ. ಬಳಿಕ ಅದಕ್ಕೆ ಹಾಲನ್ನು ಹಾಕಿ ಚನ್ನಾಗಿ ತಿರುವಿಕೊಳ್ಳಬೇಕು.
  • ಬಳಿಕ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾಲಿನ ಪೌಡರ್ ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವು ಮಂದವಾಗುತ್ತಾ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿಕೊಂಡು ತಿರುವಿಕೊಳ್ಳಿ.
  • ನಂತರ ಆ ಮಿಶ್ರಣವನ್ನು ಒಂದು ಬೌಲಿಗೆ ಹಾಕಿಕೊಂಡು ಅದಕ್ಕೆ ಕಲರ್ ಪೌಡರ್ ಸೇರಿಸಿಕೊಳ್ಳಿ. ಬಳಿಕ ಒಂದು ಟ್ರೇ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಳ್ಳಿ. ಬೇಕಿಂಗ್ ಪೇಪರ್ ಕೂಡಾ ಬಳಸಿಕೊಳ್ಳಬಹುದು.
  • ಬಳಿಕ ಆ ಟ್ರೇಗೆ ಮಿಶ್ರಣವನ್ನು ಹಾಕಿಕೊಂಡು ಎಲ್ಲಾ ಕಡೆ ಹರಡಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಬಾದಾಮಿ ಪೀಸ್‌ಗಳಿಂದ ಅಲಂಕರಿಸಿ. ರಂಗೀಲಾ ಬರ್ಫಿ ತಿನ್ನಲು ರೆಡಿ. ಇದನ್ನೂ ಓದಿ: ದೇಹಕ್ಕೆ, ಮನಸ್ಸಿಗೆ ಮುದನೀಡುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್

]]>
1062025 0 0 0
<![CDATA[ಉಚಿತ ಘೋಷಣೆಗಳ ಬಗ್ಗೆ ಮೋದಿ ದಿನಾ ಜಾಗಟೆ ಹೊಡೀತಿದ್ರು, ಈಗ ಅನುಮತಿ ಯಾರು ಕೊಟ್ರು?: ಹೆಚ್‌ಡಿಕೆ]]> https://publictv.in/narendra-modi-was-opposed-to-free-announcements-now-who-gave-permission-to-bjp-hd-kumaraswamy/ Mon, 01 May 2023 16:23:56 +0000 https://publictv.in/?p=1062116 ಯಾದಗಿರಿ: ಬಿಜೆಪಿಯ (BJP) ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್. ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ತರೋಕೆ ಅವಕಾಶ ಇತ್ತಲ್ವಾ? ಆಗ ಯಾಕೆ ತರಲಿಲ್ಲ? ಹಾಲು ಕೊಡೋದು ಆಗಲೇ ಮಾಡಬಹುದಿತ್ತಲ್ವಾ? ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿನಾ ಜಾಗಟೆ ಹೊಡೆಯುತ್ತಿದ್ದರು. ಫ್ರೀ ಕೊಡಬಾರದು ಅಂತ ಮೋದಿನೇ ಹೇಳುತ್ತಿದ್ದರು. ಈಗ ಅವರಿಗೆ ಘೋಷಣೆ ಮಾಡಲು ಅನುಮತಿ ಯಾರು ಕೊಟ್ರು? ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿಗೆ ಸವಾಲು ಹಾಕಿದ್ದಾರೆ.

ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ನಗರದಲ್ಲಿ ಮಾತನಾಡಿದ ಹೆಚ್‌ಡಿಕೆ, ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಡೂಪ್ಲಿಕೇಟ್ ಅಂತ ಚರ್ಚೆ ಮಾಡುತ್ತಿದ್ದರು. ಹಾಗಿದ್ದರೆ ಇವರದ್ದು ಏನು? ಮೂರುವರೆ ವರ್ಷ ಅಧಿಕಾರದಲ್ಲಿದ್ರು. ಗ್ಯಾಸ್ ಬೆಲೆ ಹೆಚ್ಚಾಗಿದೆ. ಅವಾಗ ಯಾಕೆ ಕಮ್ಮಿ ಮಾಡಲಿಲ್ಲ? ಮೂರುವರೆ ವರ್ಷದಲ್ಲಿ ಹಣ ಲೂಟಿ ಮಾಡೋದು ಬಿಟ್ಟು ಜನಸಾಮಾನ್ಯರ ಬಗ್ಗೆ ನೋಡಲಿಲ್ಲ. ಬರೀ ಜನರ ಜೊತೆ ಚೆಲ್ಲಾಟವಾಡಿದರು. ಈಗ 2 ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಬಗ್ಗೆ ಜನರಲ್ಲಿ ಭ್ರಮನಿರಸನವಿದೆ ಎಂದರು.

ಎನ್‌ಕೌಂಟರ್ ಮಾಡಲಾಗುತ್ತೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ತರಹ ಆದರೆ ಮೊದಲು ಯತ್ನಾಳ್ ಅವರಿಗೆ ಎನ್‌ಕೌಂಟರ್ ಮಾಡಬೇಕಲ್ವಾ? ಅವರ ಪಕ್ಷದಲ್ಲಿ ಯಾರ್ ಯಾರು ಏನೇನು ಮಾತಾಡಿಕೊಂಡಿದ್ದಾರೆ? ನಿರಾಣಿ ಬಗ್ಗೆ ಯತ್ನಾಳ್, ಯತ್ನಾಳ್ ಬಗ್ಗೆ ನಿರಾಣಿ ಏನೇನೋ ಮಾತಾಡಿಕೊಂಡಿಲ್ವಾ? ಮೊದಲು ಇವೆಲ್ಲ ಅವರ ಮೇಲೆ ಮಾಡಬೇಕಲ್ವಾ? ನಾನು ಆ ತರಹದ ಪದಗಳನ್ನು ಬಳಕೆ ಮಾಡಲ್ಲ. ನಾನು ತಮಾಷೆಗೆ ಹೇಳಿದ್ದೇನೆ. ನಾನು ಆ ಮಟ್ಟಕ್ಕೆ ಇಳಿಯಲ್ಲ ಎಂದು ಕುಮಾರಸ್ವಾಮಿ ತಮ್ಮ ಮಾತನ್ನು ಸರಿಪಡಿಸಿಕೊಂಡರು.

ಇಂದು ಸಮಾಜ ಒಡೆಯುವಂತಹ ಕೆಲಸ ಮಾಡುತ್ತಿರುವುದು ಅವರು. ಹಿಂದೂ ಎಂದರೆ ಅರ್ಥ ಏನು ಅಂತ ಯತ್ನಾಳ್ ಅವರು ಹೇಳಬೇಕಲ್ಲ? ಬಿಜೆಪಿಯ ಹಿಂದುತ್ವವಾದಕ್ಕೂ ನಮ್ಮ ದೇಶದ ಸಂಸ್ಕೃತಿ ಹಿಂದುತ್ವವಾದಕ್ಕೂ ವ್ಯತ್ಯಾಸವಿದೆ. ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವ ಸಂದೇಶ ಕೋಡೋದು ಹಿಂದೂ ಧರ್ಮ. ಸಮಾಜ ಹಾಳು ಮಾಡು ಅಂತ ಹೇಳಿಕೊಡುವ ಧರ್ಮ ಅಲ್ಲ. ಇದು ಹಿಂದೂ ಧರ್ಮದ ಹೆಸರಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅಮಾಯಕ ಯುವಕರನ್ನು ಬಲಿ ತೆಗೆದುಕೊಳ್ಳೋದಕ್ಕೆ ಹಿಂದೂ ಧರ್ಮ ಹೇಳಿಲ್ಲ. ಅಧಿಕಾರ ಹಿಡಿಯೋದಕ್ಕೆ ಇವರು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ ಗ್ಯಾರಂಟಿಗಳು ಮೆಹಂದಿಯಷ್ಟೇ ಗ್ಯಾರಂಟಿ: ಸುಧಾಕರ್ ವ್ಯಂಗ್ಯ

ನಾಡಿನ ಜನತೆ ನೆಮ್ಮದಿಯಿಂದ ಬದುಕಲು ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ. 5 ವರ್ಷ ಅಧಿಕಾರ ಕೊಡಿ ಎಂದು ಕೇಳುತ್ತಿದ್ದೇನೆ ಏಕೆಂದರೆ, ಸಮಾಜದಲ್ಲಿ ಅಶಾಂತಿಯ ವಾತಾವರಣ ಬರದೆ ಜನ ನೆಮ್ಮದಿಯಿಂದ ಬದುಕಬೇಕು ಅನ್ನೋದು ನಮ್ಮ ಕಾರ್ಯಕ್ರಮದ ಉದ್ದೇಶ. ಮೋದಿ ಹೇಳುತ್ತಾರೆ, ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕಾಂಗ್ರೆಸ್‌ಗೆ ಹಾಕಿದ ಹಾಗೆ ಅಂತ. ಇತ್ತ ಸಿದ್ದರಾಮಯ್ಯನವರು ಜೆಡಿಎಸ್‌ಗೆ ವೋಟ್ ಹಾಕಿದ್ರೆ ವೇಸ್ಟ್ ಆಗುತ್ತೆ ಅಂತ ಹೇಳ್ತಾರೆ. ನಾನು ಹೇಳುತ್ತೇನೆ, ಜೆಡಿಎಸ್‌ಗೆ ನೀಡುವ ಮತ ಕನ್ನಡ ನಾಡಿಗೆ ಹಿತ ಅಂತ ನುಡಿದರು. ಇದನ್ನೂ ಓದಿ: ನನ್ನ ಆತ್ಮೀಯರ ಮೇಲೆ ಐಟಿ ರೇಡ್ ಮಾಡುವ ಹುನ್ನಾರ ನಡೆದಿದೆ: ವಿನಯ್ ಕುಲಕರ್ಣಿ

]]>
1062116 0 0 0
<![CDATA[ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ - ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌]]> https://publictv.in/ek-ladka-patwa-do-virat-rcb-fans-poster-virtal/ Mon, 01 May 2023 16:48:18 +0000 https://publictv.in/?p=1062118 ಲಕ್ನೋ: ‌ಐಪಿಎಲ್‌ (IPL 2023) ಹಬ್ಬದಲ್ಲಿ ಪ್ರತಿದಿನವೂ ಒಂದೊಂದು ವಿಶೇಷತೆಗಳು ಕಂಡುಬರ್ತಿದೆ. ಅದರಲ್ಲೂ ಆರ್‌ಸಿಬಿ (RCB) ಮ್ಯಾಚ್‌ ಇದ್ದರೆ ಅಭಿಮಾನಿಗಳಂತೂ ಸುದ್ದಿಯಲ್ಲೇ ಇರ್ತಾರೆ.

ಸೋಮವಾರ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ ನಡೆಯುತ್ತಿದ್ದ ಪಂದ್ಯದ ವೇಳೆ ಯುವತಿಯರಿಬ್ಬರು ʻಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ʼ ಅಂತಾ ಪೋಸ್ಟರ್‌ ಹಿಡಿದುಕೊಂಡು ಸುದ್ದಿಯಾಗಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ. ಇದನ್ನೂ ಓದಿ: ನಮ್ಮ ಬ್ಲಡ್‌ ಗ್ರೂಪ್‌ RCB ಪಾಸಿಟಿವ್‌ – ಫ್ಯಾನ್ಸ್‌ ಪೋಸ್ಟರ್‌ ವೈರಲ್‌

ಕೆಕೆಆರ್‌ (KKR) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಫ್ಯಾನ್ಸ್‌ ʻನಮ್ಮದು ಆರ್‌ಸಿಬಿ ಬ್ಲಡ್‌ ಗ್ರೂಪ್‌ʼ ಅಂತಾ ಪೋಸ್ಟರ್‌ ಹಿಡಿದುಕೊಂಡಿದ್ದರು. ಇದು ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಇಬ್ಬರು ಯುವತಿಯರು ಒಂದು ಹುಡುಗನನ್ನ ಹುಡುಕಿಕೊಡುವಂತೆ ರಿಕ್ವೆಸ್ಟ್‌ ಮಾಡಿದ್ದಾರೆ. ಯುವತಿಯರ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 126 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

]]>
1062118 0 0 0
<![CDATA[ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ಬೇಕು - ತುಳುನಾಡಿನ ದೈವ, ದೇವರ ಮೊರೆ ಹೋದ ಹೆಚ್‌ಡಿಡಿ]]> https://publictv.in/karnataka-election-2023-hd-kumaraswamy-should-be-cm-again-hd-deve-gowda-visited-tulunad/ Mon, 01 May 2023 16:59:47 +0000 https://publictv.in/?p=1062119 ಮಂಗಳೂರು: ತನ್ನ ಮಗ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಮಾಜಿ ಪ್ರಧಾನಿ, ಮಣ್ಣಿನ ಮಗ ಕಾಲಿಗೆ ಚಕ್ರ ಕಟ್ಟಿ ತಿರುಗಾಡುತ್ತಿದ್ದಾರೆ. ತನ್ನ ಇಳಿ ವಯಸ್ಸಿನಲ್ಲೂ ಆರೋಗ್ಯವನ್ನು ಲೆಕ್ಕಿಸದೆ ಮಗನಿಗಾಗಿ ಶ್ರಮಿಸುತ್ತಿದ್ದಾರೆ. ಇದರ ಜೊತೆಗೆ ತುಳುನಾಡಿನ ದೈವ-ದೇವರ ಮೊರೆ ಹೋದ ಮಾಜಿ ಪ್ರಧಾನಿ ಹರಕೆಯನ್ನೂ ಹೊತ್ತಿದ್ದಾರೆ.

ರಾಜ್ಯದಲ್ಲಿ ಚುನಾಚಣಾ ಕಾವು ಹೆಚ್ಚಾಗುತ್ತಿದ್ದು ಯಾರು ಶಾಸಕರಾಗುತ್ತಾರೆ, ಯಾವ ಪಕ್ಷಕ್ಕೆ ಬಹುಮತ ಬರುತ್ತೆ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಜೆಡಿಎಸ್ (JDS) ವರಿಷ್ಠ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡ (HD Deve Gowda) ಮಾತ್ರ ಈ ಬಾರಿ ತನ್ನ ಮಗನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಛಲದಲ್ಲಿ ಇದ್ದಾರೆ. ಇದಕ್ಕೆಲ್ಲ ದೈವಬಲ ಬೇಕೆಂಬ ಕಾರಣಕ್ಕಾಗಿ ಇದೀಗ ದೈವ ದೇವರ ನೆಲೆಬೀಡು ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿಗೆ ಮಣ್ಣಿನ ಮಗ ಕಾಲಿಟ್ಟಿದ್ದಾರೆ.

ಮಂಗಳೂರು (Mangaluru) ಸೇರಿದಂತೆ ಕರಾವಳಿಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ ಇಲ್ಲಿ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ವರಿಷ್ಠ ದೇವೇಗೌಡ ಇಲ್ಲಿನ ದೈವ ದೇವರ ಮೊರೆ ಹೋಗಿದ್ದಾರೆ. ತನ್ನ ಮಗನನ್ನು ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿಸುವಂತೆ ದೈವ ದೇವರಲ್ಲಿ ಪ್ರಾರ್ಥಿಸಲು ಮಂಗಳೂರಿಗೆ ಬಂದಿದ್ದಾರೆ. ತನ್ನ ಆರೋಗ್ಯವನ್ನೂ ಲೆಕ್ಕಿಸದೆ ದೈವ, ದೇವರು ಹಾಗೂ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜೆಡಿಎಸ್ ಕರಾವಳಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡದ ಮಂಗಳೂರು ಉತ್ತರ ಕ್ಷೇತ್ರದಲ್ಲೇ ಮೊಯಿದ್ದೀನ್ ಬಾವಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಬಾವಾ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ದೇವೇಗೌಡರು ಬಂದಿದ್ದರು. ಇದನ್ನೂ ಓದಿ: ಉಚಿತ ಘೋಷಣೆಗಳ ಬಗ್ಗೆ ಮೋದಿ ದಿನಾ ಜಾಗಟೆ ಹೊಡೀತಿದ್ರು, ಈಗ ಅನುಮತಿ ಯಾರು ಕೊಟ್ರು?: ಹೆಚ್‌ಡಿಕೆ

ಪ್ರಚಾರ ಸಭೆಗೂ ಮೊದಲು ಬಜಪೆ ಸಮೀಪದ ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾಕ್ಕೆ ಭೇಟಿ ನೀಡಿದ್ದು ಬಳಿಕ ಅಲ್ಲಿನ ಕಾರ್ಯಕರ್ತರ ಮೂಲಕ ದೇವಿಗೆ ಹರಕೆ ಹೇಳಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾದರೆ ರಂಗಪೂಜೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದಾರೆ. ಬಳಿಕ ಅಲ್ಲೇ ಸಮೀಪದ ಪೆರಾರ ಬ್ರಹ್ಮಬಲಾಂಡಿ ದೈವಸ್ಥಾನಕ್ಕೆ ಭೇಟಿ ನೀಡಿ ಅಲ್ಲೂ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದಾರೆ. ಬಳಿಕ ಗುರುಕಂಬಳ ಹಝ್ರತ್ ಅಸ್ತ್ರಾರುದ್ದೀನ್ ಅಹ್ಲಿಯಾ ದರ್ಗಾಕ್ಕೆ ಭೇಟಿ ನೀಡಿ ಉಸ್ತಾದ್‌ರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಸಮಾವೇಶದಲ್ಲಿ ಮಾತನಾಡಿ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು. ಇದನ್ನೂ ಓದಿ: ವೋಟ್‌ ಹಾಕಿ ಸೈ ಎನಿಸಿಕೊಂಡ 104ರ ವೃದ್ಧೆ – ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಶುರು

]]>
1062119 0 0 0
<![CDATA[ಆರಂಭದಲ್ಲೇ ಗಾಯಕ್ಕೆ ತುತ್ತಾದ ಕೆ.ಎಲ್‌ ರಾಹುಲ್‌ - ಅತಿಯಾಗೆ ಭಾರೀ ನಿರಾಸೆ]]> https://publictv.in/ipl-2023-big-blow-for-gautam-gambhirs-lsg-captain-kl-rahul-suffers-injury/ Mon, 01 May 2023 17:22:17 +0000 https://publictv.in/?p=1062130 ಲಕ್ನೋ: 14ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಸೋಮವಾರ ನಡೆದ 43ನೇ ಪಂದ್ಯದಲ್ಲಿ ನಾಯಕ ಕೆ.ಎಲ್‌ ರಾಹುಲ್‌ (KL Rahul) ಆರಂಭದಲ್ಲೇ ಗಾಯಕ್ಕೆ ತುತ್ತಾಗಿ ಪಂದ್ಯದಲ್ಲಿ ಹೊರಗುಳಿದರು.

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಕೇವಲ 9 ವಿಕೆಟ್‌ ನಷ್ಟಕ್ಕೆ 126 ರನ್‌ಗಳನ್ನಷ್ಟೇ ಗಳಿಸಿತು. ಗಾಯದಿಂದ ಚೇರಿಸಿಕೊಂಡ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತೆ ನಾಯಕನಾಗಿ ಪಂದ್ಯವನ್ನ ಮುನ್ನಡೆಸಿದರು. ಆದ್ರೆ ಇದೇ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಕೆಎಲ್ ರಾಹುಲ್ ಗಾಯಕ್ಕೊಳಗಾಗಿ ಮೈದಾನದಿಂದ ಹೊರನಡೆದರು. ಇದನ್ನೂ ಓದಿ: ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

ಹೌದು, ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ 2ನೇ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ರಕ್ಷಣೆಗೆ ತೆರಳಿದ್ದ ಕೆ.ಎಲ್ ರಾಹುಲ್ ಗಾಯಕ್ಕೆ ತುತ್ತಾದರು. ಮಾರ್ಕಸ್‌ ಸ್ಟೋಯ್ನಿಸ್‌ ಎಸೆದ ಈ ಎಸೆತವನ್ನ ಡುಪ್ಲೆಸಿಸ್ ಬೌಂಡರಿಗಟ್ಟಿದರು. ಈ ಬೌಂಡರಿ ತಡೆಯಲು ಯತ್ನಿಸಿದ ರಾಹುಲ್ ಬೌಂಡರಿ ಲೈನ್ ಬಳಿಯೇ ಕುಸಿದು ಬಿದ್ದರು. ತಕ್ಷಣವೇ ಆಗಮಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಪರಿಶೀಲಿಸಿ ಕೆಎಲ್ ರಾಹುಲ್ ಅವರನ್ನು ಮೈದಾನದಿಂದ ಪೆವಿಲಿಯನ್‌ಗೆ ಕರೆದೊಯ್ದರು. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

ರಾಹುಲ್‌ ಹೊರಹೋಗುತ್ತಿದ್ದಂತೆ ಕೃನಾಲ್‌ ಪಾಂಡ್ಯ ಪಂದ್ಯದ ನಾಯಕತ್ವ ವಹಿಸಿಕೊಂಡು ಮುನ್ನಡೆಸಿದರು. ಇದರಿಂದ ಪತಿಯ ಅಮೋಘ ಪ್ರದರ್ಶನವನ್ನ ಕಣ್ತುಂಬಿಕೊಳ್ಳಲು ಬಂದಿದ್ದ ಅತಿಯಾ ಶೆಟ್ಟಿಗೆ ಭಾರೀ ನಿರಾಸೆಯಾಯಿತು.

]]>
1062130 0 0 0
<![CDATA[ಬಿಗ್ ಬುಲೆಟಿನ್ 01 May 2023 ಭಾಗ-3]]> https://publictv.in/big-bulletin-01-may-2023-part-3/ Mon, 01 May 2023 18:05:39 +0000 https://publictv.in/?p=1062149 ]]> 1062149 0 0 0 <![CDATA[ಬಿಗ್ ಬುಲೆಟಿನ್ 01 May 2023 ಭಾಗ-2]]> https://publictv.in/big-bulletin-01-may-2023-part-2/ Mon, 01 May 2023 18:07:15 +0000 https://publictv.in/?p=1062154 ]]> 1062154 0 0 0 <![CDATA[ಬಿಗ್ ಬುಲೆಟಿನ್ 01 May 2023 ಭಾಗ-1]]> https://publictv.in/big-bulletin-01-may-2023-part-1/ Mon, 01 May 2023 18:17:50 +0000 https://publictv.in/?p=1062158 ]]> 1062158 0 0 0 <![CDATA[ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ - RCBಗೆ 18 ರನ್‌ಗಳ ಭರ್ಜರಿ ಜಯ]]> https://publictv.in/indian-premier-league-rcb-won-by-18-runs/ Mon, 01 May 2023 18:20:15 +0000 https://publictv.in/?p=1062162 ಲಕ್ನೋ: ಸಂಘಟಿತ ಬೌಲಿಂಗ್‌ ದಾಳಿ ಹಾಗೂ ಉತ್ತಮ ಫೀಲ್ಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 18 ರನ್‌ಗಳ ಜಯ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 126 ರನ್‌ ಗಳನ್ನಷ್ಟೇ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ 19.5 ಓವರ್‌ಗಳಲ್ಲಿ 108 ರನ್‌ ಗಳಿಸಿ ಸರ್ವಪತನಕಂಡಿತು. ಈ ಮೂಲಕ ತವರಿನಲ್ಲೇ ಸೋತು ಮುಖಭಂಗ ಅನುಭವಿಸಿತು. ಇದನ್ನೂ ಓದಿ: ಆರಂಭದಲ್ಲೇ ಗಾಯಕ್ಕೆ ತುತ್ತಾದ ಕೆ.ಎಲ್‌ ರಾಹುಲ್‌ – ಅತಿಯಾಗೆ ಭಾರೀ ನಿರಾಸೆ

ಬೌಲಿಂಗ್‌ ಪಿಚ್‌ ಎನಿಸಿಕೊಂಡಿರುವ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಆರ್‌ಸಿಬಿ ರನ್‌ ಕದಿಯಲು ತಿಣುಕಾಡಿತ್ತು. ಕಳಪೆ ಬ್ಯಾಟಿಂಗ್‌ ಫಾರ್ಮ್‌ನಿಂದಾಗಿ ಈ ಆವೃತ್ತಿಯಲ್ಲಿ ಅತ್ಯಂತ ಕಡಿಮೆ ರನ್‌ ದಾಖಲಿಸಿತ್ತು. ಮೊದಲ ವಿಕೆಟ್‌ ಪತನಕ್ಕೆ 9 ಓವರ್‌ಗಳಲ್ಲಿ ಕೇವಲ 62 ರನ್‌ ಗಳನ್ನಷ್ಟೇ ದಾಖಲಿಸಿತ್ತು. ಮೊದಲ 10 ಓವರ್‌ಗಳಲ್ಲಿ 65 ರನ್‌ ಗಳಿಸಿದ್ದ ಆರ್‌ಸಿಬಿ, ಮುಂದಿನ 10 ಓವರ್‌ಗಳಲ್ಲಿ ಕೇವಲ 61 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದವರಲ್ಲಿ ವಿರಾಟ್‌ ಕೊಹ್ಲಿ ಹಾಗೂ ಡುಪ್ಲೆಸಿಸ್‌ ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕೈಚೆಲ್ಲಿದರು. ಇದನ್ನೂ ಓದಿ:  ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ 31 ರನ್‌, ಫಾಫ್‌ ಡು ಪ್ಲೆಸಿಸ್‌ 44 ರನ್‌ ಹಾಗೂ ದಿನೇಶ್‌ ಕಾರ್ತಿಕ್‌ 16 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ 10 ರನ್‌ ಸಹ ಗಳಿಸಲಿಲ್ಲ.

ಇತ್ತ ಚೇಸಿಂಗ್‌ ಆರಂಭಿಸಿದ ಲಕ್ನೋ ಸಹ ರನ್‌ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್‌ ಪ್ಲೇನಲ್ಲೇ 34 ರನ್‌ ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. 10ನೇ ಓವರ್‌ಗೆ 63 ರನ್‌ ಗಳಿಸಿತ್ತು. ಇನ್ನೂ 60 ಎಸೆತಗಳಲ್ಲಿ 64 ರನ್‌ಗಳ ಅಗತ್ಯವಿತ್ತು. 11ನೇ ಓವರ್‌ನಿಂದ 19ನೇ ಓವರ್‌ವರೆಗೆ ಕ್ರಮವಾಗಿ 2, 4, 1, 4, 4, 1, 8, 9, 8 ರನ್‌ ಸೇರ್ಪಡೆಯಾಯಿತು. ಗಾಯಕ್ಕೆ ತುತ್ತಾಗಿದ್ದರೂ ಕೊನೆಯಲ್ಲಿ ಕಣಕ್ಕಿಳಿದ ರಾಹುಲ್‌ ರನ್‌ ಗಳಿಸುವಲ್ಲಿ ವಿಫಲರಾದರು. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್‌ ಅವಕಾಶ ಸಿಕ್ಕರೂ ಕಾಲಿಗೆ ನೋವಾಗಿದ್ದರಿಂದ ರನ್‌ ಓಡಲು ಆಗದೇ ತಂಡವನ್ನು ಸೋಲಿ ಸುಳಿಗೆ ತಳ್ಳಿದರು. ಕೊನೆಯ ಓವರ್‌ನಲ್ಲಿ ಕೇವಲ 4 ರನ್‌ಗಳಷ್ಟೇ ಸೇರ್ಪಡೆಯಾಯಿತು.

ಲಕ್ನೋ ಸೂಪರ್‌ ಜೈಂಟ್ಸ್‌ ಪರ ಕೃಷ್ಣಪ್ಪ ಗೌತಮ್‌ 23 ರನ್‌, ಕೃನಾಲ್‌ ಪಾಂಡ್ಯ 14 ರನ್‌ ಮಾರ್ಕಸ್‌ ಸ್ಟೋಯ್ನಿಸ್‌ 13 ರನ್‌, ನವೀನ್-ಉಲ್-ಹಕ್ 13 ರನ್‌ ಗಳಿಸಿದರು.

ಲಕ್ನೋ ಸೂಪರ್‌ ಜೈಂಟ್ಸ್‌ ಪರ ನವೀನ್-ಉಲ್-ಹಕ್ 3 ವಿಕೆಟ್‌ ಪಡೆದರೆ, ರವಿ ಬಿಷ್ಣೋಯಿ, ಅಮಿತ್‌ ಮಿಶ್ರಾ ತಲಾ 2 ವಿಕೆಟ್‌ ಕಿತ್ತರು. ಕೃಷ್ಣಪ್ಪ ಗೌತಮ್‌ 1 ವಿಕೆಟ್‌ ಪಡೆದರು. ಇನ್ನೂ ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್‌, ಕರ್ಣ್ ಶರ್ಮಾ ತಲಾ ಎರಡು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ವಾನಿಂದು ಹಸರಂಗ, ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

]]>
1062162 0 0 0
<![CDATA[ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ - 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು]]> https://publictv.in/karnataka-election-2023-pm-modi-to-visit-kalaburagi-today/ Tue, 02 May 2023 03:13:36 +0000 https://publictv.in/?p=1062168 ಕಲಬುರಗಿ: ಚುನಾವಣೆಗೆ ಇನ್ನು ಕೇವಲ 8 ದಿನವಷ್ಟೇ ಬಾಕಿಯಿದ್ದು, ಇಂದು ಕಲಬುರಗಿ (Kalaburagi) ಜಿಲ್ಲೆಗೆ ಪ್ರಧಾನಿ ಮೋದಿ (PM Narendra Modi) ಎಂಟ್ರಿ ನೀಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಇರುವ ಕಲ್ಯಾಣ ಕರ್ನಾಟಕದಲ್ಲಿ ಮೋದಿ ಪ್ರಚಾರದ ಮೂಲಕ ಧೂಳೆಬ್ಬಿಸಲು ಬಿಜೆಪಿ ಪ್ಲಾನ್ ಮಾಡಿದೆ.

ಕಲಬುರಗಿ ರೋಡ್ ಶೋ ವೇಳೆ ಖರ್ಗೆಗೆ ಮತ್ತೆ ಕೌಂಟರ್ ಕೊಡಲು ಮೋದಿ ಪ್ಲಾನ್ ಮಾಡಿದ್ದು ಮತ್ತೊಮ್ಮೆ ವಿಷಸರ್ಪ ಹೇಳಿಕೆಗೆ ಮೋದಿಯಿಂದ ತಿರುಗೇಟು ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಗರಿಷ್ಠ ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಪಣ ತೊಟ್ಟಿದೆ. ಈ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯದ ಜತೆಗೆ ಎಸ್‌ಸಿ, ಎಸ್‌ಟಿ ಇತರೇ ಹಿಂದುಳಿದ ವರ್ಗಗಳ ಅಹಿಂದ ಮತಗಳು ನಿರ್ಣಾಯಕವಾಗಲಿದೆ.

  ಇಂದು ಕಲಬುರಗಿ ಬಳಿಕ, ಮೇ 6 ರಂದು ಚಿತ್ತಾಪುರಗಳಲ್ಲಿ ಮೋದಿ ಮತಬೇಟೆ ನಡೆಸಲಿದ್ದಾರೆ. ಕಲ್ಯಾಣ ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ 25 ಕೋಟೆಗಳ ವಶಕ್ಕೆ ಬಿಜೆಪಿ ತಂತ್ರ ಹೂಡಿದೆ. ಹಳೇ ಮೈಸೂರು ಬಳಿಕ ಕಲ್ಯಾಣ ಕರ್ನಾಟಕವೇ ನಮೋ ಟಾರ್ಗೆಟ್ ಆಗಿದೆ. ಕಲ್ಯಾಣ ಕರ್ನಾಟಕದ ಹಿನ್ನೆಡೆಯೂ ಬಹುಮತ ತಲುಪಲು ಅಡ್ಡಿಯಾಗಿತ್ತು.ಹೀಗಾಗಿ ಕಲ್ಯಾಣ ಭಾಗದದಲ್ಲಿ ಕಾಂಗ್ರೆಸ್ ಮತ ಬುಟ್ಟಿಗೆ ಮೋದಿ ಕೈಹಾಕಿದ್ದಾರೆ.

ಪ್ರಸ್ತುತ ಕಲ್ಯಾಣ ಕರ್ನಾಟಕದಲ್ಲಿ 40 ಕ್ಷೇತ್ರಗಳಿದ್ದು ಪ್ರಸ್ತುತ 17 ಬಿಜೆಪಿ ಶಾಸಕರಿದ್ದಾರೆ. ಈ ಬಾರಿ ಕನಿಷ್ಟ 25 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

ಎಲ್ಲಿ ಕಾರ್ಯಕ್ರಮ? ಇಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಹೊಸಪೇಟೆ, ಸಂಜೆ 4 ಗಂಟೆಗೆ ರಾಯಚೂರಿನ ಸಿಂಧನೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಕಲಬುರಗಿಯಲ್ಲಿ ರೋಡ್‌ ಶೋ ನಡೆಯಲಿದೆ.]]>
1062168 0 0 0
<![CDATA[ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ]]> https://publictv.in/stones-pelted-at-newly-launched-vande-bharat-express-in-kerala/ Tue, 02 May 2023 02:11:41 +0000 https://publictv.in/?p=1062172 ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದ ಕೇರಳದ (Kerala) ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ದಕ್ಷಿಣ ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲು ತಿರುನಾವಯ ಮತ್ತು ತಿರೂರ್ ನಡುವೆ ಸಂಚರಿಸುತ್ತಿದ್ದಾಗ ಕಲ್ಲು ತೂರಾಟ (Stones Pelted) ನಡೆದಿದೆ. ಈ ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು.

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಒಂದು ಕೋಚ್‌ನ ವಿಂಡ್‌ಶೀಲ್ಡ್ ಹಾನಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದಕ್ಷಿಣ ರೈಲ್ವೇ ತಿಳಿಸಿದೆ. ಇದನ್ನೂ ಓದಿ: ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ವಿರೂಪಗೊಳಿಸಿದ ‘ಕೈ’ ಕಾರ್ಯಕರ್ತರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಲ್ಲಿ ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು. ಕಳೆದ ಮೂರು ತಿಂಗಳಲ್ಲಿ ಕಲ್ಲು ತೂರಾಟ ನಡೆದ ಮೂರನೇ ಘಟನೆ ಇದಾಗಿದೆ.

ಈ ಹಿಂದೆ ಏಪ್ರಿಲ್ 6 ರಂದು ವಿಶಾಖಪಟ್ಟಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಮಾರ್ಚ್ 12 ರಂದು ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.

]]>
1062172 0 0 0
<![CDATA[ಮಳೆ, ಹಿಮಪಾತ - ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ]]> https://publictv.in/rain-snowfall-alert-issued-for-kedarnath-dham-pilgrims/ Tue, 02 May 2023 03:14:34 +0000 https://publictv.in/?p=1062178 ಡೆಹ್ರಾಡೂನ್: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಹಿಮಪಾತವಾಗುವ (Snowfall) ಸಾಧ್ಯತೆಯ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ಕೇದಾರನಾಥ (Kedarnath) ಯಾತ್ರಾರ್ಥಿಗಳಿಗೆ (Pilgrims) ತಿಳಿಸಲಾಗಿದೆ.

ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಅದೇ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದರು.

ಕೇದಾರನಾಥ ಧಾಮದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದೆ. ಸೋನ್‌ಪ್ರಯಾಗದಿಂದ ಬೆಳಗ್ಗೆ 10:30ರ ಬಳಿಕ ಕೇದಾರನಾಥಕ್ಕೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.

ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

]]>
1062178 0 0 0
<![CDATA[ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನ - 2 ತಿಂಗಳಲ್ಲಿ ಮೂರನೇ ಬ್ಯಾಂಕ್ ದಿವಾಳಿ]]> https://publictv.in/americas-first-republic-bank-collapses/ Tue, 02 May 2023 03:48:47 +0000 https://publictv.in/?p=1062188 ನ್ಯೂಯಾರ್ಕ್: ಸಿಲಿಕಾನ್ ವ್ಯಾಲಿ (Silicon Valley) ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ (Signature Bank) ಪತನಗೊಂಡ ಬೆನ್ನಲ್ಲೇ ಇದೀಗ ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ (First Republic Bank) ಕೂಡಾ ಪತನಗೊಂಡು ಅಮೆರಿಕಾದ (America) ಬ್ಯಾಂಕಿಂಗ್ ಕ್ಷೇತ್ರಕ್ಕೆ ಭಾರೀ ಪ್ರಮಾಣದ ಹೊಡೆತವನ್ನು ನೀಡಿದೆ.

ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಅಮೆರಿಕ ಮುಂಚೂಣಿಯಲ್ಲಿದೆ. 2 ತಿಂಗಳ ಹಿಂದಷ್ಟೆ ಅಮೆರಿಕದ ಜನಪ್ರಿಯ ಬ್ಯಾಂಕ್‌ಗಳಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೇಚರ್ ಬ್ಯಾಂಕ್‌ಗಳು ಪತನಗೊಂಡಿದ್ದವು. ಇದರಿಂದ ಗ್ರಾಹಕರಲ್ಲಿ ಮೂಡಿದ್ದ ಆತಂಕವೇ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನಕ್ಕೆ ಕಾರಣವಾಗಿದೆ. ರಿಪಬ್ಲಿಕ್ ಬ್ಯಾಂಕ್ ದಿವಳಿ ಅಂಚಿಗೆ ಸಿಲುಕಿದ ಹಿನ್ನೆಲೆ ಕ್ಯಾಲಿಫೋರ್ನಿಯಾದ ಹಣಕಾಸು ಸಂರಕ್ಷಣೆ ಹಾಗೂ ನಾವೀನ್ಯತೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ

ಸಂಕಷ್ಟಕ್ಕೆ ಸಿಲುಕಿದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಅನ್ನು ಜೆಪಿ ಮೊರ್ಗಾನ್ ಚೇಸ್ ಅಂಡ್ ಕಂಪನಿಗೆ (JPMorgan Chase & Co.) ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಆಸ್ತಿ ಮತ್ತು ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್ ಕಂಪನಿ ನೋಡಿಕೊಳ್ಳುವುದರಿಂದ ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ. ಇದನ್ನೂ ಓದಿ: ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್‌ ಶಾರ್ಪ್‌ ರಾಜೀನಾಮೆ

1985ರಲ್ಲಿ ಪ್ರಾಂಭವಾದ ರಿಪಬ್ಲಿಕ್ ಬ್ಯಾಂಕ್ ಶ್ರೀಮಂತರನ್ನು ಗುರಿಯಾಗಿರಿಸಿಕೊಂಡು ಉತ್ತಮ ಸೇವೆಗಳನ್ನು ಒದಗಿಸುತ್ತಿತ್ತು. 2000 ಇಸವಿಯ ವೇಳೆಗೆ ಅಮೆರಿಕದ 14ನೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2022ರ ವರ್ಷಾಂತ್ಯದಲ್ಲಿ ಅಮೆರಿಕದ 7 ರಾಜ್ಯಗಳಲ್ಲಿ 80 ಶಾಖೆ ಹಾಗೂ 7,000 ಸಿಬ್ಬಂದಿಯನ್ನು ಹೊಂದಿತ್ತು. ಇದನ್ನೂ ಓದಿ: ಟ್ರಂಪ್ ನನ್ನ ರೇಪ್ ಮಾಡಿದ್ದರು: ಅಮೆರಿಕನ್ ಬರಹಗಾರ್ತಿ ಆರೋಪ

ಏಪ್ರಿಲ್ 13ಕ್ಕೆ ಅನುಗುಣವಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್ 18 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ 8.4 ಲಕ್ಷ ಕೋಟಿ ರೂ. ಠೇವಣಿ ಹೊಂದಿತ್ತು. ಆದರೆ ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೇಚರ್ ಬ್ಯಾಂಕ್‌ಗಳು ಪತನಗೊಂಡ ಬಳಿಕ ಜನರು ಆತಂಕಗೊಂಡು ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನಿಂದ ತಮ್ಮ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಕೇವಲ ಒಂದು ತಿಂಗಳಲ್ಲಿ ಜನರು 8.1 ಲಕ್ಷ ಕೋಟಿ ಹಣವನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ರಿಪಬ್ಲಿಕ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಯಿತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

]]>
1062188 0 0 0
<![CDATA[ದೆಹಲಿ ಕೋರ್ಟ್‌ನಲ್ಲಿ ಗುಂಡು ಹಾರಿಸಿದ್ದ ಆರೋಪಿ ತಿಹಾರ್ ಜೈಲಿನಲ್ಲಿ ಹತ್ಯೆ]]> https://publictv.in/gangster-accused-in-delhi-court-shootout-killed-in-tihar-jail/ Tue, 02 May 2023 04:25:12 +0000 https://publictv.in/?p=1062192 ನವದೆಹಲಿ: ಕೋರ್ಟ್‌ನಲ್ಲಿ (Court) ಗುಂಡು ಹಾರಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಗ್ಯಾಂಗ್‌ಸ್ಟರ್ (Gangster) ಟಿಲ್ಲು ತಾಜ್‌ಪುರಿಯಾನನ್ನು (Tillu Tajpuriya) ಬೇರೊಂದು ಗ್ಯಾಂಗ್‌ನ ಸಹ ಕೈದಿಗಳು ಥಳಿಸಿ ಹತ್ಯೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ ತಿಹಾರ್ ಜೈಲಿನಲ್ಲಿದ್ದ (Tihar Jail) ಟಿಲ್ಲು ತಾಜ್‌ಪುರಿಯಾ ಅಲಿಯಾಸ್ ಸುನೀಲ್ ಮಾನ್‌ನನ್ನು ಮತ್ತೊಬ್ಬ ಗ್ಯಾಂಗ್‌ಸ್ಟರ್ ಯೋಗೇಶ್ ತುಂಡಾ ಹಾಗೂ ಆತನ ಸಹಚರರು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಟಿಲ್ಲುನನ್ನು ತಕ್ಷಣ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆಯೇನು? 2021ರಲ್ಲಿ ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ (Rohini Court) ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಟಿಲ್ಲು ಪ್ರಮುಖ ಆರೋಪಿಯಾಗಿದ್ದ. ನ್ಯಾಯಾಲಯದ ಒಳಗಡೆ ಇಬ್ಬರು ವಕೀಲರ ವೇಷದಲ್ಲಿ ಬಂದಿದ್ದ ಗ್ಯಾಂಗ್‌ಸ್ಟರ್‌ಗಳು ಜಿತೇಂದರ್ ಗೋಗಿ ಮೇಲೆ ಗುಂಡು ಹಾರಿಸಿ ಕೊಂದಿದ್ದರು. ಆ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಗುಂಡಿಕ್ಕಿ ಕೊಂದಿದ್ದರು. ಇದನ್ನೂ ಓದಿ: ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

ಜಿತೇಂದರ್ ಗೋಗಿ ಗ್ಯಾಂಗ್ ಹಾಗೂ ಟಿಲ್ಲು ಗ್ಯಾಂಗ್ ನಡುವೆ ಹಲವು ವರ್ಷಗಳಿಂದ ದ್ವೇಷವಿತ್ತು. ಈ ಹಿನ್ನೆಲೆ ಗುಂಡಿನ ದಾಳಿ ನಡೆಸಿದ್ದರು. ಜಿತೇಂದರ್ ಗೋಗಿ ಮೇಲೆ ಗುಂಡು ಹಾರಿಸಲು ಟಿಲ್ಲು ತಾಜ್‌ಪುರಿಯಾ ಫೋನ್ ಕಾಲ್ ಮೂಲಕ ಆರೋಪಿಗಳಿಗೆ ಸೂಚನೆಯನ್ನು ನೀಡಿದ್ದ ಎಂಬುದು ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

]]>
1062192 0 0 0
<![CDATA[ಆಡಿ ಕಾರು, ಬೈಕ್ ಮುಖಾಮುಖಿ ಡಿಕ್ಕಿ - ಬೈಕ್ ಸವಾರ ಸ್ಥಳದಲ್ಲೇ ಸಾವು]]> https://publictv.in/bike-rider-died-at-the-spot-due-to-audi-car-and-bike-accident-in-chikkamagaluru/ Tue, 02 May 2023 04:31:25 +0000 https://publictv.in/?p=1062194 ಚಿಕ್ಕಮಗಳೂರು: ಆಡಿ ಕಾರು (Audi Car) ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

ತಾಲೂಕಿನ ಹಿರೇಗೌಜ (Hiregowja) ಗೇಟ್ ಬಳಿ ಈ ಘಟನೆ ನಡೆದಿದ್ದು, ಮೃತನನ್ನು 28 ವರ್ಷದ ದರ್ಶನ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಶಶಿಕುಮಾರ್ ಎಂಬವರಿಗೆ ತೀವ್ರ ಗಾಯಗಳಾಗಿದ್ದರಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದ ಭೀಕರ ಅಪಘಾತದಿಂದ ಬೈಕಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು

ಅಪಘಾತಕ್ಕೆ ಕಾರು ಚಾಲಕನ ವೇಗವೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಸಖರಾಯ ಪಟ್ಟಣ ಪೊಲೀಸರು ಸ್ಥಳ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದಾಗಿ ನೇಣಿಗೆ ಶರಣಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ 

]]>
1062194 0 0 0
<![CDATA[ಧಾರಾಕಾರ ಸುರಿದ ಮಳೆಗೆ ಮನೆ ಕುಸಿತ - 20 ದಿನದ ಹಸುಗೂಸು, ವೃದ್ಧೆ ಸಾವು]]> https://publictv.in/house-collapses-due-to-rain-20-day-old-baby-and-woman-dead-at-koppala/ Tue, 02 May 2023 04:45:49 +0000 https://publictv.in/?p=1062201 ಕೊಪ್ಪಳ: ಕಳೆದ 2 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದು, 20 ದಿನದ ಹಸುಗೂಸು (Infant) ಹಾಗೂ ವೃದ್ಧೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ (Koppala) ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆ ಕುಸಿತದಿಂದ (House Collapse) ಹಸುಗೂಸು ಹಾಗೂ ವೃದ್ಧೆ ಫಕೀರಮ್ಮ (60) ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಗ್ಗಿನ ಜಾವ ಎಲ್ಲರೂ ಮಲಗಿದ್ದ ವೇಲೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಆಡಿ ಕಾರು, ಬೈಕ್ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಬಾಣಂತಿ ಕನಕಮ್ಮಳಿಗೆ ಗಾಯಗಳಾಗಿದ್ದು, ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿ ಸದ್ಯ ಮನೆಯ ಹೊರಗಡೆ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

]]>
1062201 0 0 0
<![CDATA[ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್]]> https://publictv.in/karnataka-election-2023-manifesto-released-by-congress/ Tue, 02 May 2023 05:06:08 +0000 https://publictv.in/?p=1062208 - ಮುಸ್ಲಿಂ ಮೀಸಲಾತಿ ಮರುಜಾರಿ

ಬೆಂಗಳೂರು: ಎಸ್‍ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್‍ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ,ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಭಜರಂಗ ದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ (Congress) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್,ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಸೇರಿ ಹಲವರು ಭಾಗಿಯಾಗಿದ್ದರು.

ಪ್ರಣಾಳಿಕೆಯಲ್ಲಿ ಏನಿದೆ?: ಬಿಜೆಪಿ ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳು ಒಂದು ವರ್ಷದಲ್ಲಿ ರದ್ದುಗೊಳಿಸುವುದರ ಜೊತೆಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್‍ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಈಗಾಗಲೇ ಘೋಷಿಸಿರುವ ಗೃಹಶಕ್ತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಜೊತೆಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ 3000ರೂ. ಪದವೀಧರರಿಗೆ, 1500 ರೂ, ಡಿಪ್ಲೊಮಾ ಪದವೀಧರರಿಗೆ ನೀಡುತ್ತೇವೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ಉಚಿತ 10 ಕೆಜಿ ಅಕ್ಕಿ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಪ್ರತಿ ಮನೆಯ ಯಜಮಾನಿಗೆ ನೀಡಲಾಗುವುದು. ಜೊತೆಗೆ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣ ಮಾಡಲಾಗುವುದು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ರದ್ದುಗೊಳಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಪಠ್ಯಪುಸ್ತಕ ಮರಳಿ ಪರಿಷ್ಕರಣೆಗೊಳಿಸಲಾಗುವುದು. ಪಿಯುಸಿಯಿಂದ ಪಿಜಿವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್, ಡಿಜಿಟಲ್ ನೋಟ್ ಪ್ಯಾಡ್ ಉಚಿತವಾಗಿ ನೀಡಲಾಗುವುದು. ಎರಡು ವರ್ಷಗಳಿಗೊಮ್ಮೆ ಹಿರಿಯ ನಾಗರಿಕರಿಗೆ ರಾಜ್ಯದ 15, ದೇಶದ 10 ಪ್ರವಾಸಿ ತಾಣಗಳಿಗೆ ಉಚಿತ ಯಾತ್ರಾ ಪ್ರವಾಸ ಮಾಡಲಾಗುವುದು. ಇದನ್ನೂ ಓದಿ: ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

ಬಿಜೆಪಿ ಒಳ ಮೀಸಲಾತಿ ರದ್ದುಗೊಳಿಸಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ ಮಾಡಲಾಗುತ್ತದೆ. ಎಸ್‍ಸಿ-ಎಸ್‍ಟಿ ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ. ಇದನ್ನೂ ಓದಿ: ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನ – 2 ತಿಂಗಳಲ್ಲಿ ಮೂರನೇ ಬ್ಯಾಂಕ್ ದಿವಾಳಿ

ಸರ್ಕಾರಿ, ಅನುದಾನಿತ ಶಾಲೆಯಲ್ಲಿ ಓದಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸ್ ಆದ ಬಾಲಕಿಯರಿಗೆ ಉಚಿತ ಎಲೆಕ್ಟ್ರಿಕ್ ವಾಹನ ಹಾಗೂ ಬುಡಕಟ್ಟು ಸಮುದಾಯದ 100 ಸಾಧಕರಿಗೆ ತಲಾ ಒಂದು ಲಕ್ಷ ಮೊತ್ತದ ಆದಿವಾಸಿ ಸಿರಿ ಗೌರವ ನೀಡಲಾಗುವುದು.

ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವರ್ಷಕ್ಕೆ 500 ಕೋಟಿ ಅನುದಾನ ನೀಡುತ್ತೇವೆ. ನೇಕಾರರಿಗೆ 10 ಗಂಟೆ ತಡೆ ರಹಿತ ಉಚಿತ ವಿದ್ಯುತ್ ಹಾಗೂ ವಿಧವೆ ಪಿಂಚಣಿ 2500 ಹೆಚ್ಚಳ ಮಾಡಲಾಗುವುದು. ದುಡಿಯುವ ಮಹಿಳೆಯರಿಗಾಗಿ 100 ಹಾಸ್ಟಲ್ ನಿರ್ಮಾಣ ಮಾಡಲಾಗುವುದು. ನಿರ್ಭಯ ವಾಹಿನಿ ಯೋಜನೆ ಮೂಲಕ ಹೈಸ್ಕೂಲ್, ಪಿಯುಸಿ ಬಿಟ್ಟವರಿಗೆ ಉಚಿತ ವಾಹನ ತರಬೇತಿ ಹಾಗೂ ಸಬ್ಸಿಡಿಯಲ್ಲಿ ಆಟೋ, ಮತ್ತು ಕಾರ್ ನೀಡಲಾಗುತ್ತದೆ.

ಒಂದು ಬಾರಿಯ ನೆರವಿನ ರೂಪದಲ್ಲಿ ಬೀದಿ ವ್ಯಾಪಾರಿಗಳಿಗೆ 20 ಸಾವಿರ ಅನುದಾನ ಮಾಡಲಾಗುವುದು, ಹಿರಿಯ ನಾಗರಿಕರಿಗೆ ಎರಡು ವರ್ಷಕ್ಕೊಮ್ಮೆ ರಾಜ್ಯದ 15 ದೇಶದ 10 ಪವಿತ್ರ ಸ್ಥಳಗಳಿಗೆ ಉಚಿತ ಪ್ರವಾಸ ನೀಡುತ್ತೇವೆ. ಕಾಶಿ, ಮಥುರ, ಕೈಲಾಸ, ಮಾನಸ ಸರೋವರ ಯಾತ್ರೆಯ ಸಬ್ಸಿಡಿ ಹೆಚ್ಚಳಗೊಳಿಸುತ್ತೇವೆ.

ವಿಶೇಷ ಚೇತನರಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಾಲೆ ಸ್ಥಾಪನೆ ಹಾಗೂ ಅಂಗವಿಕಲ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡಲಾಗುವುದು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನಿವೃತ್ತಿ ಸೈನಿಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವಾರ್ಷಿಕ 250 ಕೋಟಿ ಅನುದಾನ ನೀಡಲಾಗುವುದು. ಸ್ವ ಉದ್ಯೋಗಕ್ಕಾಗಿ ಶೇ 5% ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಹಗೂ ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಪನೆ 500 ಕೋಟಿ ಅನುದಾನ ನೀಡುತ್ತೇವೆ.

ವಕೀಲರ ಸಂರಕ್ಷಣಾ ಕಾಯ್ದೆ ಅಕ್ಷರಶಃ ಜಾರಿ ಹಾಗೂ ಅನಿವಾಸಿ ಕನ್ನಡಿಗರ ವ್ಯವಹಾರಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗುವುದು. ಅನಿವಾಸಿ ಕನ್ನಡಗರು ರಾಜ್ಯದಲ್ಲಿ ಉದ್ಯಮ ನಡೆಸಲು 1 ಸಾವಿರ ಕೋಟಿ ಅವರ್ತನ ನಿಧಿ ನೀಡಲಾಗುತ್ತದೆ ಎಂದು ತಿಳಿಸಿದೆ.

]]>
1062208 0 0 0
<![CDATA[ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿ - 15 ಕ್ಕೂ ಅಧಿಕ ಜನರಿಗೆ ಗಾಯ]]> https://publictv.in/bus-on-election-duty-overturns-at-vijayapura-more-than-15-people-injured/ Tue, 02 May 2023 05:24:41 +0000 https://publictv.in/?p=1062215 ವಿಜಯಪುರ: ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿಯಾದ (Bus Overturn) ಘಟನೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಕ್ರಾಸ್‌ನಲ್ಲಿ ನಡೆದಿದೆ.

ಬಸ್‌ನ ಎಕ್ಸಲ್ ಕಟ್ ಆದ ಹಿನ್ನೆಲೆ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 40 ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅಪಘಾತದ ಹಿನ್ನೆಲೆ 15 ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ತಕ್ಷಣ ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರ ತರಬೇತಿಗೆ ಸಿಬ್ಬಂದಿಯನ್ನು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಸಿಂದಗಿಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಆಡಿ ಕಾರು, ಬೈಕ್ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಘಟನೆಯ ವಿಷಯ ತಿಳಿದು ಮುದ್ದೇಬಿಹಾಳ ಚುನಾವಣಾಧಿಕಾರಿ ಚಂದ್ರಕಾಂತ್ ಪವಾರ್ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಧಾರಾಕಾರ ಸುರಿದ ಮಳೆಗೆ ಮನೆ ಕುಸಿತ – 20 ದಿನದ ಹಸುಗೂಸು, ವೃದ್ಧೆ ಸಾವು

]]>
1062215 0 0 0
<![CDATA[ಚಿತ್ರೀಕರಣ ಮುಗಿದ ನಂತರ ಫೋಟೋಶೂಟ್ ಮಾಡಿದ ‘ಅಥಿ’ ತಂಡ]]> https://publictv.in/the-athi-team-did-a-photoshoot-after-the-shoot-was-over/ Tue, 02 May 2023 06:03:25 +0000 https://publictv.in/?p=1062207 ಒಂದು ಮನೆ, ಎರಡು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ರೂಪಿಸುವುದು ಅಂದರೆ ಸುಲಭದ ಮಾತಲ್ಲ. ಅದೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ಸ್ ಕಂಪೋಸ್ ಮಾಡೋದು ಕೂಡಾ ಕಷ್ಟದ ಕೆಲಸವೇ. ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲ ಹೆಚ್ಚಿಸಿಕೊಂಡು ಬಂದಿರುವ ಚಿತ್ರ ‘ಅಥಿ’ (Athi). ಹಾಗೆ ನೋಡಿದರೆ ಕನ್ನಡದಲ್ಲಿ ಗಂಡ-ಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಈವರೆಗೂ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರವೊಂದನ್ನು ನಾವಿನ್ನಲಿ ಅಥಿಯ ಮೂಲಕ ಅನಾವರಣ ಮಾಡುತ್ತಿದ್ದೇವೆ ಅನ್ನೋದು ಸ್ವತಃ ಚಿತ್ರದ ನಾಯಕನಟರೂ ಆಗಿರುವ, ನಿರ್ದೇಶಕ ಲೋಕೇಂದ್ರ ಸೂರ್ಯ (Lokendra Surya) ಅವರ ಮಾತು.

ʻಅಟ್ಟಯ್ಯ ವರ್ಸಸ್ ಹಂದಿ ಕಾಯೋಳುʼ ಎನ್ನುವ ಚಿತ್ರದ ಮೂಲಕ ಚಿತ್ರರಂಗದ ಅಚ್ಛರಿ ಮೂಡಿಸಿದವರು ಲೋಕೇಂದ್ರ. ಆ ತನಕ ಯಾವ ಚಿತ್ರಗಳಲ್ಲೂ ನಟಿಸದ, ತಮಗೆ ಪರಿಚಿತರಿರುವವರನ್ನೇ ಪಾತ್ರಗಳನ್ನಾಗಿಸಿ, ಸಿನಿಮಾದ ಅನುಭವವೇ ಇರದವರನ್ನು ತಂತ್ರಜ್ಞರನ್ನಾಗಿಸಿ , ಕಾಡುವ ಕತೆಯ, ಚೆಂದದ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೇಂದ್ರ ಅವರೇ ರೂಪಿಸಿರುವ ʻಕುಗ್ರಾಮʼ ಚಿತ್ರ ಕೂಡ ಬಿಡುಗಡೆಗೆ ತಯಾರಾಗಿದೆ.

ಸದ್ಯ ಸೂರ್ಯ ಸಿನಿ ಫ್ಯಾಕ್ಟರಿಯಲ್ಲಿ ʻಅಥಿʼ ಚಿತ್ರಕ್ಕಾಗಿ ಕ್ಯೂಟ್ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ʻʻಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಬಹುತೇಕ ಮುಕ್ತಾಯವಾಗುವ ಈ ಹಂತದಲ್ಲಿ ಫೋಟೋ ಶೂಟ್ ಮಾಡಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೇ ಮೇ 13ರ ನಂತರ ʻಅಥಿʼ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆʼʼ ಎಂದು ಚಿತ್ರದ ನಿರ್ಮಾಪಕರಾದ  ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ಹೇಳಿದ್ದಾರೆ. ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಋತುಚೈತ್ರ ಅವರು ವಸ್ತ್ರವಿನ್ಯಾಸ  ಮಾಡಿರುವುದು ಈ ಫೋಟೋಶೂಟ್ ನ ಮತ್ತೊಂದು ವಿಶೇಷ.

ಇನ್ನುಳಿದಂತೆ ಸೆವೆನ್ ರಾಜ್ ಆರ್ಟ್ಸ್ ನಿರ್ಮಿಸುತ್ತಿರುವ ಅಥಿ ಐ ಲವ್ ಯು ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ (Shravya Rao) ಅಂದ್ರೆ ಸಾತ್ವಿಕ (Satvik) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪರದೆಯನ್ನು ಬಹುತೇಕ ಸಾತ್ವಿಕ ಆವರಿಸಿಕೊಂಡಿದ್ದು ಬಿಡುಗಡೆಗೆ ಕಾತರದಲ್ಲಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಸಾತ್ವಿಕ ಹೇಳಿದ್ದಾರೆ. ಅಲ್ಲದೆ  ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ.

]]>
1062207 0 0 0
<![CDATA[ಜೆಡಿಎಸ್‌ನದ್ದು ಅಧಿಕೃತ ಹೊಂದಾಣಿಕೆಯೋ ಅಥವಾ ರಾಜಕೀಯ ವ್ಯಭಿಚಾರವೋ: ಸಿ.ಟಿ.ರವಿ ವ್ಯಂಗ್ಯ]]> https://publictv.in/karnataka-election-2023-is-jds-official-compromise-or-political-adultery-says-ct-ravi-in-chikkamagaluru/ Tue, 02 May 2023 05:57:55 +0000 https://publictv.in/?p=1062224 ಚಿಕ್ಕಮಗಳೂರು: ಜೆಡಿಎಸ್ (JDS) ಪಕ್ಷದ್ದು ಕಾಂಗ್ರೆಸ್ (Congress) ಜೊತೆ ಅಧಿಕೃತ ಹೊಂದಾಣಿಕೆಯೋ ಅಥವಾ ರಾಜಕೀಯ ವ್ಯಭಿಚಾರವೋ ಎಂದು ಶಾಸಕ ಹಾಗೂ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ತಾಲೂಕಿನಲ್ಲಿ ಅಧಿಕೃತ ಜೆಡಿಎಸ್ ಅಭ್ಯರ್ಥಿ ಇದ್ದರೂ ಕೂಡ ಅವರನ್ನು ಬಿಟ್ಟು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳುತ್ತಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರ (S.L.Bhojegowda) ವಿರುದ್ಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ ಘೋಷಣೆ ಮಾಡಿ. ಹಾಗಾದರೆ, ಜೆಡಿಎಸ್ ಅಧಿಕೃತ ಅಭ್ಯರ್ಥಿ ತಿಮ್ಮಶೆಟ್ಟಿ ಮನೆಯನ್ನು ಏಕೆ ಹಾಳು ಮಾಡುತ್ತೀರಾ? ಆತ ಫ್ಲೆಕ್ಸ್ ಹಾಕೋಕೆ ಅಷ್ಟೆ ಸೀಮಿತನಾ? ಇದೇ ರೀತಿ ಮಾಡಿ ಕಳೆದ ಬಾರಿ ಹರೀಶನ ಮನೆ ಹಾಳು ಮಾಡಿದ್ದೀರಾ. ಭೋಜೇಗೌಡರು ಈ ಬಾರಿ ತಿಮ್ಮಶೆಟ್ಟಿ ಮನೆ ಹಾಳು ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬರ ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತದೆ? ಬೇರೆಯವರ ಮನೆ ಹಾಳು ಮಾಡಿದರೆ ಒಂದು ದಿನ ಅದು ನಮ್ಮ ಮನೆಯನ್ನು ಹಾಳು ಮಾಡುತ್ತದೆ ಎಂಬ ಅರಿವಿರಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

ತಾಲೂಕಿನಲ್ಲಿ ಸಿ.ಟಿ.ರವಿಯನ್ನು ಸೋಲಿಸಲು ಎಸ್‌ಡಿಪಿಐ, ಪಿಎಫ್‌ಐ, ಸಿಪಿಐ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಸಿ.ಟಿ.ರವಿ ಬಾಲ ಕತ್ತರಿಸಬೇಕು. ಸಿದ್ದರಾಮಯ್ಯರಿಗೆ ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದಾರೆ. ಹಾಲುಮತದ ಕುರುಬರು ಅವರಿಗೆ ಮತ ಹಾಕಬೇಡಿ ಎಂದು ಹೇಳಿದ್ದ ಭೋಜೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಲು ಮತದ ಸಮಾಜ ಹಾಲಿನಂತ ಮನಸ್ಸು ಇರುವವರು. ಹುಳಿ ಹಿಂಡುವ ರಾಜಕಾರಣಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಕಳೆದ ಬಾರಿಯೂ ಕುರುಬರು ಹೆಚ್ಚಿರುವ ಊರುಗಳಲ್ಲಿ ನನಗೆ ಹೆಚ್ಚಿನ ಲೀಡ್ ಬಂದಿತ್ತು. ಈ ಬಾರಿಯೂ ನನಗೇ ಹೆಚ್ಚು ಲೀಡ್ ಬರೋದು ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

ಬಸವರಾಜ ಬೊಮ್ಮಾಯಿ (Basavarj Bommai) ಅವರೇ ನಮ್ಮ ಮುಖ್ಯಮಂತ್ರಿಗಳು. ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿರುವುದು. ಸಿ.ಟಿ.ರವಿ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ. ಅದು ಪಕ್ಷದ ನಿರ್ಣಯ ಅಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ್ದನ್ನು ಮಾಡುತ್ತೇನೆ. ಆದರೆ ಸಿಎಂ ನನ್ನ ಅಪೇಕ್ಷೆ ಅಲ್ಲ. ಅದು ಜನರ ಅಪೇಕ್ಷೆ. ಕಾಲ ಈಗ ನನ್ನದಲ್ಲ. ನನ್ನ ಕಾಲ ಒಂದಲ್ಲ ಒಂದು ದಿನ ಬರಬಹುದು ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ಬೇಕು – ತುಳುನಾಡಿನ ದೈವ, ದೇವರ ಮೊರೆ ಹೋದ ಹೆಚ್‌ಡಿಡಿ

]]>
1062224 0 0 0
<![CDATA[ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ - ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು]]> https://publictv.in/union-minister-shobha-karandlaje-slams-congress-manifesto-on-bajrang-dal/ Tue, 02 May 2023 06:01:01 +0000 https://publictv.in/?p=1062234 ಬೆಂಗಳೂರು: ನಿಮಗೆ ತಾಕತ್‌ ಇದ್ರೆ ಭಜರಂಗದಳ (Bajrang Dal) ನಿಷೇಧ ಮಾಡಿ ನೋಡಿ ಎಂದು ಕಾಂಗ್ರೆಸ್‌ (Congress) ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸವಾಲು ಹಾಕಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಅದರಲ್ಲಿ ಭಜರಂಗದಳ ನಿಷೇಧಿಸುವ ಕುರಿತು ಪ್ರಸ್ತಾಪಿಸಿತ್ತು. ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಶೋಭಾ ಕರಂದ್ಲಾಜೆ ಕೆಂಡಾಮಂಡಲರಾಗಿದ್ದಾರೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

ವಿನಾಶಕಾಲ ವಿಪರೀತ ಬುದ್ಧಿ ಅನ್ನುವಂತೆ ಇದೆ ಕಾಂಗ್ರೆಸ್ ನಡೆ. ಕಾಂಗ್ರೆಸ್‌ನ ವಿನಾಶ ಕಾಲ‌ ಸಮೀಪಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದೆ. ಇವತ್ತು ಕಾಂಗ್ರೆಸ್‌ನವರು ಪಿಎಫ್ಐ ನಿಷೇಧ ಮಾಡ್ತೀವಿ. ಜತೆಗೆ ಭಜರಂಗದಳ ನಿಷೇಧ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ನವರ ಟಾರ್ಗೆಟ್ ಇರೋದು ಪಿಎಫ್ಐ ಅಲ್ಲ, ಅವರ ಟಾರ್ಗೆಟ್ ಭಜರಂಗದಳ ಎಂದು ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್ಎಸ್‌ನ ಒಂದು ಭಾಗ ಬಿಜೆಪಿ. ಆರ್‌ಎಸ್ಎಸ್‌ನ ಯುವಕರ ದಳ ಭಜರಂಗದಳ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟಿದೆ ಕಾಂಗ್ರೆಸ್. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಭಜರಂಗದಳ ನಿಷೇಧ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

ನೀವು PFIನ್ನು ಭಜರಂಗದಳದ ಜೊತೆ ಹೋಲಿಕೆ ಮಾಡ್ತೀರಾ? ಭಜರಂಗದಳ ಬ್ಯಾನ್ ಮಾಡುವ ನಿಮ್ಮ ಶಕ್ತಿ ತೋರಿಸಿ. ಆಗ ನಾವೂ ದೇಶಾದ್ಯಂತ ತೋರಿಸುತ್ತೇವೆ. ಭಜರಂಗದಳದ ನಿಷೇಧವನ್ನು‌ ಹಿಂದೂ ಸಮಾಜ ಒಪ್ಪಲ್ಲ. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಅಂತ ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಗುಡುಗಿದ್ದಾರೆ.]]>
1062234 0 0 0
<![CDATA[ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?]]> https://publictv.in/bahubali-actor-prabhas-reacts-to-anushka-shettys-miss-shetty-mr-polishettys-teaser-actress-thanks-pupsuuu/ Tue, 02 May 2023 06:14:27 +0000 https://publictv.in/?p=1062246 ರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಸದ್ಯ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ' ಚಿತ್ರದ ಮೂಲಕ ಕಂಬ್ಯಾಕ್ ಆಗ್ತಿದ್ದಾರೆ. ಈ ನಡುವೆ ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಏನೆಂದು ಕರೆಯುತ್ತಾರೆ ಎಂಬುದನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಮಿರ್ಚಿ, ಬಿಲ್ಲಾ, ಬಾಹುಬಲಿ, ಬಾಹುಬಲಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ- ಪ್ರಭಾಸ್ (Prabhas) ಜೋಡಿಯಾಗಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಮೋಡಿ ಮಾಡಿತ್ತು. ಸಿನಿಮಾ ನೋಡಿದವರು, ತೆರೆ ಹಿಂದೆ ಕೂಡ ಇಬ್ಬರ ನಡುವೆ ಲವ್ವಿ-ಡವ್ವಿ ಇದೆ ಎಂದು ಹೇಳಲಾಗಿತ್ತು. ಈ ಮಧ್ಯೆ ಕೃತಿ ಸನೋನ್ (Kriti Sanon) ಹೆಸರು ಕೂಡ ಪ್ರಭಾಸ್ ಜೊತೆ ತಳುಕು ಹಾಕಿತ್ತು. ಈಗ ಮತ್ತೆ ಬಾಹುಬಲಿ ಜೋಡಿಯ ಮ್ಯಾಟ್ರರ್ ಚಾಲ್ತಿಗೆ ಬಂದಿದೆ.

ಇತ್ತೀಚಿಗೆ ಅನುಷ್ಕಾ ನಟಿಸಿರುವ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ' (Miss Shetty Mr Poli Shetty) ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಅನುಷ್ಕಾ- ನವೀನ್ ಪೋಲಿ ಶೆಟ್ಟಿ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಪ್ರಭಾಸ್ ಕೂಡ ಚಿತ್ರದ ಟೀಸರ್ ನೋಡಿ ಭೇಷ್ ಎಂದಿದ್ದಾರೆ. ಸಿನಿಮಾದ ಟೀಸರ್ ಮನರಂಜನೆಯನ್ನ ಒಳಗೊಂಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ವಿಶ್ ಮಾಡಿದ್ದಾರೆ. ಇದನ್ನ ನಟಿ ಅನುಷ್ಕಾ ತಮ್ಮ ಖಾತೆ ರೀ ಶೇರ್ ಮಾಡಿ, ಧನ್ಯವಾದ ಪಪ್ಸು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

ಅನುಷ್ಕಾ- ಪ್ರಭಾಸ್ ನಡುವೆ ಏನು ಸರಿ ಇಲ್ಲಾ ಅದಕ್ಕೆ ದೂರವಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಬೆಂಬಲ ಸೂಚಿಸೋದು ನೋಡಿ, ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

]]>
1062246 0 0 0
<![CDATA[ಡಿವೋರ್ಸ್ ಫೋಟೋಶೂಟ್ : ನಟಿ ಶಾಲಿನಿಯ ನಾನಾವತಾರ]]> https://publictv.in/divorce-photoshoot-actress-shalinis-various-avatars/ Tue, 02 May 2023 06:34:48 +0000 https://publictv.in/?p=1062254 ಟಿ  (Actress) ಶಾಲಿನಿ (Shalini) ಡಿವೋರ್ಸ್ ವಿಚಾರವಾಗಿ ಸಾಕಷ್ಟು ಸುದ್ದಿ ಆಗಿದ್ದಾರೆ. ವಿಚ್ಚೇದನ (Divorce) ಸಿಕ್ಕ ಸಂಭ್ರಮದಲ್ಲಿ ಅವರು ಫೋಟೋಶೂಟ್ (Photoshoot) ಮಾಡಿಸಿದ್ದು, ಆ ಫೋಟೋಗಳು ವೈರಲ್ ಆಗಿವೆ. ಅಲ್ಲದೇ, ಕೆಲವರು ಆ ರೀತಿಯ ಫೋಟೋಗಳಿಗೆ ಟೀಕೆ ಕೂಡ ಮಾಡಿದ್ದಾರೆ.

ಶಾಲಿನಿ ತಮಿಳಿನ (Tamil) ಪ್ರಸಿದ್ಧ ಕಿರುತೆರೆ ನಟಿ. ಮುಳ್ಳುಂ ಮಲರುಂ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಮಗಳೊಂದಿಗೆ ತಾನು ಒಂಟಿಯಾಗಿ ಇದ್ದೇನೆ ಎಂದು ಹಲವಾರು ಸಲ ಹೇಳಿಕೊಂಡಿದ್ದರು. ಇದೀಗ ಡಿವೋರ್ಸ್ ವಿಚಾರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಜೀವನದಲ್ಲಿ 99 ತೊಂದರೆಗಳಿವೆ. ಅವುಗಳಲ್ಲಿ ಗಂಡ ಕೂಡ ಒಬ್ಬ ಎನ್ನುವಂತಹ ಬರಹವನ್ನೂ ಫೋಟೋಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಪತಿಯೊಂದಿಗೆ ಇರುವ ಫೋಟೋಗಳನ್ನು ಹರಿದು ಹಾಕುವ ಹಾಗೂ ಗಂಡ ಫೋಟೋವನ್ನು ಕಾಲಿನಿಂದ ತುಳಿಯುವಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಡಿವೋರ್ಸ್ ನಂತರ ಮಗಳ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತಗೆದುಕೊಂಡಿದ್ದೇನೆ ಎಂದು ಹೇಳಿರುವ ನಟಿ, ಮಗಳೊಂದಿಗೆ ಒಂಟಿಯಾಗಿ ಬದುಕುತ್ತಿರುವುದನ್ನೂ ಹೇಳಿಕೊಂಡಿದ್ದಾರೆ. ಅಲ್ಲದೇ, ಮಗಳನ್ನು ಹೇಗೆ ಬೆಳೆಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಾನು ಧೈರ್ಯದಲ್ಲಿದ್ದೇನೆ ಎಂದಿದ್ದಾರೆ.

ಫೋಟೋಗಾಗಿ ನಾನಾ ಬಗೆಯಲ್ಲಿ ಪೋಸ್ ಕೊಟ್ಟಿರುವ ಶಾಲಿನಿ, ರೆಡ್ ಸ್ಲಿಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಎಂಬ ಬೋರ್ಡ್ ಕೂಡ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಜೀವಕ್ಕೆ ಅಂತ್ಯ ಹಾಡುವ ಬದಲು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದು ಒಳ್ಳೆದು ಎಂಬ ಸಲಹೆಯನ್ನೂ ನೀಡಿದ್ದಾರೆ.

ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕು. ಸಹ್ಯವಲ್ಲದ ದಾಂಪತ್ಯ ಮುರಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಜೀವನದಲ್ಲಿ ಎಲ್ಲರೂ ಖುಷಿಯಾಗಿ ಇರಬೇಕು ಎಂದು ಹೇಳಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ನಟಿಯೊಬ್ಬರು ಈ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ವಿಚ್ಚೇದನವನ್ನು ಸೆಲೆಬ್ರೇಟ್ ಮಾಡಿರುವುದಕ್ಕೆ ನಾನಾ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ ಅಭಿಮಾನಿಗಳು. ಒಂದಷ್ಟು ಜನ ಶಾಲಿನಿ ಪರವಾಗಿ ಮಾತನಾಡಿದ್ದರೆ, ಮತ್ತಷ್ಟು ಜನ ಶಾಲಿನ ಈ ನಡೆಯನ್ನು ಪ್ರಶ್ನಿಸಿದ್ದಾರೆ.

]]>
1062254 0 0 0
<![CDATA[PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?]]> https://publictv.in/why-congress-has-not-come-to-power-alone-in-karnataka-despite-the-increase-in-votes/ Tue, 02 May 2023 07:10:21 +0000 https://publictv.in/?p=1062263 ರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Election 2023) ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಹಂಬಲದೊಂದಿಗೆ ಪ್ರಮುಖ ರಾಜಕೀಯ ಪಕ್ಷಗಳು ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಆದರೆ ಮತದಾರ ಮಾತ್ರ ಪ್ರತಿ ಚುನಾವಣೆಯಲ್ಲೂ ಅನಿರೀಕ್ಷಿತ ಎಂಬಂತೆ ಫಲಿತಾಂಶವನ್ನ ನೀಡುತ್ತಾ ಬಂದಿದ್ದಾನೆ. ಯಾವ ಪಕ್ಷಗಳ ಅಥವಾ ರಾಜಕೀಯ ವಿಶ್ಲೇಷಕರ ಊಹೆಗೆ ನಿಲುಕದಂತೆ ಪ್ರತಿ ಬಾರಿ ಫಲಿತಾಂಶ ಬರುತ್ತಿದೆ. ಈಗ ಮತ್ತೆ ರಾಜ್ಯ ವಿಧಾನಸಭಾ ಚುನಾವಣೆ ಬಂದಿದ್ದು, ಅಂತಿಮ ರಿಸಲ್ಟ್ ಏನಿರಲಿದೆ? ಯಾವ ಪಕ್ಷ ಸರ್ಕಾರ ರಚಿಸುತ್ತೆ? ಈ ಬಾರಿಯೂ ಅತಂತ್ರವೋ ಅಥವಾ ಸ್ವತಂತ್ರ ಸರ್ಕಾರವೋ ಎಂಬ ನಾನಾ ಪ್ರಶ್ನೆಗಳು ಮೂಡಿವೆ.

ಕರ್ನಾಟಕ ವಿಧಾನಸಭಾ ಚುನಾವಣೆಗಳ ಇತಿಹಾಸವನ್ನು ಗಮನಿಸಿದರೆ ಅನೇಕ ಅಚ್ಚರಿದಾಯಕ ಬೆಳವಣಿಗೆಗಳಾಗಿವೆ. ರಾಷ್ಟ್ರೀಯ ಪಕ್ಷಗಳಲ್ಲೊಂದು ಹೆಚ್ಚು ಸೀಟುಗಳನ್ನು ಗೆದ್ದರೂ ಒಟ್ಟು ಮತಗಳ ಸಂಖ್ಯೆಯಲ್ಲಿ ಕುಸಿತ ಕಂಡಿರುತ್ತೆ. ಅಂತೆಯೇ ಒಟ್ಟು ಮತಗಳಲ್ಲಿ ಹೆಚ್ಚು ಮತಗಳನ್ನು ಪಡೆದ ಮತ್ತೊಂದು ರಾಷ್ಟ್ರೀಯ ಪಕ್ಷ, ಕಡಿಮೆ ಸೀಟುಗಳನ್ನು ಗೆದ್ದಿರುತ್ತೆ. ಕಳೆದ ನಾಲ್ಕು ಚುನಾವಣೆಗಳ ಇತಿಹಾಸ ಗಮನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

ಕಾಂಗ್ರೆಸ್‌ಗೇ ಹೆಚ್ಚು ಮತ. ಆದ್ರೆ! ರಾಜ್ಯ ವಿಧಾನಸಭೆ 2004ರಿಂದ ನಡೆದ ಒಟ್ಟು 4 ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಹೆಚ್ಚು ಮತಗಳನ್ನು ಪಡೆದದ್ದು ಕಾಂಗ್ರೆಸ್ (Congress). ಹೆಚ್ಚು ಮತಗಳನ್ನು ಪಡೆದ ಸ್ಥಾನದಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿ (BJP) 2 ಹಾಗೂ ಜೆಡಿಎಸ್ (JDS) 3ನೇ ಸ್ಥಾನದಲ್ಲಿದೆ. ಕಳೆದ 4 ಚುನಾವಣೆಗಳಲ್ಲೂ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರೂ, ಮತಗಳೆಲ್ಲ ಗೆಲುವಾಗಿ ಮಾರ್ಪಡಾಗಿಲ್ಲ. ಹಾಗಾದ್ರೆ ಈ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪಡೆದ ಒಟ್ಟು ಮತಗಳೆಷ್ಟು, ಸೀಟುಗಳೆಷ್ಟು ಮತ್ತು ಎಷ್ಟನೇ ಸ್ಥಾನದಲ್ಲಿದ್ದವು ಎಂಬುದನ್ನು ವಿವರವಾಗಿ ತಿಳಿಯೋಣ.

2004ರ ಚುನಾವಣೆ ಈ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ. 35.3 ರಷ್ಟು ಮತಗಳನ್ನು ಪಡೆದುಕೊಂಡಿದ್ದರೂ, ಕಾಂಗ್ರೆಸ್ ಗೆದ್ದಿದ್ದು 65 ಕ್ಷೇತ್ರಗಳಲ್ಲಿ ಮಾತ್ರ. ಆದರೆ ಶೇ. 28.3 ರಷ್ಟು ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ 79 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಶೇ.20.8 ರಷ್ಟು ಮತಗಳನ್ನು ಪಡೆದಿದ್ದ ಜೆಡಿಎಸ್ 58 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಈ ಚುನಾವಣೆಯ ಫಲಿತಾಂಶದ ಅಂಕಿಅಂಶವನ್ನು ಗಮನಿಸಿದರೆ, ಕಾಂಗ್ರೆಸ್ ಮತ ಪ್ರಮಾಣದಲ್ಲಿ ಗಣನೀಯ ಬದಲಾವಣೆ ಏನೂ ಆಗಿಲ್ಲ. ಆದರೆ ಪಕ್ಷವು ಗೆದ್ದ ಕ್ಷೇತ್ರಗಳಲ್ಲಿ ಮಾತ್ರ ಭಾರೀ ಏರಿಳಿತವಾಗಿದೆ. ಅಂತೆಯೇ ಬಿಜೆಪಿ ಪಡೆದ ಮತ ಪ್ರಮಾಣ ಕಡಿಮೆಯಾದರೂ ಹೆಚ್ಚು ಕ್ಷೇತ್ರಗಳು ದಕ್ಕಿವೆ. ನಂತರ ನಡೆದ ಚುನಾವಣೆಗಳಲ್ಲೂ (2013ರ ಚುನಾವಣೆ ಹೊರತುಪಡಿಸಿ) ಇದೇ ಮಾದರಿಯ ಚಿತ್ರಣ ಗೋಚರಿಸುತ್ತದೆ. ಇದನ್ನೂ ಓದಿ: PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!

2008ರ ಚುನಾವಣೆ ಇಲ್ಲೂ ಅಷ್ಟೆ, ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್ ಶೇ. 34.8 ರಷ್ಟು ಮತಗಳನ್ನು ಪಡೆದಿತ್ತು. ಆದರೂ ಗೆದ್ದಿದ್ದು ಮಾತ್ರ 80 ಕ್ಷೇತ್ರಗಳಲ್ಲಿ. ಇನ್ನು ಬಿಜೆಪಿ ಶೇ. 33.9 ಮತಗಳನ್ನಷ್ಟೇ ಪಡೆದಿದ್ದರೂ, ಗೆದ್ದಿದ್ದು 110 ಕ್ಷೇತ್ರಗಳಲ್ಲಿ. ಜೆಡಿಎಸ್ ಶೇ. 19 ರಷ್ಟು ಮತಗಳನ್ನು ಪಡೆದು 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

2013ರ ಚುನಾವಣೆ ರಾಜ್ಯ ರಾಜಕೀಯದಲ್ಲಾದ ಅಚ್ಚರಿದಾಯಕ ಬೆಳವಣಿಗೆಯಿಂದಾಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಿ ಕಾಂಗ್ರೆಸ್ ಪೂರ್ಣಾವಧಿ ಆಡಳಿತ ನಡೆಸಿತ್ತು. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಯಡಿಯೂರಪ್ಪ ಅವರು ಪಕ್ಷ ತೊರೆದು ಕೆಜೆಪಿ ಕಟ್ಟಿದರು. ಅಂತೆಯೇ ಬಿ.ಶ್ರೀರಾಮುಲು ಅವರು ಬಿಎಸ್‌ಆರ್ ಪಕ್ಷ ಸ್ಥಾಪಿಸಿದರು. ಇದರಿಂದ 2013ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪೆಟ್ಟನ್ನೇ ತಿಂದಿತು. ಈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ ಶೇ. 36.6 ರಷ್ಟು ಮತಗಳನ್ನು ಪಡೆದು, 112 ಕ್ಷೇತ್ರಗಳಲ್ಲಿ ಗೆದ್ದಿತು. ಬಿಜೆಪಿ ಶೇ. 19.9 ರಷ್ಟು ಮತಗಳನ್ನಷ್ಟೇ ಪಡೆದು, 40 ಕ್ಷೇತ್ರಗಳನ್ನು ಮಾತ್ರ ತನ್ನದಾಗಿಸಿಕೊಂಡಿತು. ಇನ್ನು ಜೆಡಿಎಸ್ ಶೇ. 20.2 ರಷ್ಟು ಮತಗಳನ್ನು ಪಡೆದು, 40 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಯಡಿಯೂರಪ್ಪ ಅವರ ಹೊಸ ಪಕ್ಷವಾಗಿದ್ದ ಕೆಜೆಪಿ ಶೇ. 9.8 ರಷ್ಟು ಮತ ಪಡೆದು, 6 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದರಿಂದ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಯಿತು. ಈ ಕಾರಣಕ್ಕಾಗಿ 2014ರ ಲೋಕಸಭಾ ಚುನಾವಣೆಗೂ ಮೊದಲು ಯಡಿಯೂರಪ್ಪ ಅವರನ್ನು ಮನವೊಲಿಸಿ ಬಿಜೆಪಿಗೆ ಮತ್ತೆ ಸೇರ್ಪಡೆಗೊಳಿಸಲಾಯಿತು.

2018ರ ಚುನಾವಣೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 39 ರಷ್ಟು ಮತಗಳನ್ನು ಪಡೆದಿದ್ದರೂ ಸಹ, 80 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು. ಬಿಜೆಪಿ ಶೇ. 36.2 ರಷ್ಟು ಮತಗಳನ್ನಷ್ಟೇ ಪಡೆದಿದ್ದರೂ, 104 ಕ್ಷೇತ್ರಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇನ್ನು ಜೆಡಿಎಸ್ ಶೇ. 18.3 ರಷ್ಟು ಮತ ಪಡೆದು 37 ಕ್ಷೇತ್ರಗಳನ್ನು ಗೆದ್ದಿತ್ತು. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್‌, ಮಟನ್‌, ಬೀಫ್‌, ಫೋರ್ಕ್‌ ಮಾಂಸ!

ಕಾರಣ ಏನು? ಹಳೇ ಮೈಸೂರು ಭಾಗದಲ್ಲಿ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪ್ರಬಲ ಪೈಪೋಟಿ ಇರುತ್ತದೆ. ಈ ಭಾಗದಲ್ಲಿ ಬಿಜೆಪಿ ಪ್ರಭಾವ ತುಂಬಾ ಕಡಿಮೆ. ಇದರಿಂದ ಬಿಜೆಪಿ ಒಟ್ಟು ಮತಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿರುತ್ತದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಇರುತ್ತದೆ. ಈ ಭಾಗದಲ್ಲಿ ಕೆಲವು ಕಡೆ ಜೆಡಿಎಸ್‌ ಅಭ್ಯರ್ಥಿಗಳನ್ನೇ ಹಾಕುವುದಿಲ್ಲ. ಹೀಗಾಗಿ ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್‌ ಮುಂದಿರುತ್ತದೆ.

]]>
1062263 0 0 0
<![CDATA[ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್]]> https://publictv.in/actress-meghana-raj-change-hair-style/ Tue, 02 May 2023 06:55:47 +0000 https://publictv.in/?p=1062264 ಸ್ಯಾಂಡಲ್‌ವುಡ್‌ಗೆ 'ತತ್ಸಮ ತದ್ಭವ' (Tatsama Tadbhava Film) ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ಕುಟುಂಬದ ಜೊತೆ ಕೂರ್ಗ್‌ಗೆ ಮೇಘನಾ ರಾಜ್ (Meghana Raj) ತೆರಳಿದ್ದರು. ಇದೀಗ ಹೊಸ ಹೈರ್ ಸ್ಟೈಲ್ ಮಾಡಿಸಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

ಫೀಮೇಲ್ ಓರಿಯೆಂಟೆಡ್ ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರದ ಪೋಸ್ಟರ್ ಲುಕ್‌ನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪುತ್ರ ರಾಯನ್ ಆರೈಕೆಯ ನಡುವೆಯೂ ಮೇಘನಾ ಸಿನಿಮಾ ಮಾಡಿ ಮುಗಿಸಿದ್ದಾರೆ.

ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ಕೂರ್ಗ್ (Coorg) ತೆರಳಿ ಕುಟುಂಬದ ಜೊತೆ ಮೇಘನಾ ರಾಜ್ ಮಸ್ತ್ ಆಗಿ ಏಂಜಾಯ್ ಮಾಡಿದ್ದಾರೆ. ಪ್ರವಾಸ ಮುಗಿದ ಬೆನ್ನಲ್ಲೇ ನಟಿ ಕೂದಲಿಗೆ ಕತ್ತರಿ ಹಾಕಿದ್ದಾರೆ. ಹೊಸ ಹೇರ್ ಸ್ಟೈಲಿನಲ್ಲಿ ಮೇಘನಾ ಗಮನ ಸೆಳೆಯುತ್ತಿದ್ದಾರೆ.

ಮೇಘನಾ ಹೊಸ ಲುಕ್ ನೋಡ್ತಿದ್ದಂತೆ ಹೊಸ ಚಿತ್ರಕ್ಕೆ ಲುಕ್ ಬದಲಾವಣೆ ಮಾಡಿಕೊಂಡ್ರಾ? ಹೊಸ ಸಿನಿಮಾಗಾಗಿ ತಯಾರಿ ಮಾಡ್ತಿದ್ದಾರಾ ಎಂಬ ವಿಚಾರ ಇದೀಗ ಅನೇಕರ ಚರ್ಚೆಗೆ ಗ್ರಾಸವಾಗಿದೆ.

]]>
1062264 0 0 0
<![CDATA[ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿ ಫೈಟ್ - ಶ್ರವಣಬೆಳಗೊಳದಲ್ಲಿ ಯಾರಿಗೆ ಜಯ?]]> https://publictv.in/karnataka-election-2023-who-will-win-in-shravanabelagola-constituency/ Tue, 02 May 2023 07:03:18 +0000 https://publictv.in/?p=1062268 ತಿಹಾಸಿಕ ನಗರಿ ಶ್ರವಣಬೆಳಗೊಳ ರಾಜ್ಯದ ಪ್ರಮುಖ ಜೈನ ಧಾರ್ಮಿಕ ಕೇಂದ್ರಗಳಲ್ಲೊಂದು. ಇಲ್ಲಿನ ಗೊಮ್ಮಟೇಶ್ವರ ಮೂರ್ತಿಯ ಏಕಶಿಲಾ ವಿಗ್ರಹ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಇಂತಹ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟದ ಸಾಧ್ಯತೆಯಿದೆ. ಹೀಗಿದ್ದರೂ ಈ ಬಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯ ಹಾಗೂ ಭ್ರಷ್ಟಾಚಾರ ಆರೋಪ ಮುಖ್ಯ ವಿಷಯ ಆಗಲಿದೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಈವರೆಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್‍ಪಿ) 4 ಬಾರಿ, 5 ಬಾರಿ ಜೆಡಿಎಸ್, 4 ಬಾರಿ ಕಾಂಗ್ರೆಸ್, ಒಮ್ಮೆ ಜನತಾಪಾರ್ಟಿ ಗೆದ್ದಿದೆ.

ಕಣದಲ್ಲಿರುವ ಅಭ್ಯರ್ಥಿಗಳು: ಸಿ.ಎನ್.ಬಾಲಕೃಷ್ಣ (ಜೆಡಿಎಸ್) ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್) ಚಿದಾನಂದ್ (ಬಿಜೆಪಿ)

ಬಾಲಕೃಷ್ಣ: ಜೆಡಿಎಸ್ ಅಭ್ಯರ್ಥಿ ಬಾಲಕೃಷ್ಣ ಜನರ ಮಧ್ಯೆ ಬೆರೆಯುವ ಶಾಸಕರಾಗಿದ್ದಾರೆ. ಅವರು ಏತ ನೀರಾವರಿ, ಕೆರೆ ತುಂಬಿಸುವುದು, ಅಭಿವೃದ್ಧಿ ಸೇರಿದಂತೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಗೆಲುವಿಗೆ ಸಹಕಾರಿಯಾಗಿದೆ. ಅದೇ ರೀತಿ ಅವರ ಮೈನಸ್ ಪಾಯಿಂಟ್ ನೋಡುವುದಾದರೇ, ದ್ವೇಷ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಆರೋಪಗಳಿರುವುದು ಹಿನ್ನಡೆಯಾಗುವ ಕಾರಣವಾಗುವ ಸಾಧ್ಯತೆಯಿದೆ.

ಗೋಪಾಲಸ್ವಾಮಿ: ಕಾಂಗ್ರೆಸ್ ಅಭ್ಯರ್ಥಿ ಗೋಪಾಲಸ್ವಾಮಿ ಅವರು ಕಳೆದ ಬಾರಿ ಎಂಎಲ್‍ಸಿಯಾಗಿದ್ದರು. ಇವರು ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲ ಇರುವುದು ಚುನಾವಣೆಯಲ್ಲಿ ಸಹಾಯವಾಗುವ ಸಾಧ್ಯತೆಯಿದೆ. ಇನ್ನೂ ಮೈನಸ್ ಪಾಯಿಂಟ್ ನೋಡುವುದಾದರೇ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದಿಲ್ಲ. ಜೊತೆಗೆ ಖಡಕ್ ನಡೆ ಇಲ್ಲದೇ ಇರುವುದು ಇವರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಪಕ್ಷದೊಳಗಿನ ಬಂಡಾಯ ಎದ್ದಿರುವುದು ಇವರಿಗೆ ಹಿನ್ನಡೆಯಾಗುತ್ತದೆ.

ಚಿದಾನಂದ: ಬಿಜೆಪಿ ಅಭ್ಯರ್ಥಿ ಚಿದಾನಂದ ಅವರು ಇನ್ನೂ ಯುವಕರಾಗಿರುವುದು ಇವರಿಗೆ ಪ್ಲಸ್ ಆಗಿದೆ. ಅಷ್ಟೇ ಅಲ್ಲದೇ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಹೊಸ ಮುಖವಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಗೆಲುವಿಗೆ ಸಹಕಾರಿಯಾಗುವ ಸಾಧ್ಯತೆಯಿದೆ. ಇನ್ನೂ ಮೈನಸ್ ಹೇಳುವುದಾದರೇ ಅಭ್ಯರ್ಥಿ ಕ್ಷೇತ್ರದಲ್ಲಿ ಪರಿಚಯ ಇಲ್ಲ ಜೊತೆಗೆ ಇಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿಲ್ಲದಿರುವುದು ಮೈನಸ್ ಆಗಿದೆ. ಇದರ ಜೊತೆಗೆ ಪೈಪೋಟಿ ಇಲ್ಲದೆ ಟಿಕೆಟ್ ಪಡೆದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಪ್ರಬಲವಾಗಿರುವುದು ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿ – 15 ಕ್ಕೂ ಅಧಿಕ ಜನರಿಗೆ ಗಾಯ

ಜಾತಿ ಲೆಕ್ಕಾಚಾರ ಏನು?: ಈ ಕ್ಷೇತ್ರದಲ್ಲೂ ಒಕ್ಕಲಿಗ ಮತದಾರರ ಬರೋಬ್ಬರಿ 1,34,000 ಇದ್ದು, ಇವರೇ ನಿರ್ಣಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಪರಿಶಿಷ್ಟ ಜಾತಿ 21,000, ಎಸ್‍ಟಿ 10,000, ಲಿಂಗಾಯತ ಹಾಗೂ ಕುರುಬ 7,000 ಉಳಿದ ಸಮುದಾಯದವರು ನಾಲ್ಕೈದು ಸಾವಿರದ ಒಳಗಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,12,070. ಇವರಲ್ಲಿ 1,06,029 ಮಂದಿ ಪುರುಷರಿದ್ದರೆ, 1,06,041 ಮಂದಿ ಮಹಿಳೆಯರಿದ್ದಾರೆ. ಇದನ್ನೂ ಓದಿ: ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

]]>
1062268 0 0 0
<![CDATA[‘ದಿ ಕೇರಳ ಸ್ಟೋರಿ’ ಸಿನಿಮಾಗೆ ಭಾರೀ ವಿರೋಧ: ಮೇ 5ರಂದು ರಿಲೀಸ್ ಅನುಮಾನ?]]> https://publictv.in/massive-opposition-to-the-movie-the-kerala-story-may-5th-release-doubt/ Tue, 02 May 2023 06:53:00 +0000 https://publictv.in/?p=1062269 ಪೋಕಲ್ಪಿತ ಕಥೆ ಹಾಗೂ ಕೇರಳ ರಾಜ್ಯಕ್ಕೇ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ  ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮಾಡಲಾಗಿದೆ ಎನ್ನುವ ಆರೋಪ ಹಲವರದ್ದು. ಒಂದು ಧರ್ಮವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಇಂತಹ ಚಿತ್ರವನ್ನು ರಿಲೀಸ್ ಮಾಡದಂತೆ ಕೇರಳದ ಅನೇಕ ಸಂಘಟನೆಗಳು ಒತ್ತಾಯಿಸಿವೆ. ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಮೇ 5ಕ್ಕೆ ಬಿಡುಗಡೆ (Release) ಆಗತ್ತಾ ಎನ್ನುವ ಅನುಮಾನ ಕೂಡ ಮೂಡಿದೆ.

ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ. ಇದನ್ನೂ ಓದಿ:ತಪ್ಪೆಲ್ಲ ನನ್ನದೇ ಎಂದು ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್

ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರು ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ (Love Jihad) ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

]]>
1062269 0 0 0
<![CDATA[ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ]]> https://publictv.in/himanta-biswa-sarma-sparks-against-congress-bajrang-dal-ban/ Tue, 02 May 2023 07:09:50 +0000 https://publictv.in/?p=1062275 ಬೆಂಗಳೂರು: ಕಾಂಗ್ರೆಸ್ (Congress) ಮುಸ್ಲಿಮರ ಓಲೈಕೆಗಾಗಿ ಬಜರಂಗದಳ (Bajrang Dal) ನಿಷೇಧದ ಬಗ್ಗೆ ಹೇಳಿದೆ. ಇದು ಪಿಎಫ್‌ಐ (PFI) ಪ್ರಚೋದಿತ ಪ್ರಣಾಳಿಕೆ. ಪಿಎಫ್‌ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಟೀಕಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನೀಡಿರುವಂತಹ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಶರ್ಮಾ, ಈಗಾಗಲೇ ಪಿಎಫ್‌ಐ ಬ್ಯಾನ್ ಆಗಿದೆ. ಈಗ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎನ್ನುವುದರಲ್ಲಿ ಏನು ಅರ್ಥ ಇದೆ? ಇದರ ಅರ್ಥ ಇಷ್ಟೇ. ಅವರು ಪಿಎಫ್‌ಐ ಬ್ಯಾನ್ ಮಾಡಿದ್ದಾರೆ, ನಾವು ಅದಕ್ಕೆ ಪರ್ಯಾಯವಾಗಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಲು ಹೊರಟಿದ್ದಾರೆ. ಈ ಮೂಲಕ ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

ಪರಮೇಶ್ವರ್ ಸಮರ್ಥನೆ: ಕಾಂಗ್ರೆಸ್ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿರುವ ವಿಚಾರವನ್ನು ಸಮರ್ಥಿಸಿಕೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ಶಾಂತಿ ಕದಡುವ ಯಾವುದೇ ಸಂಸ್ಥೆಯನ್ನು ನಾವು ನಿಯಂತ್ರಣ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ನಾವು ಹೇಳಿದ್ದೇವೆ. ಕರ್ನಾಟಕ ಶಾಂತಿಯ ತೋಟ ಆಗಬೇಕು. ಇದಕ್ಕಾಗಿ ನಾವು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

]]>
1062275 0 0 0
<![CDATA[ಅಯೋಧ್ಯೆ ಅರ್ಚಕ ನೇಣುಬಿಗಿದು ಆತ್ಮಹತ್ಯೆ - ಸಾಯುವ ಮೊದಲು ಫೇಸ್‌ಬುಕ್ ಲೈವ್]]> https://publictv.in/ayodhya-priest-commits-suicide-by-hanging-himself/ Tue, 02 May 2023 07:15:07 +0000 https://publictv.in/?p=1062278 ಲಕ್ನೋ: ದೇವಸ್ಥಾನದ ಕೊಠಡಿಯೊಂದರಲ್ಲಿ ಅರ್ಚಕ (Priest) ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಅಯೋಧ್ಯೆಯಲ್ಲಿ (Ayodhya) ಸೋಮವಾರ ನಡೆದಿದೆ.

28 ರಿಂದ 30 ವರ್ಷದ ಒಳಗಿನ ರಾಮ್‌ಶಂಕರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಅರ್ಚಕ. ಇವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಫೇಸ್‌ಬುಕ್ ಲೈವ್ (Facebook Live) ಬಂದಿದ್ದು, ಇಬ್ಬರು ಪೊಲೀಸರು ತನಗೆ 2 ಲಕ್ಷ ರೂ. ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೈವ್ ಮಾಡಿದ್ದಾರೆ. ಅರ್ಚಕ ಮಾದಕವ್ಯಸನಿ ಆಗಿದ್ದು, ಆರೋಪಗಳು ಆಧಾರರಹಿತ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಕೋರ್ಟ್‌ನಲ್ಲಿ ಗುಂಡು ಹಾರಿಸಿದ್ದ ಆರೋಪಿ ತಿಹಾರ್ ಜೈಲಿನಲ್ಲಿ ಹತ್ಯೆ

ಕಿರುಕುಳದಿಂದ ಮನನೊಂದ ನರಸಿಂಗ್ ದೇವಸ್ಥಾನದ ಅರ್ಚಕ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನವರಿಯಲ್ಲಿ ಮುಖ್ಯ ಅರ್ಚಕ ರಾಮ್ ಸರಣ್ ದಾಸ್ ನಾಪತ್ತೆಯಾದ ಬಳಿಕ ಇವರೊಬ್ಬರೇ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಎಷ್ಟು ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ತಿಳಿದ ಕೂಡಲೇ ಪೊಲೀಸರು ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಯೋಧ್ಯೆಯ ಎಸ್‌ಹೆಚ್‌ಒ (SHO) ಮನೋಜ್ ಕುಮಾರ್ ಶರ್ಮ ತಿಳಿಸಿದ್ದಾರೆ. ಇದನ್ನೂ ಓದಿ: ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

ರಾಮ್‌ಶಂಕರ್ ದೇವಸ್ಥಾನದ ಒಳಗೆ ವಾಸಿಸುತ್ತಿದ್ದು, ದೇವಸ್ಥಾನದ ಭದ್ರತೆಗಾಗಿ ಕೆಲವು ಪೊಲೀಸರನ್ನು ಸಹಾ ನಿಯೋಜಿಸಲಾಗಿತ್ತು. ಆದರೆ ಅರ್ಚಕರಿಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಬೆಳ್ಳಿ ಹಾಗೂ ತಾಮ್ರದ ಸಾಮಾನುಗಳನ್ನು ಮಾರಾಟ ಮಾಡುವಲ್ಲಿ ಪೊಲೀಸರೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರು. ಪೊಲೀಸರನ್ನು ದೇವಸ್ಥಾನದ ಒಳಗೆ ನಿಯೋಜಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದರಿಂದ ಅವರನ್ನು ದೇವಸ್ಥಾನದ ಹೊರಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

ತೀವ್ರ ಮಾದಕವ್ಯಸನಿಯಾಗಿದ್ದ ಅರ್ಚಕರು ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ ಬಳಿಕ ಮಾದಕವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಕೆಲವು ಗಂಟೆಗಳ ಬಳಿಕ ಇವರ ಫೇಸ್‌ಬುಕ್ ಲೈವ್ ಬಗ್ಗೆ ಮಾಹಿತಿ ಬಂದಿದೆ. ಇದನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವ 10 ಗಂಟೆಗಳ ಮೊದಲು ಚಿತ್ರೀಕರಿಸಿದ್ದಾರೆ. ರಾಯ್‌ಗಂಜ್ ಪೊಲೀಸ್ ಹೊರಠಾಣೆ ಪ್ರಭಾರ ಉಪನೀರಿಕ್ಷಕರಾಗಿದ್ದ ಸ್ವತಂತ್ರ ಕುಮಾರ್ ಮೌರ್ಯ ಹಾಗೂ ಕಾನ್ಸ್ಟೇಬಲ್‌ ಸುಭಾಷ್ ಸಿಂಗ್ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಅರ್ಚಕ ವಿಡಿಯೋದಲ್ಲಿ ಆರೋಪಿಸಿದ್ದಾರೆ ಎಂದು ಶರ್ಮ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ – ಬ್ರಿಜ್‌ಭೂಷಣ್ ಭಾವುಕ ಹೇಳಿಕೆ

ಅರ್ಚಕರ ಶವಸಂಶ್ಕಾರ ಮಂಗಳವಾರ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲಿಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ 830 ಕೋಟಿ ಖರ್ಚಾಗಿದೆ ಎಂದ ಆಪ್ ಮುಖ್ಯಸ್ಥನ ವಿರುದ್ಧ ಕೇಸ್

]]>
1062278 0 0 0
<![CDATA[ನಟಿ ಶೋಭಿತಾ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಾಗ ಚೈತನ್ಯ]]> https://publictv.in/naga-chaitanya-opens-up-about-dating-actress-shobhita/ Tue, 02 May 2023 07:35:07 +0000 https://publictv.in/?p=1062290 ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಮತ್ತೆ ಸದ್ದು ಮಾಡುತ್ತಿರುವ ನಟಿ ಶೋಭಿತಾ ಧೂಲಿಪಾಲ (Shobhita Dhulipala) ಈ ಹಿಂದೆ ಡೇಟಿಂಗ್ (Dating) ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ (Naga Chaitanya) ಜೊತೆ ಲಂಡನ್ ಹೋಟೆಲ್ ವೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು.

ಸಮಂತಾ (Samantha) ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯಗೆ ಸ್ನೇಹಿತೆಯಾಗಿ ಅವರ ಜೀವನವನ್ನು ಮತ್ತಷ್ಟು ಚಂದಗೊಳಸಿದರು ಎನ್ನುವ ಮಾತಿದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಹಲವು ದೇಶಗಳನ್ನು ಸುತ್ತಿದ್ದಾರೆ ಎನ್ನವುದಕ್ಕೆ ಲಂಡನ್ ನಲ್ಲಿ ಸಿಕ್ಕ ಫೋಟೋ ಸಾಕ್ಷಿ ಹೇಳಿತ್ತು.

ಡೇಟಿಂಗ್ ವಿಚಾರ ಸಾಕಷ್ಟು ಸದ್ದು ಮಾಡಿದ್ದರೂ, ಈವರೆಗೂ ಒಂದೇ ಒಂದು ಪ್ರತಿಕ್ರಿಯೆ ಕೂಡ ನಾಗ ಚೈತನ್ಯ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರವನ್ನು ಮಾತನಾಡಿದ್ದು, ಜೊತೆಗೆ ಡಿವೋರ್ಸ್ ಬಳಿಕದ ಜೀವನವನ್ನೂ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಸಮಂತಾ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

‘ಡಿವೋರ್ಸ್ (Divorce) ಬಳಿಕ ತಾವು ಯಾವತ್ತೂ ಖಿನ್ನತೆಗೆ ಒಳಗಾಗಿಲ್ಲ, ಎಲ್ಲವೂ ಪಾಠ. ಅದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ ನಾಗ ಚೈತನ್ಯ. ಅಲ್ಲದೇ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ತಮಗೇನೂ ಗೊತ್ತಿಲ್ಲ.  ಆ ಕುರಿತು ಮಾತನಾಡಲಾರೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

]]>
1062290 0 0 0
<![CDATA[ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ಖುಷ್ಬೂಗೆ ನೆಟ್ಟಿಗರಿಂದ ತರಾಟೆ]]> https://publictv.in/actress-kushboo-sundar-daughter-avantika-gets-trolled-for-her-bold-photos/ Tue, 02 May 2023 07:40:03 +0000 https://publictv.in/?p=1062296 ಖ್ಯಾತ ನಟಿ ಖುಷ್ಬೂ (Kushboo Sundar) ಅವರು ಸಿನಿಮಾ- ರಾಜಕೀಯ (Politics) ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಖುಷ್ಬೂ ಅವರು ಮಗಳ ನಡೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮಗಳನ್ನು ಸರಿಯಾಗಿ ಬೆಳೆಸೋಕೆ ಆಗಲ್ವಾ? ಅಂತಾ ಖುಷ್ಬೂಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು.?

ನಟಿ ಖುಷ್ಬೂ ಸುಂದರ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆವಂತಿಕಾ (Avantika) ಮತ್ತು ಆನಂದಿತಾ (Ananditha)  ಎಂಬ ಮಕ್ಕಳಿದ್ದಾರೆ. ಇಬ್ಬರೂ ರಾಜಕೀಯ- ಸಿನಿಮಾರಂಗದಿಂದ ದೂರವಿದ್ದಾರೆ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

ಇದೀಗ ಆವಂತಿಕಾ ಅವರು ಬೋಲ್ಡ್ ಬಟ್ಟೆ, ಒಳಉಡುಪು ಧರಿಸದೇ ಬಟ್ಟೆ ತೊಟ್ಟಿರೋದು, ಮೈ ಮೇಲೆ ಹಾಕಿಸಿಕೊಂಡಿರುವ ಹಚ್ಚೆ, ಕೂದಲಿಗೆ ಕಲರ್ ಮಾಡಿಸಿರೋದು ಇವೆಲ್ಲವೂ ನೋಡಿ ನಟಿ ಖುಷ್ಬೂಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಖುಷ್ಬೂ ಪುತ್ರಿ ಆವಂತಿಕಾ ತನ್ನ ಬಟ್ಟೆಯ ವಿಷ್ಯವಾಗಿ ಸಖತ್‌ ಟ್ರೋಲ್‌ ಕೂಡ ಆಗ್ತೀದ್ದಾರೆ.

 
View this post on Instagram
 

A post shared by avantika (@avantikasundar)

ನಿಮ್ಮ ಮಗಳ ಬಗ್ಗೆ ನೀವು ಗಮನ ವಹಿಸುತ್ತಿಲ್ಲ, ಮಗಳನ್ನು ಸರಿಯಾಗಿ ಬೆಳೆಸಿಲ್ಲ ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ನೆಟ್ಟಿಗರು ಖುಷ್ಬೂಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಆವಂತಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ, ನಿಮ್ಮ ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

]]>
1062296 0 0 0
<![CDATA[Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ]]> https://publictv.in/sharad-pawar-quits-as-ncp-chief-amid-speculation-over-nephew-ajit-pawar/ Tue, 02 May 2023 07:51:03 +0000 https://publictv.in/?p=1062307 ಮುಂಬೈ: ಮಹಾರಾಷ್ಟ್ರದ (Maharashtra) ಹಿರಿಯ ರಾಜಕಾರಣಿ, ಎನ್‌ಸಿಪಿ ರಾಷ್ಟ್ರೀಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಘೋಷಿಸಿದ್ದಾರೆ.

ಪವಾರ್ ಅವರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲು ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಮೈತ್ರಿಯನ್ನು ಒಟ್ಟುಗೂಡಿಸುವಲ್ಲಿ ದೊಡ್ಡ ಪಾತ್ರ ಹೊಂದಿದ್ದರು. ಇದನ್ನೂ ಓದಿ: ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

ಉದ್ಧವ್‌ ಠಾಕ್ರೆ ಸರ್ಕಾರದಿಂದ ಬೇರ್ಪಟ್ಟ ನಂತರ ಏಕನಾಥ್‌ ಶಿಂಧೆ ಅವರು ಪಕ್ಷದ ತಂಡದೊಂದಿಗೆ ಬಿಜೆಪಿ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದರು. ಇದಾದ ಬಳಿಕ, ಈಚೆಗೆ ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ತಮ್ಮ ಚಿಕ್ಕಪ್ಪ ಶರದ್‌ ಪವಾರ್‌ ಅವರನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿ ಮುಂದಿನ ಸಿಎಂ ಆಗುತ್ತಾರೆಯೇ ಎಂಬ ಊಹಾಪೋಹದ ಸುದ್ದಿ ಹರಿದಾಡುತ್ತಿದೆ.

ಇದರ ಬೆನ್ನಲ್ಲೇ ಶರದ್‌ ಪವಾರ್‌ ಅವರು ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ರಾಜಕೀಯ ಬೆಳವಣಿಗೆ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?

]]>
1062307 0 0 0
<![CDATA[ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌]]> https://publictv.in/karnataka-election-2023-dk-shivakumar-helicopter-emergency-landing-after-eagle-hits/ Tue, 02 May 2023 07:50:46 +0000 https://publictv.in/?p=1062308 ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಅವರು ಪ್ರಾಣಾಪಾಯದಿಂದ ಗ್ರೇಟ್‌ ಎಸ್ಕೇಪ್‌ ಆಗಿದ್ದಾರೆ.

ಇಂದು ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆ ಶಿವಕುಮಾರ್‌ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್‌ (Helicopter) ಏರಿದ್ದರು. ಜಕ್ಕೂರಿನಿಂದ ಹೆಲಿಕಾಪ್ಟರ್‌ ಟೇಕಾಫ್‌ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು (Egale) ಡಿಕ್ಕಿ ಹೊಡೆದಿದೆ.

 

ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್‌ ಮುಂದಿನ ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಎಚ್ಚೆತ್ತ ಪೈಲಟ್‌ ಎಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ಹೆಲಿಕಾಪ್ಟರ್‌ನಲ್ಲಿ 4 ಮಂದಿ ಪ್ರಯಣಿಸುತ್ತಿದ್ದರು. ಹೆಲಿಕಾಪ್ಟರ್‌ನಿಂದ ಇಳಿದ ಡಿಕೆ ಶಿವಕುಮಾರ್‌ ಕಾರು ಮೂಲಕ ಮುಳಬಾಗಿಲು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

]]>
1062308 0 0 0
<![CDATA[ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್]]> https://publictv.in/i-cant-go-into-politics-actor-shivaraj-kumar/ Tue, 02 May 2023 08:04:33 +0000 https://publictv.in/?p=1062316 ತ್ನಿ ಗೀತಾ ಜೊತೆ ಚುನಾವಣಾ (Election) ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್ (Shivaraj Kumar), ಯಾವುದೇ ಕಾರಣಕ್ಕೂ ಸಕ್ರೀಯ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪತ್ನಿ ಗೀತಾ ಅವರದ್ದು ರಾಜಕಾರಣಿ ಕುಟುಂಬ. ಹಾಗಾಗಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿರುವೆ. ಆಪ್ತರಿಗಾಗಿ ಪ್ರಚಾರ ಮಾಡುವೆ. ಅದರ ಹೊರತಾಗಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ಸೇರಲಾರೆ ಮತ್ತು ಚುನಾವಣೆಗೂ ನಿಲ್ಲಲಾರೆ ಎಂದಿದ್ದಾರೆ ಶಿವರಾಜ್ ಕುಮಾರ್.

ಡಾ.ರಾಜ್ ಕುಟುಂಬಕ್ಕೂ ರಾಜಕಾರಣಿಗಳಿಗೂ ನಂಟಿದ್ದರೂ ನೇರವಾಗಿ ಯಾವತ್ತೂ ಅವರು ರಾಜಕಾರಣಿಗಳೊಂದಿಗೆ ಮತ್ತು ಪಕ್ಷದೊಂದಿಗೆ  ಗುರುತಿಸಿಕೊಂಡವರಲ್ಲ. ಸ್ವತಃ ರಾಜ್ ಕುಮಾರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡವಿದ್ದರೂ, ಅವರು ಒಪ್ಪಿಕೊಳ್ಳಲಿಲ್ಲ. ಯಾವುದೇ ಪಕ್ಷದ (Party) ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಅದೇ ಮಾರ್ಗದಲ್ಲೇ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಮತ್ತು ಪುನೀತ್ (Puneeth) ರಾಜ್ ಕುಮಾರ್ ನಡೆದುಕೊಂಡು ಬಂದವರು. ಆದರೆ, ಗೀತಾ ಅವರನ್ನು ಮದುವೆಯಾದ ನಂತರ ಶಿವಣ್ಣ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ.

ದೊಡ್ಮನೆ ಸೊಸೆಯಾಗಿ ಬಂಗಾರಪ್ಪನವರ ಪುತ್ರಿ ಗೀತಾ (Geeta) ಬಂದ ನಂತರ, ಸಹೋದರನ ಪರವಾಗಿ ಅವರು ಪ್ರಚಾರಕ್ಕೆ ಹೋದರು. ಸ್ವತಃ ಗೀತಾ ಅವರೇ ಚುನಾವಣೆಗೂ ನಿಂತರು. ಹೀಗಾಗಿ ಅನಿವಾರ್ಯ ಕಾರಣದಿಂದಾಗಿ ಶಿವರಾಜ್ ಕುಮಾರ್ ‍ಪ್ರಚಾರದಲ್ಲಿ ತೊಡಗಲೇಬೇಕಾಯಿತು. ಆದರೆ, ಡಾ.ರಾಜ್ ಕುಟುಂಬ ಮಾತ್ರ ಚುನಾವಣೆಯ ಉಸಾಬರಿಗೆ ಹೋಗಲಿಲ್ಲ. ಸ್ವತಃ ಗೀತಾ ಅವರೇ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಪ್ರಚಾರ ಮಾಡಲಿಲ್ಲ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

ಮೊನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ‘ಶಿವರಾಜ್ ಕುಮಾರ್ ನನ್ನ ಅಣ್ಣ, ಗೀತಾ ನನ್ನ ಅತ್ತಿಗೆ. ಉಳಿದಂತೆ ನನಗೇನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜಕಾರಣದಿಂದ ದೂರ ಇದ್ದೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ಹಾಗಾಗಿ ಶಿವರಾಜ್ ಕುಮಾರ್ ಕೂಡ ಸಕ್ರೀಯ ರಾಜಕಾರಣದಲ್ಲಿ ಇರಲಾರೆ ಎನ್ನುವ ಸಂದೇಶ ನೀಡಿದ್ದಾರೆ.

]]>
1062316 0 0 0
<![CDATA[ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್‌ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್‌ ಸಿಡಿಮಿಡಿ]]> https://publictv.in/actor-chetan-ahimsa-reacts-for-salman-khan-statement-on-women-bodies-are-covered-i-feel-better/ Tue, 02 May 2023 08:25:04 +0000 https://publictv.in/?p=1062324 'ಆ ದಿನಗಳು' (Aa Dinagalu Film) ಚಿತ್ರ ಖ್ಯಾತಿ ನಟ ಚೇತನ್ (Actor Chethan) ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ (Salman Khan) ವಿರುದ್ಧ ಕಿಡಿಕಾರಿದ್ದಾರೆ. ಮಹಿಳೆಯರ ಬಟ್ಟೆ ಕುರಿತು ಸಲ್ಮಾನ್ ಖಾನ್ ನೀಡಿದ್ದ ಹೇಳಿಕೆಗೆ ಚೇತನ್ ರಾಂಗ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಸೋಲಿನ ನಂತರ ಸಲ್ಮಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ತಾವು ಮಗುವನ್ನು ಹೊಂದುವ ಬಗ್ಗೆ, ಎಕ್ಸ್‌ಗಳ ವಿಚಾರಗಳನ್ನ ಸಲ್ಮಾನ್ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಹೆಣ್ಣು ಮಕ್ಕಳ ಬಟ್ಟೆ ಬಗ್ಗೆ ಸಲ್ಮಾನ್ ಖಾನ್ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಸಂದರ್ಶನದಲ್ಲಿ ಸಲ್ಮಾನ್ ಖಾನ್, ಮಹಿಳೆಯ (Women) ದೇಹ ಪವಿತ್ರವಾದುದು. ಅದನ್ನು ಎಷ್ಟು ಮುಚ್ಚಿಟ್ಟುಕೊಳ್ಳುತ್ತೀರೋ ಅಷ್ಟು ಉತ್ತಮ ಎಂದು ಹೇಳಿದ್ದರು. ಸಮಸ್ಯೆ ಇರುವುದು ಹುಡುಗಿಯರಲ್ಲಿ ಅಲ್ಲ. ಸಮಸ್ಯೆ ಇರುವುದು ಹುಡುಗರಲ್ಲಿ. ನಿಮ್ಮ ತಾಯಿ, ತಂಗಿ, ಪತ್ನಿಯನ್ನು ಹುಡುಗರು ಆ ದೃಷ್ಟಿಯಿಂದ ನೋಡುವುದು ನನಗೆ ಇಷ್ಟ ಆಗುವುದಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಸಲ್ಲು ಈ ಮಾತಿಗೆ ಚೇತನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ದೇಹವು ಅಮೂಲ್ಯ, ದೇಹವನ್ನು ಅವರು ಹೆಚ್ಚು ಮುಚ್ಚಿಕೊಂಡಷ್ಟೂ ಒಳ್ಳೆಯದು ಎಂದು ಫಿಲ್ಮ್ ಸ್ಟಾರ್ ಸಲ್ಮಾನ್ ಖಾನ್ ಹೇಳಿದ್ದಾರೆ. ಅವರ ಈ ಮಾತು ಅತ್ಯಂತ ವ್ಯಂಗ್ಯವಾಗಿ ಕಾಣುತ್ತಿದೆ. ತನ್ನ ವೈಯಕ್ತಿಕ ದುರ್ವರ್ತನೆಗಳು ಮತ್ತು ಮಹಿಳೆಯರ ದೇಹದೊಂದಿಗೆ ಪ್ರಶ್ನಾರ್ಹ ವಿಧಾನಗಳಿಗೆ ಹೆಸರುವಾಸಿಯಾಗಿರುವ ಸಲ್ಮಾನ್ ಖಾನ್, ಈಗ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂಬುದರ ಕುರಿತು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ ಎಂದು ಚೇತನ್ ಸಿಡಿದೆದ್ದಿದ್ದಾರೆ.

ಸಲ್ಮಾನ್ ಖಾನ್ ಈ ರೀತಿ ಮಾತನಾಡುವುದರಿಂದ ಅವರ ಅಜ್ಞಾನ, ಬೂಟಾಟಿಕೆ, ಮತ್ತು ಪುರಷಪ್ರಧಾನ ಮನಸ್ಥಿತಿಯು ಹೆಚ್ಚು ಸ್ಪಷ್ಟವಾಗಿ ಕಾಣುತ್ತಿದೆ' ಎಂದು ಚೇತನ್ ಅಹಿಂಸ ಅಸಮಾಧಾನ ಹೊರಹಾಕಿದ್ದಾರೆ.

]]>
1062324 0 0 0
<![CDATA[ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ]]> https://publictv.in/former-minister-jeevijaya-resigns-to-congress/ Tue, 02 May 2023 09:17:45 +0000 https://publictv.in/?p=1062331 - ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ಗೆ ಪರೋಕ್ಷ ಬೆಂಬಲ

ಕೊಡಗು: ಕೊಡಗಿನವರಿಗೆ (Kodagu) ಕಾಂಗ್ರೆಸ್ (Congress) ಪಕ್ಷದಿಂದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಎ. ಜೀವಿಜಯ (B.A.Jeevijaya) ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು ರಾಜಕಾರಣದಲ್ಲಿ ಅನೇಕ ಬಾರಿ ಎಡವಿ ತಪ್ಪು ದಾರಿಯಲ್ಲಿ ನಡೆದಿದ್ದೇನೆ. ಜನತೆ ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಲ್ಲ. ಕಾಂಗ್ರೆಸ್‌ನಿಂದ ಪ್ರಾರಂಭವಾಗಿ ಕಾಂಗ್ರೆಸ್‌ನಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿ ರಾಜೀನಾಮೆ ಪತ್ರ ನೀಡಿದ್ದೇನೆ. ಇಂತಹ ನಿರ್ಧಾರಕ್ಕೆ ಬರಲು ಕಾರಣರಾದ ಕೆಪಿಸಿಸಿ ಅಧ್ಯಕ್ಷರಿಗೆ ಧನ್ಯವಾದ ಎಂದು ಕುಟುಕಿದರು. ಇದನ್ನೂ ಓದಿ: ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

ಯಾವ ಪಕ್ಷದ ಹಂಗೂ ಇಲ್ಲ‌. ಸತ್ವ ಇಲ್ಲದ ತತ್ವಗಳು ಸಿದ್ಧಾಂತಗಳು ಮಾಯವಾಗಿದೆ. ಬೇರೆ ಜಿಲ್ಲೆಯ ಅಭ್ಯರ್ಥಿ ಬೇಡ ಎಂದಿದ್ದೆ. ನನ್ನ ಪತ್ರಕ್ಕೆ ಕವಡೆ ಕಾಸಿನ ಬೆಲೆ ಸಿಕ್ಕಿಲ್ಲ‌. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ತಂದೆ ಒಂದು ಪಕ್ಷ, ಮಗ ಮತ್ತೊಂದು ಪಕ್ಷ. ಕೊಡಗಿನವರೇ ಇಲ್ಲಿ ಗೆಲ್ಲಬೇಕು. ನನಗೆ ಅಥವಾ ಚಂದ್ರಮೌಳಿಗೆ ಟಿಕೆಟ್ ಕೊಡಬೇಕು ಎನ್ನುವ ಶಿಫಾರಸು ಇತ್ತು. ಆದರೆ ನಮ್ಮ ಅಭಿಪ್ರಾಯ ಆಲಿಸದೆ ಹೊರಗಿನವರಿಗೆ ಟಿಕೆಟ್ ಕೊಟ್ಟರು. ನಮ್ಮಂತಹವರು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ನನಗೆ ಫೋನ್ ಮಾಡಿದ್ರು. ಆದರೆ ಪಕ್ಷದ ವಿಚಾರದ ಬಗ್ಗೆ ಏನೂ ಮಾತನಾಡಿಲ್ಲ. ಅಲ್ಲದೇ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಆಕಸ್ಮಿಕವಾಗಿ ಸಿಕ್ಕರು. ಕೊನೆ ಚುನಾವಣೆ ಎಂದರು. ಶಾಸಕರಾಗುವುದು ಬಿಜೆಪಿಗೆ ಮಾತ್ರವಲ್ಲ ಎಲ್ಲರಿಗೂ ನೀವೇ ಶಾಸಕರು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದೆ, ಅವರು ಒಪ್ಪಿದರು. ಅವರಿಗೆ ಬೆಂಬಲ ಕೊಟ್ಟರೆ ತಪ್ಪೇನು ಎಂಬ ಭಾವನೆ ಇದೆ ಎಂದು ಪರೋಕ್ಷವಾಗಿ ರಂಜನ್‌ಗೆ ಬೆಂಬಲ ಸೂಚಿಸಿದರು. ಇದನ್ನೂ ಓದಿ: PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?

ಕೊಡಗಿನಲ್ಲಿ ಕಾಂಗ್ರೆಸ್‌ನ ಭದ್ರಕೋಟೆಗೆ ಮೊದಲು ಪೆಟ್ಟು ನೀಡಿದ್ದೇ ಬಿ.ಎ. ಜೀವಿಜಯ. 1983 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರನ್ನು ಮಣಿಸಿ ಗಮನ ಸೆಳೆದಿದ್ದರು.

]]>
1062331 0 0 0
<![CDATA[ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ]]> https://publictv.in/karnataka-election-2023-narendra-modi-slams-against-congress-in-vijayanagara/ Tue, 02 May 2023 09:34:38 +0000 https://publictv.in/?p=1062336 ವಿಜಯನಗರ: ಈ ಹಿಂದೆ ಶ್ರೀರಾಮಚಂದ್ರನನ್ನು ಕಾಂಗ್ರೆಸ್ ಬಂಧಿಸಿಟ್ಟಿತು. ಇದೀಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ (Congress) ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರದಲ್ಲಿ (Vijayanagara) ಬಿಜೆಪಿ (BJP) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹನುಮಂತನ ಜನ್ಮಸ್ಥಾನಕ್ಕೆ ನಾನು ಬಂದಿದ್ದೇನೆ. ನಾನು ಹನುಮಂತನಿಗೆ ಶತ ಪ್ರಣಾಮ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗಬಲಿ ಅಂದರೆ ಹನುಮಂತನನ್ನು ಬೀಗ ಹಾಕಿ ಬಂಧಿಸಲು ಹೊರಟಿದ್ದಾರೆ. ಕಾಂಗ್ರೆಸ್‌ನವರಿಗೆ ಹಿಂದೆ ಶ್ರೀರಾಮನನ್ನು ಕಂಡರೂ ಆಗುತ್ತಿರಲಿಲ್ಲ. ಈಗ ಹನುಮಂತನ ಕಂಡರೂ ಆಗುತ್ತಿಲ್ಲ. ನಮಗೆ ಶ್ರೀರಾಮಚಂದ್ರ ಹಾಗೂ ಹನುಮಂತ ಪೂಜ್ಯರು. ಕಾಂಗ್ರೆಸ್ ಸದಾ ಶ್ರೀ ರಾಮನ ವಿಷಯದಲ್ಲಿ ರಾಜಕಾರಣ ಮಾಡುತ್ತಾ ಬಂದಿತ್ತು. ಈಗ ಜೈ ಭಜರಂಗಬಲಿ ಎನ್ನುವ ಹನುಮಾನ್ ಸೇವಕರನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಈ ಪುಣ್ಯಭೂಮಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳುವ ಮೂಲಕ ಬಜರಂಗದಳವನ್ನು (Bhajarang Dal) ನಿಷೇಧಿಸಲು ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

ಕಾಂಗ್ರೆಸ್ ಮೊದಲಿನಿಂದಲೂ ಆಂತಕವಾದಿಗಳ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಭಯೋತ್ಪಾದಕರು ಸತ್ತಾಗ ಅಳುತ್ತಾರೆ. ಸರ್ಜಿಕಲ್ ಸ್ಟೈಕ್ ನಡೆದಾಗ ಭಾರತೀಯ ಸೇನೆಯ ಸಾಮರ್ಥ್ಯದ ಕುರಿತು ಪ್ರಶ್ನೆ ಮಾಡುತ್ತಾರೆ. ಕರ್ನಾಟಕದಲ್ಲಿ ಉಗ್ರ ಕೃತ್ಯ ನಡೆದಾಗ ಕಾಂಗ್ರೆಸ್ ಅವರ ಪರ ನಿಂತಿದೆ. ಆತಂಕವಾದಿಗಳು, ಉಗ್ರವಾದಿಗಳು ಜಾಗೃತವಾಗಿರುವ ಕಡೆ ಅವರನ್ನು ಶಮನಗೊಳಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಸರ್ಕಾರದ ಸಾಧನೆಯನ್ನು ಕೊಂಡಾಡಿದರು. ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ಮೋದಿ ಭಾಷಣದ ಹೈಲೈಟ್ಸ್: ವಿಜಯನಗರ ಜಿಲ್ಲೆ ಅತ್ಯಂತ ಐತಿಹಾಸಿಕ ಸ್ಥಳವಾಗಿದೆ. ಪುರಾಣ, ಇತಿಹಾಸದಲ್ಲೂ ಉಲ್ಲೇಖವಿದೆ. ಇದು ಕರ್ನಾಟಕದ ಅತ್ಯಂತ ಯುವ ಜಿಲ್ಲೆಯಾಗಿದೆ. ವಿಜಯನಗರ ಜಿಲ್ಲೆಯಾಗಿ ಮಾಡಲಾಗಿದೆ. ಇಲ್ಲಿನ ಪ್ರತಿ ಮನೆ ಮನೆಯ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಈಗಾಗಲೇ ವಿಜನಗರ ಜನರು ಬಿಜೆಪಿಯ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ವಿಜಯನಗರ ನಿರ್ಧಾರ ಮಾಡಿದ್ದಾರೆ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ. ಇದನ್ನೂ ಓದಿ: ಪಂಚಮಸಾಲಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ (JDS) ಅಧಿಕಾರದಲ್ಲಿದ್ದಾಗ ಕಾಮಗಾರಿಗಳು ವಿಳಂಬವಾಗುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಾಮಗಾರಿಗಳ ವೇಗವು ಹೆಚ್ಚಿದೆ. ಮುಂದಿನ 25 ವರ್ಷಗಳಲ್ಲಿ ಕರ್ನಾಟಕವು ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ನೇರ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಕೆಲಸ ಮಾಡುತ್ತೇವೆ. 9 ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತಿದ್ದು, ಚಿತ್ರದುರ್ಗದಲ್ಲೂ ಕೈಗಾರಿಕೆ ಸ್ಥಾಪಿಸಲು ಬಿಜೆಪಿ ಕಟಿಬದ್ಧವಾಗಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

ಚಿತ್ರದುರ್ಗದ ಭದ್ರತೆಗೆ ಏಳು ಸುತ್ತಿನ ಕೋಟೆ ಇರುವ ಹಾಗೇ ನಾವು ಸಮಾಜಕ್ಕೆ ಭದ್ರತೆ ಒದಗಿಸುತ್ತೇವೆ. ಪಿಎಂ ಆವಾಜ್ ಯೋಜನೆಯಡಿ ಸರ್ವರಿಗೂ ಮನೆ ನಿರ್ಮಾಣ ಮಾಡಿಕೊಡುತ್ತಿದ್ದೇವೆ. ಉಜ್ವಲ ಯೋಜನೆಯಡಿ ಗ್ಯಾಸ್, ಆಯುಷ್ಮನ್ ಭಾರತ್ ಅಡಿಯಲ್ಲಿ ಆರೋಗ್ಯ ರಕ್ಷಣೆ ಮತ್ತು ಉಚಿತವಾಗಿ ಲಸಿಕೆಯನ್ನು ನೀಡಿದ್ದೇವೆ. ಮುದ್ರಾ ಯೋಜನೆಯ ಮೂಲಕ ಆರ್ಥಿಕ ಭದ್ರತೆಯ ಶಕ್ತಿಯನ್ನು ನೀಡಿದ್ದೇವೆ. ಭೀಮಾಜ್ಯೋತಿ, ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸುಕನ್ಯಾ ಯೋಜನೆಯನ್ನು ನೀಡುವ ಮೂಲಕ ರಕ್ಷಣೆಯನ್ನು ಒದಗಿಸುತ್ತಿದ್ದೇವೆ. ಎಲ್ಲರಿಗೂ ಸಾಮಾಜಿಕ ಭದ್ರತೆ ನೀಡುವ ಮೂಲಕ ಏಳು ಸುತ್ತಿನ ಕೋಟೆಯಂತೆ ಬಿಜೆಪಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿ ಫೈಟ್ – ಶ್ರವಣಬೆಳಗೊಳದಲ್ಲಿ ಯಾರಿಗೆ ಜಯ?

ಬಿಜೆಪಿ ಮಾಡಿದಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್ ಕಲ್ಪನೆಯಲ್ಲೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಕೇವಲ 9 ವರ್ಷಗಳಲ್ಲಿ ಡಬಲ್ ಆಗುವಷ್ಟು ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಿದೆ. ಚಿತ್ರದುರ್ಗದಲ್ಲೂ ಮೆಡಿಕಲ್ ಕಾಲೇಜು ಆರಂಭಿಸಿರುವುದು ಇಲ್ಲಿನ ಮಕ್ಕಳು ವೈದ್ಯರಾಗಲು ನೆರವಾಗಿದೆ. ಅಲ್ಲದೇ ಉದ್ಯೋಗ ಗಳಿಸಲು ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಆದಿವಾಸಿಗಳಿಗೆ ವಿವಿಧ ಯೋಜನೆ ನೀಡಿದ್ದು, ಬಂಜಾರ ಸಮುದಾಯದ ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಅಲ್ಲದೇ ಭೂಮಿ ಇಲ್ಲದವರಿಗೆ ಭೂಮಿ ನೀಡಿ ಅವರ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಬಿಜೆಪಿ ಸರ್ಕಾರ ಬಡವರ ಮಕ್ಕಳಿಗಾಗಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲಿ ಬರೆಯುವ ಅವಕಾಶವನ್ನು ಮಾಡಿಕೊಟ್ಟಿದೆ. ರೈತರ ಮಕ್ಕಳಿಗೆ ರೈತರ ನಿಧಿ ಯೋಜನೆಯಡಿ ಸ್ಕಾಲರ್ಶಿಪ್ ನೀಡಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಮಕ್ಕಳ ಸಮವಸ್ತ್ರದಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಇದನ್ನೂ ಓದಿ: PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?

ಮಾರುಕಟ್ಟೆಯಲ್ಲಿ ನಾವು ಯಾವುದೇ ವಸ್ತುಗಳನ್ನು ಖರೀದಿಸುವಾಗ ಅದಕ್ಕೆ ಗ್ಯಾರಂಟಿ ಕೊಡಲಾಗುತ್ತದೆ. ಅದಕ್ಕೆ ಇಂತಿಷ್ಟು ಸಮಯ ಎಂದು ನಿಗದಿಯಾಗಿರುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್‌ನ ಸಮಯ ಮುಗಿದಿದೆ. ಕಾಂಗ್ರೆಸ್ ಕೊಡುವ ಗ್ಯಾರಂಟಿಗೆ ವಾರಂಟಿ ಇಲ್ಲ. ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿ ಕೊಡುತ್ತಿದೆ. ಗುಜರಾತಲ್ಲಿ ಚುನಾವಣೆ ವೇಳೆ ಮನೆ ಕಟ್ಟಿಕೊಡುವುದಾಗಿ ಸುಳ್ಳು ಭರವಸೆ ನೀಡಿ 500 ರೂ. ತೆಗೆದುಕೊಂಡು ಅದರಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಇದನ್ನೂ ಓದಿ: ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

ಕರ್ನಾಟಕದ ಜನತೆ ಯಾವತ್ತೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲ್ಲ. ಅವರು ಸುಳ್ಳಿನ ಗ್ಯಾರಂಟಿ ನೀಡುತ್ತಿದ್ದಾರೆ. ಆ ಯೋಜನೆಗಳನ್ನು ತರಲು ಸಾಧ್ಯವಿಲ್ಲ. ಸಂಪೂರ್ಣ ಅಭಿವೃದ್ಧಿಯನ್ನು ನಿಲ್ಲಿಸಿ ಗ್ಯಾರಂಟಿ ಯೋಜನೆಯನ್ನು ನೀಡಲು ಮುಂದಾಗಬೇಕಾಗುತ್ತದೆ. ಕಾಂಗ್ರೆಸ್‌ನವರು ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ತಲುಪ ಅನೇಕ ಯೋಜನೆಗಳು ನಿಲ್ಲುವ ಸಾಧ್ಯತೆಯಿದೆ. ಬಿಜೆಪಿ ಅಭಿವೃದ್ಧಿಯ ಕೆಲಸವನ್ನು ಮಾಡುತ್ತಿದೆ. ಆದರೆ ಕಾಂಗ್ರೆಸ್‌ನ ಉದ್ದೇಶ ಬೇರೆಯಾಗಿದೆ. ಅದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಜೆಡಿಎಸ್‌ನದ್ದು ಅಧಿಕೃತ ಹೊಂದಾಣಿಕೆಯೋ ಅಥವಾ ರಾಜಕೀಯ ವ್ಯಭಿಚಾರವೋ: ಸಿ.ಟಿ.ರವಿ ವ್ಯಂಗ್ಯ

ಬಿಜೆಪಿಯ ಪ್ರಣಾಳಿಕೆ ಉತ್ತಮವಾಗಿದ್ದು, ಕರ್ನಾಟಕವನ್ನು ನಂಬರ್ ವನ್ ಮಾಡುವ ಪ್ರಣಾಳಿಕೆಯಾಗಿದೆ. ಅಭಿವೃದ್ಧಿಯ ನೀಲಿನಕ್ಷೆ ಇದಾಗಿದ್ದು, ಸಮೃದ್ಧ ಸಶಕ್ತ ಕರ್ನಾಟಕ ನಿರ್ಮಾಣದ ಗುರಿ ಇದರಲ್ಲಿದೆ ಎಂದು ಪ್ರಧಾನಿ ನರೆಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ

]]>
1062336 0 0 0
<![CDATA[‘ದಿ ಕೇರಳ ಸ್ಟೋರಿ’ ಚಿತ್ರ ತಡೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ]]> https://publictv.in/the-supreme-court-refused-to-hear-the-petition-to-ban-the-film-the-kerala-story/ Tue, 02 May 2023 09:27:58 +0000 https://publictv.in/?p=1062337 ದೇ ಮೇ 5ರಂದು ರಿಲೀಸ್ ಆಗುತ್ತಿರುವ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ತಡೆ ನೀಡಬೇಕು ಎಂದು ಸುಪ್ರೀಂ ಕೋರ್ಟಿಗೆ (Supreme Court) ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಅರ್ಜಿ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್  ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಕೆ.ಎಂ. ಜೊಸೆಫ್ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆಯನ್ನು ನಿರಾಕರಿಸಿದ್ದು, ನೀವು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಎಂದು ಸೂಚಿಸಿದ್ದಾರೆ.

ಈ ಸಿನಿಮಾದಲ್ಲಿ ದ್ವೇಷ ಪೂರಿತ ಸಂಭಾಷಣೆ ಹಾಗೂ ಪ್ರೊಪೊಗಾಂಡ ಸಿನಿಮಾ ಎಂದು ವಕೀಲ ನಿಜಾಮ್ ಪಾಷಾ (Pasha) ವಾದಿಸಿದ್ದರು. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ‘ನಿಮಗೆ ಹಾಗೆ ಅನಿಸಿದರೆ ನೀವು ಸಿನಿಮಾ ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು’ ಎಂದು ತಿಳಿಸಿದೆ.  ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಎಂದಿರುವ ಕೋರ್ಟ್ ಮಾತಿಗೆ ಪಾಶಾ ಹೈಕೋರ್ಟ್ ಮೆಟ್ಟಿಲು ಏರುತ್ತಾರಾ ಅಥವಾ ಇಲ್ಲಿಗೆ ಅದನ್ನು ಕೈ ಬಿಡುತ್ತಾರಾ ಎನ್ನುವ ಕುತೂಹಲ ಕೂಡ ಮೂಡಿದೆ. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಕಪೋಕಲ್ಪಿತ ಕಥೆ ಹಾಗೂ ಕೇರಳ ರಾಜ್ಯಕ್ಕೇ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ  ದಿ ಕೇರಳ ಸ್ಟೋರಿ ಸಿನಿಮಾ ಮಾಡಲಾಗಿದೆ ಎನ್ನುವ ಆರೋಪ ಹಲವರದ್ದು. ಒಂದು ಧರ್ಮವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಇಂತಹ ಚಿತ್ರವನ್ನು ರಿಲೀಸ್ ಮಾಡದಂತೆ ಕೇರಳದ ಅನೇಕ ಸಂಘಟನೆಗಳು ಒತ್ತಾಯಿಸಿವೆ. ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಮೇ 5ಕ್ಕೆ ಬಿಡುಗಡೆ ಆಗತ್ತಾ ಎನ್ನುವ ಅನುಮಾನ ಕೂಡ ಮೂಡಿದೆ.

ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ.

ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

]]>
1062337 0 0 0
<![CDATA[ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ]]> https://publictv.in/karnataka-election-2023-ramya-speech-in-election-campaign-at-mandya/ Tue, 02 May 2023 09:36:13 +0000 https://publictv.in/?p=1062332 ಮಂಡ್ಯ: ನಾನು ಮಂಡ್ಯದವಳೇ ಆಗಿದ್ದು, ನಾನೊಬ್ಬಳು ಗೌಡ್ತಿಯಾಗಿರುತ್ತೇನೆ. ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ ಎಂದು ಮಾಜಿ ಸಂಸದೆ ರಮ್ಯಾ (Ramya) ಹೇಳಿದ್ದಾರೆ.

ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಮಂಡ್ಯಕ್ಕೆ ಬರ್ತಾ ಹೋಗ್ತಾ ಇದ್ದೀನಿ. ಸೋಮವಾರವೂ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನನಗೆ ನೆಂಟರು ಇದ್ದಾರೆ. ಸಾಕಷ್ಟು ಬಾರಿ ನಾನು ಮಂಡ್ಯಗೆ ಬಂದಿದ್ದೇನೆ. ಆದರೆ ಕ್ಯಾಮಾರಾ ಕಣ್ಣಿಗೆ ಎಲ್ಲೂ ಕಾಣಿಸಿಕೊಂಡಿಲ್ಲ ಎಂದರು.

ಮಂಡ್ಯ ಜನರಿಗೆ ನಾನು ಚಿರ ಋಣಿಯಾಗಿದ್ದೇನೆ. ಮಂಡ್ಯ ಜನರ ಸಂಬಂಧ ನನ್ನ ಜೊತೆ ಸದಾ ಇರುತ್ತದೆ. ರಾಜಕೀಯ ಅಂತಾ ಇಲ್ಲ, ಎಲ್ಲಾ ವಿಚಾರದಲ್ಲಿ ಮಂಡ್ಯದಲ್ಲಿ ಇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್‌ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್‌ ಸಿಡಿಮಿಡಿ

 

]]>
1062332 0 0 0
<![CDATA[ಪಂಚಮಸಾಲಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ]]> https://publictv.in/rahul-gandhi-visits-panchmasali-mutt-in-davanagere/ Tue, 02 May 2023 09:40:33 +0000 https://publictv.in/?p=1062342 ದಾವಣಗೆರೆ : ಪಂಚಮಸಾಲಿ ಮಠಕ್ಕೆ ಕಾಂಗ್ರೆಸ್‌ (Congress) ಮುಖಂಡ ರಾಹುಲ್‌ ಗಾಂಧಿ (Rahul Gandhi) ಭೇಟಿ ನೀಡಿ ವಚನಾನಂದ ಸ್ವಾಮೀಜಿಯ (Vachanananda Swamiji) ಆಶೀರ್ವಾದ ಪಡೆದರು.

ರಾಜ್ಯ ವಿಧಾನಸಭಾ ಚುನಾವಣೆಗೆ (Election) ಇನ್ನೆನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದೆ. ಪ್ರಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದಾವಣಗೆರೆಗೆ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯ ಪಂಚಮಸಾಲಿ ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

ಈ ವೇಳೆ ರಾಹುಲ್‌ ಗಾಂಧಿ ಅವರು ವಚನಾನಂದ ಸ್ವಾಮೀಜಿಯ ಆಶೀರ್ವಾದ ಪಡೆದು ಕೆಲ ಕಾಲ ಸಮಾಲೋಚನೆ ನಡೆಸಿದರು. ಅದಾದ ಬಳಿಕ ರಾಹುಲ್‌ ಗಾಂಧಿಗೆ ವಚನಾನಂದ ಶ್ರೀ ಆಶೀರ್ವದಿಸಿದರು. ಈ ವೇಳೆ ರಾಹುಲ್‌ ಗಾಂಧಿಗೆ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಾಥ್‌ ನೀಡಿದರು. ಇದನ್ನೂ ಓದಿ: ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

]]>
1062342 0 0 0
<![CDATA[ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್]]> https://publictv.in/bollywood-actress-parineeti-chopra-raghav-chadha-to-get-engaged-on-may-13-in-delhi/ Tue, 02 May 2023 09:55:20 +0000 https://publictv.in/?p=1062353 ಥಿಯಾ ಶೆಟ್ಟಿ- ರಾಹುಲ್, ಸಿದ್- ಕಿಯಾರಾ ಬಳಿಕ ರಾಜಕಾರಣಿ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ (Parineeti Chopra) ಜೋಡಿ ಮದುವೆ ವಿಚಾರ ಚಾಲ್ತಿಯಲ್ಲಿದೆ. ಇದೀಗ ರಾಘವ್ - ಪರಿಣಿತಿ ಎಂಗೇಜ್‌ಮೆಂಟ್‌ಗೆ ಸಕಲ ಸಿದ್ಧತೆ ನಡೆಯುತ್ತಿದೆ.

ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಇತ್ತೀಚಿಗೆ ರೆಸ್ಟೋರೆಂಟ್‌ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಮತ್ತೆ ಹಲವು ಸ್ಥಳಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಇಬ್ಬರ ಮದುವೆ ಸುದ್ದಿ ಸದ್ದು ಮಾಡಲು ಶುರುವಾಗಿತ್ತು.  ಹಾಗಾಗಿ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಇದೀಗ ಪರಿಣಿತಿ-ರಾಘವ್ ಎಂಗೇಜ್‌ಮೆಂಟ್ (Engagement) ಡೇಟ್ ಫಿಕ್ಸ್ ಆಗಿದೆ. ಎಲೆಕ್ಷನ್ ರಿಸಲ್ಟ್ (Election Result) ದಿನ ಮೇ 13ರಂದು ಈ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಅಧಿಕೃತವಾಗಿ ಎಂಗೇಜ್ ಆಗಲಿದ್ದಾರೆ. ದೆಹಲಿಯಲ್ಲಿ ಎಂಗೇಜ್‌ಮೆಂಟ್ ಸಮಾರಂಭ ನಡೆಯಲಿದೆ. ಪ್ರಿಯಾಂಕಾ ಚೋಪ್ರಾ, ನಿಕ್ ಸೇರಿದಂತೆ ಆಪ್ತರಷ್ಟೇ ಪರಿಣಿತಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ವರ್ಷದ ಅಂತ್ಯದೊಳಗೆ ರಾಜಕಾರಣಿ ರಾಘವ್- ಪರಿಣಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ನಿಶ್ಚಿತಾರ್ಥದ ತಯಾರಿ ನಡೆಯುತ್ತಿದೆ.

]]>
1062353 0 0 0
<![CDATA[ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ]]> https://publictv.in/ramyas-first-reaction-to-ambareesh-not-coming-to-have-his-final-darshan/ Tue, 02 May 2023 09:56:13 +0000 https://publictv.in/?p=1062355 ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ (Ambareesh) ನಿಧನ ಹೊಂದಿದ್ದಾಗ ನಟಿ ರಮ್ಯಾ ಅಂತಿಮ ದರ್ಶನಕ್ಕೆ ಬರದಿರುವುದು ಭಾರೀ ಸುದ್ದಿಯಾಗಿತ್ತು. ಅಲ್ಲದೆ ಅಂಬಿ ಅಭಿಮಾನಿಗಳು ಕೂಡ ರಮ್ಯಾ (Ramya) ವಿರುದ್ಧ ಕಿಡಿಕಾರಿದ್ದರು. ಇದೀಗ ಸ್ವತಃ ನಟಿಯೇ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಾ ಅಂಬಿ ಸಾವಿಗೆ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆಗ ಟ್ಯೂಮರ್ (Tumour) ಬಂದಿತ್ತು. ನಾನು ಆಗ ಸರ್ಜರಿ (Surgery) ಮಾಡಿಸಿದ್ದೆ. ನನಗೆ ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳೋ ಅಭ್ಯಾಸ ಇಲ್ಲ. ಬೇರೆ ಅವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ನಾನು ಚಿಕ್ಕವಳಿಂದ ಸ್ವತಂತ್ರವಾಗಿ ಇದ್ದೇನೆ. ನಾನು ಏನೇ ಇದ್ದರೂ ಕೆಲಸದ ಬಗ್ಗೆ ಮಾತಾಡುತ್ತೇನೆ ಅಷ್ಟೇ. ಪರ್ಸನಲ್ ವಿಷಯಗಳನ್ನು ಮಾತನಾಡಲು ಹೋಗಲ್ಲ. ಹೀಗಾಗಿ ಎಲ್ಲರೂ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ. ನನಗೆ ಗೊತ್ತು ನಾನು ಯಾರು ಅಂತಾ. ನನಗೆ ತುಂಬಾ ನೋವಾಗಿ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಟ್ಯೂಮರ್ ಬಳಿಕ ನಂಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಸಿಂಪತಿ ತೆಗೆದುಕೊಳ್ಳೋಕೆ ಇಷ್ಟ ಇಲ್ಲ ಎಂದು ತಿಳಿಸಿದರು.

]]>
1062355 0 0 0
<![CDATA[ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ]]> https://publictv.in/karnataka-election-2023-pancharatna-scheme-copied-in-bjp-manifesto-says-hd-kumaraswamy/ Tue, 02 May 2023 11:10:41 +0000 https://publictv.in/?p=1062360 ರಾಯಚೂರು: ಬಿಜೆಪಿಯವರು (BJP) ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ (Manifesto) ಪಂಚರತ್ನ ವಿಷಯಗಳನ್ನು ನಕಲು ಮಾಡಿದ್ದಾರೆ. ನಮ್ಮ ಹಲವು ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆರೋಪಿಸಿದ್ದಾರೆ.

ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮಾದರಿಯ ನೀರಾವರಿ ಯೋಜನೆ ಸಮ್ಮಿಶ್ರ ಸರ್ಕಾರದ ಯೋಜನೆ. ಈಗ ಅದನ್ನು ಬಿಜೆಪಿಯವರು ನಕಲು ಮಾಡಿದ್ದಾರೆ. ಮೂರು ಸಿಲಿಂಡರ್ ಕೊಡುತ್ತೇವೆ ಎನ್ನುತ್ತಾರೆ. ಅದರಿಂದ ಏನು ಉಪಯೋಗ? ಬಿಜೆಪಿಯವರು ಸಿಲಿಂಡರ್ ರೇಟ್ ನೆನಪಿಸಲು ಕೊಡುತ್ತಾರಾ? ಸರ್ಕಾರ ಇದ್ದಾಗಲೇ ಸಿಲಿಂಡರ್ ಕೊಡಬಹುದಿತ್ತು. ದಸರಾ ದೀಪಾವಳಿ ಗಣೇಶ ಹಬ್ಬಕ್ಕೊಂದು ಸಿಲಿಂಡರ್ ಕೊಡುತ್ತಾರ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

ಕುಮಾರಸ್ವಾಮಿ ಸಾಲಮನ್ನಾ ಮಾಡಲಿಲ್ಲ ಎಂದು ಕಾಂಗ್ರೆಸ್ (Congress) ನಾಯಕರು ಹೇಳುತ್ತಾರೆ. ಸಿದ್ದರಾಮಯ್ಯ (Siddaramaiah) ಅವರಿಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನೆನೆಪಿನ ಶಕ್ತಿ ಕಡಿಮೆಯಾಗಿದ್ದರೆ ನಾನೇ ನೆನಪು ಮಾಡುತ್ತೇನೆ. ಎರಡು ಸಾರಿ ಸಾಲಮನ್ನಾ ಮಾಡಿದ್ದು ಜೆಡಿಎಸ್ (JDS) ಸರ್ಕಾರ. 75 ವರ್ಷ ಆಡಳಿತ ಮಾಡಿದವರು ಈಗ ನಿರುದ್ಯೋಗ ಭತ್ಯೆ ಕೊಡುತ್ತೇನೆ ಎನ್ನುತ್ತಿದ್ದಾರೆ. ಎಷ್ಟು ಜನರಿಗೆ ನಿರುದ್ಯೋಗ ಭತ್ಯೆ ಕೊಡುತ್ತೀರಿ? ಅದನ್ನು ನಿಮ್ಮ ಅವಧಿಯಲ್ಲಿ ಯಾಕೆ ಕೊಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

ಹಲವಾರು ವರ್ಗದ ಜನರಿಗೆ ನೀವು ಇನ್ನೂ ಕೈಒಡ್ಡುವ ಸ್ಥಿತಿಯಲ್ಲಿದ್ದೀರಿ ಎಂದು ಎರಡು ರಾಷ್ಟ್ರೀಯ ಪಕ್ಷಗಳು ಹೇಳುತ್ತಿವೆ. ಜಿಎಸ್‌ಟಿ (GST) ಸಂಗ್ರಹದ ದುಡ್ಡು ಎಲ್ಲಿ? ಯಾವ ಕಂಪನಿಗೆ ಹೋಗುತ್ತಿದೆ? ಬಡವರ ಪರಸ್ಥಿತಿ ಸುಧಾರಣೆಗೆ ಬಂಡವಾಳ ಹಾಕುತ್ತಿದ್ದಿರೋ ಅಥವಾ ನಾಲ್ಕೈದು ಕಂಪನಿಯ ಅಭಿವೃದ್ಧಿಗೆ ಹಾಕ್ತಿರಾ? ಮೂರುವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? ನಮ್ಮ ಆಡಳಿತ ಅವಧಿ ಬಗ್ಗೆ ಚರ್ಚೆ ಮಾಡುವ ನೈತಿಕತೆ ಯಾರೂ ಉಳಿಸಿಕೊಂಡಿಲ್ಲ. ಎರಡೂ ಪಕ್ಷ ಹಣದಲ್ಲಿ ಏನಾದರೂ ಕೊಂಡುಕೊಳ್ಳುತ್ತೇವೆ ಎಂದು ತಿಳಿದಿದ್ದಾರೆ. ನಮ್ಮ ಪಂಚರತ್ನ ಕಾರ್ಯಕ್ರಮಕ್ಕೂ ಇವರ ಕಾರ್ಯಕ್ರಮಕ್ಕೂ ಬಹಳ ವ್ಯತ್ಯಾಸವಿದೆ ಎಂದರು. ಇದನ್ನೂ ಓದಿ: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ

ಜೆ.ಪಿ.ನಡ್ಡಾ (J.P.Nadda) ಜೆಡಿಎಸ್‌ಗೆ ವೋಟು ಹಾಕಬೇಡಿ 10ರಿಂದ 15 ಸೀಟು ಬರುತ್ತೆ ಅಷ್ಟೇ ಎಂದಿದ್ದಾರೆ. ಬಿಜೆಪಿ ಆ ಸ್ಥಿತಿಗೆ ಬಂದರೂ ಅಚ್ಚರಿಯಿಲ್ಲ. ರಾಜ್ಯದಲ್ಲಿ 50ರಿಂದ 60 ಸಿಟಿಗಾಗಿ ಬಿಜೆಪಿ ಬೆವರಳಿಸುತ್ತೆ ನೋಡುತ್ತಿರಿ. ಉತ್ತರ ಕರ್ನಾಟಕದಲ್ಲಿ ಕನಿಷ್ಠ 30ರಿಂದ 35 ಸ್ಥಾನ ಜೆಡಿಎಸ್ ಪಡೆಯುತ್ತದೆ. ನಾವು ಕಾಂಗ್ರೆಸ್ ಅಥವಾ ಬಿಜೆಪಿ ಬಿ ಟೀಮ್ ಅಲ್ಲ. ನಾವು ಯಾರ ಬಿ ಟೀಮ್ ಅಲ್ಲ. ನಾವು ರಾಜ್ಯದ ಜನರ ಅಭಿವೃದ್ಧಿಯ ಬಿ ಟೀಮ್. ಸಿದ್ದರಾಮಯ್ಯ ಜೆಡಿಎಸ್‌ಗೆ ಸಿದ್ದಾಂತವಿಲ್ಲ ಎನ್ನುತ್ತಾರೆ. ನಮಗೆ ಸಿದ್ಧಾಂತವಿಲ್ಲ ಎನ್ನೋದಾದರೆ 2018ರ ಚುನಾವಣೆ ಬಳಿಕ ಜೆಡಿಎಸ್ ಮನೆಬಾಗಿಲಿಗೆ ಯಾಕೆ ಬಂದಿರೀ? ಸಿದ್ದರಾಮಯ್ಯನವರಿಗೆ ಕೇಳುತ್ತೆವೆ ನಿಮ್ಮದು ಯಾವ ಸಿದ್ದಾಂತವಿದೆ ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಂಚಮಸಾಲಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ

ಚುನಾವಣೆ ಹತ್ತಿರವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಈಗ ಜನರ ಬಗ್ಗೆ ಕಾಳಜಿ ತೋರಿಸುತ್ತಿವೆ. ಪ್ರಧಾನಿ, ಗೃಹ ಸಚಿವರು ಇಲ್ಲೇ ಠಿಕಾಣಿ ಹೂಡಿದ್ದಾರೆ. ರಾಜ್ಯ ಬಿಟ್ಟು ಹೋಗಿಲ್ಲ. ಅಧಿಕಾರದಲ್ಲಿದ್ದವರು ದೇಶ, ರಾಜ್ಯದ ವಿಷಯ ಬೇಡ ರಾಯಚೂರು ಜಿಲ್ಲೆ ಜನ ಏನು ಬಯಸಿದ್ದರು ಅದರ ಒಂದು ಕಾರ್ಯಕ್ರಮವನ್ನಾದರೂ ಈಡೇರಿಸಿದ್ದಾರಾ ಎಂದು ಕೇಳಿದರು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

ಸಿಂಧನೂರಿಗೆ ಪ್ರಧಾನಿ ಮೋದಿ (Narendra Modi) ಬರುತ್ತಿದ್ದಾರೆ. ನೀವು ಜನತೆಯ ಕಷ್ಟವನ್ನು ಕೇಳಿದ್ದೀರಾ? ಬರ ಹಾಗೂ ಪ್ರವಾಹ ಬಂದಾಗ ಎಲ್ಲಿದ್ದಿರಿ? ಜನರ ಕಷ್ಟ ಭಾವನೆಗಳಿಗೆ ಕಿಂಚಿತ್ತು ಗೌರವ ಕೊಡದವರು ನೀವು. ಪರಿವಾರ , ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ. ಯಾವ ಪರಿವಾರದ ಬಗ್ಗೆ ನೀವು ಮಾತನಾಡುತ್ತೀರಿ. ಕೊಪ್ಪಳ (Koppal) ವಿಧಾನಸಭಾ ಕ್ಷೇತ್ರದಲ್ಲಿ ಪರಿವಾರಕ್ಕೆ ಟಿಕೆಟ್ ಕೊಟ್ಟಿದ್ದೀರಲ್ಲಾ. ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತೀರಿ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ರಾಜ್ಯದಲ್ಲಿ ಯಾವ ನೈತಿಕೆಯಿದೆ ನಿಮಗೆ? ಮೂರುವರೆ ವರ್ಷ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತಾಡಲಿ ಅವರು. ರೈತರು ನೆಮ್ಮದಿಯಿಂದ ಬದುಕಿಲ್ಲ. ವಾಸಿಸಲು ಮನೆಯಿಲ್ಲ. ರಾಜ್ಯದಲ್ಲಿ ಈಗಲೂ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಕೇಂದ್ರದ ವರದಿಯೇ ಹೇಳುತ್ತದೆ. ಅಪೌಷ್ಟಿಕತೆಗೆ ಪರಿಹಾರ ಏನು ಕೊಟ್ಟಿದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ

]]>
1062360 0 0 0
<![CDATA[ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ - ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?]]> https://publictv.in/virat-kohli-gautam-gambhir-fined-100-percent-fees-after-verbal-spat/ Tue, 02 May 2023 10:03:08 +0000 https://publictv.in/?p=1062362 ಲಕ್ನೋ: ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ ಅವರಿಗೆ ತಮ್ಮ ಐಪಿಎಲ್ (IPL) ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ.

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅತಿರೇಖದ ವರ್ತನೆಯಿಂದ ಐಪಿಎಲ್ ನೀತಿ ಸಂಹಿತೆ (IPL Code of Conduct) ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (25 ಲಕ್ಷ ರೂ.) ಹಾಗೂ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ 100 ಪ್ರತಿಶತದಷ್ಟು (1.07 ಕೋಟಿ ರೂ.) ದಂಡ ವಿಧಿಸಲಾಗಿದೆ. ಐಪಿಎಲ್ ನೀತಿಸಂಹಿತೆಯ ಆರ್ಟಿಕಲ್ 2.21ರ ಅಡಿಯಲ್ಲಿ ಗೌತಮ್ ಗಂಭೀರ್ 2ನೇ ಹಂತದ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ. ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್-ಉಲ್-ಹಕ್‌ಗೆ (Naveen-ul-Haq) ಶೇ.50 ರಷ್ಟು(1.79 ಲಕ್ಷ ರೂ.) ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

ಏನಿದು ಕೊಹ್ಲಿ-ಗಂಭೀರ್ ವಾರ್? ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಈ ಹಿಂದೆ ಆರ್‌ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಸೋಮವಾರ ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಣ ಪಂದ್ಯದಲ್ಲಿ ಲಕ್ನೋ ತಂಡ 1 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದ ಬಳಿಕ ಗಂಭೀರ್ ಬಾಯ್ಮೇಲೆ ಬೆರೆಳಿಟ್ಟು ಆರ್‌ಸಿಬಿ ಪ್ರೇಕ್ಷಕರು ಸುಮ್ಮನಿರುವಂತೆ ಸೂಚಿಸಿ ಸಂಭ್ರಮಿಸಿದ್ದರು. ಲಕ್ನೋ ತಂಡದ ಅವೇಶ್ ಖಾನ್ ಹೆಲ್ಮೆಟ್ ಕಿತ್ತೆಸೆದು ಅತಿರೇಖದ ವರ್ತನೆ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ತವರಿನಲ್ಲಿ ಬುದ್ಧಿ ಕಲಿಸಲು ನಿರ್ಧರಿಸಿದ್ದ ಆರ್‌ಸಿಬಿ ತಂಡ ಕೊನೆಗೂ ಗೆದ್ದು ಬೀಗಿತು. ಪಂದ್ಯದ ನಡುವೆ ವಿರಾಟ್ ಅಭಿಮಾನಿಗಳು ಸುಮ್ಮನಿರಬಾರದು ?ಹೃದಯತುಂಬಿ ಸಂಭ್ರಮಿಸಬೇಕು' ಎಂದು ಸನ್ನೆ ಮೂಲಕ ತೋರಿಸಿದರು.

127 ರನ್ ಗುರಿ ಬೆನ್ನತ್ತಿದ ಲಕ್ನೋ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅಂತ್ಯದಲ್ಲಿ ಅಮಿತ್ ಮಿಶ್ರಾ 19 ರನ್ ಮತ್ತು ವೇಗಿ ನವೀನ್ ಉಲ್ ಹಕ್ 13 ನಡುವೆ ಸಣ್ಣ ಜೊತೆಯಾಟವೊಂದು ಮೂಡಿಬಂದಿತ್ತು. ಕವರ್ಸ್ ವಿಭಾಗದಲ್ಲಿ ಒಂದು ಫೋರ್ ಕೂಡ ಬಾರಿಸಿದ್ದ ನವೀನ್ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ ಅವರನ್ನ ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವುದಕ್ಕೂ ಮುಂದಾಗಿದ್ದರು. ಆದ್ರೆ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಮಾಧಾನಪಡಿಸಿ ಕಳುಹಿಸಿದ್ದರು.

ಕೊಹ್ಲಿ ಮತ್ತು ನವೀನ್ ನಡುವಣ ಸಣ್ಣ ಜಗಳವನ್ನು ಅಲ್ಲೇ ಇದ್ದ ಎರಡೂ ತಂಡಗಳ ಆಟಗಾರರು ಬಗೆ ಹರಿಸಿದ್ದರು. ಆದರೆ, ಡಗೌಟ್‌ನಿಂದ ಹೊರಬಂದ ಗೌತಮ್ ಗಂಭೀರ್ ಜಗಳವನ್ನು ಮತ್ತಷ್ಟು ಗಂಭೀರವಾಗಿಸಿದರು. ವಿರಾಟ್ ಜೊತೆಗೆ ಮಾತನಾಡುತ್ತಿದ್ದ ಎಲ್‌ಎಸ್‌ಜಿ ಆಟಗಾರ ಕೈಲ್ ಮೇಯರ್ಸ್ ಅವರನ್ನು ಎಳೆದೊಯ್ದ ಗಂಭೀರ್ ಈ ಸಂದರ್ಭದಲ್ಲಿ ಮಾತಿನ ಚಕಮಕಿಯೇ ನಡೆಸಿದರು. ಕೊಹ್ಲಿ ಮತ್ತು ಗಂಭೀರ್‌ನ ತಡೆದು ನಿಲ್ಲಿಸಲು ಎರಡೂ ತಂಡದ ಆಟಗಾರರು ಹರಸಾಹನ ನಡೆಸಿದರು. ಈ ವೇಳೆ ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

ಕೊಹ್ಲಿ-ಗಂಭೀರ್ ಜಗಳಕ್ಕೆ ಕಾರಣವೇನು? ಕಳೆದ ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ಹಾಗೂ ಲಕ್ನೋ ನಡುವಣ ಪಂದ್ಯದಲ್ಲಿ ಲಕ್ನೋ ಆಟಗಾರರು ಅತಿರೇಕದ ವರ್ತನೆ ತೋರಿದ್ದರು. ಕೊನೆಯ ಎಸೆತದಲ್ಲಿ ಗೆಲುವು ಪಡೆದ ಬಳಿಕ ಅವೇಶ್ ಖಾನ್ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಜೋರಾಗಿ ಎಸೆದು ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ, ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಮ್ಮ ಕೈ ಸನ್ನೆಯ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಸೈಲೆನ್ಸ್ ಎಂದು ಹೇಳಿದ್ದರು. ಈ ಎಲ್ಲಾ ಘಟನೆಗಳನ್ನು ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಆಟಗಾರರು ಗಮನಿಸಿದ್ದರು ಮತ್ತು ಲಕ್ನೋ ಆಟಗಾರರ ಈ ವರ್ತನೆ ಬಗ್ಗೆ ಅಸಮಾಧಾನಗೊಂಡಿದ್ದರು. ಸೋಮವಾರ ಪಂದ್ಯ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಕೂಡ ಕೈ ಸನ್ನೆ ಮೂಲಕ ಗಂಭೀರ್‌ಗೆ ತಿರುಗೇಟು ನೀಡಿದರು.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್‌ಗಳಲ್ಲಿ 108 ರನ್ ಗಳಿಗೆ ಸರ್ವಪತನ ಕಂಡು ತವರಿನಲ್ಲಿ ಸೋತು ಮುಖಭಂಗ ಅನುಭವಿಸಿತು.

]]>
1062362 0 0 0
<![CDATA[‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ]]> https://publictv.in/dhruva-sarja-supported-the-movie-dheera-samrat/ Tue, 02 May 2023 10:04:03 +0000 https://publictv.in/?p=1062368 ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರ ಸಾಮ್ರಾಟ್’ (Dheera Samrat) ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ ಕುಮಾರ್(ಪಚ್ಚಿ) (Pawan Kumar) ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಸರದಿಯಂತೆ ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕರು “ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‌ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವ ಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಎಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ಸಾವಿಗೆ ಸಾವಿಲ್ಲ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೆ ಸಮಾಜದಲ್ಲಿ ಯಾವುದೋ ಒಂದು  ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ” ಎಂದರು.

ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು, ಯಾತಕ್ಕೆ ಈ ಟೈಟಲ್ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಕೊನೆಯಲ್ಲಿ ಮಾತನಾಡಿದ ಧ್ರುವ ಸರ್ಜಾ, “ಸಿನಿಮಾ ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು. ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ಅದ್ದೂರಿ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂಥವರನ್ನು ಬೆಳೆಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ.  ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ” ಎಂದು ಮಾತಿಗೆ ವಿರಾಮ ಹಾಕಿದರು.

ತಾರಾಗಣದಲ್ಲಿ ಶಂಕರ ಭಟ್, ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‌ ಭಟ್, ಯತಿರಾಜ್, ಮನಮೋಹನ್‌ ರೈ, ಇಂಚರ, ಸಂಕಲ್ಪ್‌ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‌ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ ಹಾಗೂ ಅರುಣ್‌ಸುರೇಶ್, ಸಂಕಲನ ಸತೀಶ್‌ ಚಂದ್ರಯ್ಯ, ಹಿನ್ನಲೆ ಶಬ್ದ ವಿನು ಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವ ವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

]]>
1062368 0 0 0
<![CDATA[ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು]]> https://publictv.in/music-director-ar-rahmans-live-concert-stopped-in-pune-police-issues-clarification-after-video-goes-viral/ Tue, 02 May 2023 11:23:04 +0000 https://publictv.in/?p=1062384 ಬಾಲಿವುಡ್ (Bollywood) ಸ್ಟಾರ್ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ (AR Rahman) ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಸ್ವತಃ ಎ.ಆರ್ ರೆಹಮಾನ್ ವೇದಿಕೆಯಲ್ಲಿ ಹಾಡುತ್ತಿದ್ದ ವೇಳೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಪುಣೆ ಪೊಲೀಸರು, ಆಯೋಜಕರಿಗೆ ಈವೆಂಟ್ ನಿಲ್ಲಿಸುವಂತೆ ಹೇಳಿದ್ದಾರೆ. ವೇದಿಕೆಯ ಮೇಲೆ ಹಾಡುತ್ತಿದ್ದ ರೆಹಮಾನ್‌ಗೂ ಪೊಲೀಸರು ಹಾಡು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆಯಂತೆ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ:ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್

ಪುಣೆಯಲ್ಲಿ ರಾತ್ರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಆರ್ ರೆಹಮಾನ್ ತಂಡ ಈ ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ರಾತ್ರಿ 10 ಗಂಟೆಯೊಳಗೆ ಪುಣೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಬೇಕು. ಆದರೆ ಎಆರ್ ರಹೆಮಾನ್ ಸಂಗೀತ ಕಾರ್ಯಕ್ರಮ 10 ಗಂಟೆಯಾದರೂ ಮುಗಿಯಲಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಸ್ವತಃ ಎ.ಆರ್ ರೆಹಮಾನ್ ಹಾಡುತ್ತಿದ್ದಂತೆ ಪುಣೆ ಪೊಲೀಸರು ವೇದಿಯತ್ತ ಆಗಮಿಸಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.

ಇತ್ತ ಎ.ಆರ್ ರೆಹಮಾನ್ ಪುಣೆ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಪುಣೆ ಮತ್ತೆ ಬರೋದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

]]>
1062384 0 0 0
<![CDATA[ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ]]> https://publictv.in/dont-come-to-ask-vote-bajrang-dal-worker-warning-congress/ Tue, 02 May 2023 10:32:58 +0000 https://publictv.in/?p=1062390 ಚಿಕ್ಕಮಗಳೂರು: ಮಲೆನಾಡಿನ ಮನೆಗಳ ಮುಂದೆ ಕಾಂಗ್ರೆಸ್ಸಿಗರು ಮತ (Vote) ಕೇಳಲು ಬಂದ್ರೆ ಅವರ ಮೇಲೆ ನಾಯಿ ಬಿಡಲಾಗುವುದು ಎಂದು ಎಚ್ಚರಿಕೆಯ ಬೋರ್ಡ್‌ ಹಾಕಿ ಕಾಂಗ್ರೆಸ್ಸಿನ (Congress) ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಭಜರಂಗದಳ (Bajrang Dal) ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳದ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ʻʻಇದು ಬಜರಂಗದಳದವರ ಮನೆ. ಕಾಂಗ್ರೆಸ್ಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿಯನ್ನು ಬಿಡಲಾಗುವುದುʼʼಎಂಬ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದೆ. ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆಂಡವಾಗಿರೋ ಬಜರಂಗದಳ ನಾನಾ ರೀತಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದೆ.

]]>
1062390 0 0 0
<![CDATA[ನಟಿ ರಮ್ಯಾ ಮದುವೆಗೆ ಹುಡುಗ ಬೇಕಾಗಿದ್ದಾನೆ: ಹುಡುಕಿ ಕೊಡಿ ಪ್ಲೀಸ್..]]> https://publictv.in/actress-ramya-wants-a-boy-for-marriage-please-find/ Tue, 02 May 2023 10:28:25 +0000 https://publictv.in/?p=1062392 ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಮದುವೆ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಮಂಡ್ಯ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ್ದ ರಮ್ಯಾರನ್ನು ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಪ್ರಮುಖವಾದದ್ದು ಮದುವೆ (Marriage) ಕುರಿತಾದ ಪ್ರಶ್ನೆ. ‘ರಮ್ಯಾ ಮದುವೆ ಯಾವಾಗ ಆಗುತ್ತಾರೆ?’ ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ ಎಂದು ಮಾಧ್ಯಮದವರಿಗೆ ಜವಾಬ್ದಾರಿ ನೀಡಿದರು.

ಮುಂದುವರೆದು ಮಾತನಾಡಿದ ರಮ್ಯಾ, ‘ನನಗೂ ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲೇ ಸ್ವಯಂವರನೇ ಮಾಡಿ’ ಎಂದು ಹಾಸ್ಯ ಚಟಾಕಿ ಬೇರೆ ಹಾರಿಸಿದರು. ರಮ್ಯಾ ಎಲ್ಲಿಗೆ ಹೋಗಲಿ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ, ಅವರು ಮಾತ್ರ ಅದನ್ನು ಕೂಲ್ ಆಗಿ ತಗೆದುಕೊಂಡು ಹಾಸ್ಯದಲ್ಲೇ ಮಾತನ್ನು ತೇಲಿಸಿ ಬಿಡುತ್ತಾರೆ. ಹಾಗಾಗಿ ನಗೆಚಾಟಿಕೆಯಲ್ಲೇ ಮದುವೆ ಪ್ರಸ್ತಾಪ ಮುಗಿದು ಹೋಗುತ್ತದೆ. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಸಿನಿಮಾ ಮತ್ತು ರಾಜಕಾರಣದಿಂದ ದೂರ ಉಳಿದಿದ್ದ ರಮ್ಯಾ ಇತ್ತೀಚಿನ ದಿನಗಳಲ್ಲಿ ಮತ್ತೆ ಎರಡೂ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಬ್ಯಾನರ್ ಶುರು ಮಾಡಿ ಆ ಮೂಲಕ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರ ನಿರ್ಮಾಣದ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಾಯಕ ಹಾಗೂ ನಿರ್ದೇಶಕ. ಇದೇ ಚಿತ್ರದ ಮೂಲಕ ರಮ್ಯಾ ನಟಿಯಾಗಿಯೂ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದರು.

ನಿರ್ಮಾಪಕಿಯ ನಂತರ ಸಿನಿಮಾದಲ್ಲೂ ನಟಿಸುತ್ತಿದ್ದು, ಧನಂಜಯ್ ಸಿನಿಮಾದಲ್ಲಿ ರಮ್ಯಾ ವಿಶೇಷ ಪಾತ್ರ ಮಾಡಲಿದ್ದಾರೆ. ಉತ್ತರಕಾಂಡ ಹೆಸರಿನಲ್ಲಿ ತಯಾರಾಗಬೇಕಿರುವ ಚಿತ್ರದಲ್ಲಿ ರಮ್ಯಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ ಸಕ್ರೀಯರಾಗಿದ್ದು, ಮಂಡ್ಯ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

]]>
1062392 0 0 0
<![CDATA[ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ]]> https://publictv.in/sumalatha-ambareesh-slams-h-d-devegowdas-family-politics-in-ramanagara/ Tue, 02 May 2023 10:38:25 +0000 https://publictv.in/?p=1062398 ರಾಮನಗರ: 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು ಇದೀಗ ಅವರ ಮಗ ಎಂದು ದೇವೇಗೌಡರ (H.D.Deve Gowda) ಕುಟುಂಬ ರಾಜಕಾರಣದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಾಗ್ದಾಳಿ ನಡೆಸಿದರು.

ಬಿಜೆಪಿ (BJP) ಬೂತ್ ಮಟ್ಟದ ಕಾರ್ತಕರ್ತರ ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ರಾಮನಗರದಿಂದ (Ramanagara). ರಾಮನಗರಕ್ಕೂ ನಮ್ಮ ಕುಟುಂಬಕ್ಕೂ ಸವಿಯಾದ ಸಂಬಂಧ ಇದೆ. ಬಿಜೆಪಿಯಲ್ಲಿ ಮಹಿಳೆಗೆ ಗೌರವ ಕೊಡುತ್ತಾರೆ. ಮಂಡ್ಯದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದವರೇ ಇಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಒಂದು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿದ್ದೇ ಅವರ ದೃಷ್ಟಿಯಲ್ಲಿ ದೊಡ್ಡ ತಪ್ಪಾಯಿತು. ಹೆಣ್ಣು ಎಂಬ ಗೌರವ ಇಲ್ಲದೆ, ಮಾತುಗಳನ್ನಾಡಿದರು ಎಂದು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ

ಚುನಾವಣೆಗೆ ಒಟ್ಟು 150 ಕೋಟಿ ಹಣ ಖರ್ಚು ಮಾಡಿದರು. ಆದರೆ ಮಂಡ್ಯದ ಜನ ನನ್ನ ಪರ ನಿಂತರು. ಭದ್ರಕೋಟೆ, ಜಾತಿ ಏನೆಲ್ಲಾ ತಂದರೂ ಮಂಡ್ಯದ ಜನ ಸ್ವಾಭಿಮಾನ ಮೆರೆದರು. ಅವರು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡರು. ನಮ್ಮೂರಿಗೆ ನಮ್ಮೂರವರೇ ಸಾಕು. 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು, ಇದೀಗ ಅವರ ಮಗ. ಸಮರ್ಥ ಕಾರ್ಯಕರ್ತರು ಇಲ್ಲದ ಕ್ಷೇತ್ರದಲ್ಲಿ ಮಾತ್ರ ನಮ್ಮ ಕುಟುಂಬದವರು ನಿಲ್ಲಿಸುತ್ತೇನೆ ಎಂದು ಹೇಳುತ್ತಾರೆ. ಇವರಿಗೆ ರಾಮನಗರ, ಮಂಡ್ಯ, ಹಾಸನದಲ್ಲಿ ಒಬ್ಬರೇ ಒಬ್ಬ ಸಮರ್ಥ ಕಾರ್ಯಕರ್ತರನ್ನು ಬೆಳೆಸಲು ಸಾಧ್ಯವಾಗಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು.

ಅಭಿಮಾನ ಏನೇ ಇರಲಿ. ಒಂದು ಕುಟುಂಬ ಮಾತ್ರ ಅಭಿವೃದ್ಧಿಯಾಗ್ತಿದೆ ಎಂದರೆ ಮನೆ ಮಕ್ಕಳು ಏನಾಗಬೇಕು? ಹಾಸನ ಅಭಿವೃದ್ಧಿ ಮಾಡೋದಕ್ಕೆ ನೀವು ವೋಟ್ ಹಾಕ್ಬೇಕಾ? ಹಾಸನದ ಅಭಿವೃದ್ಧಿಗೆ ಹಾಸನದವರು ವೋಟ್ ಹಾಕಿಕೊಳ್ಳಲಿ. ಮಂಡ್ಯ, ರಾಮನಗರದಲ್ಲಿ ಸ್ಥಳೀಯರನ್ನ ಅಯ್ಕೆ ಮಾಡಿ ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಮಾತೆತ್ತಿದರೆ ರೈತರ ಮಕ್ಕಳು ಅಂತಾರೆ. ಯಾವ ರೈತರು ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಡಿಕ್ಲೇರ್ ಮಾಡಿರೋದು ಇಷ್ಟು. ಮಾಡದೇ ಇರೋ ಲೆಕ್ಕ ಬೇರೆ ಇದೆ. ಜನಸಾಮಾನ್ಯರು ಇದನ್ನ ಪ್ರಶ್ನಿಸಬೇಕು. ರಾಮನಗರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಉಚಿತ ಯೋಜನೆಗಳು ನೀಡಲು ಸಾವಿರಾರು ಕೋಟಿ ರೂ. ಹಣ ಸರ್ಕಾರಿ ಖಜಾನೆಯಲ್ಲಿ ಇದೆಯಾ? ಶಿಕ್ಷಣ ಆರೋಗ್ಯ ನೀಡಲು ಸಮರ್ಪಕ ಯೋಜನೆ ಬೇಕು. ಕೇಂದ್ರದಿಂದ ನಾನು ಕೋಟ್ಯಂತರ ರೂ. ಅನುದಾನ ತಂದಿದ್ದೇನೆ. ಡಬ್ಬಲ್ ಎಂಜಿನ್ ಸರ್ಕಾರ ತನ್ನಿ. ಮಂಡ್ಯದ ಜನರ ರೀತಿ ರಾಮನಗರದಲ್ಲೂ ಸ್ವಾಭಿಮಾನ ಮೆರೆಯಿರಿ ತಿಳಿಸಿದರು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

]]>
1062398 0 0 0
<![CDATA[ಐಸ್ ಥೆರಪಿಗೆ ಒಳಗಾದ ಸಮಂತಾ: ಮಯೋಸೈಟೀಸ್ ನಿಂದ ಬಳಲುತ್ತಿರುವ ನಟಿ]]> https://publictv.in/samantha-undergoing-ice-therapy-actress-suffering-from-myositis/ Tue, 02 May 2023 11:15:29 +0000 https://publictv.in/?p=1062413 ತೆಲುಗಿನ ಹೆಸರಾಂತ ನಟಿ ಸಮಂತಾ (Samantha) ಮಯೋಸೈಟೀಸ್ (Myositis) ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಅವರು ಅನೇಕ ರೀತಿಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಇದೀಗ ಮತ್ತೊಂದು ಥೆರಪಿಗೆ ಒಳಗಾಗಿರುವ ಸಮಂತಾ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಯಾತನೆ ಥೆರಪಿ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ತಿಳಿಸಿದ್ದಾರೆ.

ಕೆಲ ವರ್ಷಗಳಿಂದ ಅವರು ಮಯೋಸೈಟೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ಭಾಗವಾಗಿ ಈಗ ಐಸ್ ಥೆರಪಿ (Ice Bath Therapy) ಮಾಡಿಸಿಕೊಂಡಿದ್ದಾರೆ. ಈ ಐಸ್ ಬಾತ್ ಥೆರಪಿಯು ಚಿತ್ರಹಿಂಸೆಯಿಂದ ಕೂಡಿರುವಂಥದ್ದು. ಆದರೂ, ಅನಿವಾರ್ಯ ಎಂದು ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸೆ ಅನಿಸಿದರೂ ದೇಹಕ್ಕೆ ಚೈತನ್ಯವನ್ನು ನೀಡುವಂಥದ್ದು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್‌ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್‌ ಸಿಡಿಮಿಡಿ

ದೇಹಕ್ಕೆ ಚೈತನ್ಯ ಬರುವುದಕ್ಕಾಗಿ ಕನಿಷ್ಠ 15 ನಿಮಿಷಗಳ ಕಾಲ ಐಸ್ ಬಾತ್ ಥೆರಪಿಗೆ ಒಳಗಾಗಬೇಕಂತೆ. ಇದರಿಂದಾಗಿ ಸಾಕಷ್ಟು ಪ್ರಯೋಜನೆಗಳು ಇವೆ ಎನ್ನುತ್ತದೆ ವೈದ್ಯಲೋಕ. ಸದ್ಯ ಸಮಂತಾ ಸಿಟಾಡೆಲ್ (Citadel) ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದು, ಅದೊಂದು ಸಾಹಸಮ ಸರಣಿಯಾಗಿದೆ. ಸಮಂತಾ ನಾಯಕಿಯಾಗಿ ನಟಿಸುತ್ತಿದ್ದರೆ, ವರುಣ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

]]>
1062413 0 0 0
<![CDATA[ಬಜರಂಗದಳ ನಿಷೇಧ ಭರವಸೆ - ಪ್ರೊಫೈಲ್ ಫೋಟೋ ಬದಲಿಸಿದ BJP ನಾಯಕರು]]> https://publictv.in/bjp-leader-started-digital-campaign-against-congress-manifesto/ Tue, 02 May 2023 11:17:07 +0000 https://publictv.in/?p=1062414 ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಕಾಂಗ್ರೆಸ್‌ ಪಕ್ಷ ಮಂಗಳವಾರ ತನ್ನ ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದೆ.

ಎಸ್ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರ ವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಬಜರಂಗದಳವನ್ನು (Bajrang Dal) ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ (Congress) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

ಕಾಂಗ್ರೆಸ್‌ ಬಜರಂಗದಳ ನಿಷೇಧ ಭರವಸೆಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ನಾನೊಬ್ಬ ಭಜರಂಗಿ ಅಂತಾ ಘೋಷಣೆ ಮಾಡ್ಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಭರವಸೆ ವಿರುದ್ಧ ಡಿಜಿಟಲ್ ಅಭಿಯಾನ ಕೈಗೊಂಡಿದ್ದು, ಬಜರಂಗದಳ ನಿಷೇಧ ಭರವಸೆಯನ್ನೇ ಚುನಾವಣಾ ಪ್ರಚಾರಕ್ಕೆ ಅಸ್ತ್ರ ಮಾಡಿಕೊಂಡಿದೆ ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

ಕಡೇ 7 ದಿನದ ಆಟದಲ್ಲಿ ಜೈ ಭಜರಂಗಿ‌ ಕ್ಯಾಂಪೇನ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 7 ದಿನಗಳ ಬಾಕಿಯಿರುವ ಹೊತ್ತಿನಲ್ಲೇ ರಾಜ್ಯಾದ್ಯಂತ ʻಜೈ ಭಜರಂಗಿ‌ ಕ್ಯಾಂಪೇನ್ʼ ಶುರುವಾಗಿದೆ. ಬಜರಂಗದಳವನ್ನ ʻನಾನೊಬ್ಬ ಭಜರಂಗಿʼ ಎಂದು ತಿರುಗಿಸಿದೆ. ಇನ್ನೂ ಬಿಜೆಪಿ ಹೈಕಮಾಂಡ್‌ ಸಹ ಎಲ್ಲ ನಾಯಕರಿಗೂ ಖಡಕ್‌ ಸೂಚನೆ ಕೊಟ್ಟಿದ್ದು, ಕಾಂಗ್ರೆಸ್ ಟಾರ್ಗೆಟ್ ಮಾಡಿ‌ ಕಡೇ 7 ದಿನದ ಪ್ರಚಾರ ಮಾಡಲು ಸೂಚನೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

ಈ ಹಿಂದೆ ನಮಗೂ ಬಜರಂಗದಳಕ್ಕೂ ಸಂಬಂಧವೇ ಇಲ್ಲ ಎಂದು ಬಿಜೆಪಿಗರು ಹೇಳಿದ್ದರು. ಆದರೀಗ ಕಾಂಗ್ರೆಸ್ ಕೊಟ್ಟ ಬಜರಂಗದಳ ನಿಷೇಧ ಭರವಸೆಯ ಬ್ರಹ್ಮಾಸ್ತ್ರದಿಂದ ರಾಜಕೀಯ ತಿರುವು ಸಿಗುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.

]]>
1062414 0 0 0
<![CDATA[ಅಣ್ಣನ ಮೇಲಿನ ಗೌರವದಿಂದ ಜೆಸಿಬಿಯಲ್ಲೇ ಮದುವೆ ಮಂಟಪ ತಲುಪಿದ ವರ]]> https://publictv.in/groom-reaches-marriage-venue-on-jcb-in-odisha-reason-will-melt-your-heart-in-odisha/ Tue, 02 May 2023 11:25:29 +0000 https://publictv.in/?p=1062424 ಭುವನೇಶ್ವರ: ಸಾಮಾನ್ಯವಾಗಿ ಮದುವೆ ಕಾರ್ಯಕ್ರಮವು ಡ್ಯಾನ್ಸ್, ಮ್ಯೂಸಿಕ್ ಹಾಗೂ ಮೋಜಿನಿಂದ ಕೂಡಿರುತ್ತದೆ. ಆದರೆ ಒಡಿಶಾ (Odisha) ದ ನವದಂಪತಿ ತಮ್ಮ ಮದುವೆ ಕಾರ್ಯಕ್ರಮವನ್ನು ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಮಾಡಿದ್ದಾರೆ.

ಹೌದು. ವರನೊಬ್ಬ ಜೆಸಿಬಿ (JCB) ಯ ಮೂಲಕ ಮೆರವಣಿಗೆ ಹೊರಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಘಟನೆ ಒಡಿಶಾದ ಬೌದ್ ಜಿಲ್ಲೆಯ ಚತ್ರರಂಗ ಗ್ರಾಮದಲ್ಲಿ ನಡೆದಿದೆ.

ವರನನ್ನು ಗಂಗಾಧರ್ ಬೆಹೆರಾ ಎಂದು ಗುರುತಿಸಲಾಗಿದೆ. ವರನ ಮದುವೆಯ ಮೆರವಣಿಗೆಯು ನಯಾಗಢ ಜಿಲ್ಲೆಯ ಖಂದಪದ ಬ್ಲಾಕ್‍ನ ಕಿಯಾಜರಾ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ವರ ಯಾವುದೇ ಐಷಾರಾಮಿ ವಾಹನಗಳನ್ನು ಬಳಸದೇ ಜೆಸಿಬಿ ಮೂಲಕ ವಧು ಮನೆ ತಲುಪಿದ್ದಾನೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಅಚ್ಚರಿಪಟ್ಟಿದ್ದಾರೆ.

ಮೂಲಗಳ ಪ್ರಕಾರ, ವರ ಗಂಗಾಧರ್ ಸಹೋದರ ಜೆಸಿಬಿ ಆಪರೇಟರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಂಗಾಧರ್ ಜೆಸಿಬಿಯಲ್ಲಿ ಮದುವೆ ಮೆರವಣಿಗೆ ಹೊರಡಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

ಒಟ್ಟಿನಲ್ಲಿ ಗಂಗಾಧರ್ ಸಹೋದರನನ್ನು ಗೌರವಿಸುವ ಸಲುವಾಗಿ ಜನರು ಶ್ಲಾಘಿಸುವುದರೊಂದಿಗೆ ವಿಶಿಷ್ಟ ಮದುವೆಯ ಮೆರವಣಿಗೆಯು ಈಗ ಇಡೀ ಪಟ್ಟಣದಲ್ಲಿ ಚರ್ಚೆಯಾಗಿದೆ.

]]>
1062424 0 0 0
<![CDATA[ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್]]> https://publictv.in/karnataka-election-2023-bk-hariprasad-reacts-about-congress-manifesto/ Tue, 02 May 2023 11:33:35 +0000 https://publictv.in/?p=1062430 ಮಡಿಕೇರಿ: ಭಯೋತ್ಪಾದನೆಗೆ ಉತ್ತೇಜನ ಹಾಗೂ ಸಮಾಜದಲ್ಲಿ ಆ ಶಾಂತಿ ಕದಡುವ ಯಾವುದೇ ಸಂಘಟನೆಯಾದರೂ ಅದನ್ನು ಬ್ಯಾನ್‌ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ತಿಳಿಸಿದರು.

ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಭಯೋತ್ಪಾದನೆಗೆ ಉತ್ತೇಜನ ಕೊಟ್ಟರೇ ಆ ಸಂಘಟನೆಗಳನ್ನು ಬ್ಯಾನ್‌ ಮಾಡಬಹುದು. ಅದು PFI, FIA, ಭಜರಂಗದಳ (Bajrang Dal) ಆಗಿದ್ದರೂ ನಾವು ಬ್ಯಾನ್‌ ಮಾಡುತ್ತೇವೆ, ಯಾರು ದೇಶದಲ್ಲಿ ಶಾಂತಿಯನ್ನು ಕದಡಿ, ಭಯೋತ್ಪಾದನೆಗೆ ಬೆಂಬಲ ಕೊಡುತ್ತದೆಯೋ ಅದನ್ನು ನಾವು ಬ್ಯಾನ್‌ ಮಾಡಬೇಕಾಗುತ್ತದೆ, ನಮ್ಮ ದೇಶವು ಸರ್ವಜನಾಂಗದ ಶಾಂತಿ ತೋಟವಾಗಿದೆ. ಆದರೆ ಇಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

ಇಂದು ಚಾಣಕ್ಯ ಅಮಿತ್‌ ಶಾ ಇತರರು ರಾಜ್ಯಕ್ಕೆ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಯಾವತ್ತೂ ಬಿಜೆಪಿ ಸ್ಪಷ್ಟವಾಗಿ ಬಹುಮತ ಬಂದಿಲ್ಲ. ದೇಶದಲ್ಲಿ ತೆಗೆದುಕೊಂಡರೂ ಅವರಿಗೆ 3 ರಾಜ್ಯದಲ್ಲಿ ಮಾತ್ರ ಸ್ಪಷ್ಟ ಬಹುಮತ ಬಂದಿದೆ. ಬಾಕಿ ಎಲ್ಲಾ ರಾಜ್ಯದಲ್ಲೂ ಖರೀದಿ ಹಾಗೂ ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡುತ್ತಿದ್ದಾರೆ. ಆದ್ದರಿಂದ ಧರ್ಮ ಆಧಾರಿತ ರಾಜಕಾರಣ ಕಾಂಗ್ರೆಸ್‌ ಪಕ್ಷ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

]]>
1062430 0 0 0
<![CDATA[ಕಾಳಿ ದೇವಿಗೆ ಅವಮಾನ - ಭಾರೀ ಆಕ್ರೋಶದ ಬಳಿಕ ಕ್ಷಮೆ ಕೇಳಿದ ಉಕ್ರೇನ್]]> https://publictv.in/insult-to-goddess-kali-ukraine-apologizes-after-huge-outrage/ Tue, 02 May 2023 11:53:22 +0000 https://publictv.in/?p=1062433 ಕೀವ್: ಉಕ್ರೇನ್‌ನ ರಕ್ಷಣಾ ಸಚಿವಾಲಯ (Ukraine Defense Ministry) ಹಿಂದೂ ದೇವತೆ ಕಾಳಿಯನ್ನು (Kali) ವಿಕೃತವಾಗಿ ಚಿತ್ರಿಸಿ ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಭಾರತ (India) ಹಾಗೂ ಹಿಂದೂ (Hindu) ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿವಾದಿತ ಕಾಳಿ ದೇವಿಯ ಚಿತ್ರವನ್ನು ಹಂಚಿಕೊಂಡಿದ್ದಕ್ಕೆ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನ್ ಝಾಪರೋವಾ (Emine Dzhaparova) ಕ್ಷಮೆ ಕೇಳಿದ್ದಾರೆ.

ಕಾಳಿ ದೇವಿಯನ್ನು ಈ ರೀತಿಯಾಗಿ ಚಿತ್ರಿಸಿರುವುದಕ್ಕೆ ಉಕ್ರೇನ್ ವಿಷಾದಿಸುತ್ತದೆ. ಯುರೋಪಿಯನ್ ದೇಶ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ. ಭಾರತದ ಸಹಾಯವನ್ನು ಪ್ರಶಂಸಿಸುತ್ತದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 30 ರಂದು ಉಕ್ರೇನ್‌ನ ರಕ್ಷಣಾ ಸಚಿವಾಲಯ 'ವರ್ಕ್ ಆಫ್ ಆರ್ಟ್' ಎಂಬ ಶೀರ್ಷಿಕೆಯೊಂದಿಗೆ ಕಾಳಿ ದೇವಿಯನ್ನು ಹೋಲುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿತ್ತು. ಸ್ಫೋಟದ ಹೊಗೆಯಲ್ಲಿ ಹಾಗೂ ಅಮೆರಿಕದ ನಟಿ ಮರ್ಲಿನ್ ಮನ್ರೋ ಅವರ 'ಫ್ಲೈಯಿಂಗ್ ಸ್ಕರ್ಟ್' ಭಂಗಿಯಲ್ಲಿ ದೇವಿಯನ್ನು ಹೋಲುವ ಚಿತ್ರವನ್ನು ಬರೆಯಲಾಗಿತ್ತು. ಈ ಚಿತ್ರವನ್ನು ಉಕ್ರೇನ್‌ನ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ಅವರು ರಚಿಸಿದ್ದರು. ಇದನ್ನೂ ಓದಿ: ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

ಈ ಚಿತ್ರವನ್ನು ಉಕ್ರೇನ್‌ನ ರಕ್ಷಣಾ ಸಚಿವಾಲಯ ಪೋಸ್ಟ್ ಮಾಡಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ಉಂಟಾಗಿತ್ತು. ಟ್ವಿಟ್ಟರ್ ಬಳಕೆದಾರರು ಕಾಳಿ ದೇವಿಗೆ ಅವಮಾನ ಮಾಡಲಾಗಿದೆ. ಭಾರತೀಯರು ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಕಿಡಿಕಾರಿದ್ದರು.

ವಿವಾದಿತ ಕಾಳಿ ದೇವಿಯನ್ನು ಹೋಲುವ ಚಿತ್ರವನ್ನು ಅಳಿಸಬೇಕೆಂಬ ಒತ್ತಾಯದ ಬಳಿಕ ಸಚಿವಾಲಯ ತನ್ನ ಟ್ವೀಟ್ ಅನ್ನು ಅಳಿಸಿ ಕ್ಷಮೆ ಕೇಳಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

]]>
1062433 0 0 0
<![CDATA[ಮಹಾತ್ಮ ಗಾಂಧಿ ಮೊಮ್ಮಗ ನಿಧನ]]> https://publictv.in/mahatma-gandhis-grandson-arun-gandhi-died/ Tue, 02 May 2023 11:52:45 +0000 https://publictv.in/?p=1062435 ಮುಂಬೈ: ಮಹಾತ್ಮ ಗಾಂಧಿಯವರ (Mahatma Gandhi) ಮೊಮ್ಮಗ ಅರುಣ್ ಗಾಂಧಿ (Arun Gandhi) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ ನಿಧನರಾದರು.

ಲೇಖಕ ಹಾಗೂ ಸಾಮಾಜಿಕ ರಾಜಕೀಯ ಹೋರಾಟಗಾರರಾದ ಅರುಣ್ ಗಾಂಧಿ (89) ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಮಂಗಳವಾರ ಮೃತಪಟ್ಟಿದ್ದು, ಅಂತ್ಯಕ್ರಿಯೆಯನ್ನು ಕೊಲ್ಲಾಪುರದಲ್ಲಿ ನಡೆಸಲಾಯಿತು ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

1934ರಂದು ದಕ್ಷಿಣ ಆಫ್ರಿಕಾದ ಡರ್ಬನ್‍ನಲ್ಲಿ ಮಣಿಲಾಲ್ ಗಾಂಧಿ ಹಾಗೂ ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದ ಅರುಣ್ ಗಾಂಧಿ ಅವರು ಹೋರಾಟಗಾರರಾಗಿ ತಮ್ಮ ತಾತ ಅಂದರೇ ಮಹಾತ್ಮ ಗಾಂಧಿ ಅವರ ಹೆಜ್ಜೆಯನ್ನೇ ಅನುಸರಿಸುತ್ತಿದ್ದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

]]>
1062435 0 0 0
<![CDATA[ಮಾನನಷ್ಟ ಮೊಕದ್ದಮೆ ಕೇಸ್‌ - ರಾಹುಲ್‌ ಗಾಂಧಿಗಿಲ್ಲ ರಿಲೀಫ್‌]]> https://publictv.in/no-interim-relief-for-rahul-gandhi-from-gujarat-high-court-in-defamation-case/ Tue, 02 May 2023 12:06:55 +0000 https://publictv.in/?p=1062444 - ಜೈಲು ಶಿಕ್ಷೆಗೆ ತಡೆ ನೀಡಲು ಗುಜರಾತ್‌ ಹೈಕೋರ್ಟ್‌ ನಿರಾಕರಣೆ

ಗಾಂಧೀನಗರ: ಮಾನನಷ್ಟ ಮೊಕದ್ದಮೆ (Defamation Case) ಪ್ರಕರಣದಲ್ಲಿ ವಿಧಿಸಲಾಗಿದ್ದ 2 ವರ್ಷ ಜೈಲು ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್‌ ಹೈಕೋರ್ಟ್‌ (Gujarat High Court) ನಿರಾಕರಿಸಿದೆ. ಇದರಿಂದ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಮತ್ತೆ ರಿಲೀಫ್‌ ಸಿಕ್ಕಿಲ್ಲ.

ಬೇಸಿಗೆ ರಜೆಯ ನಂತರ ಅಂದರೆ, ಜೂನ್ 4 ರ ಬಳಿಕ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ತೀರ್ಪು ಪ್ರಕಟಿಸಲಿದ್ದಾರೆ. ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿಯ ಮೇಲೆ ಆದೇಶ ನೀಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ವಿಚಾರಣೆ ನಡೆಸುವವರೆಗೆ ಮಧ್ಯಂತರ ತಡೆ ನೀಡುವಂತೆ ಕೋರಿ ರಾಹುಲ್‌ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ರಾಹುಲ್‌ಗೆ ಹಿನ್ನಡೆ – ಜೈಲು ಶಿಕ್ಷೆಗೆ ತಡೆ ಕೋರಿದ ಅರ್ಜಿ ವಜಾ

ಏನಿದು ಪ್ರಕರಣ? ಕಳೆದ ಲೋಕಸಭಾ ಚುನಾವಣಾ (Loksabha Election) ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ (Kolara) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (Narendra Modi) ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು. ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ (BJP) ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ಮಾರ್ಚ್ 23 ರಂದು ರಾಹುಲ್ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದರ ಜೊತೆ ಈ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿ ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಭಿನ್ನಾಭಿಪ್ರಾಯ ಹತ್ತಿಕ್ಕಿ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ: ಮೋದಿಗೆ ರಾಹುಲ್‌ ತಿರುಗೇಟು

2 ವರ್ಷ ಜೈಲು ಶಿಕ್ಷೆಯಾದ ಹಿನ್ನೆಲೆಯಲ್ಲಿ ಲೋಕಸಭಾ ಸಚಿವಾಲಯ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು.

]]>
1062444 0 0 0
<![CDATA[ನೆನಪಿದೆಯಾ.. ಅಂದು ಕೊಹ್ಲಿಗಾಗಿ ತನ್ನ ಪ್ರಶಸ್ತಿಯನ್ನೇ ಬಿಟ್ಟುಕೊಟ್ಟಿದ್ದರು ಗಂಭೀರ್‌]]> https://publictv.in/when-gautam-gambhir-gave-away-his-mom-award-to-virat-kohli/ Tue, 02 May 2023 12:14:39 +0000 https://publictv.in/?p=1062447 ಲಕ್ನೋ: ಆರ್‌ಸಿಬಿ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ (Gautam Gambhir) ಸದ್ಯ ಸುದ್ದಿಯಲ್ಲಿದ್ದಾರೆ. ಸೋಮವಾರ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಜಗಳ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ.

ಈ ನಡುವೆ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ನಡುವಿನ ಪಾಟ್ನರ್‌ಶಿಪ್‌ ಈ ಹಿಂದೆ ಹೇಗಿತ್ತು ಎನ್ನುವ ವೀಡಿಯೋ ತುಣುಕೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕೆಲವರು ಗೌತಮ್‌ ಗಂಭೀರ್‌ ಪರ ಬ್ಯಾಟ್‌ ಬೀಸಿದರೆ, ಇನ್ನೂ ಕೆಲವರು ವಿರಾಟ್‌ ಕೊಹ್ಲಿಯನ್ನ ಬೆಂಬಲಿಸಿದ್ದಾರೆ. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

ಗಂಭೀರ್‌ ಪ್ರಶಸ್ತಿ ಬಿಟ್ಟುಕೊಟ್ಟಿದ್ದರು: ಈ ಹಿಂದೆ 2009ರಲ್ಲಿ ಶ್ರೀಲಂಕಾ (SriLanka) ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ತಮ್ಮ ಮ್ಯಾನ್‌ ಆಫ್‌ದಿ ಮ್ಯಾಚ್‌ (ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು.

ಹೌದು. 2009ರ ಡಿಸೆಂಬರ್‌ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ (Team India) 7 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಭಾರತ 316 ರನ್‌ಗಳ ಗುರಿ ಬೆನ್ನಟ್ಟಿತ್ತು. ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಬೇಗನೆ ನಿರ್ಗಮಿಸಿದರು. ನಂತರ ಸುರಂಗ ಲಕ್ಮಲ್ ಉತ್ತಮ ಆರಂಭ ನೀಡಿದ್ದರು. ಇದಾದ ಬಳಿಕ ಜೊತೆಗೂಡಿದ ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು.

3ನೇ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 35.4 ಓವರ್‌ಗಳಲ್ಲಿ 224 ರನ್‌ ಜೊತೆಯಾಟ ನೀಡಿತ್ತು. ಗಂಭೀರ್‌ 137 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 150 ರನ್‌ ಗಳಿಸಿ, ಅಜೇಯರಾಗುಳಿದಿದ್ದರು. ಆದ್ರೆ ವಿರಾಟ್‌ ಕೊಹ್ಲಿ 114 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್‌ನೊಂದಿಗೆ 107 ರನ್‌ ಗಳಿಸಿ ಔಟಾಗಿದ್ದರು. ಅದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಚೊಚ್ಚಲ ಶತಕವಾಗಿತ್ತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

ಆ ಸಮಯದಲ್ಲಿ ವಿರಾಟ್‌ ಕೊಹ್ಲಿ ಹೊಸಬರಾಗಿದ್ದರು, ಆದ್ರೆ ಗಂಭೀರ್‌, ವಿರಾಟ್‌‌ ಟೀಂ ಇಂಡಿಯಾಗೆ ಬರುವುದಕ್ಕೂ ಮುನ್ನವೇ 6 ವರ್ಷಗಳ ಕಾಲ ಆಡಿದ್ದರು. ಅಂದು ಗಂಭೀರ್ ಅವರು ಕೋಲ್ಕತ್ತಾದ ಐಕಾನಿಕ್ ಸ್ಥಳದಲ್ಲಿ ಆಡಿದ ನಂತರ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ಆದರೆ, ಗಂಭೀರ್ ತಮ್ಮ ಪ್ರಶಸ್ತಿಯನ್ನ ಕೊಹ್ಲಿಗೆ ನೀಡಲು ನಿರ್ಧರಿಸಿದರು. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಈ ವಿಷಯ ಪ್ರಕಟಿಸಿದ್ದರು. ಈ ವಿಚಾರ ಇದೀಗ ಮುನ್ನೆಲೆಗೆ ಬಂದಿದ್ದು, ಕೆಲವರು ವಿರಾಟ್‌ ಕೊಹ್ಲಿಗೆ ಗಂಭೀರ್‌ ಪ್ರೋತ್ಸಾಹಿಸಿದ್ದನ್ನು ನೆನಪಿಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

]]>
1062447 0 0 0
<![CDATA[ಬಿಹಾರ್‌ನಂತಹ ರಾಜಕಾರಣ ನಾವು ಮಾಡುವುದಿಲ್ಲ: ಭವಾನಿ ರೇವಣ್ಣ]]> https://publictv.in/karnataka-elections-2023-bhavani-revanna-said-we-dont-do-politics-like-bihar/ Tue, 02 May 2023 12:21:57 +0000 https://publictv.in/?p=1062448 ಹಾಸನ: ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು ನಿಮ್ಮನ್ನು ಮತ ಕೇಳುತ್ತೇವೆಯೇ ಹೊರತು ಬಿಹಾರ್ ಅಂತಹ ರಾಜಕಾರಣ ನಾವು ಮಾಡುವುದಿಲ್ಲ ಎಂದು ಪ್ರೀತಂಗೌಡ (Preetam Gowda) ವಿರುದ್ಧ ಪರೋಕ್ಷವಾಗಿ ಭವಾನಿ ರೇವಣ್ಣ (Bhavani Revanna) ಗುಡುಗಿದರು.

ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಘೋಷಣೆ ಹಾಗೂ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಧಮ್ಕಿಗೆ ನೀವ್ಯಾರು ಹೆದರಬಾರದು, ನಿಮ್ಮ ಎಲ್ಲಾ ಸಮಯದಲ್ಲೂ ನಾವು ಜೊತೆಗೆ ಇರುತ್ತೇವೆ. ನಾವು ಯಾವಾಗ್ಲೂ ಗೂಂಡಾಗಿರಿ ರಾಜಕಾರಣ ಮಾಡಿದವರಲ್ಲ, ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು ನಿಮ್ಮನ್ನು ಮತ ಕೇಳುತ್ತೇವೆ ಎಂದರು.

ನೀವೆಲ್ಲಾ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದೀರಾ. ಒಬ್ಬೊಬ್ಬರು ನೂರು ವೋಟು ಹಾಕಿಸುವ ಶಕ್ತಿ ಇದೆ ಎಂದುಕೊಳ್ಳುತ್ತೇನೆ. ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ನಾವೆಲ್ಲರೂ ಹಾಗೂ ಜೆಡಿಎಸ್ ಪಕ್ಷದವರೆಲ್ಲ ನಿಮಗೆ ಚಿರ‌ಋಣಿ ಆಗಿರುತ್ತೇವೆ. ಅದರ ಜೊತೆ ನಮ್ಮ ಕುಟುಂಬ, ಪ್ರಕಾಶಣ್ಣನ ಕುಟುಂಬ ನಿಮ್ಮ ಜೊತೆಗೆ ಇರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

ಸ್ವರೂಪ್‌ಗೆ ದೇಣಿಗೆ ಕೂಡ ಕೊಟ್ರಿ, ನನಗೆ ಸಂತೋಷ ಆಯ್ತು, ಇಂತಹ ಸಮಯದಲ್ಲಿ ಯಾವುದೇ ರಾಜಕಾರಣಿಯ ಬಳಿಯೂ ಎಷ್ಟು ಇದ್ರೂ ಸಾಲಲ್ಲ. ರಾಜಕೀಯ ಜೀವನದಲ್ಲಿ ಏನೇ ಇದ್ದರು ಮಾಡಬೇಕಾಗುತ್ತದೆ. ರಾಮ ಸೇತುವೆ ಕಟ್ಟುವಾಗ ಅಳಿಲು ಕೂಡ ಸಹಾಯ ಮಾಡಿತ್ತು. ಅದರಿಂದ ಅಳಿಲು ಸೇವೆ ಅಂತ ಹೆಸರು ಬಂತು ಅಂತ ಮಾತನಾಡುತ್ತಾರೆ. ಸ್ವರೂಪ್‌ಗೆ ಸಹಾಯ‌ ಮಾಡಿದ್ದೀರಾ ಮುಂದಿನ ದಿನಗಳಲ್ಲಿ ನೀವು ನಮ್ಮ ಜೊತೆ ಇರ್ತಿರಾ, ನಿಮ್ಮ ಜೊತೆ ನಾವು ಇರ್ತಿವಿ ಎಂದು ಹೇಳಿದರು. ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಕೇಸ್‌ – ರಾಹುಲ್‌ ಗಾಂಧಿಗಿಲ್ಲ ರಿಲೀಫ್‌

]]>
1062448 0 0 0
<![CDATA[ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ]]> https://publictv.in/karnataka-election-2023-basavarj-bommai-lashesh-out-at-congress/ Tue, 02 May 2023 13:17:48 +0000 https://publictv.in/?p=1062440 ಧಾರವಾಡ: ಬಜರಂಗದಳ (Bajarangdal) ದವರು ನಮ್ಮ ಹನುಮನ ಭಕ್ತರು. ಒಬ್ಬೊಬ್ಬರು ಸಿಡಿದು ನಿಂತರೆ ಬೇರು ಸಮೇತ ಕಿತ್ತು ಹೋಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ‌ (Shankar Patil Munenakoppa) ಪರ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ನವಲಗುಂದಕ್ಕೆ ಇದು ಬಂಡಾಯ ನಾಡು ಎಂದು ಕರೆದರು. ಈ ಭಾಗದಲ್ಲಿ ಮಹದಾಯಿ ನೀರು ಬಂದಿರಲಿಲ್ಲ, ರೈತರ ಮೇಲೆ ಗುಂಡು ಹಾಕಿದ ಸರ್ಕಾರ ಕಾಂಗ್ರೆಸ್ ಎಂದು ಟೀಕಿಸಿದ ಅವರು, ಮಹದಾಯಿ (Mayadayi) ನೀರನ್ನು ಮಲಪ್ರಭೆಗೆ ತಂದು ನೀರು ಕೊಡಲು ಅಡ್ಡ ಹಾಕಿದ್ದ ಕಾಂಗ್ರೆಸ್, ಸೋನಿಯಾ ಗಾಂಧಿ ಅವರು ಗೋವಾ (Goa) ದಲ್ಲಿ ಹೋಗಿ ಹನಿ ನೀರು ಕೊಡಲ್ಲ ಎಂದಿದ್ರು ಎಂದರು.

ಮನಮೋಹನ್ ಸಿಂಗ್ (Manamohan Singh) ಅವರು ನಮಗೆ ನೀರು ಕೊಡಲು ಟ್ರಿಬುನಲ್ ಮಾಡಿದ್ರು, ಸಿದ್ದರಾಮಯ್ಯ ಸರ್ಕಾರ ಗೋಡೆ ಕಟ್ಟಿದ್ರು, ಒಂದು ಕೋಟಿ ಖರ್ಚು ಮಾಡಿ ನಾವು ಕೆನಲ್ ಕಟ್ಟಿದೆವು, ಗೋಡೆ ಕಟ್ಟಿದೆವು ಎಂದ ಸಿಎಂ, ಇದೇ ನವಲಗುಂದ ತಾಲೂಕಿನಲ್ಲಿ ಹೆಣ್ಣು ಮಕ್ಕಳ ಮೇಲೆ ಲಾಠಿ ಹೊಡೆದವರಿಗೆ ಮತ ಹಾಕ್ತಿರಾ ಎಂದು ಪ್ರಶ್ನೆ ಮಾಡಿದರು. ಮೋದಿ ಅವರು ನಮಗೆ ಮಹದಾಯಿಗಾಗಿ ಅನುಮತಿ ಕೊಟ್ಡಿದ್ದಾರೆ. ನಾವು ಟೆಂಡರ್ ಮಾಡಿದ್ದೇವೆ, ಕೆಲಸ ಆರಂಭ ಆಗಲಿದೆ ಎಂದ ಬೊಮ್ಮಾಯಿ, ಈಗಾಗಲೇ ನಾನು ಒಂದು ಸಾವಿರ ಕೋಟಿ ಕೊಟ್ಟಿದ್ದೇನೆ. ಎರಡು ವರ್ಷದಲ್ಲಿ ಕಾಮಗಾರಿ ಮಾಡ್ತೇವೆ ಎಂದರು.

ಗ್ಯಾರಂಟಿ ಕೊಡುತ್ತಾರೆ ಕಾಂಗ್ರೆಸ್ ನವರು, ಮೋದಿ (Narendra Modi) ಅವರ ಅಕ್ಕಿ ಅದು, ಎಲ್ಲ ಗ್ಯಾರಂಟಿ ಮೇ 10ವರೆಗೆ, ಅದರ ನಂತರ ಗಳಗಂಟಿ ಎಂದ ಸಿಎಂ, ಮೀಸಲಾತಿ ಹೆಚ್ಚಳ ಮಾಡಿದೆ. ನಮ್ಮ ದುಡಿಯುವ ಜನರಿಗೆ ಮೀಸಲಾತಿ ಕೊಟ್ಟಿದ್ದೇವೆ, ನಮ್ಮ ಎದುರಿಗೆ ಅವರು ವಿರೋಧ ಮಾಡಿ ಕೋರ್ಟ್‍ಗೆ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಮೋದಿಗೆ ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತೆ: ಕಾಂಗ್ರೆಸ್‍ಗೆ ಅಮಿತ್ ಶಾ ತಿರುಗೇಟು

ನಾವು ಬಜರಂಗದಳ ಬ್ಯಾನ್ ಮಾಡುತ್ತೇವೆ ಅಂತಾರೆ, ಭಯೋತ್ಪಾದನೆ ಮಾಡಿದ ಪಿಎಫ್‍ಐಗೆ ಅವರು ಕೇಸ್ ವಾಪಸ್ ಪಡೆದರು, ಬಜರಂಗದಳದವರು ನಮ್ಮ ಹನುಮನ ಭಕ್ತರು, ಒಬ್ಬೊಬ್ಬರು ಸಿಡಿದು ನಿಂತರೆ ಬೇರು ಸಮೇತ ಕಿತ್ತು ಹೋಗ್ತೀರಿ ಎಂದ ಸಿಎಂ, ರಾಮನ ದೇವಸ್ಥಾನ ಆಗುತ್ತಿದೆ. ಸಬ್ ಕಾ ವಿಕಾಸ ನಾವು ಮಾಡುತ್ತೇವೆ. ಮನೆ ಮನೆಗೆ ಹೋಗಿ ಮೇ 10 ಕ್ಕೆ ಮುನೇನಕೊಪ್ಪ ಅವರಿಗೆ ಮತ ಹಾಕುವಂತೆ ಹೇಳಿ, ಬಹಳ ಜನ ಮಾತನಾಡುತ್ತಾರೆ. ಆದರೆ ಜಗದೇಕ ಮಲ್ಲ ಮುನೇನಕೊಪ್ಪ, 25 ಸಾವಿತ ಮತದಿಂದ ಗೆಲ್ಲಿಸಿ ಎಂದು ಕೇಸರಿ ಶಾಲು ತಿರುವಿಸಿ ಬಜರಂಗಿ ಎಂದು ಘೋಷಣೆ ಹಾಕಿದರು. ಇದೇ ವೇಳೆ ಕುರುಬ ಸಮುದಾಯದಿಂದ ಸಿಎಂಗೆ ಕಂಬಳಿ ಹೊದಿಸಿ ಸನ್ಮಾನ ಮಾಡಿದರು. ಸಿಎಂಗೆ ಟಗರು ಮರಿ ಕೊಟ್ಟ ನಂತರ ಅದಕ್ಕೆ ಕೈಯಲ್ಲಿ ಹಿಡಿದು ಸಿಎಂ ಮುತ್ತಿಟ್ಟರು ಎಂದರು.

]]>
1062440 0 0 0
<![CDATA[ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್‌ - ಮುಂದೇನಾಯ್ತು?]]> https://publictv.in/prime-minister-modi-security-force-helicopter-stuck-in-a-paddy-in-raichuru/ Tue, 02 May 2023 12:41:23 +0000 https://publictv.in/?p=1062452 ರಾಯಚೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ ಹೆಲಿಪ್ಯಾಡ್‌ನಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಮೋದಿ ಭದ್ರತೆಗಾಗಿ ಬಂದಿದ್ದ ಸೇನಾ ಹೆಲಿಕಾಪ್ಟರ್‌ ಕೆಸರಿನ ಗದ್ದೆಯಲ್ಲಿ ಸಿಲುಕಿಕೊಂಡ ಘಟನೆ ರಾಯಚೂರಿನಲ್ಲಿ (Raichuru) ನಡೆಯಿತು.

ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ನ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆಯಿತು. ಮೋದಿ ಭದ್ರತೆಗೆ ಬಂದಿದ್ದ 3ನೇ ಹೆಲಿಕಾಪ್ಟರ್‌ ಕೆಸರಿನ ಗದ್ದೆಯಲ್ಲಿ ಸಿಲುಕಿಕೊಂಡಿತ್ತು. ಮಳೆಯಿಂದಾಗಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತವಾಗಿತ್ತು. ಅವಸರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಹೆಲಿಪ್ಯಾಡ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಸಿಲುಕಿಕೊಂಡಿತ್ತು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

ಹೆಲಿಕ್ಯಾಪ್ಟರ್ ಮೇಲೆತ್ತಲು ಸಿಬ್ಬಂದಿ ಹರಸಾಹಸಪಟ್ಟರು. ನಂತರ ಜೆಸಿಬಿ‌ ಮೂಲಕ ಹೆಲಿಕಾಪ್ಟರ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಭದ್ರತಾ ಸಿಬ್ಬಂದಿ ಸಹ ಅಲ್ಲೇ ಸಿಲುಕಿಕೊಂಡಿದ್ದರು.

ಮತ್ತೆರಡು ಹೆಲಿಕಾಪ್ಟರ್‌ಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ಸಿಬ್ಬಂದಿಯನ್ನು ಕರೆದುಕೊಂಡು ಹೋದವು. ಈ ಸಂದರ್ಭದಲ್ಲಿ ಮೋದಿ ಅವರು ಬಂದಿದ್ದ ಹೆಲಿಕಾಪ್ಟರ್‌, ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಸುತ್ತ ಸುತ್ತು ಹಾಕಿತು. ಇನ್ನೆರಡು ಹೆಲಿಕಾಪ್ಟರ್‌ ಹಾರಾಟ ನಡೆಸುವವರೆಗೂ ಇದು ಸುತ್ತು ಹಾಕಿತ್ತು. ಇದನ್ನೂ ಓದಿ: ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೇ ಮೇ 10 ರಂದು ಮತದಾನ ನಡೆಯಲಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ರೋಡ್‌ಶೋ, ಸಮಾವೇಶ, ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.

]]>
1062452 0 0 0
<![CDATA[ಮೋದಿಗೆ ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತೆ: ಕಾಂಗ್ರೆಸ್‍ಗೆ ಅಮಿತ್ ಶಾ ತಿರುಗೇಟು]]> https://publictv.in/karnataka-election-2023-amit-shah-lashes-out-congress/ Tue, 02 May 2023 12:43:07 +0000 https://publictv.in/?p=1062455 ಚಾಮರಾಜನಗರ: ಕಾಂಗ್ರೆಸ್‍ನವರು (Congress) ಮೋದಿಗೆ (Narendra Modi) ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಖರ್ಗೆ, ಮೋದಿಯನ್ನು ವಿಷ ಸರ್ಪಕ್ಕೆ ಹೋಲಿಸುತ್ತಾರೆ. ದೇಶದ ಜನರಿಗೆ ಮೋದಿ ಮನೆ, ಅಕ್ಕಿ ಕೊಟ್ಟಿದ್ದಾರೆ. ಕಾಂಗ್ರೆಸ್‍ನವರಿಗೆ ಹೇಳ್ತೀನಿ ನೀವೂ ಮೋದಿ ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತದೆ. ಜನರಿಗೆ ವಿಶ್ವಾಸವಿಲ್ಲದ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ. ಎಲ್ಲದಕ್ಕೂ ಜಾಸ್ತಿ ಕುಟುಂಬ ರಾಜಕಾರಣ. ಗಲಾಟೆ ಮಾಡೋ ಗ್ಯಾರಂಟಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಲೇವಡಿ ಮಾಡಿದ ಅವರು, ಜನರ ವಿಶ್ವಾಸವಿಲ್ಲದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಭ್ರಷ್ಟಾಚಾರದ ಗ್ಯಾರಂಟಿ, ತುಷ್ಟೀಕರಣದ ಗ್ಯಾರಂಟಿ, ಕುಟುಂಬ ರಾಜಕಾರಣದ ಗ್ಯಾರಂಟಿ, ಗಲಾಟೆಯ ಗ್ಯಾರಂಟಿ ಕೊಡುತ್ತಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಕೇಸ್‌ – ರಾಹುಲ್‌ ಗಾಂಧಿಗಿಲ್ಲ ರಿಲೀಫ್‌

ಬಿಜೆಪಿಗೆ ಮತ ಚಲಾಯಿಸಿದರೆ ರೈತರ ಉದ್ದಾರವಾಗುತ್ತದೆ. ಅದೇ ರೀತಿ ಕಾಂಗ್ರೆಸ್‍ಗೆ ವೋಟ್ ಮಾಡಿದ್ರೆ ದೆಹಲಿ ಎಟಿಎಂ ಮಾಡಿದ ಹಾಗೇ ಆಗುತ್ತದೆ. ಮುಸ್ಲಿಂ 4% ಮೀಸಲಾತಿ ತೆಗೆದು ಒಕ್ಕಲಿಗ, ಲಿಂಗಾಯತ, ದಲಿತರಿಗೆ ಕೊಟ್ಟಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಸ್ಲಿಂ ಮೀಸಲಾತಿ ವಾಪಸ್ ತರುತ್ತೇವೆ ಎಂದು ಹೇಳುತ್ತಾರೆ. ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಾಂಗ್ರೆಸ್ ವಾಪಸ್ ತೆಗೆಯುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಹಾರ್‌ನಂತಹ ರಾಜಕಾರಣ ನಾವು ಮಾಡುವುದಿಲ್ಲ: ಭವಾನಿ ರೇವಣ್ಣ

]]>
1062455 0 0 0
<![CDATA[ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರಾಂತ್ಯದ ಅತಿಥಿ ಯಾರು?]]> https://publictv.in/nenapirali-prem-is-the-new-guest-in-weekend-with-ramesh/ Tue, 02 May 2023 12:59:21 +0000 https://publictv.in/?p=1062460 ಕಿರುತೆರೆಯ ಜನಪ್ರಿಯ ಶೋ Weekend With Ramesh ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ಡಾ.ಮಂಜುನಾಥ್, ಸಿಹಿ ಕಹಿ ಚಂದ್ರು, ಮಂಡ್ಯ ರಮೇಶ್ ಹೀಗೆ ಹಲವು ಸಾಧಕರ ಸಾಧನೆಯ ಕಥೆಯನ್ನ ಶೋ ಮೂಲಕ ಬಿಚ್ಚಿಟ್ಟಿದ್ದಾರೆ. ಇದೀಗ ಈ ವಾರಾಂತ್ಯ ಯಾವ ನಟ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಕ್ಕೆ ತೆರೆ ಬಿದ್ದಿದೆ.

ನಟ ರಮೇಶ್ ಅರವಿಂದ್ (Ramesh Aravind) ಅವರು ಕಳೆದ ನಾಲ್ಕು ಸೀಸನ್‌ಗಳನ್ನ ಅದ್ಭುತ ನಿರೂಪಣೆಯ ಮೂಲಕ ಮೋಡಿ ಮಾಡಿದ್ದಾರೆ. ನೂರಾರು ಸಾಧಕರ ಕಥೆಯನ್ನ ಸಾರಿ ಹೇಳಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಕೂಡ ಸದ್ದು ಮಾಡ್ತಿದೆ. ಈ ವಾರ ಲವ್ಲಿ ಸ್ಟಾರ್ ಪ್ರೇಮ್ (Lovely Star prem) ಅವರು ಸಾಧಕರ ಸೀಟ್‌ನ ಅಲಂಕರಿಸಿದ್ದಾರೆ. ಇದನ್ನೂ ಓದಿ:ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

2004ರಲ್ಲಿ 'ಪ್ರಾಣ' (Prana Film) ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರ ಕೊಟ್ಟರು. ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಜೀರೋ ಟು ಹೀರೋ ಆಗಿ ಜನರ ಮನ ಗೆದ್ದರು. ನೆನಪಿರಲಿ, ಜೊತೆ ಜೊತೆಯಲಿ, ಚೌಕ, ಪಲ್ಲಕ್ಕಿ, ಚಾರ್‌ಮಿನಾರ್ ಹೀಗೆ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಸೈ ಎನಿಸಿಕೊಂಡರು.

ಸೋಲು- ಗೆಲುವು ಸಮಾನವಾಗಿ ಎದುರಿಸಿ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡರು. ಈ ವಾರಾಂತ್ಯ ತನ್ನ ಸಾಧನೆಯ ಕಥೆಯನ್ನ ಸಾಧಕರ ಸೀಟ್‌ನಲ್ಲಿ ಕುಳಿತು ಮುಕ್ತವಾಗಿ ನಟ ಪ್ರೇಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.

]]>
1062460 0 0 0
<![CDATA['ದಿ ಕೇರಳ ಸ್ಟೋರಿ' ಮಾಹಿತಿ ಸಾಬೀತು ಮಾಡಿದರೆ 1 ಕೋಟಿ ಬಹುಮಾನ ಘೋಷಣೆ]]> https://publictv.in/1-crore-reward-announced-if-the-information-of-the-kerala-story-is-proved/ Tue, 02 May 2023 13:04:18 +0000 https://publictv.in/?p=1062462 ಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ (Prize)ಕೊಡುವುದಾಗಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ. ಇದನ್ನೂ ಓದಿ:ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್

ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ.

ನಾಲ್ಕು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

]]>
1062462 0 0 0
<![CDATA[ಮದಕರಿ ಡೈಲಾಗ್ ಹೇಳಿದ್ರೆ ಜಾತೀಯತೆ ಮಾಡ್ತೀನಿ ಅಂತಾರೆ ಏನ್ಮಾಡ್ಲಿ - ಕಿಚ್ಚ ಸುದೀಪ್]]> https://publictv.in/actor-kiccha-sudeep-campaign-for-bjp-candidates-at-bagalkot/ Tue, 02 May 2023 13:36:22 +0000 https://publictv.in/?p=1062469 ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ರಾಜಕೀಯ ಅಖಾಡಕ್ಕಿಳಿದಿರುವ ನಟ ಕಿಚ್ಚ ಸುದೀಪ್ (Kiccha Sudeep) ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಅಭ್ಯರ್ಥಿಗಳ (BJP Candidates) ಪರ ಪ್ರಚಾರ ನಡೆಸುತ್ತಿದ್ದಾರೆ.

ಮಂಗಳವಾರ ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ನಗರ ಹಾಗೂ ಬೀಳಗಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು. ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಪರ, ರೋಡ್ ಶೋ ಆರಂಭಿಸಿದ ಕಿಚ್ಚ ಸುದೀಪ್, ನಗರದ ಕಟ್ಟೆ ಕೆರೆಯಿಂದ, ದೇಸಾಯಿ ಸರ್ಖ್ ವರೆಗೆ ರೋಡ್ ಶೋ ನಡೆಸಿದರು. ಬೀಳಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿಯೂ ಪ್ರಚಾರ ನಡೆಸಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

ಕಿಚ್ಚ ಸುದೀಪ್ ಹೋದಲೆಲ್ಲಾ ರಸ್ತೆಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದಿದ್ದರು. ಬೀಳಗಿ ಕ್ಷೇತ್ರದ ಅಂಬೇಡ್ಕರ್ ವೃತ್ತದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ `ಸಾವು ಅಂದ್ರೆ ಭಯಪಡೋದಕ್ಕೆ ಗಲ್‌ಗಲ್ಲಿ ತಿರ್ಗೋ ಕಂತ್ರಿ, ಕಜ್ಜಿ ಗೂಂಡಾ ರೌಡಿ ಅನ್ಕೊಂಡ್ರೆನೋ ನನ್ನನ್ನ, ಮದಕರಿ.... ವೀರ ಮದಕರಿ...' ಚಿತ್ರದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

ಇದೇ ವೇಳೆ ಮಾತನಾಡಿ, ನೀವು ಮದಕರಿ ಡೈಲಾಗ್ ಕೇಳ್ತೀರಾ ಸರ್, ಆದ್ರೆ ನಾನು ಜಾತಿಯತೆ ಮಾಡ್ತೀನಿ ಅಂತಾರೆ, ಆದ್ರೆ ನಾವು ಸಿನೆಮಾರಂಗದವ್ರು. ಆದ್ರೆ ಮೂರು ಬಾರಿ ಗೆದ್ದಿರುವ ನಿರಾಣಿಯವರ ಮೇಲೆ ಜನರ ಪ್ರೀತಿ ಸಾಕಷ್ಟಿದೆ. 75 ಸಾವಿರ ಜನರಿಗೆ ನಿರಾಣಿಯವರು ಉದ್ಯೋಗ ನೀಡಿದ್ದಾರೆ. ಈ ಬಾರಿಯೂ ಬಹುಮತದಿಂದ ನಿರಾಣಿಯವರನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದರು.

]]>
1062469 0 0 0
<![CDATA[ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಾಯಕಿ]]> https://publictv.in/actress-chaithra-achar-new-photoshoot-2/ Tue, 02 May 2023 13:40:11 +0000 https://publictv.in/?p=1062471 'ಸಪ್ತ ಸಾಗರದಾಚೆ ಎಲ್ಲೋ' (Sapta Sagaradacche Yello) ಚಿತ್ರದ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಹಂಚಿಕೊಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

'ಮಹಿರ' (Mahira) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಚೈತ್ರಾ ಆಚಾರ್ (Chaithra Achar)  ಅವರು ಆ ದೃಶ್ಯ, ಗಿಲ್ಕಿ, ತಲೆದಂಡ (Thaledanda) ಸಿನಿಮಾಗಳಲ್ಲಿ ನಾಯಕಿ ನಟಿಸಿದ್ದಾರೆ. ಗಾಯಕಿಯಾಗಿಯೂ ಚೈತ್ರಾ ಆಚಾರ್ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ಸುವರ್ಣಾವಕಾಶ, ಮಯಾಬಜಾರ್ 2016, ಗರುಡ ಗಮನ ವೃಷಭ ವಾಹನ ಸಿನಿಮಾದ ಹಾಡುಗಳಿಗೆ ಚೈತ್ರಾ ಧ್ವನಿಯಾಗಿದ್ದಾರೆ.

 
View this post on Instagram
 

A post shared by Chaithra J Achar (@chaithra.j.achar)

ಬ್ಲೌಸ್ ಇಲ್ಲದೇ ಹಳದಿ ಬಣ್ಣದ ಸೀರೆಯುಟ್ಟು ನಟಿ ಚೈತ್ರಾ ಮಿಂಚಿದ್ದಾರೆ. ಹಳದಿ ಸೀರೆ ಕೆಂಪು ಬಣ್ಣದ ಬಾರ್ಡರ್ ಸೀರೆಯಲ್ಲಿ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
View this post on Instagram
 

A post shared by Chaithra J Achar (@chaithra.j.achar)

'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಚೈತ್ರಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್‌ಗೆ ಚೈತ್ರಾ, ರುಕ್ಮಿಣಿ ವಸಂತ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

]]>
1062471 0 0 0
<![CDATA[ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ]]> https://publictv.in/karnataka-election-2023-actress-tara-released-the-bjp-manifesto-from-a-wrapped-udupi-saree/ Tue, 02 May 2023 13:52:20 +0000 https://publictv.in/?p=1062477 ಉಡುಪಿ: ಸೀರೆಯ ಒಳಗಿಟ್ಟು ಮಲ್ಲಿಗೆ ಹೂವನ್ನು ಸುತ್ತಿ ಬಿಜೆಪಿ (BJP Manifesto) ಜಿಲ್ಲಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ನಟಿ ತಾರಾ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೊಂದು ಅಪ್ಯಾಯಮಾನ ಘಟನೆ ಎಂದು ತಾರಾ (Actress Thara) ಹೇಳಿದರು.

ಭಾರತೀಯ ಜನತಾ ಪಾರ್ಟಿ (BJP) ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸಮಾಜ ಕಲ್ಯಾಣ- ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary), ನಟಿ ತಾರಾ ಹಾಗೂ ಬಿಜೆಪಿಯ ಜಿಲ್ಲಾ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 24 ವಿವಿಧ ಯೋಜನೆಗಳ ಪಟ್ಟಿಯನ್ನು ಪ್ರಣಾಳಿಕೆ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರಿ ಮೆಡಿಕಲ್ ಕಾಲೇಜು ಕೈಗಾರಿಕಾ ವಲಯ ಕಿರು  ಬಂದರು ಐಟಿ ಪಾರ್ಕ್ ಜೊತೆಗೆ ಪಾರಂಪರಿಕ ಕ್ಷೇತ್ರಗಳ ಕಾರಿಡಾರ್ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಉಡುಪಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಒಂದು ವಿಶೇಷ ಪ್ರಣಾಳಿಕೆ ಬಿಡುಗಡೆ ಎಂದು ಅನಿಸಿತು. ತಾಯಿಯ ಸೀರೆಯ ಸೆರಗಿನಿಂದ ಪ್ರಣಾಳಿಕೆಯನ್ನು ತೆಗೆದು ಬಿಡುಗಡೆ ಮಾಡಲಾಯಿತು. ನನಗೆ ಬಹಳ ಅಪ್ಯಾಯಮಾನ ಅನ್ನಿಸಿತು. ಸೃಷ್ಟಿ ಮಾಡುವ ಗುಣ ಇರುವುದು ತಾಯಿ ಮತ್ತು ಪ್ರಕೃತಿಗೆ ಮಾತ್ರ. ಅರ್ಥಪೂರ್ಣ ಭಾವ ಆಗಿತ್ತು ಎಂದು ತಾರಾ ಹೇಳಿದರು.

ಉಡುಪಿ ಜಿಲ್ಲೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿದೆ ಜಿಲ್ಲೆ ಬೆಳೆದಂತೆ ಮತ್ತಷ್ಟು ಬೇಡಿಕೆಗಳು ಇದ್ದೇ ಇರುತ್ತದೆ. ಈ ಭಾಗದ ಜನರ ಉದ್ಯೋಗ ಶಿಕ್ಷಣ ಆರೋಗ್ಯಕ್ಕೆ ಸಂಬಂಧಪಟ್ಟಂತೆ 24 ವಂಶಗಳ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯ ಮಟ್ಟದಲ್ಲಿ ಪ್ರಣಾಳಿಕೆಯು ಬಿಡುಗಡೆಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್‌ – ಮುಂದೇನಾಯ್ತು?

]]>
1062477 0 0 0
<![CDATA[ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ]]> https://publictv.in/karnataka-election-2023-rahul-gandhi-lashesh-out-at-bjp-in-campaign-at-chikkamagaluru/ Tue, 02 May 2023 14:46:13 +0000 https://publictv.in/?p=1062485 ಚಿಕ್ಕಮಗಳೂರು: ಬಿಜೆಪಿ (BJP) ಯವರಿಗೆ 40 ಅಂದರೆ ತುಂಬಾ ಪ್ರೀತಿ. ಹಾಗಾಗಿ, ಅವರಿಗೆ ಈ ಬಾರಿ 40 ಸ್ಥಾನಗಳನ್ನಷ್ಟೆ ಕೊಡಿ, ಕಾಂಗ್ರೆಸ್ಸಿಗೆ 150 ಸ್ಥಾನ ಕೊಡಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಮತದಾರರಿಗೆ ಮನವಿ ಮಾಡಿದ್ದಾರೆ. ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ರೋಡ್ ಶೋ ನಡೆಸಿ ಬಳಿಕ ತೆರದ ವಾಹನದಲ್ಲಿ ಬಹಿರಂಗವಾಗಿ ಭಾಷಣ ಮಾಡಿದ ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಭಾಷಣದ ಉದ್ದಕ್ಕೂ ಮೋದಿ (Narendra Modi) ಯವರನ್ನೇ ಟಾರ್ಗೆಟ್ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಹೋದಲ್ಲೆಲ್ಲಾ ಬರೀ ನಿಮ್ಮ ಬಗ್ಗೆಯೇ ಹೇಳುತ್ತೀರಾ, ನಿಮ್ಮ ಬಗ್ಗೆ ನೀವೇ ಹೇಳುವುದನ್ನ ಬಿಟ್ಟು ಜನರ ಬಗ್ಗೆ, ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಏನು ಕೊಡ್ತೀರಾ ಅದನ್ನ ಹೇಳಿ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿಗಳ ಪರ ಮತಪ್ರಚಾರ ಮಾಡಿದ ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದೊಂದು ಕಳ್ಳ ಸರ್ಕಾರ. ಈ ಸರ್ಕಾರ ಜನರ ಆಶೀರ್ವಾದದಿಂದ ಆದ ಸರ್ಕಾರವಲ್ಲ. ಕಳ್ಳತನ ಮಾಡಿದ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಿಂದ ಮಾಡಿದ ಹಣದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಯಾರನ್ನೇ ಕೇಳಿ 40 ಅಂದ್ರೆ ಏನೆಂದು, ಎಲ್ಲರೂ ಭ್ರಷ್ಟಾಚಾರ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಾರಿಯೂ ಬಿಜೆಪಿಯವರು ಮತ್ತದೇ ಕಳ್ಳತನ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಾರೆ. ಅವರಿಗೆ 40 ಅಂದ್ರೆ ತುಂಬಾ ಪ್ರೀತಿ. ಹಾಗಾಗಿ, ಅವರಿಗೆ 40 ಸ್ಥಾನ ನೀಡಿ ಕಾಂಗ್ರೆಸ್ 150 ಸ್ಥಾನ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

ನರೇಂದ್ರ ಮೋದಿಯವರು ಚುನಾವಣೆ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಭೇಟಿ ಕೊಡ್ತಾರೆ. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ. ಮೋದಿಯವರು ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಕೆಂಪಣ್ಣನವರ ಪತ್ರಕ್ಕೆ ಉತ್ತರ ಕೊಡಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಭಾಷಣದ ವೇಳೆಯೂ ನಾವು ನಮ್ಮ ನಾಯಕರ ಎಲ್ಲರ ಹೆಸರು ಹೇಳುತ್ತೇವೆ. ಆದರೆ ಮೋದಿಯವರು ಯಾರ ಹೆಸರನ್ನೂ ಹೇಳಲ್ಲ. ಬೊಮ್ಮಾಯಿ, ಬಿ.ಎಸ್.ವೈ ಸೇರಿದಂತೆ ಯಾರ ಹೆಸರನ್ನೂ ಹೇಳಲ್ಲ ಎಂದರು. ಬರೀ ಅವರ ಬಗ್ಗೆ ಅವರೇ ಹೇಳಿಕೊಳ್ಳುತ್ತಾರೆ ಇದನ್ನ ನಿಲ್ಲಿಸಬೇಕು ಎಂದ ಅವರು, ಸುಡು ಬಿಸಿಲಿನ ಮಧ್ಯೆಯೂ ರೋಡ್ ಶೋನಲ್ಲಿ ಭಾಗಿಯಾಗಿದ್ದ ಸಾವಿರಾರು ಜನರಿಗೆ ಅಭಿನಂದನೆ ಸಲ್ಲಿಸಿದರು.

1978ರಲ್ಲಿ ನನ್ನ ಅಜ್ಜಿ ಇಲ್ಲಿ ಸ್ಪರ್ಧೆ ಮಾಡಿದ್ದರು. ನನಗೆ ಚಿಕ್ಕಮಗಳೂರಿಗೆ ಬರಲು ಹೆಮ್ಮೆಯಾಗುತ್ತದೆ. ನನ್ನ ಅಜ್ಜಿ ಚಿಕ್ಕಮಗಳೂರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಇಲ್ಲಿನ ಜನ ತುಂಬಾ ಸುಂದರ ಹಾಗೂ ಒಳ್ಳೆಯವರು ಎಂದು ಗೊತ್ತಾಯ್ತು ಎಂದರು. ಇದು ಪ್ರಧಾನಿ ಚುನಾವಣೆಯಲ್ಲ. ಕರ್ನಾಟಕದ ಮಾತೆಯರು, ಅಕ್ಕತಂಗಿಯರು, ಅಣ್ಣ-ತಮ್ಮಂದಿರು, ರೈತರು, ಶ್ರಮಿಕ ವರ್ಗದ ಚುನಾವಣೆ. ಆದರೆ ಬಿಜೆಪಿ ಹಾಗೂ ಪ್ರಧಾನಿ ಸರ್ಕಾರ ಬಂದರೆ ಇವರಿಗೆಲ್ಲಾ ಏನು ಮಾಡುತ್ತೇವೆ ಎಂದು ಒಂದು ಸಣ್ಣ ಮಾತು ಕೂಡ ಹೇಳಲ್ಲ ಎಂದರು.

ಅವರು ಮಾಡಿರುವ 60% ಕೆಲಸಗಳು ಅರ್ಧಕ್ಕೆ ನಿಂತಿವೆ. ಕಳೆದ ಮೂರು ವರ್ಷದಲ್ಲಿ ಅವರು ಮಾಡಿದ್ದು ಒಂದೇ ಒಂದು. ನಿಮ್ಮ ಸರ್ಕಾರವನ್ನ ಕಳ್ಳತನ ಮಾಡಿದ್ದು ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ರೋಡ್ ಶೋಗೆ ಬಂದಿದ್ದ ರಾಣಿ ಎಂಬ ಮಹಳೆಯನ್ನ ಮಾತನಾಡಿಸಿ, ದೇಶದಲ್ಲಿ ನಿಮ್ಮಂತಹ ಕೋಟ್ಯಂತರ ರಾಣಿಯರು ಇದ್ದಾರೆ. ತುಂಬಾ ಕಷ್ಟದಲ್ಲಿದ್ದಾರೆ. ಸರ್ಕಾರ ನಿಮಗೆಲ್ಲಾ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಬಡವರ ಏಳಿಗೆಗೆ ಶ್ರಮಿಸಲಿದೆ ಎಂದರು.

 

]]>
1062485 0 0 0
<![CDATA[Met Gala ಕಾರ್ಯಕ್ರಮದಲ್ಲಿ 204 ಕೋಟಿ ಮೌಲ್ಯದ ಡೈಮಂಡ್ ನೆಕ್ಲೇಸ್ ಧರಿಸಿ ಬಂದ ಪ್ರಿಯಾಂಕಾ]]> https://publictv.in/actress-priyanka-chopras-met-gala-2023-diamond-necklace-worth/ Tue, 02 May 2023 14:22:27 +0000 https://publictv.in/?p=1062486 ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ (Hollywood) ರಂಗದಲ್ಲಿ ಮಿಂಚ್ತಿದ್ದಾರೆ. 'ಸಿಟಾಡೆಲ್' ವೆಬ್ ಸರಣಿ ಮೂಲಕ ಗಮನ ಸೆಳೆಯುತ್ತಿರುವ ನಟಿ ಈ ನಡುವೆ ಮೆಟಾ ಗಾಲಾ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ದುಬಾರಿ ಮೊತ್ತದ ನೆಕ್ಲೇಸ್ (Necklace) ಧರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಇತ್ತೀಚಿಗೆ ಅಮೆರಿಕದ ಮೊಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೆಟಾ ಗಾಲಾ 2023 (Meta Gala 2023) ಕಾರ್ಯಕ್ರಮ ನೆರವೇರಿದೆ. ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ- ನಿಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ:ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

 
View this post on Instagram
 

A post shared by Priyanka (@priyankachopra)

ಇದೀಗ 'ಮೆಟಾ ಗಾಲಾ'ದಲ್ಲಿ ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಗೌನ್ ಜೊತೆ ಡೈಮೆಂಟ್ ನೆಕ್ಲೇಸ್ ಎಲ್ಲರ ಗಮನ ಸೆಳೆಯುತ್ತಿದೆ. ನೆಕ್ಲೇಸ್ ಅಸಲಿ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದರ ಬೆಲೆ ತಿಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

ಮೆಟಾ ಗಾಲಾ ಕಾರ್ಯಕ್ರಮಕ್ಕೆ ಪತಿ ನಿಕ್ ಜೊತೆ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು. ಮೂಲಗಳ ಪ್ರಕಾರ, ಪ್ರಿಯಾಂಕಾ ಧರಿಸಿರುವ ಡೈಮಂಡ್ ನೆಕ್ಲೇಸ್ 25 ಮಿಲಿಯನ್ ಡಾಲರ್ ಮೌಲ್ಯದಾಗಿದೆ. ಇಂಡಿಯನ್ ಕರೆನ್ಸಿ ಪ್ರಕಾರ 204 ಕೋಟಿ ರೂಪಾಯಿದಾಗಿದೆ. ಇದೀಗ ಪಿಗ್ಗಿ ನೆಕ್ಲೇಸ್ ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

]]>
1062486 0 0 0
<![CDATA[ಅಪಘಾತಕ್ಕೀಡಾಗಿದ್ದ ಬೀದಿ ನಾಯಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಶೈನ್ ಶೆಟ್ಟಿ]]> https://publictv.in/shine-shetty-a-street-dog-suffering-from-an-accident-was-admitted-to-the-hospital-and-treated/ Tue, 02 May 2023 14:39:48 +0000 https://publictv.in/?p=1062492 ಸ್ಯಾಂಡಲ್‌ವುಡ್ (Sandalwood) ನಟ- ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ (Shine Shetty) ಮತ್ತೆ ಸುದ್ದಿಯಲ್ಲಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡುತ್ತಿದ್ದ ಬೀದಿ ನಾಯಿಗೆ 'ಬಿಗ್ ಬಾಸ್' (Bigg Boss Kannada) ಶೈನ್ ಶೆಟ್ಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಪಘಾತವಾದ ಜಾಗಕ್ಕೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಬೀದಿ ನಾಯಿಯ ಸಂಕಷ್ಟಕ್ಕೆ ಶೈನ್‌ ಶೆಟ್ಟಿ ನೆರವಾಗಿದ್ದಾರೆ.

ಬಿಗ್ ಬಾಸ್ ಶೋ, 'ಕಾಂತಾರ' (Kantara) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶೈನ್ ಶೆಟ್ಟಿ ಕುಟುಂಬ ಸಮೇತ ರ‍್ಮಸ್ಥಳಕ್ಕೆ ಹೋಗುತ್ತಿದ್ದರು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಅಪರಿಚಿತ ವಾಹನವೊಂದು ಬೀದಿ ನಾಯಿಗೆ ಡಿಕ್ಕಿಯೊಡೆದು ಹೋಗಿದ್ದರು. ಬೀದಿ ನಾಯಿಯ ಕಾಲು, ಕುತ್ತಿಗೆ ಹಾಗೂ ದೇಹಕ್ಕೆ ತೀವ್ರ ಗಾಯವಾಗಿ ರಕ್ತಸ್ರಾವದಿಂದ ರಸ್ತೆ ಬಿದ್ದು ನರಳಾಡುತ್ತಿತ್ತು. ಆಗ ಅದೇ ಮರ‍್ಗದಲ್ಲಿ ರ‍್ಮಸ್ಥಳ ಹೋಗುತ್ತಿದ್ದ ಶೈನ್ ಶೆಟ್ಟಿ ಬೀದಿನಾಯಿಯನ್ನ ಬಣಕಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಆ ನಾಯಿ ಎಲ್ಲಿ ಅಪಘಾತಕ್ಕೀಡಾಗಿ ಬಿದ್ದಿತ್ತೋ ಅಲ್ಲಿಗೆ ಬಿಟ್ಟಿದ್ದಾರೆ. ಇದನ್ನೂ ಓದಿ:Met Gala ಕಾರ್ಯಕ್ರಮದಲ್ಲಿ 204 ಕೋಟಿ ಮೌಲ್ಯದ ಡೈಮಂಡ್ ನೆಕ್ಲೇಸ್ ಧರಿಸಿ ಬಂದ ಪ್ರಿಯಾಂಕಾ

ನಾಯಿಯನ್ನ (Dog) ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಸ್ಥಳಿಯರ ಬಳಿ ನಂಬರ್ ತೆಗೆದುಕೊಂಡು ಬಣಕಲ್ ಪಶು ಆಸ್ಪತ್ರೆಯ ವೈದ್ಯ ಅಜೀಜ್ ಅಹಮದ್ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಕೆಲಸ ನಿಮಿತ್ತ ಹಳ್ಳಿಗೆ ಹೋಗಿದ್ದ ಅಜೀಜ್ ಅಹಮದ್ ಕೂಡ ಬಂದಿದ್ದಾರೆ. ಬಂದ ತಕ್ಷಣ ನಾಯಿಗೆ ಚಿಕಿತ್ಸೆ ನೀಡಿ ಅದು ಎಲ್ಲಿ ಬಿದ್ದಿತ್ತೋ ಅಲ್ಲಿಗೆ ಬಿಟ್ಟು ಹೋಗಿದ್ದಾರೆ. ಬಳಿಕ ಎಲ್ಲಾ ವಾಹನ ಸವಾರರಿಗೆ ಮನವಿ ಮಾಡಿದ್ದಾರೆ. ವಾಹನಗಳನ್ನ ಓಡಿಸುವಾಗ ನೋಡಿಕೊಂಡು ಓಡಿಸಿ. ಅಚಾನಕ್ಕಾಗಿ ಅಡ್ಡ ಬಂದರೆ ಏನೂ ಮಾಡಲು ಆಗಲ್ಲ. ಆದರೆ, ನೋಡಿ ವಾಹನ ಚಾಲನೆ ಮಾಡಿ. ಒಂದು ವೇಳೆ ಅಪಘಾತವಾಯಿತು ಎಂದರೆ ಕೂಡಲೇ ಕೆಳಗಡೆ ಇಳಿದು ಪ್ರಾಣಿಯ ಪರಿಸ್ಥಿತಿ ನೋಡಿ. ಚಿಕಿತ್ಸೆ ಕೊಡಿಸಿದರೆ ಬದುಕುತ್ತೆ ಎಂದರೆ ಚಿಕಿತ್ಸೆ ಕೊಡಿಸಿ. ಒಂದು ಜೀವ ಉಳಿಯುತ್ತದೆ ಎಂದು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ. ಇದೀಗ ಶೈನ್ ಶೆಟ್ಟಿ ಮಾನವೀಯ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

]]>
1062492 0 0 0
<![CDATA[ಲಿಂಗಸುಗೂರು, ಮಾನ್ವಿಯಲ್ಲಿ HDK ಭರ್ಜರಿ ಮತಬೇಟೆ; ಕುಮಾರಸ್ವಾಮಿಗೆ ಟಗರು ಮರಿ ಗಿಫ್ಟ್‌]]> https://publictv.in/hd-kumaraswamy-election-campaign-at-raichur/ Tue, 02 May 2023 14:38:16 +0000 https://publictv.in/?p=1062493 ರಾಯಚೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ರಾಯಚೂರು ಜಿಲ್ಲೆಯಲ್ಲಿಂದು ಜೆಡಿಎಸ್ ಅಭ್ಯರ್ಥಿಗಳ (JDS Candidates) ಪರ ಭರ್ಜರಿ ಮತಬೇಟೆ ನಡೆಸಿದರು.

ಲಿಂಗಸುಗೂರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಹಾಗೂ ಮಾನ್ವಿ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ ಪರ ಲಿಂಗಸುಗೂರು ಹಾಗೂ ಮಾನ್ವಿಯಲ್ಲಿ ಮತ ಶಿಕಾರಿ ನಡೆಸಿದರು. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

ಮತ ಪ್ರಚಾರದಲ್ಲಿ ನೀರಾವರಿ ಯೋಜನಗಳ ಜಪ ಮಾಡಿದ ಹೆಚ್‌ಡಿಕೆ ಸಂಪೂರ್ಣ ನೀರಾವರಿಗಾಗಿ ಜೆಡಿಎಸ್ ಬೆಂಬಲಿಸುವಂತೆ ಕೋರಿದರು. ಲಿಂಗಸುಗೂರು, ಮುದಗಲ್ ಹಾಗೂ ಹಟ್ಟಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರದ ಭರವಸೆ ನೀಡಿದ ಕುಮಾರಸ್ವಾಮಿ ಎರಡು ಬಾರಿ ಸೋತಿರುವ ಲಿಂಗಸುಗೂರು ಅಭ್ಯರ್ಥಿ ಸಿದ್ದು ಬಂಡಿಯನ್ನ ಈ ಬಾರಿ ಗೆಲ್ಲಿಸುಂತೆ ಮನವಿ ಮಾಡಿದರು. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಮಾಹಿತಿ ಸಾಬೀತು ಮಾಡಿದರೆ 1 ಕೋಟಿ ಬಹುಮಾನ ಘೋಷಣೆ

ಇನ್ನೂ ಮಾನ್ವಿಯಲ್ಲಿ ರಾಜಾ ವೆಂಕಟಪ್ಪ ಪರ ಮತಬೇಟೆ ನಡೆಸಿದ ಹೆಚ್‌ಡಿಕೆ ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗಕ್ಕೆ ನೀರು ಹರಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ, ಕ್ಷೇತ್ರಕ್ಕೆ ಕೈಗಾರಿಕೆಗಳು ಬರಬೇಕಿದೆ ಈ ನಿಟ್ಟಿನಲ್ಲಿ ಜೆಡಿಎಸ್ ಗೆ ಬೆಂಬಲಿಸುವಂತೆ ಕೋರಿದರು. ಇದೇ ವೇಳೆ ಜೆಡಿಎಸ್‌ ಕಾರ್ಯಕರ್ತರು ಹೆಚ್‌ಡಿಕೆಗೆ ಟಗರು ಮರಿಯನ್ನು ಉಡುಗೊರೆಯಾಗಿ ನೀಡಿದರು.

]]>
1062493 0 0 0
<![CDATA[ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್]]> https://publictv.in/karnataka-election-2023-modi-campaign-again-in-bangaluru-plan-for-38-km-road-show/ Tue, 02 May 2023 15:38:16 +0000 https://publictv.in/?p=1062511 - ಪ್ರಧಾನಿ ಸಚಿವಾಲಯದಿಂದ ಸಿಗುತ್ತಾ ಸಿಗ್ನಲ್..?

ಬೆಂಗಳೂರು: ಕರ್ನಾಟಕ ಕಬ್ಜಾಗೆ ಕಸರತ್ತು ನಡೆಸ್ತಿರೋ ಬಿಜೆಪಿ (BJP) ಪಾಳಯ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಲ್ಲಿ ಮೊನ್ನೆಯಷ್ಟೇ ರೋಡ್ ಶೋ ನಡೆಸಿದ್ದ ಮೋದಿ (Narendra Modi) ಮತ್ತೊಮ್ಮೆ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ. ಬೆಂಗಳೂರನ್ನು ಗೆಲ್ಲಲು 23 ಕ್ಷೇತ್ರಗಳನ್ನು ಕವರ್ ಮಾಡಲು ಬೃಹತ್ ರೋಡ್ ಶೋ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದ್ಯಂತೆ.

ಅದು ಗುಜರಾತ್ ಚುನಾವಣೆ (Gujarat Election) ಸಂದರ್ಭ. ಮತದಾನದಕ್ಕೆ ಮೂರು ದಿನ ಇರುವಾಗ ಬರೋಬ್ಬರಿ 50 ಕಿಲೋಮೀಟರ್ ರೋಡ್ ಶೋ ನಡೆಸಿ ಪಕ್ಷದ ಭಾರೀ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಇದೀಗ ಅಂಥಾದ್ದೇ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲು ಮೋದಿ ಪ್ಲಾನ್ ಮಾಡ್ಕೊಂಡಿದ್ದಾರೆ. ಮೇ 6ರಂದು ಅಂದರೆ ಇದೇ ಶನಿವಾರ ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ (Modi Mega Road Show) ಆಯೋಜಿಸುವ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಚರ್ಚೆಗಳು ನಡೆದಿವೆ.

ಮೇ 6ರಂದು ಬೆಳಗ್ಗೆ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋದಿಯವರ ನೇತೃತ್ವದಲ್ಲಿ ಎಂಟು ಕಿಲೋಮೀಟರ್ ರೋಡ್ ಶೋ ಆಯೋಜಿಸುವುದು. ಮತ್ತು ಅದೇ ದಿನ ಸಂಜೆ ಕೋಣನಕುಂಟೆಯಿಂದ ಮಲ್ಲೇಶ್ವರಂನ ಮಾರಮ್ಮ ಸರ್ಕಲ್ ವರೆಗೂ ಅಂದ್ರೆ 30 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಬಿಜೆಪಿ ಪ್ಲಾನ್ ಮಾಡಿದೆ. 30 ಕಿಲೋಮೀಟರ್ ರೋಡ್ ಶೋ ಮೂಲಕ ಬೆಂಗಳೂರಿನ 23 ಮತ ಕ್ಷೇತ್ರಗಳನ್ನು ಕವರ್ ಮಾಡಲಾಗುತ್ತದೆ. ಇದನ್ನೂ ಓದಿ: ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ

ಬಿಗ್ ರೋಡ್ ಶೋ: ಬ್ರಿಗೇಡ್ ಮಿಲೇನಿಯಂ, ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್‍ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್‍ಗೇಟ್, ಮಹಾಲಕ್ಷ್ಮೀ ಲೇಔಟ್, ಸ್ಯಾಂಕಿಟ್ಯಾಂಕ್.

ಸಂಜೆ ಮೋದಿ ನಡೆಸಲಿರೋ ರೂಟ್ ಮ್ಯಾಪ್ ನೋಡೋದಾದ್ರೆ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶುರುವಾಗಿ ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮದವರೆಗೆ ರೋಡ್ ನಡೆಸಲಾಗುತ್ತೆ. ಅಲ್ಲಿಂದ ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್‍ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್‍ಗೇಟ್, ಮಹಾಲಕ್ಷ್ಮೀ ಲೇಔಟ್ ಬರಲಿರುವ ರೋಡ್ ಮಲ್ಲೇಶ್ವರಂನ ಸ್ಯಾಂಕಿಟ್ಯಾಂಕ್‍ನಲ್ಲಿ ಮುಕ್ತಾಯವಾಗಲಿದೆ.

ಯಾವ ಕ್ಷೇತ್ರದಲ್ಲಿ ಮೋದಿ ಮೇನಿಯಾ..?: 1. ಬೆಂಗಳೂರು ದಕ್ಷಿಣ 2. ಜಯನಗರ 3. ಪದ್ಮನಾಭನಗರ 4. ಬಸವನಗುಡಿ 5. ಚಾಮರಾಜಪೇಟೆ 6. ಚಿಕ್ಕಪೇಟೆ 7. ಗಾಂಧಿನಗರ 8. ಗೋವಿಂದರಾಜನಗರ 9. ರಾಜಾಜಿನಗರ 10. ಮಹಾಲಕ್ಷ್ಮಿಲೇಔಟ್ 11. ಮಲ್ಲೇಶ್ವರಂ

ಬೆಂಗಳೂರಲ್ಲಿ ಮೋದಿ ಮತ್ತೆ ಈ ರೋಡ್ ಶೋಗೆ ಪ್ಲ್ಯಾನ್ ಮಾಡಿರೋ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ. ಮೋದಿ ರೋಡ್ ಇಂದ ಬೆಂಗಳೂರು ದಕ್ಷಿಣ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್ ಸೇರಿದಂತೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಭಾವ ಬೀರೋದು ಪಕ್ಕಾ ಆಗಿದೆ.

ಒಟ್ಟಿನಲ್ಲಿ ಈ ರಸ್ತೆಯಲ್ಲೆಲ್ಲಾ ರೋಡ್ ಶೋ ನಡೆಸೋ ಮೂಲಕ ಬೆಂಗಳೂರಿನಲ್ಲಿ ಬಿಜೆಪಿ ಅಲೆ ಎಬ್ಬಿಸಲು ಕೇಸರಿ ಪಡೆ ಪ್ಲಾನ್ ಮಾಡ್ಕೊಂಡಿದೆ. ಇದಕ್ಕೆ ಪ್ರಧಾನಿ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.

]]>
1062511 0 0 0
<![CDATA[ವಿದ್ಯಾರ್ಥಿನಿಯರ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಸ್ಪೈಕ್ಯಾಮೆರಾ ಇಟ್ಟು ವೀಡಿಯೋ ಮಾಡ್ತಿದ್ದ ಕಾಮುಕ ಅರೆಸ್ಟ್‌]]> https://publictv.in/some-of-the-girls-had-complained-that-a-camera-was-found-installed-in-the-bathroom-accused-arrest/ Tue, 02 May 2023 15:22:37 +0000 https://publictv.in/?p=1062512 ಜೈಪುರ: ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ವಲಹೆ ಹೋಗುವುದು ಸಹಜ. ಹಾಗಾಗಿ ವಲಸಿಗರು ಬಾಡಿಗೆ ಮನೆ ಪಡೆಯುವ ಮುನ್ನ ಎಚ್ಚರ ವಹಿಸಬೇಕಿದೆ. ವಸತಿ ಸೌಲಭ್ಯಕ್ಕಿಂಲೂ ಹೆಚ್ಚಾಗಿ ನಾವು ಯಾರದ್ದೊ ಕ್ಯಾಮೆರಾ (Camera) ಕಣ್ಣಿಗೆ ಸಿಗದೇ ಸುರಕ್ಷಿತವಾಗಿದ್ದೇವಾ ಎಂಬುದನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ.

ಏಕೆಂದರೆ ರಾಜಸ್ಥಾನದ (Rajasthan) ಉದಯಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ನಗರದಲ್ಲಿ ಯುವತಿಯರು ವಾಸವಿದ್ದ ಬಾಡಿಗೆ ಫ್ಲ್ಯಾಟ್‌ನಲ್ಲಿ (Rent Flat) ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ. ಈ ಕ್ಯಾಮೆರಾಗಳನ್ನು ಸ್ನಾನಗೃಹ, ಮಲಗುವ ಕೋಣೆಗಳು ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಗ್ರಾಹಕರಿಗೆ ಮನೆಗಳನ್ನ ಬಾಡಿಗೆ ನೀಡುವ ಮುನ್ನ ಮಾಲೀಕರೇ ಅಳವಡಿಸಿದ್ದರು ಎಂಬುದು ಗಮನಾರ್ಹ. ಇದನ್ನೂ ಓದಿ: ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

ಹೌದು.. ರಾಜಸ್ಥಾನದ ಉದಯಪುರದ ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್‌ ದಾಖಲಾಗಿದೆ. ಉದಯಪುರ ವಿಭಾಗದ ಅತಿದೊಡ್ಡ ಮೋಹನ್‌ಲಾಲ್ ಸುಖದಿಯಾ ವಿಶ್ವವಿದ್ಯಾಲಯವು ಈ ಪೊಲೀಸ್ ಠಾಣೆ ವೃತ್ತದಲ್ಲಿದೆ ಎಂಬುದು ಸಹ ಗಮನಿಸಬೇಕಾದ ಅಂಶ. ಬೋಹ್ರಾ ಗಣೇಶ್ ಪ್ರದೇಶವು ಈ ವಿಶ್ವವಿದ್ಯಾಲಯದ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ನೂರಾರು ಯುವಕ-ಯುವತಿಯರು ಬಾಡಿಗೆಗೆ ಕೊಠಡಿ ಅಥವಾ ಫ್ಲ್ಯಾಟ್‌ಗಳನ್ನು ತೆಗೆದುಕೊಂಡು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರಕರಣ ಸಂಬಂಧ ರಾಜ್‌ಸಮಂದ್‌ನ ನಾಥದ್ವಾರ ನಿವಾಸಿ ರಾಜೇಂದ್ರ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

ಸ್ಪೈ ಕ್ಯಾಮೆರಾಗಳು ಪತ್ತೆಯಾಗಿದ್ದು ಹೇಗೆ? ಈ ಘಟನೆ ಸಂಬಂಧ ಬೋಹ್ರಾ ಗಣೇಶ್‌ ಜೀ ಮಂದಿರ ರಸ್ತೆಯಲ್ಲಿರುವ ಪಾರ್ಥ್ ಕಾಂಪ್ಲೆಕ್ಸ್‌ನಲ್ಲಿರುವ ಫ್ಲ್ಯಾಟ್‌ ಸಂಖ್ಯೆ 401 ಅನ್ನು ರಾಜೇಂದ್ರ ಅಲಿಯಾಸ್ ರಾಜ್ ಸೋನಿ ಅವರಿಂದ ಬಾಡಿಗೆಗೆ ಪಡೆದಿದ್ದೇವೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದರು. ಕೆಲ ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದ ವೇಳೆ ಫ್ಲ್ಯಾಟ್‌ ಮಾಲೀಕರು ರಿಪೇರಿ ನೆಪದಲ್ಲಿ ಫ್ಲಾಟ್ ತೆರೆದಿದ್ದರು. ಫ್ಲಾಟ್‌ನ ಕೀ ಕೂಡ ಅವರ ಬಳಿ ಇತ್ತು. ಆ ವೇಳೆ ಫ್ಲ್ಯಾಟ್‌ನಲ್ಲಿ ಯುವತಿಯರು ಇಲ್ಲದ ಲಾಭ ಪಡೆದು ಬಾತ್ ರೂಂ, ಬೆಡ್ ರೂಂನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು (ಚಿಕ್ಕ ಗಾತ್ರದ ಕ್ಯಾಮೆರಾ) ಅಳವಡಿಸಿದ್ದರು. ಇನ್ನು, ಪ್ಲ್ಯಾಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ರಿಪೇರಿ ಮಾಡುವಾಗ, ಸ್ಪೈ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಬಗ್ಗೆ ವಿದ್ಯಾರ್ಥಿನಿಯರ ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಯೇ ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾ ವ್ಯವಹಾರ ನಡೆಸುತ್ತಿದ್ದದ್ದು ಕಂಡುಬಂದಿದೆ. ಬಳಿಕ ತಾನೇ ಸ್ಪೈ ಕ್ಯಾಮೆರಾಗಳನ್ನ ಬಾತ್‌ ರೂಮ್‌, ಬೆಡ್‌ ರೂಮ್‌ ನಲ್ಲಿ ಅಳವಡಿಸಿ, ವಿದ್ಯಾರ್ಥಿನಿಯರ ಅಶ್ಲೀಲ ದೃಶ್ಯಗಳನ್ನ ನೋಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

]]>
1062512 0 0 0
<![CDATA[ಬಿಗ್ ಬುಲೆಟಿನ್ 02 May 2023 ಭಾಗ-3]]> https://publictv.in/big-bulletin-02-05-2023/ Tue, 02 May 2023 17:34:29 +0000 https://publictv.in/?p=1062517 ]]> 1062517 0 0 0 <![CDATA[JDS, ಕಾಂಗ್ರೆಸ್ ಉಗ್ರಗಾಮಿಗಳ ಪರ ನಿಂತಿವೆ - ಮೋದಿ ಗಂಭೀರ ಆರೋಪ]]> https://publictv.in/jds-congress-support-to-extremists-pm-narendra-modi-big-statement/ Tue, 02 May 2023 16:17:54 +0000 https://publictv.in/?p=1062518 ಬೆಂಗಳೂರು/ಚಿತ್ರದುರ್ಗ: ಬಿಜೆಪಿಗೆ (BJP) ಬೂಸ್ಟ್ ಕೊಡಲು ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ (Narendra Modi), ಚಿತ್ರದುರ್ಗ, ಹೊಸಪೇಟೆ, ಸಿಂಧನೂರಿನಲ್ಲಿ ಆಯೋಜಿಸಿದ್ದ ಸಮಾವೇಶಗಳಲ್ಲಿ ಪಾಲ್ಗೊಂಡು ಮತಬೇಟೆ ನಡೆಸಿದರು.

ಇದೇ ವೇಳೆ ಕಾಂಗ್ರೆಸ್ (Congress), ಜೆಡಿಎಸ್ (JDS) ಉಗ್ರವಾದಿಗಳ ಪರವಿದೆ ಎಂಬ ಗಂಭೀರ ಆರೋಪ ಮಾಡಿದರು. ಸರ್ಜಿಕಲ್ ಸ್ಟ್ರೈಕ್‌ ನಡೆದಾಗ ಕಾಂಗ್ರೆಸ್‌ನವರು ಹೆಮ್ಮೆ ಪಡುವ ಬದಲು ಅಪಮಾನ ಮಾಡಿದರು ಎಂದು ದೂಷಿಸಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡವರಿಗೆ ತಲುಪುವ ಯೋಜನೆಗಳು ನಿಲ್ಲುತ್ತವೆ. ಆದ್ದರಿಂದ ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ತರಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ

ಕಾಂಗ್ರೆಸ್ ಇತಿಹಾಸ ಅವರ ಚಿಂತನೆಗಳನ್ನು ಮರೆಯಬಾರದು. ಆತಂಕ ಸೃಷ್ಟಿಸುವುದು ಕಾಂಗ್ರೆಸ್ ಇತಿಹಾಸ. ಕರ್ನಾಟಕದಲ್ಲಿ ಉಗ್ರ ಕೃತ್ಯಗಳು ನಡೆದಾಗ ಕಾಂಗ್ರೆಸ್ ಅವರ ಪರನಿಂತಿತು. ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಉಗ್ರಗಾಮಿಗಳ (Extremists) ಪರ ನಿಂತಿವೆ. ಆದ್ರೆ ಬಿಜೆಪಿ ಆತಂಕವಾದಿಗಳು ಹಾಗೂ ಉಗ್ರವಾದಿಗಳನ್ನ ಶಮನಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಲಿಂಗಸುಗೂರು, ಮಾನ್ವಿಯಲ್ಲಿ HDK ಭರ್ಜರಿ ಮತಬೇಟೆ; ಕುಮಾರಸ್ವಾಮಿಗೆ ಟಗರು ಮರಿ ಗಿಫ್ಟ್‌

ಇದೇ ವೇಳೆ `ವಿಷಸರ್ಪ' ಎಂದ ಮಲ್ಲಿಕಾರ್ಜುನ ಖರ್ಗೆ, ನಾಲಾಯಕ್ ಮಗ ಎಂದ ಪ್ರಿಯಾಂಕ್ ಖರ್ಗೆಯನ್ನು ಲಾಯಕ್ ಎನ್ನುತ್ತಲೇ ಮೋದಿ ಕಾಲೆಳೆದರು.

]]>
1062518 0 0 0
<![CDATA[WTCಗೂ ಮುನ್ನವೇ ನಂ.1 ಪಟ್ಟಕ್ಕೇರಿದ ಭಾರತ]]> https://publictv.in/icc-test-rankings-india-regain-no-1-test-spot/ Tue, 02 May 2023 16:46:43 +0000 https://publictv.in/?p=1062520 ದುಬೈ: ಐಸಿಸಿ (ICC) ವಿಶ್ವ ಟೆಸ್ಟ್ ರ‍್ಯಾಂಕಿಗ್‌ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡ (Team India) ಆಸ್ಟ್ರೇಲಿಯಾ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

ಜೂನ್‌ 7 ರಿಂದ 11ರ ವರೆಗೆ ಲಂಡನ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಡೆಯಲಿದೆ. ಡಬ್ಲ್ಯೂಟಿಸಿಗೆ ಕೆಲವೇ ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಭಾರತ ಕ್ರಿಕೆಟ್ ತಂಡ ಟೆಸ್ಟ್ ರ‍್ಯಾಂಕಿಗ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಕ್ತಾಯವಾದ ಒಂದು ವಾರಗಳ ನಂತರ ಇಂಗ್ಲೆಂಡ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆಯಲಿದೆ.

ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈವರೆಗೆ ಆಸ್ಟ್ರೇಲಿಯಾ ತಂಡವೇ ಟೆಸ್ಟ್ ಮಾದರಿಯಲ್ಲಿ ನಂ.1 ತಂಡ ಎನಿಸಿಕೊಂಡಿತ್ತು. ಆದರೀಗ ಈಗ ಭಾರತ ಆಸ್ಟ್ರೇಲಿಯಾವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಮೇ 2 ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಡುಗಡೆ ಮಾಡಿದ ರ‍್ಯಾಂಕಿಗ್‌ ಪಟ್ಟಿಯಲ್ಲಿ ಭಾರತಕ್ಕೆ ನಂ.1 ಸ್ಥಾನ ದೊರೆತಿದೆ. ಇದನ್ನೂ ಓದಿ: WTCಗೆ ಟೀಂ ಇಂಡಿಯಾ ಆಯ್ಕೆ ಪ್ರಕಟ – ರಹಾನೆ ಇನ್‌, ಸೂರ್ಯಕುಮಾರ್‌ ಔಟ್‌

ಟೀಂ ಇಂಡಿಯಾ ಫೈನಲ್‌ ಪ್ರವೇಶಿಸಿದ್ದು ಹೇಗೆ? ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ 3-0 ಅಥವಾ 3-1 ಅಂತರದಲ್ಲಿ ಗೆಲ್ಲಬೇಕಾಗಿತ್ತು. ಆದ್ರೆ ಭಾರತ 2-1 ರಲ್ಲಿ ಮುನ್ನಡೆ ಸಾಧಿಸಿತ್ತು. ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಿತ್ತು. ಅಂತಿಮ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರಿಂದ ಫೈನಲ್‌ ಪ್ರವೇಶಿಸುವ ಹಾದಿ ಕಠಿಣವಾಗಿತ್ತು.

ಮತ್ತೊಂದೆಡೆ ಶ್ರೀಲಂಕಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅಗತ್ಯವಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು ಕೇವಲ 2 ವಿಕೆಟ್‌ಗಳ ವಿರೋಚಿತ ಸೋಲು ಅನುಭವಿಸುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿತು. ಭಾರತ 60.29 ಪಿಸಿಟಿಯೊಂದಿಗೆ (Percentage Of Points Earned) ಫೈನಲ್‌ ಪ್ರವೇಶಿಸಿತು.

ಐಸಿಸಿ ಟೆಸ್ಟ್ - ಯಾವ ತಂಡಕ್ಕೆ ಎಷ್ಟು ಶ್ರೇಯಾಂಕ 1. ಭಾರತ - 121 2. ಆಸ್ಟ್ರೇಲಿಯಾ - 116 3. ಇಂಗ್ಲೆಂಡ್‌ - 114 4. ದಕ್ಷಿಣ ಆಫ್ರಿಕಾ - 104 5. ನ್ಯೂಜಿಲೆಂಡ್ - 100 6. ಪಾಕಿಸ್ತಾನ - 86 7. ಶ್ರೀಲಂಕಾ - 84 8. ವೆಸ್ಟ್ ಇಂಡೀಸ್ - 76 9. ಬಾಂಗ್ಲಾದೇಶ - 45 10. ಜಿಂಬಾಬ್ವೆ - 32

]]>
1062520 0 0 0
<![CDATA[ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ - ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ]]> https://publictv.in/virat-kohli-again-counter-attack-on-gautam-gambhir/ Tue, 02 May 2023 17:04:05 +0000 https://publictv.in/?p=1062523 ಲಕ್ನೋ: ಲಕ್ನೋ: ಆರ್‌ಸಿಬಿ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ (Gautam Gambhir) ಸದ್ಯ ಸುದ್ದಿಯಲ್ಲಿದ್ದಾರೆ. ಸೋಮವಾರ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಜಗಳ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ.

ಮೊದಲು ಈ ಘಟನೆಗೆ ಕಾರಣವಾಗಿದ್ದು, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೌತಮ್‌ ಗಂಭೀರ್‌ ಮಾಡಿದ್ದ ವರ್ತನೆ. ಅಂದು ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಸಂಭ್ರಮದಲ್ಲಿ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಆರ್​ಸಿಬಿ ಅಭಿಮಾನಿಗಳಿಗೆ ಸೈಲೆಂಟಾಗಿರಬೇಕು ಎಂದು ಕೈಸನ್ನೆ ಮಾಡಿದ್ದರು. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೊಹ್ಲಿ ಕೂಡ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಟಾರ್ಗೆಟ್ ಮಾಡಿ ಸಂಭ್ರಮಿಸಿದ್ದರು. ಪ್ರತಿ ವಿಕೆಟ್‌ ಪಡೆದಾಗಲೂ ಫುಲ್‌ ಜೋಶ್‌ನಿಂದ ಸಂಭ್ರಮಿಸಿದರು. ಆದರೆ ಪಂದ್ಯದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭೀರ್ ಹಾಗೂ ಕೊಹ್ಲಿ ನಡುವೆ ವಾಗ್ವಾದ ನಡೆಯಿತು. ಇದರಿಂದಾಗಿ ಐಪಿಎಲ್‌ ಮಂಡಳಿ ದಂಡದ ಬಿಸಿ ಮುಟ್ಟಿಸಿತು. ಬಳಿಕ ಆರ್‌ಸಿಬಿ ತಂಡದ ಡ್ರೆಸ್ಸಿಂಗ್‌ ರೂಂ ನಲ್ಲಿ ಕಾಣಿಸಿಕೊಂಡ ಕೊಹ್ಲಿ, ಗಂಭೀರ್‌ಗೆ ಕೌಂಟರ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ನೆನಪಿದೆಯಾ.. ಅಂದು ಕೊಹ್ಲಿಗಾಗಿ ತನ್ನ ಪ್ರಶಸ್ತಿಯನ್ನೇ ಬಿಟ್ಟುಕೊಟ್ಟಿದ್ದರು ಗಂಭೀರ್‌

ನಿಮಗೆ ಕೊಡೋಕೆ ಗೊತ್ತಿದ್ರೆ, ಅದನ್ನ ಇಸ್ಕೋಳ್ಳೋಕು ಗೊತ್ತಿರಬೇಕು. ಇಲ್ಲದಿದ್ರೆ ಕೊಡೋಕೆ ಬರಬಾರದು, ಕೊಟ್ಟರೆ, ನಾವು ತಿರುಗಿಸಿ ಕೊಡ್ತೀವಿ, ಇಲ್ಲದಿದ್ರೆ ನೀವು ಕೊಡೋಕೆ ಬರಬಾರದು ಎಂದು ಪರೋಕ್ಷವಾಗಿ ಡಿಚ್ಚಿಕೊಟ್ಟಿದ್ದಾರೆ.

]]>
1062523 0 0 0
<![CDATA[ಬಿಗ್ ಬುಲೆಟಿನ್ 02 May 2023 ಭಾಗ-2]]> https://publictv.in/big-bulletin-great-escape-for-dk-shivakumar-after-eagle-hits-his-helicopter/ Tue, 02 May 2023 17:37:11 +0000 https://publictv.in/?p=1062535 ]]> 1062535 0 0 0 <![CDATA[ಬಿಗ್ ಬುಲೆಟಿನ್ 02 May 2023 ಭಾಗ-1]]> https://publictv.in/big-bulletin-with-hr-ranganath-congress-releases-manifesto-for-assembly-election/ Tue, 02 May 2023 17:39:17 +0000 https://publictv.in/?p=1062538 ]]> 1062538 0 0 0 <![CDATA[ಕ್ಲಾಸಿಕ್ ಬೆಂಗಾಲಿ ಮೀನು ಸಾರು - ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ]]> https://publictv.in/classic-bengali-fish-curry-doi-maach-not-too-spicy-but-super-flavorful/ Wed, 03 May 2023 02:30:14 +0000 https://publictv.in/?p=1062383 ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಇಷ್ಟಪಡದವರು ಹೆಚ್ಚಾಗಿ ನಾನ್‌ವೆಜ್ ಖಾದ್ಯವನ್ನು ದೂರವಿಡುತ್ತಾರೆ. ಏಕೆಂದರೆ ನಾನ್‌ವೆಜ್ ಖಾದ್ಯವನ್ನು ಹೆಚ್ಚು ಮಸಾಲೆಯುಕ್ತವಾಗಿಯೇ ಮಾಡಲಾಗುತ್ತದೆ. ಆದರೆ ಬಂಗಾಳದ ಫೇಮಸ್ ಡೋಯಿ ಮಾಚ್ (Doi Maach) ಹಾಗಲ್ಲ. ಕನಿಷ್ಠ ಮಸಾಲೆ ಪದಾರ್ಥಗಳನ್ನು ಬಳಸಿ ಈ ಮೀನು ಸಾರನ್ನು ಮಾಡಲಾಗುತ್ತದೆ. ಡೋಯಿ ಎಂದರೆ ಮೊಸರು ಹಾಗೂ ಮಾಚ್ ಎಂದರೆ ಮೀನು. ಹೆಸರೇ ಹೇಳಿದಂತೆ ಈ ಮೀನು ಸಾರಿಗೆ ಬೇಕಾದ ಮುಖ್ಯ ಪದಾರ್ಥವೇ ಮೊಸರು. ಹಾಗಿದ್ದರೆ ಬೆಂಗಾಲಿ ಸ್ಟೈಲ್‌ನ ಮೀನು ಸಾರು ಮಾಡೋದು ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು: ಮ್ಯಾರಿನೇಷನ್‌ಗೆ: ಉಪ್ಪು - ಕಾಲು ಟೀಸ್ಪೂನ್ ಅರಿಶಿನ - ಕಾಲು ಟೀಸ್ಪೂನ್ ಮೀನು - 4-5 ತುಂಡುಗಳು ಮೊಸರು ಮಿಶ್ರಣಕ್ಕೆ: ಮೊಸರು - 2 ಕಪ್ ಕಡಲೆ ಹಿಟ್ಟು - ಅರ್ಧ ಟೀಸ್ಪೂನ್ ಈರುಳ್ಳಿ ರಸ - ಅರ್ಧ ಕರಿ ತಯಾರಿಸಲು: ಸಾಸಿವೆ ಎಣ್ಣೆ - 2 ಟೀಸ್ಪೂನ್ ಉಪ್ಪು - ರುಚಿಗೆ ತಕ್ಕಷ್ಟು ಗರಂ ಮಸಾಲೆ ಪುಡಿ - ಕಾಲು ಟೀಸ್ಪೂನ್ ತುಪ್ಪ - 1 ಟೀಸ್ಪೂನ್ ಕರಿಬೇವಿನ ಎಲೆ - ಕೆಲವು ಲವಂಗ -2 ಏಲಕ್ಕಿ - 2 ಹಸಿರು ಮೆಣಸಿನಕಾಯಿ - 3 ದಾಲ್ಚಿನಿ - 1 ಇಂಚು ಇದನ್ನೂ ಓದಿ: ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

ಮಾಡುವ ವಿಧಾನ: * ಮೊದಲಿಗೆ ಮೀನಿನ ತುಂಡುಗಳಿಗೆ ಅರಿಶಿನ ಹಾಗೂ ಉಪ್ಪು ಹಚ್ಚಿ ಮ್ಯಾರಿನೇಟ್ ಮಾಡಿ. * ಬಾಣಲೆ ಬಿಸಿ ಮಾಡಿ ಸಾಸಿವೆ ಎಣ್ಣೆ ಸೇರಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಫ್ರೈ ಮಾಡಿಕೊಳ್ಳಿ. * ಈಗ ಬಾಣಲೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ಪೇಪರ್ ಟವಲ್‌ಗೆ ಹರಿಸಿ, ಪಕ್ಕಕ್ಕಿಡಿ. * ಒಂದು ಬಟ್ಟಲು ತೆಗೆದುಕೊಂಡು, ಅದಕ್ಕೆ ಮೊಸರು ಹಾಕಿ ಕಡಲೆ ಹಿಟ್ಟು ಹಾಗೂ ಈರುಳ್ಳಿ ರಸ ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ. * ಈಗ ಮೀನು ಹುರಿದಿಟ್ಟಿದ್ದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಏಲಕ್ಕಿ, ಕರಿಬೇವಿನ ಎಲೆ, ಲವಂಗ ಹಾಗೂ ದಾಲ್ಚಿನಿ ಸೇರಿಸಿ. * ಬಳಿಕ ಮೊಸರನ್ನು ಸೇರಿಸಿ, ಮಿಶ್ರಣ ಮಾಡಿ, 1 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. * ರುಚಿಗೆ ತಕ್ಕಷ್ಟು ಉಪ್ಪು ಹಸಿರು ಮೆಣಸಿನಕಾಯಿ ಹಾಗೂ ಗರಂ ಮಸಾಲೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. * ಮೀನನ್ನು ಹೆಚ್ಚು ಬೆರೆಸಬೇಡಿ, ಇದರಿಂದ ಮೀನಿನ ತುಂಡು ಮುರಿಯುವ ಸಾಧ್ಯತೆಯಿರುತ್ತದೆ. ಉರಿಯನ್ನು ಹೆಚ್ಚು ಮಾಡಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ. * ಇದೀಗ ಬೆಂಗಾಲಿ ಸ್ಟೈಲ್ ಮೊಸರಿನ ಮೀನು ಸಾರು ತಯಾರಾಗಿದ್ದು, ಬಿಸಿಬಿಸಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ

]]>
1062383 0 0 0
<![CDATA[ದಿನಭವಿಷ್ಯ 03-05-2023]]> https://publictv.in/daily-horoscope-03-05-2023/ Wed, 03 May 2023 00:00:43 +0000 https://publictv.in/?p=1062388 ಸಂವತ್ಸರ : ಶೋಭಕೃತ್ ಋತು : ವಸಂತ ಅಯನ : ಉತ್ತರಾಯಣ ಮಾಸ : ವೈಶಾಖ ಪಕ್ಷ : ಶುಕ್ಲ ತಿಥಿ : ತ್ರಯೋದಶೀ ನಕ್ಷತ್ರ : ಹಸ್ತಾ ರಾಹುಕಾಲ : ಮಧ್ಯಾಹ್ನ 12:16 ರಿಂದ 1:51 ವರೆಗೆ ಗುಳಿಕಕಾಲ : ಬೆಳಗ್ಗೆ 10:42 ರಿಂದ 12:16 ವರೆಗೆ ಯಮಗಂಡಕಾಲ : ಬೆಳಗ್ಗೆ 7:32 ರಿಂದ 9:07 ವರೆಗೆ ಮೇಷ: ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆ, ಸಹೋದ್ಯೋಗಿಗಳೊಂದಿಗೆ ವಿವಾದ, ತಿರುಗಾಟದಿಂದ ದೇಹಾಲಸ್ಯ ಹೆಚ್ಚುವುದು. ವೃಷಭ: ಉದ್ಯೋಗದಲ್ಲಿ ಲಾಭ, ದೈಹಿಕ ಬಳಲಿಕೆ, ಆರ್ಥಿಕ ಖರ್ಚುವೆಚ್ಚಗಳು ಹೆಚ್ಚಲಿವೆ. ಮಿಥುನ: ಕುಟುಂಬದಿಂದ ಸಹಕಾರವಿರುತ್ತದೆ, ಉದ್ಯೋಗದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ಕರ್ಕಾಟಕ : ವಾಹನ ಚಲಾಯಿಸುವಾಗ ಎಚ್ಚರದಿಂದಿರಿ, ವ್ಯಾಪಾರದಲ್ಲಿ ಲಾಭ, ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಸಿಂಹ: ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು, ವ್ಯಾಪಾರಿಗಳಿಗೆ ಕೊಂಚ ನಿರಾಶೆ. ಆರೋಗ್ಯ ಚೆನ್ನಾಗಿರಲಿದೆ. ಕನ್ಯಾ: ಕೋಪವನ್ನು ನಿಯಂತ್ರಿಸಬೇಕು, ನಿರುದ್ಯೋಗಿಗಳಿಗೆ ಅವಕಾಶ ಬರಬಹುದು, ಏಕಾಂಗಿತನ ಬಾಧಿಸುವುದು. ತುಲಾ: ವಾಹನವನ್ನು ಚಲಾಯಿಸುವಾಗ ಎಚ್ಚರ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ವ್ಯಯ, ಆರೋಗ್ಯವು ಇದ್ದಕ್ಕಿದ್ದಂತೆ ಕ್ಷೀಣಿಸಬಹುದು. ವೃಶ್ಚಿಕ: ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ, ಆರೋಗ್ಯದಲ್ಲಿ ಕಾಳಜಿ ವಹಿಸಿ, ಕೆಲಸದ ಸ್ಥಳದಲ್ಲಿ ಸಮಸ್ಯೆಗಳಿರಬಹುದು ಧನು: ರೈತರಿಗೆ ಲಾಭವಿರಲಿದೆ, ಆಪ್ತವರ್ಗದವರ ಕಡೆಗಣನೆಯಿಂದ ಬೇಸರವಾಗುವುದು, ಹಿರಿಯರ ಬೆಂಬಲ ಸಿಗಲಿದೆ. ಮಕರ: ಸ್ತ್ರೀಯರು ನೀರಿನ ವಿಚಾರದಲ್ಲಿ ಎಚ್ಚರ, ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಬೇಕು. ಕುಂಭ: ಅಡೆತಡೆಗಳನ್ನು ಧೈರ್ಯದಿಂದ ಎದುರಿಸುತ್ತೀರಿ, ಉದ್ಯೋಗಿಗಳಿಗೆ ಏರಿಳಿತಗಳು ತುಂಬಿರುತ್ತವೆ, ಆಹಾರದಲ್ಲಿನ ಅಡಚಣೆಗಳಿಂದ ಸಮಸ್ಯೆಗಳು. ಮೀನ: ಕೆಲಸಗಳು ಹೆಚ್ಚಿ ದಣಿವಾಗುವುದು, ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಬಹುದು, ಹಣದ ಖರ್ಚು ಹೆಚ್ಚಿರುತ್ತದೆ.]]> 1062388 0 0 0 <![CDATA[ರಾಜ್ಯದ ಹವಾಮಾನ ವರದಿ: 03-05-2023]]> https://publictv.in/karnataka-weather-report-03-05-2023/ Wed, 03 May 2023 00:45:07 +0000 https://publictv.in/?p=1062410 ಳೆದ ಒಂದೂವರೆ ತಿಂಗಳಿಂದ ಸೂರ್ಯನ ಪ್ರತಾಪಕ್ಕೆ ಬೆವತು ಬೆಂಡಾಗಿದ್ದ ಜನರಿಗೆ ವರುಣನ ಸಿಂಚನ ಸಂತಸ ಉಕ್ಕಿಸಿದೆ. ಗಾಳಿ ದಿಕ್ಕಿನ ಬದಲಾವಣೆ ಅಥವಾ ಟ್ರಫ್ ಉಂಟಾದ ಹಿನ್ನೆಲೆ, ದಕ್ಷಿಣ ಒಳನಾಡಿನಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವೆಡೆ ಎಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ: ಬೆಂಗಳೂರು: 28-21 ಮಂಗಳೂರು: 33-26 ಶಿವಮೊಗ್ಗ: 35-22 ಬೆಳಗಾವಿ: 34-19 ಮೈಸೂರು: 29-22 ಮಂಡ್ಯ: 29-22

ಮಡಿಕೇರಿ: 27-17 ರಾಮನಗರ: 29-22 ಹಾಸನ: 31-19 ಚಾಮರಾಜನಗರ: 29-22 ಚಿಕ್ಕಬಳ್ಳಾಪುರ: 28-20

ಕೋಲಾರ: 28-22 ತುಮಕೂರು: 29-21 ಉಡುಪಿ: 34-26 ಕಾರವಾರ: 33-26 ಚಿಕ್ಕಮಗಳೂರು: 31-19 ದಾವಣಗೆರೆ: 36-22

weather

ಹುಬ್ಬಳ್ಳಿ: 36-21 ಚಿತ್ರದುರ್ಗ: 33-22 ಹಾವೇರಿ: 36-22 ಬಳ್ಳಾರಿ: 35-24 ಗದಗ: 36-22 ಕೊಪ್ಪಳ: 36-23

weather

ರಾಯಚೂರು: 34-24 ಯಾದಗಿರಿ: 34-25 ವಿಜಯಪುರ: 36-24 ಬೀದರ್: 32-23 ಕಲಬುರಗಿ: 35-24 ಬಾಗಲಕೋಟೆ: 37-24

]]>
1062410 0 0 0
<![CDATA[ಮೇ 22 ರಿಂದ ಜೂನ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ]]> https://publictv.in/second-puc-supplementary-exam-from-may-22-to-june-2/ Tue, 02 May 2023 17:51:49 +0000 https://publictv.in/?p=1062541 ಬೆಂಗಳೂರು: ದ್ವಿತೀಯ ಪಿಯುಸಿ (2nd PUC) ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವೇಳಾಪಟ್ಟಿ ಪ್ರಕಟ ಮಾಡಿದ್ದು, ಮೇ 22 ರಿಂದ ಜೂನ್ 2ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿ: ಮೇ 22- ಕನ್ನಡ, ಅರೇಬಿಕ್ ಮೇ 23- ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ ಮೇ 24- ಇಂಗ್ಲೀಷ್ ಮೇ 25- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ,ಗಣಕ ವಿಜ್ಞಾನ [caption id="attachment_557444" align="alignnone" width="1500"] Preparations for rescheduled exam of PUC English paper on June 18 seen at a centre in Chikkamagalur on Wednesday. -KPN ### Chikkamagalur Preparations for rescheduled exam[/caption] ಮೇ 26- ಇತಿಹಾಸ, ಸಂಖ್ಯಾಶಾಸ್ತ್ರ ಮೇ 27- ಹಿಂದಿ ಮೇ 29- ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ ಮೇ 30- ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ ಮೇ 31- ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ ಜೂನ್ 1- ತರ್ಕಶಾಸ್ತ್ರ, ಹಿಂದುಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ ಜೂನ್ 2- ಅರ್ಥಶಾಸ್ತ್ರ, ಜೀವಶಾಸ್ತ್ರ ]]> 1062541 0 0 0 <![CDATA[ಪಾಂಡ್ಯ ಹೋರಾಟ ವ್ಯರ್ಥ - ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ರನ್‌ ರೋಚಕ ಜಯ]]> https://publictv.in/indian-premier-league-capitals-won-by-5-runs/ Tue, 02 May 2023 17:54:11 +0000 https://publictv.in/?p=1062544 ಅಹಮದಾಬಾದ್‌: ಕಳಪೆ ಬ್ಯಾಟಿಂಗ್‌ ಮಾಡಿದರೂ, ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ.

9 ಪಂದ್ಯಗಳ ಪೈಕಿ 6ರಲ್ಲಿ ಜಯ ಸಾಧಿಸಿರುವ ಟೈಟಾನ್ಸ್‌ ಪಡೆ ಈಗಾಗಲೇ ಪ್ಲೇ ಆಫ್‌ ತಲುಪುವ ಹಂತದಲ್ಲಿದೆ. ಆದರೆ 9ರಲ್ಲಿ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಉಳಿದೆಲ್ಲ ಪಂದ್ಯಗಳೂ ನಿರ್ಣಾಯಕವಾಗಿವೆ. ಒಂದು ವೇಳೆ ಇಂದಿನ ಪಂದ್ಯ ಸೋತಿದ್ದರೆ, ಬಹುತೇಕ ಪ್ಲೇ ಆಫ್‌ನಿಂದ ಹೊರಬೀಳುವುದು ಖಚಿತವಾಗುತ್ತಿತ್ತು. ಆದರೆ ಗೆಲುವಿನ ಮೂಲಕ ಪ್ಲೇ ಆಫ್‌ ಕನಸನ್ನ ಜೀವಂತವಾಗಿಸಿಕೊಂಡಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 130 ರನ್‌ ಗಳಿಸಿತು. ಗೆಲುವಿಗೆ 131 ರನ್‌ ಗುರಿ ಪಡೆದ ಗುಜರಾತ್‌ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 125 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಕೊನೆಯ ಎರಡು ಓವರ್‌ಗಳಲ್ಲಿ ಗುಜರಾತ್‌ ಟೈಟಾನ್ಸ್‌ ಗೆಲುವಿಗೆ 33 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಮೂರು ಎಸೆತಗಳಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಕೇವಲ 3 ರನ್‌ ಗಳಿಸಿದರು. ಇನ್ನೂ 9 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ತಂಡಕ್ಕೆ ಗಲುವು ಕಠಿಣ ವೆನಿಸಿತ್ತು. ಬಳಿಕ ಕ್ರೀಸ್‌ ಉಳಿಸಿಕೊಂಡ ರಾಹುಲ್‌ ತೆವಾಟಿಯಾ ಭರ್ಜರಿ ಹ್ಯಾಟ್ರಿಕ್‌ ಸಿಕ್ಸ್‌ ಚಚ್ಚಿದರು. ಇದರಿಂದ ತಂಡಕ್ಕೆ ಗೆಲುವು ಸುಲಭವೆನಿಸಿತ್ತು. ಆದ್ರೆ 6 ಎಸೆತಗಳಲ್ಲಿ 12 ರನ್‌ ಅಗತ್ಯವಿದ್ದಾಗ ಮೊದಲ ಎರಡು ಎಸೆತಗಳಲ್ಲಿ ಪಾಂಡ್ಯ ಮತ್ತೆ ಕೇವಲ 3ರನ್‌ ಗಳಿಸಿದರು. ಬಳಿಕ ಕ್ರಿಸ್‌ಗೆ ಬಂದ ತೆವಾಟಿಯಾ 4ನೇ ಎಸೆತ ಎದುರಿಸುವಲ್ಲಿ ವಿಫಲರಾಗಿ, ಮರು ಎಸೆತದಲ್ಲೇ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು.

ನಂತರ ಕ್ರೀಸ್‌ಗೆ ಬಂದ ರಶೀದ್‌ ಕಾನ್‌ 5ನೇ ಎಸೆತದಲ್ಲಿ 2 ರನ್‌ ಕದ್ದರು. ಕೊನೆಯ ಎಸೆತಕ್ಕೆ 7 ರನ್‌ಗಳ ಅಗತ್ಯವಿತ್ತು. ಫುಲ್‌ಟಾಸ್‌ ಬಂದರೂ ರಶೀದ್‌ ಸಿಕ್ಸ್‌ಗೆ ಅಟ್ಟುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಟೈಟಾನ್ಸ್‌ ಸೋಲನ್ನು ಎದುರಿಸಿತು. ಚೇಸಿಂಗ್‌ ಆರಂಭಿಸಿದ ಬಲಿಷ್ಠ ಟೈಟಾನ್ಸ್‌ ಪಡೆಯ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗುಜರಾತ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. ಮೊದಲ 10 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಕೇವಲ 54 ರನ್‌ಗಳನ್ನಷ್ಟೇ ಗಳಿಸಿತ್ತು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ 130 ರನ್‌ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಮನ್ ಹಕೀಮ್ ಖಾನ್ 44 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದರೆ, ಅಕ್ಷರ್‌ ಪಟೇಲ್‌ 30 ಎಸೆತಗಳಲ್ಲಿ 1 ಸಿಕ್ಸರ್‌, 2 ಬೌಂಡರಿಯೊಂದಿಗೆ 27 ರನ್‌ ಗಳಿಸಿದರು. ಇನ್ನೂ ರಿಪಾಲ್‌ ಪಟೇಲ್‌ 13 ಎಸೆತಗಳಲ್ಲಿ 23 ರನ್‌ ಗಳಿಸಿದರು.

ಗುಜರಾತ್‌ ಟೈಟಾನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಹಾರ್ದಿಕ್‌ ಪಾಂಡ್ಯ 53 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 59 ರನ್‌ ಗಳಿಸಿದರೆ, ಅಭಿನವ್‌ ಮನೋಹರ್‌ 26 ರನ್‌, ರಾಹುಲ್‌ ತೆವಾಟಿಯಾ 7 ಎಸೆತಗಳಲ್ಲಿ ಸ್ಫೋಟಕ 20 ರನ್‌ ಗಳಿಸಿದರು.

ಟೈಟಾನ್ಸ್‌ ಪರ ಮೊಹಮ್ಮದ್‌ ಶಮಿ 4 ವಿಕೆಟ್‌ ಪಡೆದರೆ, ಮೋಹಿತ್‌ ಶರ್ಮಾ 2 ವಿಕೆಟ್‌ ಹಾಗೂ ರಶೀದ್‌ ಖಾನ್‌ 1 ವಿಕೆಟ್‌ ಕಿತ್ತರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಖಲೀಲ್‌ ಅಹ್ಮದ್‌ ಹಾಗೂ ಇಶಾಂತ್‌ ಶರ್ಮಾ ತಲಾ 2 ವಿಕೆಟ್‌ ಪಡೆದರೆ, ಅನ್ರಿಚ್ ನಾರ್ಟ್ಜೆ ಹಾಗೂ ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಗೆಲುವಿಗೆ ಕಾರಣರಾದರು.

]]>
1062544 0 0 0
<![CDATA[ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? - ಇನ್‌ಸೈಡ್‌ ಸ್ಟೋರಿ]]> https://publictv.in/bajrang-dal-pfi-to-be-banned-if-congress-in-its-manifesto-for-karnakata-elections-2023-inside-story/ Wed, 03 May 2023 02:25:38 +0000 https://publictv.in/?p=1062550 ಬೆಂಗಳೂರು: ಚುನಾವಣೆಗೆ ಕೇವಲ ಒಂದು ವಾರ ಬಾಕಿ ಇರುವಾಗ ರಾಜ್ಯ ಕಾಂಗ್ರೆಸ್ ಬಜರಂಗದಳವನ್ನು (Bajrang Dal) ನಿಷೇಧಿಸುವ ನಿರ್ಧಾರವನ್ನು ಪ್ರಣಾಳಿಕೆಯಲ್ಲಿ (Manifesto) ಹಾಕಿ ವಿವಾದಕ್ಕೆ ಸಿಲುಕಿದೆ. ಆದರೆ ಕಾಂಗ್ರೆಸ್ (Congress) ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಪರಮೇಶ್ವರ್ (Parameshwar) ನೇತೃತ್ವದಲ್ಲಿ ಈ ವಿಚಾರ ತೀರ್ಮಾನ ಆಗಿರಲಿಲ್ಲ ಎಂಬ ವಿಚಾರ ಈಗ ತಿಳಿದು ಬಂದಿದೆ.

"ಮತೀಯ ಚಟುವಟಿಕೆ ನಡೆಸುವ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು"  ಎಂಬ ಘೋಷಣೆಗೆ ಕಾಂಗ್ರೆಸ್‌ ಮುಂದಾಗಿತ್ತು. ಮತೀಯ ಸಂಘಟನೆ ವಿಚಾರದಲ್ಲಿ ಸ್ಪಷ್ಟತೆ ಇರಬೇಕು. ಅದು ಯಾವ ಧರ್ಮವಾದರೂ ಆಗಲಿ ಅದನ್ನು ಹೇಳೋಣ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಿದ್ದರಾಮಯ್ಯನವರ (Siddaramaiah) ಈ ನಿಲುವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ (Surjewala) ಸಮರ್ಥಿಸುವ ಮೂಲಕ ಹೆಸರು ಪ್ರಸ್ತಾಪಕ್ಕೆ ಮುಂದಾದರು ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಇವರ ಮಾತನ್ನು ಒಪ್ಪಿದ ಪ್ರಣಾಳಿಕೆ ಸಮಿತಿ ಪಿಎಫ್‍ಐ, ಭಜರಂಗದಳದ ಹೆಸರನ್ನು ಪ್ರಸ್ತಾಪಿಸಿದೆ.  ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಬಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

ಸೈದ್ದಾಂತಿಕ ಸ್ಪಷ್ಟತೆ ತೋರಿಸಲು ಹೋಗಿ ವಿವಾದ ಮೈ ಮೇಲೆ ಎಳೆದುಕೊಂಡ ಕಾಂಗ್ರೆಸ್ ಈಗ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸೈದ್ದಾಂತಿಕ ಸ್ಪಷ್ಟತೆ ಇರಬೇಕು ಎಂಬ ಸಿದ್ದರಾಮಯ್ಯ ನಡೆಯೇ ಬಜರಂಗದಳ ವಿವಾದಕ್ಕೆ ಮೂಲವಾಯ್ತಾ? ಚಟುವಟಿಕೆ ಆಧಾರವಾಗಿ ಮತೀಯ ಸಂಘಟನೆಗಳ ನಿಷೇಧ ಬಗ್ಗೆ ಪ್ರಸ್ತಾಪಿಸಿದ್ದ ಪರಮೇಶ್ವರ್ ಸಮಿತಿಗೆ ಸಿದ್ದರಾಮಯ್ಯ ಸುರ್ಜೆವಾಲಾ ನಿಲುವೇ ಮುಳುವಾಯ್ತಾ ಎಂಬ ಪ್ರಶ್ನೆ ಎದ್ದಿದೆ.

ಪ್ರಣಾಳಿಕೆಯಲ್ಲಿ ಏನಿದೆ? ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗ ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

]]>
1062550 0 0 0
<![CDATA[ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್]]> https://publictv.in/voting-for-congress-is-like-voting-for-pakistan-says-basangouda-patil-yatnal/ Wed, 03 May 2023 03:04:11 +0000 https://publictv.in/?p=1062557 ಗದಗ: ಕಾಂಗ್ರೆಸ್‌ಗೆ (Congress) ಮತ ನೀಡಿದರೆ ಪಾಕಿಸ್ತಾನಕ್ಕೆ (Pakistan) ಮತ ಹಾಕಿದಂತೆ. ಕಾಂಗ್ರೆಸ್‌ಗೆ ಮತಹಾಕಿದರೆ ಮುಸ್ಲಿಮರಿಗೆ (Muslim) ಮತ ಹಾಕಿದಂತೆ. ಕಾಂಗ್ರೆಸ್ ಹಿಂದೂ (Hindu) ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಗುಡುಗಿದ್ದಾರೆ.

ಗದಗದಲ್ಲಿ (Gadag) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಯತ್ನಾಳ್, ಇದು ಹಿಂದೂ ವಿರೋಧಿ ಕಾಂಗ್ರೆಸ್ ಇದೆ. ಪಿಎಫ್‌ಐ (PFI) ಸಂಘಟನೆಯ ಮೂಲ ಗುರಿ 2047ಕ್ಕೆ ಭಾರತವನ್ನು ಇಸ್ಲಾಂ ಧರ್ಮವನ್ನಾಗಿ ಮಾಡುವುದು. ಪಿಎಫ್‌ಐ ಹಾಗೂ ಕಾಂಗ್ರೆಸ್ ಆಂತರಿಕ ಒಪ್ಪಂದ ಇದೆ. ಆ ದೃಷ್ಟಿಯಿಂದ ಕಾಂಗ್ರೆಸ್‌ನವರು ಬಜರಂಗದಳ (Bajrang Dal) ನಿಷೇಧ ಮಾಡುತ್ತೇವೆ ಎಂದಿದ್ದಾರೆ ಎಂದರು.

 

ಬಜರಂಗದಳ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಹಿಂದೂ ಧರ್ಮ, ಸಂಸ್ಕೃತಿ ಭಾರತದ ನಾಗರಿಕತೆ ಉಳಿಸುವ ಕೆಲಸ ಮಾಡುತ್ತಿದೆ. ಬಜರಂಗದಳ ನಿಷೇಧ ಮಾಡಲು ಜಗತ್ತಿನ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಡಿಕೆಶಿಗೆ ಧಮ್ ಇದ್ರೆ ಮೀಸಲಾತಿ ತೆಗೆಯುವುದು, ಬಜರಂಗದಳ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದಿಲ್ಲ. ಕೇವಲ ಬಜರಂಗದಳ ಅಷ್ಟೇ ಬಾಯ್ ಕಾಟ್ ಅಲ್ಲಾ, ಎಲ್ಲಾ ಹಿಂದೂಗಳು ಬಾಯ್ ಕಾಟ್ ಮಾಡುತ್ತೇವೆ. ಮುಸ್ಲಿಮರ ಮತ ಓಲೈಕೆಗಾಗಿ ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಕೇವಲ ಮುಸ್ಲಿಂ ಮತಗಳು ಬೇಕಿದೆ, ಹಿಂದೂಗಳ ಮತ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೇ 22 ರಿಂದ ಜೂನ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

]]>
1062557 0 0 0
<![CDATA[ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ - ಒಂದೇ ದಿನ ಮೆಗಾ ರೋಡ್‌ ಶೋ]]> https://publictv.in/karnataka-election-2023-pm-modi-takes-out-mega-roadshow-in-bengaluru/ Wed, 03 May 2023 03:46:37 +0000 https://publictv.in/?p=1062564 ಬೆಂಗಳೂರು: ಪ್ರಧಾನಿ ಮೋದಿ (PM Narendra Modi) ರೋಡ್ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕದಲ್ಲೂ (Karnataka) ಗುಜರಾತ್ ಮಾಡೆಲ್ ಸ್ಟ್ರಾಟರ್ಜಿ ಶುರುವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗುಜರಾತ್‍ನ ಅಹಮದಾಬಾದ್ (Gujarat Ahmedabad) ತಂತ್ರಕ್ಕೆ ಬಿಜೆಪಿ (BJP) ಮೊರೆ ಹೋಗಿದೆ. ಅಹಮದಾಬಾದ್‍ನಲ್ಲಿ ಆಯೋಜಿಸಿದ್ದ ಬಿಗ್ ರೋಡ್ ಶೋ ಈಗ ಬೆಂಗಳೂರಿನಲ್ಲಿ (Bengaluru) ಮಾಡಲಾಗುತ್ತಿದೆ.

 

ಕಳೆದ ಡಿಸೆಂಬರ್ 1ರಂದು ಅಹಮದಾಬಾದ್‌ನ 13 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೋದಿ ಒಟ್ಟು 50 ಕಿ.ಮೀ ಮೆಗಾ ರೋಡ್‌ ಶೋ ನಡೆಸಿದ್ದರು. ಅಹಮದಾಬಾದ್ ರೋಡ್ ಶೋದಿಂದ ಬಿಜೆಪಿಗೆ ಭರ್ಜರಿ ಲಾಭ ಸಿಕ್ಕಿದ ಬೆನ್ನಲ್ಲೇ ಬೆಂಗಳೂರಲ್ಲೂ ಈಗ ಅದೇ ಮಾದರಿಯ ಮೆಗಾ ರೋಡ್ ಶೋ ನಡೆಯಲಿದೆ. ಈ ಮೂಲಕ ಈ ಸಲ 15 ಹಾಲಿ ಸೀಟ್‍ಗಳಿಂದ 20ಕ್ಕೆ ಏರಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

ಬೆಂಗಳೂರಿನಲ್ಲಿ ಅಹಮದಾಬಾದ್ ತಂತ್ರ ಮೇ. 6 ರಂದು ಒಂದೇ ದಿನ ಎರಡು ಹಂತದಲ್ಲಿ ರೋಡ್ ಶೋ ನಡೆಯಲಿದೆ. ಬೆಳಗ್ಗೆ 8 ಕಿ.ಮೀ, ಮಧ್ಯಾಹ್ನ 29.4 ಕಿ.ಮೀ ರೋಡ್ ಶೋಗೆ ರೂಟ್‍ಮ್ಯಾಪ್ ಸಿದ್ಧಪಡಿಸಲಾಗಿದೆ. ಇಲ್ಲೂ ಸುಮಾರು 13 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ಮೆಗಾ ರೋಡ್ ಶೋ ನಡೆಯಲಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್

ಗುಜರಾತ್ ರೀತಿ ಚುನಾವಣೆಗೆ ಮೂರ್ನಾಲ್ಕು ದಿನಗಳಿರುವಾಗ ಮೋದಿ ಈ ತಂತ್ರ ಪ್ರಯೋಗ ಮಾಡಿದ್ದರು. ರಾಜಧಾನಿಯಲ್ಲಿ ಮೋದಿಯವರ ವರ್ಚಸ್ಸೇ ಬಿಜೆಪಿಯ ಗೆಲುವಿನ ಸೂತ್ರವಾಗಿದ್ದು ನಮೋ ಮೂಲಕವೇ ಮತ ಬೇಟೆ ನಡೆಸಲು ಬಿಜೆಪಿ ಮುಂದಾಗಿದೆ.

]]>
1062564 0 0 0
<![CDATA[ದಿ ಕೇರಳ ಸ್ಟೋರಿ ಚಿತ್ರಕ್ಕೆ ಸೆನ್ಸಾರ್ ಶಾಕ್ : 10 ದೃಶ್ಯಗಳಿಗೆ ಕತ್ತರಿ]]> https://publictv.in/censor-shock-for-the-kerala-story-10-scenes-cut/ Wed, 03 May 2023 04:01:22 +0000 https://publictv.in/?p=1062567 ಸಾಕಷ್ಟು ವಿವಾದಕ್ಕೆ (Controversy) ಕಾರಣವಾಗಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಇದೇ ಮೇ 5ರಂದು ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕುರಿತಂತೆ ಹಲವು ಆರೋಪಗಳು ಕೇಳಿ ಬಂದಿದ್ದವು. ಒಂದು ಧರ್ಮಕ್ಕೆ ಅಪಮಾನ ಮಾಡುವಂತಹ ಹಾಗೂ ಆಕ್ಷೇಪಾರ್ಹ ಹಲವು ವಿಚಾರಗಳು ಈ ಸಿನಿಮಾದಲ್ಲಿ ಇರುವುದರಿಂದ ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಚಿತ್ರಕ್ಕೆ ಸೆನ್ಸಾರ್ (ಸಿಬಿಎಫ್ ಸಿ) (Censor) ಮಂಡಳಿಯು ಶಾಕ್ ನೀಡಿದೆ.

ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ (Communist) ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಇದನ್ನೂ ಓದಿ:Met Gala ಕಾರ್ಯಕ್ರಮದಲ್ಲಿ 204 ಕೋಟಿ ಮೌಲ್ಯದ ಡೈಮಂಡ್ ನೆಕ್ಲೇಸ್ ಧರಿಸಿ ಬಂದ ಪ್ರಿಯಾಂಕಾ

ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ (Muslim) ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.

]]>
1062567 0 0 0
<![CDATA[ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು]]> https://publictv.in/pretended-to-be-police-and-stole-money-from-foreigner-at-bengaluru/ Wed, 03 May 2023 03:56:33 +0000 https://publictv.in/?p=1062568 ಬೆಂಗಳೂರು: ತಾವು ಪೊಲೀಸರೆಂದು (Fake Police) ಹೇಳಿ, ಯಾಮಾರಿಸಿ ವಿದೇಶಿ ಪ್ರಜೆಯ (Foreigner) 4 ಲಕ್ಷ ರೂ. ಮೌಲ್ಯದ ಹಣವನ್ನು (Money) ದುಷ್ಕರ್ಮಿಗಳು ದೋಚಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಯೆಮನ್ ದೇಶದ ಪ್ರಜೆ ಗೇದ್ ಸೈಫ್ ಮೋಕ್ಬೆಲ್ ಅವರ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಮೋಕ್ಬೆಲ್ ಕಮ್ಮನಹಳ್ಳಿಯ ಎಂಪೈರ್ ಹೋಟೆಲಿಗೆ ಹೋಗುತ್ತಿದ್ದ ಸಂದರ್ಭ ಕಾರನ್ನು ತಡೆದ ಅಪರಿಚಿತರು ನಾವು ಪೊಲೀಸರು, ಕಾರನ್ನು ಪರಿಶೀಲಿಸಬೇಕೆಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ

ಆರೋಪಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದು, ವಿದೇಶಿ ವ್ಯಕ್ತಿಯ ಕಾರನ್ನು ಪರಿಶೀಲಿಸಿದ್ದಾರೆ. ಬಳಿಕ ಆತನ ಪಾಕೇಟ್‌ನಲ್ಲಿದ್ದ 5,000 ಅಮೆರಿಕನ್ ಡಾಲರ್ (ಸುಮಾರು 4 ಲಕ್ಷ ರೂ.) ಅನ್ನು ದೋಚಿ ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

]]>
1062568 0 0 0
<![CDATA[ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ - 20 ಕೋಟಿ ವಶ]]> https://publictv.in/cbi-seizes-rs-20-crore-in-cash-from-premises-of-former-cmd-of-wapcos-limited/ Wed, 03 May 2023 04:02:15 +0000 https://publictv.in/?p=1062569 ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾಜಿ ನೌಕರನ ಮನೆ ಮೇಲೆ ಸಿಬಿಐ (CBI) ದಾಳಿ ನಡೆಸಿ 20 ಕೋಟಿ ರೂ. ವಶ ಪಡಿಸಿಕೊಂಡಿದೆ.

ಸಾರ್ವಜನಿಕ ವಲಯದ ನೀರು ಮತ್ತು ವಿದ್ಯುತ್ ಸಲಹಾ ಸೇವೆ (WAPCOS) ಲಿಮಿಟೆಡ್‍ನ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಗುಪ್ತಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಅವರಿಗೆ ಸೇರಿದ ವಿವಿಧ ರಾಜ್ಯಗಳ 19 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 20 ಕೋಟಿ ರೂ. ಗೂ ಅಧಿಕ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಗುಪ್ತಾ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇದಾದ ಬಳಿಕ ದಾಳಿ ನಡೆಸಿದ ಅಧಿಕಾರಿಗಳು ನಗದು ಸೇರಿದಂತೆ ಹಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಜಿ ನೌಕರ ಕೇಂದ್ರ ಜಲಶಕ್ತಿ ಸಚಿವಾಲಯದ (Ministry of Jal Shakti) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ.

]]>
1062569 0 0 0
<![CDATA[ಡಿವೋರ್ಸ್ ಸೆಲೆಬ್ರೇಟ್ ಮಾಡಿದ ನಟಿ ಶಾಲಿನಿ ಮದುವೆ ಆಗಿದ್ದು ಯಾರನ್ನು?]]> https://publictv.in/actress-shalini-who-celebrated-divorce-married-whom/ Wed, 03 May 2023 04:16:57 +0000 https://publictv.in/?p=1062581 ಮಿಳಿನ ಖ್ಯಾತ ಕಿರುತೆರೆ ನಟಿ (Actress) ಶಾಲಿನಿ (Shalini) ಡಿವೋರ್ಸ್ ಫೋಟೋಶೂಟ್ ಕಾರಣದಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಡಿವೋರ್ಸ್ (Divorce) ಆದ ಸಂಭ್ರಮವನ್ನು ಅವರು ನಾನಾ ರೀತಿಯಲ್ಲಿ ಪ್ರಕಟಿಸಿದ್ದರು. ಕೆಲವರು ಈ ಫೋಟೋಶೂಟ್ (Photoshoot)ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರೆ, ಇನ್ನೂ ಹಲವರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗಾದರೆ, ಈ ಶಾಲಿನಿ ಯಾರು? ಯಾರನ್ನು ಮದುವೆಯಾಗಿದ್ದರು ಎನ್ನುವ ಕುರಿತು ಸಾಕಷ್ಟು ಜನ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ.

ಶಾಲಿನಿ ಹಲವು ವರ್ಷಗಳಿಂದ ತಮಿಳಿನ ಕಿರುತೆರೆಯಲ್ಲಿ ನಟಿಯಾಗಿ ಸಕ್ರೀಯರಾಗಿದ್ದಾರೆ. ಸಾಕಷ್ಟ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರೂ, ಫೇಮಸ್ ಆಗಿದ್ದು ‘ಮುಲ್ಲಮ್ ಮರುಲಮ್’ ಧಾರಾವಾಹಿ ಮೂಲಕ. ಮೂರು ವರ್ಷಗಳ ಹಿಂದೆಯಷ್ಟೇ ರಿಯಾಜ್ (Riyaz) ಎನ್ನುವವರ ಜೊತೆ ಮದುವೆಯಾಗಿದ್ದರು. ತಮಗೆ ಗಂಡನಿಂದ ದೈಹಿಕ ಕಿರುಕುಳ ಆಗುತ್ತಿದೆ ಎಂದು ಆರೋಪ ಮಾಡಿದ್ದರು. ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಹಲವು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದರು.

ಶಾಲಿನಿ ಮತ್ತು ರಿಯಾಜ್ ದಂಪತಿಗೆ ಒಂದು ಮಗು ಕೂಡ ಇದೆ. 2020 ಜೂನ್ ಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಕೇವಲ ಎರಡೂವರೆ ವರ್ಷದಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇದೀಗ ಶಾಲಿನಿ ರಿಯಾಜ್ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದು ,ಆ ಸಂಭ್ರಮವನ್ನು ಫೋಟೋಶೂಟ್ ಮೂಲಕ ವ್ಯಕ್ತ ಪಡಿಸಿದ್ದರು. ಆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.

ಫೋಟೋಗಾಗಿ ನಾನಾ ಬಗೆಯಲ್ಲಿ ಪೋಸ್ ಕೊಟ್ಟಿರುವ ಶಾಲಿನಿ, ರೆಡ್ ಸ್ಲಿಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಎಂಬ ಬೋರ್ಡ್ ಕೂಡ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಜೀವಕ್ಕೆ ಅಂತ್ಯ ಹಾಡುವ ಬದಲು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದು ಒಳ್ಳೆದು ಎಂಬ ಸಲಹೆಯನ್ನೂ ನೀಡಿದ್ದಾರೆ.

ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕು. ಸಹ್ಯವಲ್ಲದ ದಾಂಪತ್ಯ ಮುರಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಜೀವನದಲ್ಲಿ ಎಲ್ಲರೂ ಖುಷಿಯಾಗಿ ಇರಬೇಕು ಎಂದು ಹೇಳಿಕೊಂಡಿದ್ದಾರೆ.  ಅಲ್ಲದೇ, ಮಗಳನ್ನು ಹೇಗೆ ಬೆಳೆಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಾನು ಧೈರ್ಯದಲ್ಲಿದ್ದೇನೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ನಟಿಯೊಬ್ಬರು ಈ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ವಿಚ್ಚೇದನವನ್ನು ಸೆಲೆಬ್ರೇಟ್ ಮಾಡಿರುವುದಕ್ಕೆ ನಾನಾ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ ಅಭಿಮಾನಿಗಳು. ಒಂದಷ್ಟು ಜನ ಶಾಲಿನಿ ಪರವಾಗಿ ಮಾತನಾಡಿದ್ದರೆ, ಮತ್ತಷ್ಟು ಜನ ಶಾಲಿನ ಈ ನಡೆಯನ್ನು ಪ್ರಶ್ನಿಸಿದ್ದಾರೆ.

]]>
1062581 0 0 0
<![CDATA[ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು]]> https://publictv.in/sriramulu-reacts-about-regarding-sudeep-not-coming-to-campaign-for-ballari/ Wed, 03 May 2023 05:12:00 +0000 https://publictv.in/?p=1062585 ಬಳ್ಳಾರಿ: ನಟ ಸುದೀಪ್ (Sudeep) ವಿಚಾರದಲ್ಲಿ ನನಗೆ ಯಾವುದೇ ರೀತಿಯ ನೋವು, ಬೇಸರ ಇಲ್ಲ ಎಂದು ಸಚಿವ ಶ್ರೀರಾಮುಲು (Sriramulu) ತಿಳಿಸಿದರು.

ಬಳ್ಳಾರಿಯಲ್ಲಿ ರಾಮುಲು ಪರ ಸುದೀಪ್‌ ಪ್ರಚಾರಕ್ಕೆ ಬಾರದ ವಿಚಾರಕ್ಕೆ ಸಂಬಂಧಿಸಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರು ಬೇಕಾದರೂ ಬರಬಹುದು. ಸುದೀಪ್ ಒಬ್ಬ ಮೇರು ನಟನಾಗಿದ್ದು, ಎಲ್ಲರಿಗೂ ಗೌರವ ಇದೆ. ನಾನು ಸಹ ಅವರ ಅಭಿಮಾನಿ. ಅವರ ವಿಚಾರದಲ್ಲಿ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ನಾನು ಕೆಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದವನು, ರಾಮುಲು ಅಂದರೆ ಏಕಾಏಕಿ ಬಂದವನಲ್ಲ. 30 ವರ್ಷದಿಂದ ಕಷ್ಟಪಟ್ಟು ಬೆವರು ಸುರಿಸಿ ಬಂದವನು. ನನಗೆ ಯಾವುದೇ ರೀತಿ ನೋವಿಲ್ಲ, ಸುದೀಪ್ ಅವರು ಸಹ ಪಾರ್ಟಿ ಸಲುವಾಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಚುನಾವಣೆ ಅಂದರೆ ಬಿಸಿ ಇರುತ್ತದೆ. 5 ಬಾರಿ ಶಾಸಕ ಹಾಗೂ ಒಂದು ಬಾರಿ ಸಂಸದನಾಗಿದ್ದೇನೆ. ಜನ ಯಾವತ್ತು ನನ್ನನ್ನು ಬಿಟ್ಟು ಕೊಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ರಾಜಕಾರಣವನ್ನು ಅಷ್ಟು ಸುಲಭವಾಗಿ ತಗೆದುಕೊಳ್ಳುವುದಕ್ಕೆ ಆಗಲ್ಲ. ಪ್ರತಿಯೊಬ್ಬರು ಗೆಲುವಿಗಾಗಿಯೇ ಹೋರಾಡುತ್ತಾರೆ. ನನಗೆ ರಾಜಕೀಯವಾಗಿ ಜನ್ಮ ನೀಡಿದ ಪುನರ್ಜನ್ಮ ನೀಡಿದ ಜನರಿಗಾಗಿ ಬಂದಿದ್ದೇನೆ. ಜನ ನನ್ನನ್ನ ಕೈ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಕೂಡ ನಾನು ಸ್ಟಾರ್ ಕ್ಯಾಂಪೆನರ್. ಅವತ್ತಿನ ಪರಿಸ್ಥಿತಿಯಲ್ಲಿ ನಾನು ಬಾದಮಿಗೆ ಹೋದೆ. ಅಲ್ಲಿ 7 ರಲ್ಲಿ 5 ಕ್ಷೇತ್ರ ಗೆದ್ದೆವು. ಮೊಳಕಾಲ್ಮೂರಿಗೆ ಕಳುಹಿಸಿದರು, ಅಲ್ಲಿಯೂ 6 ರಲ್ಲಿ 5 ಗೆದ್ದೆವು. ಬಿಜೆಪಿ ಹೈಕಮಾಂಡ್ 2018ರಲ್ಲಿ ನನ್ನನ್ನ ಹಾಗೂ ಯಡಿಯೂರಪ್ಪ ಅವರನ್ನ ದೆಹಲಿಯಿಂದ ವಾಪಸ್ ರಾಜ್ಯಕ್ಕೆ ಕಳುಹಿಸಿದೆ. ಹೆಚ್ಚು ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಪಾರ್ಟಿಯಲ್ಲಿ ಯಾವುದೇ ನೋವು ಅನ್ನೋ ಮಾತು ಬರಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ

ನಾನು ಕೆಳ ಸಮುದಾಯದ ವಾಲ್ಮೀಕಿ ಸಮಯದಾಯದಿಂದ ಬಂದವನು. ನನಗೆ ಎರಡೆರಡು ಕಡೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತ್ತು. ಪಾರ್ಟಿ ಎಲ್ಲವನ್ನೂ ಕೊಟ್ಟಿದೆ. ಪಾರ್ಟಿ ವಿಚಾರದಲ್ಲಿ ನನಗೆ ಯಾವುದೇ ನೋವು ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

]]>
1062585 0 0 0
<![CDATA[ರಜನಿಕಾಂತ್ ಸೂಪರ್ ಸ್ಟಾರ್ ಅಲ್ಲ: ಕಿಡಿಕಾರಿದ ನಟ ಪೋಸಾನಿ ಕೃಷ್ಣ]]> https://publictv.in/rajinikanth-is-not-a-superstar-kidikari-actor-posani-krishna/ Wed, 03 May 2023 04:36:45 +0000 https://publictv.in/?p=1062586 ಳೆದ ವಾರದಿಂದ ತಮಿಳಿನ ಹೆಸರಾಂತ ನಟ ರಜನಿಕಾಂತ್ (Rajinikanth) ಮೇಲೆ ತೆಲುಗು ಚಿತ್ರರಂಗದ ಹಲವು ನಟ ನಟಿಯರು ಮುಗಿ ಬಿದ್ದಿದ್ದಾರೆ. ಮೊನ್ನೆಯಷ್ಟೇ ಖ್ಯಾತ ನಟಿ ರೋಜಾ (Roja) ರಜನಿಕಾಂತ್ ವಿರುದ್ಧ ಗುಡುಗಿದ್ದರು. ಇದೀಗ ಹಿರಿಯ ನಟ ಪೋಸಾನಿ ಕೃಷ್ಣ ಮುರುಳಿ (Posani Krishna Murali) ಕೂಡ ರಜನಿ ವಿರುದ್ಧ ಮಾತನಾಡಿದ್ದಾರೆ. ನಮಗೆ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಅಲ್ಲ, ಚಿರಂಜೀವಿ ನಮಗೆ ಸೂಪರ್ ಸ್ಟಾರ್ ಎಂದಿದ್ದಾರೆ.

ರಜನಿ ವಿರುದ್ಧ ನಟ ನಟಿಯರು ತಿರುಗಿ ಬಿದ್ದಿರುವುದಕ್ಕೆ ಕಾರಣ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ರಜನಿ ಬಾಯ್ತುಂಬಾ ಹೊಗಳಿದ್ದರು. ಮಾಜಿ ಸಿಎಂ ಎನ್.ಟಿ.ಆರ್ ಅವರ ನೂರನೇ ಜನ್ಮದಿನದ ಪ್ರಯುಕ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಜನಿಕಾಂತ್ ಹೊಗಳಿದ್ದರು. ನಾಯ್ಡು ಪರವಾಗಿ ಮಾತನಾಡಿದ್ದರು. ಅದು ರಾಜಕೀಯ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದನ್ನೂ ಓದಿ:ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

ಚಂದ್ರುಬಾಬು ನಾಯ್ಡು ಅವರನ್ನು ಹೊಗಳಿದ ಕಾರಣದಿಂದಾಗಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಜನಿಕಾಂತ್ ಮಾತಿಗೆ ನಾವು ಗೌರವ ಕೊಡುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಜನಿಕಾಂತ್ ಆಂಧ್ರಕ್ಕೆ ಬಂದು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪೋಸಾನಿ ಕೃಷ್ಣ ಮುರಳಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರೂ ಆಗಿರುವುದರಿಂದ ಈ ಮಾತು ಸಹಜವಾಗಿದೆ.

ರಜನಿಕಾಂತ್ ಬಗ್ಗೆ ಎರಡ್ಮೂರು ದಿನಗಳ ಹಿಂದೆಯಷ್ಟೇ ರೋಜಾ ಕೂಡ ಹರಿಹಾಯ್ದಿದ್ದರು. ರಜನಿಕಾಂತ್ ನೇರವಾಗಿ ರಾಜಕಾರಣಕ್ಕೆ ಬರಲಿ ಎಂದಿದ್ದರು. ಚಂದ್ರಬಾಬು ನಾಯ್ಡು ಎಂತಹ ರಾಜಕಾರಣಿ ಎಂದು ಅರಿತುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದ್ದರು.

]]>
1062586 0 0 0
<![CDATA[ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್]]> https://publictv.in/tatsama-tadbhava-poster-release-for-actress-meghana-rajs-birthday/ Wed, 03 May 2023 05:14:32 +0000 https://publictv.in/?p=1062592 ದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ (Meghana Raj) ‘ತತ್ಸಮ ತದ್ಬವ’ (Tatsama Tadbhava)  ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಸಿದ್ದರು. ಇಂದು ಮೇಘನಾ ರಾಜ್ ಹುಟ್ಟುಹಬ್ಬ (Birthday). ಹಾಗಾಗಿ ತತ್ಸಮ ತದ್ಭವ ಚಿತ್ರತಂಡ ಹುಟ್ಟುಹಬ್ಬಕ್ಕಾಗಿ ಅವರ ಪೋಸ್ಟರ್ (Poster)ರಿಲೀಸ್ ಮಾಡಿದೆ.

‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು  ಮೇಘನಾ ರಾಜ್.

ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ  ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ  ಎಂದು ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿ ಮೇಘನಾ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿರುವ ನಿರ್ದೇಶಕ ವಿಶಾಲ್ ಆತ್ರೇಯ,  ಸಂಪೂರ್ಣ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪನ್ನಗ ಭರಣ (Pannagabharana)ತಿಳಿಸಿದ್ದಾರೆ.

ನಟಿ ಶ್ರುತಿ ಕೂಡ ಈ ಸಿನಿಮಾದಲ್ಲಿ ಮಹತ್ವದ ಪಾತ್ರ ಮಾಡಿದ್ದು, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ.

]]>
1062592 0 0 0
<![CDATA[ಹಾರಾಟ ನಿಲ್ಲಿಸಿದ ಗೋ ಫಸ್ಟ್ - ಕಂಪನಿ ದಿವಾಳಿಯಾಗಿದ್ದು ಯಾಕೆ?]]> https://publictv.in/broke-go-first-stops-flights-blames-us-engine-maker-for-troubles/ Wed, 03 May 2023 05:27:54 +0000 https://publictv.in/?p=1062598 ಮುಂಬೈ: ತೀವ್ರ ಹಣಕಾಸಿನ ಕೊರತೆಯಿಂದಾಗಿ ಗೋ ಫಸ್ಟ್ ಏರ್‌ಲೈನ್ಸ್‌ (Go First airline) ತನ್ನ ಹಾರಾಟವನ್ನು ನಿಲ್ಲಿಸಿದೆ.

ಆರ್ಥಿಕ ಸಮಸ್ಯೆಯಿಂದಾಗಿ ಅಮೆರಿಕ ಮೂಲದ ಕಂಪನಿಯಿಂದ ಎಂಜಿನ್‍ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಸಂಸ್ಥೆಯ 50% ನಷ್ಟು ವಿಮಾನಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಪೂರ್ಣ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಸಂಸ್ಥೆ ಘೋಷಿಸಿಕೊಂಡಿದೆ. ಈ ಬಗ್ಗೆ 24 ಗಂಟೆಗಳ ಒಳಗಾಗಿ ಉತ್ತರವನ್ನು ನೀಡುವಂತೆ ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಕೇಳಿದೆ. ವಿಮಾನ ಹಾರಾಟ ಸ್ಥಗಿತಕ್ಕೂ ಮುನ್ನ ನಿಯಂತ್ರಣ ಸಂಸ್ಥೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದಿದ್ದಲ್ಲಿ ನಿಯಮದ ಉಲ್ಲಂಘನೆಯಾಗಲಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

ಪಿ ಅಂಡ್ ಡಬ್ಲ್ಯೂ (Pratt & Whitney) ಇಂಟರ್‌ನ್ಯಾಷನಲ್ ಏರೋ ಇಂಜಿನ್‍ಗಳು ನಿರಂತರವಾಗಿ ಸಮಸ್ಯೆ ನೀಡುತ್ತಿದ್ದವು. ಇದರ ಪರಿಣಾಮವಾಗಿ ಗೋ ಫಸ್ಟ್ 28 ವಿಮಾನಗಳನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಯಿತು. ವಾಡಿಯಾ ಗ್ರೂಪ್ ಒಡೆತನದ ರಾಷ್ಟ್ರೀಯ ಕಂಪನಿಯು ಕಾನೂನು ನ್ಯಾಯಮಂಡಳಿಯ ಮುಂದೆ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದು ದುರದೃಷ್ಟಕರ ನಿರ್ಧಾರ, ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆ ಎಂದು ಗೋ ಫಸ್ಟ್ ಮುಖ್ಯ ಕಾರ್ಯನಿರ್ವಾಹಕ ಕೌಶಿಕ್ ಖೋನಾ ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಇಂಜಿನ್‍ಗಳ ಪೂರೈಕೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲದೆ ಸರ್ಕಾರವು ಸಂಸ್ಥೆಗೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ತಿಳಿಸಿದ್ದಾರೆ.

ಗೋ ಫಸ್ಟ್ ದಿವಾಳಿಗೇನು ಕಾರಣ? ಗೋ ಫಸ್ಟ್ ವಿಮಾನಗಳು ಎಂಜಿನ್ ಸಮಸ್ಯೆ ಎದುರಿಸುತ್ತಿದ್ದವು. ಆದರೆ ಎಂಜಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿದ್ದ ಪಿ ಅಂಡ್ ಡಬ್ಲ್ಯೂ ಕಂಪನಿ ಎಂಜಿನ್ ಪೂರೈಕೆ ಮಾಡುವಲ್ಲಿ ವಿಫಲವಾಗಿತ್ತು. ಇದರಿಂದ 28 ವಿಮಾನಗಳನ್ನು ಸಂಸ್ಥೆ ನಿಲ್ಲಿಸಿತ್ತು. ಇದು ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತು.

17 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದ ಸಂಸ್ಥೆಯು 9000 ಕೋಟಿ ರೂ. ಸಾಲವನ್ನು ಹೊಂದಿದೆ. ವಿಮಾನಯಾನ ಸಂಸ್ಥೆಯನ್ನು ಉಳಿಸಲು ಹೂಡಿದಾರರು ಕಳೆದ ಮೂರು ವರ್ಷಗಳಲ್ಲಿ 3200 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

]]>
1062598 0 0 0
<![CDATA[ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ - ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ]]> https://publictv.in/it-raid-on-puttur-candidate-brothers-house-in-mysuru/ Wed, 03 May 2023 06:06:05 +0000 https://publictv.in/?p=1062608 ಮೈಸೂರು: ನಗರದ ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆಯ ಮೇಲೆ ಆದಾಯ ತೆರಿಗೆ (IT) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ರೂ. ನಗದು ವಶ ಪಡೆಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ರೈ ಅವರು ಪುತ್ತೂರು (Putturu) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರರಾಗಿದ್ದಾರೆ. ಮೈಸೂರಿನ ಸುಬ್ರಹ್ಮಣ್ಯ ರೈ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಬ್ರಹ್ಮಣ್ಯ ರೈ ಅವರ ಮನೆಯ ಅಂಗಳದ ಮರದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ನಲ್ಲಿ ಬಚ್ಚಿಡಲಾಗಿದ್ದ 1 ಕೋಟಿ ರೂ. ನಗದನ್ನು ವಶಕ್ಕೆ ಪಡೆದರು.

ನಗರದ ಸಿಹಿ ತಿಂಡಿ ಮಾರಾಟ ಮಳಿಗೆಯಲ್ಲಿ ಐಟಿ ರೇಡ್ ಮಾಡಿದ್ದಾರೆ. ಬಾಂಬೆ ಟಿಫಾನಿಸ್ ಸಿಹಿ ತಿಂಡಿ ಅಂಗಡಿ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಮೈಸೂರಿನ ಡಿ. ದೇವರಾಜ ಅರಸು ರಸ್ತೆಯ ಬಾಂಬೆ ಟಿಫಾನಿಸ್ ಅನಿಲ್ ಎಂಬುವರ ಮಾಲೀಕತ್ವದಲ್ಲಿರುವ ಸಂಸ್ಥೆ, ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಓ. ಕಚೇರಿ ಬಳಿ ಇರುವ ನಿವಾಸಗಳ ಮೇಲೂ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ದೇವರಾಜ ಅರಸು ರಸ್ತೆ, ಸಿದ್ದಾರ್ಥ ನಗರ ಜೆಪಿ ನಗರದಲ್ಲಿರುವ ಶಾಖೆಗಳು ಹಾಗೂ ತಯಾರಿಕಾ ಘಟಕದಲ್ಲೂ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು

ಚುನಾವಣಾ ಹೊಸ್ತಿಲಲ್ಲಿ ಬೆಂಗಳೂರು ಸೇರಿದಂತೆ 5 ಪ್ರಮುಖ ನಗರದಲ್ಲಿ ಬೃಹತ್ ಐಟಿ ದಾಳಿ ನಡೆದಿದೆ. 5 ಬ್ಯುಸಿನೆಸ್‍ಮೆನ್‍ಗಳ ಮನೆಯ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಮೈಸೂರು, ಮಂಗಳೂರು, ಬೆಂಗಳೂರು, ಮಂಡ್ಯ, ಹುಬ್ಬಳ್ಳಿಯಲ್ಲಿ ದಾಳಿ ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

]]>
1062608 0 0 0
<![CDATA[ತೈವಾನ್‌ ಕಂಪನಿ ಖರೀದಿ - ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ]]> https://publictv.in/tata-group-will-soon-take-over-iphone-manufacturing-in-india/ Wed, 03 May 2023 06:13:47 +0000 https://publictv.in/?p=1062611 ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಆಪಲ್ (Apple) ಕಂಪನಿಯ ಐಫೋನ್ (iPhone) ಉತ್ಪಾದನೆ ಭಾರತದಲ್ಲಿ (India) ಹೊಸ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಫೋನ್ 14, ಐಫೋನ್ 13 ಹಾಗೂ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಸೇರಿದೆ. ಆದರೆ ಇದೀಗ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.

ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ. ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ವಾಧೀನಪಡಿಸಿಕೊಳ್ಳಲಿದ್ದು, ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೈಗೆತ್ತಿಕೊಳ್ಳಲಿದೆ.

ಭಾರತದಲ್ಲಿ ವಿಸ್ಟ್ರಾನ್‌ನ ಘಟಕ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದೆ. ಸುಮಾರು 4,000 ರಿಂದ 5,000 ಕೋಟಿ ರೂ. ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಕಂಪನಿ ಭಾರತದಲ್ಲಿ ಐಫೋನ್ ಎಸ್‌ಸಿ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಅನ್ನು ತಯಾರಿಸುತ್ತಿದೆ.

ಆಪಲ್ ಭಾರತಕ್ಕೆ 20 ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದು, ಸುದೀರ್ಘ ಇತಿಹಾಸವನ್ನು ಹೊಂದಿದೆ. 2020ರ ಸೆಪ್ಟೆಂಬರ್‌ನಲ್ಲಿ ಆಪಲ್ ದೇಶದಲ್ಲಿ ತನ್ನ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿತು. ಇತ್ತೀಚೆಗಷ್ಟೇ ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈ ಹಾಗೂ ದೆಹಲಿಯಲ್ಲಿ ಉದ್ಘಾಟನೆಗೊಂಡಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

]]>
1062611 0 0 0
<![CDATA[ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ತಾಲಿಬಾನ್ ಸರ್ಕಾರ ರಚನೆಯಾಗುತ್ತೆ: ಪ್ರತಾಪ್ ಸಿಂಹ]]> https://publictv.in/karnataka-election-2023-pratap-simha-lashes-out-congress/ Wed, 03 May 2023 06:26:40 +0000 https://publictv.in/?p=1062617 ಮೈಸೂರು: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರ್ಕಾರ ರಚನೆ ಆಗಲ್ಲ ಬದಲಾಗಿ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿಕೆ ಶಿವಕುಮಾರ್, ಹನುಮಂತನ ಜನ್ಮದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯರಿಂದ (Siddaramaiah) ಏನೂ ನಿರೀಕ್ಷೆ ಸಾಧ್ಯ? ಬಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಕಿಡಿಕಾರಿದರು.

ಘಜ್ನಿ ಮಹಮ್ಮದ್‌, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆ. ಸೀತೆ ಹುಡುಕಿಕೊಂಡು ಹೋದ ಬಜರಂಗಿ ರಾಮನಿಗಾಗಿ ಪರ್ವತವನ್ನೇ ಎತ್ತಿಕೊಂಡು ಬಂದ. ಕರ್ನಾಟಕದ ಬಜರಂಗಿಗಳು ಹಿಂದುತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ ಅನ್ನು ಹೊಸಗಿ ಹಾಕುತ್ತಾರೆ. ರಾಮನ ಮೇಲೆ ಹನುಮಂತ ಮೇಲೆ ಯಾಕೆ ಕಾಂಗ್ರೆಸಿಗರಿಗಿಷ್ಟು ಕೋಪ? ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರ್ಕಾರ ರಚನೆ ಆಗಲ್ಲ ಬದಲಾಗಿ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಅಕ್ರಮವಾಗಿ ಮುಸ್ಲಿಮರಿಗೆ ಕರ್ನಾಟಕದಲ್ಲಿ (Karnataka) ಮೀಸಲಾತಿ ಕೊಡಲಾಗುತ್ತಿತ್ತು. ಅದನ್ನು ನಾವು ತೆಗೆದಿದ್ದೇವೆ. ಕಾಂಗ್ರೆಸ್ಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು. ನಾವು ನ್ಯಾಯ ನೀಡಿದ್ದೇವೆ. ಬಜರಂಗದಳದವರು ಯಾವ ಅಪಹರಣ ಮಾಡಿದ್ದಾರೆ. ಯಾರನ್ನು ಕೊಲೆ ಮಾಡಿದ್ದಾರೆ. ಅಶಾಂತಿ ಕದಡುವ ಕೆಲಸ ಏನೂ ಮಾಡಿದ್ದಾರೆ? ಪಿಎಫ್‍ಐ, ಕೆಎಫ್‍ಡಿ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಯಾವ ಹೋಲಿಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು

ಬಜರಂಗದಳದವರು ಗೋಮಾತೆ, ಹಿಂದುತ್ವದ ರಕ್ಷಣೆಗೆ ಕರ್ನಾಟಕದ ಹಿತ ರಕ್ಷಣೆಗೆ ಬಜರಂಗದಳ ಹೋರಾಟ ಮಾಡಿದ್ದಾರೆ. ತಾಲಿಬಾನ್ ಸರ್ಕಾರ ಬಂದರೆ ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ ಹಿಂದುಗಳಿಗೆ, ಹಿಂದೂತ್ವಕ್ಕೆ ಉಳಿಗಾಲ ಇರಲ್ಲ. ರಾಮನ ಆದರ್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲ ಎಂದರು. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ

]]>
1062617 0 0 0
<![CDATA[ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್]]> https://publictv.in/actress-palak-tiwari-caught-red-handed-with-ibrahim-ali-khan/ Wed, 03 May 2023 06:25:14 +0000 https://publictv.in/?p=1062626 ಚಿತ್ರರಂಗ ಅಂದ ಮೇಲೆ ಇಲ್ಲಿ ಡೇಟಿಂಗ್, ಲವ್, ರೊಮ್ಯಾನ್ಸ್, ಬ್ರೇಕಪ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಸಾಕಷ್ಟು ದಿನಗಳಿಂದ ಪಾಲಕ್ ತಿವಾರಿ- ಇಬ್ರಾಹಿಂ ಅಲಿ ಖಾನ್ ಡೇಟಿಂಗ್ ಸುದ್ದಿ ಇತ್ತು. ಇಬ್ಬರೂ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡುತ್ತಲೇ ಬಂದಿದ್ದರು. ಇದೀಗ ಪಾಲಕ್ ತಿವಾರಿಗೆ(Palak Tiwari)  ಕಿಸ್ ಮಾಡುವಾಗ ಫ್ಯಾನ್ಸ್ ಕೈಗೆ ರೆಡ್ ಹ್ಯಾಂಡ್ ಆಗಿ ಸೈಫ್ ಅಲಿ ಖಾನ್ (Saif Ali Khan) ಪುತ್ರ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

ಸಲ್ಮಾನ್ ಖಾನ್ (Salman Khan) ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್‌ಗೆ ಶ್ವೇತಾ ತಿವಾರಿ (Shwetha Tiwari) ಪುತ್ರಿ ಪಾಲಕ್ ಎಂಟ್ರಿ ಕೊಟ್ಟರು. ಸಿನಿಮಾ ಕಲೆಕ್ಷನ್‌ನಲ್ಲಿ ಸೋತಿದ್ರು ಕೂಡ ಪಾಲಕ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದ ಸಂದರ್ಶನವೊಂದರಲ್ಲಿ ಇಬ್ರಾಹಿಂ ಜೊತೆಗಿನ ಡೇಟಿಂಗ್ ಸುದ್ದಿ ಬಗ್ಗೆ ಪ್ರಶ್ನೆ ಕೇಳಿದಾಗ, ತಾನೂ ಯಾರ ಜೊತೆನೂ ಡೇಟ್ ಮಾಡುತ್ತಿಲ್ಲ. ನನ್ನ ಕೆರಿಯರ್ ಕಡೆಗೆ ನಾನು ಗಮನ ವಹಿಸುತ್ತಿದ್ದೇನೆ ಎಂದು ನಟಿ ಹೇಳಿದ್ದರು.

ಇದೀಗ ಪಾಲಕ್‌ಗೆ ಕಿಸ್ ಮಾಡುವಾಗ ಇಬ್ರಾಹಿಂ ಅಲಿ ಖಾನ್ ಫ್ಯಾನ್ಸ್ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಪಾಲಕ್ ತಿವಾರಿ ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ಕಾಣಿಸಿಕೊಂಡರು, ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಕಾಮೆಂಟ್ ವಿಭಾಗದಲ್ಲಿ, ಮುಂಬೈನ 'ವರ್ಲಿ ಕ್ಲಬ್ ಸ್ಲಿಂಕ್ & ಬಾರ್' ನಲ್ಲಿ ಪಾಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ (Ibrahim Ali Khan) ಸ್ವಲ್ಪ ಸಮಯದ ಹಿಂದೆ ತುಟಿಗಳಿಗೆ ಚುಂಬಿಸುವುದನ್ನು ನೋಡಿದ್ದೇವೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದೀಗ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಪಾಲಕ್ ಹೇಳಿದ್ದ ಹೇಳಿಕೆ ಇದೀಗ ಸದ್ದು ಮಾಡ್ತಿದೆ. ಪಾಲಕ್-ಇಬ್ರಾಹಿಂ ಲಿಪ್‌ಲಾಕ್ ವಿಚಾರಕ್ಕೆ ಗೇಲಿ ಮಾಡ್ತಿದ್ದಾರೆ. ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಕಾದುನೋಡಬೇಕಿದೆ.

]]>
1062626 0 0 0
<![CDATA[ಕಾಂಗ್ರೆಸ್‌ಗೆ ಠಕ್ಕರ್ - ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ]]> https://publictv.in/thakkar-to-congress-bajrang-dal-organized-hanuman-chalisa-chanting-at-the-temple-on-thursday/ Wed, 03 May 2023 07:05:36 +0000 https://publictv.in/?p=1062625 ಬೆಂಗಳೂರು: ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಉಳಿದುಕೊಂಡಿರುವ ಸಮಯದಲ್ಲಿ ಕಾಂಗ್ರೆಸ್ (Congress) ಬಜರಂಗದಳವನ್ನು (Bajrang Dal) ನಿಷೇಧಿಸುವ ನಿರ್ಧಾರವನ್ನು ಪ್ರಣಾಳಿಕೆಯಲ್ಲಿ ಹಾಕಿ ವಿವಾದವನ್ನು ಎಳೆದುಕೊಂಡಿದೆ. ಇದೀಗ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಮುಂದಾಗಿದೆ.

ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ (Temple) ಹನುಮಾನ್ ಚಾಲೀಸಾ (Hanuman Chalisa) ಪಠಿಸಲು ಬಜರಂಗದಳ ನಿರ್ಧರಿಸಿದೆ. ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಣ ಆಯೋಜನೆಗೆ ಸಿದ್ಧತೆ ನಡೆಸುತ್ತಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ, ಬಜರಂಗ ದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ. ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ? ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗ ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

]]>
1062625 0 0 0
<![CDATA[ಗರಿಷ್ಠ ಮಟ್ಟ ತಲುಪಿದ ಫಾಸ್ಟ್‌ಟ್ಯಾಗ್  ಟೋಲ್ - ಏಪ್ರಿಲ್‍ನಲ್ಲಿ 193.15 ಕೋಟಿ ಸಂಗ್ರಹ]]> https://publictv.in/fastag-daily-toll-collection-hits-all-time-high-crosses-193-crore-mark/ Wed, 03 May 2023 06:50:30 +0000 https://publictv.in/?p=1062633 ನವದೆಹಲಿ: ಫಾಸ್ಟ್‌ಟ್ಯಾಗ್ (FASTag) ದೈನಂದಿನ ಟೋಲ್ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಮಂಗಳವಾರ ತಿಳಿಸಿದೆ.

ಫಾಸ್ಟ್‌ಟ್ಯಾಗ್  ವ್ಯವಸ್ಥೆಯ ಮೂಲಕ ದೈನಂದಿನ ಟೋಲ್ ಸಂಗ್ರಹವು ಏ. 29 ರಂದು ಸಾರ್ವಕಾಲಿಕ ಗರಿಷ್ಠ 193.15 ಕೋಟಿ ರೂ. ತಲುಪಿದೆ. ಒಂದೇ ದಿನದಲ್ಲಿ 1.16 ಕೋಟಿ ವಹಿವಾಟುಗಳು ದಾಖಲಾಗಿದೆ. ಭಾರತದಲ್ಲಿ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಅನುಷ್ಠಾನ ಉತ್ತಮ ಬೆಳವಣಿಗೆಯೊಂದಿಗೆ ಯಶಸ್ಸನ್ನು ಕಂಡಿದೆ ಎಂದು ಪ್ರಾಧಿಕಾರ (NHAI) ಹೇಳಿಕೊಂಡಿದೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ

ದೇಶದಾದ್ಯಂತ 50 ಕ್ಕೂ ಹೆಚ್ಚು ನಗರಗಳಲ್ಲಿ 140 ಕ್ಕೂ ಹೆಚ್ಚು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್‍ಟ್ಯಾಗ್ ವ್ಯವಸ್ಥೆ ಮಾಡಿದೆ. ಅಲ್ಲದೆ ತಡೆರಹಿತ ಪ್ರಯಾಣ ಮತ್ತು ಸುರಕ್ಷಿತ ಪಾವತಿಯನ್ನು ಸುಗಮಗೊಳಿಸಿದೆ. ಫಾಸ್ಟ್‌ಟ್ಯಾಗ್ ಕಾರ್ಯಕ್ರಮದ ಅಡಿಯಲ್ಲಿ ಟೋಲ್ ಪ್ಲಾಜಾಗಳ (Toll Plazas) ಸಂಖ್ಯೆಯು 339 ರಾಜ್ಯ ಟೋಲ್ ಪ್ಲಾಜಾಗಳನ್ನು ಒಳಗೊಂಡಂತೆ 770 ರಿಂದ 1,228 ಕ್ಕೆ ಏರಿಕೆ ಮಾಡಲಾಗಿದೆ.

ಹೆದ್ದಾರಿ‌ (Expressways) ಬಳಕೆದಾರರಿಂದ ಫಾಸ್ಟ್‌ಟ್ಯಾಗ್‌ನ ಅಳವಡಿಕೆ ಟೋಲ್ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಿದೆ. ಭಾರತದ ಹೆದ್ದಾರಿ ಮೂಲಸೌಕರ್ಯದಲ್ಲಿ ಮತ್ತಷ್ಟು ಹೂಡಿಕೆ ಅಗತ್ಯವಿದೆ ಎಂದು ಪ್ರಾಧಿಕಾರ ಹೇಳಿದೆ.

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣಾ ಬೂತ್‍ಗಳಲ್ಲಿ ವಾಹನ ಸವಾರಾರು ನಿಲ್ಲಿಸದೆಯೇ ಟೋಲ್ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಅನುಕೂಲವಾಗಿದೆ. ಫೆ.2021 ರಲ್ಲಿ ಸರ್ಕಾರ ಕಮರ್ಶಿಯಲ್ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿತು.

ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಹೆಚ್ಚಾಗುತ್ತಿದೆ. 2019 ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗುತ್ತಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿತ್ತು.  ಇದನ್ನೂ ಓದಿ: ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

]]>
1062633 0 0 0
<![CDATA[Breaking-ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಚುನಾವಣೆ ಕಿರಿಕ್: ಜಗ್ಗೇಶ್ ಮುಖಕ್ಕೆ ಬಿಳಿಪಟ್ಟೆ]]> https://publictv.in/jaggesh-starrer-raghavendra-stores-election-kirik/ Wed, 03 May 2023 06:48:29 +0000 https://publictv.in/?p=1062634 ಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ (Exhibition) ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ ಪ್ರಚಾರ ಮಾಡುತ್ತಿರುವುದರಿಂದ ಚುನಾವಣೆ (Election) ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ ಆರೋಪ ಕೇಳಿ ಬಂದಿದೆ.

ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇಂದು ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದಾರೆ. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಚಿತ್ರ ಪ್ರದರ್ಶನಕ್ಕೆ ನಂತರ ಅನುವು ಮಾಡಿಕೊಡಲಾಗಿದೆ.

ಚಿತ್ರಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರೂ, ಜಗ್ಗೇಶ್ ಅವರ ಪೋಸ್ಟರ್ ಮುಚ್ಚುವಂತೆ ಚುನಾವಣೆ ಅಧಿಕಾರಿ ತಿಳಿಸಿದ್ದಾರೆ. ಹಾಗಾಗಿ ಜಗ್ಗೇಶ್ ಮುಖಕ್ಕೆ ಬಿಳಿ ಹಾಳೆ ಅಂಟಿಸಲಾಗಿದೆ. ಚಿತ್ರಮಂದಿರ ಮುಂದೆ ಹಾಕಲಾದ ಪೋಸ್ಟರ್ ಗೆ ಬಿಳಿ ಹಾಳೆಯಿಂದ ಜಗ್ಗೇಶ್ ಮುಖಮುಚ್ಚಿ, ಥಿಯೇಟರ್ ಒಳಗಡೆ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ.

]]>
1062634 0 0 0
<![CDATA[ಚುನಾವಣಾ ತರಬೇತಿ ಮುಗಿಸಿ ಮನೆಗೆ ಹೋಗುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು]]> https://publictv.in/teacher-died-heart-attack-in-dharwad/ Wed, 03 May 2023 06:53:24 +0000 https://publictv.in/?p=1062635 ಧಾರವಾಡ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ (Election) ಮತಗಟ್ಟೆ ಅಧಿಕಾರಿಗಳ ತರಬೇತಿ ಮುಗಿಸಿ ಮನೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ (54) ಮೃತ ಶಿಕ್ಷಕ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಆರ್ಯ ಭಟ್ಟ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಪ್ಪ ಅವರು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿದ್ದರು.

ಧಾರವಾಡ ಜೆಎಸ್ಎಸ್ ಕಾಲೇಜಿನಲ್ಲಿ 71- ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಭಾಗವಹಿಸಿದ್ದ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನೇಮಕಗೊಂಡಿದ್ದ ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ ಅವರು ತರಬೇತಿ ಮುಗಿಸಿ ಮೆಟ್ಟಿಲು ಇಳಿದು ಮನೆಗೆ ಹೋಗುವ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ

ಶಿಕ್ಷಕ ಸೋನಾರ ಅವರ ಆಕಸ್ಮಿಕ ಸಾವಿಗೆ ಶೋಕ ವ್ಯಕ್ತಪಡಿಸಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ನೆರವು ತಲುಪಿಸಲಾಗುವುದೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ತಾಲಿಬಾನ್ ಸರ್ಕಾರ ರಚನೆಯಾಗುತ್ತೆ: ಪ್ರತಾಪ್ ಸಿಂಹ

]]>
1062635 0 0 0
<![CDATA[ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ]]> https://publictv.in/vishnu-priya-film-actress-priya-varrier-in-maldives/ Wed, 03 May 2023 06:56:13 +0000 https://publictv.in/?p=1062637 ಮಾಲಿವುಡ್ (Mollywood) ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಸದ್ಯ ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ತನ್ನ ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈ ಕುರಿತ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತನ್ನ ಕಣ್ಸನ್ನೆನಿಂದ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ವಾರಿಯರ್, ಬಳಿಕ ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು. ಇದೀಗ 'ವಿಷ್ಣು ಪ್ರಿಯಾ' (Vishnupriya) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ನಟ ಶ್ರೇಯಸ್‌ಗೆ (Shreyas) ಜೋಡಿಯಾಗಿ ಬರುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ಗೆ ಬ್ರೇಕ್ ಹಾಕಿ, ವೆಕೇಷನ್‌ಗಾಗಿ ಮಾಲ್ಡೀವ್ಸ್‌ಗೆ ನಟಿ ಪ್ರಿಯಾ ಹಾರಿದ್ದಾರೆ. ಮಾಲ್ಡೀವ್ಸ್‌ ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಶಾರ್ಟ್ ಡ್ರೆಸ್ ಧರಿಸಿ ಪ್ರಿಯಾ ಮಸ್ತ್ ಆಗಿ ಮಿಂಚಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್

ಪ್ರಿಯಾ ವಾರಿಯರ್ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಚಿತ್ರಗಳು ಈ ವರ್ಷ ತೆರೆಗೆ ಬರಲಿದೆ. ಕಣ್ಸನ್ನೆ ಬೆಡಗಿ ಸಿನಿಮಾಗಳನ್ನ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

]]>
1062637 0 0 0
<![CDATA[ಪಕ್ಷಾಂತರಿಗಳ ಜಿದ್ದಾಜಿದ್ದಿ - ಯಾರ ಪಾಲಾಗುತ್ತೆ ಅರಸೀಕೆರೆ?]]> https://publictv.in/karnataka-election-2023-who-will-win-in-arasikere/ Wed, 03 May 2023 07:01:35 +0000 https://publictv.in/?p=1062644 ಹಾಸನ: ಪಕ್ಷಾಂತರಿಗಳ ಸ್ಪರ್ಧೆಯಿಂದಾಗಿ ಈ ಬಾರಿ ಅರಸೀಕೆರೆ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆಯಲಿದೆ. ಈ ಪಕ್ಷದಿಂದ ಆ ಪಕ್ಷಕ್ಕೆ ಮತ್ತು ಆ ಪಾರ್ಟಿಯಿಂದ ಈ ಪಾರ್ಟಿಗೆ ಜಿಗಿದವರು ಅಖಾಡದಲ್ಲಿದ್ದಾರೆ. ಅರಸೀಕೆರೆ (Arasikere) ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮತ್ತು ತಾವಿದ್ದ ಪಕ್ಷಗಳಿಗೆ ಮೋಸ ಮಾಡಿದ ಆರೋಪ ವಿಷಯವೇ ಮುಖ್ಯ ಆಗಲಿದೆ.

ಕಳೆದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ (JDS) ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿರುವ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಅವರು ಪಕ್ಷ ತೊರೆದು ಕಾಂಗ್ರೆಸ್‌ (Congress) ಸೇರಿ ಕಣದಲ್ಲಿದ್ದಾರೆ. ಅಂತೆಯೇ ಬಿಜೆಪಿಯಿಂದ (BJP) ಟಿಕೆಟ್‌ ಸಿಗದಿದ್ದಕ್ಕೆ ಎನ್.ಆರ್‌.ಸಂತೋಷ್‌ ಜೆಡಿಎಸ್‌ ಸೇರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಜಿ.ವಿ.ಬಸವರಾಜು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು

ಅಖಾಡದಲ್ಲಿರುವ ಪೈಲ್ವಾನರು ಕೆ.ಎಂ.ಶಿವಲಿಂಗೇಗೌಡ (ಕಾಂಗ್ರೆಸ್) ಎನ್.ಆರ್.ಸಂತೋಷ್ (ಜೆಡಿಎಸ್) ಜಿ.ವಿ.ಬಸವರಾಜು (ಬಿಜೆಪಿ)

ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು? ಕೆ.ಎಂ.ಶಿವಲಿಂಗೇಗೌಡ: ಕಳೆದ ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ. 538 ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿರುವುದು. ಸರ್ಕಾರ ಯಾವುದೇ ಇದ್ದರೂ ಅನುದಾನ ತರುವ ಛಾತಿ ಇರುವುದು ಶಿವಲಿಂಗೇಗೌಡರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್‌ ಅಂಶವೆಂದರೆ, ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದು. ʼಕೈʼ ಪಕ್ಷದೊಳಗಿನ ಒಳೇಟು ಭಯ. ದಳಪತಿಗಳನ್ನು ಮೊದಲ ಬಾರಿಗೆ ಎದುರು ಹಾಕಿಕೊಂಡಿರುವುದಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

ಎನ್.ಆರ್.ಸಂತೋಷ್: ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ಬಲ ಮತ್ತು ಜೆಡಿಎಸ್ ಬೆಂಬಲ ಅಭ್ಯರ್ಥಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎನ್ನಲಾಗಿದೆ. ಈವರೆಗೂ ಬಿಜೆಪಿಯಲ್ಲಿದ್ದು, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ಗೆ ಬಂದಿರುವುದು. ಜನರ ಜನರ ನಡುವೆ ಜಗಳ ತಂದಿಟ್ಟು, ಕೇಸು ಹಾಕಿಸುತ್ತಾರೆ ಎಂಬ ಆರೋಪ. ಮೂಲ ಜೆಡಿಎಸ್ ಮುಖಂಡರ ವಿರೋಧ ಭೀತಿ ಇವರಿಗೆ ಮೈನಸ್‌ ಪಾಯಿಂಟ್‌ ಆಗಿದೆ.

ಜಿ.ವಿ.ಬಸವರಾಜು: ಬಿಜೆಪಿ ಬೆಂಬಲ ಜೊತೆಗೆ ಪಕ್ಷ ನಿಷ್ಠರು ಎಂಬುದು ಬಸವರಾಜುಗೆ ಪ್ಲಸ್‌ ಪಾಯಿಂಟ್‌ ಆಗಲಿದೆ. ಸಂಘಟನೆ ಕೊರತೆ, ಕ್ಷೇತ್ರದ ಸಮಗ್ರ ಪರಿಚಯ ಇಲ್ಲದೇ ಇರುವುದು ಇವರಿಗೆ ಮೈನಸ್‌ ಅಂಶವಾಗಲಿದೆ ಎಂಬ ಮಾತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಮೆಗಾ ರೋಡ್‌ ಶೋ

ಜಾತಿ ಲೆಕ್ಕಾಚಾರ ಏನು? ಕ್ಷೇತ್ರದಲ್ಲಿ ಸುಮಾರು 70 ರಿಂದ 80 ಸಾವಿರ ಲಿಂಗಾಯತ ಮತದಾರರಿದ್ದು, ಇವರು ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಆಗಲಿದ್ದಾರೆ. ಉಳಿದಂತೆ ಒಕ್ಕಲಿಗ 22,000, ಕುರುಬ, ಎಸ್‌ಸಿ 26,000, ಎಸ್ಟಿ 18,000, ಮುಸ್ಲಿಂ 17,000 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,14,763 ಮತದಾರರಿದ್ದು, ಈ ಪೈಕಿ 1,08,152 ಪುರುಷರು, 1,05,604 ಮಂದಿ ಮಹಿಳೆಯರು ಹಾಗೂ 7 ಮಂದಿ ಇತರೆ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್, 4 ಬಾರಿ ಜೆಡಿಎಸ್, ಪಿಎಸ್‌ಪಿ ಹಾಗೂ ಪಕ್ಷೇತರರು ಒಂದು ಬಾರಿ ಗೆದ್ದಿದ್ದಾರೆ.

]]>
1062644 0 0 0
<![CDATA[‘ದಿ ಕೇರಳ ಸ್ಟೋರಿ’ ಸಿನಿಮಾ ಪರ ಬ್ಯಾಟ್ ಬೀಸಿದ ನಟಿ ತಾರಾ]]> https://publictv.in/tara-is-the-actress-who-batted-for-the-movie-the-kerala-story/ Wed, 03 May 2023 07:21:50 +0000 https://publictv.in/?p=1062657 ದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗುತ್ತಿದೆ. ಕಾನೂನು ಪರಿಧಿಯಲ್ಲಿ ಕಟ್ಟಿ ಹಾಕುವ ಪ್ರಯತ್ನ ವಿಫಲವಾಗಿದ್ದರಿಂದ ಕೆಲ ಕಡೆ ಪ್ರತಿಭಟನೆ ಕೂಡ ನಡೆದಿದೆ. ಈ ನಡುವೆಯೇ ಮೇ 05 ರಂದು ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಕುರಿತು ಕನ್ನಡದ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ (Taara) ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ತಾರಾ, ‘ಸಿನಿಮಾ ಸತ್ಯದ ದರ್ಶನ ಮಾಡಿಸುತ್ತದೆ ಅಂತಾದರೆ ಯಾಕೆ ಬ್ಯಾನ್ ಮಾಡಬೇಕು? ಸಿನಿಮಾದಲ್ಲಿ ಇರುವ ವಿಷಯವು ತಪ್ಪಾಗಿದ್ದರೆ ಅದನ್ನು ಸೆನ್ಸಾರ್ ಮಂಡಳಿಯು ನೋಡಿಕೊಳ್ಳುತ್ತದೆ. ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದನ್ನು ನೋಡುಗರು ತೀರ್ಮಾನಿಸುತ್ತಾರೆ’ ಎಂದಿದ್ದಾರೆ. ಇದನ್ನೂ ಓದಿ:ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್

ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ (Censor) ಮಂಡಳಿಯು ಈಗಾಗಲೇ ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್  (Communist)ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ (Muslim) ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.

 ]]>
1062657 0 0 0
<![CDATA[ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ]]> https://publictv.in/karnatak-election-20203-modi-starts-speech-with-tulu-in-mulky-invokes-bajrang-bali/ Wed, 03 May 2023 07:33:50 +0000 https://publictv.in/?p=1062661 ಮಂಗಳೂರು: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಜರಂಗಬಲಿ ಕೀ ಜೈ  (Jai Bajrangbali) ಎಂದು ಆರಂಭದಲ್ಲಿ ಹೇಳಿ ಭಾಷಣ ಮಾಡಿದ್ದು ವಿಶೇಷವಾಗಿತ್ತು.

ಪ್ರತಿ ಚುನಾವಣಾ ಭಾಷಣದಲ್ಲಿ ಮೋದಿ ಆರಂಭದಲ್ಲಿ ಭಾರತ್‌ ಮಾತಾ ಕೀ ಜೈ ಎಂದು ಹೇಳಿ ಭಾಷಣ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಮೂಲ್ಕಿ ಪ್ರಚಾರ ಸಭೆಯಲ್ಲಿ ಭಾರತ್‌ ಮಾತಾಕೀ ಜೈ ಎಂದು ಹೇಳಿದ ಬಳಿಕ ತುಳುವಿನಲ್ಲಿ ಮಾತನ್ನು ಆರಂಭಿಸಿದರು.  ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು (ಪರಶುರಾಮ ಕ್ಷೇತ್ರದ ತಾಯಿಯ ಪ್ರೀತಿಯ ಮಕ್ಕಳಿಗೆ ನಮಸ್ಕಾರಗಳು) ಎಂದು ಹೇಳಿ ಭಾಷಣ ಆರಂಭಿಸಿದರು.  ಇದನ್ನೂ ಓದಿ: ಕಾಂಗ್ರೆಸ್‌ಗೆ ಠಕ್ಕರ್ – ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ

ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ದಕ್ಷಿಣ ಕನ್ನಡ ಬಿಜೆಪಿ ಮುಂದಾಗಿತ್ತು. ಆದರೆ ನೆರೆದಿದ್ದ ಸಭಿಕರು ಕನ್ನಡ ಭಾಷಾಂತರ ಬೇಡ ಎಂದು ಹೇಳಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಮೋದಿ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ಆರಂಭದಲ್ಲಿ ಪರುಶುರಾಮ ಕ್ಷೇತ್ರ, ಮೂಲ್ಕಿ ವೆಂಕಟರಣ ದೇವಸ್ಥಾನ, ನಾರಾಯಣ ಗುರು, ತೀರ್ಥಂಕರನ್ನು ಉಲ್ಲೇಖಿಸಿ ಭಾಷಣ ಮುಂದುವರಿಸಿದರು.

 

ಈ ಹಿಂದೆ ಮೋದಿ ಮಂಗಳೂರಿಗೆ ಬಂದಾಗಲೂ ಕನ್ನಡ ಭಾಷಾಂತರಕ್ಕೆ ಬಿಜೆಪಿ ಮುಂದಾಗಿತ್ತು. ಆ ಸಂದರ್ಭದಲ್ಲೂ ಅಲ್ಲಿ ನೆರೆದಿದ್ದ ಬಿಜೆಪಿ ಬೆಂಬಲಿಗರು  ಕನ್ನಡ ಭಾಷಾಂತರ ಬೇಡ ಎಂದು ಹೇಳಿದ್ದರು.

ಭಾಷಣದ ಕೊನೆಯಲ್ಲಿ ಎಲ್ಲರ ಜೊತೆ ಫ್ಲ್ಯಾಶ್‌ ಲೈಟ್‌ ಆನ್‌ ಮಾಡಲು ಹೇಳಿದ ಮೋದಿ ಪ್ರತಿ ಮನೆ ಮನೆಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಬೇಕು. ಈ ಮೂಲಕ ಮೋದಿಗೆ ಅಶೀರ್ವಾದ ಮಾಡಬೇಕೆಂದು ಎಂದು ಸಭಿಕರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

ಕೊನೆಗೂ ಜೈ ಬಜರಂಗ ಬಲಿ ಘೋಷಣೆ ಬಳಿಕ ವಂದೇ ಮಾತರಂ ಘೋಷಣೆ ಕೂಗಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಕಾಂಗ್ರೆಸ್‌ (Congress) ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು (Bajrang Dal) ನಿಷೇಧಿಸುವ ಪ್ರಸ್ತಾಪವನ್ನು ಉಲ್ಲೇಖಿಸಿದೆ. ಬಜರಂಗದಳ ನಿಷೇಧ ಪ್ರಸ್ತಾಪ ವಿಷಯವನ್ನು ಬಿಜೆಪಿ ಈಗ ಚುನಾವಣಾ (Election) ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ಮಂಗಳವಾರದಿಂದ ಬಿಜೆಪಿಯ ರೋಡ್‌ ಶೋ ಮತ್ತು ಸಮಾವೇಶದಲ್ಲಿ ಭಾರತ್‌ ಮಾತಾ ಕೀ ಜೈ ಘೋಷಣೆಯೊಂದಿಗೆ ಜೈ ಬಜರಂಗ ಬಲಿ ಘೋಷಣೆ ಮೊಳಗಲು ಆರಂಭಿಸಿದೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನಿದೆ? ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗ ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.]]>
1062661 0 0 0
<![CDATA[ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ]]> https://publictv.in/karnataka-election-2023-too-much-wisdom-for-congress-in-times-of-destruction-says-dv-sadananda-gowda/ Wed, 03 May 2023 08:00:50 +0000 https://publictv.in/?p=1062664 ಮಡಿಕೇರಿ: ಕಾಂಗ್ರೆಸ್‌ನವರು (Congress) ಬಜರಂಗದಳ (Bajrang Dal) ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರೆ. ವಿನಾಶ ಕಾಲದಲ್ಲಿ ವಿಪರೀತ ಬುದ್ಧಿ ಎಂಬ ಮಾತಿನಂತೆ ಕಾಂಗ್ರೆಸ್ ತನ್ನ ವಿನಾಶಕ್ಕೆ ಬಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದೆ ಎಂದು ಸಂಸದ ಡಿವಿ ಸದಾನಂದ ಗೌಡ (DV Sadananda Gowda) ವಾಗ್ದಾಳಿ ನಡೆಸಿದ್ದಾರೆ.

ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ದೇಶಪ್ರೇಮಿ ಎಂಬ ಸಂಘಟನೆ ರಾಜಕೀಯ ರಂಗದಲ್ಲಿ ಇರುವುದು ಎಂದರೆ ಅದು ಬಿಜೆಪಿ ಮಾತ್ರ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಗೆ ಇದು ಸವಾಲಿನ ಚುನಾವಣೆಯಾಗಿದೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ತರಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಸ್ವಂತ ಶಕ್ತಿಯಲ್ಲಿ ಬಿಜೆಪಿ 125 ರಿಂದ 130 ಸ್ಥಾನ ಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದರು.

ಬಜರಂಗದಳ ನಿಷೇಧದ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ. ಕಾಂಗ್ರೆಸ್‌ನ ವಿಪರೀತ ಬುದ್ಧಿ ವಿನಾಶಕ್ಕೆ ಹಾದಿ. ರಾಷ್ಟ್ರಪ್ರೇಮ ಗೊತ್ತಿಲ್ಲದ ಕಾಂಗ್ರೆಸ್ ಈ ರೀತಿಯ ಪ್ರಣಾಳಿಕೆ ನೀಡಿದೆ. ಕೊನೆಗೆ ದೀಪ ಜೋರಾಗಿ ಉರಿಯುತ್ತದೆ. ಆ ರೀತಿ ಕಾಂಗ್ರೆಸ್‌ನ ಸ್ಥಿತಿ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾತ್ರಿ ಮಟನ್ ತಿಂತೀರಿ, ಹಗಲೊತ್ತಲ್ಲಿ ಮಾಂಸಾಹಾರಿಗಳಿಗೆ ಬೈತೀರಿ – ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ

ಈ ಬಾರಿ ಪೂರ್ಣ ಬಹುಮತದ ಸರ್ಕಾರವನ್ನು ಬಿಜೆಪಿ ರಚಿಸಲಿದೆ. ಚುನಾವಣೆಯ ನಂತರ ಕಾಂಗ್ರೆಸ್‌ನವರು ರಾಜಕೀಯ ಸನ್ಯಾಸ ಪಡೆಯುವುದು ಖಚಿತ ಎಂದರು. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ

]]>
1062664 0 0 0
<![CDATA[ರಾತ್ರಿ ಮಟನ್ ತಿಂತೀರಿ, ಹಗಲೊತ್ತಲ್ಲಿ ಮಾಂಸಾಹಾರಿಗಳಿಗೆ ಬೈತೀರಿ - ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ]]> https://publictv.in/aicc-president-mallikarjun-kharge-slams-bjp-leaders-in-kalaburagi/ Wed, 03 May 2023 07:45:49 +0000 https://publictv.in/?p=1062666 ಕಲಬುರಗಿ: ರಾತ್ರಿ ಎಲ್ಲರೂ ಮಟನ್ ತಿಂತೀರಿ. ಹಗಲೊತ್ತಲ್ಲಿ ಮಾಂಸಾಹಾರಿಗಳಿಗೆ ಬೈತೀರಿ. ಈ ಕೆಲಸವನ್ನು ಬಿಜೆಪಿ (BJP) ನಾಯಕರು ಮಾಡ್ತಾರೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ಬರೀ ಜಗಳ ಹಚ್ಚಿಯೇ ವೋಟ್ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಗರಂ ಆದರು. ಬಜರಂಗದಳ ರದ್ದು ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಆ ಕುರಿತು ಚರ್ಚೆ ಮಾಡಲು ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿ ವಿರೋಧ ಪಕ್ಷದವರು ಸಹಜವಾಗಿ ಒಬ್ಬರ ಮೇಲೆ ಒಬ್ಬರು ಹೇಳ್ತಾರೆ. ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆ ಜಾರಿ ಮಾಡಲು ಆಗಲ್ಲಾ ಅಂತ ಹೇಳ್ತಿದ್ದಾರೆ. ಕಳೆದ ಬಾರಿ ಕೂಡಾ ಇದೇ ರೀತಿ ಹೇಳಿದ್ದರು. ಆದರೆ ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳ್ತಾ ಹೋಗ್ತಾರೆ. ಆದರೆ ನಾವು ಮಾಡಿ ತೋರಿಸುತ್ತಿದ್ದೇವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

ಪರೀಕ್ಷೆಗೂ ಮೊದಲೇ ಪರೀಕ್ಷೆ ಹೇಗೆ ಬರಿತ್ತೀರಿ ಅಂತ ಕೇಳಿದ್ರೆ ಹೇಗೆ. ಕೊಟ್ಟು ನೋಡಿ ಗೊತ್ತಾಗುತ್ತೆ. ನಾವು ಹೇಗೆ ಪ್ರಣಾಳಿಕೆ ಜಾರಿ ಮಾಡ್ತೇವೆ ಅಂತ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಧಾನಿ ಮೋದಿ ಏನೂ ಕೊಡಲಿಲ್ಲ. ಆದರೆ ಇದೀಗ ಪ್ರಚಾರಕ್ಕೆ ಬರ್ತಿದ್ದಾರೆ. ನಾವು ಮಂಜೂರು ಮಾಡಿದ್ದ ರೈಲುಗಳಿಗೆ ಬಣ್ಣ ಬಳಿದು ಹೊಸ ರೈಲು ಬಿಟ್ಟರು. ಕೆಲವರಿಗೆ ಪ್ರಚಾರ ಬೇಕು. ಪ್ರಚಾರದಿಂದಲೇ ಎಲ್ಲಾ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ. ಚುನಾವಣೆ ಅನ್ನೋದು ವಾರ್ ಇದ್ದಂತೆ. ನನಗೆ ಹೀಗಂದ್ರು, ಹಾಗಂದ್ರು ಅಂತ ಅಳುತ್ತಾ ಕುಳಿತುಕೊಳ್ಳಲ್ಲ. ಇದೇ ಬಿಜೆಪಿಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಠಕ್ಕರ್ – ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ

ಮುಂಜಾನೆಯಿಂದ ಸಂಜೆವರೆಗೆ ಅಳ್ತಾನೇ ಇರೋದು ಪ್ರಧಾನಿ ಕೆಲಸನಾ? ನಾನು ಕೆಳವರ್ಗದವನು. ಹೀಗಾಗಿ ನನ್ನ ತುಳಿಯುತ್ತಿದ್ದಾರೆ ಅಂತ ಮೋದಿ ಹೇಳುತ್ತಾರೆ. ನಾನು ಮೋದಿಗಿಂತ ಜಾತಿ ವ್ಯವಸ್ಥೆಯಲ್ಲಿ ಕೆಳಗೆ ಇದ್ದೀನಿ. ನಾನು ದಲಿತ ಜಾತಿಗೆ ಸೇರಿದವನು. ಮೋದಿ ಮತ್ತು ಅಮಿತ್ ಶಾ ಅವರು ಯಾವ ರಾಜ್ಯಕ್ಕೆ ಎಷ್ಟು ಸಲ ಹೋಗಿದ್ದಾರೆ? ಅವರು ಹಣ ಬಲ, ಮಸಲ್ ಪವರ್ ಹೊಂದಿದ್ದಾರೆ ಎಂದು ಕುಟುಕಿದರು.

]]>
1062666 0 0 0
<![CDATA[ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್- ನಟನ ವರ್ತನೆಗೆ ಫ್ಯಾನ್ಸ್ ಕಿಡಿ]]> https://publictv.in/actor-shah-rukh-khan-pushes-fans-hand-in-mumbai-airport-video-goes-viral/ Wed, 03 May 2023 08:08:20 +0000 https://publictv.in/?p=1062668 ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಈ ವರ್ಷದ ಆರಂಭದಲ್ಲಿಯೇ 'ಪಠಾಣ್' (Pathaan) ಸಿನಿಮಾಗೆ ಬಿಗ್ ಓಪನಿಂಗ್ಸ್ ಸಿಕ್ತು. ಚಿತ್ರದ ಸಕ್ಸಸ್ ಖುಷಿಯಲ್ಲಿ ಶಾರುಖ್ ತೇಲುತ್ತಿದ್ದಾರೆ. ಹೀಗಿರುವಾಗ 'ಪಠಾಣ್' ಸ್ಟಾರ್ ಶಾರುಖ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ತಳ್ಳಿದ ಶಾರುಖ್ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ.

ಸಿದ್ಧಾರ್ಥ್ ಆನಂದ್ (Siddarth Anand) ನಿರ್ದೇಶನದ 'ಪಠಾಣ್' ಚಿತ್ರ ಈ ವರ್ಷ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗೆದ್ದು ಬೀಗಿದೆ. ಶಾರುಖ್- ದೀಪಿಕಾ ಪಡುಕೋಣೆ (Deepika Padukone) ಜೋಡಿ, ಸಿನಿಮಾ ಕಥೆ, ಆ್ಯಕ್ಷನ್ ಎಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಈ ಚಿತ್ರದ ಸಕ್ಸಸ್‌ ಶಾರುಖ್‌ ವರ್ತನೆಗೆ ಫ್ಯಾನ್ಸ್‌ ಕಿಡಿಕಾರಿದ್ದಾರೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

'ಡುಂಕಿ'(Dunki) ಸಿನಿಮಾದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ತೆರಳಿದ್ದ ಶಾರುಖ್ ಮುಂಬೈಗೆ (Mumbai) ವಾಪಸ್ ಆಗಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮ್ಯಾನೆಜರ್ ಪೂಜಾ (Pooja)  ಶಾರುಖ್ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಶಾರುಖ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಶಾರುಖ್‌ಗೆ ಕೋಪ ಬಂದಿದೆ. ಮೊಬೈಲ್ ಹಿಡಿದು ತಮ್ಮ ಕಡೆ ಬಂದ ಅಭಿಮಾನಿಯನ್ನು ಶಾರುಖ್ ತಳ್ಳಿದ್ದಾರೆ. ಅಲ್ಲದೇ ಒಂದು ಕ್ಷಣ ಹಿಂದಕ್ಕೆ ತಿರುಗಿ ನೋಡಿದ್ದಾರೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಈ ವೀಡಿಯೋ ಸೆರೆಯಾಗಿದೆ.

 
View this post on Instagram
 

A post shared by @varindertchawla

ಅಭಿಮಾನಿಯನ್ನು ತಳ್ಳಿರೋದ್ದಕ್ಕೆ ಶಾರುಖ್ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ. 'ಪಠಾಣ್' ಸಕ್ಸಸ್ ಆಗಿದ್ದಕ್ಕೆ ಶಾರುಖ್‌ಗೆ ಸೊಕ್ಕು ಬಂದಿದೆ. ಸಿನಿಮಾ ಮಾಡುವಾಗ ಫ್ಯಾನ್ಸ್ ಬೇಕು, ಸಿನಿಮಾ ಗೆದ್ದರೆ ಫ್ಯಾನ್ಸ್ ಬೇಡ ಎಂದರೆ ಹೇಗೆ ಎಂದು ಶಾರುಖ್‌ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

]]>
1062668 0 0 0
<![CDATA['ತಂಗಲಾನ್' ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ]]> https://publictv.in/actor-chiyaan-vikram-suffers-rib-injury-at-rehearsals-and-take-short-break-from-thangalaan-shoot/ Wed, 03 May 2023 08:42:09 +0000 https://publictv.in/?p=1062679 ಕ್ಷಿಣ ಭಾರತದ ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyaan Vikram) ಅವರು 'ಪೊನ್ನಿಯಿನ್ ಸೆಲ್ವನ್ 2' (Ponniyin Selvan 2) ಸಿನಿಮಾ ಪ್ರಚಾರ ಮುಗಿಸಿ ಮತ್ತೆ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದರು. 'ತಂಗಲಾನ್' (Thangalaan Film) ರಿಹರ್ಸಲ್ ವೇಳೆ ಬಿದ್ದು ವಿಕ್ರಮ್ ಪಕ್ಕೆಲುಬಿಗೆ ಪೆಟ್ಟಾಗಿದೆ. ಕೂಡಲೇ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

'ತಂಗಲಾನ್' ಸಿನಿಮಾದ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯಗಳಾಗಿರೋದ್ರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕೆ ಮತ್ತೆ ಶೂಟಿಂಗ್ ಶುರುವಾಗುತ್ತದೆ. ಈ ಹಿಂದೆ ಕೂಡ ಇದೇ ಸಿನಿಮಾ ಸೆಟ್‌ನಲ್ಲಿ ವಿಕ್ರಮ್‌ಗೆ ಪೆಟ್ಟಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂತಿತ್ತು. ಇದರಿಂದ ವಿಕ್ರಮ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಕ್ರಮ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪ್ರಸ್ತುತ ವಿಕ್ರಮ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತಾ 'ತಂಗಲಾನ್' ಸಿನಿಮಾ ಮೂಡಿ ಬರ್ತಿದೆ. ನಿರ್ದೇಶಕ ಪಾ.ರಂಜಿತ್ ಕೋಲಾರದಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

]]>
1062679 0 0 0
<![CDATA[ಸಲಿಂಗ ವಿವಾಹ ಕೇಸ್ - ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ]]> https://publictv.in/same-sex-marriage-central-government-tells-supreme-court-it-will-form-committee-to-consider-suggestions-by-lgbtqia-petitioners/ Wed, 03 May 2023 09:14:14 +0000 https://publictv.in/?p=1062685 ನವದೆಹಲಿ: ಸಲಿಂಗ ವಿವಾಹ (Same sex marriage) ಕುರಿತಾಗಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ (LGBTQIA) ಸಲಹೆಗಳನ್ನು ಪರಿಗಣಿಸಲು ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್‍ಗೆ (Supreme Court) ಕೇಂದ್ರ ಸರ್ಕಾರ (Central Government) ಬುಧವಾರ ತಿಳಿಸಿದೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಒಂದೇ ಲಿಂಗದ ವ್ಯಕ್ತಿಗಳೊಂದಿಗಿನ ಸಂಬಂಧದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆಯಲಾಗುವುದು. ಇದಕ್ಕಾಗಿ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗುತ್ತದೆ. ಇದರಿಂದ ಸಮುದಾಯದ ಎದುರಿಸುತ್ತಿರುವ ಸಮಸ್ಯೆಗಳನ್ನು ಕಲೆಹಾಕಲು ಅನುಕೂಲವಾಗುತ್ತದೆ ಎಂದು ಕೇಂದ್ರ ಹೇಳಿಕೊಂಡಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರದ ನಿರ್ಧಾರವನ್ನು ಪ್ರಕಟಿಸಿದರು.

ಅರ್ಜಿದಾರರು ಸಲಿಂಗ ವಿವಾಹಗಳನ್ನು ಕಾನೂನಿನಡಿಯಲ್ಲಿ ತರುವಂತೆ ವಾದಿಸಿತ್ತು. ಆದರೆ ಈ ಅರ್ಜಿಗಳಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂಗೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ಕೇಂದ್ರವು, ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತ್ತು.

ಏ.27 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ಶಾಸಕಾಂಗದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸುಪ್ರೀಂ ಹೇಳಿತ್ತು. ಸಲಿಂಗ ಸಂಬಂಧದಲ್ಲಿರುವ ಜನರು ಬಹಿಷ್ಕಾರಕ್ಕೊಳಗಾಗದಂತೆ ನೋಡಿಕೊಳ್ಳುವ ಪ್ರಾಮುಖ್ಯತೆಯನ್ನು ಸಿಜೆಐ ಮತ್ತಷ್ಟು ಒತ್ತಿ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ ದೇಶದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

]]>
1062685 0 0 0
<![CDATA[ಅತ್ತೆ-ಸೊಸೆ ಜಗಳವಾಡುವ ಕೆಲಸವನ್ನು ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ: ಸಿಎಂ ಇಬ್ರಾಹಿಂ]]> https://publictv.in/karnataka-election-2023-cm-ibrahim-lashesh-out-at-congress-manifesto-in-ramanagar/ Wed, 03 May 2023 09:55:51 +0000 https://publictv.in/?p=1062686 ರಾಮನಗರ: ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಅತ್ತೆ-ಸೊಸೆ ಜಗಳವಾಡುವ ಕೆಲಸ ಮಾಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣ (Channapatna) ದ ಶೇರು ಸರ್ಕಲ್ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ (Bajarangdal) ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಜರಂಗದಳ ನೆನಪಾಗಲಿಲ್ವಾ.? ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು ಅಂದ್ರೆ ಅದು ಜೆಡಿಎಸ್ (JDS) ನಿಂದ ಮಾತ್ರ ಸಾಧ್ಯ ಎಂದರು.

ಕಾಂಗ್ರೆಸ್ ಪ್ರಣಾಳಿಯಲ್ಲಿ ಜೆಡಿಎಸ್ ಪ್ರಣಾಳಿಕೆ ಅಂಶ ಕಾಪಿಮಾಡಿರುವ ವಿಚಾರಕ್ಕೆ ರಿಯಾಕ್ಟ್ ಮಾಡಿ, ಅದು ನೂರಕ್ಕೆ ನೂರರಷ್ಟು ಸತ್ಯ. ಅವರು ನಮ್ಮನ್ನೇ ಅನುಕರಣೆ ಮಾಡಬೇಕು. ಅದನ್ನ ಬಿಟ್ರೆ ಹೇಳೋಕೆ ಬೇರೆ ಏನಿದೆ?. ಎಕರೆಗೆ 10 ಸಾವಿರ, ಒಂದು ಮನೆಗೆ 2 ಸಾವಿರ ಕೊಡ್ತೀನಿ ಅಂತ ಹೇಳಿ ಅತ್ತೆ ಸೊಸೆಗೆ ಗಲಾಟೆ ತಂದಿಡ್ತಿದ್ದಾರೆ. ಅತ್ತೆಗೆ ಕೊಡ್ತಾರೋ, ಸೊಸೆಗೆ ಕೊಡ್ತಾರೋ. ಈಗ ನಾವು 65 ವರ್ಷ ವಯಸ್ಸಾದ ಮೇಲೆ 5 ಸಾವಿರ ಕೊಡ್ತೀವಿ ಅಂತ ಅಂದರು.

ಜೆಡಿಎಸ್‍ಗೆ ವೋಟ್ ಹಾಕಿದ್ರೆ ಅದು ಕಾಂಗ್ರೆಸ್ ಗೆ ವೋಟ್ ಹಾಕಿದ ಹಾಗೆ ಎಂಬ ಮೋದಿ ಹೇಳಿಕೆ ಕುರಿತು ಮಾತನಾಡಿ, ಬಿಜೆಪಿ-ಕಾಂಗ್ರೆಸ್ ಇಬ್ರೂ ದಾಯಾದಿಗಳ ಮಕ್ಕಳು. ಜನಕ್ಕೆ ಎಲ್ಲವೂ ಗೊತ್ತಾಗುತ್ತೆ. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಕನ್ನಡ ನಾಡಿನ ಕನ್ನಡಿಗರು. ಕನ್ನಡಿಗರ ಸ್ವಾಭಿಮಾನ ಉಳಿಯಬೇಕು ಎಂದು ಹೇಳಿದರು. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

ಚನ್ನಪಟ್ಟಣಕ್ಕೆ ನೀರು ಕೊಟ್ಟಿದ್ದು ಯಾರು?, ಬೆಂಗಳೂರಿಗೆ ಕಾವೇರಿ ನೀರು ಕೊಟ್ಟಿದ್ದು ಯಾರು..?, 92 ವರ್ಷ ವಯಸ್ಸಾದರೂ ರಾಜ್ಯದ ಜನತೆಗೆ ಇಂದಿಗೂ ಹೋರಾಡುತ್ತಿದ್ದಾರೆ. ಚನ್ನಪಟ್ಟಣ ಕುಮಾರಸ್ವಾಮಿ ಕ್ಷೇತ್ರ. ಚನ್ನಪಟ್ಟಣ ಮತ್ತೊಮ್ಮೆ ಕರ್ನಾಟಕದ ಕಿರೀಟ ಆಗಬೇಕು. ದೇಶದ ಭೂಪಟದಲ್ಲಿ ಚನ್ನಪಟ್ಟಣ ರಾರಾಜಿಸಬೇಕು. ಅತ್ತೆ ಸೊಸೆ ಜಗಳವಾಡು ಕೆಲವಸನ್ನ ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ. ಯೋಗೇಶ್ವರ್ (Yogeshwar) ನೀನು ಯಾವ ಪಾರ್ಟಿಯಲ್ಲಿರು ಆದರೆ ಗೌಡರಿಗೆ ಗೌರವ ಕೊಡುವುದನ್ನ ಕಲಿ. ಮೋದಿ ರೀತಿ ನಾವು ರೋಡ್ ಶೋ ಮಾಡಲು ಸಾಧ್ಯವಿಲ್ಲ. ಹಳ್ಳಿ ಹಳ್ಳಿಯಲ್ಲೂ ನಾನು ಕುಮಾರಸ್ವಾಮಿ ಸುತ್ತಾಡಿದ್ದೇವೆ. ಮುಸ್ಲಿಮರು ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.

ಕುಮಾರಸ್ವಾಮಿ (HD Kumaraswamy) ಯನ್ನ ಬೆಂಬಲಿಸದರೆ ಮುಸ್ಲಿಂ ಪರ ನಿಲ್ಲಲಿದ್ದಾರೆ. ಮುಸ್ಲಿಮರಿಗೆ 4% ಮೀಸಲಾತಿ ಕೊಟ್ಟಿದ್ದು, ಹುಬ್ಬಳ್ಳಿ ಈದ್ಗಾ ಮೈದಾನ (Hubballi Idgha Maidan) ವಿವಾದ ಬಗ್ಗೆ ಹರಿಸಿದ್ದು ದೇವೇಗೌಡ್ರು. ಮೀಸಲಾತಿ, ಹಿಜಬ್, ಹಲಾಲ್ ನಿಷೇಧ ಹೇರುವುದನ್ನ ವಿರೋಧಿಸಿದ್ದು ಕುಮಾರಸ್ವಾಮಿ ಎಂದರು.

]]>
1062686 0 0 0
<![CDATA[ಖ್ಯಾತ ನಟ, ನಿರ್ದೇಶಕ ಮನೋಬಾಲಾ ನಿಧನ]]> https://publictv.in/famous-actor-and-director-manobala-passed-away/ Wed, 03 May 2023 09:27:36 +0000 https://publictv.in/?p=1062688 ಮಿಳಿನ (Tamil) ಖ್ಯಾತ ನಿರ್ದೇಶಕ (Director) ಹಾಗೂ ನಟ ಮನೋಬಾಲಾ (Manobala) ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅವರು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು.

ಭಾರತಿರಾಜ ಅವರ ‘ಪುತಿಯ ವಾರ್ಪುಗಳ್’ ಚಿತ್ರದ ಮೂಲಕ ನಟರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಮನೋಬಾಲಾ, ಆನಂತರ ಭಾರತಿಪುರ ನಿರ್ದೇಶನದ ಚಿತ್ರಗಳಿಗೆ ಸಹಾಯ ನಿರ್ದೇಶಕರೂ ಆಗಿದ್ದರು. ಈವರೆಗೂ ನಾಲ್ಕು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಡಿಸೆಂಬರ್ 31 ಸಿನಿಮಾಗೆ ಮನೋಬಾಲಾ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಕನ್ನಡದ ನಂಟು ಕೂಡ ಅವರಿಗಿತ್ತು. ಪತ್ನಿ ಉಷಾ ಮತ್ತು ಪುತ್ರ ಹರೀಶ್ ಅವರನ್ನು ಅಗಲಿರುವ ಮನೋಬಾಲಾಗೆ ದಕ್ಷಿಣದ ಸಿನಿಮಾ ರಂಗ ಕಂಬನಿ ಮಿಡಿದಿದೆ. ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಅಂತಿಮ ದರ್ಶನ ಪಡೆದಿದ್ದಾರೆ.

]]>
1062688 0 0 0
<![CDATA[ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ - ಡಿಕೆಶಿ]]> https://publictv.in/i-am-a-hindu-i-am-a-devotee-of-anjaneya-and-lord-rama-says-dk-shivakumar/ Wed, 03 May 2023 09:44:16 +0000 https://publictv.in/?p=1062694 - ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಕಿಡಿ

ಬೆಂಗಳೂರು: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವ ಭಕ್ತ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress Manifesto) ಬಜರಂಗದಳ ಬ್ಯಾನ್ ವಿಚಾರ ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್  ಹಾಗೂ ರಣದೀಪ್ ಸುರ್ಜೆವಾಲ ನಗರದ ಖಾಸಗಿ ಹೋಟೆಲೊಂದರಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಮೋದಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಬಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್ 

ಬಜರಂಗದಳ ಬ್ಯಾನ್ ಮಾಡ್ತೀವಿ ಅಂದಿದ್ದಕ್ಕೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನ್ ಸಂಬಂಧ? ಬಹಳ ಪ್ರಚೋದನೆ ಉಂಟುಮಾಡ್ತಿದ್ದಾರೆ. ಜನಕ್ಕೆ ಇದೆಲ್ಲವೂ ಅರ್ಥವಾಗಿದೆ. ನಾವೂ ಹನುಮನ ಭಕ್ತರು, ಆಂಜನೇಯನ ಪ್ರವೃತ್ತಿಯವರು, ಆಂಜನೇಯ ಬೇರೆ, ಬಜರಂಗದಳ ಬೇರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

ಏಪ್ರಿಲ್ 4ರಂದು ಹನುಮಾನ್ ಚಾಲಿಸಾ ಪಠಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹನುಮಾನ್ ಚಾಲಿಸಾ ದಿನಾ ಪಠಿಸ್ತೀವಿ. ಹಿಂದಿನ ಆರ್‌ಎಸ್‌ಎಸ್ ಬೇರೆಯಿತ್ತು. ಈಗಿನ ಆರ್‌ಎಸ್‌ಎಸ್ ಬೇರೆ ಇದೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ತೀರಾ? ಮೊದಲು ನೀವು ದೇಶ ಉಳಿಸಿ ಎಂದು ಕುಟುಕಿದ್ದಾರೆ.

ಬಜರಂಗಿ ಅಂತಾ ಕ್ಯಾಂಪೇನ್ ಮಾಡೋರು ಜನರ ಹೊಟ್ಟೆಗೆ ಏನು ಕೊಟ್ರಿ? ಎಷ್ಟು ಜನರಿಗೆ ಉದ್ಯೋಗ ಕೊಟ್ರಿ? ಎಂದು ಪ್ರಶ್ನಿಸಿದ ಡಿಕೆಶಿ ಪ್ರಣಾಳಿಕೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ. ಮೇ 13ರಂದು ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಪಕ್ಕಾ. ನಾನು ಹಿಂದೂ, ನಾನು ಆಂಜನೇಯನ ಭಕ್ತ, ನಾನೂ ರಾಮನ ಭಕ್ತ, ಶಿವಭಕ್ತ ಎಂದು ಹೇಳಿದ್ದಾರೆ.

]]>
1062694 0 0 0
<![CDATA[ಸಾಕಿದ್ದ ಮುದ್ದಿನ ಗಿಳಿ ಸಾವು - ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ]]> https://publictv.in/west-bengal-man-performs-last-rites-for-his-pet-parrot/ Wed, 03 May 2023 10:02:13 +0000 https://publictv.in/?p=1062702 ಕೋಲ್ಕತ್ತಾ: ಪ್ರೀತಿಯಿಂದ ಸಾಕಿದ್ದ ಗಿಳಿ (Parrot) ಮೃತಪಟ್ಟ ಹಿನ್ನೆಲೆಯಲ್ಲಿ ಕೃತಜ್ಞತೆಯ ಸಂಕೇತವಾಗಿ ವ್ಯಕ್ತಿಯೊಬ್ಬ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ಅಂತಿಮ ವಿಧಿಗಳನ್ನು ನೆರವೇರಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

ಪಶ್ಚಿಮ ಬಂಗಾಳದ ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ ಮಜುಂದಾರ್ ಎಂಬಾತ ಕಳೆದ 25 ವರ್ಷಗಳಿಂದ ಗಿಳಿಯೊಂದನ್ನು ಸಾಕಿದ್ದ. ಅದಕ್ಕೆ ಪ್ರೀತಿಯಿಂದ ಭಕ್ತೋ ಎಂದು ಹೆಸರಿಟ್ಟು, ಅದನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದ. ಆದರೆ ಅದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದೆ.

ಪ್ರೀತಿಯ ಗಿಳಿಯನ್ನು ಮಗುವಿನಂತೆ ನೋಡಿಕೊಂಡಿದ್ದ ಹಿನ್ನೆಲೆಯಲ್ಲಿ ಮಜುಂದಾರ್ ಕುಟುಂಬವು ಹಿಂದೂ ಸಂಪ್ರದಾಯಗಳ ಪ್ರಕಾರ ಅದರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿತ್ತು. ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಸಹಾಯ ಮಾಡಿದ್ದರು. ಇದನ್ನೂ ಓದಿ: ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ

ಅದಾದ ಬಳಿಕ ಮಜುಂದಾರ್ ಕುಟುಂಬವು ಅರ್ಚಕರನ್ನು ಕರೆದು ಹಿಂದೂ ಸಂಪ್ರದಾಯದಂತೆ ಮನೆಯಲ್ಲಿ ತಮ್ಮ ಪ್ರೀತಿಯ ಸಾಕು ಗಿಳಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ನಂತರ, ಪಾರ್ಥಿವ ಶರೀರವನ್ನು ನೈಹಟಿಯ ಹೂಗ್ಲಿ ನದಿ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಈ ವೇಳೆ 25 ಜನರನ್ನು ಕರೆಸಿ ಊಟ ಹಾಕಿಸಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

]]>
1062702 0 0 0
<![CDATA[ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್]]> https://publictv.in/vijay-devarakonda-and-sreeleela-new-film/ Wed, 03 May 2023 10:20:21 +0000 https://publictv.in/?p=1062705 ತೆಲುಗು ಚಿತ್ರರಂಗದಲ್ಲಿ (Tollywood) ಮತ್ತೊಬ್ಬ ಕನ್ನಡತಿ ಹವಾ ಶುರುವಾಗಿದೆ. ರಶ್ಮಿಕಾ (Rashmika Mandanna) ಬಳಿಕ ನಟಿ ಶ್ರೀಲೀಲಾಗೆ ಭರ್ಜರಿ ಬೇಡಿಕೆಯಿದೆ. ವಿಜಯ್ ದೇವರಕೊಂಡ (Vijaydevarakonda) ಜೊತೆ ರೊಮ್ಯಾನ್ಸ್ ಮಾಡಲು ಶ್ರೀಲೀಲಾ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

'ಲೈಗರ್' ಸೋಲಿನ ನಂತರ 'ಜೆರ್ಸಿ' ನಿರ್ದೇಶಕ ಗೌತಮ್ ಡ್ಯಾಶಿಂಗ್ ಹೀರೋ ವಿಜಯ್ ದೇವರಕೊಂಡ ಹೊಸ ಸಿನಿಮಾ ಮಾಡ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಮನಗೆಲ್ಲು ಸಜ್ಜಾಗಿದ್ದಾರೆ. ವಿಜಯ್- ಶ್ರೀಲೀಲಾ (Sreeleela) ನಟನೆಯ ಹೊಸ ಸಿನಿಮಾದ ಮುಹೂರ್ತ ಪೂಜೆಯನ್ನ ಮೇ ೩ರಂದು ಹೈದರಾಬಾದ್ ಸರಳವಾಗಿ ನಡೆದಿದೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದ ಪೂಜೆ ಕಾರ್ಯವನ್ನ ಸರಳವಾಗಿ ಮಾಡಲಾಯಿತು. ವಿಜಯ್, ಶ್ರೀಲೀಲಾ, ನಿರ್ದೇಶಕ ಗೌತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನೂ ಪೆಳ್ಳಿ ಸಂದಡಿ, 'ಧಮಾಕ' (Dhamaka) ಸಕ್ಸಸ್ ನಂತರ ಶ್ರೀಲೀಲಾ ಕೈಯಲ್ಲಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ದೇವರಕೊಂಡ ನಟನೆಯ ಹೊಸ ಸಿನಿಮಾ ಇದೇ ಜೂನ್‌ನಿಂದ ಶೂಟಿಂಗ್‌ ಶುರುವಾಗಲಿದೆ. ರಶ್ಮಿಕಾ ಬಳಿಕ ಸಖತ್ ಬೇಡಿಕೆಯಲ್ಲಿರುವ ಕನ್ನಡತಿ ಶ್ರೀಲೀಲಾ- ವಿಜಯ್ ದೇವರಕೊಂಡ ಜೋಡಿ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

]]>
1062705 0 0 0
<![CDATA[ಲಕ್ನೋಗೆ ಡಬಲ್‌ ಶಾಕ್‌ - ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?]]> https://publictv.in/bcci-to-take-over-kl-rahuls-injury-case-completely/ Wed, 03 May 2023 10:32:43 +0000 https://publictv.in/?p=1062712 ಲಕ್ನೋ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡಕ್ಕೆ ಡಬಲ್‌ ಶಾಕ್‌ ಕೊಟ್ಟಂತಾಗಿದೆ. ಲಕ್ನೋ ತಂಡದ ಇಬ್ಬರು ಪ್ರಮುಖ ಆಟಗಾರರು ಐಪಿಎಲ್‌ 2023ನಿಂದಲೇ (IPL 2023) ಹೊರಗುಳಿಯಲಿದ್ದಾರೆ.

9 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 5ರಲ್ಲಿ ಗೆಲುವು ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋತಿದೆ. ಸದ್ಯ ಪಾಂಯಿಂಟ್ಸ್‌ ಪಟ್ಟಿಯಲ್ಲಿ 3 ಸ್ಥಾನದಲ್ಲಿರುವ ಲಕ್ನೋ ಪ್ಲೇ ಆಫ್‌ ತಲುಪಲು ಉಳಿದ 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಬೇಕಿದೆ. ಈ ನಡುವೆ ನಾಯಕ ಕೆ.ಎಲ್‌ ರಾಹುಲ್‌ (KL Rahul) ಹಾಗೂ ಜಯದೇವ್‌ ಉನಾದ್ಕಟ್‌ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

ಸೋಮವಾರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್‌ ರಾಹುಲ್ ಬೌಂಡರಿ ತಡೆಯಲು ಮುಂದಾದಾಗ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಫೀಲ್ಡಿಂಗ್‌ಗೆ ಮರಳಲೇ ಇಲ್ಲ. ಕೊನೆಗೆ 19ನೇ ಓವರ್‌ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿಯಿದ್ದಾಗ ಮತ್ತೆ ನೋವಿನಲ್ಲೂ ಕಣಕ್ಕಿಳಿದಿದ್ದರು. ಮೂರು ಎಸೆತಗಳನ್ನ ಎದುರಿಸಿದರೂ ಯಾವುದೇ ರನ್‌ ಕದಿಯಲು ಆಗಲಿಲ್ಲ.

ಗಾಯಕ್ಕೆ ತುತ್ತಾಗಿರುವ ಕೆ.ಎಲ್‌ ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿಯಿಂದ ಬಿಸಿಸಿಐ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೆ.ಎಲ್‌ ರಾಹುಲ್‌ ಅವರ ಗಾಯ ಗಂಭೀರವಾಗಿದ್ದರೆ, ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಅವರು ಕೆಲ ಪಂದ್ಯಗಳ ಬಳಿಕ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

ಈಗಾಗಲೇ ಕೆ.ಎಲ್‌ ರಾಹುಲ್‌ ಅವರ ಗಾಯದ ಭಾಗವನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿದ್ದು, ಅವರಿಗೆ ನೋವು ಇನ್ನೂ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ. ಕೆ.ಎಲ್‌ ರಾಹುಲ್‌ ಅವರ ಗಾಯದ ಪರಿಸ್ಥಿತಿಯನ್ನು ಆಧರಿಸಿ ಬಿಸಿಸಿಐ ಹಾಗೂ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ಲಕ್ನೋ ನಾಯಕನ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯಬೇಕಾ? ಅಥವಾ ಬೇಡವಾ? ಎಂಬುದನ್ನು ತೀರ್ಮಾನಿಸಲಿದೆ.

ಜಯದೇವ್‌ ಉನದ್ಕತ್ ಅವರ ವಿಷಯದಲ್ಲಿಯೂ ಕಠಿಣ ತೀರ್ಮಾನಕ್ಕೆ ಬಿಸಿಸಿಐ ಮುಂದಾಗುತ್ತಿದೆ. ಅವರ ಭುಜದ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅವರು ಮುಂದೆ ಐಪಿಎಲ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲೂ ಸ್ಥಾನ ಕಳೆದುಕೊಳ್ಳುವ ಸ್ಥಾನವಿದೆ ಎಂದು ಹೇಳಲಾಗಿದೆ.

]]>
1062712 0 0 0
<![CDATA[ಸರ್ಬಿಯಾದ ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ - 8 ಮಕ್ಕಳ ಸಾವು]]> https://publictv.in/teenage-boy-opens-fire-in-school-kills-8-children-and-guard-in-serbia/ Wed, 03 May 2023 11:42:28 +0000 https://publictv.in/?p=1062734 ಬೆಲ್‌ಗ್ರೇಡ್: ಸರ್ಬಿಯಾದ (Serbia) ರಾಜಧಾನಿ ಬೆಲ್‌ಗ್ರೇಡ್‌ನ (Belgrade) ಶಾಲೆಯೊಂದರಲ್ಲಿ (ಅಪ್ರಾಪ್ತ ಬಾಲಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ 8 ಮಕ್ಕಳು ಸಾವನ್ನಪ್ಪಿದ್ದಾರೆ.

ಬೆಲ್‌ಗ್ರೇಡ್‌ನ ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8:40ರ ವೇಳೆಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದರೆ, ಇನ್ನೂ 6 ಮಕ್ಕಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ್ದ 7ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ ಬಾಲಕ ತನ್ನ ತಂದೆಯ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, ಪೊಲೀಸರು ಆರೋಪಿ ಬಾಲಕನ ತಲೆಯನ್ನು ಮುಚ್ಚಿ ತಮ್ಮ ವಾಹನದೆಡೆಗೆ ಕರೆದುಕೊಂಡು ಹೋಗುವುದು ಕಂಡುಬಂದಿದೆ. ಹಲವು ಮಕ್ಕಳ ಸಾವಿನ ಸುದ್ದಿ ಕೇಳುತ್ತಲೇ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಹುಡುಕಿಕೊಂಡು ಶಾಲೆಗೆ ಧಾವಿಸಿದ್ದಾರೆ. ಇದನ್ನೂ ಓದಿ: ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ಸರ್ಬಿಯಾದಲ್ಲಿ ಇಂತಹ ಸಾಮೂಹಿಕ ಗುಂಡಿನ ದಾಳಿಗಳು ತೀರಾ ಅಪರೂಪವಾಗಿದೆ. ಆದರೂ 1990ರ ಯುದ್ಧದ ಬಳಿಕ ದೇಶದಲ್ಲಿ ಉಳಿದಿರುವ ಶಸ್ತ್ರಾಸ್ತ್ರಗಳ ಸಂಖ್ಯೆಯ ಬಗ್ಗೆ ತಜ್ಞರು ಪದೇ ಪದೇ ಎಚ್ಚರಿಸಿದ್ದಾರೆ. ಆರ್ಥಿಕ ಸಂಕಷ್ಟ ಹಾಗೂ ಇತರ ಘರ್ಷಣೆಗಳಿಂದಾಗಿ ಇಂತಹ ಘಟನೆಗಳಿಗೆ ಪ್ರಚೋದನೆ ಸಿಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ಕೇಸ್ – ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ

]]>
1062734 0 0 0
<![CDATA[ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು]]> https://publictv.in/karnataka-election-2023-dr-k-sudhakar-lashesh-out-at-dk-shivakumar-in-chikkaballapur/ Wed, 03 May 2023 13:19:45 +0000 https://publictv.in/?p=1062721 ಚಿಕ್ಕಬಳ್ಳಾಪುರ: ನಾನು ಆಂಜನೇಯ (Anjaneya)ನ ಭಕ್ತ ಅಂತ ಹೇಳಿಕೊಂಡರೆ ಸಾಲದು, ಆಂಜನೇಯನ ರೀತಿ ಕೆಲಸ ಮಾಡಬೇಕು ಎಂದು ಸಚಿವ ಸುಧಾಕರ್ (Dr. K Sudhakar) ಅವರು ಡಿಕೆ ಶಿವಕುಮಾರ್ (DK Shivakumar) ಅವರಿಗೆ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ನಂತರ ಮಾತನಾಡಿದ ಸುಧಾಕರ್, ಹಿಂದೆಂದೂ ಕಾಣದಂತಹ ಸ್ಥಾನಗಳ ಏರಿಕೆ ಆಗಿ ಸ್ವಂತ ಬಲದಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಪರ ಅಲೆ ಇದೆ. ಮೋದಿ (Narendra Modi) ಬಂದ ಕಡೆ ಸ್ಥಾನಗಳ ಏರಿಕೆ ಆಗುತ್ತಿದೆ. ನರೇಂದ್ರ ಮೋದಿಯವರೇ ವಿಶ್ವಾಸ, ಬಿಜೆಪಿ (BJP) ಯೇ ಭರವಸೆ. ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್ ಅಭಿವೃದ್ಧಿಗೆ ಜನರಿಗೆ ಬಿಜೆಪಿ ಒಂದೇ ಆಯ್ಕೆ ಎಂದರು.

ಇದೇ ವೇಳೆ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ದೇಶದ್ರೋಹದ ಕೆಲಸ ಮಾಡಿದ್ರೆ ಅವರನ್ನು ನಿಷೇಧ ಮಾಡಬೇಕು. ದೇಶಪ್ರೇಮಿಯಾಗಿ ಒಳ್ಳೆಯ ಕೆಲಸ ಮಾಡಿದ್ರೆ ಅವರನ್ನು ಯಾಕೆ ನಿಷೇದ ಮಾಡ್ತಾರೆ. ಬಿಜೆಪಿಗೆ ಬಜರಂಗದಳಕ್ಕೂ ಹೋಲಿಕೆ ಮಾಡಲು ಆಗುತ್ತಾ..? ಪಿಎಫ್ ಐ ಉಗ್ರಗಾಮಿಗಳಿಗರ ಸಹಕಾರ ಕೊಡುವ ಸಂಘಟನೆನಾ ನಿಷೇಧ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ

ಬಜರಂಗದಳ (Bajrangdal) ದ ಮೇಲೆ ದೇಶ ದ್ರೋಹದ ಪ್ರಕರಣಗಳಿದ್ರೆ ಹೇಳಲಿ. ಬಜರಂಗದಳ ಹಿಂದೂ ಸಂಘಟನೆ ಅನ್ನೋ ಕಾರಣಕ್ಕೆ ನಿಷೇಧ ಮಾಡ್ತೀರಾ..? ಹಾಗಾಗಿಯೇ ನೀವು ಬಹುಸಂಖ್ಯಾತ ಹಿಂದೂಗಳು ಛೀಮಾರಿ ಹಾಕಿರೋದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ತಿರಸ್ಕಾರ ಮಾಡಿರೋದು. ಆಂಜನೇಯ ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯ ಮಾಡೋ ಕೆಲಸವನ್ನು ಡಿಕೆಶಿ ಮಾಡಬೇಕು ಅಂತ ಟಾಂಗ್ ನೀಡಿದ್ರು.

]]>
1062721 0 0 0
<![CDATA[ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ]]> https://publictv.in/kannada-radha-kalyana-serial-actress-chaitra-rai-joined-ntr30/ Wed, 03 May 2023 11:46:11 +0000 https://publictv.in/?p=1062722 'ಆರ್‌ಆರ್‌ಆರ್' (RRR) ಸೂಪರ್ ಸಕ್ಸಸ್ ನಂತರ 'ಎನ್‌ಟಿಆರ್ 30' ಚಿತ್ರದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ (Jr.ntr)  ಸಿನಿಮಾ ತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಾರಕ್ ಟೀಮ್‌ಗೆ ಬಾಲಿವುಡ್ (Bollywood) ಸ್ಟಾರ್ ಸೈಫ್ ಅಲಿ ಖಾನ್ (Saif Ali Khan) ಸೇರಿದ ಬಳಿಕ ಕನ್ನಡ ಕಿರುತೆರೆ ನಟಿಗೆ ಬಂಪರ್ ಆಫರ್ ಸಿಕ್ಕಿದೆ.

ಕೊರಟಾಲ ಶಿವ ನಿರ್ದೇಶನದ 'ಎನ್‌ಟಿಆರ್ 30' ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದೆ. ತಾರಕ್- ಜಾನ್ವಿ ಕಪೂರ್ (Janhavi Kapoor)  ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಬಿಟೌನ್ ಸೂಪರ್ ಹೀರೋ ಸೈಫ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್

ತೆಲುಗಿನ ಈ ಸಿನಿಮಾ ಸೈಫ್ ಅಲಿ ಖಾನ್ ಪತ್ನಿ ಪಾತ್ರದಲ್ಲಿ ನಟಿಸಲು ಕರಾವಳಿ ನಟಿ ಚೈತ್ರಾ ರೈ (Chaithra Rai) ಅವರಿಗೆ ಚಾನ್ಸ್ ಸಿಕ್ಕಿದೆ. ಕನ್ನಡದ ರಾಧಾ ಕಲ್ಯಾಣ (Radha Kalyana) ಸೇರಿದಂತೆ ಹಲವು ಸೀರಿಯಲ್- ಸಿನಿಮಾಗಳಲ್ಲಿ ನಟಿಸಿದ್ದ ಚೈತ್ರಾ ಸೈಫ್‌ಗೆ ಪತ್ನಿಯಾಗಿ ಕಾಣಿಸಿಕೊಳ್ತಿದ್ದಾರೆ. ಚೈತ್ರಾ ರೈ ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕನ್ನಡ- ತೆಲುಗು ಸೀರಿಯಲ್‌ನಲ್ಲಿ ಚೈತ್ರಾ ಆಕ್ಟೀವ್ ಆಗಿದ್ದಾರೆ. ಸದ್ಯ ತೆಲುಗಿನ 'ರಾಧಕು ನೀವರೆ ಪ್ರಣಾಮ್' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

]]>
1062722 0 0 0
<![CDATA[12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ - ಸೈಬರ್ ಕಿರಾತಕರು ಅಂದರ್]]> https://publictv.in/class-12-passout-making-5-crore-a-day-from-cyber-scams-arrested/ Wed, 03 May 2023 11:42:54 +0000 https://publictv.in/?p=1062724 ಮುಂಬೈ: ಪೊಲೀಸರಂತೆ ನಟಿಸಿ ದಿನವೊಂದಕ್ಕೆ 5 ರಿಂದ 10 ಕೋಟಿ ರೂ. ದೋಚುತ್ತಿದ್ದ ಸೈಬರ್ ಕ್ರೈಮ್ ಜಾಲವನ್ನು(Cybercriminals) ಮುಂಬೈ (Mumbai) ಪೊಲೀಸರು ಬಯಲಿಗೆಳೆದಿದ್ದಾರೆ.

12ನೇ ತರಗತಿ ಓದಿ, ಉತ್ತಮ ತಾಂತ್ರಿಕ ಜ್ಞಾನ  (Technical Knowledge) ಹೊಂದಿದ್ದ ಮಾಸ್ಟರ್ ಮೈಂಡ್ (Mastermind) ಶ್ರೀನಿವಾಸ್ ರಾವ್ ದಾಡಿ (49) ಎಂಬಾತನನ್ನು ಬಂಗೂರ್ ನಗರ ಪೊಲೀಸ್ ಠಾಣೆಯ ತಂಡವು ಹೈದರಾಬಾದ್‍ನ ಹೋಟೆಲ್‍ನಲ್ಲಿ ಬಂಧಿಸಿದೆ. ಅಲ್ಲದೆ ಆತನ ಗ್ಯಾಂಗ್ ಸದಸ್ಯರಾದ ಥಾಣೆಯ ಇಬ್ಬರು ಮತ್ತು ಕೋಲ್ಕತ್ತಾದ (Kolkata) ನಾಲ್ವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

ಆರೋಪಿಗಳು ದಾಡಿ ಹೆಸರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದರು. ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು. ಅಲ್ಲದೆ ಎನಿಡೆಸ್ಕ್ ಅಪ್ಲಿಕೇಷನ್‍ಗಳನ್ನು ಸಹ ಬಳಸಿದ್ದರು. ಅವರು ಬಳಸಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಬಂಧಿತರಿಂದ 1.5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಜನರನ್ನು ಸಂಪರ್ಕಿಸಿ ಕೋರಿಯರ್ ಮೂಲಕ ತಮ್ಮ ರಿಯಲ್ ಎಸ್ಟೇಟ್ ಕಛೇರಿಗೆ ದಾಖಲೆಗಳನ್ನು ಕಳಿಸುವಂತೆ ಹೇಳುತ್ತಿದ್ದರು. ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಇವರು ಟಾರ್ಗೆಟ್ ಮಾಡುತ್ತಿದ್ದರು. ಅಲ್ಲದೆ ತಮಗೆ ಕಳುಹಿಸಿದ ಕೊರಿಯರ್‍ನಲ್ಲಿ ಪೊಲೀಸರು ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೆದರಿಸುತ್ತಿದ್ದರು. ಭಯಭೀತರಾದವರಿಂದ ಬ್ಯಾಂಕ್ ಅಥವಾ ಆದಾಯ ತೆರಿಗೆ (Income Tax) ಸಂಬಂಧಿತ ವಿವರಗಳನ್ನು ಪಡೆದು ಖಾತೆಯಲ್ಲಿದ್ದ ಹಣ ಕದಿಯುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.

ದರೋಡೆಕೋರರು ಕದ್ದ ಎಲ್ಲಾ ಹಣ ಶ್ರೀನಿವಾಸ್ ರಾವ್ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಸೇರುತ್ತಿತ್ತು. ನಂತರ ಆತ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ (Cryptocurrency) ಪರಿವರ್ತಿಸಿ ಚೀನಾದ ಪ್ರಜೆಗೆ ವರ್ಗಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ, ನಗರ ಪೊಲೀಸ್ ತಂಡಗಳು ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಜಾಖರ್ಂಡ್, ಹರಿಯಾಣ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗ್ಯಾಂಗ್‍ನ ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

]]>
1062724 0 0 0
<![CDATA[ಪುಷ್ಪ 2 ಆಡಿಯೋ ಹಕ್ಕು ಬರೋಬ್ಬರಿ 65 ಕೋಟಿಗೆ ಸೇಲ್]]> https://publictv.in/pushpa-2-audio-rights-sold-for-rs-65-crore/ Wed, 03 May 2023 11:44:05 +0000 https://publictv.in/?p=1062726 ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

ಈಗಾಗಲೇ ಪುಷ್ಪ 2 ಸಿನಿಮಾದ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಚಿತ್ರದ ನಿರ್ಮಾಪಕರ ಹಾಗೂ ನಿರ್ದೇಶಕರ ಮನೆ, ಕಚೇರಿ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದ ಬೆನ್ನಲ್ಲೇ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಇನ್ನೇನು ಸದ್ಯದಲ್ಲೇ ಮುಂದಿನ ಹಂತದ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅಲ್ಲು ಅಭಿಮಾನಿಗಳಿಗೆ ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದ್ದು ಸಂಭ್ರಮ ತಂದಿದೆ.

]]>
1062726 0 0 0
<![CDATA[ದ್ವಿಚಕ್ರ ವಾಹನ ಸವಾರನಿಗೆ ಸೀಟ್ ಬೆಲ್ಟ್ ಹಾಕಿಲ್ಲ ಅಂತ ದಂಡ!]]> https://publictv.in/2-wheeler-owner-receives-challan-of-rs-1000-for-not-wearing-seatbelt-in-bihar/ Wed, 03 May 2023 11:45:59 +0000 https://publictv.in/?p=1062746 ಪಾಟ್ನಾ: ದ್ವಿಚಕ್ರ ವಾಹನ (2-Wheeler) ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ನಿಯಮವನ್ನು (Traffic Violation) ಪಾಲಿಸದ್ದಕ್ಕೆ ಪೊಲೀಸರು ಚಲನ್‍ನನ್ನು ಕಳುಹಿಸಿದ ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೇ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಚಲನ್ (Challan) ಬರುವುದು ಸಾಮಾನ್ಯ. ಆದರೆ ಬಿಹಾರದ ಸಮತಿಪುರದಲ್ಲಿ ಬೈಕ್ ಸವಾರ ಕೃಷ್ಣಕುಮಾರ್ ಝಾ ಎಂಬಾತನಿಗೆ ಚಲನ್ ಬಂದಿದೆ. ಕೃಷ್ಣಕುಮಾರ್ ಝಾ ಎಂಬಾತ ಸ್ಕೂಟಿಯಲ್ಲಿ ಬನಾರಸ್‌ಗೆ ಹೋಗುತ್ತಿದ್ದರು. ಈ ವೇಳೆ ಅವರ ಮೊಬೈಲ್‍ಗೆ 1,000 ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎನ್ನುವುದರ ಕುರಿತು ಚಲನ್ ಬಂದಿದೆ. ಆ ಚಲನ್‍ನಲ್ಲಿ 2020ರ ಅಕ್ಟೋಬರ್‌ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಉಲ್ಲೇಖಿಸಲಾಗಿದೆ.

ಇದನ್ನು ನೋಡಿದ ಕೃಷ್ಣಕುಮಾರ್ ಒಮ್ಮೆಲೇ ಶಾಕ್ ಆಗಿದ್ದಾರೆ. ಬೈಕ್‍ನಲ್ಲಿ ಹೋಗಿರುವುದಕ್ಕೆ ಸೀಟ್ ಬೇಲ್ಟ್ ಯಾಕೆ ಧರಿಸಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೊಲೀಸರು ತಾಂತ್ರಿಕ ದೋಷದಿಂದಾಗಿ ಕೆಲವೊಮ್ಮೆ ಈ ರೀತಿಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

ಕೃಷ್ಣಕುಮಾರ್ ಝಾ ಸ್ವೀಕರಿಸಿದ ಚಲನ್ ಅನ್ನು ಮ್ಯಾನುವಲ್‌ನಿಂದ ನೀಡಲಾಗಿದೆ. ಈಗ, ನಾವು ಇವೆಲ್ಲವನ್ನೂ ಇ-ಚಲನ್‍ಗಳಾಗಿ ಮುಚ್ಚಿಡುವ ಪ್ರಕ್ರಿಯೆಯಲ್ಲಿದ್ದೇವೆ. ದೋಷ ಎಲ್ಲಿ ಸಂಭವಿಸಿದೆ ಎಂದು ನಾನು ಪರಿಶೀಲಿಸುತ್ತೇನೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

]]>
1062746 0 0 0
<![CDATA[ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ - ಸುಮಲತಾ ಗೆಲುವಿಗೆ ಸಿದ್ದು ಪಶ್ಚಾತಾಪ]]> https://publictv.in/siddaramaiah-election-campaign-at-mandya/ Wed, 03 May 2023 11:49:02 +0000 https://publictv.in/?p=1062763 - ಅಚ್ಚೇದಿನ್‌ ಬಂತೇನ್ರಪ್ಪ - ಸಿದ್ದು ಪಂಚ್

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ (JDS) ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ, ಆದ್ರೆ ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ ಈವಾಗ ನನಗೆ ಅನಿಸ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಸುಮಲತಾ (Sumalatha Ambareesh) ಗೆಲುವಿಗೆ ಪಶ್ಚಾತಾಪ ಸೂಚಿಸಿದ್ದಾರೆ.

ಮಂಡ್ಯದ (Mandya) ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಚುನಾವಣಾ ಪ್ರಚಾರ (Election Campaign) ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಚಲುವರಾಯಸ್ವಾಮಿ, ನರೇಂದ್ರ ಎಲ್ಲರಿಗೂ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಆದ್ರೆ ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ, ನನಗೆ ಈಗ ಅನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ

ಮುಂದವರಿದು, ಬಿಜೆಪಿ ಸರ್ಕಾರ (BJP Government) ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಬೀದಿ ಬೀದಿಯಲ್ಲಿ ಭ್ರಷ್ಟಚಾರದ ವಿಚಾರ ಚರ್ಚೆಯಾಗ್ತಿದೆ. ವಿಧಾನಸೌಧದ ಪ್ರತಿಗೋಡೆಗಳೂ ದುಡ್ಡು ದುಡ್ಡು ಅನ್ನುತ್ತಿವೆ. ಇಂತಹ 40 ಪರ್ಸೆಂಟ್ ಸರ್ಕಾರ ಇರಬೇಕಾ? ಮೋದಿ ಅಚ್ಚೇದಿನ್ ಆಯೇಗಾ ಅಂತಾರಲ್ಲ, ನಿಮಗೇನಾದ್ರು ಅಚ್ಚೇದಿನ್‌ ಬಂತೇನ್ರಪ್ಪ.? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್‌ ಪಾಲಕರು

ನಾಗಮಂಗಲ ಜನತೆ ತುಂಬಾ ಸಜ್ಜನರಿದ್ದಾರೆ. ನಿಮ್ಮ ಉತ್ಸಾಹ ನೋಡಿದ್ರೆ ನಮ್ಮ ಅಭ್ಯರ್ಥಿ ಚಲುವರಾಯಸ್ವಾಮಿ ಗೆಲ್ಲೋದು ಸೂರ್ಯ ಚಂದ್ರರಷ್ಟೇ ಸತ್ಯ ಅನ್ನಿಸುತ್ತಿದೆ. ಅವರು ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಕೂಡ ಒಬ್ಬರು. ಚೆಲುವರಾಯಸ್ವಾಮಿಗೆ ನಾಯಕತ್ವದ ಗುಣ ಇದೆ. ಅಂತಹವರನ್ನ ನೀವು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದ್ದಾರೆ.

ಅತಂತ್ರ ಬರಲಿ ಅಂತಾ ಕಾಯ್ತಿದ್ದಾರೆ: ಇದೇ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಜೆಡಿಎಸ್‌ನವರು ಅವಕಾಶವಾದಿಗಳು. ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ. ಯಾವುದೇ ಪೂರ್ಣ ಪ್ರಮಾಣದ ಸರ್ಕಾರ ಬರದಿರಲಿ ಅಂತಾ ನಿತ್ಯವೂ ಹೋಮ, ಹವನ, ಪೂಜೆ ಮಾಡ್ತಿದ್ದಾರೆ. ಎರಡೂ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬರಲಿ ಅಂತಾ ಪೂಜೆ ಮಾಡಿಸ್ತಿದ್ದಾರೆ. ಅವಕಾಶ ಸಿಕ್ಕರೇ ಕಾಂಗ್ರೆಸ್ ಜೊತೆಯಾದ್ರೂ ಹೋಗ್ತಾರೆ, ಬಿಜೆಪಿ ಜೊತೆಯಾದ್ರೂ ಹೋಗ್ತಾರೆ. ಈ ಬಾರಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಬೀಗಿದ್ದಾರೆ.

]]>
1062763 0 0 0
<![CDATA[ಸ್ನೇಹಿತನ ಮದುವೆಯಲ್ಲಿ ಮಿಂಚಿದ ನಟ ಯಶ್- ರಾಧಿಕಾ ಪಂಡಿತ್]]> https://publictv.in/kgf-2-star-yash-radhika-pandit-at-friends-marriage/ Wed, 03 May 2023 12:12:27 +0000 https://publictv.in/?p=1062786 ಸ್ಯಾಂಡಲ್‌ವುಡ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಜೋಡಿ ಇದೀಗ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ಸ್ನೇಹಿತನ ಮದುವೆಯಲ್ಲಿ (Wedding) ರಾಕಿಭಾಯ್ ಯಶ್- ರಾಧಿಕಾ ಪಾಲ್ಗೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.

'ಕೆಜಿಎಫ್ 2' (KGF2) ಸಕ್ಸಸ್ ನಂತರ ಹೊಸ ಸಿನಿಮಾ ತಯಾರಿಯಲ್ಲಿ ಯಶ್ (Yash) ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಶ್ರೀಲಂಕಾದಲ್ಲಿ ಕೆಲವು ದಿನಗಳ ಕಾಲ ಬೀಡು ಬಿಟ್ಟಿದ್ದರು. ಈಗ ಕೊಂಚ ಕೆಲಸಕ್ಕೆ ಬ್ರೇಕ್ ಹಾಕಿ ಸ್ನೇಹಿತನ ಮದುವೆಯಲ್ಲಿ ಪತ್ನಿ ರಾಧಿಕಾ ಜೊತೆ ಯಶ್ ಮಿಂಚಿದ್ದಾರೆ. ಮದುವೆ ಮನೆಯಲ್ಲಿ ಯಶ್-ರಾಧಿಕಾಗೆ ಗ್ರ್ಯಾಂಡ್‌ ವೆಲ್‌ಕಮ್ ಕೂಡ ಮಾಡಲಾಗಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

ನವಜೋಡಿಗೆ ಮನಸಾರೆ ಶುಭಹಾರೈಸಿ ಕುಶಲೋಪರಿ ವಿಚಾರಿಸಿ ಬಂದಿದ್ದಾರೆ. ಸ್ನೇಹಿತನ ಮದುವೆ ಸಂಭ್ರಮದಲ್ಲಿ ಅದ್ಭುತವಾಗಿ ಎಂಟ್ರಿ ಕೊಟ್ಟಿದ್ದಾರೆ. ಯಶ್ ನೇರಳೆ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ಗ್ರೇ ಬಣ್ಣದ ಸೀರೆಯಲ್ಲಿ ರಾಧಿಕಾ ಪಂಡಿತ್ ಕಂಗೊಳಿಸಿದ್ದಾರೆ.

'ಕೆಜಿಎಫ್ 2' ಸಿನಿಮಾ ನಂತರ ಕೆಜಿಎಫ್ ಪಾರ್ಟ್ 3ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಹೊಂಬಾಳೆ ಸಂಸ್ಥೆ ಈ ಬಗ್ಗೆ ಅನೌನ್ಸ್‌ ಕೂಡ ಮಾಡಿತ್ತು.

]]>
1062786 0 0 0
<![CDATA[ಮೇ 4ರಂದು ರಮ್ಯಾ, ಶಿವಣ್ಣ, ದುನಿಯಾ ವಿಜಯ್‌ರಿಂದ ವರುಣಾದಲ್ಲಿ ಸಿದ್ದು ಪರ ಪ್ರಚಾರ]]> https://publictv.in/may-4th-actor-ramya-shivrajkumar-and-duniya-vijay-election-campaign-at-varuna-constituency/ Wed, 03 May 2023 12:20:09 +0000 https://publictv.in/?p=1062793 ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪರವಾಗಿ ಗುರುವಾರ (ಮೇ 4) ರಂದು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮೋಹಕ ತಾರೆ ರಮ್ಯಾ (Ramya), ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shivarajkumar) ಹಾಗೂ ನಟ ದುನಿಯಾ ವಿಜಯ್ (Duniya Vijay) ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಬೆಳಿಗ್ಗೆಯಿಂದ ಸಂಜೆವರೆಗೆ ವರುಣಾ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಸ್ಯಾಂಡಲ್‌ವುಡ್ ನಟರು ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಲಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ವಿಧಾನಸಭಾ ಚುನಾವಣೆಗೆ ದಿನಗಣನೆ ಬಾಕಿಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೆಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಅವರು ವರುಣಾದಲ್ಲಿ ಎರಡು ದಿನ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ – ಸುಮಲತಾ ಗೆಲುವಿಗೆ ಸಿದ್ದು ಪಶ್ಚಾತಾಪ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್ ಹಾಗೂ ನಟ ದುನಿಯಾ ವಿಜಯ್ ಸಿದ್ದರಾಮಯ್ಯ ಅವರ ಪರ ಪ್ರಚಾರಕ್ಕಿಳಿಯುತ್ತಿದ್ದಾರೆ. ಈಗಾಗಲೇ ಕೆಲವು ದಿನಗಳಿಂದ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಕೌಂಟರ್‌ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನ ಕಣಕ್ಕಿಳಿಸುತ್ತಿದೆ.

]]>
1062793 0 0 0
<![CDATA[ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ]]> https://publictv.in/hd-devegowda-said-there-is-no-other-cm-like-hd-kumaraswamy/ Wed, 03 May 2023 12:26:33 +0000 https://publictv.in/?p=1062796 ರಾಮನಗರ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತಹ (HD Kumaraswamy) ಮತ್ತೊಬ್ಬ ಮುಖ್ಯಮಂತ್ರಿಯಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD Devegowda) ತಿಳಿಸಿದರು.

ಚನ್ನಪಟ್ಟಣದ ಶೇರು ಸರ್ಕಲ್ ಬಳಿ ಬಹಿರಂಗ ಸಭೆ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡುತ್ತೇನೆ ಎಂದು ಹೇಳುವ ವ್ಯಕ್ತಿ ಇದ್ರೆ ಅದು ಕುಮಾರಸ್ವಾಮಿ. ನುಡಿದಂತೆ ನಡೆಯುವ ರಾಜಕಾರಣಿ ಯಾವನಾದ್ರು ಇದ್ದರೇ ಅವರೇ ಕುಮಾರಸ್ವಾಮಿಯಾಗಿದ್ದಾರೆ. ಕಾಂಗ್ರೆಸ್‌ನವರ (Congress) ವ್ಯಂಗ್ಯದ ನಡುವೆ ಸಾಲ‌ ಮನ್ನಾ ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗುತ್ತಾರೆ ಎಂದು ಹೇಳಿದರು.

ಹಿಂದೂಸ್ತಾನದಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ರೆ ಕುಮಾರಸ್ವಾಮಿ. ಸಿದ್ದರಾಮಯ್ಯ 50 ಸಾವಿರ ಸಾಲ‌ ಮನ್ನಾ ಮಾಡಿದ್ದರೂ 3,500 ಕೋಟಿ ರೂ. ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಹೆಚ್‌ಡಿಕೆ. ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್ (Congress) ಬಿಜೆಪಿಯವ್ರು (BJP) ನನ್ನ ಮುಂದೆ ನಿಂತು ಹೇಳಲಿ, ‌ಇದು ನನ್ನ ಸವಾಲು. ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದ್ರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದರು.

ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ. ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ ಎಂದ ಹೆಚ್‌ಡಿಡಿ, ಕುಮಾರಸ್ವಾಮಿ ಇಡೀ ರಾಜ್ಯ ಸುತ್ತಬೇಕು ಅವರು ಬರಲು ಸಾಧ್ಯವಿಲ್ಲ ಎಂದರು. ದ್ವಿಚಕ್ರ ವಾಹನ ಸವಾರನಿಗೆ ಸೀಟ್ ಬೆಲ್ಟ್ ಹಾಕಿಲ್ಲ ಅಂತ ದಂಡ!

]]>
1062796 0 0 0
<![CDATA[ಭಾರೀ ಮೊತ್ತಕ್ಕೆ ಸೇಲ್ ಆದ ಸೂರ್ಯ ನಟನೆಯ ‘ಕಂಗುವ’ ಸಿನಿಮಾ]]> https://publictv.in/surya-starrer-kanguwa-movie-sold-for-a-huge-amount/ Wed, 03 May 2023 12:26:30 +0000 https://publictv.in/?p=1062799 ಮಿಳಿನ ಖ್ಯಾತ ನಟ ಸೂರ್ಯ (Surya) ನಟನೆಯ ‘ಕಂಗುವ’ (Kanguva) ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಆರಂಭಿಸಿದೆ. ಮೊನ್ನೆಯಷ್ಟೇ ಚಿತ್ರದ ಶೀರ್ಷಿಕೆಯನ್ನು ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು ಚಿತ್ರತಂಡ. ಇದೀಗ  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ (OTT) ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ.  ಈ ಮಾಹಿತಿಯನ್ನು ಚಿತ್ರತಂಡವೇ ಬಹಿರಂಗ ಪಡಿಸಿದೆ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ (Shiva) ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ (Disha Pathani) ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಕಂಗುವ’ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿ ಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ.  ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆ ಚಿತ್ರಕ್ಕೆ ಶೇ. 50ರಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಬೇಗ ಮುಗಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.

]]>
1062799 0 0 0
<![CDATA[ರುವಾಂಡದಲ್ಲಿ ಭೀಕರ ಪ್ರವಾಹ - 109 ಮಂದಿ ಬಲಿ]]> https://publictv.in/over-100-killed-in-flash-floods-in-rwanda-report/ Wed, 03 May 2023 12:33:17 +0000 https://publictv.in/?p=1062800 ಕಿಗಾಲಿ/ರುವಾಂಡಾ: ಉತ್ತರ ಮತ್ತು ಪಶ್ಚಿಮ ರುವಾಂಡಾದಲ್ಲಿ (Rwanda) ಪ್ರವಾಹಕ್ಕೆ (Flood) ಕನಿಷ್ಠ 109 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ರಾತ್ರಿ ಬಿದ್ದ ಮಳೆಯು ದೇಶದ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಪ್ರವಾಹವನ್ನುಂಟುಮಾಡಿದೆ. ಅತಿ ಹೆಚ್ಚು ಹಾನಿಗೊಳಗಾದ ಪಶ್ಚಿಮ ಪ್ರಾಂತ್ಯದಲ್ಲಿ 95 ಜನ ಮತ್ತು ಉತ್ತರ ಪ್ರಾಂತ್ಯದಲ್ಲಿ (Northern Province) 14 ಜನರು ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿಹೋಗಿವೆ. ರಸ್ತೆಗಳು ಸಂಪೂರ್ಣ ಬಂದ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಬಿಯಾದ ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ – 8 ಮಕ್ಕಳ ಸಾವು

ಪ್ರವಾಹದಿಂದ ಕಂಗಾಲಾಗಿರುವ ಜನರ ರಕ್ಷಣಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಜನರಿಗೆ ಸೂಕ್ತ ಆಹಾರ ಹಾಗೂ ಔಷಧಗಳನ್ನು ಸರಬರಾಜು ಮಾಡಲಾಗುತ್ತಿದೆ. ಮೃತಪಟ್ಟವರನ್ನು ಹೂಳಲು ಕ್ರಮಕೈಗೊಳ್ಳಲಾಗಿದೆ ಎಂದು ತುರ್ತು ನಿರ್ವಹಣೆಯ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಮೇ 2020 ರಲ್ಲಿ ಪೂರ್ವ ಆಫ್ರಿಕಾದಲ್ಲಿ (Africa) ಸುರಿದಿದ್ದ ಭಾರೀ ಮಳೆಯಿಂದಾಗಿ ರುವಾಂಡಾದಲ್ಲಿ ಕನಿಷ್ಠ 65 ಜನರು ಸಾವನ್ನಪ್ಪಿದ್ದರು. ಅಲ್ಲದೆ ಕೀನ್ಯಾದಲ್ಲಿ (Kenya) ಕನಿಷ್ಠ 194 ಸಾವುಗಳಿಗೆ ಇದು ಕಾರಣವಾಗಿತ್ತು. ಇದನ್ನೂ ಓದಿ: 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

]]>
1062800 0 0 0
<![CDATA[ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂ 1]]> https://publictv.in/samantha-is-number-1-in-the-list-of-popular-celebrities/ Wed, 03 May 2023 12:43:20 +0000 https://publictv.in/?p=1062810 ಪುಷ್ಪ ಸಿನಿಮಾದ ನಂತರ ಸಮಂತಾ ರುತ್ ಪ್ರಭು (Samantha) ಅಷ್ಟೇನೂ ಹೇಳಿಕೊಳ್ಳುವಂತಹ ಸಿನಿಮಾ ಕೊಟ್ಟಿಲ್ಲ. ಮಾಡಿರುವ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲಲು ತಿಣುಕಾಡಿವೆ. ಆದರೂ, ಭಾರತದ ಜನಪ್ರಿಯ ಸೆಲೆಬ್ರಿಟಿಗಳ (Celebrity) ಪಟ್ಟಿಯಲ್ಲಿ ಸಮಂತಾ ನಂಬರ್ 1 (Number 1) ಸ್ಥಾನವನ್ನು ಅಲಂಕರಿಸಿದ್ದಾರೆ.  ಸದಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮುಖಾಮುಖಿ ಆಗುವ ಸಮಂತಾ, ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಅಪ್ ಡೇಟ್ ನೀಡಿದ್ದರು.

ಐಎಂಡಿಬಿ (IMDb) ಪ್ರಕಟಿಸಿರುವ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವುದಕ್ಕೆ ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿ ಆಗಿದೆ. ಅನೇಕರು ಸಮಂತಾಗೆ ಶುಭ ಹಾರೈಸಿದ್ದಾರೆ. ಇನ್ನೂ ಎತ್ತರಕ್ಕೆ ನೀವು ಬೆಳೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲ ನೋವಿನಿಂದಲೂ ಬೇಗ ಆಚೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

ಸದ್ಯ ಸಮಂತಾ ಸಿಟಾಡೆಲ್ (Citadel) ವೆಬ್ ಸೀರಿಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು. ಅಲ್ಲದೇ, ಐಸ್ ಬಾತ್ ಥಿರೇಪಿಗೂ ಅವರು ಒಳಗಾಗಿದ್ದರು. ಆ ಅನುಭವನ್ನು ನಿನ್ನೆಯಷ್ಟೇ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೇ, ಅದೊಂದು ಯಮಯಾತನೆಯ ನೋವು ಎಂದು ಹೇಳಿದ್ದರು.

ಸಮಂತಾ ವೈಯಕ್ತಿಕ ಕಾರಣಗಳಿಂದಾಗಿ ಹಲವು ಬಾರಿ ಸುದ್ದಿ ಆಗಿದ್ದಾರೆ. ಅಲ್ಲದೇ, ನಿರ್ಮಾಪಕ ಚಿಟ್ಟಿಬಾಬು ಕೂಡ ಸಮಂತಾ ಅವರ ಮೇಲೆ ನಿರಂತರವಾಗಿ ಮಾತಿನ ದಾಳಿ ಮಾಡಿದ್ದರು. ಅದಕ್ಕೂ ಸೌಮ್ಯ ರೀತಿಯಲ್ಲಿ ಸಮಂತಾ ಉತ್ತರ ನೀಡಿದ್ದರು.

]]>
1062810 0 0 0
<![CDATA[ಅನ್ನ ಜಾಸ್ತಿ ತಿಂದ್ರೆ ಸಕ್ಕರೆ ಕಾಯಿಲೆ ಹೆಚ್ಚಾಗುತ್ತೆ : ಕಾಂಗ್ರೆಸ್‌ನ ಅನ್ನಭಾಗ್ಯಕ್ಕೆ ಸುಧಾಕರ್‌ ಕೌಂಟರ್‌]]> https://publictv.in/karnataka-election-2023-sudhakar-reacts-about-bjp-election-manifesto/ Wed, 03 May 2023 13:24:42 +0000 https://publictv.in/?p=1062816 - ಪ್ರಣಾಳಿಕೆ ನಮಗೆ ಭಗವದ್ಗೀತೆ ಇದ್ದಂತೆ, ಸುಳ್ಳು ಹೇಳುವುದಿಲ್ಲ

ಚಿಕ್ಕಬಳ್ಳಾಪುರ: ಹೆಚ್ಚು ಅನ್ನ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚಾಗುತ್ತದೆ. ಇದರಿಂದಾಗಿ ಆರೋಗ್ಯಯುಕ್ತ ಆಹಾರ ನೀಡುವುದೇ ಬಿಜೆಪಿ (BJP) ಗುರಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ (K Sudhakar) ತಿಳಿಸಿದರು.

ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, ಪ್ರತಿ ಮನೆಗೆ ಪ್ರತಿದಿನ ಅರ್ಧ ಲೀಟರ್ ಹಾಲು ನೀಡಲಾಗುತ್ತದೆ. ಹೆಚ್ಚು ಅನ್ನ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚಾಗಲಿದೆ. ಆರೋಗ್ಯಯುಕ್ತ ಆಹಾರ ನೀಡುವುದು ಬಿಜೆಪಿ ಗುರಿಯಾಗಿದೆ. ಕಾಂಗ್ರೆಸ್ ನೀಡುವ 100 ರೂ. ಅಕ್ಕಿಗೆ ಬದಲಾಗಿ ಬಿಜೆಪಿ ತಿಂಗಳಿಗೆ 600 ರೂ. ಮೌಲ್ಯದ ಹಾಲು ನೀಡುತ್ತಿದೆ. ಇದೇ ರೀತಿ 60 ವರ್ಷದಿಂದ ಕಾಂಗ್ರೆಸ್ (Congress) ಜನರನ್ನು ಯಾಮಾರಿಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಗ್ಯಾರೆಂಟಿ ಇಲ್ಲದ ಸ್ಥಿತಿ ಇದೆ. ಇವರು ಗ್ಯಾರೆಂಟಿ ಕಾರ್ಡ್‌ ನೀಡುತ್ತಿದ್ದಾರೆ. 2013 ರಿಂದ 2018ರವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ರಿಪೋರ್ಟ್ ಕಾರ್ಡ್‌ ನೀಡಬೇಕಿತ್ತು. ಅಲ್ಲದೇ ಅವರ ಮೇಲೆ ಗ್ಯಾರೆಂಟಿ ಇಲ್ಲದ ಕಾರಣ 2018ರಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮುಂದಿನ ತಿಂಗಳಿನಿಂದಲೇ 5 ಕೆಜಿ ಅಕ್ಕಿಯೊಂದಿಗೆ, 5 ಕೆಜಿ ಸಿರಿ ಧಾನ್ಯ ನೀಡಿ ಎಲ್ಲರ ಆರೋಗ್ಯ ಕಾಪಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯನ್ನು ಭಗವದ್ಗೀತೆಯಷ್ಟೇ ಪವಿತ್ರಭಾವದಿಂದ ನೋಡಲಿದ್ದು, ಬದ್ಧತೆಯಿಂದ ಎಲ್ಲ ಭರವಸೆಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು. ಆದರೆ ಕಾಂಗ್ರೆಸ್ ನಿರಂತರವಾಗಿ ಯಾಮಾರಿಸುತ್ತಲೇ ಬಂದಿದೆ. ಈ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯ ಎಲ್ಲ ಮಹಿಳೆಯರ ಖಾತೆಯಲ್ಲಿ 10 ಸಾವಿರ ರೂ. ಎಫ್‌ಡಿ ಮಾಡಲಾಗುತ್ತದೆ. ಹಾಗಾಗಿ ಮತ್ತೊಮ್ಮೆ ಬಿಜೆಪಿಯನ್ನು ಆಶೀರ್ವಾದಿಸಬೇಕು ಎಂದರು. ಇದನ್ನೂ ಓದಿ:  ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು

ಬಿಪಿಎಲ್ ಕುಟುಂಬದಲ್ಲಿರುವ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಆರೋಗ್ಯಕ್ಕಾಗಿ ಪ್ರತಿ ವರ್ಷ 10 ಲಕ್ಷ ರೂ. ನೀಡಲಾಗುತ್ತದೆ. ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತದೆ. ಹಾಲಿನ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ 7 ರೂಗೆ ಹೆಚ್ಚಿಸಲಾಗುವುದು. ವಸತಿ ಯೋಜನೆಗಳಲ್ಲಿ ಪ್ರತಿ ಮನೆಗೆ 5 ಲಕ್ಷ ರೂ. ಅನುದಾನ ನೀಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರುವಾಂಡದಲ್ಲಿ ಭೀಕರ ಪ್ರವಾಹ – 109 ಮಂದಿ ಬಲಿ

]]>
1062816 0 0 0
<![CDATA[ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವಪರ್ಯಟನೆಗೆ ಮಂದಾದ ಪುತ್ತೂರಿನ ಯುವಕ]]> https://publictv.in/puttur-youth-trip-from-karnataka-to-london-by-road-in-scorpio-car/ Wed, 03 May 2023 13:22:56 +0000 https://publictv.in/?p=1062817 75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲಿರೋ ಮುಹಮ್ಮದ್

ಬೆಂಗಳೂರು: ಸ್ಕಾರ್ಪಿಯೋ ಕಾರಿನಲ್ಲೇ (Scorpio Car) ವಿಶ್ವಪರ್ಯಟನೆಗೆ ಪುತ್ತೂರಿನ (Puttur) ಯುವಕ ಮುಂದಾಗಿದ್ದಾರೆ. ಕರ್ನಾಟಕದಿಂದ ಲಂಡನ್‌ವರೆಗೂ (Karnataka To London) ಯುವಕ ವಿಶ್ವಪರ್ಯಟನೆ ಮಾಡಲಿದ್ದಾರೆ.

ಮುಹಮ್ಮದ್ ಸಿನಾನ್ ಎಂಬ ಯುವಕ ಹೊಸ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದು, ಬೈ ರೋಡ್ ಕಾರಿನಲ್ಲಿ 75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲು ನಿರ್ಧರಿಸಿದ್ದಾರೆ. ಇದೇ ತಿಂಗಳು 29 ರಿಂದ ಕರ್ನಾಟಕದಿಂದ ಲಂಡನ್‌ವರೆಗೂ ಪರ್ಯಟನೆ ಆರಂಭ ಆಗಲಿದೆ. ಇದನ್ನೂ ಓದಿ: ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ

ಕನ್ನಡ ನಾಡಿನ ಆಚಾರ-ವಿಚಾರ, ಸಂಸ್ಕೃತಿ ಮತ್ತು ಹಿರಿಮೆಯನ್ನ ಸಾರುವ ಉದ್ದೇಶದಿಂದ ಈ ಸಂಚಾರ ಆರಂಭಿಸಲಾಗಿದೆಯಂತೆ. ಸುಮಾರು 2 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಿ.ಮೀ ವರೆಗೂ 75 ದೇಶಗಳನ್ನ ಸುತ್ತಲಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇರುವ ಕನ್ನಡಿಗರನ್ನ ಭೇಟಿ ಮಾಡಿ ಕನ್ನಡಿನ ಹಿರಿಮೆಯನ್ನ ಸಾರಲಿದ್ದಾರೆ. ಇದೇ ತಿಂಗಳ 29 ರಿಂದ‌ ಮಂಗಳೂರಿನ ಮೂಲಕ ದುಬೈ ತಲುಪಿ ಅಲ್ಲಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಸಂಚರಿಸಲಿದ್ದಾರೆ.

ಮುಹಮ್ಮದ್ ಸಿನಾನ್ ಇಂಟಿರಿಯರ್‌ ಡಿಸೈನರ್ ಆಗಿದ್ದು, ಯುಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದವರು ಈ ರೀತಿ ಕಾರಿನಲ್ಲಿ ವಿಶ್ವಪರ್ಯಟನೆ ಮಾಡುವುದನ್ನ ನೋಡಿ ತಾನೂ ಈ ನಿರ್ಧಾರ ಮಾಡಿದ್ದರಂತೆ. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ

2018 ರಲ್ಲೇ ವಿಶ್ವಪರ್ಯಟನೆಗೆ ಪ್ಲ್ಯಾನ್ ಮಾಡಿದ್ದೆ. ಆದರೆ ಕೊರೊನಾದಿಂದ ಸಾಧ್ಯ ಆಗಿರಲಿಲ್ಲ.‌ ಈಗ ಸಾಧ್ಯ ಆಗಿದ್ದು, ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮವನ್ನ ಉತ್ತೇಜನ ಮಾಡೋದು ನನ್ನ ಉದ್ದೇಶ ಆಗಿದೆ‌. ಇದಕ್ಕೆ 1 ಕೋಟಿ ಖರ್ಚಾಗಲಿದೆ ಎಂದು ಮುಹಮ್ಮದ್‌ ತಿಳಿಸಿದ್ದಾರೆ.

]]>
1062817 0 0 0
<![CDATA[ಅಕ್ರಮ ಆಸ್ತಿ ಸಂಪಾದನೆ - ಕೇಂದ್ರದ ಮಾಜಿ ನೌಕರ ಅರೆಸ್ಟ್‌]]> https://publictv.in/cbi-arrests-former-cmd-of-wapcos-rajinder-kumar-gupta-for-alleged-possession-of-disproportionate-assets/ Wed, 03 May 2023 13:42:48 +0000 https://publictv.in/?p=1062830 ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾಜಿ ನೌಕರ ಹಾಗೂ ಅವರ ಪುತ್ರನನ್ನು ಸಿಬಿಐ (CBI) ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕ ವಲಯದ ನೀರು ಮತ್ತು ವಿದ್ಯುತ್ ಸಲಹಾ ಸೇವೆ (WAPCOS) ಲಿಮಿಟೆಡ್‍ನ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಗುಪ್ತಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಅವರಿಗೆ ಸೇರಿದ ವಿವಿಧ ರಾಜ್ಯಗಳ 19 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ 38.38 ಕೋಟಿ ರೂ. ನಗದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಿಂದರ್ ಕುಮಾರ್ ಗುಪ್ತಾ ಮತ್ತು ಅವರ ಪುತ್ರ ಗೌರವ್ ಸಿಂಗಲ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಇದನ್ನೂ ಓದಿ: 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

ಇತ್ತೀಚೆಗಷ್ಟೇ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಗುಪ್ತಾ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇದಾದ ಬಳಿಕ ದಾಳಿ ನಡೆಸಿದ ಅಧಿಕಾರಿಗಳು ನಗದು ಸೇರಿದಂತೆ ಹಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು. ಮಾಜಿ ನೌಕರ ಕೇಂದ್ರ ಜಲಶಕ್ತಿ ಸಚಿವಾಲಯದ (Ministry of Jal Shakti) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

]]>
1062830 0 0 0
<![CDATA[Russia-Ukraine War: ಡ್ರೋನ್‌ ಅಟ್ಯಾಕ್‌ - ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌]]> https://publictv.in/ukraine-attempted-putin-assassination-2-drones-shot-down-russia-claims/ Wed, 03 May 2023 13:51:13 +0000 https://publictv.in/?p=1062832 ಮಾಸ್ಕೋ/ಕೀವ್‌: ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ (Russia-Ukraine Wa) ನಡೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ದಾಳಿ-ಪ್ರತಿದಾಳಿ ನಡೆಸುತ್ತಲೇ ಇವೆ. ಈ ರಾಷ್ಟ್ರಗಳ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ.

ಉಕ್ರೇನ್‌ ಸಹ ರಷ್ಯಾಗೆ ತಿರುಗೇಟು ನೀಡಲು ಹಲವು ಬಾರಿ ಪ್ರಯತ್ನಿಸಿದೆ. ಈ ಬಾರಿ ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಯತ್ನಿಸಿದ್ದು, ಪುಟಿನ್‌ ನಿವಾಸದ ಮೇಲೆ ಎರಡು ಡ್ರೋನ್‌ ದಾಳಿ ಮೂಲಕ ಹತ್ಯೆಗೆ ಯತ್ನಿಸಿದೆ. ಆದ್ರೆ ಭದ್ರತಾಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಪುಟಿನ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾಪಡೆಗಳು ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದ್ದು, ಈ ದಾಳಿ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ದೂರಿದೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ

ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್ ನಿವಾಸದ ಮೇಲೆ ಎರಡು ಶಸ್ತ್ರಾಸ್ತ್ರ ತುಂಬಿದ ಡ್ರೋನ್‌ಗಳಿಂದ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಪುಟಿನ್‌ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ. ಉಕ್ರೇನ್‌ನಿಂದ ಈ ದಾಳಿ ನಡೆದಿದೆ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

ಮೇ 9 ರಂದು ರಷ್ಯಾ ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ್‌ ಹಾಕಲು ಈ ದಾಳಿ ನಡೆದಿದೆ. ಖಂಡಿತವಾಗಿಯೂ ಇದಕ್ಕೆ ಪ್ರತಿದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 5 ಮಕ್ಕಳು ಸೇರಿ 26 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿಯಾಗಿ ಉಕ್ರೇನ್‌ ಸಾಳಿ ನಡೆಸಿದೆ ಎಂಬ ಆರೋಪಗಳೂ ಕೇಳಿಬಂದಿವೆ.

]]>
1062832 0 0 0
<![CDATA[ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್]]> https://publictv.in/karthik-jayaram-engaged-with-fashion-designer-aparna-samantha/ Wed, 03 May 2023 14:04:29 +0000 https://publictv.in/?p=1062838 ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್ (Karthik Jayram) ಅಲಿಯಾಸ್ ಜೆಕೆ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹುಟ್ಟುಹಬ್ಬದ ದಿನವೇ ಜೆಕೆ(Jk) ಎಂಗೇಜ್ ಆಗಿರುವ ವಿಚಾರವು ಅಧಿಕೃತವಾಗಿ ರಿವೀಲ್ ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಕಿರುತರೆಯ ಅಶ್ವಿನಿ ನಕ್ಷತ್ರ, ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟ ಜೆಕೆ ಅವರು ಹಿರಿತೆರೆಯಲ್ಲಿ ಕೂಡ ಛಾಪೂ ಮೂಡಿಸಿದ್ದಾರೆ. ಹಿಂದಿ ಟಿವಿ ಕಿರುತೆರೆಯಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಜೆಕೆ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂ 1

ಒಂದು ವರ್ಷದಿಂದ ತಮ್ಮ ಡೇಟಿಂಗ್ ಸುದ್ದಿ ಬಗ್ಗೆ ಜೆಕೆ ಅವರು ನಿರಾಕರಿಸಿದ್ದರು. ಇದೀಗ ಜೆಕೆ ಎಂಗೇಜ್ ಆಗಿರುವ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ (Fashion Designer) ಅಪರ್ಣಾ ಸಮಂತಾ (Aparna Samantha) ಜೊತೆ ನಟ ಜೆಕೆ ಎಂಗೇಜ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದಾರೆ.

 
View this post on Instagram
 

A post shared by Aparnna Samanta (@aparnna.samanta16)

ಸದ್ಯ ಈ ಪೋಸ್ಟ್ ನೋಡಿರುವ ಅಭಿಮಾನಿಗಳು ಜೆಕೆಗೆ ಕಾಮೆಂಡ್ ಮಾಡಿ ನೀವಿಬ್ಬರೂ ಬೆಸ್ಟ್ ಜೋಡಿ, ಮದುವೆ ಯಾವಾಗ ಎಂದು ಪ್ರಶ್ನೆ ಮಾಡ್ತಿದ್ದಾರೆ. ತಮ್ಮ ರಿಲೇಶನ್‌ಶಿಪ್- ಮದುವೆ ಬಗ್ಗೆ ನಟ ಜೆಕೆ ಅವರೇ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

]]>
1062838 0 0 0
<![CDATA[ಎಸಿಎಫ್‌ ಆಯ್ಕೆ ಮುಸುಕಿನ ಗುದ್ದಾಟ - ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ]]> https://publictv.in/ksceaa-react-on-kpsc-acf-police-recruitment-karnataka-government/ Wed, 03 May 2023 14:08:36 +0000 https://publictv.in/?p=1062843 ಬೆಂಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (Assistant Conservator of Forest) ಹುದ್ದೆಗಳಿಗೆ ನಾಲ್ವರು ಸದಸ್ಯರ ಸಂದರ್ಶನ ಸಮಿತಿಯನ್ನು ರಚಿಸಬೇಕೆಂದು ರಾಜ್ಯ ಸರ್ಕಾರ ನೀಡಿರುವ ನಿರ್ದೇಶನ ವಿಚಾರವಾಗಿ ಕೆಪಿಎಸ್‌ಸಿ (KPSC) ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಗಳ ಮುಸುಕಿನ ಗುದ್ದಾಟದ ನಡೆಯಿಂದ ಸ್ಪರ್ಧಾಕಾಂಕ್ಷಿಗಳು ಬೇಸತ್ತಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿ ಅಸೋಸಿಯೇಷನ್‌ (ASCEAA) ಒತ್ತಾಯಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಸೋಸಿಯೇಷನ್‌ ಅಧ್ಯಕ್ಷೆ ಭವ್ಯ ನರಸಿಂಹಮೂರ್ತಿ ಅವರು, ಸರ್ಕಾರದ ನಿರ್ದೇಶನವು ಸಂದರ್ಶನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೂಡಿದೆ. ಅಲ್ಲದೇ ಮುಂದಿನ ನೇಮಕಾತಿಗಳಲ್ಲಿ ನಡೆಯುವ ಸಂದರ್ಶನಕ್ಕೆ ಮಾದರಿಯಾಗುತ್ತದೆ ಎಂದು ಅಭ್ಯರ್ಥಿಗಳು ಭಾವಿಸಿದ್ದಾರೆ. ಆದರೆ ಕೆಪಿಎಸ್‌ಸಿ ಹೇಳುವುದೇನೆಂದರೆ, ಅವರ ಜೊತೆ ಮುಂಚಿತವಾಗಿ ಚರ್ಚಿಸದೆ ಸರ್ಕಾರ ಏಕಾಏಕಿ ಈ ವಿಷಯದ ಕುರಿತು ನಿರ್ಧರಿಸಿದೆ. ಈಗಾಗಲೇ ಎಸಿಎಫ್ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗಳು ನಡೆದಿರುವುದರಿಂದ ಈ ಹಂತದಲ್ಲಿ ಸಂದರ್ಶನ ಸಮಿತಿ ರಚನೆಯಲ್ಲಿ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ತಳ್ಳಿಹಾಕಿದೆ. ಇದನ್ನೂ ಓದಿ: ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು

ಈ ಹಿಂದೆ ಪಿಡಬ್ಲ್ಯೂಡಿ (PWD)ಯ ಸಹಾಯಕ ಅಭಿಯಂತರರು (Assistant Engineer) ಹುದ್ದೆಗೆ ಸಂದರ್ಶನದ ಸಮಿತಿ ರಚನೆಯಲ್ಲಿ ಬದಲಾವಣೆ ಹಾಗೂ 20-40 ರೂಲ್‌ನ್ನು ಇದೇ ಹಂತದಲ್ಲಿ ಆಯೋಗವು ಮಾಡಿದೆ. ಇದರಿಂದ ನೂರಾರು ಅಭ್ಯರ್ಥಿಗಳಿಗೆ ಪಾರದರ್ಶಕವಾಗಿ ಹುದ್ದೆಗಳನ್ನು ಪಡೆಯಲು ಅನುಕೂಲವಾಗಿತ್ತು. ಅಭ್ಯರ್ಥಿಗಳಿಂದ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.

ಪ್ರಸ್ತುತವಾಗಿ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕರ ಹುದ್ದೆಗಳಿಗೂ ಸಹ ಎಸಿಎಫ್ ಸಮಿತಿಯ ರೀತಿಯಲ್ಲಿಯೇ ನಾಲ್ವರು ಸದಸ್ಯರ ಸಂದರ್ಶನ ಸಮಿತಿ ರಚಿಸಬೇಕೆಂದು ಪೊಲೀಸ್ ಇಲಾಖೆ ನಿರ್ದೇಶಿಸಿದೆ. ಇನ್ನೂ ಹಲವಾರು ಇಲಾಖೆಯು ಇದೇ ಮಾದರಿಯ ಸಂದರ್ಶನ ಸಮಿತಿಯ ಪ್ರಸ್ತಾವನೆ ನೀಡುವ ಸಂಭವವಿದೆ. ಇಂತಹ ಒಳ್ಳೆಯ ಬದಲಾವಣೆಯನ್ನು ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ತಳ್ಳಿ ಹಾಕಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ

ಮಾಧ್ಯಮಗಳಲ್ಲಿ ವರಿದಿಯಾಗಿರುವಂತೆ, ಕೆಪಿಎಸ್‌ಸಿ ಸದಸ್ಯರು, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನಡುವಿನ ಮುಸುಕಿನ ಗುದ್ದಾಟದಿಂದ ಸ್ಪರ್ಧಾಕಾಂಕ್ಷಿಗಳು ಬೇಸತ್ತಿದ್ದಾರೆ. ಕಾರ್ಯದರ್ಶಿಗಳು ಕೈಗೊಳ್ಳುವ ಪ್ರತಿಯೊಂದು ಕೆಲಸ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಿರುತ್ತದೆ ಹಾಗೂ ಪಾರದರ್ಶಕತೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ಸದಸ್ಯರು ಮತ್ತು ಅಧ್ಯಕ್ಷರು, ಕಾರ್ಯದರ್ಶಿಗಳ ನಡೆಗೆ ಸುಖಾಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸ್ಪರ್ಧಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇವುಗಳನ್ನೆಲ್ಲ ತ್ವರಿತವಾಗಿ ಸರಿಪಡಿಸಬೇಕೆಂದು ಅಸೋಸಿಯೇಷನ್ ಒತ್ತಾಯಿಸಿದೆ.

ಏನಿದು ಪ್ರಕರಣ? ಕೆಪಿಎಸ್‌ಸಿ ಒಬ್ಬರು ಸದಸ್ಯ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಫ್‌ಎಸ್‌ ಅಧಿಕಾರಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸುತ್ತಿರುವ ಒಬ್ಬ ಸಂಬಂಧಿಸಿದ ವಿಷಯ ತಜ್ಞ ಹೀಗೆ ನಾಲ್ವರು, ಎಸಿಎಫ್‌ ಹುದ್ದೆಗಳಿಗೆ ಆಯ್ಕೆಯ ಸಂದರ್ಶನ ಸಮಿತಿಯಲ್ಲಿ ಇರಬೇಕು ಎಂದು ಕೆಪಿಎಸ್‌ಸಿಗೆ ಅರಣ್ಯ ಇಲಾಖೆ ತಿಳಿಸಿತ್ತು.

]]>
1062843 0 0 0
<![CDATA[ಬಹುಕಾಲದ ಗೆಳತಿ ಸ್ನೇಹಾ ಜೊತೆ 'ಗುಳ್ಟು' ನಿರ್ದೇಶಕನ ಎಂಗೇಜ್‌ಮೆಂಟ್]]> https://publictv.in/gultoo-director-janardhan-engagement/ Wed, 03 May 2023 14:34:28 +0000 https://publictv.in/?p=1062857 ಸ್ಯಾಂಡಲ್‌ವುಡ್‌ನಲ್ಲಿ (Sandalwood) 'ಗುಳ್ಟು' (Gultoo Film) ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಜನಾರ್ಧನ್ ಚಿಕ್ಕಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳತಿ ಸ್ನೇಹಾ ಜೊತೆ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ (Janardhan Chikanna) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್

ನವೀನ್ ಶಂಕರ್- ಸೋನು ಗೌಡ ನಟನೆಯ 'ಗುಳ್ಟು' ಸಿನಿಮಾ ಜನಾರ್ಧನ್ ಚಿಕ್ಕಣ್ಣ ಪರಿಕಲ್ಪನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಕಥೆಗೆ ಕಲಾವಿದರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಹಲವು ವರ್ಷಗಳ ತಮ್ಮ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಸ್ನೇಹಾ (Sneha) ಜೊತೆ ಅಧಿಕೃತವಾಗಿ ಎಂಗೇಜ್ (Engagement) ಆಗಿದ್ದಾರೆ. ಈ ಕುರಿತು ನಿರ್ದೇಶಕ ಜನಾರ್ಧನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ. ಸದ್ಯದಲ್ಲೇ ಜನಾರ್ಧನ್- ಸ್ನೇಹಾ ಜೋಡಿ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ. ನಟ ನವೀನ್, ಸೋನು ಗೌಡ, ಸಿಂಪಲ್ ಸುನಿ ಸೇರಿದಂತೆ ಹಲವರು ಈ ಜೋಡಿಗೆ ಶುಭಹಾರೈಸಿದ್ದಾರೆ.

]]>
1062857 0 0 0
<![CDATA[IPL 2023: ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಭಾರೀ ನಿರಾಸೆ - ಮಳೆಗೆ ಪಂದ್ಯ ರದ್ದು]]> https://publictv.in/ipl-2023-lsgvscsk-match-abandoned-due-to-rain-at-ekna/ Wed, 03 May 2023 14:46:12 +0000 https://publictv.in/?p=1062861 ಲಕ್ನೋ: ತವರಿನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡಕ್ಕೆ ಭಾರೀ ನಿರಾಸೆಯಾಗಿದೆ. ಮಳೆಯಿಂದಾಗಿ (Rain) ಪಂದ್ಯ ರದ್ದಾದ ಕಾರಣ ಇತ್ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಉಳಿದುಕೊಂಡಿವೆ.

ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದೆ ಅಲ್ಪ ಮೊತ್ತ ಗಳಿಸುವಷ್ಟಕ್ಕೆ ಸೀಮಿತವಾಯಿತು. ಇದನ್ನೂ ಓದಿ: ಲಕ್ನೋಗೆ ಡಬಲ್‌ ಶಾಕ್‌ – ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?

ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಯುವ ಆಟಗಾರ ಆಯುಷ್ ಬದೋನಿ (Ayush Badoni) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದರು. ಕೊನೆಯ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬದೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡ ಗೌರವಯುತ ಮೊತ್ತ ಗಳಿಸಲು ಕಾರಣವಾದರು. 19.2 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಲಕ್ನೋ 125 ರನ್‌ ಗಳಿಸಿತ್ತು. ಇನ್ನೂ 4 ಎಸೆತಗಳು ಬಾಕಿಯಿರುವಾಗಾಲೇ ಮಳೆ ಕಾಟ ಶುರುವಾಯಿತು. ಎಡಬಿಡದೇ ಮಳೆ ಸುರಿಯುತ್ತಿದ್ದರಿಂದ ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಯಿತು.

ಲಕ್ನೋ ಪರ ಆಯುಷ್‌ ಬದೋನಿ 33 ಎಸೆತಗಳಲ್ಲಿ ಸ್ಫೋಟಕ 59 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸಿದರೆ, ನಿಧಾನಗತಿ ಬ್ಯಾಟಿಂಗ್‌ ಮಾಡಿದ ನಿಕೋಲಸ್‌ ಪೂರನ್‌ (Nicholas Pooran) 20 ರನ್‌ ಕೊಡುಗೆ ನೀಡಿದರು. ಇದನ್ನೂ ಓದಿ: ಪಾಂಡ್ಯ ಹೋರಾಟ ವ್ಯರ್ಥ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ರನ್‌ ರೋಚಕ ಜಯ

ಚೆನ್ನೈ ಸೂಪರ್ ಕಿಂಗ್ಸ್‌ ಪರ ಮೊಯಿನ್‌ ಅಲಿ, ಮಹೀಶ್‌ ತೀಕ್ಷಣ ಹಾಗೂ ಮಹೇಶ್‌ ಪತಿರಣ ತಲಾ ಎರಡು ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

9 ಪಂದ್ಯಗಳಲ್ಲಿ ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇಂದು ಚೆನ್ನೈ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ನಿರೀಕ್ಷೆಯಲ್ಲಿತ್ತು. ಆದರೆ ಮಳೆಯಿಂದಾಗಿ ಇತ್ತಂಡಗಳಿಯೂ ನಿರಾಸೆಯಾಗಿದೆ.

]]>
1062861 0 0 0
<![CDATA[ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ]]> https://publictv.in/make-delicious-onion-paratha-differently/ Thu, 04 May 2023 02:30:43 +0000 https://publictv.in/?p=1062713 ರುಳ್ಳಿ ಪರೋಟ ಭಾರತೀಯ ಫ್ಲಾಟ್‌ಬ್ರೆಡ್. ಮುಖ್ಯವಾಗಿ ಪಂಜಾಬ್‌ನಲ್ಲಿ ಅತ್ಯಂತ ಫೇಮಸ್ ಆಗಿರೋ ಪರೋಟಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಗೋಧಿಯಿಂದ ಮಾಡಲಾಗುವ ಪರೋಟವನ್ನು ಇನ್ನೂ ವಿವಿಧ ರೀತಿಯ ತರಕಾರಿಗಳನ್ನು ಬಳಸಿ ಮತ್ತಷ್ಟು ರುಚಿಕರವನ್ನಾಗಿ ಮಾಡಬಹುದು. ಆಲೂ ಪರೋಟಾ, ಮಸಾಲಾ ಪರೋಟಾ ನಾವು ಈ ಹಿಂದೆ ಮಾಡೋದು ಹೇಗೆಂದು ಹೇಳಿಕೊಟ್ಟಿದ್ದೇವೆ. ಇಂದು ನಾವು ಈರುಳ್ಳಿ ಪರೋಟ ರೆಸಿಪಿ ಹೇಳಿಕೊಡುತ್ತಿದ್ದೇವೆ. ಇದನ್ನು ಮನೆಯಲ್ಲಿ ಟ್ರೈ ಮಾಡಿ ಆನಂದಿಸಿ.

ಬೇಕಾಗುವ ಪದಾರ್ಥಗಳು: ಹಿಟ್ಟು ತಯಾರಿಸಲು: ಗೋಧಿ ಹಿಟ್ಟು - 2 ಕಪ್ ಉಪ್ಪು - ಅರ್ಧ ಟೀಸ್ಪೂನ್ ಎಣ್ಣೆ - 2 ಟೀಸ್ಪೂನ್ ನೀರು - ಅಗತ್ಯವಿರುವಂತೆ ಈರುಳ್ಳಿ ಸ್ಟಫಿಂಗ್ ತಯಾರಿಸಲು: ಸಣ್ಣಗೆ ಹೆಚ್ಚಿದ ಈರುಳ್ಳಿ - 1 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ - 2 ಗರಂ ಮಸಾಲೆ ಪುಡಿ - ಅಗತ್ಯವಿರುವಂತೆ ಉಪ್ಪು - ರುಚಿಗೆ ತಕ್ಕಷ್ಟು ಎಣ್ಣೆ - ಪರೋಟ ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್

ಮಾಡುವ ವಿಧಾನ: * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟು ಹಾಕಿ, 2 ಟೀಸ್ಪೂನ್ ಎಣ್ಣೆ, ಉಪ್ಪು ಹಾಗೂ ಚಪಾತಿ ಹಿಟ್ಟಿನ ಹದಕ್ಕೆ ತರಲು ಬೇಕಾಗುವಷ್ಟು ನೀರು ಸೇರಿಸಿ ಮೃದುವಾಗಿ ಬೆರೆಸಿಕೊಳ್ಳಿ. * ಹಿಟ್ಟನ್ನು ಮುಚ್ಚಿ 20-30 ನಿಮಿಷ ಪಕ್ಕಕ್ಕಿಟ್ಟು ವಿಶ್ರಾಂತಿ ನೀಡಿ. * ಈ ನಡುವೆ ನೀವು ಈರುಳ್ಳಿ ಸ್ಟಫಿಂಗ್ ತಯಾರಿಸಬೇಕು. ಅದಕ್ಕಾಗಿ ಇನ್ನೊಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಈರುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ. * ಈಗ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ತಯಾರಿಸಿ, ಸುಮಾರು 3-4 ಇಂಚಿನಷ್ಟು ವ್ಯಾಸ ಬರುವಂತೆ ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ. * ಅದರ ನಡುವೆ ಹೆಚ್ಚಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಮಿಶ್ರಣವನ್ನು 1-2 ಟೀಸ್ಪೂನ್‌ನಷ್ಟು ಇಟ್ಟು, ಅದರ ಮೇಲೆ ಚಿಟಿಕೆ ಗರಂ ಮಸಾಲೆ ಪುಡಿ, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪನ್ನು ಸಿಂಪಡಿಸಿ. * ಈಗ ಹಿಟ್ಟಿನ ಅಂಚುಗಳನ್ನು ಜೋಡಿಸಿ, ಅದರ ಮಧ್ಯದಲ್ಲಿ ಒತ್ತಿ ಮತ್ತೆ ಚೆಂಡನ್ನಾಗಿ ಮಾಡಿ. * ಈಗ ಸುಮಾರು 5-8 ಇಂಚು ವ್ಯಾಸಕ್ಕೆ ಬರುವಂತೆ ಲಟ್ಟಣಿಗೆ ಸಹಾಯದಿಂದ ಸುತ್ತಿಕೊಳ್ಳಿ. * ಇಗ ತವಾವನ್ನು ಬಿಸಿ ಮಾಡಿ ಪರೋಟವನ್ನು ಅದರಲ್ಲಿಟ್ಟು ಎರಡೂ ಬದಿ ಸಮವಾಗಿ ಬೇಯಿಸಿಕೊಳ್ಳಿ. ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಹಚ್ಚಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ. * ಇದೀಗ ಈರುಳ್ಳಿ ಪರೋಟ ತಯಾರಾಗಿದ್ದು, ಉಪ್ಪಿನಕಾಯಿ, ಮೊಸರು, ಅಥವಾ ಯಾವುದಾದರೂ ಗ್ರೇವಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

]]>
1062713 0 0 0
<![CDATA[ದಿನ ಭವಿಷ್ಯ 04-05-2023]]> https://publictv.in/daily-horoscope-04-05-2023-2/ Thu, 04 May 2023 00:00:41 +0000 https://publictv.in/?p=1062750 ಸಂವತ್ಸರ : ಶೋಭಕೃತ್ ಋತು : ವಸಂತ ಅಯನ : ಉತ್ತರಾಯಣ ಮಾಸ : ವೈಶಾಖ ಪಕ್ಷ : ಶುಕ್ಲ ತಿಥಿ : ಚತುರ್ದಶಿ ನಕ್ಷತ್ರ : ಚಿತ್ತಾ ರಾಹುಕಾಲ : ಮಧ್ಯಾಹ್ನ 01: 51 ರಿಂದ 3:25 ವರೆಗೆ ಗುಳಿಕಕಾಲ : ಬೆಳಗ್ಗೆ 09:07 ರಿಂದ 10:41 ವರೆಗೆ ಯಮಗಂಡಕಾಲ : ಸಂಜೆ 05:57 ರಿಂದ 7:32 ವರೆಗೆ ಮೇಷ: ಹಣಕಾಸಿನಲ್ಲಿ ವ್ಯಯ, ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಲಾಭ ವೃಷಭ: ಕೃಷಿಯ ಕಡೆ ಒಲವು, ಮಹಿಳಾ ವೈದ್ಯರಿಗೆ ಅವಕಾಶ, ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ ಮಿಥುನ: ರಿಯಲ್ ಎಸ್ಟೇಟ್‌ನಲ್ಲಿ ಶುಭ, ವಾಹನ ಚಾಲಕರಿಗೆ ಲಾಭ, ವಿವಾಹಕ್ಕೆ ಶುಭ ಕರ್ಕಾಟಕ: ಸಮಾಜಸೇವೆಯಿಂದ ಜನಪ್ರಿಯತೆ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ರಾಜಕೀಯದಲ್ಲಿ ಯಶಸ್ಸು ಸಿಂಹ: ಚರ್ಮವ್ಯಾಧಿ ಬಾಧಿಸಬಹುದು, ಹಾಡುಗಾರರಿಗೆ ಉತ್ತಮ ಅವಕಾಶ, ರಾಜಕಾರಣಿಗಳಿಗೆ ಸುಸಮಯ ಕನ್ಯಾ: ಹೂ ವ್ಯಾಪಾರಿಗಳಿಗೆ ಆದಾಯ, ರೈತರ ಫಸಲಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಚೇತರಿಕೆ ತುಲಾ: ಗೃಹ ಮಾರಾಟಸ್ಥರಿಗೆ ಆದಾಯ, ವಿದ್ಯುತ್ಸ್ಥಾವರದ ಕಾರ್ಮಿಕರು ಎಚ್ಚರ, ವಸ್ತು ಸಂಗ್ರಹದಲ್ಲಿ ಆಸಕ್ತಿ ವೃಶ್ಚಿಕ: ಆರೋಗ್ಯದಲ್ಲಿ ಅಸ್ವಸ್ಥತೆ, ಜಾಹೀರಾತು ಸಂಸ್ಥೆಗಳಿಗೆ ಲಾಭ, ವಿದೇಶಿವಸ್ತು ಉತ್ಪನ್ನಕರಿಗೆ ಬೇಡಿಕೆ ಧನಸ್ಸು: ಹೈನುಗಾರಿಕೆಗೆ ಬೇಡಿಕೆ, ಮನರಂಜನಾ ಭಾಗದವರಿಗೆ ಅವಕಾಶ, ವಿದ್ಯಾರ್ಥಿಗಳಿಗೆ ಅನುಕೂಲ ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ, ಆರಕ್ಷಕ ವರ್ಗದವರು ಎಚ್ಚರ, ಸಣ್ಣ ಕೈಗಾರಿಕೆಗಳಿಗೆ ಸುಸಮಯ ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ ಮೀನ: ನಿದ್ರಾಹೀನತೆ ಕಾಡಬಹುದು, ಕುಶಲಕಾರ್ಮಿಕರಿಗೆ ಬೇಡಿಕೆ, ವರ್ಗಾವಣೆ ಸಾಧ್ಯತೆ]]> 1062750 0 0 0 <![CDATA[ರಾಜ್ಯದ ಹವಾಮಾನ ವರದಿ: 04-05-2023]]> https://publictv.in/karnataka-weather-report-04-05-2023/ Thu, 04 May 2023 00:46:10 +0000 https://publictv.in/?p=1062779 ಳೆದ ಒಂದೂವರೆ ತಿಂಗಳಿಂದ ಸೂರ್ಯನ ಪ್ರತಾಪಕ್ಕೆ ಬೆವತು ಬೆಂಡಾಗಿದ್ದ ಜನರಿಗೆ ವರುಣನ ಸಿಂಚನ ಸಂತಸ ತಂದಿದೆ. ಗಾಳಿ ದಿಕ್ಕಿನ ಬದಲಾವಣೆ ಅಥವಾ ಟ್ರಫ್ ಉಂಟಾದ ಹಿನ್ನೆಲೆ, ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವೆಡೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ: ಬೆಂಗಳೂರು: 30-21 ಮಂಗಳೂರು: 34-26 ಶಿವಮೊಗ್ಗ: 36-22 ಬೆಳಗಾವಿ: 34-20 ಮೈಸೂರು: 32-21 ಮಂಡ್ಯ: 33-22

ಮಡಿಕೇರಿ: 29-17 ರಾಮನಗರ: 32-22 ಹಾಸನ: 33-19 ಚಾಮರಾಜನಗರ: 32-21 ಚಿಕ್ಕಬಳ್ಳಾಪುರ: 30-20

ಕೋಲಾರ: 31-22 ತುಮಕೂರು: 32-21 ಉಡುಪಿ: 34-26 ಕಾರವಾರ: 33-26 ಚಿಕ್ಕಮಗಳೂರು: 32-19 ದಾವಣಗೆರೆ: 36-22

ಹುಬ್ಬಳ್ಳಿ: 36-22 ಚಿತ್ರದುರ್ಗ: 34-22 ಹಾವೇರಿ: 37-22 ಬಳ್ಳಾರಿ: 36-24 ಗದಗ: 36-22 ಕೊಪ್ಪಳ: 36-24

weather

ರಾಯಚೂರು: 35-24 ಯಾದಗಿರಿ: 35-22 ವಿಜಯಪುರ: 30-18 ಬೀದರ್: 32-22 ಕಲಬುರಗಿ: 34-24 ಬಾಗಲಕೋಟೆ: 37-24

]]>
1062779 0 0 0
<![CDATA[ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ]]> https://publictv.in/bjps-contribution-to-hassan-nagar-is-only-60-brandy-shop-hd-revanna/ Wed, 03 May 2023 15:09:33 +0000 https://publictv.in/?p=1062829 ಹಾಸನ: ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ದೇವೇಗೌಡ (H.D Devegowda) ರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು, ಗ್ರಾಮೀಣ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂತ ಹೋರಾಟ ಮಾಡಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಏಳೂ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಮನವಿ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕೆಲವರು ಗಲ್ಲಿ ಗಲ್ಲಿ ರಸ್ತೆ ಆಗಿವೆ ಅಂತಾರೆ, ಅದು ದೊಡ್ಡದಾ ಇವತ್ತು ಎಂದು ಪ್ರಶ್ನಿಸಿದ ರೇವಣ್ಣ, ವರ್ಕ್ ಆರ್ಡರ್ ತಡೆ ಹಿಡಿಯುವುದೇ ಇವರ ಸಾಧನೆ. ತೋಟಗಾರಿಕಾ ಕಾಲೇಜು ಕಿತ್ತುಕೊಂಡರು. ಆದರೆ ಸ್ಥಳೀಯ ಶಾಸಕರು ಉಸಿರೇ ಬಿಡಲಿಲ್ಲ. ನಾನು ಏನು ಮಾಡಿದ್ದೇನೆ ಎಂಬುದನ್ನು ತೆಗೆದು ನೋಡಲಿ, ರೋಡ್‍ಗೆ ಇವತ್ತು ಟಾರು ಹಾಕಿದ್ರೆ ಬೆಳಗ್ಗೆ ಕಿತ್ತು ಹೋಗ್ತಿದೆ. ಇಂಜಿನಿಯರ್‍ಗಳು, ಕಂಟ್ರ್ಯಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಲ್ಲಭಾಯಿ ರೋಡ್ ಜಗ್ಗ ಎನ್ನುವವನ ಮೇಲೆ ಗ್ರೇಟ್ ಡಿವೈಎಸ್‍ಪಿ ಉದಯ್ ಭಾಸ್ಕರ್, ಗ್ರೇಟ್ ಸರ್ಕಲ್ ಇನ್ಸ್ ಪೆಕ್ಟರ್ ರೌಡಿ ಶೀಟರ್ ಓಪನ್ ಮಾಡಿ, ಮೂರು ತಿಂಗಳ ಹಿಂದೆ ಗಡಿಪಾರು ಮಾಡಿದ್ದಾರೆ. ಸ್ವರೂಪ್ (Swaroop) ಪರವಾಗಿ ವೋಟು ಹಾಕಿಸ್ತಾನೆ ಅಂತ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಅವನೇನೂ ಮರ್ಡರ್ ಮಾಡಿದ್ನಾ ಎಂದು ಕಿಡಿಕಾರಿದರು. ರೌಡಿಗಳ ತಾಣದ ಪೋಷಕನಾಗಿದ್ದ ದಿ ಗ್ರೇಟ್ ಉದಯ್ ಭಾಸ್ಕರ್, ಯಾರನ್ನ ಬೇಕಾದ್ರೂ ಮರ್ಡರ್ ಮಾಡಿಸೋನು. ಈಗ ಇಡೀ ಅಧಿಕಾರಿಗಳೆಲ್ಲಾ ಸೇರಿ ರಜೆ ಮೇಲೆ ಕಳ್ಸಿದ್ದಾರೆ, ಪಾಪ ಅವನನ್ನು ಉಳಿಸಲು ಸ್ಥಳೀಯ ಶಾಸಕರು ಬಹಳ ಪ್ರಯತ್ನಪಟ್ಟರು ಎಂದು ದೂರಿದರು. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

ಹಾಸನ ನಗರಕ್ಕೆ ಬಿಜೆಪಿ ಅವರ ಕೊಡುಗೆ 60 ಬ್ರಾಂಡಿ ಶಾಪ್ ಕೊಟ್ಟು, ಕುಡ್ಕಂಡು ಇರಿ, ಅಂತ ಕೊಡುಗೆ ಕೊಟ್ಟಿದ್ದಾರೆ. ಮೋದಿಯವರೇ ನಿಮ್ಮ ಪಕ್ಷದ ಕೊಡುಗೆ ಸಿಎಲ್-7. ಮನೆ ಒಳಗಡೆ ಇದ್ದರು ಎದ್ದು ಇಂತಹ ಶಕ್ತಿಗಳನ್ನು ದಮನ ಮಾಡಲು ಹೊರಗೆ ಬಂದಿದ್ದಾರೆ ಎಂದು ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಮಾಜಿ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿದ ರೇವಣ್ಣ, ಹದಿನೈದು ವರ್ಷದಿಂದ ನಾನು ಸಾಕಿದ ಗಿಣಿ ಇತ್ತು, ಅದರ ಬಳಿ ಒಂದು ಸ್ವಲ್ಪ ದುಡ್ಡಿದೆ ಅಂತ ಕಾಂಗ್ರೆಸ್‍ನವರು ಗೆಲ್ಲುತ್ತೆ ಅಂತ ಕರ್ಕೊಂಡ್ರು. ಅವರು ಪುಕ್ಸಟ್ಟೆ ಯಾವುದನ್ನೂ ಮಾಡಲ್ಲ, ಸಾಕಿದ ಗಿಣಿನಾ ಬೋನಿಗೆ ಬಿಡಬೇಕು, ಈಚೆಗೆ ಬಿಡಬಾರದು ಅಂತ ದೇವರೇ ನಮ್ಮ ಹತ್ರ ಸಂತೋಷ್ ಅವರನ್ನು ಕಳುಹಿಸಿದ್ದಾನೆ ಎಂದರು.

ಸಾಕಿದ ಗಿಣಿಗೆ ಬಲೆ ಬೀಸಿ ಕಾಂಗ್ರೆಸ್‍ನವರು ಇಟ್ಕಂಡವ್ರೆ, ಜನರೇ ಹದ್ದಾಗಿ ಕುಕ್ತಾರೆ ಎಂದು ಭವಿಷ್ಯ ನುಡಿದರು. ತಾಲೂಕಿನಲ್ಲಿ ಜೆಡಿಎಸ್‍ಗೆ 13 ಸಾವಿರ ವೋಟು ಇತ್ತು, ನಾನು ಬಂದ ಮೇಲೆ ಜಾಸ್ತಿ ಆಯ್ತು ಅನ್ನುತ್ತಿರುವವರು ಕಾಂಗ್ರೆಸ್ ಬಿಟ್ಟು ಸ್ಪರ್ಧೆ ಮಾಡಲಿ. ಎಷ್ಟು ವೋಟು ತಗೋತಾರೆ ನೋಡೋಣ ಎಂದು ಸವಾಲು ಹಾಕಿದರು. ಜೆಡಿಎಸ್ ಪಕ್ಷಕ್ಕೆ ವೋಟು ಕೊಡಿ, ಸ್ವರೂಪ್ ಅವರನ್ನು ಗೆಲ್ಲಿಸಿ. ಅವರ ತಂದೆ ಪ್ರಾಮಾಣಿಕವಾಗಿದ್ರು. ಸ್ವರೂಪ್ ಯುವಕ ಇದ್ದಾನೆ, ಐದು ವರ್ಷ ನೋಡೋಣ. ಸ್ವರೂಪ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು, ಸ್ವರೂಪ್ ಅವರನ್ನು ಗೆಲ್ಲಿಸಲು ಬೆಂಬಲ ಕೊಟ್ಟಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ದುಡ್ಡಿಲ್ಲದಿದ್ದರೂ ಹೋರಾಟ ಮಾಡುತ್ತಿದ್ದಾರೆ. ಏಳು ಕ್ಷೇತ್ರಗಳನ್ನು ಗೆಲ್ಲಿಸಿ ನಿಮ್ಮ ಕೆಲಸ ತಪ್ಪದೇ ಮಾಡ್ತೀವಿ ಎಂದರು.

 

]]>
1062829 0 0 0
<![CDATA[ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ - ಜನರ ಮುಂದೆ ಮೋದಿ ಭಾವುಕ]]> https://publictv.in/we-made-karnataka-number-one-in-the-country-says-pm-modi/ Wed, 03 May 2023 15:12:07 +0000 https://publictv.in/?p=1062865 ಬೆಳಗಾವಿ: ದೇಶದಲ್ಲಿ ಕರ್ನಾಟಕವನ್ನ ನಂ.1 ರಾಜ್ಯ ಮಾಡಲು ಬಿಜೆಪಿ (BJP) ಯೋಜನೆ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ʻಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಾಡಿನ ಜನರಿಗೆ ನನ್ನ ನಮಸ್ಕಾರಗಳುʼ ಎನ್ನುತ್ತಾ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ನಾನು ಮೊದಲು ನಿಮ್ಮೆಲ್ಲರ ಕ್ಷಮೆ ಕೇಳುವೆ, ಬರಲು ಸ್ವಲ್ಪ ತಡವಾಯಿತು ಎಂದು ಕ್ಷಮೆ ಕೋರಿದರು.

ಮುಂದುವರಿದು, ಕಳೆದ 4 ದಿನಗಳಿಂದ ಕರ್ನಾಟಕದ ವಿವಿಧೆಡೆ ಭೇಟಿ ನೀಡಿದ್ದೇನೆ. ಈ ಸಲ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ನಗರ, ಹಳ್ಳಿ ಸೇರಿ ಎಲ್ಲ ಕಡೆ ಉತ್ಸಾಹ ಇದೆ. 4 ದಿಕ್ಕಿನಿಂದಲೂ ಒಂದೇ ಧ್ವನಿ ಕೇಳಿ ಬರುತ್ತಿದೆ. ʻಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರʼ ಎಂಬುದು ಕೇಳಿ ಬರುತ್ತಿದೆ. ಮತದಾನಕ್ಕೆ ಒಂದೇ‌ ವಾರ ಬಾಕಿ ಇದೆ. ಡಬಲ್ ಇಂಜಿನ್ ಸರ್ಕಾರ ಪು‌ನರಾಯ್ಕೆಯ ಶಂಖನಾದ ಜನರಿಂದ ಕೇಳಿ ಬಂದಿದೆ. ಇದಕ್ಕೆಲ್ಲ ಕಾರಣ ಬಡವರ, ಮಧ್ಯಮವರ್ಗದ ವಿಶ್ವಾಸ ಗಳಿಸಿದ್ದು ಎಲ್ಲರ ವಿಶ್ವಾಸ ಗಳಿಸಿದ್ದೆ ಇದಕ್ಕೆಲ್ಲ‌ ಕಾರಣ ಎಂದು ಹೇಳಿದರು. ಇದನ್ನೂ ಓದಿ: ಎಸಿಎಫ್‌ ಆಯ್ಕೆ ಮುಸುಕಿನ ಗುದ್ದಾಟ – ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ

ಕರ್ನಾಟಕದಲ್ಲಿ ಈಗ ವಿಮಾನ ನಿಲ್ದಾಣ, ಆಧುನಿಕ ರೈಲ್ವೆ ನಿಲ್ದಾಣಗಳು ಆಗುತ್ತಿವೆ. ಕರ್ನಾಟಕವನ್ನು ನಂ.1 ಮಾಡಲು ಬಿಜೆಪಿ ಯೋಜನೆ ರೂಪಿಸಿದೆ. ಹಾಗಾಗಿ ಬಿಜೆಪಿಗೆ ಮತ ಹಾಕಿದರೆ, ದೇಶದಲ್ಲೇ ಕರ್ನಾಟಕವನ್ನು ನಂ.1 ಮಾಡಲು ಮತ ಹಾಕಿದಂತೆ ಎಂದು ಎಚ್ಚರಿಸಿದರು.

ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್‌ನ ಶಾರ್ಟ್ ಕಟ್ ಸರ್ಕಾರದ ಬಗ್ಗೆ ಎಚ್ಚರಬಾಗಿರಬೇಕು. ಶಾರ್ಟ್ ಕಟ್ ರಾಜಕಾರಣ ಮಾಡುವುದು ಅಂದ್ರೆ ಸಮಾಜವನ್ನು ವಿಭಜಿಸಿದಂತೆ. ಇಂತಹ ರಾಜಕೀಯ ಮಾಡುವವರು ಒಡೆದು ಆಳುವ ನೀತಿ ಅನುಸರಿಸಿದಂರತೆ. ಇದು ವಿಕಾಸದ ದಾರಿ ಆಗುವುದಿಲ್ಲ. ಈ ಶಾರ್ಟ್ ಕಟ್ ರಾಜಕಾರಣದಿಂದ ಅಭಿವೃದ್ಧಿ ಆಗುವುದಿಲ್ಲ. ಹಿಂದೆಲ್ಲ ಅವರು ಮಾಡಿರಬಹುದು. ಆದರೆ, ಇದು 3ನೇ ಪೀಳಿಗೆಯ ಸಮಾಜ ಇದೆ. ಈ ಯುವ ಪೀಳಿಗೆ ಶಾರ್ಟ್ ಕಟ್‌ ನವರ ಕೈಗೆ ಅಧಿಕಾರ ಕೊಡುವುದಿಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸಿದ್ದು ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಸಮತೋಲನದ ಆಡಳಿತ ಮಾಡುತ್ತಿದೆ. ಒಗ್ಗಟ್ಟಿನಲ್ಲಿ ಕರ್ನಾಟಕ ಸರ್ಕಾರದ ಭವಿಷ್ಯ ಇದೆ ಎಂಬುದನ್ನ ಅರಿತು, ನೀವೆಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಜನಸೇವೆಯೇ ಜನಾರ್ಧನ ಸೇವೆ. ಬಿಜೆಪಿ ನಿಮ್ಮ ಸೇವಕನಂತೆ ಕೆಲಸ ಮಾಡುತ್ತದೆ. ನಾನು ಸೇವಕನಂತೆ ಕೆಲಸ ಮಾಡುತ್ತಿರುವೆ. ಆದ್ರೆ ಕಾಂಗ್ರೆಸ್ ಸೇವೆ ದೆಹಲಿಯಲ್ಲಿನ ಕುಟುಂಬದ ಮೇಲೆ ಇದೆ. ಕಾಂಗ್ರೆಸ್ ರಿಮೋಟ್ ಇರುವುದು ದೆಹಲಿಯ ಒಂದು ಕುಟುಂಬದ ಮನೆಯಲ್ಲಿ. ಜೆಡಿಎಸ್ ಒಂದು ಪರಿವಾರದ ಪ್ರೈವೆಟ್ ಲಿಮಿಟೆಡ್ ಕಂಪನಿ. ಆದರೆ ಮೋದಿಗೆ ಈ ಕುಟುಂಬ ರಾಜಕಾರಣ ಗೊತ್ತಿಲ್ಲ. ಜನರೇ ನನ್ನ ಪರಿವಾರ, ನನ್ನ ಕುಟುಂಬ. ಜನರ ಸುಖ-ದುಃಖಗಳೇ ನನಗೆ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ ಎಂದು ಭಾವುಕರಾದರು. ಇದನ್ನೂ ಓದಿ: ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು

ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನ ಎಲ್ಲ ಕಡೆ ತಿರಸ್ಕಾರ ಮಾಡಲಾಗಿದೆ. ದೇಶದಲ್ಲಿ ಮೂರು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಜೆಡಿಎಸ್‌ ಮೂರು ಜಿಲ್ಲೆಯ ಪಕ್ಷ. 2018ರಲ್ಲಿ ಅವರೊಂದಿಗೆ ಸೇರಿ ಸರ್ಕಾರ ಮಾಡಿದ್ದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಇವರಿಗೆ ತಮ್ಮ ಭವಿಷ್ಯ ನಿರ್ಮಾಣವೇ ಗೊತ್ತಿಲ್ಲ. ಇಂಥವರು ಜನರ ಭವಿಷ್ಯ ನಿರ್ಮಾಣ ಮಾಡುತ್ತಾರಾ. ನಾನು ಹೇಳುತ್ತಿರುವುದು ಕೇವಲ ಭಾಷಣದ ಮಾತುಗಳಲ್ಲ. ಈ ಹಿಂದೆಯೂ ನುಡಿದಂತೆ ನಡೆದಿದ್ದೇನೆ. ಇವತ್ತು ಮೆಡಿಕಲ್, ತಾಂತ್ರಿಕ ಸ್ಪರ್ಧಾತ್ಮಕ ಪರೀಕ್ಷೆ, ಎಲ್ಲ ಭರ್ತಿ ಪರೀಕ್ಷೆಗಳು ಸ್ಥಳೀಯ ಭಾಷೆಯಲ್ಲಿ ಆಗುತ್ತಿವೆ. ಇದನ್ನೆಲ್ಲ ಜನರಿಗಾಗಿ ನಾವು ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನ ಪ್ರಸ್ತುತಪಡಿಸಿದರು.

]]>
1062865 0 0 0
<![CDATA[ಮೇ 10 ರಂದು ತಪ್ಪದೇ ವೋಟ್‌ ಮಾಡಿದವರಿಗೆ ಸಿಗುತ್ತೆ ಬಂಪರ್‌ ಗಿಫ್ಟ್‌..!]]> https://publictv.in/hubballi-dharwad-smart-city-announce-big-offer-for-voters/ Wed, 03 May 2023 15:47:10 +0000 https://publictv.in/?p=1062872 ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ (Hubballi Dharwad) ಸ್ಮಾರ್ಟ್ ಸಿಟಿ (Smart City) ವತಿಯಿಂದ ಮೇ 10 ರಂದು ತಪ್ಪದೇ ಮತ ಚಲಾಯಿಸುವವರಿಗೆ 100 ರೂ. ಉಚಿತ ಬೈಸಿಕಲ್ ರಿಚಾರ್ಜ್ (Smart Bicycle Recharge)ಪಡೆಯುವ ಸುವರ್ಣಾವಕಾಶ ನೀಡಿದೆ. ಮತ ಚಲಾಯಿಸುವ ಮೂಲಕ ಸವಾರಿ ಸವಾರರ ಖಾತೆಗೆ 100 ರೂ. ಗಳ ಉಚಿತ ರಿಚಾರ್ಜ್ ಕೊಡುಗೆ ಪಡೆಯಬಹುದು ಎಂದು ಹೇಳಿದೆ.

ಅಸ್ತಿತ್ವದಲ್ಲಿರುವ ಸೈಕಲ್‌ ಬಳಕೆದಾರರು ಮೇ 10 ರಂದು ಮತ ಚಲಾಯಿಸಿದ ನಂತರ ನಿಮ್ಮ ತೋರುಬೆರಳನ್ನು ಶಾಯಿಯಿಂದ ತೋರಿಸುವ ಸೆಲ್ಫಿ ತೆಗೆದು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 6363803942 ಸಂಖ್ಯೆಗೆ ವಾಟ್ಸಪ್ ಮಾಡಬೇಕು. ಹೊಸ ಬಳಕೆದಾರರು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮೇ 10 ರೊಳಗೆ ಸವಾರಿ ಸ್ಮಾರ್ಟ್ ಕಾರ್ಡ್ ಪಡೆದು, ಅಸ್ತಿತ್ವದಲ್ಲಿರುವ ಸವಾರಿ ಬಳಕೆದಾರರ ಕಾರ್ಯವಿಧಾನ ಅನುಸರಿಸಬೇಕು. ಇದನ್ನೂ ಓದಿ: ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ

ಈ ಕೊಡುಗೆ ಮೇ 10ರ ಮಧ್ಯರಾತ್ರಿಯವರೆಗೆ ಮಾತ್ರ ಚಾಲ್ತಿಯಲ್ಲಿರಲಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 6363902155 ಸಂಪರ್ಕಿಸುವಂತೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ

]]>
1062872 0 0 0
<![CDATA[ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ]]> https://publictv.in/ajay-banga-confirmed-as-next-world-bank-president/ Wed, 03 May 2023 16:47:31 +0000 https://publictv.in/?p=1062885 ವಾಷಿಂಗ್ಟನ್‌/ನವದೆಹಲಿ:‌ ಮಾಸ್ಟರ್ ಕಾರ್ಡ್‍ನ ಮಾಜಿ ಸಿಇಒ ಭಾರತೀಯ ಮೂಲದ ಅಜಯ್ ಬಂಗಾ (Ajay Banga) ಅವರು ಮುಂದಿನ ವಿಶ್ವಬ್ಯಾಂಕ್‌ (World Bank) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿಶ್ವಬ್ಯಾಂಕ್‌ ಬುಧವಾರ ದೃಢಪಡಿಸಿದೆ. ಮುಂದಿನ 5 ವರ್ಷಗಳ ಅವಧಿಗೆ ಬಂಗಾ ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

187 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಬಂಗಾ ಅವರು ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ಪ್ರಥಮ ಅನಿವಾಸಿ ಭಾರತೀಯ (NRI) ಎನಿಸಿಕೊಂಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಹಾಲಿ ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್ ಮಲ್ಪಾಸ್ (David Malpass) ಅವರ ಅವಧಿ ಜೂನ್‌ 2ಕ್ಕೆ ಅಂತ್ಯಗೊಳ್ಳಲಿದೆ. ನಂತರ ಬಂಗಾ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

ಯಾರು ಈ ಅಜಯ್‌ ಬಂಗಾ? ಮಹಾರಾಷ್ಟ್ರದ ಪುಣೆಯಲ್ಲಿ 1959ರ ನವೆಂಬರ್ 10 ರಂದು ಜನಿಸಿದ ಅಜಯ್‌ ಬಂಗಾ ಅವರ ತಂದೆ ಹರ್ಭಜನ್ ಸಿಂಗ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಸಂಪಾದನೆ – ಕೇಂದ್ರದ ಮಾಜಿ ನೌಕರ ಅರೆಸ್ಟ್‌

ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಓದಿದ್ದಾರೆ. ಶಿಕ್ಷಣದ ಬಳಿಕ ನೆಸ್ಲೆಇಂಡಿಯಾ ಹಾಗೂ ಸಿಟಿಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇವರು 1996ರಲ್ಲಿ ಅಮೆರಿಕಕ್ಕೆ ತೆರಳಿ ಪೆಪ್ಸಿಕೋ ಕಂಪನಿಯಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು. 2009ರಲ್ಲಿ ಅಧ್ಯಕ್ಷರಾಗಿ ಮಾಸ್ಟರ್‌ಕಾರ್ಡ್‌ ಕಂಪನಿ ಸೇರಿ ಬಳಿಕ ಅದರ ಸಿಇಒ ಆದರು. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಪ್ರಸ್ತುತ ಜನರಲ್ ಅಟ್ಲಾಂಟಿಕ್‍ ಕಂಪನಿಯ ಉಪಾಧ್ಯಕ್ಷರಾಗಿರುವ ಅಜಯ್‌ ಬಂಗಾ ಅವರು ಒಟ್ಟು 30 ವರ್ಷಗಳ ವ್ಯಾಪಾರ ಅನುಭವವನ್ನು ಹೊಂದಿದ್ದಾರೆ. ಬಂಗಾ ಅವರು ಸತತ 12 ವರ್ಷಗಳ ಕಾಲ ಮಾಸ್ಟರ್ ಕಾರ್ಡ್‍ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿ 2021ನೇ ಡಿಸೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು. ಸಾಕಷ್ಟು ಪರಿಣತಿ ಹೊಂದಿರುವ ಬಂಗಾ ಅವರು ಅಮೆರಿಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 2015ರಲ್ಲಿ ವ್ಯಾಪಾರ ನೀತಿ ಮತ್ತು ಮಾತುಕತೆಗಳ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ನೇಮಿಸಿದ್ದರು.

]]>
1062885 0 0 0
<![CDATA[ನನ್ನ ಬಿಟ್ಟು ಬೇರೆ ಯಾರೂ CM ಆಗಲು ಸಾಧ್ಯವಿಲ್ಲ: ಹೆಚ್‌ಡಿಕೆ ಗುಡುಗು]]> https://publictv.in/no-one-can-be-the-cm-but-me-says-hdk/ Wed, 03 May 2023 17:16:33 +0000 https://publictv.in/?p=1062889 ಶಿವಮೊಗ್ಗ: 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ದೇವರ ಆಶೀರ್ವಾದ ಜೆಡಿಎಸ್ ಪಕ್ಷದ ಮೇಲಿದೆ. ಹೀಗಾಗಿ ಈ ಬಾರಿ ನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ನಡೆದ ಜೆಡಿಎಸ್ (JDS) ಚುನಾವಣಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮದಲ್ಲಿ ಪ್ರತಿನಿತ್ಯ ಒಂದೊಂದು ಸರ್ವೆ ವರದಿ‌ ಬರುತ್ತಿದೆ. ಈ ಬಾರಿ ಜೆಡಿಎಸ್ 30 ರಿಂದ 35 ಸ್ಥಾನ ಬರದೇ ಇದ್ದರೆ ಆಗ ಪ್ರಶ್ನೆ ಮಾಡಿ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ

ನನ್ನ ಸರ್ಕಾರದ ಅವಧಿಯಲ್ಲಿ ನಾನು ಕ್ಷೇತ್ರಗಳಿಗೆ ಕೊಟ್ಟ ಹಣದಿಂದ ಅಭಿವೃದ್ಧಿ ಆಗಿದೆ. ನಾನು ಅಭಿವೃದ್ಧಿಗೆ ಹಣ ಕೊಡದೇ 40 ಪರ್ಸೆಂಟ್‌ ಕಮೀಷನ್ ಹೊಡೆದಿದ್ದರೆ, 10 ಸಾವಿರ ಕೋಟಿ ರೂ. ಹೊಡೆಯಬಹುದಿತ್ತು. ಆದ್ರೆ ನಾನು ಲೂಟಿ ಹೊಡೆಯುವ ಕೆಲಸ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸಿಎಫ್‌ ಆಯ್ಕೆ ಮುಸುಕಿನ ಗುದ್ದಾಟ – ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ

ಈ ಹಿಂದೆ ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಲಂಚದ ಹಣವನ್ನು ಕೈಯಲ್ಲಿ ಗೋರುತ್ತಿದ್ದರು. ಆದರೆ ಬಿಜೆಪಿಯವರು ಜೆಸಿಬಿ, ಇಟಾಚಿ ಹಾಕಿಕೊಂಡು ಗೋರುತ್ತಿದ್ದಾರೆ. ಸಾಕು ರಾಜ್ಯದ ಜನರು ಅವರಿಗೆ ಇನ್ನೆಷ್ಟು ಗೋರಲು ಬಿಡುತ್ತೀರಾ. ನಮಗೆ 5 ವರ್ಷದ ಸ್ಪಷ್ಟ ಬಹುಮತದ ಸರ್ಕಾರ ನಡೆಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

]]>
1062889 0 0 0
<![CDATA[ಶರತ್ ಬಾಬು ನಿಧನ ಸುಳ್ಳು- ಆರೋಗ್ಯದ ಬಗ್ಗೆ ನಟನ ಕುಟುಂಬ ಹೇಳಿದ್ದೇನು..?]]> https://publictv.in/sarath-babu-is-not-dead-hes-alive-and-recovering-says-his-family/ Wed, 03 May 2023 17:23:45 +0000 https://publictv.in/?p=1062892 ಬೆಂಗಳೂರು: ಹಿರಿಯ ನಟ ಶರತ್ ಬಾಬು (Sarath Babu) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶರತ್ ಬಾಬು ನಿಧರಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಅವರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ನಟನ ಆರೋಗ್ಯ ಸದ್ಯ ಚೇತರಿಸಿಕೊಂಡಿದೆ. ಶೀಘ್ರವೇ ಶರತ್ ಬಾಬು ಗುಣಮುಖರಾಗಲಿದ್ದಾರೆ ಎಂದು ಶರತ್ ಬಾಬು ಅವರ ಅಕ್ಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚಿಗೆ ನಟ ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸುಧಾರಿಸಿದ ಕಾರಣ ಅವರನ್ನು ಬೆಂಗಳೂರಿನಿಂದ ಹೈದರಾಬಾದ್‍ನ ಆಸ್ಪತ್ರೆ (Hyderabad Hospital) ಗೆ ಶಿಫ್ಟ್ ಮಾಡಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟನಿಗೆ ಉಸಿರಾಡಲು ಕಷ್ಟವಾಗಿತ್ತು. ಹೀಗಾಗಿ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಖ್ಯಾತ ನಟ, ನಿರ್ದೇಶಕ ಮನೋಬಾಲಾ ನಿಧನ

ದಕ್ಷಿಣದ ಹಿರಿಯ ನಟ ಶರತ್ ಬಾಬು ಸುಮಾರು 4 ದಶಕಗಳಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿರಪರಿಚಿತರಾಗಿದ್ದರು. ಕನ್ನಡದಲ್ಲಿ ಅವರು ನಟಿಸಿದ ಅಮೃತವರ್ಷಿಣಿ (mruthaVarshini) ಸಿನಿಮಾ ಸೂಪರ್ ಹಿಟ್ ಆಗಿತ್ತು.

]]>
1062892 0 0 0
<![CDATA[ಬಿಗ್ ಬುಲೆಟಿನ್ 03 May 2023 ಭಾಗ-3]]> https://publictv.in/big-bulletin-pm-narendra-modi-may-3-2023/ Wed, 03 May 2023 17:48:03 +0000 https://publictv.in/?p=1062903 ]]> 1062903 0 0 0 <![CDATA[ಬಿಗ್ ಬುಲೆಟಿನ್ 03 May 2023 ಭಾಗ-2]]> https://publictv.in/big-bulletin-03-may-2023/ Wed, 03 May 2023 17:51:11 +0000 https://publictv.in/?p=1062906 ]]> 1062906 0 0 0 <![CDATA[ಬಿಗ್ ಬುಲೆಟಿನ್ 03 May 2023 ಭಾಗ-1]]> https://publictv.in/big-bulletin-may-03/ Wed, 03 May 2023 17:57:38 +0000 https://publictv.in/?p=1062909 ]]> 1062909 0 0 0 <![CDATA[ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ - 6 ವಿಕೆಟ್‌ಗಳ ಭರ್ಜರಿ ಜಯ]]> https://publictv.in/indian-premier-league-mumbai-won-by-6-wickets-with-7-balls-remaining/ Wed, 03 May 2023 17:59:57 +0000 https://publictv.in/?p=1062911 ಮೊಹಾಲಿ: ಇಶಾನ್‌ ಕಿಶನ್‌ (Ishan Kishan) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಅರ್ಧ ಶತಕಗಳ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌, ಕಿಂಗ್ಸ್‌ ಪಂಜಾಬ್‌ ತಂಡದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಗೆಲುವಿಗೆ 215 ರನ್‌ ಗುರಿ ಪಡೆದ ಮುಂಬೈ ಆಕ್ರಮಣ ಕಾರಿ ಬ್ಯಾಟಿಂಗ್‌ ನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 216 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ತನ್ನ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಸೇಡುತೀರಿಸಿಕೊಂಡಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದೆ.

ಚೇಸಿಂಗ್‌ ಆರಂಭಿಸಿದ ಮುಂಬೈ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ, 2ನೇ ವಿಕೆಟ್‌ ಜೊತೆಯಾಟಕ್ಕೆ 6 ಓವರ್‌ಗಳಲ್ಲಿ 54 ರನ್‌ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಇಶಾನ್ ‌ಕಿಶನ್‌ (Ishan Kishan) ಬ್ಯಾಟಿಂಗ್‌ ನೆರವಿನಿಂದ ಮುಂಬೈ ತಂಡ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಪಂಜಾಬ್‌ ಬೌಲರ್‌ಗಳನ್ನು ಚೆಂಡಾಡಿದ ಈ ಜೋಡಿ ಕೇವಲ 55 ಎಸೆತಗಳಲ್ಲಿ ಬರೋಬ್ಬರಿ 116 ರನ್‌ ಸಿಡಿಸಿತ್ತು. ಕೊನೆಯಲ್ಲಿ ಕಣಕ್ಕಿಳಿದ ಟಿಮ್‌ ಡೇವಿಡ್‌ ಹಾಗೂ ತಿಲಕ್‌ ವರ್ಮಾ ಸ್ಫೋಟಕ ಬ್ಯಾಟಿಂಗ್‌ ತಂಡಕ್ಕೆ ಇನ್ನಷ್ಟು ನೆರವಾಯಿತು. ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 91 ರನ್‌ ಗಳಿಸಿದ್ದ ಮುಂಬೈಗೆ ಇನ್ನೂ 60 ಎಸೆತಗಳಲ್ಲಿ 124 ರನ್‌ಗಳ ಅಗತ್ಯವಿತ್ತು. ಆದರೆ ಮುಂಬೈ 18.5 ಓವರ್‌ಗಳಲ್ಲೇ 216 ರನ್‌ ಸಿಡಿಸಿ ಗೆದ್ದು ಬೀಗಿತು.

ಮುಂಬೈ ಪರ ಇಶಾನ್‌ ಕಿಶನ್‌ 75 ರನ್‌ (41 ಎಸೆತ 4 ಸಿಕ್ಸರ್‌, 7 ಬೌಂಡರಿ), ಸೂರ್ಯಕುಮಾರ್‌ ಯಾದವ್‌ 66 ರನ್‌ (31 ಎಸೆತ, 8 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 19 ರನ್‌ (10 ಎಸೆತ, 3 ಬೌಂಡರಿ), ತಿಲಕ್‌ ವರ್ಮಾ ಸ್ಫೋಟಕ 26 ರನ್‌ (10 ಎಸೆತ, 1 ಬೌಂಡರಿ, 3 ಸಿಕ್ಸರ್)‌ ಚಚ್ಚಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತ್ತು. ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 78 ರನ್‌ ಗಳಿಸಿತ್ತು. ಬಳಿಕ ಮುರಿಯದ 4ನೇ ವಿಕೆಟ್‌ಗೆ ಒಂದಾದ ಲಿಯಾಮ್‌ ಲಿವಿಂಸ್ಟೋನ್‌ (Liam Livingstone) ಹಾಗೂ ಜಿತೇಶ್‌ ಶರ್ಮಾ (Jitesh Sharma) 53 ಎಸೆತಗಳಲ್ಲಿ 119 ರನ್‌ ಸಿಡಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಕಿಂಗ್ಸ್‌ ಪಂಜಾಬ್‌ ಪರ ಶಿಖರ್‌ ಧವನ್‌ 30 ರನ್‌, ಮ್ಯಾಥಿವ್‌ ಶಾರ್ಟ್‌ 27 ರನ್‌, ಲಿಯಾಮ್‌ ಲಿವಿಂಗ್ಸ್ಟನ್‌ ಭರ್ಜರಿ 82 ರನ್‌ (42 ಎಸೆತ, 7 ಬೌಂಡರಿ, 4 ಸಿಕ್ಸರ್‌), ಜಿತೇಶ್‌ ಶರ್ಮಾ 49 ರನ್‌ (27 ಎಸೆತ, 5 ಬೌಂಡರಿ, 2 ಸಿಕ್ಸರ್‌) ಚಚ್ಚಿದರು.

]]>
1062911 0 0 0
<![CDATA[ಕಾಂಗ್ರೆಸ್‌ ಬಜರಂಗಿ ಸಂಘರ್ಷ - ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ]]> https://publictv.in/karnataka-election-2023-bajrang-dal-to-conduct-hanuman-chalisa-recital-programme-in-counter-to-congress/ Thu, 04 May 2023 02:14:55 +0000 https://publictv.in/?p=1062917 ಬೆಂಗಳೂರು: ಬಜರಂಗ ದಳವನ್ನು (Bajrang Dal) ನಿಷೇಧಿಸುವ ಪ್ರಸ್ತಾಪ ಮಾಡಿದ ಕಾಂಗ್ರೆಸ್ (Congress) ಇದೀಗ ಪೇಚಾಡುವಂತಾಗಿದೆ. ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪ ಮಾಡಿದ್ದೇ ಮಾಡಿದ್ದು ಹಿಂದೂ (Hindu) ಸಂಘಟನೆಗಳು ಬೆಂಕಿಯುಂಡೆಯಂತಾಗಿದೆ.

ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಅಖಾಡಕ್ಕೆ ಇಳಿದಿರುವ ಬಜರಂಗದಳ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೇರಿಗೆ ಸವ್ವಾಸೇರು ಎನ್ನುವಂತೆ ಇಂದು ಹನುಮಾನ್ ಚಾಲೀಸಾ ಪಠಣ ಮಾಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿಜಯನಗರ, ಜಯನಗರ, ಕತ್ರಿಗುಪ್ಪೆ, ರಾಜಾಜಿನಗರ, ಬನ್ನೇರುಘಟ್ಟ ಸೇರಿ ಬೆಂಗಳೂರಿನ 20 ಕಡೆಗಳಲ್ಲಿ ಹನುಮಂತನ ದೇವಾಲಯ, ರಾಮ ಮಂದಿರದಲ್ಲಿ  ಹನುಮಾನ್ ಚಾಲೀಸಾ ಪಠಣೆ ಮಾಡಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೊಡೆತಟ್ಟಿ ನಿಲ್ಲಲು ಬಜರಂಗದಳ, ಹಿಂದೂಸಂಘಟನೆಗಳು ನಿರ್ಧರಿಸಿದೆ.

 

ಬಿಜೆಪಿ ನಾಯಕರು ಇಂದು ಹನುಮಾನ್ ಚಾಲೀಸಾ (Hanuman Chalisa) ಪಠಣೆಗೆ ಬರಲಿ ಬಿಡಲಿ. ಅದು ಅವರ ವಿವೇಚನೆಗೆ ಬಿಡಲಾಗಿದೆ. ಇದು ರಾಜಕೀಯ ಹೋರಾಟವಲ್ಲ ಹಿಂದೂಗಳ ಅಸ್ತಿತ್ವದ ಪ್ರಶ್ನೆ ಎಂದು ಬಜರಂಗದಳ ಹೇಳಿದೆ.  ಇದನ್ನೂ ಓದಿ: ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ

ಬಿಜೆಪಿಯಿಂದ ಬಜರಂಗಿ ಅಸ್ತ್ರ: ಕಳೆದ ಬಾರಿ ಚುನಾವಣೆ ವೇಳೆ ಲಿಂಗಾಯತ ಪ್ರತ್ಯೇಕಧರ್ಮ (Lingayat Religion) ವಿವಾದದಿಂದ ಕಾಂಗ್ರೆಸ್ ಕುರ್ಚಿ ಕಳೆದುಕೊಳ್ಳುವಂತಾಯಿತು. ಈ ಬಾರಿ ಬಜರಂಗದಳ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆ ಪ್ರಸ್ತಾವನೆ ಬಿಜೆಪಿ (BJP) ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ. ಈ ಅಸ್ತ್ರವನ್ನು ಬಿಜೆಪಿ ಪರಿಣಾಮಕಾರಿಯಾಗೇ ಬಳಸಿಕೊಳ್ಳುತ್ತಿದ್ದು ಹಿಂದೂ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ಬಜರಂಗಿ ಅಸ್ತ್ರ ಪ್ರಯೋಗಿಸಿದ್ದಾರೆ. ಮುಲ್ಕಿ, ಅಂಕೋಲಾ, ಬೈಲಹೊಂಗಲದಲ್ಲಿ ಬಜರಂಗಿ ಬಲಿ ಕೀ ಜೈ ಎಂದು ಹೇಳಿ ಭಾಷಣ ಆರಂಭಿಸುತ್ತಿದ್ದಾರೆ. ಈ ಮೂಲಕ ಜನರಿಗೆ ಹತ್ತಿರವಾಗಲು ಮುಂದಾಗಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಗರು ಮುಗಿಬಿದ್ದಿದ್ದಾರೆ. ಕಾಂಗ್ರೆಸ್‍ಗೆ ವಿನಾಶ ಕಾಲೇ ವಿಪರೀತ ಬುದ್ದಿ. ತಿರುಕನ ಕನಸು. ಕಾಂಗ್ರೆಸ್‍ನದ್ದು ಹಿಂದೂ ವಿರೋಧಿ ಮಾನಸಿಕತೆ. ಬಜರಂಗದಳ ನಿಷೇಧ ಮಾಡಿ ನೋಡಲಿ ಎಂದು ಸವಾಲು ಎಸೆದಿದ್ದಾರೆ.

]]>
1062917 0 0 0
<![CDATA[ಪತ್ನಿ, ಸಹೋದರನಿಗಾಗಿ ಒಂದು ದಿನ ಆಸ್ಪತ್ರೆಗೆ ಭೇಟಿ - ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಿಯಾಂಕ್ ಪ್ರಚಾರ]]> https://publictv.in/karnataka-election-2023-priyank-kharge-visits-hospital-one-day-for-wife-and-brother-and-another-day-to-election-campaign-in-chittapura/ Thu, 04 May 2023 03:28:05 +0000 https://publictv.in/?p=1062922 ಕಲಬುರಗಿ: ಕಾಂಗ್ರೆಸ್ (Congress) ಶಾಸಕ ಹಾಗೂ ಚಿತ್ತಾಪುರ (Chittapura) ಅಭ್ಯರ್ಥಿಯಾಗಿರುವ ಪ್ರಿಯಾಂಕ್ ಖರ್ಗೆ (Priyank Kharge) ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಒಂದೆಡೆ ಚುನಾವಣೆ (Election) ಹತ್ತಿರ ಬರುತ್ತಿದ್ದು, ಇನ್ನೊಂದೆಡೆ ತಮ್ಮ ಪತ್ನಿ ಶ್ರುತಿ ಖರ್ಗೆ (Shruthi Kharge) ಅನಾರೋಗ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಶ್ರುತಿ ಖರ್ಗೆ ಬ್ರೈನ್ ಟ್ಯೂಮರ್‌ನಿಂದ (Brain Tumor) ಬಳಲುತ್ತಿದ್ದು, ಮುಂಬೈನ (Mumbai) ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

ಪತ್ನಿ ಅಲ್ಲದೇ ಒಡಹುಟ್ಟಿದ ಸಹೋದರ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿ ಹಾಗೂ ಆರೋಗ್ಯ ವಿಚಾರಣೆಗಾಗಿ ಪ್ರಿಯಾಂಕ್ ಖರ್ಗೆ ಒಂದು ದಿನ ಆಸ್ಪತ್ರೆಗೆ ತೆರಳಿದರೆ ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

ನಾಮಪತ್ರ ಸಲ್ಲಿಕೆಯ ಬಳಿಕ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಲ್ಲೇ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ (BJP) ನಾಯಕರು ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಆಗಿ ಇರಿಸಿಕೊಂಡು ಸೋಲಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಪತ್ನಿಯ ಆರೋಗ್ಯ ದೃಷ್ಟಿಯಿಂದ ಪ್ರಿಯಾಂಕ್ ಖರ್ಗೆ ಯಾವುದೇ ಕಾರ್ಯಕ್ರಮದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಕಳೆದ ಎರಡು ಮೂರು ದಿನದಿಂದ ನೋವಿನ ನಡುವೆಯೂ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಬಿಟ್ಟು ಬೇರೆ ಯಾರೂ CM ಆಗಲು ಸಾಧ್ಯವಿಲ್ಲ: ಹೆಚ್‌ಡಿಕೆ ಗುಡುಗು

ಪುತ್ರ ಪ್ರಿಯಾಂಕ್ ಖರ್ಗೆ ಗೆಲುವಿಗಾಗಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಏಪ್ರಿಲ್ 6ರಂದು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ರಾವೂರ್ ಮತ್ತು ದಂಡೋತ್ತಿ ಗ್ರಾಮದಲ್ಲಿ ಬೃಹತ್ ಸಮಾವೇಶವನ್ನು ನಡೆಸಲಿದ್ದಾರೆ. ಇದನ್ನೂ ಓದಿ: ಮೇ 10 ರಂದು ತಪ್ಪದೇ ವೋಟ್‌ ಮಾಡಿದವರಿಗೆ ಸಿಗುತ್ತೆ ಬಂಪರ್‌ ಗಿಫ್ಟ್‌..!

]]>
1062922 0 0 0
<![CDATA[ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ]]> https://publictv.in/karnataka-election-2023-election-commission-issues-show-cause-notices-to-congs-priyank-bjps-yatnal-for-their-nalayak-and-vishkanya-remarks/ Thu, 04 May 2023 03:06:09 +0000 https://publictv.in/?p=1062928 ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಚಿತ್ತಾಪುರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ (Priyank K harge) ಅವರಿಗೆ ಚುನಾವಣಾ ಆಯೋಗ (Election Commission) ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಪಿಯೂಷ್ ಗೋಯಲ್ (Piyush Goyal) ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಿಯಾಂಕ್‌ ಖರ್ಗೆ ಅವರಿಗೆ ನೋಟಿಸ್‌ ಜಾರಿಯಾಗಿದೆ.  ಕಾಂಗ್ರೆಸ್‌ ನಾಯಕರು ದೂರು ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ (Koppala) ಜಿಲ್ಲೆಯ ಯಲಬುರ್ಗ ದಲ್ಲಿ ಮಾಡಿದ ಭಾಷಣದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ನೋಟಿಸ್‌ ಜಾರಿ ಮಾಡಲಾಗಿದೆ. ಕೊಪ್ಪಳ‌ ಜಿಲ್ಲಾ ಚುನಾವಣಾಧಿಕಾರಿಗಳು ಯತ್ನಾಳ್​ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಮೇ 4 ರೊಳಗೆ ಸ್ಪಷ್ಟನೆ ನೀಡಲು ಸೂಚನೆ ನೀಡಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ ನೋಟಿಸ್‌ ಜಾರಿ ಯಾಕೆ? ಪ್ರಿಯಾಂಕ್‌ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು 'ನಾಲಾಯಕ್‌' ಎಂದು ಕರೆದಿದ್ದರು. ಯತ್ನಾಳ್‌ ಅವರು ಮೋದಿ ವಿಶ್ವ ನಾಯಕ. ಅಂಥ ನಾಯಕನನ್ನು ನಾಗರಹಾವಿಗೆ ಹೋಲಿಸುವುದು ಸರಿಯೇ? ಕಾಂಗ್ರೆಸ್‌ ನಾಯಕರು ಸೋನಿಯಾ ಮಾತಿಗೆ ಮಣಿದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋನಿಯಾ ಗಾಂಧಿ ವಿಷಕನ್ಯೆಯೇ ಎಂದು ಪ್ರಶ್ನಿಸಿದ್ದರು. ರಾಹುಲ್​ ಗಾಂಧಿ ಅವರನ್ನು ʼಅರೆಹುಚ್ಚʼ ಎಂದು ಕರೆದಿದ್ದರು.]]>
1062928 0 0 0
<![CDATA[ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಹತ್ಯೆ - ಜಮ್ಮುವಿನಲ್ಲಿ ಹೈ ಅಲರ್ಟ್]]> https://publictv.in/two-terrorists-killed-in-encounter-in-baramulla-high-alert-in-jammu/ Thu, 04 May 2023 03:14:54 +0000 https://publictv.in/?p=1062932 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ (Baramulla) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು (Terrorists) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಇದು 2ನೇ ಎನ್‌ಕೌಂಟರ್ ಆಗಿದೆ. ಮುಂದಿನ ಕೆಲವು ದಿನಗಳಲ್ಲಿ ಭಯೋತ್ಪಾದಕರು ದೊಡ್ಡ ಮಟ್ಟದ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದ್ದಾರೆ.

ವನಿಗಮ್ ಗ್ರಾಮದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಬಳಿಕ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

ಎನ್‌ಕೌಂಟರ್ ನಡೆಸಿದ ಪ್ರದೇಶದಿಂದ ಒಂದು ಎಕೆ ರೈಫಲ್ ಮತ್ತು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಯಾದ ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬುಧವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಅಪರಿಚಿತ ಭಯೋತ್ಪಾದಕರನ್ನು ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ನಡೆಸಿದ್ದಾರೆ. ಭಯೋತ್ಪಾದಕರು ಈ ಪ್ರದೇಶದಲ್ಲಿ ಕೆಲವು ಪ್ರಮುಖ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

]]>
1062932 0 0 0
<![CDATA[ಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ - ಹಲ್ಲೆ ಆರೋಪ]]> https://publictv.in/clash-between-protesting-wrestlers-police-assault-alleged/ Thu, 04 May 2023 04:28:47 +0000 https://publictv.in/?p=1062939 ನವದೆಹಲಿ: ಮಹಿಳಾ ಕುಸ್ತಿಪಟುಗಳ (Wrestlers) ಮೇಲೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ರಾತ್ರಿ ಕುಸ್ತಿಪಟುಗಳು ಹಾಗೂ ಪೊಲೀಸರ (Police) ನಡುವೆ ಘರ್ಷಣೆ ಏರ್ಪಟ್ಟಿದೆ.

ಪ್ರತಿಭಟನಾ ಸ್ಥಳಕ್ಕೆ ತಮ್ಮ ಹಾಸಿಗೆಗಳನ್ನು ತರಲು ಯತ್ನಿಸಿದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಅನೇಕ ಕುಸ್ತಿಪಟುಗಳ ತಲೆಗೆ ಏಟು ಬಿದ್ದಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಓರ್ವ ಕುಸ್ತಿಪಟು ಘರ್ಷಣೆಯಲ್ಲಿ ಗಾಯಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರು ಅನುಮತಿಯಿಲ್ಲದೆ ಹಾಸಿಗೆಗಳನ್ನು ಹಿಡಿದುಕೊಂಡು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದಾಗ ಸಣ್ಣ ವಾಗ್ವಾದ ನಡೆದಿದೆ. ನಂತರ ಭಾರ್ತಿ ಹಾಗೂ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದು, ಹಲ್ಲೆಯ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಹತ್ಯೆ – ಜಮ್ಮುವಿನಲ್ಲಿ ಹೈ ಅಲರ್ಟ್

ಘರ್ಷಣೆಯ ಬಳಿಕ ಪ್ರತಿಭಟನಾ ಸ್ಥಳದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಹಾಗೂ ಬ್ಯಾರಿಕೇಡ್‌ನಿಂದ ನಿರ್ಬಂಧಿಸಲಾಗಿದೆ. ಪ್ರತಿಭಟನಾ ನಿರತ ಕುಸ್ತಿಪಟುಗಳ ಬಳಿಗೆ ಮಾಧ್ಯಮ ಸಿಬ್ಬಂದಿ ತೆರಳದಂತೆಯೂ ತಡೆಯಲಾಗಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತದ ಉನ್ನತ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 6 ಬಾರಿ ಸಂಸದರಾಗಿರುವ ಭೂಷಣ್ ಸಿಂಗ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಸಿಂಗ್ ವಿರುದ್ಧ ಕುಸ್ತಿಪಟುಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

]]>
1062939 0 0 0
<![CDATA[ಇದು ಮುಸ್ಲಿಂ ಲೀಗ್ ಪ್ರಣಾಳಿಕೆ - ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ]]> https://publictv.in/ks-eshwarappa-burnt-the-congress-manifesto-in-kalaburagi/ Thu, 04 May 2023 04:42:31 +0000 https://publictv.in/?p=1062940 ಕಲಬುರಗಿ: ಕಾಂಗ್ರೆಸ್‍ನ (Congress) ಚುನಾವಣಾ ಪ್ರಣಾಳಿಕೆಯು ಮೊಹ್ಮದ್ ಅಲಿ ಜಿನ್ನಾ ಪ್ರಣಾಳಿಕೆ ಆಗಿದೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ (KS Eshwarappa) ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ (Election) ಪ್ರಚಾರದಲ್ಲಿ ಬಜರಂಗದಳ ನಿಷೇಧ ವಿಚಾರವಾಗಿ ಕಿಡಿಕಾರಿದರು. ಯುವಜನರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಬಜರಂಗದಳ ಮಾಡುತ್ತಿದೆ. ಗೋಹತ್ಯೆ ತಡೆಯಲು ಮುಂದಾಗಿರುವ ಬಜರಂಗದಳ ಬ್ಯಾನ್ ಮಾಡ್ತಿರಾ? ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನಿಮ್ಮ ಎದುರೇ ಸುಟ್ಟು ಹಾಕುತ್ತಿದ್ದೇನೆ. ಕಾಂಗ್ರೆಸ್ ಬರೀ ಸುಳ್ಳಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಪ್ರಣಾಳಿಕೆಯಿಂದ ಯಾವ ಪ್ರಯೋಜನ ಇಲ್ಲ ಎಂದು ಕಿಡಿಕಾರಿದರು.

ಬಜರಂಗದಳ ದಳ ಬ್ಯಾನ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸ್‍ನ ಮನಸ್ಥಿತಿ ರಾಜ್ಯದ ಜನರಿಗೆ ಗೊತ್ತಾಗಿದೆ. ಎಲ್ಲಾ ಮುಸ್ಲಿಮರು ಒಂದೇ ಥರ ಅಲ್ಲ. ಕೆಲ ಮುಸ್ಲಿಮರು ಕಾಂಗ್ರೆಸ್‍ನ ವಿರುದ್ಧವಾಗಿದ್ದಾರೆ. ಇದು ಮುಸ್ಲಿಂ ಲೀಗ್‍ನ ಪ್ರಣಾಳಿಕೆ, ಮಹ್ಮದ್ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆ. ಬಜರಂಗದಳ ಬ್ಯಾನ್ ಮಾಡಿ ಮುಸ್ಲಿಮರ ತುಷ್ಟೀಕರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದ ಅವರು, ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಪ್ರಣಾಳಿಕೆ ಬಹಿಷ್ಕರಿಸಲು ಮನವಿ ಮಾಡಿದರು.

ಬಜರಂಗದಳ ಅಂದರೆ ಆಂಜನೇಯ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು ರಾವಣ. ಹೀಗಾಗಿ ಆಂಜನೇಯ ಬಾಲಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸರ್ವನಾಶವಾಗಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನ ಕೂಡ ಕಳೆದುಕೊಳ್ಳಲಿದೆ ಎಂದು ಗುಡುಗಿದರು.

ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾಕೆ ಎನ್ನುವುದೇ ಕಾಂಗ್ರೆಸ್‍ಗೆ ಗೊತ್ತಿಲ್ಲ. ಧರ್ಮ, ಜಾತಿ ವಿಚಾರದಲ್ಲಿ ವಿಷಬೀಜ ಬಿತ್ತುವ ಸಂಘಟನೆಗಳ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಒಕ್ಕಲಿಗರು ನನ್ನ ಹಿಂದೆ ಇದ್ದಾರೆ ಹಾಗಾಗಿ ನಾನು ಸಿಎಂ ಆಗ್ತಿನಿ ಅಂತಾ ಡಿಕೆಶಿ ಹೇಳ್ತಾರೆ. ಹಿಂದುಳಿದ ಸಮಾಜ ನನ್ನ ಹಿಂದೆ ಇದೆ ಇದರಿಂದ ನಾನು ಸಿಎಂ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಸಮಾಜಗಳನ್ನು ಒಟ್ಟಿಗೆ ತಗೊಂಡು ಹೋಗುವ ಕೆಲಸ ಮಾಡಬೇಕು. ಆದರೆ ಜಾತಿ ಹೆಸರಲ್ಲಿ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

ಮೊದಲು ಸಿದ್ದರಾಮಯ್ಯ, ಡಿಕೆಶಿ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ಬಗ್ಗೆ ದೂರು ಕೊಡುವ ಅವಶ್ಯಕತೆ ಇಲ್ಲ. ಪಿಎಎಫ್‍ಐ ಸಂಘಟನೆ ಗೋಹತ್ಯೆ ಮಾಡುತ್ತಿದೆ. ಗೋಹತ್ಯೆ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಕೊಲೆ ಆಗಿದೆ. ಪಿಎಎಫ್‍ಐ ಸಂಘಟನೆ ಮೇಲಿದ್ದ 123 ಕೇಸ್ ವಾಪಸ್‌ ತೆಗೆದುಕೊಳ್ಳಲಾಗಿದೆ. ಭಯೋತ್ಪಾದನೆಗೆ ಕಾಂಗ್ರೆಸ್ ನೇರವಾಗಿ ಬೆಂಬಲ ನೀಡುತ್ತಿದೆ. ನೇರವಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಜಾತಿ ಹೆಸರಲ್ಲಿ ವೋಟ್ ಕೇಳಲು ಕಾಂಗ್ರೆಸ್‍ಗೆ ಯಾವುದೇ ನೈತಿಕತೆ ಇಲ್ಲ. ಇಡೀ ದೇಶದಲ್ಲಿ ಈಗಾಗಲೇ ಪಿಎಎಫ್‍ಐ ಬ್ಯಾನ್ ಆಗಿರೋ ವಿಚಾರ ಕಾಂಗ್ರೆಸ್‍ಗೆ ಗೊತ್ತಿಲ್ವ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪತ್ನಿ, ಸಹೋದರನಿಗಾಗಿ ಒಂದು ದಿನ ಆಸ್ಪತ್ರೆಗೆ ಭೇಟಿ – ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಿಯಾಂಕ್ ಪ್ರಚಾರ

]]>
1062940 0 0 0
<![CDATA[ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ]]> https://publictv.in/karnataka-election-2023-bajrang-dal-is-not-al-qaeda-appachu-ranjan-sparks-against-siddaramaiah-in-somwarpet/ Thu, 04 May 2023 04:36:18 +0000 https://publictv.in/?p=1062942 ಮಡಿಕೇರಿ: ಬಜರಂಗದಳ ಭಯೋತ್ಪಾದಕ ಸಂಘಟನೆಯಲ್ಲ. ಅದು ಅಲ್-ಖೈದಾವೂ ಅಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ (Appachu Ranjan) ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದ್ದಾರೆ.

ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಶಿರಂಗಾಲದಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಒಂದು ದೇಶಭಕ್ತ ಸಂಘಟನೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಬಜರಂಗದಳವನ್ನು (Bhajarang Dal) ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಅವರು ಅವಸಾನ ಹೊಂದುವುದು ಖಚಿತ ಎಂದು ಹರಿಹಾಯ್ದರು. ಇದನ್ನೂ ಓದಿ: ಪತ್ನಿ, ಸಹೋದರನಿಗಾಗಿ ಒಂದು ದಿನ ಆಸ್ಪತ್ರೆಗೆ ಭೇಟಿ – ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಿಯಾಂಕ್ ಪ್ರಚಾರ

ಬಜರಂಗದಳ ದೇಶಾಭಿಮಾನವನ್ನು ಪಸರಿಸುತ್ತಿರುವ ದೇಶಭಕ್ತರ ಸಂಘಟನೆ. ಅದು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಇಂತಹ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದಿರುವ ಸಿದ್ದರಾಮಯ್ಯ ಈ ಬಾರಿ ವರುಣಾದಲ್ಲಿ (Varuna) ಸೋಲುವುದು ಖಚಿತ. ಅಲ್ಲದೇ ಕಾಂಗ್ರೆಸ್ (Congress) 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದರು. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

ಇಂಗ್ಲೆಂಡ್‌ನಿಂದ ಟಿಪ್ಪುವಿನ ಖಡ್ಗ ತಂದ ವಿಜಯ್ ಮಲ್ಯ ಮಣ್ಣು ಮುಕ್ಕಿದರು. ಟಿಪ್ಪು ಧಾರವಾಹಿ ಮಾಡಿದ ಸಂಜಯ್ ಖಾನ್ ಸಹ ಮಣ್ಣು ಮುಕ್ಕಿದರು. ಇದೀಗ ಟಿಪ್ಪು ಜಯಂತಿ ಮತ್ತೆ ಮಾಡುತ್ತೇವೆ ಎನ್ನುತ್ತಿರುವ ಸಿದ್ದರಾಮಯ್ಯನವರ ಸರದಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

]]>
1062942 0 0 0
<![CDATA[‘ದಿ ಕೇರಳ ಸ್ಟೋರಿ’ ನಿಷೇಧಕ್ಕೆ ಹೆಚ್ಚಿದ ಒತ್ತಡ: ನಾಳೆ ಸಿನಿಮಾ ರಿಲೀಸ್]]> https://publictv.in/increased-pressure-to-ban-the-kerala-story-movie-release-tomorrow/ Thu, 04 May 2023 05:09:06 +0000 https://publictv.in/?p=1062945 ಕೇರಳ ಚಿತ್ರೋದ್ಯಮದಲ್ಲಿ ಭಾರೀ ವಿವಾದಕ್ಕೆ (Controversy) ಕಾರಣವಾಗಿರುವ 'ದಿ ಕೇರಳ ಸ್ಟೋರಿ' (The Kerala Story) ಸಿನಿಮಾವನ್ನು ನಿಷೇಧ ಮಾಡಲೇಬೇಕು ಎಂದು ಅನೇಕ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರಿವೆ. ಕಾನೂನಾತ್ಮಕವಾಗಿ ತಡೆಹಿಡಿಯಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಸರಕಾರ ಮಧ್ಯ ಪ್ರವೇಶಿಸಿ ಕೋಮುಗಲಭೆ ಸೃಷ್ಟಿಸುವ ಇಂತಹ ಚಿತ್ರವನ್ನು ತಡೆಯಬೇಕು ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮುತ್ತು ಮುಸ್ಲಿಂ (Muslim) ಸಂಘಟನೆಗಳು ಸರಕಾರಕ್ಕೆ ಒತ್ತಡ ಹಾಕಿವೆ.

ಈ ನಡುವೆಯೇ ನಾಳೆ ದೇಶಾದ್ಯಂತ ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗುತ್ತಿದ್ದು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಚಿತ್ರ ಬಿಡುಗಡೆಗೆ ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಲ್ಲದೇ ನಿನ್ನೆಯಷ್ಟೇ ಜೆ.ಎನ್.ಯುನಲ್ಲಿ ಚಿತ್ರದ ಪ್ರದರ್ಶನ ಕೂಡ ನಡೆದಿದೆ. ಇದರ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿದೆ. ಇದನ್ನೂ ಓದಿ:ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್

ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.

]]>
1062945 0 0 0
<![CDATA[ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ - ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?]]> https://publictv.in/v-somanna-vs-puttarangashetty-who-will-win-in-chamarajanagara/ Thu, 04 May 2023 05:34:39 +0000 https://publictv.in/?p=1062960 ಚಾಮರಾಜನಗರ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ (Chamarajanagara) ಹೈವೋಲ್ಟೇಜ್ ಕ್ಷೇತ್ರವಾಗಿ ಕಾಣಿಸಿಕೊಂಡಿದೆ. ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (Somanna) ವರುಣಾ, ಚಾಮರಾಜನಗರ ಎರಡು ಕಡೆಯೂ ಸ್ಪರ್ಧೆ ಮಾಡಿರುವುದರಿಂದ ರಣಕಣವಾಗಿ ಚಾಮರಾಜನಗರ ಕ್ಷೇತ್ರ ಬದಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ (Puttarangashetty) ಅಖಾಡದಲ್ಲಿದ್ದು, ಸತತ ನಾಲ್ಕನೇ ಬಾರಿಯೂ ಗೆಲುವಿನ ಪತಾಕೆ ಹಾರಿಸಲು ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ವಿ.ಸೋಮಣ್ಣ ನಡುವೆ ನೇರ ಹಣಾಹಣಿ ಇದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ವಿಜಯಮಾಲೆ ಯಾರಿಗೆ ಒಲಿದರೂ ಕೂಡ ಕಡಿಮೆ ಅಂತರದಲ್ಲಿ ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ಇದು ಮುಸ್ಲಿಂ ಲೀಗ್ ಪ್ರಣಾಳಿಕೆ – ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ

ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದವರ ವಿವರ: 1952ರಲ್ಲಿ ಕಿಸಾನ್ ಮಜ್ದೂರ್ ಪಾರ್ಟಿಯಿಂದ ಯು.ಎಂ.ಮಾದಪ್ಪ, 1957 (ದ್ವಿಸದಸ್ಯ) ಪ್ರಜಾ ಸೋಷಿಯಲಿಸ್ಟ್ ಪಾರ್ಟಿ- ಯು.ಎಂ.ಮಾದಪ್ಪ ಹಾಗೂ ಕಾಂಗ್ರೆಸ್‌ ರಾಚಯ್ಯ. 1962- ಕಾಂಗ್ರೆಸ್‌ನಿಂದ ಎಂ.ಸಿ.ಬಸಪ್ಪ, 1967- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1972- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1978- ಜನತಾ ಪಕ್ಷದಿಂದ ಎಂ.ಸಿ.ಬಸಪ್ಪ, 1983- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1985- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1989- ವಾಟಾಳ್‌ ಪಕ್ಷದಿಂದ ವಾಟಾಳ್ ನಾಗರಾಜ್, 1994- ವಾಟಾಳ್ ನಾಗರಾಜ್, 1999- ಬಿಜೆಪಿಯಿಂದ ಸಿ.ಗುರುಸ್ವಾಮಿ, 2004- ವಾಟಾಳ್ ನಾಗರಾಜ್, 2008- ಕಾಂಗ್ರೆಸ್‌ನಿಂದ ಪುಟ್ಟರಂಗಶೆಟ್ಟಿ, 2013- ಪುಟ್ಟರಂಗಶೆಟ್ಟಿ, 2018- ಪುಟ್ಟರಂಗಶೆಟ್ಟಿ.

ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ? ಕಾಂಗ್ರೆಸ್ ಸಿ.ಪುಟ್ಟರಂಗಶೆಟ್ಟಿ: ಪಡೆದ ಮತ 75,963 ಬಿಜೆಪಿ ಮಲ್ಲಿಕಾರ್ಜುನಪ್ಪ: ಪಡೆದ ಮತ 71,050

ಜಾತಿ ಲೆಕ್ಕಾಚಾರ ಏನು? ಕ್ಷೇತ್ರದಲ್ಲಿ ಒಟ್ಟು 2,09,494 ಜನಸಂಖ್ಯೆ ಇದೆ. ಅವರ ಪೈಕಿ 1,02,588 ಪುರುಷರು ಹಾಗೂ 1,06,891 ಮಹಿಳೆಯರಿದ್ದಾರೆ. ವೀರಶೈವ- 49,000 ದಲಿತ- 40,500 ನಾಯಕ- 24,250 ಉಪ್ಪಾರ- 28,350 ಕುರುಬ- 18,000 ಮುಸ್ಲಿಂ- 15,000 ಕ್ರಿಶ್ಚಿಯನ್- 6,000 ಇತರೆ- 25,000

ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು ಕಾಂಗ್ರೆಸ್- ಪುಟ್ಟರಂಗಶೆಟ್ಟಿ, ಬಿಜೆಪಿ- ವಿ.ಸೋಮಣ್ಣ, ಜೆಡಿಎಸ್- ಆಲೂರು ಮಲ್ಲು, ಬಿಎಸ್‌ಪಿ - ಹ.ರಾ.ಮಹೇಶ್, ಆಪ್- ಡಾ.ಗುರುಪ್ರಸಾದ್. ಇದನ್ನೂ ಓದಿ: ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ

ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು? ಪುಟ್ಟರಂಗಶೆಟ್ಟಿ: ಚುನಾವಣೆಯಲ್ಲಿ ಬಿಜೆಪಿ ಕೊಡುವ ಒಳೇಟಿನಿಂದಾಗಿ ಕಾಂಗ್ರೆಸ್‌ಗೆ ಹೆಚ್ಚು ವರವಾಗುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಗಳಿಸಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ಕ್ಷೇತ್ರದಲ್ಲಿನ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದ್ದಾರೆ. ಉಪ್ಪಾರ ಸಮುದಾಯ, ದಲಿತ, ಅಲ್ಪಸಂಖ್ಯಾತ, ಮುಸ್ಲಿಂ, ಹಿಂದುಳಿದ ಮತ ಕಾಂಗ್ರೆಸ್ ಕೈ ಹಿಡಿದಿದ್ದು, ಈ ಬಾರಿಯೂ ಮತ ಸಿಗುವ ಭರವಸೆ ಇದೆ. ಮೈನಸ್‌ ಅಂಶ ಹೇಳುವುದಾದರೆ, ಮೂರು ಬಾರಿ ಆಯ್ಕೆಯಾದರೂ ಮೂಲ ಸೌಕರ್ಯ ಕೊರತೆ. ಅಭಿವೃದ್ಧಿ ದೃಷ್ಟಿಕೋನ ಇಲ್ಲದಿರುವ ಶಾಸಕ ಎಂಬ ಮೂದಲಿಕೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಅರೋಪವಿದೆ.

ವಿ.ಸೋಮಣ್ಣ: ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಸ್ಪರ್ಧೆ ಮಾಡಿರುವುದು. ಲಿಂಗಾಯತ ಸಮುದಾಯದ ಹಿರಿಯ ಮುಖಂಡ. ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಮಾಡುವ ಭರವಸೆ. ಸಾವಿರಾರು ಕೋಟಿ ಅನುದಾನ ತರುವ ಚಾಕಚಕ್ಯತೆ. ಕ್ಷೇತ್ರದ ಎಲ್ಲಾ ಸಮುದಾಯದ ಮುಖಂಡರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೈನಸ್‌ ಪಾಯಿಂಟ್‌, ಹೊರಗಿನ ಅಭ್ಯರ್ಥಿ ಅರ್ಥಾತ್ ದೂರದ ಬೆಂಗಳೂರಿನಿಂದ ಬಂದಿದ್ದು, ಕೈಗೆ ಸಿಗಲಾರರು ಎಂಬ ಆರೋಪ. ಪಕ್ಷದ ಒಳಗಿನ ಗುದ್ದಾಟ, ಇಷ್ಟು ಚುನಾವಣೆಯಲ್ಲೂ ಒಳೇಟು ಕೊಡುತ್ತಿರುವುದು ಈ ಬಾರಿಯೂ ಮುಂದುವರೆಯುವ ಸಾಧ್ಯತೆ. ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ವರುಣದಲ್ಲಿ ಹೆಚ್ಚು ಗಮನ ಕೊಟ್ಟು ಚಾಮರಾಜನಗರದತ್ತ ಕಡಿಮೆ ಸಮಯ ಕೊಟ್ಟಿದ್ದಾರೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

ಇಲ್ಲಿಯವರೆಗೂ ಕೂಡ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಅಲ್ಲದೇ ಒಂದು ಬಾರಿಯಷ್ಟೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅಂತರದ ಗೆಲುವು ಸಿಕ್ಕಿಲ್ಲ. ಇದನ್ನೇ ಸ್ಟ್ರಾಟಜಿ ಮಾಡಿಕೊಂಡಿರುವ ಬಿಜೆಪಿ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

]]>
1062960 0 0 0
<![CDATA[ಛತ್ತಿಸ್‌ಗಢದಲ್ಲಿ ಎಸ್‌ಯುವಿ, ಟ್ರಕ್ ಮುಖಾಮುಖಿ ಡಿಕ್ಕಿ - 11 ಮಂದಿ ಸಾವು]]> https://publictv.in/11-members-died-in-suv-car-and-truck-accident-in-chattisgarh/ Thu, 04 May 2023 05:29:55 +0000 https://publictv.in/?p=1062966 ರಾಯಪುರ: ಎಸ್‌ಯುವಿ (SUV) ಕಾರು ಟ್ರಕ್‌ವೊಂದಕ್ಕೆ (Truck) ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 11 ಜನ ಸಾವನ್ನಪ್ಪಿರುವ ಘಟನೆ ಛತ್ತಿಸ್‌ಗಢದ (Chattisgarh) ಬಲೋದ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಮೃತರು ಧಮತರಿ ಜಿಲ್ಲೆಯ ಸೋರಂ-ಭಟ್‌ಗಾಂವ್ ಗ್ರಾಮದ ನಿವಾಸಿಗಳಾಗಿದ್ದು, ಮದುವೆ ನಿಮಿತ್ತ ಕಂಕೇರ್ ಜಿಲ್ಲೆಯ ಮರ್ಕಟೋಲಾ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜಾಗ್ತಾರಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಕಾರು ಟ್ರಕ್‌ವೊಂದಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪುರೂರ್ ಪೊಲೀಸ್ ಠಾಣಾಧಿಕಾರಿ ಅರುಣ್ ಕುಮಾರ್ ಸಾಹು ತಿಳಿಸಿದ್ದಾರೆ. ಇದನ್ನೂ ಓದಿ: 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

ಘಟನೆ ಬಳಿಕ ಟ್ರಕ್ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಎಸ್‌ಯುವಿ ಕಾರ್‌ನಲ್ಲಿದ್ದ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಮಗು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

ವಾಹನ ಬಿಟ್ಟು ಪರಾರಿಯಾಗಿರುವ ಟ್ರಕ್ ಚಾಲಕನ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಘಟನೆಗೆ ಛತ್ತಿಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಅರ್ಚಕ ನೇಣುಬಿಗಿದು ಆತ್ಮಹತ್ಯೆ – ಸಾಯುವ ಮೊದಲು ಫೇಸ್‌ಬುಕ್ ಲೈವ್

]]>
1062966 0 0 0
<![CDATA[ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಅಡೆತಡೆಯಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ]]> https://publictv.in/raghavendra-stores-has-been-given-permission-to-show-the-film-dc/ Thu, 04 May 2023 05:42:18 +0000 https://publictv.in/?p=1062972 ವರಸ ನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ (Election) ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ (Jaggesh) ಪ್ರಚಾರ ಮಾಡುತ್ತಿದ್ದಾರೆ ಎನ್ನವ ಕಾರಣಕ್ಕಾಗಿ ನಿನ್ನೆ ದಾವಣಗೆರೆಯಲ್ಲಿ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದರು. ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದರು. ಈಗ ಈ ಘಟನೆ ಕುರಿತಂತೆ ದಾವಣಗೆರೆ ಜಿಲ್ಲಾಧಿಕಾರಿ (District Collector) ಸ್ಪಷ್ಟನೆ ನೀಡಿದ್ದಾರೆ.

ಚುನಾವಣಾ ಅಧಿಕಾರಿಯ ಸೂಚನೆಯಂತೆ ಜಗ್ಗೇಶ್ ಇರುವ ಸಿನಿಮಾ ಪೋಸ್ಟರ್ ಗೆ ನಿನ್ನೆ ಬಿಳಿ ಹಾಳೆಯಿಂದ ಮುಚ್ಚಲಾಗಿತ್ತು. ಈ ಕುರಿತು ನಿರ್ಮಾಣ ಸಂಸ್ಥೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿತ್ತು. ಚುನಾವಣೆ ಆಯೋಗವು ಅಡೆತಡೆ ಮಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಅಡೆತಡೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ನಿನ್ನೆ ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದರು. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು.

ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೂ, ಪ್ರಯೋಜನವಾಗಿರಲಿಲ್ಲ.

]]>
1062972 0 0 0
<![CDATA[ಮೋದಿ ಸಾಕ್ಷ್ಯಾಚಿತ್ರ ಪ್ರಕರಣ - ಬಿಬಿಸಿಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್]]> https://publictv.in/bbc-documentary-on-pm-modi-delhi-court-issues-summons-to-bbc-wikipedia-internet-archive-on-defamation-case-by-bjp-leader/ Thu, 04 May 2023 05:48:28 +0000 https://publictv.in/?p=1062973 ನವದೆಹಲಿ: ಇಂಡಿಯಾ ದಿ ಮೋದಿ ಕ್ವೆಸ್ಶನ್ (India: The Modi Question) ಸಾಕ್ಷ್ಯಚಿತ್ರದ ವಿರುದ್ಧ ಬಿಜೆಪಿ (BJP) ನಾಯಕ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿರುವ ಮಾನನಷ್ಟ (Defamation) ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ಬಿಬಿಸಿಗೆ (BBC) ಸಮನ್ಸ್ (Summons) ಜಾರಿ ಮಾಡಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರುಚಿಕಾ ಸಿಂಗ್ಲಾ ಅವರ ಪೀಠವು ವಿಕಿಮೀಡಿಯಾ (Wikimedia) ಮತ್ತು ಇಂಟರ್ನೆಟ್ ಆರ್ಕೈವ್ (Internet Archiv) ಎಂಬ ಅಮೆರಿಕ ಮೂಲದ ಡಿಜಿಟಲ್ ಲೈಬ್ರರಿಗೆ ಸಮನ್ಸ್ ನೀಡಿದೆ. ಅಲ್ಲದೆ 30 ದಿನಗಳ ಒಳಗಾಗಿ ಲಿಖಿತ ಉತ್ತರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ – ಹಲ್ಲೆ ಆರೋಪ

ಸಾಕ್ಷ್ಯಚಿತ್ರವು ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ರಾಷ್ಟ್ರದಾದ್ಯಂತ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಮಾರ್ಥ್ಯ ಹೊಂದಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಬೆಳೆಸುವ ಅಂಶಗಳನ್ನು ಸಾಕ್ಷ್ಯಚಿತ್ರಕ್ಕೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಆದರೂ ಸಹ ಸಾಕ್ಷ್ಯಾಚಿತ್ರದ ಸರಣಿಯನ್ನು ವೀಕ್ಷಿಸಲು ವಿಕಿಪೀಡಿಯ ಲಿಂಕ್‍ನ್ನು ಒದಗಿಸಿದೆ. ಅಲ್ಲದೆ ಇಂಟರ್ನೆಟ್ ಆರ್ಕೈವ್‍ನಲ್ಲಿ ಇನ್ನೂ ಸಾಕ್ಷ್ಯಚಿತ್ರ ಲಭ್ಯವಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜಾಖರ್ಂಡ್ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ಬಿನಯ್ ಕುಮಾರ್ ಸಿಂಗ್, ವಕೀಲ ಮುಖೇಶ್ ಶರ್ಮಾ ಅವರ ಮೂಲಕ ಸಾಕ್ಷ್ಯಾಚಿತ್ರದ ವಿರುದ್ಧ ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರವು ಆರ್‍ಎಸ್‍ಎಸ್ (RSS), ವಿಎಚ್‍ಪಿ (VHP) ಮತ್ತು ಬಿಜೆಪಿಗೆ ಮಾನನಷ್ಟವಾಗುವಂತಹ ವಿಚಾರಗಳಿವೆ ಎಂದು ಆರೋಪಿಸಲಾಗಿತ್ತು.

ಸಾಕ್ಷ್ಯಚಿತ್ರ ದುರುದ್ದೇಶದಿಂದ ಕೂಡಿದೆ. ಇಂತಹ ಆಧಾರರಹಿತ ಆರೋಪಗಳು ಆರ್‍ಎಸ್‍ಎಸ್ ಹಾಗೂ ವಿಎಚ್‍ಪಿಯಂತಹ ಸಂಸ್ಥೆಗಳ ಗೌರವಕ್ಕೆ ಧಕ್ಕೆ ತರುತ್ತದೆ. ಇದು ಭಾರತದ ಸಾಂಸ್ಕøತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಮಾಡುವ ಅವಮಾನ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ನ್ಯಾಯಾಲಯವೂ ಪ್ರಕರಣದ ವಿಚಾರಣೆಯನ್ನು ಮೇ 11ಕ್ಕೆ ಮುಂದೂಡಿದೆ. ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಹತ್ಯೆ – ಜಮ್ಮುವಿನಲ್ಲಿ ಹೈ ಅಲರ್ಟ್

]]>
1062973 0 0 0
<![CDATA[ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ]]> https://publictv.in/mocha-is-the-first-cyclone-of-the-year-to-hit-odisha/ Thu, 04 May 2023 05:57:38 +0000 https://publictv.in/?p=1062982 ನವದೆಹಲಿ: ಈ ವರ್ಷದ ಮೊದಲ ಚಂಡಮಾರುತ (Cyclone) 'ಮೋಚಾ' (Mocha) ಒಡಿಶಾಗೆ (Odisha) ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಚುನಾವಣೆಯ ಕಾವಿನಲ್ಲಿರುವ ಕರ್ನಾಟಕಕ್ಕೂ ಮೋಚಾ ಚಂಡಮಾರುತದ ಎಫೆಕ್ಟ್ ಇರಲಿದೆ ಎನ್ನಲಾಗಿದೆ.

ಐಎಂಡಿ ಮುನ್ಸೂಚನೆ ಪ್ರಕಾರ ಮೇ 6ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ವಾಯುಭಾರ ಕುಸಿತದ ಹಿನ್ನೆಲೆ ಚಂಡಮಾರುತ ಉಂಟಾಗಲಿದ್ದು, ಬಳಿಕ ಇದು ತೀವ್ರಗೊಂಡು ಮಧ್ಯ ಬಂಗಾಳಕೊಲ್ಲಿಯ ಕಡೆಗೆ ಸುಮಾರು ಉತ್ತರಕ್ಕೆ ಚಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೋದಿ ಸಾಕ್ಷ್ಯಾಚಿತ್ರ ಪ್ರಕರಣ – ಬಿಬಿಸಿಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್

ಇದೀಗ ಸಂಭವನೀಯ ಮೋಚಾ ಚಂಡಮಾರುತದ ಹಿನ್ನೆಲೆ ಐಎಂಡಿಯಿಂದ ರಾಜ್ಯಗಳಿಗೆ ಹೈ ಅಲರ್ಟ್ ನೀಡಲಾಗಿದೆ. ಕರಾವಳಿ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸೂಚನೆ ನೀಡಿದೆ. ಚಂಡಮಾರುತದ ಬಗ್ಗೆ ಭಯ ಬೇಡ, ಆದರೆ ಯಾವುದೇ ಘಟನೆಗಳನ್ನು ಎದುರಿಸಲು ಸಿದ್ಧರಾಗಿರಿ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೋಹಾಪಾತ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಛತ್ತಿಸ್‌ಗಢದಲ್ಲಿ ಎಸ್‌ಯುವಿ, ಟ್ರಕ್ ಮುಖಾಮುಖಿ ಡಿಕ್ಕಿ – 11 ಮಂದಿ ಸಾವು

]]>
1062982 0 0 0
<![CDATA[ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ರಮ್ಯಾ, ಶಿವಣ್ಣ ದುನಿಯಾ ವಿಜಯ್ ಕ್ಯಾಂಪೇನ್]]> https://publictv.in/ramya-shivanna-duniya-vijay-campaign-on-behalf-of-former-cm-siddaramaiah/ Thu, 04 May 2023 05:59:18 +0000 https://publictv.in/?p=1062983 ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಪರವಾಗಿ ವರುಣಾ (Varuna) ಕ್ಷೇತ್ರದಲ್ಲಿ ಇಂದು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಮ್ಯಾ (Ramya), ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಮತ್ತು ಸಿದ್ಧರಾಮಯ್ಯನವರಿಗೆ ಆಪ್ತರಾಗಿರುವ ದುನಿಯಾ ವಿಜಯ್ (Dunia Vijay) ಇಂದು ವರುಣಾ ಕ್ಷೇತ್ರದಲ್ಲಿದ್ದಾರೆ.

ಕಳೆದ ಎರಡು ದಿನಗಳಿಂದ ಶಿವರಾಜ್ ಕುಮಾರ್ (Shivaraj Kumar)ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ ಕೂಡ ಮಂಡ್ಯದಿಂದ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ದುನಿಯಾ ವಿಜಯ್ ಕೇವಲ ಸಿದ್ಧರಾಮಯ್ಯನವರ ಪರವಾಗಿಯಷ್ಟೇ ಪ್ರಚಾರ ಮಾಡಲಿದ್ದಾರಂತೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.

]]>
1062983 0 0 0
<![CDATA[ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ - ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್]]> https://publictv.in/karnataka-election-2023-congress-video-released-bjp-candidates-son-shot-in-the-air-in-vijayapura/ Thu, 04 May 2023 06:00:06 +0000 https://publictv.in/?p=1062984 ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಬಿಜೆಪಿ (BJP) ಅಭ್ಯರ್ಥಿ ವಿಜುಗೌಡ ಪಾಟೀಲ್ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡುತ್ತಿರುವ ವೀಡೀಯೋವೊಂದನ್ನು ಕಾಂಗ್ರೆಸ್ (Congress) ಮುಖಂಡರು ಬಿಡುಗಡೆ ಗೊಳಿಸಿದ್ದಾರೆ.

ವಿಜಯಪುರ (Vijayapura) ಕೆಪಿಸಿಸಿ ಪ್ರಚಾರ ಸಮೀತಿ ವಕ್ತಾರ ಸಂಗಮೇಶ ಬಬಲೇಶ್ವರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ವೀಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ. ವೀಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಪುತ್ರ ಸಮರ್ಥ ವಿಜುಗೌಡ ಪಾಟೀಲ್ ಗಾಳಿಯಲ್ಲಿ 2 ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಗುಂಡಾಗಿರಿ ಮಾಡುತ್ತಿದ್ದಾರೆ. ಜನರಿಗೆ ಕರೆ ಮಾಡಿ ಬೆದರಿಸಿ ಮತ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಪುತ್ರ ಸಮರ್ಥ ವಿಜುಗೌಡ ಪಾಟೀಲ್ ಗಾಳಿಯಲ್ಲಿ ಎರಡು ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಿದರು. ಇದನ್ನೂ ಓದಿ: ಇದು ಮುಸ್ಲಿಂ ಲೀಗ್ ಪ್ರಣಾಳಿಕೆ – ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ

ಬಿಜೆಪಿಯ ನೈತಿಕತೆ ಇದೇನಾ, ಇಂತಹ ಗುಂಡಾ ಅಭ್ಯರ್ಥಿ ಟಿಕೆಟ್ ನೀಡಿದೆ. ಇದಕ್ಕೆ ಅಮಿತ್ ಶಾ ಉತ್ತರ ನೀಡಬೇಕು. ನಮ್ಮ ಮತಕ್ಷೇತ್ರ ಬಿಹಾರ ಆಗಬಾರದು. ಇಂತಹ ಗುಂಡಾ ಅಭ್ಯರ್ಥಿ ಮತ ನೀಡಬಾರದು ಎಂದು ಮನವಿ ಮಾಡಿದ ಕಾಂಗ್ರೆಸ್ ಮುಖಂಡರು ಗುಂಡು ಹಾರಿಸಿದ ವೀಡಿಯೋವನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

]]>
1062984 0 0 0
<![CDATA[ಜೊತೆಯಾಗಿ IPL ಮ್ಯಾಚ್ ವೀಕ್ಷಿಸಿದ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ]]> https://publictv.in/parineeti-chopra-raghav-chadha-enjoy-ipl-match-in-twinning-outfits/ Thu, 04 May 2023 06:12:09 +0000 https://publictv.in/?p=1062993 ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಇದೇ ಮೇ 13ಕ್ಕೆ ಎಂಗೇಜ್‌ಮೆಂಟ್ ನಿಗದಿಯಾಗಿದೆ. ಈ ಸುದ್ದಿ ಬೆನ್ನಲ್ಲೇ ಒಟ್ಟಾಗಿ ಐಪಿಎಲ್ ಮ್ಯಾಚ್‌ನ ಪರಿಣಿತಿ-ರಾಘವ್ ವೀಕ್ಷಿಸಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 
View this post on Instagram
 

A post shared by Viral Bhayani (@viralbhayani)

ಪರಿಣಿತಿ- ರಾಘವ್ ಚಡ್ಡಾ ಜೋಡಿ ಹಲವು ದಿಣಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರೂ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ. ಆದರೆ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮೇ 13ಕ್ಕೆ ಎಂಗೇಜ್‌ಮೆಂಟ್ ನಿಗದಿಯಾಗಿದೆ. ಈ ಶುಭಸುದ್ದಿ ಬೆನ್ನಲ್ಲೇ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಮೊಹಾಲಿಯಲ್ಲಿ ಬುಧವಾರ(ಮೇ 3)ರಂದು ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆದಿದೆ. IPL ಮ್ಯಾಚ್ ನೋಡಲು ಪರಿಣಿತಿ-ರಾಘವ್ ಆಗಮಿಸಿದ್ದರು. ಮ್ಯಾಚ್ ನೋಡುತ್ತಾ ಚಿಲ್ ಮಾಡಿದ್ದಾರೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರು. ಇದೀಗ ಈ ಕುರಿತ ಫೋಟೋ ಸಖತ್ ಸದ್ದು ಮಾಡ್ತಿದೆ. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ನಿಷೇಧಕ್ಕೆ ಹೆಚ್ಚಿದ ಒತ್ತಡ: ನಾಳೆ ಸಿನಿಮಾ ರಿಲೀಸ್

ಮ್ಯಾಚ್ ನೋಡಲು ಬಂದ ಪ್ರೇಕ್ಷಕರು ಕೂಡ ಪರಿಣಿತಿ (Parineeti Chopra) ಜೋಡಿ ನೋಡಿ ಕೂಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.

]]>
1062993 0 0 0
<![CDATA[ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್]]> https://publictv.in/brahmins-are-from-russia-we-should-chase-them-away-says-rjd-leader-yaduvansh-kumar-yadav-in-bihar/ Thu, 04 May 2023 06:16:52 +0000 https://publictv.in/?p=1062997 ಪಾಟ್ನಾ: ಬ್ರಾಹ್ಮಣ (Brahmins) ಸಮುದಾಯದವರು ಭಾರತಕ್ಕೆ ಸೇರಿದವರಲ್ಲ. ಅವರು ರಷ್ಯಾದಿಂದ (Russia) ಬಂದವರು ಎಂದು ಆರ್‌ಜೆಡಿ (RJD) ನಾಯಕ ಯದುವಂಶ್ ಕುಮಾರ್ ಯಾದವ್ (Yaduvansh Kumar Yadav) ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಬಿಹಾರದ (Bihar) ಸುಪೌಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಡಿಎನ್‌ಎ (DNA) ಪರೀಕ್ಷೆ ಬ್ರಾಹ್ಮಣರು ಭಾರತ ದೇಶಕ್ಕೆ ಸೇರಿಲ್ಲ ಎಂಬುದನ್ನು ತೋರಿಸುತ್ತದೆ. ಅವರು ರಷ್ಯಾದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಬ್ರಾಹ್ಮಣರು ನಮ್ಮನ್ನು ವಿಭಜಿಸಿ ದೇಶವನ್ನು ಆಳಲು ಯತ್ನಿಸುತ್ತಿದ್ದಾರೆ. ಯಾದವ ಸಮುದಾಯಕ್ಕೆ ಸೇರಿದ ಜನರು ಮೂಲತಃ ಈ ದೇಶದವರು. ಬ್ರಾಹ್ಮಣರನ್ನು ಇಲ್ಲಿಂದ ಓಡಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಮೋದಿ ಸಾಕ್ಷ್ಯಾಚಿತ್ರ ಪ್ರಕರಣ – ಬಿಬಿಸಿಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್

ಯದುವಂಶ್ ಕುಮಾರ್ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಆರ್‌ಜೆಡಿ ನಾಯಕನ ಈ ಹೇಳಿಕೆಯನ್ನು ಬಿಜೆಪಿ (BJP) ನಾಚಿಕೆಗೇಡಿನ ಸಂಗತಿ ಎಂದು ಕರೆದಿದೆ. ಇಂತಹ ಜನರೇ ನಮ್ಮ ರಾಷ್ಟ್ರದಲ್ಲಿ ಕೋಮು ಗಲಭೆಗೆ ಕಾರಣವಾಗಿದ್ದು, ಅವರು ಬಿಹಾರವನ್ನು ಆಳುತ್ತಿರುವುದು ವಿಪರ್ಯಾಸದ ಸಂಗತಿ ಎಂದಿದೆ. ಇದನ್ನೂ ಓದಿ: ಅಕ್ರಮ ಆಸ್ತಿ ಸಂಪಾದನೆ – ಕೇಂದ್ರದ ಮಾಜಿ ನೌಕರ ಅರೆಸ್ಟ್‌

ಈ ಕುರಿತು ಬಿಜೆಪಿ ನಾಯಕ ಅಮಿತ್ ರಕ್ಷಿತ್ (Amit Rakshit) ತಮ್ಮ ಟ್ವಿಟ್ಟರ್‌ನಲ್ಲಿ, ಡಿಎನ್‌ಎ ಪರೀಕ್ಷೆಯು ಈ ದೇಶಕ್ಕೆ ಸೇರಿಲ್ಲ. ಇವರು ರಷ್ಯಾದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಅವರನ್ನು ಇಲ್ಲಿಂದ ಓಡಿಸಬೇಕು ಎಂಬ ಆರ್‌ಜೆಡಿ ನಾಯಕನ ಹೇಳಿಕೆ ಅತ್ಯಂತ ನಾಚಿಗೇಡಿನ ಸಂಗತಿ ಎಂದು ಟ್ವೀಟ್ (Tweet) ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ

]]>
1062997 0 0 0
<![CDATA[ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ - ಛತ್ತೀಸಗಢ ಸಿಎಂ]]> https://publictv.in/we-may-consider-banning-bajrang-dal-if-needed-says-chhattisgarh-cm-bhupesh-baghel/ Thu, 04 May 2023 06:32:03 +0000 https://publictv.in/?p=1063005 ರಾಯ್ಪುರ: ರಾಜ್ಯದಲ್ಲಿ ಬಜರಂಗದಳ (Bajrang Dal) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ರಾಜ್ಯದಲ್ಲೂ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಛತ್ತೀಸಗಢ (Chhattisgarh) ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ (Congress) ಪ್ರಣಾಳಿಕೆ ಬಿಡುಗಡೆ ಮಾಡಿತು. ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ. ಇದೇ ಹೊತ್ತಿನಲ್ಲಿ ಬಜರಂಗದಳ ಸಂಘಟನೆ ಬಗ್ಗೆ ಛತ್ತೀಸಗಢ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್

ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವ ಕಾರಣ ಕರ್ನಾಟಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಛತ್ತೀಸಗಢಕ್ಕೆ ಅನ್ವಯಿಸುವುದಿಲ್ಲ. ಬಜರಂಗಿಗಳು ಇಲ್ಲಿ (ಛತ್ತೀಸ್‌ಗಢದಲ್ಲಿ) ಕೆಲವು ಗೊಂದಲಗಳನ್ನು ಉಂಟುಮಾಡಿದರು. ಅವೆಲ್ಲವನ್ನು ನಾವು ಸರಿಪಡಿಸಿದ್ದೇವೆ. ಕರ್ನಾಟಕ ಕಾಂಗ್ರೆಸ್‌ನ ನಿರ್ಧಾರಗಳು ಛತ್ತೀಸಗಢಕ್ಕೂ ಅನ್ವಯಿಸುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವೆನಿಸಿದರೆ ಆಲೋಚಿಸಿ ಕ್ರಮಕೈಗೊಳ್ಳುತ್ತೇವೆ. ನಮ್ಮ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ಛತ್ತೀಸಗಢ ರಾಜ್ಯದ ಬಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮೊದಲು ರಾಮ ಜನ್ಮಭೂಮಿ. ನಂತರ ರಾಮಸೇತು ಪುರಾವೆ ಕೇಳಿದರು. ಈಗ ಅವರು ಬಜರಂಗದಳವನ್ನು ಪ್ರಶ್ನಿಸುತ್ತಿದ್ದಾರೆ. ಛತ್ತೀಸಗಢದ ಜನರು ಇದನ್ನು ಸಹಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಬ್ರಿಜ್‌ಮೋಹನ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

]]>
1063005 0 0 0
<![CDATA[ಪವಿತ್ರಾ ಲೋಕೇಶ್- ನರೇಶ್ ‘ಮತ್ತೆ ಮದುವೆ’ ಡೇಟ್ ಫಿಕ್ಸ್]]> https://publictv.in/pavitra-lokesh-naresh-matte-maduve-date-fix/ Thu, 04 May 2023 06:39:08 +0000 https://publictv.in/?p=1063008 ತೆಲುಗು ನಟ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ತಮ್ಮ ಅಭಿಮಾನಿಗಳಿಗೆ ನಾನಾ ರೀತಿಯ  ಸುದ್ದಿಗಳನ್ನು ಕೊಡುತ್ತಲೇ ಇದ್ದಾರೆ. ಹೊಸ ವರ್ಷದ ಮೊದಲ ದಿನದಿಂದ ಈವರೆಗೂ ಅಚ್ಚರಿ ಎನ್ನುವಂತಹ ಪೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ‘ಮತ್ತೆ ಮದುವೆ’ ವಿಚಾರವನ್ನೂ ಹೇಳುತ್ತಿದ್ದಾರೆ. ಈ ಜೋಡಿ ನಟನೆಯ ‘ಮತ್ತೆ ಮದುವೆ’ (Matte Maduve) ಸಿನಿಮಾ ತಯಾರಾಗಿದ್ದು ಇದೇ ಮೇ 26ರಂದು ಸಿನಿಮಾ ರಿಲೀಸ್ (Release) ಆಗಲಿದೆ.

ಚಿತ್ರದ ಟೀಸರ್ (Teaser) ಈಗಾಗಲೇ ರಿಲೀಸ್ ಆಗಿದ್ದು, ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ. ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ, ಇದು ರಿಯಲ್ ಲೈಫ್ ಕಥೆಯಂತೆ ಭಾಸವಾಗಿದೆ. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ನಿಷೇಧಕ್ಕೆ ಹೆಚ್ಚಿದ ಒತ್ತಡ: ನಾಳೆ ಸಿನಿಮಾ ರಿಲೀಸ್

ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು (M.S. Raju) ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬಂದಿದೆ.

]]>
1063008 0 0 0
<![CDATA[ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ]]> https://publictv.in/karnataka-assembly-election-2023-d-k-shivakumar-slams-bjp-in-mysuru/ Thu, 04 May 2023 07:00:05 +0000 https://publictv.in/?p=1063009 ಮೈಸೂರು: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ (Anjanadri) ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ವಿಶೇಷ ಮಂಡಳಿ ರಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮೈಸೂರಿನಲ್ಲಿ (Mysuru) ಗುರುವಾರ ಹೇಳಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ (Chamundeshwari Temple) ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಗರಿಗೆ (BJP) ಗಾಬರಿಯಾಗಿದೆ. ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದೆ. ಬಜರಂಗದಳ ಒಂದು ರಾಜಕೀಯ ಪಕ್ಷದ ಭಾಗ. ಹುಟ್ಟುವ ಎಲ್ಲವೂ ಬಸವ ಆಗುವುದಕ್ಕೆ ಸಾಧ್ಯವಿಲ್ಲ. ಹನುಮಂತನ ಹೆಸರಿಟ್ಟುಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯವೇ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಬಜರಂಗದಳದವರು (Bajrang Dal) ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ. ಬಜರಂಗ ಬಲಿಯ ನಿಜವಾದ ಭಕ್ತರು ನಾವು. ಬಜರಂಗಿಯ ಕುಂಕುಮ ನನ್ನ ಹಣೆಯಲ್ಲಿಯೇ ಇದೆ. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ವಿಚಾರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದರು.

ಬಿಜೆಪಿಯವರು ಒಂದಾದರೂ ಆಂಜನೇಯನ ದೇವಾಲಯವನ್ನು ಕಟ್ಟಿದ್ದಾರಾ? ಯಾರಿಗೆ ಏನೂ ಸಹಾಯ ಮಾಡಿದ್ದೇವೆ, ಕೆಲಸ ಮಾಡಿದ್ದೇವೆ ಎಂದು ಪ್ರಧಾನಿಗಳು ಭಾಷಣದಲ್ಲಿ ಹೇಳುತ್ತಿಲ್ಲ. ದೇವರ ಹೆಸರಿನಲ್ಲಿ ಪ್ರಧಾನಿ ಹಾಗೂ ಬಿಜೆಪಿ ರಾಜಕೀಯ ನಡೆಸಲು ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪ್ರಾಣಾಳಿಕೆಯನ್ನು ಈಶ್ವರಪ್ಪ ಸುಟ್ಟು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಫಲವಾಗಿ ಬಿಜೆಪಿಗರು ಈಶ್ವರಪ್ಪನನ್ನೆ ಸುಟ್ಟು ಹಾಕಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.

ಗರ್ಭಗುಡಿಯಲ್ಲಿ ರುದ್ರಾಕ್ಷಿ ಜಪ ಮಾಡಿದ್ದೇನೆ, ರಾಜ್ಯಕ್ಕೆ ಬಂದಿರುವ ದುಃಖವನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ದುಷ್ಟರನ್ನು ದೂರ ಮಾಡಿ ಶಿಷ್ಟರನ್ನು ದೇವರು ಕಾಪಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ರಮ್ಯಾ, ಶಿವಣ್ಣ ದುನಿಯಾ ವಿಜಯ್ ಕ್ಯಾಂಪೇನ್

]]>
1063009 0 0 0
<![CDATA[ಮೋದಿ ಬೆಂಗಳೂರು ರೋಡ್ ಶೋನಲ್ಲಿ ಬದಲಾವಣೆ - ಶನಿವಾರ, ಭಾನುವಾರ ಎರಡು ದಿನ ಮತ ಬೇಟೆ]]> https://publictv.in/karnataka-election-2023-changes-made-in-narendra-modis-road-show-in-bengaluru/ Thu, 04 May 2023 07:12:59 +0000 https://publictv.in/?p=1063013 ಬೆಂಗಳೂರು: ಟ್ರಾಫಿಕ್ ಮತ್ತು ಮಳೆಯ ಕಾರಣದಿಂದ ಮೇ 6ರಂದು ನಿಗದಿಯಾಗಿದ್ದ ಮೋದಿ (Narendra Modi) ಬೆಂಗಳೂರು (Bengaluru) ರೋಡ್ ಶೋನಲ್ಲಿ ಬದಲಾವಣೆ ಮಾಡಲು ಬಿಜೆಪಿ ಮುಂದಾಗಿದೆ.

ಚುನಾವಣೆ (Election) ಹಿನ್ನೆಲೆ ಮೋದಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು, ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ (Road Show) ನಡೆಸಲಿದ್ದಾರೆ. ಒಂದು ಇಡೀ ದಿನ ರೋಡ್ ಶೋ ನಡೆಸುವುದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಅಸ್ತವ್ಯಸ್ತಗೊಳ್ಳಲಿದೆ. ಅಲ್ಲದೇ ಸತತವಾಗಿ ಮಳೆ ಬರುತ್ತಿರುವ ಹಿನ್ನೆಲೆ ಸ್ವತಃ ಮೋದಿಯವರೇ ಶನಿವಾರ ಮತ್ತು ಭಾನುವಾರ ಎರಡು ದಿನ ರೋಡ್ ಶೋ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಬಿಜೆಪಿ (BJP) ನಾಯಕರು ಗುರುವಾರ ಮಧ್ಯಾಹ್ನ ಮಹತ್ವದ ಸಭೆಯನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

ಶನಿವಾರ ಬೆಳಗ್ಗೆ ಮತ್ತು ಸಂಜೆಯಿಂದ ರಾತ್ರಿಯವರೆಗೂ ಮೋದಿ ರೋಡ್ ಶೋ ನಡೆಸಲು ಈ ಮೊದಲು ಸಿದ್ಧತೆ ನಡೆಸಲಾಗಿತ್ತು. ಇದೀಗ ಶನಿವಾರ ಮಧ್ಯಾಹ್ನದ ನಂತರದ ರೋಡ್ ಶೋ ಕಾರ್ಯಕ್ರಮವನ್ನು ಭಾನುವಾರಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಮೋದಿ ರೋಡ್ ಶೋನಲ್ಲಿ ಯಾವುದೇ ಬದಲಾವಣೆಯಿಲ್ಲ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

ಶನಿವಾರ 10.1 ಕಿ.ಮೀ ರೋಡ್ ಶೋ ನಡೆಸಲಿದ್ದು, ಮಧ್ಯಾಹ್ನ 4ರಿಂದ ರಾತ್ರಿ 9 ಗಂಟೆವರೆಗೆ ನಿಗದಿಯಾಗಿದ್ದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ ಮುಂದುವರೆಸಲಿದ್ದಾರೆ. ಭಾನುವಾರ ಒಟ್ಟು 26.5 ಕಿ.ಮೀ ರೋಡ್ ಶೋ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

ಏಪ್ರಿಲ್ 29 ರಂದು ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಮಾಗಡಿ ರಸ್ತೆಯ ನೈಸ್ ರೋಡ್‌ನಿಂದ ಸುಮನಹಳ್ಳಿವರೆಗೆ ಮೋದಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಗುರಿಯಾಗಿಸಿ ಮತಯಾಚನೆ ಮಾಡಿದ್ದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

]]>
1063013 0 0 0
<![CDATA[ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ]]> https://publictv.in/bajrang-dal-ban-actress-ramya-expressed-a-different-opinion/ Thu, 04 May 2023 07:06:08 +0000 https://publictv.in/?p=1063019 ರಾಜ್ಯದಲ್ಲಿ ಬಜರಂಗದಳ (Bajrang Dal) ಬ್ಯಾನ್ ಮಾಡುವ ವಿಚಾರ ರಾಜಕೀಯ ಪಡಸಾಲೆಯಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಕಾಂಗ್ರೆಸ್ (Congress) ಪಕ್ಷ ಬಿಡುಗಡೆ ಮಾಡಿರುವ ತನ್ನ ಪ್ರಣಾಳಿಕೆಯಲ್ಲಿ ‘ಬಜರಂಗದಳವನ್ನು ನಿಷೇಧ ಮಾಡಲಾಗುವುದು’ ಎಂದಿದೆ. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕೋಪಕ್ಕೆ ತುತ್ತಾಗಿದೆ. ಅದರಲ್ಲೂ ಬಿಜೆಪಿಯು ಇದನ್ನು ಚುನಾವಣಾ ಅಸ್ತ್ರವಾಗಿ ಕಾಂಗ್ರೆಸ್ ಮೇಲೆ ಪ್ರಯೋಗಿಸುತ್ತಿದೆ.

ಈ ಕುರಿತಂತೆ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ರಮ್ಯಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಬಜರಂಗದಳವನ್ನು ಬ್ಯಾನ್ (Ban) ಮಾಡುತ್ತೇವೆ ಎಂದರೆ, ರಮ್ಯಾ ಈ ನಿಲುವು ಸರಿಯಾದದ್ದು ಅಲ್ಲ. ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ ಮತ್ತೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಕೆಲವು ಸಲಹೆಗಳನ್ನೂ ರಮ್ಯಾ (Ramya) ಕೊಟ್ಟಿದ್ದಾರೆ.

ಬನ್ನೂರಿನಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬಂದಿದ್ದ ರಮ್ಯಾ, ಮಾಧ್ಯಮಗಳೊಂದಿಗೆ ಮಾತನಾಡಿ, ‘ದ್ವೇಷದ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿ ಎಂದು ನ್ಯಾಯಾಲಯವೇ ಹೇಳಿದೆ. ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಕೂಡ ಇದೆ. ಅದನ್ನು ಸಮರ್ಥವಾಗಿ ಜಾರಿಗೆ ತಂದರೆ, ಬಜರಂಗ ದಳ ಬ್ಯಾನ್ ಮಾಡುವಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ಧಾರೆ.

]]>
1063019 0 0 0
<![CDATA[ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ]]> https://publictv.in/army-helicopter-crash-in-jammu-and-kashmir/ Thu, 04 May 2023 07:07:30 +0000 https://publictv.in/?p=1063020 ಶ್ರೀನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಪತನವಾಗಿರುವ ಆಘಾತಕಾರಿ ಘಟನೆ ಗುರುವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವರ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮಚ್ನಾ ಗ್ರಾಮದ ಬಳಿ ಸೇನೆಯ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ. ಅಪಘಾತದ ವೇಳೆ ಹೆಲಿಕಾಪ್ಟರ್‌ನಲ್ಲಿ ಮೂರು ಮಂದಿ ಇದ್ದರು ಎನ್ನಲಾಗಿದೆ. ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ

ಹೆಲಿಕಾಪ್ಟರ್ ಪತನದಿಂದಾಗಿ ಪೈಲಟ್‌ಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಸುರಕ್ಷಿತರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2 ತಿಂಗಳಲ್ಲಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಅಪಘಾತವಾಗಿರುವ 3ನೇ ಘಟನೆ ಇದಾಗಿದೆ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

]]>
1063020 0 0 0
<![CDATA[ಬೆಳಗಾವಿ ರಣಕಣದಲ್ಲಿ ಮಹಾರಾಷ್ಟ್ರ ನಾಯಕರಿಂದ ಮತಯಾಚನೆ!]]> https://publictv.in/maharashtra-leaders-campaign-in-belagavi-for-karnataka-election-2023/ Thu, 04 May 2023 07:32:47 +0000 https://publictv.in/?p=1063027 ಬೆಳಗಾವಿ: ಬೆಳಗಾವಿ (Belagavi) ರಣಕಣದಲ್ಲಿ ಮಹಾರಾಷ್ಟ್ರ (Maharashtra) ನಾಯಕರಿಂದ ಮತಯಾಚನೆ ನಡೆಯುತ್ತಿದ್ದು, ಮಹಾರಾಷ್ಟ್ರದ ಬಿಜೆಪಿ, ಕಾಂಗ್ರೆಸ್, ಶಿವಸೇನೆಯ ‌ಘಟಾನುಘಟಿ ನಾಯಕರಿಂದ ಮತಬೇಟೆ ಶುರುವಾಗಿದೆ. ಮರಾಠಿ ಭಾಷಿಕ ಪ್ರದೇಶಗಳಲ್ಲಿ ಮಹಾರಾಷ್ಟ್ರ ಕೈ, ಕಮಲ‌ ನಾಯಕರು ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ.

ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಕೇಂದ್ರ ‌ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಮತಬೇಟೆ ನಡೆಸಿದರೆ, ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಬಳಿಕ ಕಾಂಗ್ರೆಸ್ ಪರ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವ್ಹಾಣ್ ಪ್ರಚಾರ ನಡೆಸಲಿದ್ದಾರೆ.‌ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಅಶೋಕ್ ಚವ್ಹಾಣ್ ಮತಯಾಚನೆ ನಡೆಸಲಿದ್ದಾರೆ. ಅಶೋಕ ಚವ್ಹಾಣ್‌ಗೆ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಸತೇಜ್ ಪಾಟೀಲ, ಮಾಜಿ ಸಚಿವ ವಿಶ್ವಜಿತ್ ಕದಂ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

ಬೆಳಗಾವಿ ತಾಲೂಕಿನ ‌ಬೆನಕನಹಳ್ಳಿಯಲ್ಲಿ ಸಂಜೆ 4 ಕ್ಕೆ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣದಲ್ಲಿ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಪ್ರಚಾರ ಮಾಡಲಿದ್ದಾರೆ.‌ ಬೆಳಗಾವಿ ಉತ್ತರ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ, ದಕ್ಷಿಣ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ, ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಲ್ಕರ್ ಪರ ಫಡ್ನವಿಸ್ ಮತಯಾಚನೆ ನಡೆಸಲಿದ್ದಾರೆ.

ಒಂದೇ‌ ದಿನದಲ್ಲಿ ಮೂರು ಕ್ಷೇತ್ರಗಳಲ್ಲಿ ‌ಸಂಚರಿಸಿ ದೇವೇಂದ್ರ ಫಡ್ನವಿಸ್ ಮತಬೇಟೆ ನಡೆಸಲಿದ್ದು, ಮರಾಠಿ ಭಾಷಿಕ ಪ್ರದೇಶದಲ್ಲಿ ಎರಡನೇ ದಿನವೂ ಕೇಂದ್ರ ‌ಸಚಿವ ನಿತಿನ್ ‌ಗಡ್ಕರಿ ಮತಬೇಟೆ ಮಾಡಲಿದ್ದಾರೆ. ಹುಕ್ಕೇರಿ, ಕಾಗವಾಡ ಕ್ಷೇತ್ರಗಳ ಬಳಿಕ ಇಂದು ನಿಪ್ಪಾಣಿಯಲ್ಲಿ ನಿತಿನ್ ‌ಗಡ್ಕರಿ ಪ್ರಚಾರ ಸಭೆ, ನಿಪ್ಪಾಣಿ ‌ಬಿಜೆಪಿ ಅಭ್ಯರ್ಥಿ ಶಶಿಕಲಾ ‌ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ನಿತಿನ್ ಗಡ್ಕರಿ ಭಾಗಿಯಾಗಲಿದ್ದಾರೆ. ‌ನಿನ್ನೆಯಷ್ಟೇ ಎಂಇಎಸ್ ‌ಪರ ಪ್ರಚಾರ ಸಭೆ ನಡೆಸಿರುವ ಶಿವಸೇನೆ ವಕ್ತಾರ ‌ಸಂಜಯ್ ರಾವುತ್ ಬೆಳಗಾವಿಯ ಸಮಾದೇವಿಗಲ್ಲಿಯಲ್ಲಿ ಎಂಇಎಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ‌ಭಾಗಿಯಾಗಿದ್ದರು‌. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

]]>
1063027 0 0 0
<![CDATA[ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳೋ ದಾರುಣ ಪರಿಸ್ಥಿತಿ ನನಗಾಗಲಿ, ತಂದೆಗಾಗಲಿ ಬಂದಿಲ್ಲ: ವಿಜಯೇಂದ್ರ]]> https://publictv.in/karnataka-election-2023-neither-i-nor-my-father-have-come-to-a-dire-situation-to-compromise-politics-says-by-vijayendra/ Thu, 04 May 2023 07:48:00 +0000 https://publictv.in/?p=1063034 - 50 ಸಾವಿರ ಮತಗಳ ಅಂತರದಿಂದ ಗೆಲ್ತೀನಿ

ಶಿವಮೊಗ್ಗ: ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವ ದಾರುಣ ಪರಿಸ್ಥಿತಿ ನನಗಾಗಲಿ, ನಮ್ಮ ತಂದೆ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗಾಗಲಿ ಹಾಗೂ ಅವರ ಕುಟುಂಬದವರಿಗಾಗಲಿ ಬಂದಿಲ್ಲ ಎಂದು ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಶಿವಮೊಗ್ಗದ (Shivamogga) ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, 2004ರ ಚುನಾವಣೆ ಸಂದರ್ಭದಲ್ಲಿ ಯಾರು ಅಭ್ಯರ್ಥಿಯೆಂಬುದೇ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ (Shikaripura) ಸ್ವಾಭಿಮಾನಿ ಮತದಾರರು ಸುಮಾರು 46,000ಕ್ಕೂ ಅಧಿಕ ಮತಗಳ ಅಂತರದಿಂದ ಬಿಎಸ್ ಯಡಿಯೂರಪ್ಪ ಅವರನ್ನು ವಿಜಯಿಶಾಲಿಯನ್ನಾಗಿ ಮಾಡಿದ್ದರು. ನಾನು ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

ಉಪಚುನಾವಣೆ ನಡೆದ ಸಂದರ್ಭದಲ್ಲಿ ಬಿವೈ ರಾಘವೇಂದ್ರ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿಕಾರಿಪುರಕ್ಕೆ ಬಂದು ತಾಲೂಕಿನಾದ್ಯಂತ ಪ್ರಚಾರ ಮಾಡಿತ್ತು. ಶಿಕಾರಿಪುರದಲ್ಲಿ ಹಣ, ಹೆಂಡದ ಹೊಳೆ ಹರಿಸಿದ್ದರೂ ಅದ್ಯಾವುದಕ್ಕೂ ಬೆಲೆ ಕೊಡದೆ ಕ್ಷೇತ್ರದ ಮತದಾರರು ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದರು. ಹೀಗಾಗಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ, ಅಭಿವೃದ್ಧಿ ಕೆಲಸವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿ ರಣಕಣದಲ್ಲಿ ಮಹಾರಾಷ್ಟ್ರ ನಾಯಕರಿಂದ ಮತಯಾಚನೆ!

ಇಲ್ಲಿಯವರೆಗೆ ಶಿಕಾರಿಪುರ ಬಿಎಸ್ ಯಡಿಯೂರಪ್ಪ ಅವರ ಕರ್ಮಭೂಮಿಯಾಗಿತ್ತು. ಇದು ನನ್ನ ಜನ್ಮಭೂಮಿ ಕೂಡ. ಇನ್ನು ನಾನು ಸಹ ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ. ಶಿಕಾರಿಪುರದಲ್ಲಿ ಎಲ್ಲಾ ಬೂತ್‌ಗಳಿಗೆ ಈಗಾಗಲೇ 3 ಬಾರಿ ಭೇಟಿ ಕೊಟ್ಟು ಮತಯಾಚಿಸಲಾಗಿದೆ. ಕಾರ್ಯಕರ್ತರು ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಘಟನೆ ಇದೆ. ನಿರಂತರ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ತನ್ನ ಗೆಲುವು ಸುಲಭವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಜಾರರ ಮೀಸಲಾತಿ ವಿಷಯವನ್ನು ಇಟ್ಟುಕೊಂಡು ಕೆಲವರು ಅವರಲ್ಲೇ ಒಡಕು ಸೃಷ್ಟಿಸಲು ಯತ್ನಿಸಿದರು. ಯಡಿಯೂರಪ್ಪ ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅವರ ಮನೆಗೆ ಕಲ್ಲು ಹೊಡೆಸಿದರು. ಆದರೆ ಇದರಿಂದ ಅವರ ಉದ್ದೇಶ ಈಡೇರಲಿಲ್ಲ. ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ನಡೆಯಲ್ಲಿಲ್ಲ. ಬಂಜಾರರು ಬಿಜೆಪಿ ಪರವಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ಬೆಂಗಳೂರು ರೋಡ್ ಶೋನಲ್ಲಿ ಬದಲಾವಣೆ – ಶನಿವಾರ, ಭಾನುವಾರ ಎರಡು ದಿನ ಮತ ಬೇಟೆ

]]>
1063034 0 0 0
<![CDATA[ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ - ಕಾಂಗ್ರೆಸ್ ಕಿಡಿ]]> https://publictv.in/amit-shah-make-his-son-the-national-president-of-bajrang-dal-congress-sparks/ Thu, 04 May 2023 07:51:27 +0000 https://publictv.in/?p=1063035 ಬೆಂಗಳೂರು: ಬಜರಂಗದಳ (Bajrang Dal) ಅತ್ಯತ್ತಮ ಸಂಘಟನೆಯಾಗಿದ್ದರೆ, ಅಮಿತ್ ಶಾ (Amit Shah) ಅವರು ತಮ್ಮ ಮಗನನ್ನು ಬಿಸಿಸಿಐ ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ ಎಂದು ರಾಜ್ಯ ಕಾಂಗ್ರೆಸ್ ( Congress) ಟ್ವಿಟ್ಟರ್‌ನಲ್ಲಿ ದಾಳಿ ನಡೆಸಿದೆ.

ಬಸವರಾಜ ಬೊಮ್ಮಾಯಿಯವರು (Basavaraj Bommai) ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರು, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ ಎಂದು ಕೆಂಡಕಾರಿದೆ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

ಕಾಂಗ್ರೆಸ್ ಟ್ವೀಟ್‍ನಲ್ಲಿ ಏನಿದೆ? ಬಜರಂಗದಳದ ಬಗ್ಗೆ ಬಹಳ ಮಾತನಾಡುವ ಬಿಜೆಪಿ (BJP) ನಾಯಕರಿಗೆ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನಿಟ್ಟಿದೆ. ಸಿಟಿ ರವಿ ಮಕ್ಕಳು ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್ ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಸ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯಿ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ?

ಬಜರಂಗದಳ ಬಿಜೆಪಿಯ ಅಂಗ ಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ಏಕೆ ನೀಡಿಲ್ಲ?

ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ? ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ ಪಿಎಫ್‍ಐ ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಬಿಜೆಪಿ ಉರಿದು ಬೀಳುತ್ತದೆ. ಆದರೆ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಎತ್ತಿದೆ.

ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ಮುಂದಿನ ಮಾತಾಡಲಿ. ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ. ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ. ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ. ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ ಎಂದು ಹರಿಹಾಯ್ದಿದೆ.

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ಮೋದಿಯವರೇ (Narendra Modi), ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ "ಬಜರಂಗಿ ಪುನಿಯಾ" ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ ಎಂದು ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ. ಇದನ್ನೂ ಓದಿ: ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್

]]>
1063035 0 0 0
<![CDATA[ಪಕ್ಕೆಲುಬು ಮುರಿದುಕೊಂಡ ವಿಕ್ರಮ್ : ಶಸ್ತ್ರ ಚಿಕಿತ್ಸೆಗೆ ಸೂಚಿಸಿದ ವೈದ್ಯರು]]> https://publictv.in/vikram-with-broken-rib-doctors-suggested-surgery/ Thu, 04 May 2023 08:02:31 +0000 https://publictv.in/?p=1063040 ಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyaan Vikram) ನಿನ್ನೆಯಷ್ಟೇ ಸಾಹಸ ಸನ್ನಿವೇಶದ ರಿಹರ್ಸಲ್ ವೇಳೆ ಪಕ್ಕೆಲುಬು (Ribs) ಮುರಿದುಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯಿಂದ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಶಸ್ತ್ರ ಚಿಕಿತ್ಸೆ (Surgery) ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿ ಆಗಿದೆ.

'ಪೊನ್ನಿಯಿನ್ ಸೆಲ್ವನ್ 2' (Ponniyin Selvan 2) ಸಿನಿಮಾದ ಪ್ರಚಾರ ಮುಗಿಸಿ ಮತ್ತೆ ಹೊಸ ಸಿನಿಮಾದ ಚಿತ್ರೀಕರಣಕ್ಕೆ ವಿಕ್ರಮ್ ರೆಡಿಯಾಗುತ್ತಿದ್ದರು. ಸದ್ಯ ಅವರು 'ತಂಗಲಾನ್' (Thangalaan Film) ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ರಿಹರ್ಸಲ್ ವೇಳೆ ಬಿದ್ದು ವಿಕ್ರಮ್ ಪಕ್ಕೆಲುಬಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

'ತಂಗಲಾನ್' ಸಿನಿಮಾದ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯಗಳಾಗಿರೋದ್ರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕೆ ಮತ್ತೆ ಶೂಟಿಂಗ್ ಶುರುವಾಗುತ್ತದೆ. ಈ ಹಿಂದೆ ಕೂಡ ಇದೇ ಸಿನಿಮಾ ಸೆಟ್‌ನಲ್ಲಿ ವಿಕ್ರಮ್‌ಗೆ ಪೆಟ್ಟಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂತಿತ್ತು. ಇದರಿಂದ ವಿಕ್ರಮ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಕ್ರಮ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪ್ರಸ್ತುತ ವಿಕ್ರಮ್‌ಗೆ ಆಸ್ಪತ್ರೆಯಲ್ಲೇ ಇದ್ದಾರೆ.

ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತಾ 'ತಂಗಲಾನ್' ಸಿನಿಮಾ ಮೂಡಿ ಬರ್ತಿದೆ. ನಿರ್ದೇಶಕ ಪಾ.ರಂಜಿತ್ ಕೋಲಾರದಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

]]>
1063040 0 0 0
<![CDATA[ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ - ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ]]> https://publictv.in/army-holds-flag-march-in-violence-hit-areas-in-manipur-protests-by-tribal-groups-over-court-order/ Thu, 04 May 2023 08:14:51 +0000 https://publictv.in/?p=1063041 ಇಂಫಾಲ್: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆಯು (Protests) ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಇಂಟರ್‌ನೆಟ್ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಸೇನೆ (Army) ಆಗಮಿಸಿದೆ.

ಮಣಿಪುರ (Manipur) ಹೊತ್ತಿ ಉರಿಯುತ್ತಿದೆ. ಇಂಫಾಲ್ (Imphal), ಚುರಾಚಂದ್‍ಪುರ ಹಾಗೂ ಕಾಂಗ್‍ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಿಕ್ಕ ಸಿಕ್ಕಲ್ಲೆಲ್ಲಾ ಪ್ರತಿಭಟನಾಕಾರರು ಬೆಂಕಿ ಹಚ್ಚುತ್ತಿದ್ದಾರೆ. ಇದರ ಬೆನ್ನಲ್ಲೇ ಮಣಿಪುರದ 8 ಜಿಲ್ಲೆಗಳಲ್ಲಿ ಕರ್ಫೂ ವಿಧಿಸಲಾಗಿದೆ. ಜೊತೆಗೆ ಹಿಂಸಾಚಾರವನ್ನು ನಿಯಂತ್ರಿಸಲು ಮಣಿಪುರ ಸರ್ಕಾರ ರಾಜ್ಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ಗೆ ಕರೆ ನೀಡಲಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನಿಂದ ಇಂದು ಧ್ವಜ ಮೆರವಣಿಗೆ ನಡೆಸಲಾಯಿತು. ಹಿಂಸಾಚಾರದ ನಂತರ ರಾಜ್ಯದ ವಿವಿಧ ಪ್ರದೇಶಗಳಲ್ಲಿ 7,500ಕ್ಕೂ ಹೆಚ್ಚು ಜನರಿಗೆ ಸೇನಾ ಶಿಬಿರಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಶ್ರಯ ನೀಡಲಾಯಿತು.

ಬುಧವಾರ ಬಾಕ್ಸರ್ ಮೇರಿಕೋಮ್ ಟ್ವೀಟ್ ಮಾಡಿ, ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದರು.

ಘಟನೆಯೇನು?: ಬುಡಕಟ್ಟು ಜನಾಂಗದವರಲ್ಲದ ಮೀಟೈಸ್ ಸಮುದಾಯದ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಯನ್ನು ವಿರೋಧಿಸಿ ಬುಧವಾರದಂದು, ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ನಡೆದಿದೆ. ಇದನ್ನೂ ಓದಿ: ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳೋ ದಾರುಣ ಪರಿಸ್ಥಿತಿ ನನಗಾಗಲಿ, ತಂದೆಗಾಗಲಿ ಬಂದಿಲ್ಲ: ವಿಜಯೇಂದ್ರ

ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಬೇಕಿದ್ದ ಸ್ಥಳವನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯದ ಇತರ ಭಾಗಗಳಿಂದಲೂ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

]]>
1063041 0 0 0
<![CDATA['ಲವ್ ಅಗೇನ್' ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್]]> https://publictv.in/love-again-film-premiere-nick-jonas-priyanka-chopra-sam-heughan-plants-a-kiss-on-her-nose/ Thu, 04 May 2023 08:27:51 +0000 https://publictv.in/?p=1063045 ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್‌ನಲ್ಲಿ (Hollywood)  ಸೆಟೆಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ 'ಲವ್ ಅಗೇನ್' (Love Again) ಎನ್ನುತ್ತಾ ಪತಿಯ ಮುಂದೆಯೇ ಪ್ರಿಯಾಂಕಾ ಚೋಪ್ರಾ ಬೇರೇ ನಟನಿಗೆ ಸಿಹಿಮುತ್ತು ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ಪವಿತ್ರಾ ಲೋಕೇಶ್- ನರೇಶ್ ‘ಮತ್ತೆ ಮದುವೆ’ ಡೇಟ್ ಫಿಕ್ಸ್

 
View this post on Instagram
 

A post shared by Jerry x Mimi 😍 (@jerryxmimi)

ನಟಿ ಪ್ರಿಯಾಂಕಾ ಚೋಪ್ರಾ ಅವರು ಸಖತ್ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು 'ಸಿಟಾಡೆಲ್'(Citadel) ವೆಬ್ ಸರಣಿಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಸಿಟಾಡೆಲ್ ರಿಲೀಸ್ ಬೆನ್ನಲ್ಲೇ ಈಗ 'ಲವ್ ಅಗೇನ್' ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಟೈಟಲ್‌ಗೆ ತಕ್ಕಂತೆಯೇ ಪ್ರಿಯಾಂಕಾ ಅವರಿಗೆ ಮತ್ತೆ ಲವ್ ಆಗಿದೆಯಾ ಎಂಬ ಅನುಮಾನ ನೆಟ್ಟಿಗರಿಗೆ ಶುರುವಾಗಿದೆ. ಏಕೆಂದರೆ, ಪತಿ ನಿಕ್ ಎದುರಲ್ಲೇ ಪ್ರಿಯಾಂಕಾ ಅವರು ಬೇರೆ ನಟನ ಜೊತೆ ಸಿಹಿಮುತ್ತು ಹಂಚಿಕೊಂಡಿದ್ದಾರೆ. 'ಲವ್ ಅಗೇನ್' ಸಿನಿಮಾದಲ್ಲಿ ಸ್ಯಾಮ್ ಹ್ಯೂವನ್ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಕ್ಯಾಮೆರಾಗೆ ಪೋಸ್ ಕೊಡುವಾಗ ಪ್ರಿಯಾಂಕಾ ಅವರ ಮೂಗಿಗೆ ಸ್ಯಾಮ್ ಹ್ಯೂವನ್ ಅವರು ಕಿಸ್ ಮಾಡಿದ್ದಾರೆ.

 
View this post on Instagram
 

A post shared by Jerry x Mimi 😍 (@jerryxmimi)

ಸಿಟಾಡೆಲ್ ಬಳಿಕ 'ಲವ್ ಅಗೇನ್' ಮೇ 5ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಿಕ್ ಜೋನಸ್ (Nick Jonas) ಕೂಡ ನಟಿಸಿದ್ದಾರೆ. ಪ್ರಿಯಾಂಕಾ- ಸ್ಯಾಮ್ ಹ್ಯೂವನ್ ಜೋಡಿ ಚೆನ್ನಾಗಿ ಬಂದಿದೆ. ಟ್ರೈಲರ್ ಝಲಕ್‌ಗೆ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡ ಹಾಗೆ ಹಾಲಿವುಡ್‌ನಲ್ಲೂ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.

]]>
1063045 0 0 0
<![CDATA[ಈಶ್ವರಪ್ಪ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ: ಖರ್ಗೆ]]> https://publictv.in/mallikarjun-kharge-said-ks-eshwarappa-has-insulted-democracy/ Thu, 04 May 2023 09:16:41 +0000 https://publictv.in/?p=1063053 ಕಲಬುರಗಿ: ಈಶ್ವರಪ್ಪ ಜನತೆಗೆ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಎಂದು ಕಿಡಿಕಾರಿದರು.

ಕಾಂಗ್ರೆಸ್ (Congress) ಪ್ರಣಾಳಿಕೆಯನ್ನು ಸುಟ್ಟು ಹಾಕಿರುವ ಈಶ್ವರಪ್ಪ (KS Eshwarappa) ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿರುವುದು ಸರಿಯಲ್ಲ. ಯಾವುದೇ ಪ್ರಣಾಳಿಕೆಯಾದರೂ ಹೇಗೆ ಇದ್ದರೂ, ಸುಡುವುದು ಸರಿಯಲ್ಲ. ಜನರಿಗೆ ಕೊಟ್ಟ ಗ್ಯಾರೆಂಟಿ ಯೋಜನೆಗಳನ್ನು ಸುಟ್ಟು ಹಾಕಿದ್ದಾರೆ. ಪ್ರಣಾಳಿಕೆಯನ್ನು ಸುಟ್ಟು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಈಶ್ವರಪ್ಪ ಅವರು ಜನರಿಗೆ ಪ್ರಚೋದನೆ ಮಾಡಿದ ಹಾಗೆ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಲಿಬರ್ಟಿ, ಈಕ್ವಾಲಿಟಿ, ಟಾಲರೆನ್ಸ್ ಪ್ರಮುಖವಾಗಿದೆ. ಅದಕ್ಕೆ ತಕ್ಕ ಉತ್ತರ ನಮ್ಮ ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರಣಾಳಿಕೆ ಕಮಿಟಿ ಪರಮೇಶ್ವರ ಟೀಮ್ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳೋ ದಾರುಣ ಪರಿಸ್ಥಿತಿ ನನಗಾಗಲಿ, ತಂದೆಗಾಗಲಿ ಬಂದಿಲ್ಲ: ವಿಜಯೇಂದ್ರ

ಕಾಂಗ್ರೆಸ್ ಹಿಂದು ವಿರೋಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ವಿಚಾರ ಇರಬಹುದು, ಅವರ ಹಿಂದುತ್ವ ಬೇರೆಯಾಗಿದೆ. ನಾನು ಹಿಂದೂ, ನೀವು ಹಿಂದೂ ಇದ್ದೀರಿ, ನಿಮಗೆ ಇರುವ ಸ್ವಾತಂತ್ರ್ಯ ನನಗೆ ಇಲ್ಲ. ಈ ವಿಚಾರವಾಗಿ ಡಿಬೆಟ್ ಮಾಡಿದ್ರೆ ಆಗ ಅವರಿಗೆ ಉತ್ತರ ಕೋಡೊಣ ಎಂದರು. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

]]>
1063053 0 0 0
<![CDATA[ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್]]> https://publictv.in/h-vishwanath-slams-bjp-and-bajrang-dal-in-madikeri/ Thu, 04 May 2023 09:09:32 +0000 https://publictv.in/?p=1063056 ಮಡಿಕೇರಿ: ಜನರಿಗೆ ಕಿರುಕುಳ ನೀಡುವ ಬಜರಂಗದಳಕ್ಕೂ (Bajrang Dal) ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್  (H.Vishwanath) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಮಡಿಕೇರಿಯಲ್ಲಿ (Madikeri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ. ಜನರಿಗೆ ಪಾರ್ಕಲ್ಲಿ ಒಟ್ಟಿಗೆ ಓಡಾಡಲು ಬಿಡುವುದಿಲ್ಲ. ಇವರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ಆಂಜನೇಯ ಯಾವತ್ತೂ ಕಿರುಕುಳ ಕೊಟ್ಟವನಲ್ಲ. ಆದರೆ ಬಜರಂಗದಳದವರು ಕಾನೂನು ಕೈಗೆ ತೆಗೆದುಕೊಂಡು ಎಷ್ಟೋ ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

ಬಿಜೆಪಿ ನಾಯಕರ ಹೆಣ್ಣು ಮಕ್ಕಳು ಬೇರೆ ಧರ್ಮದವರನ್ನು ಮದುವೆ ಆಗಿಲ್ಲವೇ? ಲವ್ ಮಾಡಿಲ್ಲವೇ? ಪ್ರತಿ ಮಾತಿಗೂ ಆಂಜನೇಯ ಎಂದು ಹೇಳುವುದು ಸರಿಯಲ್ಲ. ಭಜರಂಗದಳ ಒಂದು ಸಂಘಟನೆ ಮಾತ್ರ ಎಂದಿದ್ದಾರೆ.

ನಾನು ಹಿಂದೂ, ಆಂಜನೇಯನ ಭಕ್ತ, ನನ್ನ ರಾಮ ವಿರಾಟ್ ಅಲ್ಲ ಶಾಂತಿ ಸೌಹಾರ್ದತೆಯ ರಾಮ, ಗಾಂಧಿ ಹೇಳಿಕೊಟ್ಟ ರಾಮ ಎಂದಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

]]>
1063056 0 0 0
<![CDATA[ಮೋದಿಗೆ ಚುನಾವಣೆ ಅಂದ್ರೆ ಭಯನಾ?: ವಿಶ್ವನಾಥ್]]> https://publictv.in/karnataka-election-2023-h-vishwanath-lashesh-out-at-narendra-modi/ Thu, 04 May 2023 09:21:52 +0000 https://publictv.in/?p=1063058 ಮಡಿಕೇರಿ: ವಿಶ್ವ ಗುರು ಪ್ರಧಾನಿ ಮೋದಿಯನ್ನು ಗೌರವಿಸುತ್ತೇನೆ. ಆದರೆ ಚುನಾವಣೆಯ ಸಮಯದಲ್ಲಿ ಇಷ್ಟು ಬಾರಿ ಒಂದು ರಾಜ್ಯಕ್ಕೆ ಬರಬೇಕಾ..? ಒಂದು ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಪದೇ ಪದೇ ಬರುವುದು ಚುನಾವಣೆಯ ಮೇಲಿನ ಭಯದಿಂದಾನಾ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಪ್ರಶ್ನಿಸಿದ್ದಾರೆ.

ಮಡಿಕೇರಿ (Madikeri) ಯಲ್ಲಿ ಮಾತಾನಾಡಿದ ಅವರು, ಚುನಾವಣೆಯ ಸಮಯದಲ್ಲಿ ಕರ್ನಾಟಕಕ್ಕೆ ಇಷ್ಟು ಬಾರಿ ಬರಬೇಕಾ..? ಈ ಹಿಂದೆ ಯಾವ ಪ್ರಧಾನಿಯೂ ಇಷ್ಟೊಂದು ಬಾರಿ ರಾಜ್ಯಕ್ಕೆ ಬಂದಿಲ್ಲ. ಪ್ರಧಾನ ಮಂತ್ರಿ ಬಂದರೆ ರಾಜಧಾನಿಯಲ್ಲಿ ಒಂದು ಭಾಷಣ ಮಾಡಿ ಹೋಗುತ್ತಾರೆ. ಆ ಭಾಷಣಗಳು ವಿಮರ್ಶೆಗಳು ಚರ್ಚೆಗಳು ಆಗುತ್ತಾ ಇತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

ನಿಮ್ಮ ಮೇಲೆ ಕರ್ನಾಟಕದ ಜನತೆಗೆ ನಂಬಿಕೆ ಹಾಳಾಗಿದೆಯೇ. ಭವಿಷ್ಯ ನಿಮ್ಮ ಭಾವನೆ ಆಗಿದೆ. ಕರ್ನಾಟಕದ ಜನ ಭಾರತೀಯ ಪ್ರಧಾನಮಂತ್ರಿ ಮೋದಿ (Narendra Modi) ಅವರು ಹಾಗೂ ಬಿಜೆಪಿ ಅವರ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ನಂಬಿಕೆಯನ್ನು ಮೂಡಿಸಲು ನಾನು ಪದೇ ಪದೇ ಬರುತ್ತಾ ಇದ್ದೀನಿ ಎಂದು ನೀವೇ ಜಗತ್ ಜಾಹೀರ್ ಮಾಡುತ್ತಾ ಇದ್ದೀರಿ ಅಲ್ವ ಯಾಕೆ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ನಾನು ವಿಭಿನ್ನವಾಗಿ ಹೇಳುತ್ತಾ ಇಲ್ಲ. ಒಬ್ಬ ಪ್ರಧಾನಮಂತ್ರಿ ಈ ದೇಶದ ಪ್ರಧಾನಮಂತ್ರಿ ಬರಿ ಹಿಂದೂಗಳಿಗೆ ಅಲ್ಲ ಪ್ರಧಾನ ಮಂತ್ರಿ ಈ ದೇಶದ ಎಲ್ಲಾ ಜಾತಿ ಜನಾಂಗದ ಧರ್ಮ ಭಾಷಿಕರ ಪ್ರಧಾನಮಂತ್ರಿ ಅವರು. ಅದನ್ನ ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಇಲ್ಲಿಗೆ ಬಂದು ಏನೇನೋ ಮಾತಾನಾಡುವುದು ಅಲ್ಲ. ಅದು ಗೌರವ ತರುವಂತಹದು ಅಲ್ಲ ಎಂದು ಕಿಡಿಕಾರಿದರು.

]]>
1063058 0 0 0
<![CDATA[ಡಿಕೆಶಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ರಾಮತೀರ್ಥ ಹೆಲಿಪ್ಯಾಡ್‌ನಲ್ಲಿ ಬೆಂಕಿ]]> https://publictv.in/a-fire-broke-out-at-ramatheertha-honnavar-helipad-where-dk-shivakumar-helicopter-landing/ Thu, 04 May 2023 09:21:47 +0000 https://publictv.in/?p=1063063 ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪಾಡ್‌ಗೆ (Honnavar Helipad) ಮೈಸೂರಿನಿಂದ ಡಿ.ಕೆ ಶಿವಕುಮಾರ್ (‌DK Shivakumar) ಆಗಮಿಸುತಿದ್ದಂತೆ ಹೆಲಿಕಾಪ್ಟರ್‌ಗೆ (Helicopter) ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್‌ನಿಂದ ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಗುರುವಾರ ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಡಿಕೆಶಿ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಡಿಕೆಶಿ ಆಗಮಿಸುತ್ತಿದ್ದಂತೆ ಹೆಲಿಕಾಪ್ಟರ್‌ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್‌ನಿಂದ (Smoke Candle) ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬೆಂಕಿ ಯಾಕೆ ಹೊತ್ತಿಕೊಳ್ಳುತ್ತೆ? ಹೆಲಿಕಾಪ್ಟರ್‌ನಲ್ಲಿ ಮೇಲಿನಿಂದ ನೋಡಿದಾಗ ಎಲ್ಲವೂ ಬಯಲಿನಂತೆ ಕಾಣುತ್ತದೆ. ಈ ಕಾರಣಕ್ಕೆ ಲ್ಯಾಂಡಿಂಗ್ ಮಾರ್ಕ್‌ನಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸ್ಮೋಕ್ ಕ್ಯಾಂಡಲ್ ಬಿಡಲಾಗುತ್ತದೆ. ದಟ್ಟವಾದ ಹೊಗೆ ಬಂದ ಜಾಗದಲ್ಲಿ ಹೆಲಿಪ್ಯಾಡ್ ಇದೆ ಎಂದು ತಿಳಿದು ಪೈಲಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡುತ್ತಾರೆ.

ಈ ಕಾರಣಕ್ಕೆ ಲ್ಯಾಂಡ್ ಆಗುವ ಜಾಗದ ಸಮೀಪ ಹುಲ್ಲುಗಳನ್ನು ತೆಗೆದು ಸ್ವಚ್ಛ ಮಾಡಬೇಕಾಗುತ್ತದೆ. ಲ್ಯಾಂಡ್ ಆಗುವ ಸಮಯದಲ್ಲಿ ಹೆಲಿಕಾಪ್ಟರ್ ರೆಕ್ಕೆಯಿಂದ ಗಾಳಿ ವೇಗವಾಗಿ ಬೀಸುವ ಕಾರಣ ಬೆಂಕಿ ಇತರ ಕಡೆ ಹರಡುತ್ತದೆ. ಈ ವೇಳೆ ಹುಲ್ಲಿದ್ದರೆ ಬೆಂಕಿ ತಗುಲುತ್ತದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಕ್ಕೂರಿನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿತ್ತು. ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಮುಂದಿನ ಗಾಜು ಪುಡಿ ಪುಡಿಯಾಗಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ಹೆಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದರು.

]]>
1063063 0 0 0
<![CDATA[ನಾಳೆ 'ದಿ ಕೇರಳ ಸ್ಟೋರಿ' ರಿಲೀಸ್ : ತಮಿಳುನಾಡು ಗುಪ್ತಚರ ಇಲಾಖೆ ಹೇಳಿದ್ದೇನು?]]> https://publictv.in/tomorrow-the-kerala-story-released-what-tamil-nadu-intelligence-department-said/ Thu, 04 May 2023 09:22:58 +0000 https://publictv.in/?p=1063064 ನಾಳೆ ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ರಿಲೀಸ್ ಆಗುತ್ತಿದೆ. ಭಾರೀ ಪ್ರತಿಭಟನೆಯ ಮಧ್ಯಯೂ ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಹೋರಾಟಕ್ಕಿಳಿದಿವೆ. ಈ ಎಲ್ಲ ಘಟನೆಗಳ ಬೆನ್ನಲ್ಲೇ ತಮಿಳುನಾಡು (Tamil Nadu) ಸರಕಾರಕ್ಕೆ ಗುಪ್ತಚರ ಇಲಾಖೆ (Intelligence) ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

ನಾಳೆ ತಮಿಳುನಾಡಿನಾದ್ಯಂತ ಚಿತ್ರವು ತೆರೆ ಕಾಣುವುದರಿಂದ ಕೇರಳದ ಮಾದರಿಯಲ್ಲೇ ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಯಬಹುದು. ಹಾಗಾಗಿ ಅಲರ್ಟ್ ಆಗಿ ಇರುವಂತೆ ಸೂಚಿಸಲಾಗಿದೆಯಂತೆ. ಭಾರೀ ಪ್ರತಿಭಟನೆ ಮಾಡುವ ಸೂಚನೆಗಳು ಕೂಡ ಸಿಕ್ಕಿವೆ ಎಂದು ವರದಿ ನೀಡಿದೆಯಂತೆ. ಇದನ್ನೂ ಓದಿ:ಪವಿತ್ರಾ ಲೋಕೇಶ್- ನರೇಶ್ ‘ಮತ್ತೆ ಮದುವೆ’ ಡೇಟ್ ಫಿಕ್ಸ್

ಈಗಾಗಲೇ ವಿವಾದಕ್ಕೆ(, Controversy) ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.

]]>
1063064 0 0 0
<![CDATA[ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ - ಹುಬ್ಬೇರಿಸಿ ನೋಡುವಂತೆ ಪ್ರಣಾಳಿಕೆ ಘೋಷಿಸಿದ ಅಭ್ಯರ್ಥಿಗಳು]]> https://publictv.in/karnataka-election-2023-marriage-for-men-who-cannot-find-girl-candidates-announced-their-manifesto-at-belagavi/ Thu, 04 May 2023 09:31:02 +0000 https://publictv.in/?p=1063075 ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹೊಸ್ತಿಲಲ್ಲಿ ಎಲ್ಲಾ ಪಕ್ಷಗಳು ಪ್ರಣಾಳಿಕೆ (Manifesto) ಬಿಡುಗಡೆ ಮಾಡುತ್ತಿವೆ. ಈ ನಡುವೆ ಬೆಳಗಾವಿಯ (Belagavi) ಪಕ್ಷೇತರ ಅಭ್ಯರ್ಥಿಗಳಿಬ್ಬರು ವಿನೂತನ ರೀತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಎಲ್ಲರೂ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ.

ಅರಭಾವಿ (Arabhavi) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ್ (Gokak) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ವಿಶೇಷವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮೋದಿಗೆ ಚುನಾವಣೆ ಅಂದ್ರೆ ಭಯನಾ?: ವಿಶ್ವನಾಥ್

ಗುರುಪುತ್ರ ಕುಳ್ಳೂರ ಹಾಗೂ ಪುಂಡಲೀಕ ಕುಳ್ಳೂರ ಇಬ್ಬರೂ ಸಹೋದರರಾಗಿದ್ದು ಪಕ್ಷೇತರರಾಗಿ ಅರಭಾವಿ ಹಾಗೂ ಗೋಕಾಕ್‌ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಎರಡೂ ಮತಕ್ಷೇತ್ರದ ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವ ಭರವಸೆಯನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ರಾಮತೀರ್ಥ ಹೆಲಿಪ್ಯಾಡ್‌ನಲ್ಲಿ ಬೆಂಕಿ

]]>
1063075 0 0 0
<![CDATA[ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್]]> https://publictv.in/deepika-das-visits-chamundeshwari-temple-in-mysuru/ Thu, 04 May 2023 09:44:02 +0000 https://publictv.in/?p=1063081 ಬಿಗ್ ಬಾಸ್ (Bigg Boss Kannada) ಬೆಡಗಿ ದೀಪಿಕಾ ದಾಸ್ (Deepika Das) ಅವರು ಮೈಸೂರು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ತಾಯಿ ದರ್ಶನ ಪಡೆದು ಭಕ್ತಿ ಬೇಡಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್

ನಾಗಿಣಿ, ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಚೆಲುವೆ ದೀಪಿಕಾ ದಾಸ್ ಅವರು ಫೀಮೇಲ್ ಓರಿಯೆಂಟೆಡ್ ಸಿನಿಮಾ ಮೂಲಕ ಬರುತ್ತಿದ್ದಾರೆ. ಪಾಯಲ್ ಪಾತ್ರಧಾರಿಯಾಗಿ ಭಿನ್ನ ಕಥೆ ಹೇಳಲು ರೆಡಿಯಾಗಿದ್ದಾರೆ. 'ಅಂತರಪಟ' (Antarapata) ಸೀರಿಯಲ್ ಅತಿಥಿಯಾಗಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ.

 
View this post on Instagram
 

A post shared by Deepika Das (@deepika__das)

ಶೂಟಿಂಗ್‌ಗೆ ಕೊಂಚ ಬ್ರೇಕ್ ಹಾಕಿ, ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ದೀಪಿಕಾ ದಾಸ್ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ. ಬಿಳಿ ಬಣ್ಣದ ಪ್ಯಾಂಟ್- ಹಳದಿ ಬಣ್ಣದ ಶಾರ್ಟ್ ಟಾಪ್‌ನ ನಟಿ ಧರಿಸಿದ್ದಾರೆ. ಕಣ್ಣಿಗೆ ಚಸ್ಮಾ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಸೀರಿಯಲ್- ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ದೀಪಿಕಾ ದಾಸ್, ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

]]>
1063081 0 0 0
<![CDATA[ಶಿವರಾಜ್ ಕುಮಾರ್ ಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ]]> https://publictv.in/mp-pratap-singh-gave-a-tong-to-shivaraj-kumar/ Thu, 04 May 2023 09:52:24 +0000 https://publictv.in/?p=1063084 ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ (Siddaramaiah) ಪರವಾಗಿ ಇಂದು ಶಿವರಾಜ್ ಕುಮಾರ್ (Shivaraj Kumar) ಪ್ರಚಾರ ಮಾಡುತ್ತಿದ್ದಾರೆ. ವರುಣಾ (Varuna) ಕ್ಷೇತ್ರಕ್ಕೆ ಆಗಮಿಸಿರುವ ಶಿವಣ್ಣ, ಬೆಳಗ್ಗೆಯಿಂದಲೇ ಸಿದ್ಧರಾಮಯ್ಯನವರ ಪರವಾಗಿ ಮತಯಾಚನೆ ಮಾಡುತ್ತಿದ್ದರು. ಈ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಮಣ್ಣನನ್ನು ಹೊಗಳುವ ಮೂಲಕ ಶಿವಣ್ಣನಿಗೆ ಟಾಂಗ್ ನೀಡಿದ್ದಾರೆ.

ಪ್ರತಾಪ್ ಸಿಂಹ ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲ್ಯಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್

ಕಳೆದ ಎರಡು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ ಕೂಡ ಮಂಡ್ಯದಿಂದ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ದುನಿಯಾ ವಿಜಯ್ ಕೇವಲ ಸಿದ್ಧರಾಮಯ್ಯನವರ ಪರವಾಗಿಯಷ್ಟೇ ಪ್ರಚಾರ ಮಾಡಲಿದ್ದಾರಂತೆ.

ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.

]]>
1063084 0 0 0
<![CDATA[ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ 'ಸೀತಾರಾಮಂ' ನಟಿ]]> https://publictv.in/actress-mrunal-thakur-bold-photoshoot/ Thu, 04 May 2023 10:17:13 +0000 https://publictv.in/?p=1063092 ಹುಡುಗರ ಪಾಲಿನ ಇಷ್ಟದೇವತೆ ಸೀತೆ ಮೃಣಾಲ್ ಠಾಕೂರ್ (Mrunal Thakur) ಇದೀಗ ಕಡಲ ಕಿನಾರೆಯಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಮತ್ತೆ ಹಾಟ್ ಅವತಾರದಲ್ಲಿ 'ಸೀತಾರಾಮಂ' (Seetharamam) ಸುಂದರಿ ಕಾಣಿಸಿಕೊಂಡಿದ್ದಾರೆ.

'ಸೀತಾರಾಮಂ' ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್‌ಗೆ ಜೋಡಿಯಾಗಿ ನಟಿಸಿದ್ದ ಮೃಣಾಲ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರದ ಕಥೆ ಸೀತೆಯ ನಟನೆ ಎಲ್ಲವೂ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈ ಸಿನಿಮಾದ ಬಳಿಕ ಮೃಣಾಲ್ ಬಂಪರ್ ಆಫರ್ ಸಿಕ್ತು. ಇದೀಗ ಸಾಲು ಸಾಲು ಸಿನಿಮಾಗಳಿಗೆ ಮೃಣಾಲ್ ನಾಯಕಿಯಾಗಿದ್ದಾರೆ.

ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಕಡಲ ಕಿನಾರೆಯಲ್ಲಿ ನಟಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಲೈಟ್ ಬಣ್ಣದ ಡ್ರೆಸ್ ಧರಿಸಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಕಳೆದ ಬಾರಿ ಮೃಣಾಲ್ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಇದೀಗ ಮತ್ತೆ ಬೋಲ್ಡ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್

 
View this post on Instagram
 

A post shared by Mrunal Thakur (@mrunalthakur)

ಮೃಣಾಲ್ ವೆಕೇಷನ್ ಫೋಟೋ ವೈರಲ್ ಆಗ್ತಿದ್ದಂತೆ ದಯವಿಟ್ಟು ಈ ರೀತಿ ಡ್ರೆಸ್‌ನ ಧರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಸೀತೆಯಾಗಿ ನೋಡಿರೋ ನೆಟ್ಟಿಗರು ನಟಿಯ ಹಾಟ್ ಅವತಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

]]>
1063092 0 0 0
<![CDATA[ಕಾಂಗ್ರೆಸ್‍ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ: ಅಶೋಕ್ ಕಿಡಿ]]> https://publictv.in/karnataka-election-2023-r-ashok-lashesh-out-at-congress/ Thu, 04 May 2023 10:21:44 +0000 https://publictv.in/?p=1063099 ರಾಮನಗರ: ಬಜರಂಗದಳ (Bajaranagdal) ವನ್ನು ಬ್ಯಾನ್ ಮಾಡುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.

ಇಂದು ಕನಕಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾನು ಬಜರಂಗದಳದ ಸದಸ್ಯ, ಕಾಂಗ್ರೆಸ್ (Congress) ನಾಯಕರಿಗೆ ಧಮ್ಮಿದ್ರೆ, ತಾಕತ್ತಿದ್ರೆ ಕ್ರಮ ಜರುಗಿಸಲಿ ನೋಡೋಣ ಅಂತ ಸವಾಲೆಸೆದರು. ಕಾಂಗ್ರೆಸ್ ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ, ಆ ಆಂಜನೇಯ ಬಾಲಕ್ಕೆ ಬೆಂಕಿ ಹತ್ತಿದಾಗ ಲಂಕೆಯನ್ನು ಸುಟ್ಟಂತೆಯೇ ಕಾಂಗ್ರೆಸ್ ಹಚ್ಚಿರುವ ಬೆಂಕಿ ಆ ಪಕ್ಷವನ್ನೇ ಅಗ್ನಿಗಾಹುತಿ ಮಾಡಲಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ – ಹುಬ್ಬೇರಿಸಿ ನೋಡುವಂತೆ ಪ್ರಣಾಳಿಕೆ ಘೋಷಿಸಿದ ಅಭ್ಯರ್ಥಿಗಳು

ಸಿದ್ದರಾಮಯ್ಯ (Siddaramaiah) ಅವರು ಮೊದಲಿನಿಂದಲೂ ಕುಂಕುಮವನ್ನು ವಿರೋಧ ಮಾಡ್ತಾರೆ. ಟಿಪ್ಪು ಸುಲ್ತಾನ್ ಅವರನ್ನು ಓಲೈಕೆ ಮಾಡಿಕೊಳ್ಳುತ್ತಾರೆ. ಹಿಂದೂ ವಿರೋಧಿ ಭಾವನೆಯನ್ನು ಕಾಂಗ್ರೆಸ್ ಮಾಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ಕಡೆ ಹನುಮಾನ್ ಚಾಲಿಸಾ (Hanuman Chalisa) ಪಠಣೆ ಮಾಡಲಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಸರ್ವನಾಶವಾಗುತ್ತದೆ. ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಕಾಂಗ್ರೆಸ್ ಗೆ ವ್ಯತಿರಿಕ್ತವಾಗುತ್ತದೆ. ಇದೆಲ್ಲವನ್ನೂ ನೋಡಿದ್ರೆ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನೋದು ಗೊತ್ತಾಗುತ್ತದೆ ಎಂದರು.

ಹಿಂದೆ ಅಖಂಡ ಶ್ರೀನಿವಾಸ್ (Akhanda SrinivasMurthy) ಮನೆಗೆ ಬೆಂಕಿ ಹಚ್ಚಲಾಗಿತ್ತು. ಆ ಟೈಮ್ ನಲ್ಲಿ ಏನಾಯ್ತು ಅಂತ ಎಲ್ಲರಿಗೂ ಗೊತ್ತು. ಅತಿ ಹೆಚ್ಚು ಮತಗಳಿಂದ ಅಖಂಡ ಶ್ರೀನಿವಾಸ ಮೂರ್ತಿ ಗೆದ್ದಿದ್ದರು. ಅಖಂಡ ಶ್ರೀನಿವಾಸ ಮೂರ್ತಿ ಒಬ್ಬ ದಲಿತ. ಅದಕ್ಕಾಗಿ ಆ ಭಾಗದ ಎಲ್ಲಾ ಮುಲ್ಲಾಗಳು ಬಂದು ಟಿಕೆಟ್ ಕೊಡಬೇಡಿ ಎಂದು ಹೇಳಿದ್ದರು. ಅದಕ್ಕಾಗಿಯೇ ಶ್ರೀನಿವಾಸ್‍ಗೆ ಟಿಕೆಟ್ ಕೈತಪ್ಪಿತ್ತು. ಯಾರು ಬೆಂಕಿ ಹಚ್ಚಿದ್ದಾರೆ ಅವರೆಲ್ಲ ಚೆನ್ನಾಗಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ರು.

]]>
1063099 0 0 0
<![CDATA[ಪವಿತ್ರಾ ಲೋಕೇಶ್-ನರೇಶ್: ಬಯಲಾಯ್ತು ಕಿಸ್ಸಿಂಗ್ ದೃಶ್ಯದ ಅಸಲಿ ಬಣ್ಣ]]> https://publictv.in/pavitra-lokesh-naresh-the-real-color-of-the-kissing-scene-revealed/ Thu, 04 May 2023 10:34:07 +0000 https://publictv.in/?p=1063101 ಹೊಸ ವರ್ಷದ ಮೊದಲ ದಿನದಂದು ಕಿಸ್ಸಿಂಗ್(Kiss) ವಿಡಿಯೋವೊಂದನ್ನು ರಿಲೀಸ್ ಮಾಡಿ, ಮದುವೆ ವಿಚಾರವನ್ನು ಹಂಚಿಕೊಂಡಿದ್ದರು ನಟ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh). ಈ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು. ಇಬ್ಬರದ್ದೂ ಲವ್ವಿಡವ್ವಿ ಜೋರಾಗಿದ್ದ ಸಂದರ್ಭದಲ್ಲಿ ವಿಡಿಯೋ ರಿಲೀಸ್ ಆಗಿದ್ದರಿಂದ ಅದು ನಿಜವಾ ಅಥವಾ ಯಾವುದಾದರೂ ಸಿನಿಮಾದ ತುಣುಕಾ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ತಮ್ಮದೇ ಲವ್ ಸ್ಟೋರಿಯನ್ನು ‘ಮತ್ತೆ ಮದುವೆ’ (Matte Maduve) ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ಪವಿತ್ರಾ ಲೋಕೇಶ್ ಮತ್ತು ನರೇಶ್. ಆ ಸಿನಿಮಾದಲ್ಲಿ ಇಬ್ಬರೂ ಕಿಸ್ ಮಾಡಿದ್ದಾರೆ. ಆ ಸನ್ನಿವೇಶದ ಒಂದು ತುಣುಕನ್ನು ಅವರು ಹೊಸ ವರ್ಷದ ಸಂದರ್ಭದಲ್ಲಿ ಹಂಚಿಕೊಂಡು ವಿಶ್ ಮಾಡಿದ್ದರು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ನಲ್ಲಿ ಆ ವಿಡಿಯೋವನ್ನೂ ಸೇರಿಸಲಾಗಿದೆ. ಅಲ್ಲಿಗೆ ಸಿನಿಮಾದ ದೃಶ್ಯವೇ ಅದಾಗಿದೆ. ಇದನ್ನೂ ಓದಿ:ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್

ಚಿತ್ರದ ಟೀಸರ್ (Teaser) ಈಗಾಗಲೇ ರಿಲೀಸ್ ಆಗಿದ್ದು, ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ. ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ, ಇದು ರಿಯಲ್ ಲೈಫ್ ಕಥೆಯಂತೆ ಭಾಸವಾಗಿದೆ.

ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು (M.S. Raju) ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬಂದಿದೆ.

]]>
1063101 0 0 0
<![CDATA[ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ]]> https://publictv.in/what-rahul-gandhi-did-last-time-this-time-narendra-modi-has-done-says-hd-deve-gowda/ Thu, 04 May 2023 10:52:16 +0000 https://publictv.in/?p=1063109 ಹಾಸನ: ಜೆಡಿಎಸ್‌ಗೆ (JDS) ಮತ ಹಾಕಿದರೆ ಕಾಂಗ್ರೆಸ್‌ಗೆ (Congress) ಮತ ಹಾಕಿದಂತೆ ಎಂಬ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Deve Gowda) ಬೇಸರ ವ್ಯಕ್ತಪಡಿಸಿದ್ದಾರೆ.

ಹಾಸನ (Hassan) ಜಿಲ್ಲೆ, ಅರಸೀಕೆರೆ ತಾಲೂಕಿನ ಲಾಳನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗುರ ಮಾತು ಬೇಡ, ಇದು ಅವರಿಗೆ ಶೋಭೆ ತರುವುದಿಲ್ಲ. ಕಳೆದ ಬಾರಿ ರಾಹುಲ್ ಗಾಂಧಿ (Rahul Gandhi) ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ. ಇದು ಸಲ್ಲದು ಎಂದರು.

ರಾಹುಲ್ ಗಾಂಧಿಗೂ ಇವರಿಗೂ ವ್ಯತ್ಯಾಸ ಇದೆ. ರಾಹುಲ್ ಗಾಂಧಿ ಅವರ ಮಟ್ಟಕ್ಕೆ ಮೋದಿ ಅವರನ್ನು ಇಳಿಸಬಾರದಿತ್ತು. 'ರಾಹುಲ್ ಗಾಂಧಿ ಈಸ್ ಎ ಯಂಗ್‌ಸ್ಟರ್, ಮೋದಿ ಈಸ್ ಎ ಮೆಚ್ಯೂರ್ಡ್ ಲೀಡರ್'. ಅವರಿಂದ ಇಂತಹ ಮಾತು ಬರುತ್ತೆ ಎಂದು ನಾನು ಯೋಚನೆ ಮಾಡಿರಲಿಲ್ಲ. ಮೋದಿ ಅವರು ದೇಶದ ಪ್ರಧಾನಿಯಾಗಿ, ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬಾರದು. ಅದು ಅವರಿಗೆ ಶೋಭೆಯಲ್ಲ ಎಂದರು.

ಇದೇ ವೇಳೆ ತಮ್ಮ ಮಾಜಿ ಶಿಷ್ಯ ಕೆಎಂ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದ ಗೌಡರು, ಈ ಸಭೆ ದೇವರ ಸಭೆ. ನನ್ನ 92ನೇ ವಯಸ್ಸಿನಲ್ಲಿ ಸಭೆಯಲ್ಲಿ ನಿಂತು ಅಸತ್ಯ ಮಾತನಾಡಲು ಸಿದ್ಧನಿಲ್ಲ. ಹೇಮಾವತಿ ಎಡದಂಡೆ ನಾಲೆಯಿಂದ ಅರಸೀಕೆರೆಗೆ ನೀರು ಕೊಡಲು ರೇವಣ್ಣ ಹಠ ಮಾಡಿದ್ದರು. ನಾನು ಮಂಜೂರಾತಿ ಕೊಟ್ಟೆ. ಆದರೆ ಅದನ್ನು ತುಮಕೂರಿಗೆ ತೆಗೆದುಕೊಂಡು ಹೋದರು. ಆಗ ಅರಸೀಕೆರೆಗೆ ನೀರಿನ ಕೊರತೆ ಎದುರಾದಾಗ 23 ಕೊಳವೆ ಬಾವಿ ಕೊರೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದೆ. ಅದು ಉಪ್ಪಿನ ನೀರು ಎಂದು ಹೇಳಿದರು. ಹೀಗಾಗಿ ಆಗಲಿಲ್ಲ ಎಂದರು.

ಅರಸೀಕೆರೆಯ ಕೆಲ ಗ್ರಾಮಗಳಿಗೆ ನೀರು ತುಂಬಿಸುವಂತೆ ಅಂದಿನ ಸಿಎಂ ವೀರೇಂದ್ರ ಪಾಟೀಲ್‌ರಿಗೆ 1971 ಜುಲೈ 31 ರಂದು ಬರೆದಿದ್ದ ಪತ್ರ ಪ್ರದರ್ಶಿಸಿದ ಹೆಚ್‌ಡಿಡಿ, 40 ಕೆರೆಗಳಿಗೆ ನೀರು ತುಂಬಿಸಲು ಪತ್ರ ಬರೆದಿದ್ದು ಯಾರು ಹೇಳಿ? ಜೀವನದಲ್ಲಿ ಅವರು ಏನೇನು ಮಾಡಿದ್ದಾರೆ ಅದನ್ನು ಗುಣಗಾಣ ಮಾಡಲ್ಲ. ಆತನನ್ನು ರೇವಣ್ಣ ಬೆನ್ನಿಗೆ ಕಟ್ಟಿಕೊಂಡು ಜೊತೆಯಲ್ಲಿಯೇ ಎಳೆದುಕೊಂಡು ಹೋದರು. ಅದೇ ರೇವಣ್ಣನನ್ನು ಇವತ್ತು ತುಳಿತೀನಿ ಎನ್ನುತ್ತಿದ್ದಾರೆ. ಇಂತಹ ವ್ಯಕ್ತಿ ಅರಸೀಕೆರೆಯಲ್ಲಿ ಮತ್ತೊಮ್ಮೆ ಮುಂದುವರಿಯಕೂಡದು. ಎಂತಹ ವಂಚನೆ, ಮೋಸ, ಮತ್ತೊಬ್ಬ ಇಂತಹ ಕೆಟ್ಟ ರಾಜಕಾರಣಿ ಅರಸೀಕೆರೆಗೆ ಬರಬಾರದು, ಹುಟ್ಟಬಾರದು. ಅಂತ್ಯ ಹಾಡಲೇಬೇಕು ಎಂದು ಕರೆ ನೀಡಿದರು.

ಒಂದು ವೋಟ್‌ಗೆ ಒಂದೂವರೆ ಸಾವಿರ ಕೊಡುತ್ತಾರೆ. 50 ಲಕ್ಷ, ಕೋಟಿ ಖರ್ಚು ಮಾಡುತ್ತಾರೆ. ಎಲ್ಲಿಂದ ಬಂತು ಹಣ? ಒಡೆದು ಆಳುವ ನೀತಿ ಅಂತ್ಯ ಆಗಬೇಕು. ನಾನು ಕೇವಲ ನನ್ನ ಜಾತಿಗೋಸ್ಕರ ಮಾಡಲಿಲ್ಲ. ಹೇಮಾವತಿ ನದಿಯಿಂದ ನೇರವಾಗಿ ಅರಸೀಕೆರೆಗೆ ನೀರು ತರುವ ಯೋಜನೆ ಮಾಡಿದ್ದು ನಾನು ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌

ಗುರುವಾರ ಹಾಗೂ ಶುಕ್ರವಾರ ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಿದ್ಧನಾಗಿ ಬಂದಿದ್ದೇನೆ. ಯಾವುದೇ ಕ್ಷೇತ್ರಗಳನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಕಡೂರು ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಭವಾನಿ ಅವರು ಹಾಸನದಲ್ಲಿ ಸ್ವರೂಪ್ ಅವರನ್ನು ತನ್ನ 3ನೇ ಮಗ ಎಂದು ಘೋಷಣೆ ಮಾಡಿದ್ದಾರೆ. ಮೊನ್ನೆ ಪ್ರಧಾನಿ ಮೋದಿ ಅವರು ಜಿಲ್ಲೆಯ ಬೇಲೂರಿಗೆ ಬಂದಿದ್ದರು. ನಾನೂ ಕೂಡ ಪ್ರಚಾರ ಮಾಡಿದ್ದೇನೆ. ನಾಳೆವರೆಗೂ ಹಾಸನದಲ್ಲಿ ಪ್ರಚಾರ ನಡೆಸುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ: ಅಶೋಕ್ ಕಿಡಿ

]]>
1063109 0 0 0
<![CDATA[ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌]]> https://publictv.in/kichcha-sudeepa-drink-a-cup-of-tea-in-roadside-shop-at-raichur/ Thu, 04 May 2023 10:40:21 +0000 https://publictv.in/?p=1063110 - ದೇವದುರ್ಗದಲ್ಲಿ ರೋಡ್ ಶೋ; ಶಿವನಗೌಡ ನಾಯಕ್‌ ಪರ ಪ್ರಚಾರ

ರಾಯಚೂರು: ನಟ ಕಿಚ್ಚ ಸುದೀಪ್ (Kichcha Sudeepa) ಜಿಲ್ಲೆಯ ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ (BJP Candidate) ಶಿವನಗೌಡ ನಾಯಕ್ ಪರ ರೋಡ್ ಶೋ (Sudeep RoadShow) ಮೂಲಕ ಮತಪ್ರಚಾರ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾಷಣ ಮಾಡಿದ ಸುದೀಪ್ ನಮ್ಮ ಹಿರಿಯ ಸಹೋದರ ಶಿವನಗೌಡ ನಾಯಕ್ ರನ್ನ 4 ಸಾರಿ ಗೆಲ್ಲಿಸಿದ್ದಿರಾ ಅಂದ್ರೆ, ಅವರು ಒಳ್ಳೆಯವರು ಅಂತಾ ಅರ್ಥ. ಜನರೂ ಬುದ್ಧಿವಂತರಾಗಿದ್ದಾರೆ ಎಂದರ್ಥ. ಎಜುಕೇಶನ್ ಲೇಔಟ್ ಮಾಡಿ ಶಿವನಗೌಡ ಸಕ್ಸಸ್ ಮಾಡಿದ್ದಾರೆ. ಅವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

ಶಿವನಗೌಡ ನಾಯಕ್ ಬೇರೆ ಯಾರೂ ಅಲ್ಲ ಅವ ನಮ್ಮವ. ಶಿವನಗೌಡ ಅವ್ರಿಗೆ ವೋಟ್ ಹಾಕೋದು ಒಂದೇ ನನ್ನ ಗೆಲ್ಲಿಸೋದು ಒಂದೇ. ನಾನು ಪ್ರಚಾರ ಮಾಡ್ತಿರಬಹುದು. ಆದ್ರೆ ನಾನೋಬ್ಬ ಸಾಮಾನ್ಯ ಕಲಾವಿದ. ಶಿವನಗೌಡ ಅವರು ಮಾಡಿದ್ದು ಸರಿ ಅನ್ನಿಸಿದ್ರೆ, ಅವರು ನಿಮ್ಮವರು ಅನಿಸಿಕೊಂಡಿದ್ರೆ ಉಳಿಸಿಕೊಳ್ಳಿ. 10ನೇ ತಾರೀಕು ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

ಇನ್ನೂ ರೋಡ್ ಶೋ ಮಧ್ಯೆ ರಸ್ತೆ ಬದಿಯ ಸಣ್ಣ ಚಹಾ ಅಂಗಡಿಯಲ್ಲಿ ಚಹಾ ಕುಡಿದು ಕಿಚ್ಚ ಸುದೀಪ್ ಚೆನ್ನಾಗಿದೆ ಅಂತಾ ಖುಷಿ ವ್ಯಕ್ತಪಡಿಸಿದರು. ದೇವದುರ್ಗದ ಬಸವೇಶ್ವರ ವೃತ್ತದಲ್ಲಿ ರೋಡ್ ಶೋ ವೇಳೆ ಚಹಾದಂಗಡಿಯ ಅಭಿಮಾನಿ ಕಿಚ್ಚನಿಗೆ ಟೀ ತಂದು ಕೊಟ್ಟರು. ಟೀ ಸೂಪರ್ ಅಂತಾ ಸನ್ನೆ ಮಾಡುತ್ತಾ ಕಿಚ್ಚ ಖುಷಿ ವ್ಯಕ್ತಪಡಿಸಿದರು. ಟೀ ಕುಡಿದು ಮತ್ತೆ ಪ್ರಚಾರದಲ್ಲಿ ತೊಡಗಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

]]>
1063110 0 0 0
<![CDATA[ಸಿದ್ದರಾಮಯ್ಯ ಈಗಾಗಲೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ: ರಮ್ಯಾ]]> https://publictv.in/karnataka-election-2023-actress-ramya-campaign-in-mysuru/ Thu, 04 May 2023 11:18:46 +0000 https://publictv.in/?p=1063116 ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya) ಹೇಳಿದ್ದಾರೆ.

ಮೈಸೂರಿನ ಕೆಂಪಿಸಿದ್ದಯ್ಯನಹುಂಡಿ ಸಿದ್ದರಾಮಯ್ಯ ಜೊತೆ ರಮ್ಯಾ ಪ್ರಚಾರ ಆರಂಭ ಮಾಡಿದ ನಟಿ ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಇಂದು (ಗುರುವಾರ) ಒಂದು ದಿನ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇನೆ. ಇನ್ನೆರಡು ದಿನಗಳು ಬೆಂಗಳೂರು ನಗರ, ಬಿಜಾಪುರ ಹಾಗೂ ಬಾಗಲಕೋಟೆಯಲ್ಲಿ ಪ್ರಚಾರ ಮಾಡುವುದಾಗಿ ಹೇಳಿದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

ಸಿದ್ದರಾಮಯ್ಯ ಈಗಾಗಲೇ ರಾಜ್ಯದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಲು ಬಂದಿದ್ದೇನೆ. ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಂದಿರೋದು ಸಂತಸವಾಗ್ತಿದೆ. ಜನರನ್ನ ನೋಡಿದ್ರೆ ಖುಷಿಯಾಗುತ್ತೆ. ಪಕ್ಷ ಇನ್ನೂ ಅನೇಕ ಕಡೆ ಪ್ರಚಾರ ಮಾಡಬೇಕಾದ ಜವಬ್ದಾರಿಯನ್ನು ನನಗೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಶಿವಮೊಗ್ಗ, ಬಿಜಾಪುರ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

 

]]>
1063116 0 0 0
<![CDATA[ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ]]> https://publictv.in/security-given-supreme-court-closes-women-wrestlers-sex-harassment-plea/ Thu, 04 May 2023 11:05:08 +0000 https://publictv.in/?p=1063117 ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (Wrestling Federation)  ಮುಖ್ಯಸ್ಥನ ಮೇಲೆ ಲೈಂಗಿಕ ಕಿರುಕುಳ (Sexual Harassment) ಆರೋಪ ಮಾಡಿದ್ದ ಮಹಿಳಾ ಕುಸ್ತಿಪಟುಗಳ(Wrestlers)ಮನವಿಯ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಇತ್ಯರ್ಥ ಮಾಡಿದೆ.

ಆರೋಪಿ ವಿರುದ್ಧ ಎಫ್‍ಐಆರ್ (FIR) ದಾಖಲಿಸಬೇಕು ಮತ್ತು ದೂರುದಾರರಿಗೆ ಭದ್ರತೆಗಾಗಿ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿದ್ದೀರಿ. ನಿಮ್ಮ ಎರಡೂ ಮನವಿಯನ್ನು ಈಡೇರಿಸಲಾಗಿದೆ. ಯಾವುದೇ ಹೆಚ್ಚಿನ ಕುಂದುಕೊರತೆಗಳಿದ್ದರೆ ನೀವು ಹೈಕೋರ್ಟ್ ಅಥವಾ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸಬಹುದು ಎಂದು ಕುಸ್ತಿಪಟುಗಳ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Chief Justice DY Chandrachud), ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪರ್ದಿವಾಲಾ ಅವರ ಪೀಠವು ಆದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ. ಇದನ್ನೂ ಓದಿ: ಮೋದಿ ಸಾಕ್ಷ್ಯಾಚಿತ್ರ ಪ್ರಕರಣ – ಬಿಬಿಸಿಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್

ಈಗ ನಡೆಯುತ್ತಿರುವ ತನಿಖೆಯನ್ನು ನಿವೃತ್ತ ಅಥವಾ ಸೇವೆಯಲ್ಲಿರುವ ಹೈಕೋರ್ಟ್ ನ್ಯಾಯಾಧೀಶರಿಂದ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿದ ಮನವಿಯನ್ನು ನಿರಾಕರಿಸಿದ ಕೋರ್ಟ್ ನಿಮ್ಮ ಎಲ್ಲಾ ಮನವಿಗಳನ್ನು ಈಡೇರಿಸಲಾಗಿದೆ ಎಂದು ಹೇಳಿ ಅರ್ಜಿಯನ್ನು ವಿಲೇವಾರಿಗೊಳಿಸಿತು.

ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಿದ ಮೇಲ್ವಿಚಾರಣಾ ಸಮಿತಿಯ ವರದಿಗಳನ್ನು ಸರ್ಕಾರವು ಪ್ರಕಟಿಸಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.

ಏಳು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್‍ಐಆರ್‌ಗಳನ್ನು ದಾಖಲಿಸಿದ್ದಾರೆ. ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

]]>
1063117 0 0 0
<![CDATA[ರಶ್ಮಿಕಾ ಜೊತೆ ಡೇಟ್‌ ಮಾಡ್ತಿದ್ದಾರಾ? ಬೆಲ್ಲಮಕೊಂಡ ಶ್ರೀನಿವಾಸ್ ಸ್ಪಷ್ಟನೆ]]> https://publictv.in/actor-bellamkonda-sreenivas-reacts-to-rumours-dating-rashmika-mandanna-heres-what-he-said/ Thu, 04 May 2023 11:21:17 +0000 https://publictv.in/?p=1063123 ಸೌತ್ ಸಿನಿರಂಗದಲ್ಲಿ ಸದ್ಯ ಸೌಂಡ್ ಮಾಡ್ತಿರುವ ವಿಚಾರ ಅಂದರೆ ಬೆಲ್ಲಮಕೊಂಡ ಶ್ರೀನಿವಾಸ್- ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ ಸುದ್ದಿ. ನಮ್ಮ ನಡುವೆ ಏನಿಲ್ಲ ಎಂದು ಹೇಳಿದರೂ ವಿಜಯ್ ದೇವಕೊಂಡ ಅವರನ್ನ ಬಿಟ್ಟು ಬೆಲ್ಲಮಕೊಂಡ (Bellamkonda Srinivas) ಜೊತೆ ರಶ್ಮಿಕಾ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರು ಸುದ್ದಿಯಾಗುತ್ತೆ. ಒಂದಲ್ಲಾ ಒಂದು ವಿಚಾರವಾಗಿ ಕಿರಿಕ್ ಸುಂದರಿ ಸುದ್ದಿಯಲ್ಲಿರುತ್ತಾರೆ. ಇದೀಗ ಬೆಲ್ಲಮಕೊಂಡ ಜೊತೆ ಮುಂಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಬಳಿಕ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಲವ್ವಿ-ಡವ್ವಿ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

ಬೆಲ್ಲಮಕೊಂಡ ಶ್ರೀನಿವಾಸ್ ಅವರು 'ಛತ್ರಪತಿ' (Chatrapati) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೇ 12ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಪ್ರಚಾರದ ಸಮಯದಲ್ಲಿ ರಶ್ಮಿಕಾ ಜೊತೆಗಿನ ಡೇಟಿಂಗ್ ಬಗ್ಗೆ ಕೇಳಲಾಗಿದೆ.

ಇದೆಲ್ಲಾ ಹೇಗೆ ಹುಟ್ಟಿತು ಅಂತ ಗೊತ್ತಿಲ್ಲ. ಮುಂಬೈ ಏರಪೋರ್ಟ್‌ನಲ್ಲೊ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ ಎಂದ ಮಾತ್ರಕ್ಕೆ ಡೇಟ್ ಮಾಡ್ತಿದ್ದೇವೆ ಎಂದರ್ಥವಲ್ಲ. ನಾವಿಬ್ಬರೂ ಹೈದರಾಬಾದ್‌ನವರು, ಮುಂಬೈನಲ್ಲಿ ಸಿಕ್ಕಾಗ ಭೇಟಿಯಾದ್ವಿ ಎಂದು ಡೇಟಿಂಗ್ ಸುದ್ದಿಗೆ ನೋ ಎಂದು ಸ್ಪಷ್ಟನೆ ನೀಡಿದ್ದಾರೆ.

]]>
1063123 0 0 0
<![CDATA[ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ - ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು]]> https://publictv.in/police-constable-suspended-for-the-harassment-of-school-girl-while-going-in-bycycle-in-uttar-pradesh/ Thu, 04 May 2023 11:25:51 +0000 https://publictv.in/?p=1063129 ಲಕ್ನೋ: ಉತ್ತರ ಪ್ರದೇಶ (Uttar Pradesh) ಪೊಲೀಸ್ ಪೇದೆಯೊಬ್ಬ (Police Constable) ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕಿರುಕುಳ (Harassment) ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪೊಲೀಸ್ ಪೇದೆಯನ್ನು ಶಹದತ್ ಅಲಿ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ದಾರಿಯಲ್ಲಿ ಮಹಿಳೆಯೊಬ್ಬರು ಹೋಗುತ್ತಿದ್ದು, ಕಿರುಕುಳ ನೀಡುವುದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ತನ್ನ ಸೈಕಲ್‌ನಲ್ಲಿ ಹೋಗುತ್ತಿರುವುದು ಮತ್ತು ಪೊಲೀಸ್ ಪೇದೆ ತನ್ನ ಸ್ಕೂಟರ್‌ನಲ್ಲಿ ಆಕೆಯನ್ನು ಹಿಂಬಾಲಿಸುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ನ ಏಕೈಕ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

CRIME

ಆತನ ಚಲನವಲನಗಳನ್ನು ಗಮನಿಸಿದ ಮಹಿಳೆ ಮತ್ತು ಇನ್ನೋರ್ವ ವ್ಯಕ್ತಿ ಕೋಪಗೊಂಡು ಪೊಲೀಸ್ ಪೇದೆಯನ್ನು ತಡೆದು ಬಾಲಕಿಯನ್ನು ಏಕೆ ಹಿಂಬಾಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೀವು ಯಾರು? ನಿಮಗೆ ಆಕೆ ಗೊತ್ತಾ ಎಂದು ಕೇಳಿದ್ದಾರೆ. ಈ ವೇಳೆ ಪೊಲೀಸ್ ಪೇದೆಯು ಈಕೆ ತನ್ನ ಮಗುವಿನ ಸಹಪಾಠಿ ಎಂದು ಹೇಳಿಕೊಂಡಿದ್ದಾನೆ. ಆಗ ಮಹಿಳೆ ಮಗುವಿನ ಶಾಲೆಯ ಹೆಸರನ್ನು ಹೇಳುವಂತೆ ಸೂಚಿಸಿದ್ದಾಳೆ. ಈ ವೇಳೆ ಪೊಲೀಸ್ ಪೇದೆ ತಪ್ಪಾದ ಹೆಸರನ್ನು ಹೇಳಿ ಆಕೆಯ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

ಪೇದೆಯ ಸ್ಕೂಟರ್‌ನಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಗಮನಿಸಿದ ಮಹಿಳೆ, ನಂಬರ್ ಪ್ಲೇಟ್ ಏಕಿಲ್ಲ ಎಂದು ಪ್ರಶ್ನಿಸಿ ಆತ ಧರಿಸಿದ್ದ ಹೆಲ್ಮೆಟ್ ತೆಗೆಯುವಂತೆ ಸೂಚಿಸಿದ್ದಾಳೆ. ಅದಕ್ಕೆ ಪೊಲೀಸ್ ಪೇದೆ ಇದು ವಿದ್ಯುತ್ ಚಾಲಿತ ವಾಹನವಾಗಿದ್ದು ಇದಕ್ಕೆ ನಂಬರ್ ಪ್ಲೇಟ್ ಇರುವುದಿಲ್ಲ ಎಂದು ಹೇಳಿದ್ದಾನೆ. ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಪೇದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತ ಲಕ್ನೋ (Lucknow) ಪೊಲೀಸರು ಆತನನ್ನು ಅಮಾನತು (Suspend) ಮಾಡಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ – ಹಲ್ಲೆ ಆರೋಪ

]]>
1063129 0 0 0
<![CDATA[ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು, ಸೀರೆ ಗಿಫ್ಟ್..!]]> https://publictv.in/congress-election-campaign-at-koppal-shivaraj-tangadagi-family-gifts-saree-to-priyanka-gandhi/ Thu, 04 May 2023 11:20:30 +0000 https://publictv.in/?p=1063139 ಕೊಪ್ಪಳ: ಇಲ್ಲಿನ ಕನಕಗಿರಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ (Congress) ಸಮಾವೇಶಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ (Shivaraj Tangadagi) ಪರ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿಗೆ, ಶಿವರಾಜ ತಂಗಡಗಿ ಕುಟುಂಬದಿಂದ ಮಲ್ಲಿಗೆ ಹೂವು, ಸೀರೆ ನೀಡಿ ಸ್ವಾಗತಿಸಿದರು.

ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇದು ಸತ್ಯದ ಕ್ಷೇತ್ರ, ಇಲ್ಲಿನ ಜನ ಸತ್ಯವನ್ನೇ ನುಡಿಯುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟ ಕೂಡಾ ಸತ್ಯದ ಹಾದಿಯಲ್ಲೇ ನಡೆದಿತ್ತು. ಮಹಾತ್ಮಾ ಗಾಂಧಿ, ನೆಹರೂ ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದರು. ನಾವೂ ಅವರ ಆದರ್ಶದ ಹಾದಿಯಲ್ಲೇ ನಡೆಯುತ್ತಿದ್ದೇವೆ. ಕರ್ನಾಟಕ ಇಡೀ ದೇಶದಲ್ಲೇ ಪ್ರಸಿದ್ಧವಾದ ದೇಶ. ಒಂದು ಸಮಯದಲ್ಲಿ ಈ ರಾಜ್ಯ, ಐಟಿ (IT), ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದಲ್ಲೂ ಮುಂದಿತ್ತು. ಕಳೆದ ಬಾರಿ ನೀವು ಮತಹಾಕಿ ಒಂದು ಸರ್ಕಾವರನ್ನ ತಂದ್ರಿ. ಆದ್ರೆ ಬಿಜೆಪಿ ತನ್ನ ಹಂಬಲದಿಂದ ಸರ್ಕಾರವನ್ನ ಬಿಳಿಸಿದ್ರು. ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ (BJP Government) ರಚನೆ ಮಾಡಿದ್ರು ಎಂದು ಕಿಡಿ ಕಾರಿದರು.

ಇಂದಿರಾ ಗಾಂಧಿಯನ್ನ ಇವತ್ತಿಗೂ ನೀವ್ಯಾಕೆ ನೆನೆಸುತ್ತಿರಿ ಅಂದ್ರೆ ಅವರು ಬಡವರಿಗೆ ನೀಡಿದ `ಉಳುವವನೇ ಭೂಮಿ ಒಡೆಯ' ಅನ್ನೋ ಮಹಾನ್ ಯೋಜನೆ ಜಾರಿಗೆ ತಂದಿದ್ದರಿಂದ. ಆದ್ರೆ ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಸಿದ್ಧಿ ಪಡೆದಿದೆ. ಇಡೀ ದೇಶದಲ್ಲೇ ಬಿಜೆಪಿ ಸರ್ಕಾರ ಕೆಟ್ಟ ಹೆಸರು ಪಡೆದುಕೊಂಡಿದೆ. ಆದರೂ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌

ಇವತ್ತು ದಿನಬಳಕೆ ವಸ್ತುಗಳು ಗಗನಕ್ಕೇರಿವೆ. ದಿನ ಬೆಳಗಾದ್ರೆ ಊಟ ಮಾಡೋಕೂ ಯೋಚನೆ ಮಾಡಬೇಕಾಗಿದೆ. ಬೆಲೆ ಏರಿಕೆ ಸಾಮಾನ್ಯ ಜನರಿಗೆ ಸಂಕಷ್ಟ ತಂದಿದೆ. ಆದ್ರೆ ನಿಮ್ಮನಾಳೋ ಸರ್ಕಾರದ ಸಚಿವರು, ಶಾಸಕರು ಬಿಂದಾಸ್ ಆಗಿದ್ದಾರೆ. ಈ ಸರ್ಕಾರ ನಿಮ್ಮ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಆ ಹಣದಿಂದ 100 ಏಮ್ಸ್ ಆಸ್ಪತ್ರೆಗಳನ್ನ ಕಟ್ಟಿಸಬಹುದಿತ್ತು. 30 ಲಕ್ಷ ಬಡ ಜನರಿಗೆ ಮನೆ ನಿರ್ಮಿಸಬಹುದಿತ್ತು ತಿಳಿಸಿದರು. ಇದನ್ನೂ ಓದಿ: ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ – ಹುಬ್ಬೇರಿಸಿ ನೋಡುವಂತೆ ಪ್ರಣಾಳಿಕೆ ಘೋಷಿಸಿದ ಅಭ್ಯರ್ಥಿಗಳು

ಮಹಾಭಾರತದಲ್ಲಿ ಅರ್ಜನನ ಗುರಿ ಹೇಗಿತ್ತೋ ನಿಮ್ಮ ಗುರಿ ಕೂಡಾ ಇರಬೇಕು. ಅವರಿವರು ಏನ್ ಹೇಳ್ತಾರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಗುರಿ ನಿಮ್ಮ ಭವಿಷ್ಯದ ಕಡೆ ಇರಬೇಕು. ನಿಮ್ಮ ಗುರಿ ನಿಮ್ಮ ಮಕ್ಕಳ ಭವ್ಯ ಭವಿಷ್ಯದ ಕಡೆ ಇರಬೇಕು. ನಿಮ್ಮ ಭವಿಷ್ಯ ಯಾರು ರೂಪಿಸುತ್ತಾರೋ ಅವರಿಗೆ ಮತ ನೀಡಿ. ಬಿಜೆಪಿ ಸರ್ಕಾರ ನಿಮಗೆ ಏನ್ ಮಾಡಿದೆ, ಕಾಂಗ್ರೆಸ್ ಏನ್ ಹೇಳಿದೆ ಇದನ್ನ ನೆನಪಿಸಿಕೊಳ್ಳಿ. ಕಾಂಗ್ರೆಸ್ ಪಕ್ಷವನ್ನು ಪೂರ್ಣಬಹುದೊಂದಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.

]]>
1063139 0 0 0
<![CDATA[60ಕ್ಕೂ ಹೆಚ್ಚು ಪ್ರಕರಣ- ಯುಪಿಯಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ ಎನ್‍ಕೌಂಟರ್]]> https://publictv.in/up-gangster-anil-dujana-wanted-in-murder-case-killed-in-encounter-in-meerut/ Thu, 04 May 2023 11:51:58 +0000 https://publictv.in/?p=1063161 ಲಕ್ನೋ: 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌ನನ್ನು ಉತ್ತರಪ್ರದೇಶದ (Uttar Pradesh) ವಿಶೇಷ ಪೊಲೀಸ್ ಪಡೆ (STF) ಎನ್‍ಕೌಂಟರ್‌ನಲ್ಲಿ (Encounter) ಹೊಡೆದುರುಳಿಸಿದೆ.

ದೆಹಲಿಯ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಜನರನ್ನು ಭಯಭೀತರನ್ನಾಗಿಸಿ ದರೋಡೆಯಲ್ಲಿ ಕುಖ್ಯಾತಿ ಪಡೆದಿದ್ದ ಅನಿಲ್ ದುಜಾನಾ ಸಾವಿಗೀಡಾದ ವ್ಯಕ್ತಿ. ದುಜಾನಾ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ (Jail) ಬಿಡುಗಡೆಯಾಗಿದ್ದ. ನಂತರ ಅವನು ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಅಲ್ಲದೆ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ

ಈ ವಿಚಾರ ತಿಳಿದು ಎಸ್‍ಟಿಎಫ್ (STF) ತಂಡವು ಮೀರತ್‍ನಲ್ಲಿ (Meerut) ಅವನನ್ನು ಬಂಧಿಸಲು ತೆರಳಿತ್ತು. ಈ ವೇಳೆ ಪೊದೆಯಲ್ಲಿ ಅಡಗಿದ್ದ ದುಜಾನಾ ಮತ್ತು ಅವನ ಗ್ಯಾಂಗ್ ಪೊಲೀಸರ ಮೇಲೆ ಗುಂಡು ಹಾರಿಸಿದೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ದುಜಾನ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

]]>
1063161 0 0 0
<![CDATA[ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!]]> https://publictv.in/russian-strike-killed-in-ukraines-kherson/ Thu, 04 May 2023 11:41:18 +0000 https://publictv.in/?p=1063163 - ಪುಟಿನ್‌ ಪಡೆ ದಾಳಿಗೆ ಉಕ್ರೇನ್‌ನ 21 ಮಂದಿ ಬಲಿ

ಕೀವ್: ಉಕ್ರೇನ್‌ನ (Ukraine) ದಕ್ಷಿಣ ಖೆರ್ಸನ್‌ ಪ್ರದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್‌ (Kherson) ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.

ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್‌ವೇರ್ ಅಂಗಡಿ, ಸೂಪರ್‌ ಮಾರ್ಕೆಟ್‌ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ:  ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್‌ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್‌ ಶೆಲ್‌ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್‌ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್‌ಮಾರ್ಕೆಟ್‌ನಲ್ಲಿ ಶೆಲ್‌ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖೆರ್ಸನ್‌ನಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಜನರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ನಗರ ಪ್ರವೇಶಿಸುವುದು ಮತ್ತು ಹೊರ ಹೋಗುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಹಾರ ಮತ್ತು ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ

]]>
1063163 0 0 0
<![CDATA[ಮೃತಪಟ್ಟ ಮಗನ ಪತ್ನಿಯನ್ನೇ ಮದುವೆಯಾದ ವ್ಯಕ್ತಿ!]]> https://publictv.in/old-man-marries-daughter-in-law-after-sons-death/ Thu, 04 May 2023 13:02:40 +0000 https://publictv.in/?p=1063180 ವ್ಯಕ್ತಿಯೊಬ್ಬ ಮೃತಪಟ್ಟ ತನ್ನ ಮಗನ ಪತ್ನಿಯನ್ನೇ ಮದುವೆ (Son Wife Marriage) ಯಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ವಯಸ್ಸಾದ ವ್ಯಕ್ತಿಯು, ಮಗ ಮೃತಪಟ್ಟ ಬಳಿಕ ತಾನು ಸೊಸೆಯನ್ನು ಮದುವೆಯಾಗಿರುವುದಾಗಿ ಹೇಳಿರುವುದನ್ನು ನಾವು ಗಂನಿಸಬಹುದಾಗಿದೆ. ಇದನ್ನೂ ಓದಿಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

ಇತ್ತ ಮುದುಕನನ್ನು ಮದುವೆಯಾಗಲು ಒಪ್ಪಿದ್ದೀಯಾ ಎಂದು ಮಹಿಳೆಯನ್ನು ಕೇಳಿದಾಗ, ಆಕೆ ಸ್ವ- ಇಚ್ಛೆಯಿಂದಲೇ ಈ ಮದುವೆಗೆ ಒಪ್ಪಿರುವುದಾಗಿ ತಿಳಿಸಿದ್ದಾಳೆ.

ಅಲ್ಲದೆ ಯಾಕೆ ಮಾವನನ್ನು ವರಿಸಿದ್ದೀಯಾ ಎಂದು ಪ್ರಶ್ನಿಸಿದಾಗ, ಅವನನ್ನು ಹೊರತುಪಡಿಸಿ ಬೇರೆ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ ಎಂಬ ಯೋಚನೆ ಬಂತು. ಹೀಗಾಗಿ ಆತನನ್ನು ಮದುವೆಯಾಗಲು ಒಪ್ಪಿದೆ ಎಂದು ಹೇಳಿದ್ದಾಳೆ. ಆದರೆ ಈ ಮದುವೆ ಎಲ್ಲಿ ನಡೆದಿದ್ದು ಹಾಗೂ ಇದು ಸತ್ಯನಾ ಅಥವಾ ಸುಳ್ಳಾ ಎಂಬುದು ತಿಳಿದುಬಂದಿಲ್ಲ.

 

]]>
1063180 0 0 0
<![CDATA[ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್]]> https://publictv.in/yogi-should-tell-why-shri-ram-sena-was-banned-in-uttar-pradesh-dk-suresh/ Thu, 04 May 2023 13:07:48 +0000 https://publictv.in/?p=1063183 ರಾಮನಗರ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ (Sri Ram Sena) ಬ್ಯಾನ್ ಮಾಡಿದ್ದು ಯಾಕೆಂದು ಯೋಗಿ (Yogi Adityanath) ಹೇಳಬೇಕು ಎಂದು ಕಾಂಗ್ರೆಸ್ (Congress) ನಾಯಕ ಡಿ.ಕೆ ಸುರೇಶ್ (D.K. Suresh) ಕಿಡಿಕಾರಿದ್ದಾರೆ.

ಕನಕಪುರದಲ್ಲಿ (Kanakapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಯಾಕೆ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿಗರು ಹೇಳಬೇಕು. ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗದೆ ಧರ್ಮದ ಹೆಸರಿನಲ್ಲಿ ಅಡ್ಡ ಬರುತ್ತಿರುವುದು ಒಳ್ಳೆಯದಲ್ಲ. ನಾವು ಸಹ ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಾಗಿಲ್ಲ. ನಾವೂ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಆದರೆ ಚುನಾವಣಾ ಪ್ರಚಾರದಲ್ಲಿ ರಾಮ ಮತ್ತು ಹನುಮನ ತಂದು ಪೂಜೆ ಮಾಡುವುದಿಲ್ಲ. ವೋಟಿಗಾಗಿ ಪೂಜೆ ಮಾಡುವವರಿಗೆ ಜನ ಉತ್ತರಿಸಲಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

ಇನ್ನೂ ಕನಕಪುರದಲ್ಲಿ ಅಮಿತ್ ಶಾ ಪ್ರಚಾರದ ವಿಚಾರವಾಗಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಅಮಿತ್ ಶಾ ಬಂದರೂ ಸಂತೋಷ, ಮೋದಿ ಬಂದರೂ ಸಂತೋಷ. ಅವರಿಬ್ಬರೂ ಮೇಕೆದಾಟು ಯೋಜನೆಗೆ ಯಾವಾಗ ಅನುಮತಿ ಕೊಡುತ್ತೀರಾ? ಅದರ ಬಗ್ಗೆ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.

ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಎಲ್ ಸಂತೋಷ್ ಅವರಿಗೆ ನಾನೇ ಎಲ್ಲಾ ರೀತಿಯ ರಕ್ಷಣೆ ನೀಡುತ್ತೇನೆ. ಅವರೇ ಮನೆಮನೆಗೆ ಬಂದು ಮತ ಕೇಳಲಿ. ನಾನು ಒಂದು ಮಾತು ಹೇಳಿದ್ರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ. ಅದಕ್ಕಾಗಿ ಬಿಎಸ್‍ಎಫ್‍ನ ಅಗತ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

]]>
1063183 0 0 0
<![CDATA[ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ]]> https://publictv.in/karnataka-election-2023-devendra-fadnavis-lashes-out-congress/ Thu, 04 May 2023 12:33:16 +0000 https://publictv.in/?p=1063184 ಬೆಳಗಾವಿ: ಬಜರಂಗದಳ ನಿಷೇಧಕ್ಕೆ ಧೈರ್ಯ ಮಾಡುವವರಿಗೆ ಬಜರಂಗದಳದ ಶಕ್ತಿ ತೋರಿಸಲೇಬೇಕು ಎಂದು ಕಾಂಗ್ರೆಸ್‌ (Congress) ವಿರುದ್ಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis) ಹರಿಹಾಯ್ದರು.

ನಗರದ ಟಿಳಕಚೌಕನಲ್ಲಿ ಉತ್ತರ ಕ್ಷೇತ್ರದಲ್ಲಿ ನಡೆದ ಬಿಜೆಪಿ (BJP) ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪ ಮಾಡಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಹೇರುತ್ತೇವೆ ಎಂದು ಹೇಳಿದೆ. ಆದರೆ ಬಜರಂಗದಳ ನಿಷೇಧಿಸಲು ನಿಮ್ಮಪ್ಪನ ಬಳಿ ತಾಕತ್ ಇದೆಯಾ? ಯಾವನ ಅಪ್ಪನಿಗಾದರೂ ಧೈರ್ಯ ಇದೆಯಾ? ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ? ಬಜರಂಗದಳ ನಿಷೇಧ ಮಾಡ್ತೀವಿ ಅಂದ್ರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ನಿಯತ್ತು ಹೇಗಿದೆ ಗೊತ್ತಾ?. ರಾಮಸೇತು ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ರಾಮ ಕಾಲ್ಪನಿಕ ಎಂದು ಅಫಿಡೆವಿಟ್ ಸಲ್ಲಿಸಿದರು. ರಾಮನ ಅಸ್ತಿತ್ವ ಪ್ರಶ್ನಿಸುವ ಪಕ್ಷ ಒಂದೆಡೆ, ರಾಮಮಂದಿರ ಸ್ಥಾಪನೆ ಮಾಡುತ್ತಿರುವ ಪಕ್ಷ ಒಂದೆಡೆಯಾಗಿದೆ. ಬಜರಂಗಳ ಬ್ಯಾನ್ ಮಾಡಲು ತಾಕತ್ತಿದ್ದೇಯೇ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಜರಂಗದಳ ನಿಷೇಧ ಮಾಡಲು ಆಗಲ್ಲ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಬಜರಂಗಿ ನಮ್ಮ ಹಿಂದೂ ಸಂಸ್ಕೃತಿಯ ಅಸ್ಮಿತೆಯಾಗಿದೆ. ‌ರಾಮನ ಅಸ್ತಿತ್ವ ಬಗ್ಗೆ ಮಾತನಾಡುವವರಿಗೆ ಮತದಾನ ವೇಳೆ ತಕ್ಕಪಾಠ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

ಸಭೆಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ, ಶಂಕರಗೌಡ ಪಾಟೀಲ,‌ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್‌ ಭಾಗಿಯಾಗಿದ್ದರು. ಇದನ್ನೂ ಓದಿ: ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

]]>
1063184 0 0 0
<![CDATA['ಲಕ್' ಚಿತ್ರದಲ್ಲಿ ನಟಿಸುತ್ತಿಲ್ಲ: ಡಾಲಿ ಧನಂಜಯ್]]> https://publictv.in/not-acting-in-luck-dolly-dhananjay/ Thu, 04 May 2023 12:35:04 +0000 https://publictv.in/?p=1063185 ಕ್ಯಾರಾವಾನ್ ಸ್ಟಾರ್ ಮಂಜು (Caravan star Manju) ಅಭಿನಯದ ‘ಲಕ್’ (Luck) ಚಿತ್ರದಲ್ಲಿ ಡಾಲಿ ಧನಂಜಯ್ (Dhananjay) ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ತಮ್ಮ  ಚಿತ್ರದಲ್ಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ವತಃ ಚಿತ್ರ ತಂಡದವರೇ ಘೋಷಿಸಿದ್ದರು. ಆದರೆ, ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಧನಂಜಯ್, ‘ಲಕ್’ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್ ಮಂಜು ನನಗೆ ಬಹಳ ಒಳ್ಳೆಯ ಸ್ನೇಹಿತರು. ಅವರ ಪ್ರಯತ್ನಗಳಿಗೆ ನನ್ನ ಬೆಂಬಲ ಇರುತ್ತದೆ. ಅದರಂತೆ, ‘ಲಕ್’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟದ್ದೇನೆ. ಆದರೆ, ಕಾರಣಾಂತರಗಳಿಂದ ನನಗೆ ಅವರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಚಿತ್ರತಂಡದವರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಹಾಗಾಗಿ, ಲಕ್ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

‘ಲಕ್’ ಚಿತ್ರವನ್ನು ಹರೀಶ್ (Harish) ನಿರ್ದೇಶನ ಮಾಡುತ್ತಿದ್ದು, ವಿಜಯ್ ಹರಿತ್ಸ ಸಂಗೀತ ಸಂಯೋಜಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಅಂದು ಧನಂಜಯ್ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದೀಗ ಆ ಚಿತ್ರದಲ್ಲಿ ನಟಿಸುತ್ತಿಲ್ಲವೆಂದು ಹೇಳಿಕೆ ನೀಡಿದ್ದಾರೆ.

]]>
1063185 0 0 0
<![CDATA[ಚಾಮರಾಜನಗರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರದಲ್ಲಿ 'ಕೈ'-ಕಮಲ ಫೈಟ್‌; ಯಾರಿಗೆ ಮತದಾರನ ಸಪೋರ್ಟ್‌?]]> https://publictv.in/n-mahesh-and-a-r-krishnamurthy-fight-in-kollegala-karnataka-election-2023/ Thu, 04 May 2023 12:53:04 +0000 https://publictv.in/?p=1063190 ಚಾಮರಾಜನಗರ: ಚಾಮರಾಜನಗರ (Chamarajanagara) ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕೊಳ್ಳೇಗಾಲ (Kollegala). ಗಡಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವೂ ಹೌದು. ಇದೀಗ‌ ಕೊಳ್ಳೇಗಾಲದಲ್ಲಿ ಚುನಾವಣೆ ಕಾವು‌ ರಂಗೇರಿದೆ. ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರಾ ಹಣಾಹಣಿಯಿದೆ. ಬಿಎಸ್‌ಪಿಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿರುವ ಎನ್.ಮಹೇಶ್ ವಿರುದ್ಧ ವಿರೋಧಿ ಬಣಗಳು ಒಂದಾಗಿದ್ದು, ಸೋಲಿಸುವ ಹಠ ತೊಟ್ಟಿದ್ದಾರೆ. ಆದರೆ ವಿರೋಧಿಗಳಿಗೆ ಸೆಡ್ಡು ಹೊಡೆಯುವ ಮೂಲಕ ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ತಮ್ಮದೇ ತಂತ್ರಗಾರಿಕೆ ರೂಪಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು, ಸೀರೆ ಗಿಫ್ಟ್..!

ಕಣದಲ್ಲಿರುವ ಅಭ್ಯರ್ಥಿಗಳು ಬಿಜೆಪಿ - ಎನ್‌.ಮಹೇಶ್ ಕಾಂಗ್ರೆಸ್ - ಎ.ಆರ್‌.ಕೃಷ್ಣಮೂರ್ತಿ ಜೆಡಿಎಸ್ - ಬಿ.ಪುಟ್ಟಸ್ವಾಮಿ

ಈವರೆಗೆ ಗೆದ್ದ ಶಾಸಕರ ವಿವರ 1957- ದ್ವಿಸದಸ್ಯ ಟಿ.ಪಿ.ಬೋರಯ್ಯ, ಕೆಂಪಮ್ಮ (ಎರಡು ಕಾಂಗ್ರೆಸ್) 1962- ಬಿ.ಬಸವಯ್ಯ (ಕಾಂಗ್ರೆಸ್) 1967- ಬಿ.ಬಸವಯ್ಯ (ಕಾಂಗ್ರೆಸ್) 1972- ಎಂ.ಸಿದ್ದಮಾದಯ್ಯ (ಕಾಂಗ್ರೆಸ್) 1978- ಎಂ.ಸಿದ್ದಮಾದಯ್ಯ (ಕಾಂಗ್ರೆಸ್) 1983- ಬಿ.ಬಸವಯ್ಯ (ಜನತಾ ಪಕ್ಷ) 1985- ಬಿ.ಬಸವಯ್ಯ (ಜನತಾ ಪಕ್ಷ) 1989- ಎಂ.ಸಿದ್ದಮಾದಯ್ಯ (ಕಾಂಗ್ರೆಸ್) 1994- ಎಸ್.ಜಯಣ್ಣ (ಜನತಾ ದಳ) 1999- ಜಿ.ಎನ್.ನಂಜುಂಡಸ್ವಾಮಿ (ಕಾಂಗ್ರೆಸ್) 2004- ಎಸ್.ಬಾಲರಾಜ್ (ಪಕ್ಷೇತರ) 2008- ಆರ್.ಧ್ರುವನಾರಾಯಣ್ (ಕಾಂಗ್ರೆಸ್) 2009- ಜಿ.ಎನ್.ನಂಜುಂಡಸ್ವಾಮಿ (ಬಿಜೆಪಿ- ಉಪ ಚುನಾವಣೆ) 2013- ಎಸ್.ಜಯಣ್ಣ (ಕಾಂಗ್ರೆಸ್) 2018- ಎನ್.ಮಹೇಶ್ (ಬಿಎಸ್‌ಪಿ)

2018 ರ ಚುನಾವಣಾ ಫಲಿತಾಂಶ ಏನಿತ್ತು? ಎನ್.ಮಹೇಶ್- ಆಗ ಬಿಎಸ್‌ಪಿ, ಈಗ ಬಿಜೆಪಿ - 71,792 ಎ.ಆರ್.ಕೃಷ್ಣಮೂರ್ತಿ- ಕಾಂಗ್ರೆಸ್- 52,338 ಜಿ.ಎನ್.ನಂಜುಂಡಸ್ವಾಮಿ- bjp - 39,690 ಎನ್.ಮಹೇಶ್ ಅವರು 19 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

ಜಾತಿವಾರು ಲೆಕ್ಕಾಚಾರ ಏನು? ಕೊಳ್ಳೇಗಾಲ ಕ್ಷೇತ್ರದಲ್ಲಿ 2,16,602 ಒಟ್ಟು ಜನಸಂಖ್ಯೆ ಇದೆ. ಅವರ ಪೈಕಿ ಪುರುಷರು- 1,06,979 ಹಾಗೂ ಮಹಿಳೆಯರು - 1,09,604 ಇದ್ದಾರೆ. ದಲಿತರು- 65,000 ಲಿಂಗಾಯತರು- 38,000 ವಾಲ್ಮೀಕಿ ನಾಯಕರು- 31,000 ಉಪ್ಪಾರ-32,000 ಕುರುಬ- 9,000 ದೇವಾಂಗ- 8,000 ಅಲ್ಪಸಂಖ್ಯಾತ- 11,000

ಬಿಜೆಪಿ ಪ್ಲಸ್‌: ಬಿಜೆಪಿ ಮತ ಬ್ಯಾಂಕ್ ಭದ್ರವಾಗಿರುವ ನಂಬಿಕೆ. ಗೆದ್ದು ಸರ್ಕಾರ ಬಂದರೆ ಸಚಿವನಾಗುವ ಅವಕಾಶ. ಕಳೆದ ಬಾರಿ ಬಿಜೆಪಿ ಸರ್ಕಾರ ಬರಲು ಮಹೇಶ್ ಕೊಡುಗೆಯೂ ಕಾರಣವೆಂಬ ನಂಬಿಕೆ. ಬಿಜೆಪಿ ಮೈನಸ್: ಯುವ ಸಮುದಾಯಕ್ಕೆ ಬಿಎಸ್‌ಪಿಯಿಂದ ಬಿಜೆಪಿಗೆ ಹೋಗಿರುವ ಅಸಮಾಧಾನ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದು ಸ್ಪರ್ಧೆ ಮಾಡಿರುವ ಕಿನಕಹಳ್ಳಿ ರಾಚಯ್ಯ. ಎನ್.ಮಹೇಶ್ ಸೋಲಿಸಲು ಒಗ್ಗೂಡಿರುವ ವಿರೋಧಿ ಬಣ. ಬಿಎಸ್‌ಪಿಯಿಂದಲೂ‌ ಕಾಂಗ್ರೆಸ್‌ಗೆ ಬೆಂಬಲ.

ಕಾಂಗ್ರೆಸ್ ಪ್ಲಸ್: ಸತತ ಸೋಲಿನಿಂದ ಕಂಗೆಟ್ಟ ಎ.ಆರ್‌.ಕೃಷ್ಣಮೂರ್ತಿಗೆ ಒಂದು ಅವಕಾಶ ಕೊಡಬೇಕೆಂಬ ಚರ್ಚೆ. ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ವಾಪಸ್ ತೆಗೆದುಕೊಂಡು 'ಕೈ'ಗೆ ಬೆಂಬಲ ಕೊಟ್ಟಿರುವುದು. ಎನ್.ಮಹೇಶ್ ವಿರೋಧಿ ಬಣದಿಂದ ಕೃಷ್ಣಮೂರ್ತಿ ಪರ ಕೆಲಸ. ಮೈನಸ್: ಹೊಸ ಮತದಾರರನ್ನು ತಲುಪದಿರುವುದು. 'ಕೈ' ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಬಾಲರಾಜು ಬಿಜೆಪಿಗೆ ಹೋಗಿರುವುದು. ಲಿಂಗಾಯತ ಸಮುದಾಯ ಸ್ವಲ್ಪ ಅಸಮಾಧಾನವಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌

ಬಿಎಸ್‌ಪಿ ಹೋರಾಟದ ಮೂಲಕ ಹೆಸರುವಾಸಿಯಾಗಿದ್ದ ಎನ್.ಮಹೇಶ್ ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಕಮಲ ಮುಡಿದಿರುವುದಿಂದ ಬಿಎಸ್‌ಪಿ, ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಜೊತೆಗೆ ಎನ್.ಮಹೇಶ್ ಸೋಲಿಸುವ ಅಜೆಂಡಾ ಇಟ್ಟುಕೊಂಡು ವಿರೋಧಿ ಬಣಗಳು ಒಗ್ಗಟ್ಟಿನ ಮಂತ್ರ ಜಪಿಸಿ‌ ಕೆಲಸ ಮಾಡುತ್ತಿವೆ. ಆದರೆ ಎನ್.ಮಹೇಶ್ ಅವರು, ನನಗೆ ಬಿಜೆಪಿ, ಯಡಿಯೂರಪ್ಪ ಶ್ರೀರಕ್ಷೆಯಿದೆ ಎಂದು ಅಖಾಡ ಫೇಸ್ ಮಾಡ್ತಿದ್ದಾರೆ.

]]>
1063190 0 0 0
<![CDATA[ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ: ಸೋಮಣ್ಣ]]> https://publictv.in/karnataka-election-2023-v-somanna-said-siddaramaiah-has-desperate/ Thu, 04 May 2023 13:13:34 +0000 https://publictv.in/?p=1063194 ಮೈಸೂರು: ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಸಚಿವ ವಿ. ಸೋಮಣ್ಣ (V Somanna) ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಪರ ಸ್ಟಾರ್‌ಗಳ ಪ್ರಚಾರ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಬರ್ತಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ರಾಜಕುಮಾರ್ ಕುಟುಂಬಕ್ಕೂ ನನಗೂ 40 ವರ್ಷದ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ ಎಂದರು.

ಶಿವರಾಜ್ ಯಾಕೆ ಹೀಂಗೆ ಮಾಡಿದರು ನನಗೆ ಗೊತ್ತಿಲ್ಲ. ನನಗೆ ವಿಜಿ, ರಮ್ಯಾ (Ramya) ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕ್ಕೆ ಜೊತೆ ಬಂದು ಸೋಮಣ್ಣ ವಿರುದ್ಧ ಪ್ರಚಾರ ಮಾಡ್ತಿದ್ದಾರಲ್ಲ ನನಗೆ ಅದೇ ಖುಷಿ. ಜನ ಸೇರಿಸಲು ಸಿದ್ದರಾಮಯ್ಯ ಸ್ಟಾರ್‌ಗಳ ಜೊತೆ ಬರುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

ತಮ್ಮಿಂದ ಮಾತ್ರ ವರುಣಾ (Varuna) ಕ್ಷೇತ್ರದ ಅಭಿವೃದ್ಧಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತದೆ ಎಂಬ ರೀತಿ ಸಿದ್ದರಾಮಯ್ಯ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಐದು ವರ್ಷದಲ್ಲಿ ವರುಣ ಕ್ಷೇತ್ರಕ್ಕೆ ಚಿನ್ನದ ತಗಡನ್ನೆ ಹೊಡೆಸಬಹುದಿತ್ತು. ವರುಣದಲ್ಲಿ ಒಂದು ಕಾಲೇಜ್ ಇಲ್ಲ, ಆಸ್ಪತ್ರೆ ಇಲ್ಲ, ರಸ್ತೆಗಳು ಸರಿ ಇಲ್ಲ. ಇದು ವರುಣ ಸ್ಥಿತಿಯಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

ಬದಾಮಿಯಲ್ಲೂ ಸಿದ್ದರಾಮಯ್ಯ ಯಾವ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕು. ನಾನು ಆ ಕೆಲಸವನ್ನು ಮಾಡಿದ್ದೇನೆ. ನಾನು ನಾನು ಎಂಬುದನ್ನು ಸಿದ್ದರಾಮಯ್ಯ ಅವರು ಮೊದಲು ಬಿಡಲಿ. ವರುಣಾ ಜನ ನನ್ನ ಗೆಲ್ಲಿಸಿದರೆ ನಾನು ವರುಣಾದಲ್ಲೇ ಇರುತ್ತೇನೆ. ವರುಣದಲ್ಲೇ ಮನೆನೂ ಮಾಡುತ್ತೇನೆ. ಶಾಶ್ವತವಾಗಿ ಇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

]]>
1063194 0 0 0
<![CDATA['ಫೈಟರ್' ಚಿತ್ರದಲ್ಲಿ ನಟಿಸಲು ಹೃತಿಕ್- ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?]]> https://publictv.in/bollywood-star-hrithik-roshan-reportedly-getting-rs-85-cr-remuneration-for-fighter-movie/ Thu, 04 May 2023 13:15:40 +0000 https://publictv.in/?p=1063199 'ಪಠಾಣ್' (Pathaan) ಸೂಪರ್ ಸಕ್ಸಸ್ ನಂತರ ದೀಪಿಕಾ ಪಡುಕೋಣೆ 'ಫೈಟರ್' (Fighter) ಸಿನಿಮಾದಲ್ಲಿ ಹೃತಿಕ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮಿರುತ್ತಿದೆ ಎಂದು ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ 'ಪಠಾಣ್'ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಕಲಾವಿದರ ದುಬಾರಿ ಸಂಭಾವನೆ ವಿಷ್ಯವಾಗಿ ಫೈಟರ್ ಸುದ್ದಿಯಲ್ಲಿದೆ. ಇದನ್ನೂ ಓದಿ:ಬಜರಂಗದಳ ನಿಷೇಧ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ

ಹೃತಿಕ್ ರೋಷನ್ (Hrithik Roshan) ನಟನೆಯ 'ಫೈಟರ್' ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ' ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಈ ಚಿತ್ರದ ಬಜೆಜ್ ಕೈ ಮೀರಿ ಹೋಗಿದೆ ಎಂದಿದ್ದಾರೆ. ಈ ಸಂಭಾವನೆ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.

ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಕೋಟಿ ಕೋಟಿ ಲೂಟಿ ಮಾಡಿರೋದ್ರಿಂದ ಸಹಜವಾಗಿ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕಲಾವಿದರ ಸಂಭಾವನೆ ಮೀರಿ ಕಲೆಕ್ಷನ್ ಮಾಡುವ 'ಫೈಟರ್' ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.

]]>
1063199 0 0 0
<![CDATA[ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಘೋಷಣೆ : 40 ಲಕ್ಷ ಹಿಂದೂಗಳ ಮತಾಂತರ ಕಥೆ ವ್ಯಥೆ]]> https://publictv.in/movie-announcement-on-tipu-sultan-tragic-story-of-conversion-of-40-lakh-hindus/ Thu, 04 May 2023 13:14:47 +0000 https://publictv.in/?p=1063202 ರ್ನಾಟಕದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಕುರಿತಾಗಿ ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಪರ ಸಂಘಟನೆಗಳು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಅದ್ಭುತ ಆಡಳಿತಗಾರ ಎಂದು ಬಣ್ಣಿಸುತ್ತಿದ್ದರೆ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಟಿಪ್ಪುವನ್ನು ಮತಾಂಧ ಎಂದು ಬಿಂಬಿಸುತ್ತಿವೆ. ಈ ವಾದ ವಿವಾದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಸಮಯದಲ್ಲಿ ಟಿಪ್ಪು ಕುರಿತಾಗಿ ಸಿನಿಮಾವೊಂದು (Cinema) ಮೂಡಿ ಬರುತ್ತಿದೆ.

ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರಕ್ಕೆ ‘ಟಿಪ್ಪು’ ಎಂದೇ ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಮೋಷನ್ ಪೋಸ್ಟರ್ ವಿಡಿಯೋದಲ್ಲಿ ಹಲವಾರು ವಿಷಯಗಳನ್ನು ಹೇಳಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ‘8 ಸಾವಿರ ದೇವಾಲಯಗಳ ನಾಶ, 27 ಚರ್ಚ್‍ ಗಳ ಧ್ವಂಸ, 50 ಲಕ್ಷ ಹಿಂದೂಗಳ ಮತಾಂತರ, ಅಲ್ಲದೇ ಗೋಮಾಂಸ ತಿನ್ನುವಂತೆ ಒತ್ತಾಯ ಸೇರಿದಂತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಟಿಪ್ಪು ಕಾಲದಲ್ಲೇ ಅತೀ ಹೆಚ್ಚು ಮತಾಂತರ ನಡೆದಿದೆ ಎಂದು ಬಿಂಬಿಸಲಾಗಿದೆ.

ಪವನ್ ಶರ್ಮಾ (Pawan Sharma) ಎನ್ನುವವರು ಈ ಸಿನಮಾವನ್ನು ನಿರ್ದೇಶನ ಮಾಡುತ್ತಿದ್ದು,  ಈಗಾಗಲೇ ಟಿಪ್ಪು ಕುರಿತಾಗಿ ಅವರು ಸಂಶೋಧನೆಯನ್ನೂ ಮಾಡಿದ್ದಾರಂತೆ. ತಾರಾಗಣದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದ ಪವನ್, ಈ ಸಿನಿಮಾವನ್ನು ಈಗಾಗಲೇ ಸಾವರ್ಕರ್, ಅಟಲ್ ಸಿನಿಮಾವನ್ನು ಮಾಡಿದ್ದ ಸಂದೀಪ್ ಶರ್ಮಾ (Sandeep Sharma) ಇದರ ನಿರ್ಮಾಪಕರು.

]]>
1063202 0 0 0
<![CDATA[ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ - ನಿಶ್ವಿಕಾ ನಾಯ್ಡು]]> https://publictv.in/nishvika-naidu-election-campaign-for-siddaramaiah-at-mysuru-varuna-constituency/ Thu, 04 May 2023 13:23:54 +0000 https://publictv.in/?p=1063211 - ವರುಣಾ ಕ್ಷೇತ್ರದಲ್ಲಿ ಸ್ಯಾಂಡಲ್‌ವುಡ್‌ ನಟ-ನಟಿಯರ ಅಬ್ಬರದ ಪ್ರಚಾರ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಪರವಾಗಿ ವರುಣಾ ಕ್ಷೇತ್ರದಲ್ಲಿ (Varuna Constituency) ಗುರುವಾರ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭರ್ಜರಿ ಪ್ರಚಾರ ನಡೆಸಿದರು.

ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಮ್ಯಾ (Ramya), ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಮತ್ತು ಸಿದ್ಧರಾಮಯ್ಯನವರಿಗೆ ಆಪ್ತರಾಗಿರುವ ದುನಿಯಾ ವಿಜಯ್ (Dunia Vijay) ಹಾಗೂ ನಿಶ್ಚಿಕಾ ನಾಯ್ದು ವರುಣಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

ಈ ವೇಳೆ ಪಬ್ಲಿಕ್‌ ಟಿವಿಯೊಂದಿಗೆ ಮಾತನಾಡಿದ ನಿಶ್ವಿಕಾ ನಾಯ್ಡು (Nishvika Naidu), ಸಿದ್ದರಾಮಯ್ಯ ಅಪ್ಪಾಜಿ ಪರ ಜನರ ಪ್ರೀತಿ ಉಕ್ಕಿ ಹರಿಯುತ್ತಿದೆ. ಜನರು ಅವರಿಗೆ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಚುನಾವಣಾ ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದು, ಇಲ್ಲಿ ನಮಗಿಂತಲೂ ಸಿದ್ದರಾಮಯ್ಯನವರ ಮೇಲೆ ಜನರ ಪ್ರೀತಿ ಜಾಸ್ತಿ ಇದೆ. ಕಾಂಗ್ರೆಸ್‌ ಪಕ್ಷ, ಅವರು ಮಾಡಿರುವ ಕೆಲಸಗಳ ಮೇಲೆ ಜನರು ನಂಬಿಕೆಯಿಟ್ಟಿದ್ದಾರೆ. ಪ್ರಚಾರಕ್ಕೆ ಬಂದಿದ್ದು ನನಗೂ ತುಂಬಾ ಖುಷಿಯಿದೆ ಎಂದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ರಮ್ಯಾ, ಶಿವಣ್ಣ ದುನಿಯಾ ವಿಜಯ್ ಕ್ಯಾಂಪೇನ್

ಮುಂದೆ ರಾಜಕೀಯಕ್ಕೆ ಬರ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿಶ್ವಿಕಾ, ಸಮಾಜಕ್ಕೆ ಬೇರೆ ಬೇರೆ ರೀತಿಯಲ್ಲಿ ಸೇವೆ ಮಾಡಬಹುದು. ಸದ್ಯಕ್ಕೆ ನಾನು ಸಿನಿಮಾ ರಂಗದಲ್ಲಿದ್ದೇನೆ. ಜನರನ್ನು ರಂಜಿಸುವುದೂ ಒಂದು ಸೇವೆಯೇ, ಸದ್ಯಕ್ಕೆ ರಾಜಕೀಯಕ್ಕೆ ಬರುವ ಯೋಚನೆಯಿಲ್ಲ. ಮುಂದಿನದ್ದು ನೋಡೋಣ ಎಂದು ಮಾತು ಮುಗಿಸಿದರು.

]]>
1063211 0 0 0
<![CDATA[ಮಣಿಪುರ ಧಗಧಗ - ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ]]> https://publictv.in/manipur-issues-shoot-at-sight-orders-in-extreme-cases-amid-violence/ Thu, 04 May 2023 13:53:16 +0000 https://publictv.in/?p=1063221 ಇಂಫಾಲ್: ಎಲ್ಲಾ ರೀತಿಯ ಎಚ್ಚರಿಕೆ, ಸಮಂಜಸವಾದ ಬಲ ಪ್ರಯೋಗಕ್ಕೂ ಜಗ್ಗದೇ ಹೋದರೆ ಶೂಟೌಟ್‌ ಮಾಡಿ ಎಂದು ಅಧಿಕಾರಿಗಳಿಗೆ ಮಣಿಪುರ (Manipur violence) ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿಭಟನಾಕಾರರನ್ನು ಎಲ್ಲಾ ರೀತಿಯಲ್ಲೂ ಮನವೊಲಿಸಿ, ಎಚ್ಚರಿಕೆ ನೀಡಿ, ಸಮಂಜಸವಾದ ಬಲ ಪ್ರಯೋಗ ಮಾಡಿ. ಇದ್ಯಾವುದಕ್ಕೂ ಬಗ್ಗದೇ ಹೋದರೆ, ವಿಪರೀತ ಪರಿಸ್ಥಿತಿ ಪ್ರಕರಣಗಳಲ್ಲಿ ಗುಂಡು ಹಾರಿಸಿ ಎಂದು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಮತ್ತು ಎಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳಿಗೆ ಆದೇಶಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

ರಾಜ್ಯದಲ್ಲಿ ಕ್ಷಣಕ್ಷಣವೂ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ಲದೇ ರಾಜಧಾನಿ ಇಂಫಾಲ್‌ಗೂ ಹರಡುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ, ಭದ್ರತೆಯನ್ನು ಬಲಪಡಿಸಲು ಸೂಚನೆ ನೀಡಿದೆ. 55 ಸೇನಾ ಕಾಲಂಗಳನ್ನು ನಿಯೋಜಿಸಲಾಗಿದೆ.

ಮಣಿಪುರದಲ್ಲಿ ಎಸ್‌ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದಿದೆ. ಮೇಟಿ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 8 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೇ ಇಂಟರ್‌ನೆಟ್‌ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

]]>
1063221 0 0 0
<![CDATA[ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ರಿವೀಲ್ ಮಾಡಿದ ನಟಿ ಇಲಿಯಾನಾ]]> https://publictv.in/actress-ileana-d-cruz-poses-with-baby-bump-in-her-instagram-story-pic-goes-viral/ Thu, 04 May 2023 14:04:04 +0000 https://publictv.in/?p=1063225 ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ (Ileana D'cruz) ಇತ್ತೀಚಿಗೆ ತಾಯಿಯಾಗುತ್ತಿರುವ ಸುದ್ದಿ ಅನೌನ್ಸ್ ಮಾಡಿ ಫ್ಯಾನ್ಸ್‌ಗೆ ಶಾಕ್ ನೀಡಿದ್ದರು. ಮದುವೆಯಾಗದೇ ಪ್ರೆಗೆನ್ಸಿ (Pregnancy) ಅನೌನ್ಸ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಇದೀಗ ಮೊದಲ ಬಾರಿಗೆ ಬೇಬಿ ಬಂಪ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

ಸೌತ್- ಬಾಲಿವುಡ್‌ನಲ್ಲಿ ಗಮನ ಸೆಳೆದ ನಟಿ ಇಲಿಯಾನಾ ಅವರು 2019ರಲ್ಲಿ ಆಂಡ್ರ್ಯೂ ನಿಬೋನ್ ಜೊತೆಗಿನ ಬ್ರೇಕಪ್ ಬಳಿಕ ಕತ್ರಿನಾ ಸಹೋದರನ ಜೊತೆ ಒಡನಾಡ ಜಾಸ್ತಿಯಾಗಿತ್ತು. ಪ್ರಸ್ತುತ ಕತ್ರಿನಾ ಕೈಫ್ (Katrina Kaif) ಸಹೋದರ ಸಬಾಸ್ಟಿಯನ್ ಲಾರೆಂಟ್ ಮೈಕಲ್ ಜೊತೆ ಇಲಿಯಾನಾ ಡೇಟ್ ಮಾಡಿದ್ದಾರೆ. ಇದನ್ನೂ ಓದಿ:‘ಫೈಟರ್’ ಚಿತ್ರದಲ್ಲಿ ನಟಿಸಲು ಹೃತಿಕ್- ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

 
View this post on Instagram
 

A post shared by Ileana D'Cruz (@ileana_official)

ಏ.18ರಂದು ತಾವು ತಾಯಿಯಾಗಿರುವ ಗುಡ್ ನ್ಯೂಸ್‌ನ ನಟಿ ಇಲಿಯಾನಾ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಸಿನಿ ತಾರೆಯರು, ಅಭಿಮಾನಿಗಳು ನಟಿಯ ಪೋಸ್ಟ್‌ಗೆ ವಿಶ್ ಮಾಡಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ದಿನಚರಿ ಬಗ್ಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

ಪ್ರೆಗೆನ್ಸಿ ಅನೌನ್ಸ್ ಬಳಿಕ 20 ದಿನಗಳ ನಂತರ ತಾವು ಮತ್ತೊಮ್ಮೆ ಗರ್ಭಿಣಿ ಎಂದು ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಲಾಂಗ್ ಧರಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗೇ ಬೇಬಿ ಬಂಪ್ ತೋರಿಸಿ ಕಾಫಿ ಕಪ್ ಹಿಡಿದಿದ್ದಾರೆ. ಈ ವೀಡಿಯೋದಲ್ಲಿ ಮುದ್ದಿನ ನಾಯಿ ಕೂಡ ಸೆರೆಯಾಗಿದೆ. ಒಟ್ನಲ್ಲಿ ವೀಡಿಯೋ ಕ್ಲಿಪ್ ನೋಡಿ ಫ್ಯಾನ್ಸ್ ವಿಶ್ ಮಾಡಿದ್ದಾರೆ.

]]>
1063225 0 0 0
<![CDATA[KSRTC ಬಸ್ ಡಿಕ್ಕಿ- ಕಾರಿನಲ್ಲಿದ್ದ ಮೂವರ ದುರ್ಮರಣ]]> https://publictv.in/3-of-them-died-by-ksrtc-car-accident-in-yadagiri/ Thu, 04 May 2023 14:23:57 +0000 https://publictv.in/?p=1063231 ಯಾದಗಿರಿ: ಕೆಎಸ್‍ಆರ್‌ಟಿಸಿ ಬಸ್ (KSRTC Bus) ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಮೃತರನ್ನು ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಂಗಂಪೇಟೆಯ ನಾಗರಾಜ ಸಜ್ಜನ್ (59), ಪತ್ನಿ ಮಹಾದೇವಿ (50) ಹಾಗೂ ಸಂಬಂಧಿ ರೇಣುಕಾ (45) ಎಂದು ಗುರುತಿಸಲಾಗಿದೆ. ಮೃತರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆ ನಿವಾಸಿಗಳು. ಈ ಘಟನೆ ಶಹಪುರ ತಾಲೂಕಿನ ಮದ್ದರಕಿ ಬಳಿಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಬಸ್ಸಿನಲ್ಲಿದ್ದ ಐದಾರು ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಘೋಷಣೆ : 40 ಲಕ್ಷ ಹಿಂದೂಗಳ ಮತಾಂತರ ಕಥೆ ವ್ಯಥೆ ಮೃತರೆಲ್ಲರು ಇಂದು ಕಲಬುರಗಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದರು. ಹಾಗೆಯೇ ಮದುವೆ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಭೀಕರ ಅಪಘಾತದಿಂದಾಗಿ ಕಾರು (Car) ರಸ್ತೆ ಮಧ್ಯದಲ್ಲಿ ನಿಂತಿದ್ದು, ಸಂಚಾರ ಅಸ್ತವ್ಯಸ್ಥವಾಗಿತ್ತು. ಇಬ್ಬರ ಮೃತದೇಹಗಳು ಕಾರಿನಲ್ಲೇ ಸಿಲುಕಿತ್ತು. ಸ್ಥಳಕ್ಕೆ ಬೀಮರಾಯನ ಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನ ಹೊರತೆಗೆದು ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಭೀಮರಾಯನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ]]> 1063231 0 0 0 <![CDATA['ಶಾಕುಂತಲಂ' ಸಿನಿಮಾ ಸೋಲೊಪ್ಪಿಕೊಂಡ ನಿರ್ಮಾಪಕ ದಿಲ್ ರಾಜು]]> https://publictv.in/after-poor-collection-in-box-office-producer-dil-raju-accept-shakuntalam-movie-is-flop/ Thu, 04 May 2023 14:33:02 +0000 https://publictv.in/?p=1063232 ಸೌತ್ ಬ್ಯೂಟಿ ಸಮಂತಾ (Samantha) ನಟನೆಯ 'ಶಾಕುಂತಲ' (Shakuntalam) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿತ್ತು. ಮೊದಲ ವಾರವೇ ಚಿತ್ರಮಂದಿರಲ್ಲಿ ಸಮಂತಾ ಸಿನಿಮಾ ಮಕಾಡೆ ಮಲಗಿತ್ತು. ಇದೀಗ 'ಶಾಕುಂತಲಂ' ಸಿನಿಮಾ ಮಾಡಿ ದೊಡ್ಡ ಹೊಡೆತ ತಿಂದೆ ಎಂದು ನಿರ್ಮಾಪಕ ದಿಲ್ ರಾಜು (Producer Dil Raju) ಪ್ರತಿಕ್ರಿಯೆ ನೀಡಿದ್ದಾರೆ.

'ಪುಷ್ಪ' (Pushpa)  ಚಿತ್ರದ ಸಾಂಗ್ ಸಮಂತಾ ಸೊಂಟ ಬಳುಕಿಸಿ ಗೆದ್ದು ಬೀಗಿದ್ದರು. ಬಳಿಕ ಯಶೋದ (Yashoda) ಚಿತ್ರದಲ್ಲಿ ಸ್ಯಾಮ್ ನಟನೆಯಿಂದ ಸಕ್ಸಸ್ ಕಂಡಿತ್ತು. ಸಹಜವಾಗಿ 'ಶಾಕುಂತಲಂ' ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ ಈ ಸಿನಿಮಾ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿತ್ತು. ಚಿತ್ರಮಂದಿರಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು.‌ ಇದನ್ನೂ ಓದಿ:ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ರಿವೀಲ್ ಮಾಡಿದ ನಟಿ ಇಲಿಯಾನಾ

ಇದೀಗ ಸಂದರ್ಶನವೊಂದರಲ್ಲಿ ನಿರ್ಮಾಪಕ ದಿಲ್ ರಾಜು 'ಶಾಕುಂತಲಂ' ಸಿನಿಮಾ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ. ನಾನು 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಾಲ್ಕರಿಂದ ಐದು ಸಿನಿಮಾಗಳು ಮಾತ್ರ ನನಗೆ ಆರ್ಥಿಕವಾಗಿ ಹೊರೆಯಾಗಿವೆ. ನನ್ನ 25 ವರ್ಷಗಳ ಕೆರಿಯರ್‌ನಲ್ಲಿ 'ಶಾಕುಂತಲಂ' ಸಿನಿಮಾ ದೊಡ್ಡ ಹೊಡೆತ ನೀಡಿತು ಎಂದಿದ್ದಾರೆ. ಯಶಸ್ಸು ಸಿಕ್ಕಿಲ್ಲ ಅಂದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಜನರಿಗೆ ಸಿನಿಮಾ ಇಷ್ಟ ಆದರೆ ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಒಂದೊಮ್ಮೆ ಅವರು ಸೆಲಬ್ರೆಟ್ ಮಾಡಿಲ್ಲ ಎಂದರೆ ನನ್ನ ಜಡ್ಜ್‌ಮೆಂಟ್ ತಪ್ಪಾಗಿದೆ ಎಂದರ್ಥ ಎಂದು ದಿಲ್ ರಾಜು ಹೇಳಿದ್ದಾರೆ.

ಇನ್ನೂ 'ಶಾಕುಂತಲಂ' ಸಿನಿಮಾದ ಸೋಲಿನ ನಂತರ ನಟಿ ಸಮಂತಾ ಬಾಲಿವುಡ್ 'ಸಿಟಾಡೆಲ್ʼ ವೆಬ್ ಸೀರಿಸ್‌ನತ್ತ ಮುಖ ಮಾಡಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಸ್ಯಾಮ್ ನಟಿಸುತ್ತಿದ್ದಾರೆ.

]]>
1063232 0 0 0
<![CDATA[ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂ. ವಶ]]> https://publictv.in/4-crores-and-5-lakhs-collected-to-be-distributed-to-the-voters-money-seized-in-kolar/ Thu, 04 May 2023 15:15:22 +0000 https://publictv.in/?p=1063241 ಕೋಲಾರ: ಕೆ.ಜಿ.ಎಫ್ (KGF) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.

ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‍ನ ವಿಲ್ಲಾ ದಲ್ಲಿರಿಸಿದ್ದ ಕಂತೆ ಕಂತೆ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (Ramesh) ಅನ್ನೋರಿಗೆ ಸೇರಿದ ವಿಲ್ಲಾ ಇದಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೆಜಿಎಫ್ ಎಸ್‍ಪಿ ಧರಣಿದೇವಿ ನೇತೃತ್ವದ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರ ಧಗಧಗ – ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ

ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ 279 ನಂಬರ್ ವಿಲ್ಲಾದಲ್ಲಿ ಪತ್ತೆಯಾದ ಹಣ ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾಗಿದೆ. ಬಂಗಾರಪೇಟೆ ಪಂಚಾಯ್ತಿ ವಾರ ಹೆಸರು ಬರೆದು ಬಂಡಲ್ ಮಾಡಿಟ್ಟಿದ್ದ ಹಣ ಇದಾಗಿದ್ದು, ಕೆಜಿಎಫ್ ಎಸ್‍ಪಿ ಧರಣಿದೇವಿ ಖಾಸಗಿ ಕಾರ್‍ನಲ್ಲಿ ಬಂದು ದಾಳಿ ಮಾಡಿದ್ದಾರೆ. ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರು ಬಿಟ್ಟು ಮಾಲೀಕ ರಮೇಶ್ ಪರಾರಿಯಾಗಿದ್ದಾರೆ.

ಮೊದಲಿಗೆ ವಿಲ್ಲಾದಲ್ಲಿದ್ದ 2 ಕೋಟಿ 54 ಲಕ್ಷ ಹಾಗೂ ಕಾರಿನ ಬೀಗ ಒಡೆದ ವೇಳೆ ಕಾರಿನಲ್ಲಿ ಮೂರು ಗೋಣಿ ಚೀಲದಲ್ಲಿದ್ದ ಒಂದೂವರೆ ಕೋಟಿ ಹಣ ಪತ್ತೆಯಾಗಿದೆ. ಇನ್ನೂ ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಮೊಕ್ಕಾಂ ಹೂಡಿದ್ದು, ಹಣವನ್ನು ಮೆಷಿನ್ ಮೂಲಕ ಲೆಕ್ಕ ಹಾಕಿದ್ದು, ಸ್ಥಳದಲ್ಲಿ ಚುನಾವಣಾ ಲೆಕ್ಕ ವೀಕ್ಷಕರು, ತಾಲೂಕು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನ ವಶಕ್ಕೆ ಪಡೆಯಲಾಗಿದೆ.

]]>
1063241 0 0 0
<![CDATA[2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು]]> https://publictv.in/2016-olympic-gold-medallist-tori-bowie-dies/ Thu, 04 May 2023 14:41:32 +0000 https://publictv.in/?p=1063244 ವಾಷಿಂಗ್ಟನ್‌: ಒಲಿಂಪಿಕ್ಸ್‌ ಕ್ರೀಡೆಯಲ್ಲಿ (2016 Olympic) ಮೂರು ಪದಕಗಳು ಹಾಗೂ ಎರಡು ಬಾರಿ ವಿಶ್ವಚಾಂಪಿಯನ್‌ ಶಿಪ್‌ ಪ್ರಶಸ್ತಿಗಳನ್ನು ಗೆದ್ದಿದ್ದ ಟೋರಿ ಬೋವಿ (32) (Tori Bowie) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಬೋವಿ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಲು ಹಿಂದೇಟು ಹಾಕಿದೆ ಎಂಬ ಆರೋಪಗಳು ಕೇಳಿಬಂದಿದೆ.

ಐಒಸಿ ಅಧ್ಯಕ್ಷ ಥಾಮಸ್ ಬಾಚ್ ತಮ್ಮ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಟೋರಿ ಬೋವಿ ಹಠಾತ್‌ ನಿಧನವು ಆಘಾತ ತಂದಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

ಟೋರಿ 2016ರ ಒಲಿಂಪಿಕ್ಸ್‌ನಲ್ಲಿ ಮೂರು ಪದಗಳನ್ನು ಬಾಚಿಕೊಂಡಿದ್ದರು. 4*100 ಮೀಟರ್‌ ರಿಲೇನಲ್ಲಿ ಚಿನ್ನದ ಪದಕ (Gold Medallist), 100 ಮೀಟರ್‌ ರಿಲೇನಲ್ಲಿ (Relay) ಬೆಳ್ಳಿ ಹಾಗೂ 200 ಮೀಟರ್‌ ಓಟದಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದರು. 2017ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್‌ ಓಟ ಮತ್ತು 4*100 ಮೀಟರ್‌ ರಿಲೇನಲ್ಲಿ ಚಿನ್ನದ ಪದಕ, 2019ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ನಲ್ಲಿ ಲಾಂಗ್‌ ಜಂಪ್‌ನಲ್ಲಿ 4ನೇ ಸ್ಥಾನ ಪಡೆದು ಮಿಂಚಿದ್ದರು. ಕೊನೆಯದ್ದಾಗಿ 2022ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: IPL 2023: ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಭಾರೀ ನಿರಾಸೆ – ಮಳೆಗೆ ಪಂದ್ಯ ರದ್ದು

]]>
1063244 0 0 0
<![CDATA[ಹನುಮಾನ್ ಚಾಲೀಸಾ ಪಠಿಸಿ ಕಾಂಗ್ರೆಸ್‍ಗೆ ಕೇಸರಿ ಪಡೆ ಸೆಡ್ಡು]]> https://publictv.in/hanuman-chalisa-chanting-saffron-to-congress/ Thu, 04 May 2023 15:48:08 +0000 https://publictv.in/?p=1063254 ಬೆಂಗಳೂರು: ಕಾಂಗ್ರೆಸ್ ಪಕ್ಷ (Congress) ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ (Bajarangdal)ನಿಷೇಧದ ಪ್ರಸ್ತಾಪ ಮಾಡಿರೋದಕ್ಕೆ ಬಿಜೆಪಿ (BJP) ಯವರ ಜೊತೆ ಹಿಂದೂ ಸಂಘಟನೆಗಳು ಕೂಡ ಸಿಡಿದೆದ್ದಿವೆ. ಕಾಂಗ್ರೆಸ್ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸತೊಡಗಿದೆ.

ಮಲ್ಲೇಶ್ವರಂನ ರಾಮ ದೇಗುಲದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ನೇತೃತ್ವದಲ್ಲಿ ಹನುಮಾನ್ ಚಾಲಿಸಾ (Hanuman Chalisa) ಪಾರಾಯಣ ಮಾಡಿ ಕಾಂಗ್ರೆಸ್‍ಗೆ ಸೆಡ್ಡು ಹೊಡೆದರು. ಬಿಜೆಪಿಯವರಿಗೆ ಹನುಮಾನ್ ಚಾಲೀಸಾ ಹೇಳಲು ಬರುತ್ತಾ ಎಂದು ಸುರ್ಜೆವಾಲಾ ಹಾಕಿದ್ದ ಸವಾಲ್‍ಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂ. ವಶ

ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ರಾಮನಗರ, ಮಂಡ್ಯ, ಉಡುಪಿ, ತುಮಕೂರು, ಚಿಕ್ಕಮಗಳೂರು, ಉಡುಪಿ, ಯಾದಗಿರಿ ಸೇರಿ ರಾಜ್ಯದ ವಿವಿಧೆಡೆ ಬಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಾರಾಯಣ ಮಾಡಿ, ಪ್ರತಿಭಟನೆ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಶಪಥ ಮಾಡಿದ್ದಾರೆ. ಮನೆ ಮನೆಗೆ ತೆರಳಿ ಕಾಂಗ್ರೆಸ್‍ಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಮಧ್ಯೆ, ಗಾಳಿ ಆಂಜನೇಯ ದೇಗುಲದಲ್ಲಿ ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾದ ಕಾರ್ಯಕರ್ತರಿಗೆ, ನೀವು ಪಠಣ ಮಾಡುವುದಾದರೆ ಮಾಡಿ. ಆದರೆ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ದೇವಾಲಯದ ಒಳಗೆ ರಾಜಕೀಯ ತರಬೇಡಿ ಎಂದು ಆಡಳಿತ ಮಂಡಳಿ ಖಡಕ್ಕಾಗಿ ಹೇಳಿತು. ಹೀಗಾಗಿ ದೇಗುಲದ ಮುಂಭಾಗವೇ ಹಿಂದೂ ಕಾರ್ಯಕರ್ತರು ಹನುಮಾನ್ ಚಾಲಿಸಾ ಪಠಿಸಿದ್ರು. ಮಧ್ಯಪ್ರದೇಶದ ಜಬಲ್ಪುರದಲ್ಲಿ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ದಾಂಧಲೆ ನಡೆಸುವ ದೃಶ್ಯಗಳು ವೈರಲ್ ಆಗಿವೆ.

 

]]>
1063254 0 0 0
<![CDATA[Breaking: ತಲೈವಾ, ಶಿವಣ್ಣನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ - ʻಜೈಲರ್‌ʼ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌]]> https://publictv.in/rajinikanths-jailer-release-date-out/ Thu, 04 May 2023 15:50:52 +0000 https://publictv.in/?p=1063256 ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajanikanth) ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಕಾಲಿವುಡ್‌ನ (Kollywood) ಬಹುನಿರೀಕ್ಷಿತ `ಜೈಲರ್’ (Jailer) ಸಿನಿಮಾ ಬಿಡುಗಡೆಗೆ ಕೊನೆಗೂ ದಿನಾಂಕ ಫಿಕ್ಸ್‌ ಆಗಿದೆ.

ದಕ್ಷಿಣ ಭಾರತದ ಸ್ಟಾರ್‌ ನಟರು ನಟಿಸಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಜೈಲರ್‌ ಸಿನಿಮಾ ಮುಂದಿನ ಆಗಸ್ಟ್ 10 ರಂದು ತೆರೆಗೆ ಬರಲಿದೆ. ಈ ಕುರಿತು ಚಿತ್ರತಂಡ 48 ಸೆಕೆಂಡುಗಳ ಟೀಸರ್ ವೀಡಿಯೋವನ್ನ ಹಂಚಿಕೊಳ್ಳೂವ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಿದೆ. ಇದನ್ನೂ ಓದಿ: ‘ಫೈಟರ್’ ಚಿತ್ರದಲ್ಲಿ ನಟಿಸಲು ಹೃತಿಕ್- ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

ರಜನಿಕಾಂತ್, ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shivarajkumar), ಮೋಹನ್ ಲಾಲ್, ತಮನ್ನಾ ಭಾಟಿಯಾ ಇನ್ನೂ ಅನೇಕ ತಾರೆಯರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ನಟಿಸುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ರಿವೀಲ್ ಮಾಡಿದ ನಟಿ ಇಲಿಯಾನಾ

ಅಲ್ಲದೇ ಶಿವಣ್ಣ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ (Tamil Cinema) ನಟಿಸುತ್ತಿದ್ದು, ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ತಾರಾಗಣ ಹೊಂದಿರುವ ಈ ಸಿನಿಮಾ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಚಿತ್ರತದಂದ ಟೀಸರ್‌ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ತಲೈವಾ ನಟನೆಯ 169ನೇ ಸಿನಿಮಾ ಆಗಿರುವ ಕಾರಣ, ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

]]>
1063256 0 0 0
<![CDATA[ಕುಡಿದ ಪೊಲೀಸರಿಂದ ಹಲ್ಲೆ ಆರೋಪ - ದೇಶದ ಅತ್ಯುನ್ನತ ಪ್ರಶಸ್ತಿ ಹಿಂದಿರುಗಿಸಲು ಮುಂದಾದ ಕುಸ್ತಿಪಟುಗಳು]]> https://publictv.in/wrestlers-will-return-all-medals-awards-to-government-says-olympic-medalist-bajrang-punia/ Thu, 04 May 2023 16:34:53 +0000 https://publictv.in/?p=1063276 ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಕಳೆದ ಕೆಲವು ದಿನಗಳಿಂದ ದೆಹಲಿಯ ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿರುವ ಮೂವರು ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಅಂತ್ಯಗೊಳಿಸಿದೆ. ಎಫ್ಐಆರ್‌ಗಳನ್ನು ದಾಖಲಿಸಿರುವುದು ಮತ್ತು 7 ದೂರುದಾರರಿಗೆ ಸೂಕ್ತ ಭದ್ರತೆ ಒದಗಿಸಿರುವುದನ್ನು ಪರಿಗಣಿಸಿ ನಿರ್ಧಾರ ಕೈಗೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಅವರ ನೇತೃತ್ವದ ನ್ಯಾಯಪೀಠ, ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ನಿವೃತ್ತ ಅಥವಾ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನಿಗಾವಣೆಗೆ ಒಪ್ಪಿಸುವಂತೆ ಹೇಳಿ ಕುಸ್ತಿಪಟುಗಳ ಪರ ವಕೀಲರು ಮಾಡಿದ ಮೌಖಿಕ ಮನವಿ ಪರಿಗಣಿಸಲು ನಿರಾಕರಿಸಿತು. ಇದನ್ನೂ ಓದಿ: ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ – ಬ್ರಿಜ್‌ಭೂಷಣ್ ಭಾವುಕ ಹೇಳಿಕೆ

FIR ದಾಖಲಿಸುವುದು ಮತ್ತು ದೂರುದಾರರಿಗೆ ಭದ್ರತೆ ಒದಗಿಸುವ ನಿರ್ದಿಷ್ಟ ಮನವಿಗಳೊಂದಿಗೆ ನೀವು ಇಲ್ಲಿಗೆ ಬಂದಿದ್ದೀರಿ. ನಿಮ್ಮ ಬೇಡಿಕೆಯನ್ನ ಈಡೇರಿಸಲಾಗಿದೆ. ಇನ್ನೂ ಬೇರೆ ಮನವಿಗಳಿದ್ದರೆ ನೀವು ಹೈಕೋರ್ಟ್ ಅಥವಾ ಆ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌ ನರಸಿಂಹ ಮತ್ತು ಜೆಬಿ ಪರ್ಡಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠ, ಪ್ರಕರಣದ ಅರ್ಜಿಯ ವಿಚಾರಣೆಯನ್ನು ಅಂತ್ಯಗೊಳಿಸುವುದಾಗಿ ಹೇಳಿತ್ತು. ಈ ಬೆನ್ನಲ್ಲೇ ಕುಸ್ತುಪಟುಗಳ ಮೇಲೆ ಹಲ್ಲೆ ನಡೆದಿದೆ.

ಪೊಲೀಸರು - ಕುಸ್ತಿಪಟುಗಳ ನಡುವೆ ಜಟಾಪಟಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ಕುಡಿದ ಅಮಲಿನಲ್ಲಿದ್ದ ಪೊಲೀಸರು ಬುಧವಾರ ರಾತ್ರಿ ಹಲ್ಲೆ ನಡೆಸಿರುವುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಾಸಿಗೆಗಳನ್ನು ತರಲು ಹೋಗಿದ್ದಾಗ ಪೊಲೀಸರು ಹಲ್ಲೆ ನಡೆಸಿರುವುದಾಗಿ ದೂರಿದ್ದಾರೆ.

ಕೆಲವು ಕುಸ್ತಿಪಟುಗಳ ತಲೆಗೆ ಹೊಡೆತ ಬಿದ್ದಿದ್ದು, ಇಬ್ಬರಿಗೆ ಗಾಯಗಳಾಗಿವೆ. ಒಬ್ಬರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರು ಅನುಮತಿ ಇಲ್ಲದೇ ಪ್ರತಿಭಟನಾ ಸ್ಥಳಕ್ಕೆ ಹಾಸಿಗೆಗಳೊಂದಿಗೆ ಬಂದಿದ್ದರು. ಪೊಲೀಸರು ಮಧ್ಯಪ್ರವೇಶ ನಡೆಸಿದಾಗ ಸಣ್ಣ ಜಗಳ ನಡೆಯಿತು. ಬಳಿಕ ಎಎಪಿ ನಾಯಕ ಹಾಗೂ ಇತರೆ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

ಪ್ರಶಸ್ತಿ ಹಿಂದಿರುಗಿಸಲು ಸಿದ್ಧ: ಪೊಲೀಸರು ಹಲ್ಲೆ ನಡೆಸಿದ ಬಳಿಕ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಸುದ್ದಿಗಾರರೊಂದಿಗೆ ಮಾತನಾಡಿ, 'ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ. ಇದು ಹೀಗೆ ಮುಂದುವರಿದರೆ ನಾವು ನಮ್ಮ ಎಲ್ಲ ಪದಕಗಳು ಮತ್ತು ಪ್ರಶಸ್ತಿಗಳನ್ನ ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ಬಳಿಕ ಕುಸ್ತಿ ಬಿಟ್ಟು ಸಾಮಾನ್ಯ ಜೀವನ ನಡೆಸುತ್ತೇವೆ ಎಂದು ಕಣ್ಣೀರಿಟ್ಟಿದ್ದಾರೆ.

ವಿನೇಶ್, ಸಾಕ್ಷಿ ಮತ್ತು ಬಜರಂಗ್ ಮೂವರೂ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ʻಖೇಲ್ ರತ್ನʼ ಸ್ವೀಕರಿಸಿದ್ದಾರೆ. ಸಾಕ್ಷಿ ಮಲಿಕ್‌ 2017 ರಲ್ಲಿ ಮತ್ತು ಬಜರಂಗ್ ಪೂನಿಯಾ 2019 ರಲ್ಲಿ ದೇಶದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಸದ್ಯ ಪೊಲೀಸರಿಂದ ಹಲ್ಲೆ ನಡೆದ ಹೊರತಾಗಿಯೂ ಕ್ರೀಡೋತ್ಸಾಹ ನಿಲ್ಲಿಸದ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲೇ ಕುಸ್ತಿ ತರೆಬೇತಿ ನಡೆಸಲು ಮುಂದಾಗಿದ್ದಾರೆ.

]]>
1063276 0 0 0
<![CDATA[ಮತ ಕೇಳೋಕೆ ಬಂದ್ರೆ ನಾಯಿ ಬಿಡ್ತೀವಿ- ಭಜರಂಗದಳ ಕಾರ್ಯಕರ್ತನ ಮನೆ ಮುಂದೆ ಬೋರ್ಡ್]]> https://publictv.in/?p=1062379 Tue, 02 May 2023 10:36:43 +0000 https://publictv.in/?p=1062379 ಚಿಕ್ಕಮಗಳೂರು: ಮತ (Vote) ಕೇಳೋಕೆ ಬಂದ್ರೆ ನಾಯಿ ಬಿಡ್ತೀವಿ ಎಂದು ಭಜರಂಗದಳ (Bhajarangdal) ಕಾರ್ಯಕರ್ತನ ಮನೆ ಮುಂದೆ ಬೋರ್ಡ್ ಹಾಕಲಾಗಿದೆ. ಹೌದು. ಮೂಡಿಗೆರೆ ತಾಲೂಕಿನ ಗುಡ್ಡಟ್ಟಿ ಗ್ರಾಮದ ಅರುಣ್ ಎಂಬ ಭಜರಂಗದಳ ಕಾರ್ಯಕರ್ತನ ಮನೆ ಮುಂದೆ ಈ ರೀತಿಯಾಗಿ ಬೋರ್ಡ್ (Board) ಹಾಕಲಾಗಿದೆ. ಈ ಮೂಲಕ ಕಾಂಗ್ರೆಸ್ಸಿನ ಪ್ರಣಾಳಿಕೆಗೆ ಟಕ್ಕರ್ ಕೊಡಲಾಗಿದೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್ ವೋಟ್ ಕೇಳೋಕೆ ಬಂದ್ರೆ ನಾಯಿ ಬಿಡ್ತೀವಿ. ಇದು ಭಜರಂಗದಳದವರ ಮನೆ, ಕಾಂಗ್ರೆಸ್ಸಿಗರು ಮತ ಕೇಳಲು ಬರಬೇಡಿ. ಕಾಂಗ್ರೆಸ್ಸಿಗರಿಗೆ ಮತ ಕೇಳಲು ಅವಕಾಶವಿಲ್ಲ ಎಂದು ಕೂಡ ಬರೆಯಲಾಗಿದೆ. ಇದನ್ನೂ ಓದಿ: ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ ಪ್ರಣಾಳಿಕೆಯಲ್ಲಿ ಸರ್ಕಾರ ಬಂದರೆ ಭಜರಂಗದಳ ನಿಷೇಧ ಎಂದು ಕಾಂಗ್ರೆಸ್ (Congress) ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೋಡೆತ್ತುಗಳ ವಿರುದ್ಧ ಭಜರಂಗದಳ ಕಿಡಿಕಾರಿದೆ. ]]> 1062379 0 0 0 <![CDATA[ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ನ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!]]> https://publictv.in/?p=1063125 Thu, 04 May 2023 11:11:56 +0000 https://publictv.in/?p=1063125 ಪುಟಿನ್‌ ಪಡೆ ದಾಳಿಗೆ ಉಕ್ರೇನ್‌ನ 21 ಮಂದಿ ಬಲಿ

ಕೀವ್: ಉಕ್ರೇನ್‌ನ (Ukraine) ದಕ್ಷಿಣ ಖೆರ್ಸನ್‌ ಪ್ರದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್‌ ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.

ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್‌ವೇರ್ ಅಂಗಡಿ, ಸೂಪರ್‌ ಮಾರ್ಕೆಟ್‌ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್‌ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್‌ ಶೆಲ್‌ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್‌ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್‌ಮಾರ್ಕೆಟ್‌ನಲ್ಲಿ ಶೆಲ್‌ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖೆರ್ಸನ್‌ನಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಜನರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ನಗರ ಪ್ರವೇಶಿಸುವುದು ಮತ್ತು ಹೊರ ಹೋಗುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಹಾರ ಮತ್ತು ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ರುವಾಂಡದಲ್ಲಿ ಭೀಕರ ಪ್ರವಾಹ – 109 ಮಂದಿ ಬಲಿ

]]>
1063125 0 0 0
<![CDATA[ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!]]> https://publictv.in/?p=1063157 Thu, 04 May 2023 11:31:20 +0000 https://publictv.in/?p=1063157 ಪುಟಿನ್‌ ಪಡೆ ದಾಳಿಗೆ ಉಕ್ರೇನ್‌ನ 21 ಮಂದಿ ಬಲಿ

ಕೀವ್: ಉಕ್ರೇನ್‌ನ (Ukraine) ದಕ್ಷಿಣ ಖೆರ್ಸನ್‌ ಪ್ರದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್‌ ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.

ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್‌ವೇರ್ ಅಂಗಡಿ, ಸೂಪರ್‌ ಮಾರ್ಕೆಟ್‌ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್‌ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್‌ ಶೆಲ್‌ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್‌ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್‌ಮಾರ್ಕೆಟ್‌ನಲ್ಲಿ ಶೆಲ್‌ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖೆರ್ಸನ್‌ನಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಜನರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ನಗರ ಪ್ರವೇಶಿಸುವುದು ಮತ್ತು ಹೊರ ಹೋಗುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಹಾರ ಮತ್ತು ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ರುವಾಂಡದಲ್ಲಿ ಭೀಕರ ಪ್ರವಾಹ – 109 ಮಂದಿ ಬಲಿ

]]>
1063157 0 0 0
<![CDATA[]]> https://publictv.in/?p=1063214 Thu, 04 May 2023 13:33:17 +0000 https://publictv.in/?p=1063214 ಚಾಮರಾಜನಗರ: ಪ್ರಧಾನಿ ಮೋದಿ (Narendra Modi) ಯವರು ಶ್ರೀಮತಿಯನ್ನ ಎಲ್ಲಿ ಬಿಟ್ಟಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ (V.S Ugrappa) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಬಗ್ಗೆ ಪ್ರತಿಕ್ರಿಯಿಸುವ ಭರದಲ್ಲಿ ಮೋದಿ ಶ್ರೀಮತಿವರನ್ನು ಎಳೆದು ತಂದಿದ್ದಾರೆ. ಪ್ರಧಾನಿ ಮೋದಿ ಸೇರಿ ಆಧುನಿಕ ರಾಮ ಭಕ್ತರಿಗೆ ಕೇಳುತ್ತೇನೆ. ಅವರ ಶ್ರೀಮತಿಯನ್ನ ಎಲ್ಲಿ ಬಿಟ್ಟಿದ್ದಾರೆ. ಅವರಿಗೆ ನಿರ್ವಹಣಾ ವೆಚ್ಚ ಏನಾದ್ರು ಕೊಡುತ್ತಿದ್ದೀರಾ?. ಅವರು ಪ್ರತಿವರ್ಷ ಅಂಜನಾದ್ರಿ ಹಂಪಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಆಕೆಗೆ ಕೈ ಎತ್ತಿ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಜಾತಿ ರಹಿತ, ಶೋಷಣೆ ರಹಿತ, ಸಮಾಜಕಟ್ಟುವ ಬದ್ಧತೆ ಇದ್ದರೆ ಮೊದಲು ರಾಮಾಯಣ ಓದಿ. ಎಷ್ಟು ಜನ ರಾಮಾಯಣ ಓದಿದ್ದೀರಿ? ಮೋದಿ ಓದಿದ್ದಾರಾ?. ರಾಮನ ಆದರ್ಶಗಳನ್ಮು ಪಾಲಿಸಬೇಕಿತ್ತು. ರಾಮಾಯಣ (Ramayana) ನಡೆದಿದ್ದು ಸೀತೆಗಾಗಿ ಅಲ್ಲವಾ ಎಂದು ಉಗ್ರಪ್ಪ ಅವರು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಚಾಮರಾಜನಗರ, ವಿ.ಎಸ್ ಉಗ್ರಪ್ಪ, ನರೇಂದ್ರ ಮೋದಿ, ಕಾಂಗ್ರೆಸ್, ಬಿಜೆಪಿ, ಕರ್ನಾಟಕ ಚುನಾವಣೆ 2023, chamarajanagar, vs ugrappa, narendra modi, congress, bjp, karnataka election 2023]]> 1063214 0 0 0 <![CDATA[ಕೇರಳದ ಮೊದಲ ಸಲಿಂಗಿ ಬಾಡಿಬಿಲ್ಡರ್ ಆತ್ಮಹತ್ಯೆ]]> https://publictv.in/keralas-first-transgender-bodybuilder-dies-by-suicide/ Thu, 04 May 2023 17:37:36 +0000 https://publictv.in/?p=1063272 ತಿರುವನಂತಪುರಂ: ಕೇರಳ (Kerala) ದ ಮೊದಲ ಸಲಿಂಗಕಾಮಿ ಬಾಡಿಬಿಲ್ಡರ್ (Transgender Bodybuilder) ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಪ್ರವೀಣ್ ನಾತ್ ಆತ್ಮಹತ್ಯೆ ಮಾಡಿಕೊಂಡವ. ಈತ ಗುರುವಾರ ಮಧ್ಯಾಹನದ ಬಳಿಕ ತನ್ನ ರೆಸಿಡೆನ್ಸಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಚಾರದ ವೇಳೆ ಕಲ್ಲು ತೂರಾಟ – ಕಾರ್ಯಕರ್ತೆ ತಲೆಗೆ ಗಂಭೀರ ಪೆಟ್ಟು

ಇದೇ ವರ್ಷ ಪ್ರೇಮಿಗಳ ದಿನದಂದು ಪ್ರವೀಣ್ ತನ್ನ ಸಂಗಾತಿಯನ್ನು ವರಿಸಿದ್ದನು. ಆ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೆಲವೊಂದು ಆನ್‍ಲೈನ್ ಮಾಧ್ಯಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು. ಇದರಿಂದ ಪ್ರವೀಣ್ ನೊಂದಿದ್ದನು ಎಂದು ಹೇಳಲಾಗುತ್ತಿದೆ.

]]>
1063272 0 0 0
<![CDATA[ಕಾಂಗ್ರೆಸ್‌ ಪ್ರಚಾರದ ವೇಳೆ ಕಲ್ಲು ತೂರಾಟ - ಕಾರ್ಯಕರ್ತೆ ತಲೆಗೆ ಗಂಭೀರ ಪೆಟ್ಟು]]> https://publictv.in/stone-pelting-during-congress-campaign-in-vijayapura/ Thu, 04 May 2023 17:00:38 +0000 https://publictv.in/?p=1063283 ವಿಜಯಪುರ: ಇಲ್ಲಿನ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಪ್ರಚಾರ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮಹಿಳಾ ಕಾರ್ಯಕರ್ತೆ ಶಾಂತಾಗೆ ತಲೆಗೆ ಕಲ್ಲು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿ.ಎಸ್ ನಾಡಗೌಡ ಪರ ಪ್ರಚಾರ (Election Campaign) ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಮುದ್ದೇಬಿಹಾಳ ಕ್ಷೇತ್ರದ ಗೋನಾಳ ಗ್ರಾಮದಲ್ಲಿ ನಡೆದ ಪ್ರಚಾರ ಕಾರ್ಯ ಕ್ರಮದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

ಗಂಭೀರವಾಗಿ ಗಾಯಗೊಂಡ ಕಾರ್ಯಕರ್ತೆ ಶಾಂತಾ ಎಂಬಾಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

]]>
1063283 0 0 0
<![CDATA[ರಿಂಕು, ರಾಣಾ ಬ್ಯಾಟಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ - KKRಗೆ 5 ರನ್‌ಗಳ ರೋಚಕ ಜಯ]]> https://publictv.in/indian-premier-league-kkr-won-by-5-runs/ Thu, 04 May 2023 18:02:04 +0000 https://publictv.in/?p=1063302 ಹೈದರಾಬಾದ್‌: ರಿಂಕು ಸಿಂಗ್‌ (Rinku Singh), ನಾಯಕ ನಿತೀಶ್‌ ರಾಣಾ (Nitish Rana) ಸಂಘಟಿತ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿತು.

ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ ಗುರಿ ಪಡೆದ ಸನ್‌ ರೈಸರ್ಸ್‌ ಹೈದರಾಬಾದ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ತಂದ ಮೊದಲ 10 ಓವರ್‌ಗಳಲ್ಲಿ 75 ರನ್‌ ಗಳಿಸಿತ್ತು. ಇನ್ನೂ 60 ಎಸೆತಗಳಲ್ಲಿ 97 ರನ್‌ಗಳ ಅಗತ್ಯವಿತ್ತು. ರನ್‌ ಗಳಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಏಡನ್‌ ಮಾರ್ಕ್ರಮ್‌ ಹಾಗೂ ಹೆನ್ರಿಕ್ ಕ್ಲಾಸೆನ್ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ತಂಡಕ್ಕೆ ಮತ್ತಷ್ಟು ರನ್‌ ಸೇರ್ಪಡೆಯಾಯಿತು. ತಂಡದಲ್ಲಿ ಗೆಲುವಿನ ಆಸೆಯೂ ಚಿಗುರಿತ್ತು.

11 ರಿಂದ 19ನೇ ಓವರ್‌ವರೆಗೆ ಕ್ರಮವಾಗಿ 15, 12, 12, 10, 10, 4, 8, 5, 12 ರನ್‌ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿದ್ದಾಗ ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್‌ ಸೇರ್ಪಡೆಯಾಯಿತು. ಆದ್ರೆ ಕ್ರೀಸ್‌ನಲ್ಲಿದ್ದ ಅಬ್ದುಲ್ ಸಮದ್‌ 3ನೇ ಎಸೆತವನ್ನು ಸಿಕ್ಸ್‌ ಸಿಡಿಸಲು ಯತ್ನಿಸಿ ಬೌಂಡರಿ ಲೈನ್‌ ಕ್ಯಾಚ್‌ ನೀಡಿ ನಿರಾಸೆ ಮೂಡಿಸಿದರು. ಬಳಿಕ 3 ಎಸೆತದಲ್ಲಿ ಒಂದೊಂದು ರನ್‌ ಗಳಷ್ಟೇ ಗಳಿಸಲಾಗಿ ತಂಡ ಸೊಲೊಪ್ಪಿಕೊಂಡಿತು.

ಹೈದರಾಬಾದ್‌ ಪರ ಮಯಾಂಕ್‌ ಅಗರ್ವಾಲ್‌ 18 ರನ್‌, ರಾಹುಲ್‌ ತ್ರಿಪಾಠಿ 20 ರನ್‌, ಏಡನ್‌ ಮಾರ್ಕ್ರಮ್‌ 41 ರನ್‌, ಹೆನ್ರಿಕ್ ಕ್ಲಾಸೆನ್ 36 ರನ್‌ ಹಾಗೂ ಅಬ್ದುಲ್‌ ಸಮದ್‌ 21 ರನ್‌ ಗಳಿಸಿದರು.

ಕೆಕೆಆರ್‌ ಪರ ವೈಭವ್‌ ಅರೋರ, ಶಾರ್ದೂಲ್‌ ಠಾಕೂರ್‌ ತಲಾ 2 ವಿಕೆಟ್‌ ಪಡೆದರೆ, ಹರ್ಶಿತ್‌ ರಾಣಾ, ರಸ್ಸೆಲ್‌, ಅನುಕುಲ್‌ ರಾಯ್‌ ಹಾಗೂ ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಕಿತ್ತರು.

ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ನಿತೀಶ್‌ ರಾಣಾ, ರಿಂಕು ಸಿಂಗ್ ಹಾಗೂ ಆ್ಯಂಡ್ರೆ ರಸ್ಸೆಲ್‌ ಬ್ಯಾಟಿಂಗ್‌ ನೆರವಿನಿಂದ 170 ರನ್‌ಗಳ ಗಡಿದಾಟುವಲ್ಲಿ ಯಶಸ್ವಿಯಾಯಿತು.

ಕೆಕೆಆರ್‌ ಪರ ನಾಯಕ ರಿಂಕು ಸಿಂಗ್‌ 46 ರನ್‌ (35 ಎಸೆತ, 4 ಬೌಂಡರಿ, 1 ಸಿಕ್ಸರ್‌), ನಿತೀಶ್‌ ರಾಣಾ 42 ರನ್‌ (31 ಎಸೆತ, 3 ಬೌಂಡರಿ, 3 ಸಿಕ್ಸರ್‌), ರಸ್ಸೆಲ್‌ 24 ರನ್‌ ಹಾಗೂ ಜೇಸನ್‌ ರಾಯ್‌ 20 ರನ್‌ ಗಳಿಸಿ ತಂಡಕ್ಕೆ ನೆರವಾದರು.

ಹೈದರಾಬಾದ್‌ ಪರ ಮಾರ್ಕೊ ಜಾನ್ಸೆನ್‌, ಟಿ. ನಟರಾಜನ್‌ ತಲಾ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಕಾರ್ತಿಕ್‌ ತ್ಯಾಗಿ, ಏಡನ್‌ ಮಾರ್ಕ್ರಮ್‌, ಮಯಾಂಕ್‌ ಮಾರ್ಕಂಡೆ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

]]>
1063302 0 0 0