ಬೆಂಗಳೂರು: ಬಜರಂಗ ದಳವನ್ನು (Bajrang Dal) ನಿಷೇಧಿಸುವ ಪ್ರಸ್ತಾಪ ಮಾಡಿದ ಕಾಂಗ್ರೆಸ್ (Congress) ಇದೀಗ ಪೇಚಾಡುವಂತಾಗಿದೆ. ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪ ಮಾಡಿದ್ದೇ ಮಾಡಿದ್ದು ಹಿಂದೂ (Hindu) ಸಂಘಟನೆಗಳು ಬೆಂಕಿಯುಂಡೆಯಂತಾಗಿದೆ.
ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಅಖಾಡಕ್ಕೆ ಇಳಿದಿರುವ ಬಜರಂಗದಳ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೇರಿಗೆ ಸವ್ವಾಸೇರು ಎನ್ನುವಂತೆ ಇಂದು ಹನುಮಾನ್ ಚಾಲೀಸಾ ಪಠಣ ಮಾಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿಜಯನಗರ, ಜಯನಗರ, ಕತ್ರಿಗುಪ್ಪೆ, ರಾಜಾಜಿನಗರ, ಬನ್ನೇರುಘಟ್ಟ ಸೇರಿ ಬೆಂಗಳೂರಿನ 20 ಕಡೆಗಳಲ್ಲಿ ಹನುಮಂತನ ದೇವಾಲಯ, ರಾಮ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೊಡೆತಟ್ಟಿ ನಿಲ್ಲಲು ಬಜರಂಗದಳ, ಹಿಂದೂಸಂಘಟನೆಗಳು ನಿರ್ಧರಿಸಿದೆ.
Advertisement
Advertisement
ಬಿಜೆಪಿ ನಾಯಕರು ಇಂದು ಹನುಮಾನ್ ಚಾಲೀಸಾ (Hanuman Chalisa) ಪಠಣೆಗೆ ಬರಲಿ ಬಿಡಲಿ. ಅದು ಅವರ ವಿವೇಚನೆಗೆ ಬಿಡಲಾಗಿದೆ. ಇದು ರಾಜಕೀಯ ಹೋರಾಟವಲ್ಲ ಹಿಂದೂಗಳ ಅಸ್ತಿತ್ವದ ಪ್ರಶ್ನೆ ಎಂದು ಬಜರಂಗದಳ ಹೇಳಿದೆ. ಇದನ್ನೂ ಓದಿ: ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ
Advertisement
ಬಿಜೆಪಿಯಿಂದ ಬಜರಂಗಿ ಅಸ್ತ್ರ:
ಕಳೆದ ಬಾರಿ ಚುನಾವಣೆ ವೇಳೆ ಲಿಂಗಾಯತ ಪ್ರತ್ಯೇಕಧರ್ಮ (Lingayat Religion) ವಿವಾದದಿಂದ ಕಾಂಗ್ರೆಸ್ ಕುರ್ಚಿ ಕಳೆದುಕೊಳ್ಳುವಂತಾಯಿತು. ಈ ಬಾರಿ ಬಜರಂಗದಳ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆ ಪ್ರಸ್ತಾವನೆ ಬಿಜೆಪಿ (BJP) ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ. ಈ ಅಸ್ತ್ರವನ್ನು ಬಿಜೆಪಿ ಪರಿಣಾಮಕಾರಿಯಾಗೇ ಬಳಸಿಕೊಳ್ಳುತ್ತಿದ್ದು ಹಿಂದೂ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ಬಜರಂಗಿ ಅಸ್ತ್ರ ಪ್ರಯೋಗಿಸಿದ್ದಾರೆ. ಮುಲ್ಕಿ, ಅಂಕೋಲಾ, ಬೈಲಹೊಂಗಲದಲ್ಲಿ ಬಜರಂಗಿ ಬಲಿ ಕೀ ಜೈ ಎಂದು ಹೇಳಿ ಭಾಷಣ ಆರಂಭಿಸುತ್ತಿದ್ದಾರೆ. ಈ ಮೂಲಕ ಜನರಿಗೆ ಹತ್ತಿರವಾಗಲು ಮುಂದಾಗಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಗರು ಮುಗಿಬಿದ್ದಿದ್ದಾರೆ. ಕಾಂಗ್ರೆಸ್‍ಗೆ ವಿನಾಶ ಕಾಲೇ ವಿಪರೀತ ಬುದ್ದಿ. ತಿರುಕನ ಕನಸು. ಕಾಂಗ್ರೆಸ್‍ನದ್ದು ಹಿಂದೂ ವಿರೋಧಿ ಮಾನಸಿಕತೆ. ಬಜರಂಗದಳ ನಿಷೇಧ ಮಾಡಿ ನೋಡಲಿ ಎಂದು ಸವಾಲು ಎಸೆದಿದ್ದಾರೆ.