ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್ (Karthik Jayram) ಅಲಿಯಾಸ್ ಜೆಕೆ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹುಟ್ಟುಹಬ್ಬದ ದಿನವೇ ಜೆಕೆ(Jk) ಎಂಗೇಜ್ ಆಗಿರುವ ವಿಚಾರವು ಅಧಿಕೃತವಾಗಿ ರಿವೀಲ್ ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
Advertisement
ಕಿರುತರೆಯ ಅಶ್ವಿನಿ ನಕ್ಷತ್ರ, ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟ ಜೆಕೆ ಅವರು ಹಿರಿತೆರೆಯಲ್ಲಿ ಕೂಡ ಛಾಪೂ ಮೂಡಿಸಿದ್ದಾರೆ. ಹಿಂದಿ ಟಿವಿ ಕಿರುತೆರೆಯಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಜೆಕೆ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂ 1
Advertisement
Advertisement
ಒಂದು ವರ್ಷದಿಂದ ತಮ್ಮ ಡೇಟಿಂಗ್ ಸುದ್ದಿ ಬಗ್ಗೆ ಜೆಕೆ ಅವರು ನಿರಾಕರಿಸಿದ್ದರು. ಇದೀಗ ಜೆಕೆ ಎಂಗೇಜ್ ಆಗಿರುವ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ (Fashion Designer) ಅಪರ್ಣಾ ಸಮಂತಾ (Aparna Samantha) ಜೊತೆ ನಟ ಜೆಕೆ ಎಂಗೇಜ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದಾರೆ.
Advertisement
View this post on Instagram
ಸದ್ಯ ಈ ಪೋಸ್ಟ್ ನೋಡಿರುವ ಅಭಿಮಾನಿಗಳು ಜೆಕೆಗೆ ಕಾಮೆಂಡ್ ಮಾಡಿ ನೀವಿಬ್ಬರೂ ಬೆಸ್ಟ್ ಜೋಡಿ, ಮದುವೆ ಯಾವಾಗ ಎಂದು ಪ್ರಶ್ನೆ ಮಾಡ್ತಿದ್ದಾರೆ. ತಮ್ಮ ರಿಲೇಶನ್‌ಶಿಪ್- ಮದುವೆ ಬಗ್ಗೆ ನಟ ಜೆಕೆ ಅವರೇ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.