ಮುಂಬೈ: ಟಿಮ್ ಡೇವಿಡ್ (Tim David ) ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್ (Rajasthan Royals ) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) 6 ವಿಕೆಟ್‌ಗಳ ಜಯ ಸಾಧಿಸಿದೆ.
ಗೆಲ್ಲಲು 213 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಹೊಡೆದು ಪಂದ್ಯವನ್ನು ಗೆದ್ದುಕೊಂಡಿತು.
Advertisement
Advertisement
ಕೊನೆಯ 24 ಎಸೆತಗಳಲ್ಲಿ ಮುಂಬೈ ಗೆಲ್ಲಲು 57 ರನ್‌ಗಳ ಅಗತ್ಯವಿತ್ತು. 17 ನೇ ಓವರ್‌ನಲ್ಲಿ 14 ರನ್, 18ನೇ ಓವರ್‌ನಲ್ಲಿ 11 ರನ್, 19ನೇ ಓವರ್‌ನಲ್ಲಿ 15 ರನ್ ಬಂದಿತ್ತು. ಕೊನೆ 6 ಎಸೆತಗಳಲ್ಲಿ 17 ರನ್ ಬೇಕಿತ್ತು. ಜೇಸನ್ ಹೋಲ್ಡರ್ ಎಸೆತ ಪ್ರಥಮ ಮೂರು ಎಸೆತವನ್ನು ಟಿಮ್ ಡೇವಿಡ್ ಸಿಕ್ಸರ್‌ಗೆ ಅಟ್ಟಿ ಜಯವನ್ನು ತಂದುಕೊಟ್ಟರು. ಟಿಮ್ ಡೇವಿಡ್ ಮತ್ತು ತಿಲಕ್ ವರ್ಮಾ ಮುರಿಯದ 5ನೇ ವಿಕೆಟಿಗೆ 23 ಎಸೆತಗಳಲ್ಲಿ 62 ರನ್ ಜೊತೆಯಾಟವಾಡಿದ ಪರಿಣಾಮ ಮುಂಬೈ ಜಯದ ನಗೆ ಬೀರಿದೆ.
Advertisement
ಟಿಮ್ ಡೇವಿಡ್ ಔಟಾಗದೇ 45 ರನ್(14 ಎಸೆತ, 2 ಬೌಂಡರಿ, 5 ಸಿಕ್ಸ್), ತಿಲಕ್ ವರ್ಮಾ ಔಟಾಗದೇ 29 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದರು.
Advertisement
ರೋಹಿತ್ ಶರ್ಮಾ ಕೇವಲ 3 ರನ್‌ಗಳಿಸಿ ಔಟಾದರೂ ಮಧ್ಯಮ ಇಶನ್ ಕಿಶನ್ ಮತ್ತು ಕ್ಯಾಮರೂನ್ ಗ್ರೀನ್ ಎರಡನೇ ವಿಕೆಟಿಗೆ 38 ಎಸೆತಗಳಲ್ಲಿ 62 ರನ್ ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಾಲ್ಕನೇಯ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ 31 ಎಸೆತಗಳಲ್ಲಿ 51 ರನ್ ಜೊತೆಯಾಟವಾಡಿದರು.
ಇಶನ್ ಕಿಶನ್ 28 ರನ್(23 ಎಸೆತ, 4 ಬೌಂಡರಿ), ಕ್ಯಾಮರೂನ್ ಗ್ರೀನ್ 44 ರನ್(26 ಎಸೆತ, 4 ಬೌಂಡರಿ, 2 ಸಿಕ್ಸರ್), ಸೂರ್ಯಕುಮಾರ್ ಯಾದವ್ 55 ರನ್( 29 ಎಸೆತ, 8 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಉತ್ತಮ ಆರಂಭ ಪಡೆದು ಮೊದಲ ವಿಕೆಟಿಗೆ 72 ರನ್ ಗಳಿಸಿತು. ಜೋಸ್ ಬಟ್ಲರ್ 18 ರನ್ ಗಳಿಸಿ ಔಟಾದರು. ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಯಶಸ್ವಿ ಜೈಸ್ವಾಲ್ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿ ಶತಕ ಹೊಡೆದರು.
ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಜೈಸ್ವಾಲ್ 32 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 53 ಎಸೆತಗಳಲ್ಲಿ ಶತಕ ಬಾರಿಸಿದರು. ಅಂತಿಮವಾಗಿ 62 ಎಸೆತಗಳಲ್ಲಿ 124 ರನ್ (16 ಬೌಂಡರಿ, 8 ಸಿಕ್ಸರ್) ಹೊಡೆದು 19.4 ಓವರ್‌ನಲ್ಲಿ ಔಟಾದರು. 124 ರನ್ ಹೊಡೆಯುವ ಮೂಲಕ ಈ ಐಪಿಎಲ್‌ನ ಗರಿಷ್ಠ ವೈಯಕ್ತಿಕ ಸ್ಕೋರ್ ಜೊತೆಗೆ ಒಟ್ಟು 428 ರನ್ ಹೊಡೆಯುವ ಮೂಲಕ ಆರೇಂಜ್ ಕ್ಯಾಪ್ ಧರಿಸಿದರು.
ಸಂಜು ಸ್ಯಾಮ್ಸನ್ 14 ರನ್, ಜೇಸನ್ ಹೋಲ್ಡರ್ 11 ರನ್ ಗಳಿಸಿ ಔಟಾದರು. ಇತರ ರೂಪದಲ್ಲೇ 25 ರನ್( ಬೈ1, ಲೆಗ್‌ಬೈ 7, ನೋಬಾಲ್ 1, ವೈಡ್ 16) ಬಂದಿದ್ದರಿಂದ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 212 ರನ್ ಹೊಡೆಯಿತು.