ತುಮಕೂರು: ಜಿಲ್ಲೆಯ ತುರುವೆರೆಗೆ ಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಬೆಮೆಲ್ ಕಾಂತರಾಜು ಪರ ರಾಹುಲ್ ಗಾಂಧಿ (Rahul Gandhi) ಅಬ್ಬರದ ಪ್ರಚಾರ ನಡೆಸಿದರು. ಬಳಿಕ ಇಲ್ಲಿನ ಗುರುಭವನ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದರು.
Advertisement
ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ನಮಾಜ್ (Namazz) ಮಾಡುತ್ತಿದ್ದರು. ಈ ವೇಳೆ ನಮಾಜ್ ಕೂಗು ಕೇಳಿಬರುತ್ತಿದ್ದಂತೆ ತಮ್ಮ ಭಾಷಣಕ್ಕೆ ಬ್ರೇಕ್ ಹಾಕಿದ್ದ ರಾಹುಲ್ ನಮಾಜ್ ಮುಗಿದ ಬಳಿಕ ಭಾಷಣ ಆರಂಭಿಸಿದರು. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ
Advertisement
Advertisement
ಕಳೆದ ಬಾರಿ ನೀವು ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ಆದ್ರೆ ಅವರು ಶಾಸಕರನ್ನ ಖರೀದಿ ಮಾಡಿ ಅಧಿಕಾರಕ್ಕೆ ಬಂದರು, ಈ ಮೂಲಕ ಲೋಕ ತಂತ್ರವನ್ನೇ ಹಾಳು ಮಾಡಿದರು. ಕಳೆದ 3 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಸಣ್ಣ ಸಣ್ಣ ಕೆಲಸಕ್ಕೂ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ಹಣ ನೀಡುವ ಬದಲು ನಿಮ್ಮ ಜೇಬಿಗೆ ಕತ್ತರಿ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿಗೂ ಗೊತ್ತು ಎಂದು ಕುಟುಕಿದರು. ಇದನ್ನೂ ಓದಿ: ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ
Advertisement
ಬಿಜೆಪಿ ಶಾಸಕರೊಬ್ಬರೇ `ಈಗಿನ ಸಿಎಂ 2 ಸಾವಿರ ಕೋಟಿ ಕೊಟ್ಟು ಸಿಎಂ ಆಗಿದ್ದಾರೆ’ ಅಂತಾ ಸಾರ್ವಜನಿಕವಾಗಿ ಹೇಳಿದ್ದಾರೆ. ಕರ್ನಾಟಕದ ಜನರ ಮತ ಕೇಳಲು ಬರುವ ನೀವು, ಭ್ರಷ್ಟಚಾರ ತಡೆಯಲು ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಇಲ್ಲಿನ ಜನಕ್ಕೆ ಹೇಳಿ, ಕರ್ನಾಟಕದ ಜನತೆ ಕಟ್ಟಿದ ಟ್ಯಾಕ್ಸ್ ಹಣವನ್ನು ವಾಪಸ್ ಕೊಡಲಿಲ್ಲ ಅನ್ನೋದನ್ನು ಹೇಳಿ.. ಗೋವಾ – ಕರ್ನಾಟಕ ನಡುವಿನ ನೀರಿನ ಸಂಘರ್ಷಕ್ಕೆ ಏನು ಮಾಡಿದ್ರಿ ಅಂತಾ ಹೇಳಿ.. ರಾಜ್ಯದಲ್ಲಿ ಕಳೆದ 3 ವರ್ಷ ನಿಮ್ಮ ಸರ್ಕಾರ ಏನು ಮಾಡಿದೆ ಅಂತ ಹೇಳಿ… ಏಕೆಂದರೆ ಚುನಾವಣೆ ನಡೆಯುತ್ತಿರುವುದು ನಿಮಗೋಸ್ಕರ ಅಲ್ಲ, ಕರ್ನಾಟಕದ ಭವಿಷ್ಯಕ್ಕಾಗಿ ಎಂದು ಹೇಳಿದ್ದಾರೆ.