ಚಿಕ್ಕಬಳ್ಳಾಪುರ: ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆಯ ಚಿನ್ನದ ಸರ ಕದ್ದು ಆಕೆಯ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಯಾರೂ ಊಹೆ ಮಾಡದ ಸಿನಿಮೀಯ ಟ್ವಿಸ್ಟ್ ಸಿಕ್ಕಿದೆ. ನಾದಿನಿಯೇ ತನ್ನ ಸಹೋದರ ಸಂಬಂಧಿಯ ಜೊತೆ ಸೇರಿ ಅಣ್ಣನ ಹೆಂಡತಿಯನ್ನ ಕೊಂದಿರೋದು ಪೊಲೀಸರ (Police) ತನಿಖೆಯಲ್ಲಿ ಬಯಲಾಗಿದೆ.
ನಗರದ (Chikkaballapura) ಬಾಪೂಜಿ ನಗರದ ನರಸಿಂಹಮೂರ್ತಿಯವರ ಮನೆಯಲ್ಲಿ ಮೇ 28 ರಂದು ಆತನ ಸೊಸೆ ಪುಷ್ಪಲತಾಳನ್ನ (23) ಕತ್ತು ಕೊಯ್ದು ಕೊಲೆ ಮಾಡಿದಂತೆ ಶವ ಪತ್ತೆಯಾಗಿತ್ತು. ಪುಷ್ಪಲತಾಳ ಜೊತೆಗಿದ್ದ ಆಕೆಯ ನಾದಿನಿ ಭವ್ಯಾ, ಯಾರೋ ಬಂದು ಆಗ್ತಿಗೆಯನ್ನ ಕೊಂದು ಆಕೆಯ ಕತ್ತಿನ ಚಿನ್ನದ (Gold) ಸರ ಕಿತ್ಕೊಂಡು ಹೋದ್ರು. ನನಗೆ ಸ್ಪ್ರೇ ಹೊಡೆದ್ರು ನಾನು ತಲೆ ಸುತ್ತಿ ಬಿದ್ದು ಹೋಗಿದ್ದೆ. ಅಂತ ರಾಬರಿ ಕಥೆ ಕಟ್ಟಿದ್ದಳು. ಇದನ್ನೂ ಓದಿ: ಅಮಾನವೀಯ ಭಂಗಿಯಲ್ಲಿ ನಿಲ್ಲಿಸಿ ಪತ್ನಿಗೆ 4 ಗಂಟೆ ಚಿತ್ರಹಿಂಸೆ – ಪಾರಾಗಲು ಯತ್ನಿಸಿದ್ದಕ್ಕೆ ಚಾಕು ಇರಿದ ಪಾಪಿ ಪತಿ
ತನಿಖೆ ವೇಳೆ ಬಯಲಾದ ಅಸಲಿ ಸತ್ಯನೇ ಬೇರೆ ಆಗಿತ್ತು. ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ. ಸ್ವತಹ ನಾದಿನಿ ಭವ್ಯಾಳೆ ಅನ್ನೋದು ಗೊತ್ತಾಗಿದೆ. ಅತ್ತಿಗೆಯ ಚಿನ್ನಾಭರಣ ಕಳ್ಳತನ ಮಾಡಲು ಹೊಸಕೋಟೆ ಮೂಲದ ಸಹೋದರ ಸಂಬಂಧಿ ಲೋಹಿತ್ ಅಲಿಯಾಸ್ ಲಲ್ಲು ಜೊತೆ ಸೇರಿ ಕೊಲೆ ಮಾಡಿರೋದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.

ತಂಗಿ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್ ಮೇಲ್!
ಪುಷ್ಪಲತಾ ಕೊಲೆ ಪ್ರಕರಣ ರಹಸ್ಯ ತಿಳಿಯುತ್ತಿದ್ದಂತೆ ಪೊಲೀಸರು, ಮೃತಳ ನಾದಿನಿ ಭವ್ಯಾ ಹಾಗೂ ಆಕೆಯ ಸಹೋದರ ಸಂಬಂಧಿ ಹೊಸಕೋಟೆ ಮೂಲದ ಲೋಹಿತ್ ಕುಮಾರ್ ಅಲಿಯಾಸ್ ಲುಲ್ಲು ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ, ಭವ್ಯಾ ಮದುವೆ ಆಗಿದ್ರೂ ತನ್ನ ಬಾಯ್‌ಫ್ರೆಂಡ್ ಜೊತೆ ಸಂಬಂಧ ಹೊಂದಿದ್ದಳಂತೆ. ಅದೇ ವಿಡಿಯೋಗಳನ್ನ ಇಟ್ಟುಕೊಂಡು ಬಾಯ್ ಫ್ರೆಂಡ್ ಸಹ ಬ್ಲಾಕ್ ಮೇಲ್ ಮಾಡ್ತಿದ್ದಾನಂತೆ. ಹೀಗಾಗಿ ಬಾಯ್ ಫ್ರೆಂಡ್ ಗೆ ವಾರ್ನಿಂಗ್ ಕೊಟ್ಟು ಬುದ್ಧಿ ಕಲಿಸು ಅಂತ ಖಾಸಗಿ ವಿಡಿಯೊಗಳನ್ನು ಲೋಹಿತ್‌ಗೆ ಕಳಿಸಿದ್ದಳಂತೆ. ಆದ್ರೆ ಲೋಹಿತ್ ಅದೇ ವಿಡಿಯೋ ಗಳನ್ನ ಇಟ್ಟುಕೊಂಡು ಭವ್ಯಾಗೆ ಬ್ಲಾಕ್ ಮೇಲ್ ಮಾಡಿದ್ದಾನೆ.
2-3 ಬಾರಿ ಲಕ್ಷ ಲಕ್ಷ ಹಣ ಕೊಟ್ಟಿದ್ದ ಭವ್ಯ ಬಳಿ ಮತ್ತೆ ಹಣ ಇರಲಿಲ್ಲ. ಇದ್ರಿಂದ ಆತನಿಗೆ ಮತ್ತೆ ಹಣ ಕೊಡಲು ಅತ್ತಿಗೆಯ ಚಿನ್ನಾಭರಣವನ್ನೇ ಕದ್ದುಕೊಂಡು ಹೋಗು ನಾನು ಹೆಲ್ಪ್ ಮಾಡ್ತೀನಿ ಅಂತ ಮನೆಗೆ ಕರೆಸಿಕೊಂಡಿದ್ದಾಳೆ. ಮನೆಯಲ್ಲಿ ಎಲ್ಲರೂ ಟ್ರಿಪ್‌ಗೆ ಅಂತ ಹೋಗಿದ್ದಾಗ ಲೋಹಿತ್‌ನನ್ನು ಮನೆಗೆ ಕರೆಸಿಕೊಂಡು ಪುಷ್ಪಲತಾಳ ಸರ ಚಿನ್ನಾಭರಣ ದೋಚುವ ಸಂಚು ಮಾಡಿದ್ದಾರೆ. ಆಕೆ ಬದುಕಿದ್ರೆ ತಮಗೆ ಕಷ್ಟ ಅಂತ ತಿಳಿದು ಪುಷ್ಪಲತಾಳನ್ನ ದಿಂಬಿ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಸರ ಕಿವಿ ಓಲೆ ಕದ್ದಿದ್ದಾರೆ.
ಭವ್ಯ ಪ್ಲ್ಯಾನ್‌ಗೆ ಅಜ್ಜಿ, ತಾಯಿಯೂ ಸಾಥ್!?
ಅತ್ತಿಗೆಯ ಕೊಲೆಗೈದು ಆಕೆಯ ಚಿನ್ನಾಭರಣ ದೊಚಿದ್ದಲ್ಲದೆ. ಮಾಡಿದ ಪಾಪ ಮುಚ್ಚಿಟ್ಟುಕೊಳ್ಳಲು ಸಿನಿಮಾ ಕಥೆ ಕಟ್ಟಿದ್ದ ಆರೋಪಿಗಳಾದ ಭವ್ಯಾ ಹಾಗೂ ಲೊಹಿತ್ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇನ್ನೂ , ಭವ್ಯಾಳ ಸ್ಕೇಚ್ ಗೆ ಆಕೆಯ ತಾಯಿ ವಿಜಯಮ್ಮ, ಅಜ್ಜಿ ನಾಗಮ್ಮ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದ್ದು ಪೋಲಿಸರು ಅವರನ್ನ ಸಹ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಕಟ್ಟಡದಲ್ಲೇ ಸೆಕ್ಯೂರಿಟಿ ಗಾರ್ಡ್ ನೇಣಿಗೆ ಶರಣು
