ಲಂಡನ್: ಫ್ರೆಶ್ ಆಗಿ ಆರ್ಡರ್ ಮಾಡಿದ್ದ ಕೆಎಫ್ಸಿ ಹಾಟ್ ವಿಂಗ್ಸ್ ಬಾಕ್ಸ್ನಲ್ಲಿ ಕೋಳಿ ತಲೆ ಸಿಕ್ಕಿರುವುದನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ. ಇನ್ನು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಗೇಬ್ರಿಯಲ್ ಎಂಬ ಮಹಿಳೆ ಆಗ್ನೇಯ ಲಂಡನ್ನ ಟ್ವಿಕನ್ ಹ್ಯಾಮ್ನಲ್ಲಿರುವ ಕೆಎಫ್ಸಿ ಫೆಲ್ತಮ್ನಿಂದ ಚಿಕನ್ ಹಾಟ್ ವಿಂಗ್ಸ್ ಆರ್ಡರ್ ಮಾಡಿದ್ದರು. ಈ ಹಾಟ್ ವಿಂಗ್ಸ್ ಬಾಕ್ಸ್ನಲ್ಲಿರುವ ಚಿಕನ್ ತಿನ್ನುವ ವೇಳೆ ಅವರಿಗೆ ಕೋಳಿ ತಲೆ ಕಂಡುಬಂದಿದೆ. ಆಗ ಅದನ್ನು ಕಂಡು ಉಳಿದ ಚಿಕನ್ ಸಹ ಸೇವಿಸಲು ಸಾಧ್ಯವಾಗದೇ ಎಸೆದಿದ್ದಾರೆ. ಎಸೆಯುವ ಮುನ್ನ ಅದರ ಫೋಟೋವನ್ನು ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಗ್ ಒಳಗಡೆ ಡಿವೈಸ್ – ಪೊಲೀಸ್ ಪರೀಕ್ಷೆಯ ವೇಳೇ ಸಿಕ್ಕಿ ಬಿದ್ದ ಭೂಪ
Advertisement
View this post on Instagram
Advertisement
ಫೋಟೋದಲ್ಲಿ ಕೊಕ್ಕನ್ನು ಸಹ ಕತ್ತರಿಸದೇ ಇಡೀ ತಲೆಯನ್ನು ಗರಿಗರಿಯಾಗಿ ಬೇಯಿಸಿ ಹಾಗೆಯೇ ನೀಡಿರುವುದನ್ನು ಕಾಣಬಹುದಾಗಿದೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವಾರು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ
Advertisement
ಕೆಎಫ್ಸಿ ಪ್ರತಿಕ್ರಿಯೆ: ಈ ಘಟನೆ ಸಂಬಂಧ ಕೆಎಫ್ಸಿ ತನ್ನ ಅಧಿಕೃತ ಟ್ವಿಟ್ಟರ್ನಲ್ಲಿ ಈ ಫೋಟೋ ನೋಡಿ ನಾವು ಸಹ ಶಾಕ್ ಆಗಿದ್ದೇವೆ. ಇದು ಹೇಗೆ ಸಂಭವಿಸಿತು ಎಂಬುವುದರ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸರಳವಾಗಿ ಹೇಳುವುದಾದರೆ ನಾವು ಗ್ರಾಹಕರಿಗೆ ನಿಜವಾದ ಚಿಕನ್ ಅನ್ನು ಒದಗಿಸುತ್ತೇವೆ ಮತ್ತು ಈ ವಿಚಾರದ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ನಮ್ಮ ರೆಸ್ಟೋರೆಂಟ್ ಸಿಬ್ಬಂದಿಯಿಂದ ಈ ಘಟನೆ ನಡೆದಿರಬಹುದು. ಹಾಗಾಗಿ ಅವರು ಯಾರೆಂದು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದೆ.