ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 20ಕ್ಕೆ (Bigg Boss 20) ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಶೋನ ಫಾರ್ಮ್ಯಾಟ್ ಸಾಕಷ್ಟು ವಿಭಿನ್ನವಾಗಿರಲಿದ್ದು, ಸ್ಪರ್ಧಿಗಳಿಗೆ ಮನೆಯಲ್ಲಿ ಒಂದಲ್ಲ, ಎರಡು ಅವಕಾಶಗಳು ಸಿಗಲಿವೆ ಎಂಬ ಸುಳಿವನ್ನು ಈಗಾಗಲೇ ಪ್ರೋಮೋ ಮೂಲಕ ಸಲ್ಮಾನ್ ಖಾನ್ (Salman Khan) ನೀಡಿದ್ದಾರೆ.
ಶೋ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಈ ಬಾರಿ ಸ್ಪರ್ಧಿಯೊಬ್ಬರ ಆಯ್ಕೆ ಸಂಪೂರ್ಣವಾಗಿ ಅಭಿಮಾನಿಗಳ ಮತದಾನದ ಮೇಲೆ ನಿರ್ಧಾರವಾಗಲಿದೆ.
View this post on Instagram
ಬಿಗ್ ಬಾಸ್ ಮನೆಗೆ ಈ ಇಬ್ಬರಲ್ಲಿ ಒಬ್ಬರು!
ಬಿಗ್ ಬಾಸ್ 20ರಲ್ಲಿ ಕಾಣಿಸಿಕೊಳ್ಳಲಿರುವ ಹೊಸ ಮುಖಗಳ ಬಗ್ಗೆ ಒಂದೊಂದೇ ಮಾಹಿತಿ ಹೊರಬರುತ್ತಿದೆ. ಸಲ್ಮಾನ್ ಖಾನ್ ಹೊಸ ಪ್ರೋಮೋದಲ್ಲಿ ‘ಫ್ಯಾನ್ಸ್ ಕಾ ಫೈಸ್ಲಾ’ ಎಂಬ ವಿಶೇಷ ಸ್ಪರ್ಧೆಯನ್ನ ಘೋಷಿಸಿದ್ದಾರೆ. ಈ ಸ್ಪರ್ಧೆಯಲ್ಲಿ ರಿಯಾ ಅಹೀರ್ ಮತ್ತು ಲವ್ ಗಿಲ್ ಎಂಬ ಇಬ್ಬರು ಹೆಸರುಗಳು ಮುನ್ನೆಲೆಗೆ ಬಂದಿವೆ. ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ಮತಗಳು ಸಿಗುತ್ತವೆಯೋ, ಅವರಿಗೇ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಗಲಿದೆ.
ಅಂತಿಮವಾಗಿ ಯಾರು ಬಿಗ್ ಬಾಸ್ ಮನೆಯ ಸದಸ್ಯರಾಗುತ್ತಾರೆ ಎಂಬುದನ್ನ ಪ್ರೀಮಿಯರ್ ದಿನವೇ ರಾಷ್ಟ್ರೀಯ ವಾಹಿನಿಯಲ್ಲಿ ಬಹಿರಂಗಪಡಿಸಲಾಗುತ್ತದೆ.
View this post on Instagram
ಯಾರು ಈ ರಿಯಾ ಅಹೀರ್?
ರಿಯಾ ಅಹೀರ್ (Rhiya Ahir) ಕಳೆದ ತಿಂಗಳು ಮುಂಬೈನಲ್ಲಿ ನಡೆದ NEET ಪ್ರತಿಭಟನೆ ವೇಳೆ ಸುದ್ದಿಯಾಗಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಅವರು ರಸ್ತೆಯ ಮಧ್ಯೆ ಪೊಲೀಸ್ ವ್ಯಾನ್ ಅನ್ನು ತಡೆದು ನಿಂತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಮಳೆಯ ನಡುವೆ ಪೊಲೀಸ್ ವ್ಯಾನ್ ಅನ್ನು ಕೈಗಳಿಂದ ತಡೆಯುತ್ತಿರುವ ರಿಯಾ ಅವರ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಇದರಿಂದಾಗಿ ಅವರು ಒಂದೇ ರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು.
ರಿಯಾ ಈಗಾಗಲೇ ಮುಂಬೈನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಪ್ರತಿಭಟನೆಯ ಸಂದರ್ಭದ ವೈರಲ್ ದೃಶ್ಯದಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ರಿಯಾ ಅಭಿಮಾನಿಗಳ ಬೆಂಬಲವನ್ನು ಕೇಳಿದ್ದಾರೆ. ʻನನ್ನನ್ನು ನೀವು ಈಗಾಗಲೇ ನೋಡಿದ್ದೀರಿ, ಇನ್ನು ನನ್ನ ಜರ್ನಿಯನ್ನು ನೋಡಬೇಕಾದ ಸಮಯʼ ಎಂಬ ರೀತಿಯಲ್ಲಿ ಅವರು ಜನರಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.

ಲವ್ ಗಿಲ್ ಯಾರು?
ರಿಯಾ ಅಹೀರ್ ಎದುರು ಸ್ಪರ್ಧಿಸುತ್ತಿರುವ ಮತ್ತೊಂದು ಹೆಸರು ಪಂಜಾಬಿ ನಟಿ ಲವ್ ಗಿಲ್. ಪಂಜಾಬಿ ಚಿತ್ರರಂಗದಲ್ಲಿ ಪರಿಚಿತ ಮುಖವಾಗಿರುವ ಲವ್ ಗಿಲ್ ಅವರಿಗೆ ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಖ್ಯಾತ ಗಾಯಕ ಕರಣ್ ಔಜ್ಲಾ ಅವರ Facts ಹಾಡಿನಲ್ಲೂ ಲವ್ ಗಿಲ್ ಕಾಣಿಸಿಕೊಂಡಿದ್ದಾರೆ.
ಈಗ ಬಿಗ್ ಬಾಸ್ 20ರ ಮೂಲಕ ಹಿಂದಿ ಕಿರುತೆರೆಯಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ಅವಕಾಶ ಲವ್ ಗಿಲ್ ಅವರಿಗೆ ಸಿಕ್ಕಿದೆ. ರಿಯಾ ಅಹೀರ್‌ಗಿಂತ ಹೆಚ್ಚು ಮತಗಳನ್ನು ಪಡೆದುಕೊಂಡರೆ ಲವ್ ಗಿಲ್ ಬಿಗ್ ಬಾಸ್ ಮನೆಯ ಸದಸ್ಯರಾಗಲಿದ್ದಾರೆ.

ಸೆ.2ರ ವರೆಗೆ ಮತದಾನಕ್ಕೆ ಅವಕಾಶ
ಬಿಗ್ ಬಾಸ್ 20ರ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಶೋನ ನಿರ್ಮಾಪಕರು ನೀಡಿದ್ದಾರೆ. ಮೇಕರ್ಸ್ ಪ್ರಕಾರ, ಸೆಪ್ಟೆಂಬರ್ 2ರವರೆಗೆ ಪ್ರೇಕ್ಷಕರು ತಮ್ಮ ನೆಚ್ಚಿನ ರಿಯಾ ಅಹೀರ್ ಅಥವಾ ಲವ್ ಗಿಲ್ ಅವರಿಗೆ ಮತ ಹಾಕಬಹುದು. ಇದಾದ ಬಳಿಕ ಸೆಪ್ಟೆಂಬರ್ 6ರಂದು ಬಿಗ್ ಬಾಸ್ 20ರ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಹೋಸ್ಟ್ ಆಗಿ ಕಿರುತೆರೆಗೆ ಮರಳಲಿದ್ದಾರೆ.
