ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಶ್ಮಿಕಾ (Rashmika Mandanna) ಇತ್ತೀಚೆಗೆ ಕಾಸ್ಟ್ಲಿ ಅನಾರ್ಕಲಿಯಲ್ಲಿ ಮಿಂಚಿದ್ದು, ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿದ್ದ ದುಬಾರಿ ಉಡುಪು ಫುಲ್ ವೈರಲ್ ಆಗುತ್ತಿದೆ.
ನಿರ್ಮಾಪಕ ಸಿರ್ಗಪುರ ನಿರಂಜನ್ ರೆಡ್ಡಿ ಅವರ ಪುತ್ರನ ನಿಶ್ಚಿತಾರ್ಥ (Celebrity Fashion) ಸಮಾರಂಭದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡಿದ್ದು, ಇಬ್ಬರ ಎಂಟ್ರಿ ಎಲ್ಲರ ಗಮನ ಸೆಳೆದಿದೆ.
ಇಬ್ಬರೂ ಕೈ ಹಿಡಿದುಕೊಂಡೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಗಾಯದಿಂದ ಪೂರ್ತಿಯಾಗಿ ಚೇತರಿಕೆಯಾಗದಿದ್ದರೂ ಕುಂಟುತ್ತಲೇ ರಶ್ಮಿಕಾ ಕಾರಿನಿಂದ ಇಳಿದ ವಿಡಿಯೋ ವೈರಲ್ ಆಗಿದೆ. ಈ ವೇಳೆ ರಶ್ಮಿಕಾ ಧರಿಸಿದ್ದ ಅನಾರ್ಕಲಿ ಕೂಡ ಸಾಕಷ್ಟು ಗಮನ ಸೆಳೆಯಿತು. ನಟಿ ಸುಮಾರು 89,900 ರೂ. ಮೌಲ್ಯದ ಸುರೀನಾ ಚೌಧರಿ ಡಿಸೈನರ್ ಅನಾರ್ಕಲಿ ಧರಿಸಿದ್ದರು.
ಬಾಟಲ್ ಗ್ರೀನ್ ಬಣ್ಣದ ಈ ಅನಾರ್ಕಲಿಯನ್ನು ಸಿಲ್ಕ್ ವೆಲ್ವೆಟ್ ಬಟ್ಟೆಯಿಂದ ತಯಾರಿಸಲಾಗಿದ್ದು, ರಾಯಲ್ ಲುಕ್ ನೀಡುತ್ತಿತ್ತು. ಅದಕ್ಕೆ ಮ್ಯಾಚಿಂಗ್ ಬಾಟಲ್ ಗ್ರೀನ್ ದುಪಟ್ಟಾವನ್ನೂ ಧರಿಸಿದ್ದರು. ನೆಕ್‌ಲೈನ್, ಹೆಮ್‌ಲೈನ್ ಮತ್ತು ದುಪಟ್ಟಾದ ಮೇಲಿದ್ದ ಆರಿ ಹಾಗೂ ಜರ್ದೋಜಿ ವರ್ಕ್ ಡ್ರೆಸ್‌ನ ಲುಕ್ ಅನ್ನು ಮತ್ತಷ್ಟು ಎಲಿಗಂಟ್ ಮಾಡಿತ್ತು. ಇದನ್ನೂ ಓದಿ: ಅಂಥೋಣಿ ದಾಸ್ ಕಂಠದಲ್ಲಿ ಪ್ರೀತಿ ತುಂಬಿದ ‘ಸಿಟಿ ಲೈಟ್ಸ್’ ಸಾಂಗ್
ರಶ್ಮಿಕಾ ತಮ್ಮ ಕೂದಲನ್ನು ಮಧ್ಯದಲ್ಲಿ ಪಾರ್ಟಿಷನ್ ಮಾಡಿಕೊಂಡು ಓಪನ್‌ಹೇರ್ ಬಿಟ್ಟಿದ್ದರು. ಜೊತೆಗೆ ಚೋಕರ್ ನೆಕ್‌ಪೀಸ್ ಮತ್ತು ಬಲಗೈಗೆ ಸ್ಟಡ್ಡ್ ಕಾಡಾ ಧರಿಸಿ ಸಿಂಪಲ್ ಆಗಿಯೇ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ವಿಜಯ್ ದೇವರಕೊಂಡ ಸಂಪೂರ್ಣ ಬ್ಲ್ಯಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಕಪ್ಪು ಪ್ಯಾಂಟ್ ಜೊತೆ ಬ್ಲ್ಯಾಕ್ ವೆಲ್ವೆಟ್ ಬಂಧ್‌ಗಲಾ ಧರಿಸಿದ್ದರು. ಇಬ್ಬರ ಜೋಡಿ ಎಂಗೇಜ್‌ಮೆಂಟ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಗಾಯದ ಬಳಿಕ ರಶ್ಮಿಕಾ ಕಮ್‌ಬ್ಯಾಕ್
`ಮೈಸಾ’ ಸಿನಿಮಾದ ಶೂಟಿಂಗ್ ವೇಳೆ ರಶ್ಮಿಕಾ ಗಾಯಗೊಂಡಿದ್ದರು. ಈ ಬಗ್ಗೆ ಸ್ವತಃ ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಮೂರನೇ ಬಾರಿಗೆ ಗಾಯ ಮಾಡಿಕೊಂಡಿರುವ ನಟಿ, ದೇಹವನ್ನು ಯಂತ್ರದಂತೆ ನೋಡಿಕೊಳ್ಳದೆ ಮಾನವ ದೇಹದಂತೆ ಕಾಳಜಿ ವಹಿಸುವುದನ್ನು ಕಲಿಯಬೇಕು ಎಂದು ಹೇಳಿದ್ದರು.
ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ವೇಳೆ ರಶ್ಮಿಕಾ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಒಗಟು ಬಿಡಿಸುವುದು, ಪುಸ್ತಕ ಓದುವುದು, ಕಾರ್ಯಕ್ರಮಗಳನ್ನು ನೋಡುವುದು, ಮೀಟಿಂಗ್‌ಗಳಲ್ಲಿ ಭಾಗವಹಿಸುವುದು ಸೇರಿದಂತೆ ತಮ್ಮ ಸಮಯವನ್ನು ಕಳೆಯುತ್ತಿದ್ದರು.
ವ್ಯಾಯಾಮ ಹಾಗೂ ರನ್ನಿಂಗ್‌ಗೆ ಬ್ರೇಕ್ ನೀಡಬೇಕಾಗಿದ್ದರಿಂದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಇದೀಗ ಚೇತರಿಸಿಕೊಂಡು ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡಿರುವ ರಶ್ಮಿಕಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ದರ್ಶನ್ ಅವ್ರನ್ನ ಮದುವೆಗೆ ಕರೆದ್ರೂ ಬರುವಂತಿಲ್ಲ: ಚಿಕ್ಕಣ್ಣ
