ಇದೇ ಆಗಸ್ಟ್ 29, 30 ರಂದು ಹಾಸ್ಯನಟ ಚಿಕ್ಕಣ್ಣ ಮದುವೆ ಗೊತ್ತಾಗಿದೆ. ಈ ಹಿನ್ನೆಲೆ ಚಿಕ್ಕಣ್ಣ ಹಲವು ಕಲಾವಿದರನ್ನ ಮದುವೆಗೆ ಆಹ್ವಾನಿಸಿದ್ದಾರೆ. ಸಹಜವಾಗೇ ದರ್ಶನ್ ಆಪ್ತರಾಗಿರೋ ಚಿಕ್ಕಣ್ಣ ಔಪಚಾರಿಕ ರೂಪದಲ್ಲಾದ್ರೂ ದರ್ಶನ್ ಅವ್ರನ್ನ ಆಹ್ವಾನಿಸಿರಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಈಗಲೂ ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿ ಇರೋದ್ರಿಂದ ಚಿಕ್ಕಣ್ಣನ ಮದುವೆಗೆ ದರ್ಶನ್ ಹೋಗುವುದು ಸಾಧ್ಯವಿಲ್ಲದ ಮಾತು. ಆದರೂ ಆಪ್ತರಾಗಿರುವ ಕಾರಣ ಔಪಚಾರಿಕವಾಗಿ ಆಮಂತ್ರಣ ನೀಡಿದರೇ ಎಂಬ ಪ್ರಶ್ನೆಗೆ ಚಿಕ್ಕಣ್ಣ ಉತ್ತರ ಕೊಟ್ಟಿದ್ದಾರೆ.
ದರ್ಶನ್ ಅವರ ಪ್ರಕರಣದಲ್ಲಿ ನಾನು ಸಾಕ್ಷಿ ಆಗಿರೋದ್ರಿಂದ ಅವರು ಜೈಲಲ್ಲಿ ಇರದೆ ಹೊರಗಿದ್ದರೂ ಅವರನ್ನು ಕರೆಯುವಂತಿಲ್ಲ. ಅವರೂ ಬರಲು ಸಾಧ್ಯವಿಲ್ಲ. ಹೀಗಾಗೇ ಕರೆದಿಲ್ಲ ಎಂದು ಕ್ಲಾರಿಫಿಕೇಷನ್ ನೀಡಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿ ಆಗಿರೋದ್ರಿಂದ ನಾನು ಅವರ ಬಗ್ಗೆ ಇಷ್ಟೇ ಹೇಳಲು ಸಾಧ್ಯ ಎಂದಿದ್ದಾರೆ ಚಿಕ್ಕಣ್ಣ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಡಿ ಗ್ಯಾಂಗ್ ವಿರುದ್ಧದ ಆರೋಪಕ್ಕೆ ನಟ ಚಿಕ್ಕಣ್ಣ ಪ್ರಮುಖ ಸಾಕ್ಷಿ. ಕಳೆದ ಬಾರಿ ಹೈಕೋರ್ಟ್‌ನಿಂದ ಮಧ್ಯಂತರ ಬೇಲ್ ಸಿಕ್ಕಿದ್ದಾಗ ದರ್ಶನ್ ಚಿಕ್ಕಣ್ಣರನ್ನು ಸಿನಿಮಾ ಪ್ರಚಾರದ ಉದ್ದೇಶಕ್ಕೆ ಭೇಟಿ ಮಾಡಿದ್ದೂ ಕೂಡ ತೀವ್ರ ಕಾನೂನು ತಿರುವು ಪಡೆದುಕೊಳ್ಳಲು ದಾರಿಮಾಡಿಕೊಟ್ಟಿತ್ತು. ಇದೀಗ ಮತ್ತೆ ಅಂಥಹ ಕಾನೂನು ವಿರುದ್ಧದ ಚಟುವಟಿಕೆ ಮಾಡದಿರಲು ಚಿಕ್ಕಣ್ಣ ಯೋಚಿಸಿರುವಂತಿದೆ. ಹೀಗಾಗಿ ಚಿಕ್ಕಣ್ಣ ಮದುವೆಗೆ ದರ್ಶನ್‌ರನ್ನು ಆಹ್ವಾನಿಸಿಲ್ಲ ಎಂದು ಕ್ಲಾರಿಫಿಕೇಷನ್ ನೀಡಿದ್ದಾರೆ.
