– 3-4 ವಾರ ಕಾಲಾವಕಾಶ ನೀಡಲು ಕೋರಿಕೆ
– ಮತದಾರರ ಬಗ್ಗೆ ಗಮನ ಕೊಡಲು ಶಾಸಕರಿಗೆ ಸೂಚನೆ
ಬೆಂಗಳೂರು: ರಾಜ್ಯದ ಎಸ್‌ಐಆರ್ (SIR) ಕರಡು ಪಟ್ಟಿ ಪ್ರಕಟವಾಗಿದ್ದು, 1.7 ಕೋಟಿ ಮತದಾರರು ಎಎಸ್‌ಡಿಡಿಓ ವ್ಯಾಪ್ತಿಯಲ್ಲಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಎರಡು ಪುಟಗಳ ಪತ್ರ ಬರೆದಿದ್ದಾರೆ.
1.07 ಕೋಟಿಗೂ ಹೆಚ್ಚು ಮತದಾರರನ್ನು ಎಎಸ್‌ಡಿಡಿಓ ಎಂದು ಗುರುತಿಸಲಾಗಿದೆ. ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನ ನೀಡಲಾಗುತ್ತಿದೆ. ಈ ಕುರಿತು ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಡಿಕೆಶಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚಾ.ನಗರ ಬೇಟೆಗಾರರ ಎನ್‌ಕೌಂಟರ್ ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್
The SIR in Karnataka has thrown up alarming numbers. Over 1.08 crore voters are marked as ASDDO and about 43 lakh voters are set to receive notices for logical discrepancies. I have requested the CEC Shri Gyanesh Kumar to take the following actions:
1. Extend the period for… pic.twitter.com/HoUeVWBWex
— DK Shivakumar (@DKShivakumar) August 25, 2026
ನೋಟಿಸ್‌ಗಳನ್ನ ಪಡೆಯುವ ಮತದಾರರಿಗೆ ಈಗ ನೀಡಲಾಗಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ಕನಿಷ್ಠ 3-4 ವಾರಗಳ ಕಾಲಾವಕಾಶ ನೀಡಬೇಕು. ಚುನಾವಣೆ ಹಕ್ಕಿನಿಂದ ಯಾರೂ ಕೂಡ ವಂಚಿತರಾಗಬಾರದು ಅನ್ನೋದೇ ತಮ್ಮ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಡಿಕೆಶಿ ನನ್ನನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ನಂಬಿಕೆ ಇದೆ: ಕೆ.ವೈ.ನಂಜೇಗೌಡ
ಈ ಮಧ್ಯೆ, 27 ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಜಿಲ್ಲಾವಾರು ಸಭೆ ನಡೆಸಿದ ಸಿಎಂ, ಎಸ್‌ಐಆರ್ ಬಗ್ಗೆ ವಿಶೇಷ ಗಮನ ಕೊಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಜೀವಿತಾವಧಿವರೆಗೆ ಫ್ರೀ ಬಸ್ – ಯೋಗಿ ಸರ್ಕಾರ ಬಂಪರ್ ಗಿಫ್ಟ್
