ChikkaballapurCrimeDistrictsKarnatakaLatestMain Post

ಸುಳ್ಳಾದ ಆತ್ಮಹತ್ಯೆ ನಾಟಕ – ಪತಿಗೆ ಮೂಹೂರ್ತ ಇಟ್ಟಿದ್ದ ಪತ್ನಿ, ಪ್ರಿಯಕರ ಅರೆಸ್ಟ್

Advertisements

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ ಎಂಬ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ದಾಪಾಪೀರ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಪತ್ನಿ ಮೆಹರ್ ಹಾಗೂ ಪ್ರಿಯಕರ ತೌಸೀಫ್ ಆರೋಪಿಗಳಾಗಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ 2021 ನವೆಂಬರ್ 26 ರಂದು ದಾದಾಪೀರ್ ಮನೆಯಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಹೆಂಡತಿ ಮೆಹರ್ ತನ್ನ ಗಂಡ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಅಕ್ಕ-ಪಕ್ಕದ ಮನೆಯವರೆನ್ನೆಲ್ಲಾ ಕರೆದು, ಅವರ ಮುಂದೆಯೇ ಬಾಗಿಲು ಒಡೆದು ಹಾಕಿ, ನಾಟಕ ಮಾಡಿ ಆತ್ಮಹತ್ಯೆಯ ಕಥೆ ಕಟ್ಟಿದ್ದಳು. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿದ್ದ ದಿಬ್ಬೂರಹಳ್ಳಿ ಪಿಎಸ್‍ಐ ಪಾಪಾಣ್ಣ ಹಾಗೂ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಎಫ್ ಎಸ್‍ಎಲ್ ವರದಿ ಆಧಾರದ ಮೇಲೆ ಮೃತನ ಪತ್ನಿಯ ನಡೆ ಅನುಮಾನಿಸಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಹೀಗಾಗಿ ಸದ್ಯ ಪ್ರಿಯಕರ ತೌಸೀಫ್ ಹಾಗೂ ಪತ್ನಿ ಮೆಹರ್ ಅನ್ನು ಶಿಡ್ಲಘಟ್ಟ ವೃತ್ತ ನೀರೀಕ್ಷಕ ಧರ್ಮೇಗೌಡ ನೇತೃತ್ವದಲ್ಲಿ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ – ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ

ಮೆಹರ್ ಹಾಗೂ ತೌಸೀಫ್ ದಾಪಾಪೀರ್‌ಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿದ್ದರು. ತದನಂತರ ಪ್ರಿಯಕರ ಚಿಕನ್ ಅಂಗಡಿಯಲ್ಲಿ ಕೋಳಿ ಕ್ಲೀನ್ ಮಾಡುವ ಗ್ಯಾಸ್ ಗನ್ ನಿಂದ ಮೃತದೇಹವನ್ನ ಸುಟ್ಟು ಹಾಕಿದ್ದಾನೆ. ನಿದ್ರೆ ಮಾತ್ರೆ ಸೇವಿಸಿದ್ದ ಪರಿಣಾಮ ಅರೆ ಪ್ರಜ್ಞಾವಸ್ಥೆಗೆ ಜಾರಿದ್ದ ಗಂಡ ದಾದಾಪೀರ್ ಮೇಲೆ ಏಳಲಾಗದೇ ಸುಟ್ಟು ಹೋಗಿ ಸಾವನ್ನಪ್ಪಿದ್ದರು. ಅಲ್ಲದೇ ಈ ಪ್ರಕರಣ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Live Tv

Leave a Reply

Your email address will not be published.

Back to top button