ಚಾಮರಾಜನಗರ: ಕಾಡಾನೆಯೊಂದು ಆಹಾರಕ್ಕಾಗಿ ತರಕಾರಿ ತುಂಬಿಕೊಂಡು ಸಾಗುತ್ತಿದ್ದ ವಾಹನ ಅಡ್ಡಗಟ್ಟಲು ಮುಂದಾದ ಪ್ರಸಂಗ ಗುಂಡ್ಲುಪೇಟೆ (Gundlupet) ತಾಲೂಕಿನ ಬಂಡೀಪುರದಲ್ಲಿ (Bandipur) ನಡೆದಿದೆ.
ವಾಹನವೊಂದು ತರಕಾರಿ ತುಂಬಿಕೊಂಡು ರಸ್ತೆಯಲ್ಲಿ ಸಾಗುತ್ತಿತ್ತು. ಈ ವೇಳೆ, ಕಾಡಾನೆ ಏಕಾಏಕಿ ರಸ್ತೆ ಮಧ್ಯಕ್ಕೆ ಎಂಟ್ರಿ ಕೊಟ್ಟಿದೆ. ವಾಹನ ಅಡ್ಡಗಟ್ಟಿ ತರಕಾರಿಗೆ ಮುಚ್ಚಿದ್ದ ಟಾರ್ಪಲ್ ತೆಗೆದು ಆಹಾರ ತಿನ್ನಲು ಮುಂದಾಗಿದೆ. ಇದನ್ನೂ ಓದಿ: ಕಲ್ಲು ಕ್ವಾರಿ ದುರಂತ – ಅಧಿಕೃತ ವರದಿ ಬಂದ ಬಳಿಕ ಕ್ರಮಗಳ ಬಗ್ಗೆ ತೀರ್ಮಾನ: ಡಿಕೆಶಿ
ವಾಹನದಲ್ಲಿದ್ದ ಕ್ಯಾರೆಟ್‌ನ್ನು ಕಾಡಾನೆ ರಸ್ತೆಗೆ ಬೀಳಿಸಿತು. ಈ ವೇಳೆ ಚಾಲಕ ವಾಹನವನ್ನು ಮುಂದೆ ಚಲಾಯಿಸಿದ್ದಾನೆ. ಆಗ ರಸ್ತೆಗೆ ಬಿದ್ದ ಕ್ಯಾರೆಟ್ ಅನ್ನು ಆನೆ ಆಯ್ದು ತಿಂದಿತು. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
