– ವೈಭವ್ ಆಟ ನೋಡಲು ಆಗಮಿಸಿದ್ದ ಫ್ಯಾನ್ಸ್‌ಗೆ ಭಾರೀ ನಿರಾಸೆ
ಬೆಲ್‌ಫಾಸ್ಟ್: ಭಾರತೀಯ ಕ್ರಿಕೆಟ್ ತಂಡದ ಪರ ವೈಭವ್ ಸೂರ್ಯವಂಶಿ (Vaibhav Sooryavanshi) ಪದಾರ್ಪಣೆ ಪಂದ್ಯವನ್ನ ಕಣ್ತುಂಬಿಕೊಳ್ಳಲು ಕಾದುಕುಳಿತಿದ್ದ ಕ್ರಿಕೆಟ್ ಫ್ಯಾನ್ಸ್‌ಗೆ (Cricket Fans) ಭಾರೀ ನಿರಾಸೆಯಾಗಿದೆ.
ಭಾರತ ಮತ್ತು ಐರ್ಲೆಂಡ್ (India Vs Ireland) ನಡುವಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಅನುಭವಿ ಆಟಗಾರರಿಗೇ ಮೊರೆ ಹೋಗಿದ್ದರಿಂದ 15ರ ಬಾಲಕ ವೈಭವ್ ಪದಾರ್ಪಣೆ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ಡ್ರೆಸ್ಸಿಂಗ್ ರೂಮ್ ನಿಷೇಧ – ಐಸಿಸಿ ಕೈ ಕಟ್ಟಿ ಹಾಕಿದ ಯುಕೆ ಕಾಯ್ದೆ
VAIBHAV SOORYAVANSHI’S FIRST NET SESSION WITH TEAM INDIA. 🇮🇳 pic.twitter.com/5sH0O3hAiT
— Mufaddal Vohra (@mufaddal_vohra) June 26, 2026
ಬೆಲ್ ಫಾಸ್ಟ್ ಸ್ಟೋರ್ಮಂಟ್ ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರು ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇದು ಅಯ್ಯರ್ ಅವರ ನಾಯಕತ್ವದಲ್ಲಿ ಭಾರತ ತಂಡ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿದೆ.
ವೈಭವ್ ಕೈಬಿಟ್ಟಿದ್ದೇಕೆ?
ಟಾಸ್ ಗೆದ್ದ ಬಳಿಕ ಪ್ಲೇಯಿಂಗ್-11 ನಿಂದ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿದರು. ಇದನ್ನೂ ಓದಿ: FIFA World Cup| ಮುಸ್ಲಿಂ ಆಟಗಾರರಿಗೆ ವಿಭಿನ್ನ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ನೀಡೋದು ಯಾಕೆ?
Indian batting coach on Vaibhav Sooryavanshi. pic.twitter.com/CLvzlKdHlR
— Mufaddal Vohra (@mufaddal_vohra) June 26, 2026
ಇದು ನಮಗೆ ಹೊಸ ಮೈದಾನ, ನಮ್ಮಲ್ಲಿ ಹೆಚ್ಚಿನವರು ಇಲ್ಲಿ ಆಡಿಲ್ಲ. ಆದ್ದರಿಂದ ಪರಿಸ್ಥಿತಿಗಳನ್ನ ಪರಿಗಣಿಸಿ, ನಾವು ಇಲ್ಲಿ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದೇವೆ. ದುರದೃಷ್ಟವಶಾತ್ ಇಂದು ಸೂರ್ಯವಂಶಿ ಆಡುತ್ತಿಲ್ಲ. ಅವರು ಗನ್ ಪ್ಲೇಯರ್, ಆದರೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಕೆಲವು ಅದ್ಭುತ ಆಟಗಾರರು ನಮ್ಮಲ್ಲಿದ್ದಾರೆ. ಆದ್ದರಿಂದ ನಾವು ಅವರನ್ನ ಬೆಂಬಲಿಸುತ್ತಿದ್ದೇವೆ. ಸಮಯ ಬಂದಾಗ ಅವರಿಗೆ ಅವಕಾಶ ಸಿಗುತ್ತದೆ ಎಂದರು.
ಇದೇವೇಳೆ ಐರ್ಲೆಂಡ್ ಪರ ಭಾರತ ಮೂಲದ ಜೈ ಮೂಂದ್ರ ಮತ್ತು ಮ್ಯಾಟ್ ಹೊಲ್ಲಾರ್ಡ್ ಐರ್ಲೆಂಡ್ ಪರ ತಮ್ಮ ಚೊಚ್ಚಲ ಪಂದ್ಯವನ್ನ ಆಡುವ ಅವಕಾಶ ಪಡೆದರು. ಇದನ್ನೂ ಓದಿ: ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ವಿರುದ್ಧ 2-1 ಅಂತರದ ಜಯ – ಈಕ್ವೆಡಾರ್ ದೇಶದಲ್ಲಿ ರಜೆ ಘೋಷಣೆ

ಫ್ಯಾನ್ಸ್‌ಗೆ ಭಾರೀ ನಿರಾಸೆ
ಬೆಲ್ ಫಾಸ್ಟ್ ಕ್ರೀಡಾಂಗಣದತ್ತ ವೈಭವ್ ಸೂರ್ಯವಂಶಿ ಅವರ ಆಟ ನೋಡಲೆಂದೇ ದೊಡ್ಡ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದರು. ಈ ಕ್ರೀಡಾಂಗಣದಲ್ಲಿ ಇಷ್ಟು ಜನಸಂದಣಿಯಾಗಿದ್ದು ಇದೇ ಮೊದಲಂತೆ. ಆದರೆ ವೈಭವ್ ಸೂರ್ಯವಂಶಿ ಅವರು ಪಂದ್ಯದಲ್ಲಿ ಇಲ್ಲ ಎಂಬುದು ತಿಳಿಯುತ್ತಿದ್ದಂತೆ ಹಲವು ಮಂದಿ ಹಿಡಿಶಾಪ ಹಾಕಿ ಮನೆಯ ದಾರಿ ಹಿಡಿದರು ಎಂದು ತಿಳಿದುಬಂದಿದೆ.
