ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ (TMC) ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ( Abhishek Banerjee) ಬ್ಯಾನರ್ಜಿ ಅವರ ಕಚೇರಿಯನ್ನು ಪಶ್ಚಿಮ ಬಂಗಾಳದಲ್ಲಿ (West Bengal) ಜಿಲ್ಲಾಡಳಿತ ಬುಲ್ಡೋಜರ್ ಮೂಲಕ ತೆರವುಗೊಳಿಸಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಅಮ್ತಾಲಾದಲ್ಲಿದ್ದ ಕಟ್ಟಡವನ್ನು ಅಗತ್ಯ ಅನುಮತಿ ಪಡೆಯದೇ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತ ಜೂನ್ 30 ಮತ್ತು ಜುಲೈ 7ರಂದು ಎರಡು ನೋಟಿಸ್‌ಗಳನ್ನು ನೀಡಿತ್ತು. ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಅನುಮತಿಗಳ ಬಗ್ಗೆ ವಿವರಣೆ ಕೇಳಲಾಗಿತ್ತು. ಜುಲೈ 15ರಂದು ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಶನಿವಾರ ಬೆಳಗ್ಗೆ ಭಾರಿ ಪೊಲೀಸ್ ಭದ್ರತೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.ಇದನ್ನೂ ಓದಿ: ದೇವೇಗೌಡರ ತಮ್ಮನ ಮಗನಿಂದಲೇ ಆ್ಯಸಿಡ್ ದಾಳಿ; 2 ಬಾರಿ ಸಾವು ಗೆದ್ದು ಬಂದಿದ್ದ ಚೆನ್ನಮ್ಮ
ಈ ಕ್ರಮಕ್ಕೆ ತೃಣಮೂಲ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದೆ. ಇದು ಬಿಜೆಪಿ ನಡೆಸುತ್ತಿರುವ ʼಸೇಡಿನ ರಾಜಕೀಯʼ ಹಾಗೂ ʼಬುಲ್ಡೋಜರ್ ಸಂಸ್ಕೃತಿʼಯ ಭಾಗ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.ಇದನ್ನೂ ಓದಿ: ರೈತರು ಯಾವ್ದೇ ಕಾರಣಕ್ಕೂ ಕೃಷಿಗೆ ನೀರು ಬಳಕೆ ಮಾಡಬಾರದು: ಸಿಎಂ ಡಿಕೆಶಿ ಮತ್ತೆ ವಾರ್ನಿಂಗ್
