Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:55 ವರ್ಷಗಳ ಓಡಾಟ ಬಂದ್‌ – ಇನ್ನೂ ಪ್ರವಾಸೋದ್ಯಮಕ್ಕೆ ಲಾಂಚ್‌ ಬಳಕೆಯಾಗಿಲ್ಲ ಯಾಕೆ?
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | 55 ವರ್ಷಗಳ ಓಡಾಟ ಬಂದ್‌ – ಇನ್ನೂ ಪ್ರವಾಸೋದ್ಯಮಕ್ಕೆ ಲಾಂಚ್‌ ಬಳಕೆಯಾಗಿಲ್ಲ ಯಾಕೆ?

Karnataka

55 ವರ್ಷಗಳ ಓಡಾಟ ಬಂದ್‌ – ಇನ್ನೂ ಪ್ರವಾಸೋದ್ಯಮಕ್ಕೆ ಲಾಂಚ್‌ ಬಳಕೆಯಾಗಿಲ್ಲ ಯಾಕೆ?

Public TV
Last updated: April 15, 2026 7:13 am
Public TV
Share
4 Min Read
Sigandur Launch Sagar Shivamogga Sharavati Back Water Siganduru Bridge
SHARE

ಸಾಗರ ತಾಲೂಕಿನ ಅಂಬಾರಗೋಡ್ಲು, ಕಳಸವಳ್ಳಿ ಕಡವು ಮಾರ್ಗದಲ್ಲಿ ನಮ್ಮನ್ನು ಪುಷ್ಪಕ ವಿಮಾನದಂತೆ ಹೊತ್ತು ಸಾಗುತ್ತಿದ್ದ ಲಾಂಚ್‌ಗಳು ಸ್ಥಭ್ಧವಾಗಿ ಒಂದು ವರ್ಷ ಸಮೀಪಿಸುತ್ತಿದೆ. ಈ ಲಾಂಚ್‌ಗೂ ಅದರ ಕೆಲಸಗಾರರಿಗೂ ಅಲ್ಲಿನ ಸ್ಥಳೀಯರು, ಬರುವ ಪ್ರವಾಸಿಗರಿಗೂ ಅವಿನಾಭಾವ ಸಂಬಂಧ. ಈಗ ಅವು ನಿಂತು ಅದರ ಕೆಲಸಗಾರರು ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಲಾಂಚ್‌ ಮೇಲೆ ನಿತ್ಯ ಪ್ರಯಾಣಿಸುತ್ತಿದ್ದ ಸಾವಿರಾರು ಜನ ಹೊಸ ಸೇತುವೆ ಮೇಲೆ ಸಾಗುವಾಗ ಸಣ್ಣ ಕುಡಿನೋಟ ಬೀರಿ ಸಾಗುತ್ತಿದ್ದಾರೆ. ಇನ್ನೆಲ್ಲೋ ನೂರಕ್ಕೆ ಒಂದಿಬ್ಬರು ಅದರ ಬಳಿ ಬಂದು ಫೋಟೋ ಹಿಡಿದು, ವಿವಿಧ ಭಂಗಿಯ ಪೋಸ್‌ ಕೊಟ್ಟು ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಏರಿಸುತ್ತಿದ್ದಾರೆ. ಹೀಗೆ ಸ್ಥಭ್ದವಾಗಿ ನಿಂತ ಲಾಂಚ್‌ನ ಇತಿಹಾಸ, ಅದರ ಕೆಲಸಗಾರರ ಈಗಿನ ಪರಿಸ್ಥಿತಿ ಹಾಗೂ ಅವುಗಳ ಮುಂದಿನ ಗತಿ ಏನು ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Sigandur Launch

ಒಟ್ಟು 4 ಲಾಂಚ್‌ಗಳ ಪೈಕಿ 1 ಲಾಂಚ್ ಸೇತುವೆ ನಿರ್ಮಾಣ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಸೇತುವೆ ಲೋಕಾರ್ಪಣೆ ನಂತರ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಉಳಿದ ಮೂರು ಲಾಂಚ್ ಸೇವೆಯನ್ನು 2025ರ ಜುಲೈ 15ರಿಂದ ಸ್ಥಗಿತಗೊಳಿಸಿದೆ. 1969ರಿಂದ ನಡೆಯುತ್ತಿದ್ದ ಲಾಂಚ್ ಪ್ರಯಾಣ, ದ್ವೀಪವಾಸಿಗಳ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಸೇತುವೆಯಿಂದಾಗಿ 55 ವರ್ಷಗಳ ಇತಿಹಾಸವಿರುವ ಲಾಂಚ್ ಸಂಚಾರ ನಿಂತು, ಅದನ್ನೇ ನಂಬಿ ಬದುಕುತ್ತಿದ್ದ ನೌಕರರು ಮತ್ತು ಜೀಪ್ ಚಾಲಕರು ಅತಂತ್ರರಾಗಿದ್ದಾರೆ. ಇದನ್ನೂ ಓದಿ: ಶರಾವತಿ ಹಿನ್ನೀರಲ್ಲಿ ವಾಟರ್ ಏರೊಡ್ರೋಮ್‌ ಯೋಜನೆ – ಸಿಗಂದೂರು ಬಳಿ ಇಳಿಯಲಿದೆ ವಿಮಾನ

ಈ ಸೇತುವೆ ನಿರ್ಮಾಣದಿಂದ ಜನರ ಪ್ರಯಾಣದ ಸಮಯ ಉಳಿತಾಯವಾಗಿದ್ದರೂ, ಲಾಂಚ್ ಅವಲಂಬಿತರ ಬದುಕು ಕಷ್ಟಕ್ಕೆ ಸಿಲುಕಿದೆ. ಲಾಂಚ್ ಸೇವೆ ನಂಬಿದ್ದ 8 ಹೊರಗುತ್ತಿಗೆ ನೌಕರರು ಪ್ರವಾಸಿ ಜೀಪ್ ಚಾಲಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೇ ಲಾಂಚ್‌ಗಾಗಿ ಕಾಯುವಾಗ ನಿಲ್ಲುತ್ತಿದ್ದ ಪ್ರಯಾಣಿಕಲರನ್ನೇ ನಂಬಿ ತೆರೆದಿದ್ದ ಅಂಗಡಿಗಳು ಬಂದ್‌ ಆಗಿವೆ.

ಸ್ಥಳೀಯರು ಹೇಳೋದೇನು?
ಸಿಗಂದೂರು ಸೇತುವೆ ಉದ್ಘಾಟನೆಗೊಂಡು ಲಾಂಚ್ ಸೇವೆ ಸ್ಥಗಿತಗೊಂಡಿದೆ. ಸೇತುವೆ ಉದ್ಘಾಟನೆ ಸಂದರ್ಭದಲ್ಲಿ ಲಾಂಚ್‌ಗಳನ್ನು ಪ್ರವಾಸೋದ್ಯಮಕ್ಕೆ ಬಳಸಲಾಗುವುದು ಎಂದು ಸರ್ಕಾರ ಹೇಳಿತ್ತು. ಅಲ್ಲದೇ ಅದನ್ನು ತೇಲುವ ಹೋಟೆಲ್‌ ಮಾಡಲು ಯೋಜಿಸಿದ್ದೇವೆ ಎಂದು ಸ್ಥಳೀಯ ಶಾಸಕರು ಸಹ ಹೇಳಿದ್ದರು. ಆದರೆ ಈ ಪ್ಲ್ಯಾನ್‌ ಈಗ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

Sigandur Bridge

ನಮಗೆ ಲಾಂಚ್‌ಗಿಂತ ಸೇತುವೆ ಉತ್ತಮ ಎಂದೇ ಎನ್ನಿಸಿದೆ. ಯಾರೋ ದೂರದಿಂದ ಪ್ರವಾಸಕ್ಕೆ ಬಂದವರಿಗೆ ಲಾಂಚ್‌ ಪ್ರಯಾಣ ಖುಷಿ ಕೊಡಬಹುದು. ಆದರೆ ನಮಗೆ ಲಾಂಚ್‌ ನಿಂತಿರೋದರ ಬಗ್ಗೆ ಬೇಜಾರೇನಿಲ್ಲ. ಪ್ರವಾಸೋದ್ಯಮಕ್ಕಾಗಿ ಬೇಕಾದರೆ ಸರ್ಕಾರ ಲಾಂಚ್‌ ಸೇವೆಯನ್ನು ಸರ್ಕಾರ ಮಾಡಲಿ.

ಶರಾವತಿ ಹಿನ್ನೀರಿನ ಪ್ರದೇಶವಾದ ಮುಪ್ಪಾನೆಯಲ್ಲಿ ಫ್ಲಾಟ್‌ ಫಾರಂ ಸಿದ್ದಪಡಿಸಿದರೆ ಒಂದು ಲಾಂಚ್‌ನ್ನು ಅಲ್ಲಿ ಬಿಡಬಹುದು. ಜನರ ಹಿತದೃಷ್ಟಿಯಿಂದ ಅಲ್ಲಿ ಇದರ ಅಗತ್ಯವಿದೆ. ಬರುವೆಯಲ್ಲೊಂದು ಫ್ಲಾಟ್‌ ಫಾರಂ ಮಾಡಿದರೆ ಅಲ್ಲೂ ಒಂದು ಲಾಂಚ್‌ ವ್ಯವಸ್ಥೆ ಮಾಡಬಹುದು. ಹಾಗೇನಾದರು ಆದರೆ ಬರುವೆಯ ಜನರು ಪಡಿತರಕ್ಕೆ 40 ಕಿ.ಮೀ. ಸುತ್ತುವರಿದು ಬರುವುದು ತಪ್ಪಲಿದೆ ಎಂಬುದು ಸ್ಥಳೀಯರ ಮಾತು.

ನೌಕರರು ಹೇಳೊದೇನು?
ಲಾಂಚ್‌ ಸ್ಥಗಿತದ ಬಳಿಕ ಮೂವರು ಗುತ್ತಿಗೆ ನೌಕರರನ್ನು ಕೆಲಸದಿಂದ ಕೈಬಿಸಲಾಗಿದೆ. ಇನ್ನಿಬ್ಬರನ್ನು ಲಾಂಚ್‌ಗಳನ್ನು ಸುಸ್ಥಿತಿಯಲ್ಲಿ ಇಡಲು ಅಲ್ಲೇ ಬಿಟ್ಟುಕೊಳ್ಳಲಾಗಿದೆ. ಇನ್ನು ಮೂವರನ್ನು ಮುಪ್ಪಾನೆ ಲಾಂಚ್‌ನಲ್ಲಿ ಕೆಲಸಕ್ಕೆ ನೇಮಿಸಲಾಗಿದೆ. ಕೆಲಸ ಕಳೆದುಕೊಂಡ ಮೂವರಲ್ಲಿ ಒಬ್ಬರು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಇನ್ನುಳಿದ ಇಬ್ಬರು ನಿರುದ್ಯೋಗಿಗಳಾಗಿದ್ದಾರೆ ಎಂದು ನೌಕರರು ಹೇಳಿಕೊಂಡಿದ್ದಾರೆ.

ಗಂಗೊಳ್ಳಿ-ಕುಂದಾಪುರಕ್ಕೆ ಸಾಗಾಟವೇ ಕಷ್ಟ
ಕುಂದಾಪುರಕ್ಕೆ ಲಾಂಚ್ ಬೇಡಿಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ-ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಯ ಗಂಗೊಳ್ಳಿಯಿಂದ ಕೋಡಿ ಹಾಗೂ ಕುಂದಾಪುರಕ್ಕೆ ಪ್ರಯಾಣಿಸಲು ಸಿಗಂದೂರು ಲಾಂಚ್ ನೀಡಬೇಕು ಎಂಬ ಕೂಗು ಸಹ ಕೇಳಿ ಬಂದಿತ್ತು. ಆದರೆ ಭಾರಿ ಗಾತ್ರ ತೂಕ ಹೊಂದಿರುವ ಲಾಂಚ್ ಸ್ಥಳಾಂತರ ಸಾಧ್ಯವಿಲ್ಲ ಎನ್ನುತ್ತಾರೆ ಕರ್ನಾಟಕ ಜಲ ಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಗಳು.

ಇಲ್ಲಿ ಲಾಂಚ್‌ ಸೇವೆ ಆರಂಭಿಸುವಾಗ ಎಲ್ಲಾ ಬಿಡಿಭಾಗಗಗಳನ್ನು ಇಲ್ಲಿಯೇ ತಂದು ನಿರ್ಮಿಸಲಾಗಿದೆ. ಅವುಗಳನ್ನು ಈಗ ಬೇರ್ಪಡಿಸಿ ಸಾಗಿಸುವುದು ಕಷ್ಟ ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

Launch stalled due to technical problem in Sharavati backwater in Sigandur

ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಹಸಿರುಮಕ್ಕಿ ಲಾಂಚ್‌
ಹಸಿರು ಮಕ್ಕಿ ಕಡವು ಮಾರ್ಗದಲ್ಲಿ ಈಗಾಗಲೇ ಒಂದು ಲಾಂಚ್ ಸೇವೆ ನೀಡುತ್ತಿದೆ. ಹಸಿರು ಮಕ್ಕಿ ಸೇತುವೆ ಕಾಮಗಾರಿಯೂ ಸಂಚಾರಕ್ಕೆ ಮುಕ್ತವಾದರೇ ಇಲ್ಲಿನ ಲಾಂಚ್ ಸಹ ನಿರುಪಯುಕ್ತವಾಗಲಿದೆ. ಅಲ್ಲದೇ ಮುಪ್ಪಾನೆ ಕಡವು ಮಾರ್ಗದಲ್ಲಿ ಈ ರೀತಿಯ ಬೃಹತ್ ಲಾಂಚ್ ನಿರ್ವಹಣೆ ಸಾಧ್ಯವಿಲ್ಲದೇ ಇರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಲಾಂಚ್ ತುಕ್ಕು ಹಿಡಿಯುವುದು ನಿಶ್ಚಿತವಾಗಿದೆ.

ಪ್ರವಾಸೋದ್ಯಮಕ್ಕೆ ಬಳಕೆಯಾಗಲಿ
ಕೆಲವು ತಿಂಗಳಿಂದ ಒಂದೇ ಪ್ರದೇಶದಲ್ಲಿ ಲಾಂಚ್‌ಗಳು ನಿಂತಿದ್ದರಿಂದ ಹಲವು ಭಾಗಗಳು ಕಂದುಬಣ್ಣಕ್ಕೆ ತಿರುಗಿದ್ದು, ತುಕ್ಕು ಹಿಡಿದಿವೆ. ಜನರ ಬಳಕೆಗೆ ಬಾರದೆ ಇದು ಹೀಗೆ ಮುಂದುವರಿದರೆ ಲಾಂಚ್‌ಗಳು ಸಂಪೂರ್ಣ ಹಾಳಾಗಲಿವೆ. ಇಲ್ಲಿಯ ಪ್ರವಾಸೋದ್ಯಮದ ದೃಷ್ಟಿಯಿಂದ ಲಾಂಚ್‌ ಸೇವೆಯನ್ನು ಪುನಾರಂಭ ಮಾಡಬೇಕು. ಸಮೀಪದಲ್ಲೇ ಇರುವ ಮುಪ್ಪಾನೆ ಪ್ರಕೃತಿ ಬಳಸಿಕೊಂಡು ಶರಾವತಿ ಜಲಾನಯನ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ಈ ಮೂಲಕ ಈ ಭಾಗದ ನಿರುದ್ಯೋಗಿ ಯುವಜನರಿಗೆ ಸರ್ಕಾರ ನೆರವಾಗಬೇಕು ಎನ್ನುವುದು ಈ ಭಾಗದ ಜನರ ಒತ್ತಾಯವಾಗಿದೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

TAGGED:SagarSharavati Back WatershivamoggaSigandur LaunchSiganduru Bridge
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

Pinarayi Vijayan
Latest

ಕೇರಳ‌ ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆ

Public TV
ByPublic TV
13 minutes ago
Ratna Debnath Mother Of RG Kar Victim
Latest

West Bengal: ಬಿಜೆಪಿಯಿಂದ ಕಣಕ್ಕಿಳಿದಿದ್ದ ಆರ್‌ಜಿ ಕರ್‌ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಜಯ

Public TV
ByPublic TV
20 minutes ago
Modi 1
Latest

ಸಂತ್ತಿನಲ್ಲಿ ಮೀಸಲಾತಿ ವಿರೋಧಿಸಿದ ವಿಪಕ್ಷಗಳನ್ನ ಮಹಿಳೆಯರು ಚುನಾವಣೆಯಲ್ಲಿ ಶಿಕ್ಷಿಸಿದ್ದಾರೆ: ಮೋದಿ ಸಿಡಿಮಿಡಿ

Public TV
ByPublic TV
28 minutes ago
Vijay Rahul Gandhi
Latest

ತಮಿಳುನಾಡಿನಲ್ಲಿ ಟಿವಿಕೆ ಗೆಲುವು – ವಿಜಯ್‌ಗೆ ಶುಭಹಾರೈಸಿದ ರಾಹುಲ್ ಗಾಂಧಿ

Public TV
ByPublic TV
39 minutes ago
ಸಾಂದರ್ಭಿಕ ಚಿತ್ರ
Latest

ಬಂಗಾಳದಲ್ಲಿ ಕೇಸರಿ ಸುನಾಮಿ – ಮಮತಾ ಆಡಳಿತಕ್ಕೆ ಅಂತ್ಯ ಹಾಡಲು ಆರ್‌ಎಸ್‌ಎಸ್ ‘ಸೈಲೆಂಟ್ ಆಪರೇಷನ್’ ಯಶಸ್ವಿ!

Public TV
ByPublic TV
2 hours ago
Duck
Chikkamagaluru

ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Public TV
ByPublic TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?