ಡಿಯರ್ ಕೃಷ್ಣ
ನೀನು ನನ್ನ ಪಾದಗಳ ಮೇಲೆ ಬರೆದ ಆ ಸಾಲುಗಳು ನನ್ನೆದೆಗೆ ತುಂಬಾ ನಾಟಿದವು. ನೀನು ನನ್ನ ಪಾದದ ಮೇಲಿನ ಮದರಂಗಿ ರಂಗೋಲಿಗೆ ಅದೆಷ್ಟು ಸೋತಿದ್ದೀಯಾ.. ಅದೆಷ್ಟು ಒಲವು ಉಕ್ಕುತ್ತಿತ್ತು ನಿನ್ನ ಪತ್ರ ಪ್ರೇಮದ ಅಮೃತ ಪಾತ್ರೆಯಲ್ಲಿ..!
ಅದೆಷ್ಟು ಒಲವು ಕೃಷ್ಣ ನನ್ನ ಮೇಲೆ ನಿನಗೆ. ಯಾವ ಗಂಡು ತಾನೇ ಹೆಣ್ಣಿನ ಪಾದಗಳನ್ನು ಮುಟ್ಟುವಷ್ಟು ಒಲವು ತೋರುತ್ತಾನೆ? ನಾನೆಷ್ಟು ಲಕ್ಕಿ.. ಎಲ್ಲೋ ಓದಿದ್ದೆ `Man Loves Someone.. Ego Dies.’ ಆ ಸಾಲು ನಿಜ ಅನ್ನಿಸ್ತಿದೆ. ನೀನು ಮೊದಲ ಗಿಫ್ಟ್ ʻಕಾಲ್ಗೆಜ್ಜೆʼ ತೊಡಿಸುವಾಗ, ಪಾದಗಳಿಗೆ ಮುತ್ತಿಟ್ಟಿದ್ದು, ಮರೆಯೋದಕ್ಕೆ ಸಾಧ್ಯವೇ ಇಲ್ಲ. ಇದನ್ನೂ ಓದಿ: ಹೃದಯದಲ್ಲಿ ಒಲವಿನ ಹೆಜ್ಜೆಗಳನ್ನಿಟ್ಟ ನಿನ್ನ ಪಾದಗಳಿಗೆ..!

ನಿನ್ನಂತವನನ್ನ ನೋಡಿನೇ ಕವಿ ʻJinke sar ho ishq ki chhaaon.. Paaon ke neeche jannat hogi’ (ಯಾರ ತಲೆ ಪ್ರೀತಿಯ ನೆರಳಿನಲ್ಲಿದೆಯೋ, ಅವರ ಪಾದಗಳ ಕೆಳಗೆ ಸ್ವರ್ಗವೇ ಇರುತ್ತದೆ) ಅಂತ ಬರೆದಿದ್ದು ಅನ್ಸುತ್ತೆ. ನಿಜ, ಪ್ರೀತಿಸುವವರ ಪಾದದ ಅಡಿ ಬದುಕು ತುಂಬಾ ಚೆಂದ ಕಣೋ. ಪ್ರೀತಿ ಅಂದ್ರೆ ಏನು ಅನ್ನೋದನ್ನ ನಿನ್ನಿಂದಲೇ ಅರ್ಥ ಮಾಡ್ಕೊಳ್ಬೇಕು ನಾನು..!
ಪ್ರೀತಿಯಲ್ಲಿ ಬಿದ್ದವರು ಲೋಕದ ಲೆಕ್ಕಚಾರ ಬಿಟ್ಟು, ಹುಚ್ಚರ ಹಾಗೆ ಖುಷಿಯಾಗಿ ಜೀವಿಸುತ್ತಾರೆ ಅಂತ ನೀನು ಯಾವಾಗಲೂ ಹೇಳ್ತಾ ಇರ್ತಿಯ. ನಾವಿಬ್ರು ಈಗ ಹಾಗೇ ಬದುಕ್ತಿದಿವಿ. ನನ್ನನ್ನ ನೀನು ಪ್ರೀತಿಸ್ತಿದಿಯಾ ಅನ್ನೋದು ದೊಡ್ಡ ಸಂಭ್ರಮದ ವಿಚಾರ. ಅದು ಬಿಟ್ಟು ನನಗೆ ಬೇರೆ ಏನೂ ಬೇಡ ಕಣೋ. ನಿನಗೆ ಏನು ಬೇಕೋ ಎಲ್ಲದನ್ನೂ ಅರ್ಪಿಸಿ ನಿನ್ನಲ್ಲೇ ಒಂದಾಗ್ಬಿಡ್ಬೇಕು ಅನ್ನಿಸ್ತಿದೆ. ಅದಕ್ಕಿಂತ ಖುಷಿ ಇನ್ನೇನಿದೆ ಹೇಳು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ನನ್ನನ್ನ ಯಾವಾಗ್ಲೂ ಹೀಗೆ ಪ್ರೀತಿಸ್ತಾನೇ ಇರು ಪ್ಲೀಸ್.. ಇರ್ತಿಯ ತಾನೇ..?
ಇಂತಿ ನಿನ್ನ ಮುದ್ದು ರಾಧ

