– ರಾಮ ಮಂದಿರ ದೇಣಿಗೆ ಹಗರಣದ ಕುರಿತು ನೃತ್ಯ ಗೋಪಾಲ್ ದಾಸ್ ಮೊದಲ ಪ್ರತಿಕ್ರಿಯೆ
ಅಯೋಧ್ಯೆ: ರಾಮ ಲಲ್ಲಾನ ದೇವಾಲಯದಲ್ಲಿ (Ram Temple) ದೇಣಿಗೆ ಕದಿಯುವ ಪಾಪಕೃತ್ಯವನ್ನು ಯಾರು ಮಾಡಿದ್ದಾರೋ… ಪ್ರತಿಯೊಬ್ಬರಿಗೂ ಶಿಕ್ಷೆ ಆಗುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ನೋಡಿಕೊಳ್ಳುತ್ತಾರೆ ಎಂದು ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ (Nritya Gopal Das) ಹೇಳಿದ್ದಾರೆ.
ರಾಮಮಂದಿರ ದೇಣಿಗೆ ಕಳವು ಹಗರಣ ಬೆಳಕಿಗೆ ಬಂದ ನಂತರ ಇದು ಅವರ ಮೊದಲ ಪ್ರತಿಕ್ರಿಯೆಯಾಗಿದೆ. ಇಂದು (ಸೋಮವಾರ) ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಣಾಯಕ ಸಭೆ ನಡೆಯಲಿದೆ. ಸಭೆಗೂ ಮುನ್ನ ಹಿರಿಯ ಯತಿಗಳು ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ತಂದು ಕರಗಿಸಿದ್ರಾ ರಾಮನ ಚಿನ್ನ? – ರೈಲಿನಲ್ಲಿ ಸಾಗಿಸಿ ಬಿಸ್ಕೆಟ್ ಮಾಡಿರುವ ಶಂಕೆ

ಶ್ರೀ ರಾಮ್ ಲಲ್ಲಾ ದೇವಾಲಯದಲ್ಲಿ ದೇಣಿಗೆ ಕಳ್ಳತನದಿಂದ ನನಗೆ ತೀವ್ರ ನೋವಾಗಿದೆ. ಈ ಪಾಪಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಅಧಿಕಾರಿಗಳು ನ್ಯಾಯಕ್ಕೆ ತರಬೇಕು. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದು ಲಕ್ಷಾಂತರ ಭಕ್ತರ ನಂಬಿಕೆಯ ವಿಷಯವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಅವರು ಈ ಪಾಪಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಅಲ್ಲದೇ ದೇಣಿಗೆ ಕಳ್ಳತನ ವಿಷಯವನ್ನು ವೈಯಕ್ತಿಯ ಲಾಭಕ್ಕಾಗಿ, ರಾಜಕೀಯಕ್ಕಾಗಿ ಬಳಸಿಕೊಳ್ಳದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಮನ ದೇಣಿಗೆ ಹಣದಲ್ಲಿ ಹೈಯಾಸಿ ಜೀವನ – ದುಬಾರಿ ಗಿಫ್ಟ್ ಕೊಟ್ಟಿದ್ದ ಅವಿನಾಶ್ ಶುಕ್ಲಾ
ಇಂದು ಮಹತ್ವದ ಸಭೆ
ದೇಣಿಗೆ ಕಳ್ಳತನ ಆರೋಪ ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಹಿನ್ನೆಲೆ ಸಮಗ್ರವಾಗಿ ಚರ್ಚಿಸಲು ಇಂದು ರಾಮಜನ್ಮಭೂಮಿ ಟ್ರಸ್ಟ್ ಮಹತ್ವದ ಸಭೆ ಹಮ್ಮಿಕೊಂಡಿದೆ. ಮೂಲಗಳ ಪ್ರಕಾರ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಗಳ ಕುರಿತು ಚರ್ಚೆ ನಡೆಯಲಿದೆ.
