ಕೋಲ್ಕತ್ತಾ: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಶ್ರಮ, ಸಂಘಟನೆಯ ಫಲವಾಗಿ ಮತ್ತೊಂದು ಅತಿ ದೊಡ್ಡ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಟಿಎಂಸಿ (TMC) ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಕೇಸರಿ ಭೇದಿಸಿದೆ. ಈ ಮೂಲಕ, ಬಂಗಾಳ (West Bengal) ಭೂಮಿಯಲ್ಲಿ ಹಿಂದುತ್ವ ಅರಳಬೇಕು ಅಂತ ಪಣತೊಟ್ಟಿದ್ದ ಬಿಜೆಪಿ ಪಿತಾಮಹಾ ಶಾಮ್ ಪ್ರಸಾದ್ ಮುಖರ್ಜಿ ಅವರ ಕನಸು 75 ವರ್ಷಗಳ ಬಳಿಕ ಈಡೇರಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ (BJP) ಸುನಾಮಿಯೊಂದಿಗೆ ಇತಿಹಾಸ ಸೃಷ್ಟಿಸಿದೆ. ಕ್ಲೀನ್‍ಸ್ವೀಪ್ ಮಾಡುವ ಮೂಲಕ ಚೊಚ್ಚಲ ಬಾರಿಗೆ ಸರ್ಕಾರ ರಚಿಸ್ತಿದೆ. 15 ವರ್ಷಗಳ ಮಮತಾ ಬ್ಯಾನರ್ಜಿ ಅವರ ಭದ್ರ ಕೋಟೆಯಾಗಿದ್ದ ಬಂಗಾಳವನ್ನು ಛಿದ್ರಗೊಳಿಸಿದೆ. ಈ ಮೂಲಕ ಬಂಗಾಳದಲ್ಲಿ ಕಮಲ ಅರಳಿಸಬೇಕು ಅಂತ ಹಲವಾರು ವರ್ಷಗಳಿಂದ ಯತ್ನಿಸಿದ್ದ ಕೇಸರಿ ಪಕ್ಷದ ಪ್ರಯತ್ನ ಫಲಿಸಿದೆ. ಎಸ್‍ಐಆರ್ ಬಳಿಕ ನಡೆದ ಚುನಾವಣೆಯಲ್ಲಿ ಈ ಬಾರಿ 93% ರಷ್ಟು ಮತದಾನವಾಗಿತ್ತು.

* ಒಟ್ಟು ಕ್ಷೇತ್ರ 293
* ಸರಳ ಬಹುಮತ 147
* ಬಿಜೆಪಿ 193
* ಟಿಎಂಸಿ 94
* ಇತರೆ 5 ( ಎಜೆಯುಪಿ 2, ಕಾಂಗ್ರೆಸ್ 1, ಸಿಪಿಎಂ 1, ಎಐಎಸ್‍ಎಫ್ 1 (ಆಲ್ ಇಂಡಿಯಾ ಸೆಕ್ಯೂಲರ್ ಫ್ರಂಟ್) (294 ಕ್ಷೇತ್ರಗಳ ಪೈಕಿ ಫಾಲ್ಟಾ ಕ್ಷೇತ್ರದಲ್ಲಿ ಹಿಂಸಾಚಾರವಾದ ಕಾರಣ 2ನೇ ಬಾರಿಗೆ ಇದೇ 21ಕ್ಕೆ ಮತದಾನ ನಡೆಯಲಿದ್ದು, 24ಕ್ಕೆ ಫಲಿತಾಂಶ ಬರಲಿದೆ)
ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?
* ಟಿಎಂಸಿಯ 15 ವರ್ಷಗಳ ಆಡಳಿತ ವಿರೋಧ ಅಲೆ
* ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಶಾಲಾ ನೇಮಕಾತಿ ಹಗರಣ
* ದೊಡ್ಡ ಪ್ರಮಾಣದ ನಿರುದ್ಯೋಗ, ವಲಸೆ ಸಮಸ್ಯೆ
* ಟಿಎಂಸಿ ಕಾರ್ಯಕರ್ತರಿಂದ ಹೆಚ್ಚಾದ ಗೂಂಡಾಗಿರಿ
* ಎಸ್‍ಐಆರ್‌ನಿಂದ ಅಕ್ರಮ ನುಸುಳುಕೋರರ ಮತ ಡಿಲಿಟ್
* ಮೋದಿ-ಶಾ ನೇತೃತ್ವದಲ್ಲಿ ಬಿಜೆಪಿ ಅಬ್ಬರದ ಪ್ರಚಾರ
* ಲೋಕಲ್ ಝಲ್‍ಮುರಿ ತಿನ್ನೋ ಮೂಲಕ ಜನರಿಗೆ ಹತ್ತಿರವಾದ ಮೋದಿ
* ಬರೀ ಹಿಂದೂತ್ವವನ್ನೇ ಪ್ರತಿಪಾದಿಸದೆ ಅಭಿವೃದ್ಧಿಯ ಜಪ
* ಹಿಂದೂ ಮತಗಳ ಒಗ್ಗೂಡಿಕೆಗೆ ತಂತ್ರಗಾರಿಕೆ
(ದಲಿತರ ಮನೆಯಲ್ಲಿ ಸಹ ಭೋಜನ)
* ರಾಮನವವಿಯ ಮೂಲಕ `ಜೈ ಶ್ರೀರಾಮ್’ ಯಾತ್ರೆ
(29 ಸಾವಿರಕ್ಕೂ ಹೆಚ್ಚು ಶೋಭಯಾತ್ರೆಗಳ ಆಯೋಜನೆ)
* ಸರ್ಕಾರ ರಚಿಸಿದ 45 ದಿನಗಳಲ್ಲಿ 7ನೇ ವೇತನ ಆಯೋಗ ಜಾರಿ
* 6 ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆ ಜಾರಿ
* ಯುವಜನತೆಗೆ ಮಾಸಿಕ 3,000 ಆರ್ಥಿಕ ನೆರವು ಭರವಸೆ












