ತಿರುವನಂತಪುರಂ: ಫಿಫಾ ವಿಶ್ವಕಪ್ (FIFA World Cup) ಫೈನಲ್ ಕ್ರೇಜ್ ಜೋರಾಗುತ್ತಿದ್ದಂತೆ, ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಕೇರಳ (Kerala) ಸರ್ಕಾರ ಸೋಮವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ.
2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಆರಂಭವಾಗಿದ್ದು, ಕೇರಳದಲ್ಲಿ ಫುಟ್ಬಾಲ್ ಕ್ರೇಜ್ ಈ ಬಾರಿಯೂ ಉತ್ತುಂಗಕ್ಕೇರಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಮಧ್ಯರಾತ್ರಿಯ ಫೈನಲ್ ಪಂದ್ಯವನ್ನು ವಿದ್ಯಾರ್ಥಿಗಳು ನೆಮ್ಮದಿಯಿಂದ ವೀಕ್ಷಿಸಲು ಸೋಮವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಪಂದ್ಯ ಆರಂಭವಾಗಲಿದ್ದು, ರಾತ್ರಿ ತಡವಾಗಿ ಪಂದ್ಯ ವೀಕ್ಷಿಸಿದ ಬಳಿಕ ಬೆಳಗ್ಗೆ ಶಾಲೆಗೆ ಹಾಜರಾಗುವುದು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ರಜೆ ಘೋಷಿಸಿದೆ.
ಕೇರಳ ಶಿಕ್ಷಣ ಸಚಿವ ಎನ್. ಸಂಸುದ್ದೀನ್ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ನಿರ್ಧಾರಕ್ಕೆ ರಾಜಕೀಯ ವಲಯದಿಂದಲೂ ಬೆಂಬಲ ವ್ಯಕ್ತವಾಗಿದೆ. ಮಾಜಿ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಕೂಡ ವಿದ್ಯಾರ್ಥಿಗಳ ಮನವಿಗೆ ಬೆಂಬಲ ಸೂಚಿಸಿ, ಕಳೆದುಹೋಗುವ ಶೈಕ್ಷಣಿಕ ದಿನವನ್ನು ಮತ್ತೊಂದು ದಿನ ಕೆಲಸದ ದಿನವನ್ನಾಗಿ ಮಾಡಿ ಸರಿದೂಗಿಸಬಹುದು ಎಂದು ಸಲಹೆ ನೀಡಿದ್ದರು. ವಿರೋಧ ಪಕ್ಷದ ಯುಡಿಎಫ್ ನಾಯಕರು ಕೂಡ ರಜೆ ಘೋಷಣೆಯನ್ನು ಬೆಂಬಲಿಸಿದ್ದರು.ಇದನ್ನೂ ಓದಿ: ಗುಳೆ ಹೋಗುವುದನ್ನು ತಪ್ಪಿಸಲು ಜನರಿಗೆ ಉದ್ಯೋಗ ನೀಡಿ: ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಪರಮೇಶ್ವರ್ ಸೂಚನೆ
