ಪಣಜಿ: ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ (Goa) ಬಿಜೆಪಿ (BJP) ಶಾಸಕಿ ಮತ್ತು ಮಾಜಿ ಸಚಿವೆ ಜೆನ್ನಿಫರ್ ಮಾನ್ಸೆರಾಟ್ಟೆ (56) (Jennifer Monseratte) ನಿಧನರಾಗಿದ್ದಾರೆ.
ಉತ್ತರ ಗೋವಾ ಜಿಲ್ಲೆಯ ತಲೈಗಾವೊ ವಿಧಾನಸಭಾ ಕ್ಷೇತ್ರವನ್ನುಅವರು ಪ್ರತಿನಿಧಿಸುತ್ತಿದ್ದರು. ಅವರ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಫಿಫಾ ಕ್ರೇಜ್‌ಗೆ ಕೇರಳ ಸರ್ಕಾರದ ಫುಲ್ ಸಪೋರ್ಟ್; ಫೈನಲ್ ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಣೆ
ಜೆನ್ನಿಫರ್ ಮಾನ್ಸೆರಾಟ್ಟೆ 2012 ರಿಂದ ತಲೈಗಾವೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮೂರು ಭಾರಿ ಅವರು ಶಾಸಕಿಯಾಗಿದ್ದರು. 2019 ರಲ್ಲಿ ಅವರಿಗೆ ಸಚಿವೆ ಸ್ಥಾನ ಸಹ ಲಭಿಸಿತ್ತು. 2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ 10 ಕಾಂಗ್ರೆಸ್ ಶಾಸಕರಲ್ಲಿ ಅವರು ಜೆನ್ನಿಫರ್ ಸಹ ಒಬ್ಬರು.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಪ್ರಮೋದ್ ಸಾವಂತ್, ತಲೈಗಾವೊದ ಮೊದಲ ಮಹಿಳಾ ಶಾಸಕಿ ಮತ್ತು ಮೂರು ಬಾರಿ ಶಾಸಕಿಯಾಗಿ ಜನ್ನಿಫರ್ ಸೇವೆ ಸಲ್ಲಿಸಿದ್ದಾರೆ. ಅವರು ಇಹಲೋಕ ತ್ಯೆಜಿಸಿದ್ದು, ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಜೆನ್ನಿಫರ್ ಅವರ ಪತಿ ಅಟನಾಸಿಯೊ ಮಾನ್ಸೆರಾಟ್ಟೆ ಸಚಿವರಾಗಿದ್ದಾರೆ ಮತ್ತು ಅವರ ಮಗ ರೋಹಿತ್ ಮಾನ್ಸೆರಾಟ್ಟೆ ಪಣಜಿ ನಗರ ಪಾಲಿಕೆಯ ಮೇಯರ್ ಆಗಿದ್ದಾರೆ. ಇದನ್ನೂ ಓದಿ: ಮೋದಿ ಮೌನ ಅಕ್ಷಮ್ಯ – ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ಸ್ವತಂತ್ರ ತನಿಖೆಗೆ ರಾಹುಲ್, ಖರ್ಗೆ ಆಗ್ರಹ
