Connect with us

Cricket

ಸಿಕ್ಸ್ ಸಿಡಿಸಿ ಐಪಿಎಲ್‍ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ

Published

on

ದುಬೈ: ಇಂದು ನಡೆಯುತ್ತಿರುವ ಐಪಿಎಲ್-2020 ಸಂಡೇ ಧಮಾಕದ ಮೊದಲ ಪಂದ್ಯದಲ್ಲಿ ಒಂದು ಸಿಕ್ಸ್ ಸಿಡಿಸಿ ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ.

ಇಂದು ದುಬೈ ಮೈದಾನದಲ್ಲಿ ಐಪಿಎಲ್-2020ಯ 44ನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಚೆನ್ನೈ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ ಅರ್ಧಶತಕ ಮತ್ತು ಎಬಿಡಿ ವಿಲಿಯರ್ಸ್ ಅವರ ತಾಳ್ಮೆಯ ಆಟದಿಂದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 146 ರನ್‍ಗಳ ಸಾಧಾರಣ ಗುರಿಯನ್ನು ನೀಡಿದೆ.

ಕೊಹ್ಲಿ ದಾಖಲೆ
ಇಂದಿನ ಪಂದ್ಯದಲ್ಲಿ ತಾಳ್ಮೆಯಿಂದ ಆಟವಾಡಿದ ವಿರಾಟ್ ಕೊಹ್ಲಿಯವರು 43 ಎಸೆತದಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಸಮೇತ 50 ರನ್ ಹೊಡೆದು ಮಿಂಚಿದರು. ಈ ಪಂದ್ಯದಲ್ಲಿ ಒಂದು ಸಿಕ್ಸರ್ ಹೊಡೆದ ಕೊಹ್ಲಿ ಐಪಿಎಲ್‍ನಲ್ಲಿ 200 ಸಿಕ್ಸರ್ ಸಿಡಿಸಿದರು. ಈ ಮೂಲಕ ಐಪಿಎಲ್ ಆರಂಭದಿಂದಲೂ ಒಂದೇ ತಂಡದಲ್ಲಿ ಆಡಿ 200 ರನ್ ಸಿಡಿಸಿದ ಮೊದಲ ಆಟಗಾರ ಎಂಬ ವಿಶೇಷ ದಾಖಲೆ ಬರೆದರು. ಜೊತೆಗೆ ಧೋನಿ ಮತ್ತು ರೋಹಿತ್ ನಂತರ ಐಪಿಎಲ್‍ನಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡರು.

ಐಪಿಎಲ್‍ನಲ್ಲಿ 336 ಸಿಕ್ಸ್ ಕ್ರಿಸ್ ಗೇಲ್ ಹೊಡೆದಿದ್ದಾರೆ. ನಂತರದ ಸ್ಥಾನದಲ್ಲಿ ಎಬಿಡಿ ವಿಲಿಯರ್ಸ್ 231 ಸಿಕ್ಸ್ ಹೊಡೆದಿದ್ದಾರೆ. ಧೋನಿ 216, ರೋಹಿತ್ ಶರ್ರ್ಮಾ 209 ಸಿಕ್ಸ್ ಹೊಡಿದ್ದಾರ. ಕೊಹ್ಲಿ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದ್ದಾರೆ.

ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಅವರು ಮೊದಲ ವಿಕೆಟ್‍ಗೆ ಸಾಧಾರಣ ರನ್ ಕಲೆಹಾಕಿದರು. ತಂಡದ ಮೊತ್ತ 31 ಆಗಿದ್ದಾಗ ಆರೋನ್ ಫಿಂಚ್ ಅವರು ಔಟ್ ಆಗಿ ಹೊರನಡೆದರು. ನಂತರ ಆರನೇ ಓವರಿನಲ್ಲಿ ಫಾಫ್ ಡು ಪ್ಲೆಸಿಸ್ ಬೌಂಡರಿ ಗೆರೆಯ ಬಳಿ ಹಿಡಿದ ಅದ್ಭುತ ಕ್ಯಾಚಿಗೆ ದೇವದತ್ ಪಡಿಕ್ಕಲ್ ಅವರು ಔಟದರು.

ನಂತರ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಅವರು ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿ ಅರ್ಧಶತಕದ ಜೊತೆಯಾಟವಾಡಿದರು. ಆದರೆ 36 ಬಾಲಿನಲ್ಲಿ 39 ರನ್ ಗಳಿಸಿದ್ದ ಎಬಿಡಿ ವಿಲಿಯರ್ಸ್ ಅವರು 17ನೇ ಓವರ್ ಮೂರನೇ ಬಾಲಿನಲ್ಲಿ ಔಟ್ ಆದರು. ಇದಾದ ನಂತರ ಬಂದ ಮೊಯೀನ್ ಅಲಿ, ಗುರ್ಕೀರತ್ ಸಿಂಗ್ ಮನ್ ಮತ್ತು ಕ್ರಿಸ್ ಮೋರಿಸ್ ಯಾರೂ ಎರಡಂಕಿ ರನ್ ದಾಟಲಿಲ್ಲ. ಹೀಗಾಗಿ 20 ಓವರ್ ಮುಕ್ತಾಯಕ್ಕೆ ಆರ್‍ಸಿಬಿ ಕೇವಲ 145 ರನ್ ಸಿಡಿಸಿತು.

Click to comment

Leave a Reply

Your email address will not be published. Required fields are marked *

www.publictv.in