‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ವಿನಯ್ (Vinay Gowda) ಅವರಿಗೆ ಈ ವರ್ಷ ತುಂಬಾನೇ ಸ್ಪೆಷಲ್. ಬಿಗ್ ಬಾಸ್ ಶೋ ನಂತರ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ವಿನಯ್ ಇದೀಗ ಗ್ರ್ಯಾಂಡ್ ಆಗಿ ಬರ್ತ್ಡೇ (Birthday) ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಆನೆ ವಿನಯ್ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಿದೆ.
- Advertisement 2
ಮಾರ್ಚ್ 7ರಂದು ವಿನಯ್ ಅವರು 45ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳ ಜೊತೆ ಸೆಲೆಬ್ರೇಷನ್ ಮುಗಿದ ಮೇಲೆ ಖಾಸಗಿ ಹೋಟೆಲ್ವೊಂದರಲ್ಲಿ ಸೆಲೆಬ್ರಿಟಿಗಳಿಗೆ ಅದ್ಧೂರಿ ಬರ್ತ್ಡೇ ಪಾರ್ಟಿ ಕೊಟ್ಟಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:‘ಆಡು ಜೀವಿತಂ’ ಟ್ರೈಲರ್ ನೋಡಿ ಪೃಥ್ವಿರಾಜ್ರನ್ನು ಹಾಡಿ ಹೊಗಳಿದ ಪ್ರಭಾಸ್
- Advertisement 3
- Advertisement 4
ವಿನಯ್ ಬರ್ತ್ಡೇ ನೀತು ವನಜಾಕ್ಷಿ, ಪವಿ ಪೂವಪ್ಪ, ಕಾರ್ತಿಕ್ ಮಹೇಶ್ (Karthik Mahesh), ನಮ್ರತಾ ಗೌಡ, ಸ್ನೇಹಿತ್, ಮೈಕಲ್ ಅಜಯ್, ಬಿಗ್ ಬಾಸ್ ಕಿಶನ್, ದಿವ್ಯಾ ಉರುಡುಗ (Divya Uruduga), ಇಶಾನಿ, ಅಜಿತ್ ಜಯರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ವಿಶ್ ಮಾಡಿದ್ದಾರೆ.
ಅಂದಹಾಗೆ, ವಿನಯ್ಗೆ ಇದೀಗ ಕನ್ನಡ ಮತ್ತು ಪರಭಾಷೆಗಳಿಂದ ಸಿನಿಮಾ ಆಫರ್ಸ್ ಅರಸಿ ಬಂದಿದೆ. ಉತ್ತಮ ಕಥೆಯೊಂದಿಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಮೈಕಲ್ ಅಜಯ್ ಜೊತೆ ಬ್ಯುಸಿನೆಸ್ಗೆ ಕೈಜೋಡಿಸೋದಾಗಿ ಹೇಳಿದ್ದಾರೆ.
‘ಹರಹರ ಮಹಾದೇವ’ ಸೀರಿಯಲ್ನಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಜೊತೆ ವಿನಯ್ ನಟಿಸಿದ್ದಾರೆ. ಶಿವನಾಗಿ ವಿನಯ್ ಜೀವತುಂಬಿದ್ದರು. ಬಳಿಕ ಶಿವಾಜಿ ಸುರತ್ಕಲ್, ಪೊಗರು ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿನಯ್ ನಟಿಸಿದ್ದಾರೆ.