Saturday, 14th December 2019

Recent News

ಸಚಿವ ಡಿಕೆಶಿ ಹೇಳಿದ್ರೆ ರೇಪ್ ಕೂಡ ಮಾಡ್ಸಿಕೊಳ್ತೀರಾ? – ನರ್ಸ್ ಗಳಿಗೆ ನಿಂದಿಸಿದ್ರಂತೆ ವಿಕ್ಟೋರಿಯಾ ವಿಶೇಷಾಧಿಕಾರಿ!

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ವಿಶೇಷಾಧಿಕಾರಿ ಬಾಲಾಜಿ ಪೈ ವಿರುದ್ಧ ಭಾರೀ ಆರೋಪವೊಂದು ಇದೀಗ ಕೇಳಿ ಬಂದಿದೆ.

ಬಾಲಾಜಿ ಪೈ ಆಸ್ಪತ್ರೆಯ ನರ್ಸ್ ಗಳನ್ನು ನಿಂದಿಸಿದ್ದಾಗಿ ಆರೋಪಿಸಲಾಗಿದ್ದು, ಸದ್ಯ 20ಕ್ಕೂ ಹೆಚ್ಚು ಸ್ಟಾಫ್ ನರ್ಸ್ ಗಳು ಬಾಲಾಜಿ ವಿರುದ್ಧ ಡೀನ್ ಗೆ ದೂರು ನೀಡಿದ್ದಾರೆ.

ಏನಿದು ಆರೋಪ?:
ರೆಕಾರ್ಡ್ ನಿರ್ವಹಿಸುವ ವಿಚಾರದಲ್ಲಿ ಜಗಳವಾಗಿದೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಡೀನ್ ಗೆ ರೆಕಾರ್ಡ್ ಕೊಡುವುದು ನರ್ಸ್ ಜವಾಬ್ದಾರಿಯಾಗಿತ್ತು. ಹಾಗೆಯೇ ಆಕೆ ಅದನ್ನು ಡೀನ್ ಗೆ ಕೊಟ್ಟಿದ್ದಾರೆ. ಆದ್ರೆ ಬಾಲಾಜಿ ಅವರ ಗಮನಕ್ಕೆ ತಾರದೇ ಕೊಟ್ಟಿದ್ದಕ್ಕೆ ಪೈ, ನರ್ಸ್ ಅನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

`ಏನಮ್ಮ ಅವರು ಕೇಳಿದ್ದನ್ನೆಲ್ಲಾ ಕೋಡೋಕೆ ನಿಮಗೆ ನಾಚಿಕೆ ಆಗಲ್ವಾ. ನಾಳೆ ಸಚಿವ ಡಿಕೆ ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಫ್ ನರ್ಸ್‍ಗಳನ್ನು ರೇಪ್ ಮಾಡು ಅಂತಾರೆ. ಆಗ ನೀವು ರೇಪ್ ಮಾಡಿಸಿಕೊಳ್ಳಲು ರೆಡಿ ಇರ್ತೀರಾ? ಯಾಕಂದ್ರೆ ಮಂತ್ರಿಗಳಲ್ವಾ ಅವರು. ಹೀಗಾಗಿ ಅವರು ಹೇಳಿದಾಗ ನೀವು ರೆಪ್ಯೂಸ್ ಮಾಡಂಗಿಲ್ಲ’ ಅಂತ ಪೈ ನಿಂದಿಸಿದ್ದಾರೆ ಅಂತ ನರ್ಸ್‍ಗಳು ಆರೋಪಿಸಿದ್ದಾರೆ.

ಸದ್ಯ ಬಾಲಾಜಿ ಪೈ ವಿರುದ್ಧ ಟ್ರಾಮಾ ಸೆಂಟರ್‍ನ ಸ್ಟಾಫ್ ನರ್ಸ್, ಬಿಎಂಸಿ ಡೀನ್‍ಗೆ ದೂರು ನೀಡಿದ್ದಾರೆ. 20ಕ್ಕೂ ಹೆಚ್ಚು ಸ್ಟಾಫ್ ನರ್ಸ್‍ಗಳು ಲಿಖಿತ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

2 thoughts on “ಸಚಿವ ಡಿಕೆಶಿ ಹೇಳಿದ್ರೆ ರೇಪ್ ಕೂಡ ಮಾಡ್ಸಿಕೊಳ್ತೀರಾ? – ನರ್ಸ್ ಗಳಿಗೆ ನಿಂದಿಸಿದ್ರಂತೆ ವಿಕ್ಟೋರಿಯಾ ವಿಶೇಷಾಧಿಕಾರಿ!

  1. Defaulter must be dealt strictly , officer doesn\\\’t have any rights like this cheap words, he has to speak in his limits only. Higher authority has to take strict action against this officer, ashamed to BMCRI as to say no 1 hospital

Leave a Reply

Your email address will not be published. Required fields are marked *