ನವದೆಹಲಿ: ಪಶ್ಚಿಮ ಬಂಗಾಳದಲ್ಲಿ (West Bengal) ಕಮಲ ಅರಳಿಸಬೇಕೆಂಬ ಶ್ಯಾಮ್ ಪ್ರಸಾದ್ ಮುಖರ್ಜಿ, ವಾಜಪೇಯಿ ಅವರ ಕನಸು ನನಸಾಗಿದೆ. ಈ ಮೂಲಕ ಬಿಜೆಪಿ(BJP) ಆಡಳಿತದ ರಾಜ್ಯಗಳ ಸಂಖ್ಯೆ 20ಕ್ಕೆ ಏರಿಕೆ.
ಯಾವ ರಾಜ್ಯಗಳಲ್ಲಿ ಯಾರು ಆಡಳಿತ?
ಬಿಜೆಪಿ ಸ್ವತಂತ್ರ ಆಡಳಿತ – 16 ರಾಜ್ಯ
ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಗೋವಾ, ರಾಜಸ್ಥಾನ, ಹರ್ಯಾಣ, ದೆಹಲಿ, ಒಡಿಶಾ, ಉತ್ತರಾಖಂಡ್, ಛತ್ತೀಸ್‌ಗಡ, ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ತ್ರಿಪುರ
ಬಿಜೆಪಿ ಎನ್‌ಡಿಎ ಮೈತ್ರಿ ಆಡಳಿತ – 4 ರಾಜ್ಯ
ಬಿಹಾರ(ಜೆಡಿಯು) ಆಂಧ್ರ ಪ್ರದೇಶ (ಟಿಡಿಪಿ), ನಾಗಾಲ್ಯಾಂಡ್ (ನಾಗಾ ಪೀಪಲ್ಸ್ ಫ್ರಂಟ್) ಮೇಘಾಲಯ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಇದನ್ನೂ ಓದಿ: ದೇವರ ನಾಡಿನಲ್ಲಿ ಅರಳಿದ ಕಮಲ – 3 ಗೆಲುವಿನೊಂದಿಗೆ ಇತಿಹಾಸ ಸೃಷ್ಟಿ
ಕಾಂಗ್ರೆಸ್ ಆಡಳಿತ – 4 ರಾಜ್ಯ
ಹಿಮಾಚಲ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಜೊತೆ ಜೆಎಎಂ ಸರ್ಕಾರ)
ಇತರೆ ಪಕ್ಷಗಳ ದರ್ಬಾರ್ – 4 ರಾಜ್ಯ
ಜಮ್ಮು ಕಾಶ್ಮೀರ – ಎನ್‌ಸಿ ಒಮರ್ ಅಬ್ದುಲ್ಲಾ, ಪಂಜಾಬ್ – ಭಗವಂತ್ ಮಾನ್, ಸಿಕ್ಕಿಂ – ಎಸ್‌ಕೆಎಂ, ತಮಿಳುನಾಡು- ಟಿವಿಕೆ
𝐅𝐫𝐨𝐦 𝐭𝐡𝐞 𝐡𝐞𝐚𝐫𝐭𝐥𝐚𝐧𝐝 𝐭𝐨 𝐁𝐞𝐧𝐠𝐚𝐥, 𝐭𝐡𝐞 𝐦𝐚𝐩 𝐢𝐬𝐧’𝐭 𝐣𝐮𝐬𝐭 𝐞𝐱𝐩𝐚𝐧𝐝𝐢𝐧𝐠, 𝐢𝐭’𝐬 𝐭𝐡𝐞 𝐛𝐞𝐥𝐢𝐞𝐟 𝐨𝐟 𝐚 𝐧𝐚𝐭𝐢𝐨𝐧 𝐝𝐞𝐭𝐞𝐫𝐦𝐢𝐧𝐞𝐝 𝐭𝐨 𝐩𝐫𝐨𝐠𝐫𝐞𝐬𝐬.
North to Northeast, the colour shift is no longer subtle. Bengal is simply the… pic.twitter.com/QODKYqCyU1
— BJP (@BJP4India) May 4, 2026
ವಾಜಪೇಯಿ ಕನಸು ಏನಿತ್ತು?
1980ರಲ್ಲಿ ಜನತಾ ಪಕ್ಷದಿಂದ ಹೊರಬಂದು ಹೊಸದಾಗಿ ಬಿಜೆಪಿಯನ್ನು ಕಟ್ಟಿದಾಗ ಪಕ್ಷವು ಆರಂಭಿಕ ಹಂತದ ಸವಾಲುಗಳನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ವಾಜಪೇಯಿ ಭಾಷಣದ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದರು. 1980ರಲ್ಲಿ ಮುಂಬೈನ ಬಾಂದ್ರಾದಲ್ಲಿ ನಡೆದ ಬಿಜೆಪಿಯ ಮೊದಲ ರಾಷ್ಟ್ರೀಯ ಅಧಿವೇಶನದಲ್ಲಿ ಒಂದು ಐತಿಹಾಸಿಕ ಭವಿಷ್ಯವಾಣಿಯನ್ನು ಮಾಡಿದ್ದರು.
ಅಂಧೇರಾ ಛಟೇಗಾ, ಸೂರಜ್ ನಿಕ್ಲೇಗಾ, ಕಮಲ್ ಖಿಲೇಗಾ(ಅಂಧಕಾರ ಅಳಿಯಲಿದೆ, ಸೂರ್ಯ ಉದಯಿಸಲಿದ್ದಾನೆ, ಕಮಲ ಅರಳಲಿದೆ) ಎಂದು ಭಾಷಣದಲ್ಲಿ ಭವಿಷ್ಯ ನುಡಿದಿದ್ದರು. ರಾಜಕೀಯವಾಗಿ ಎಷ್ಟೇ ಕತ್ತಲೆ ಆವರಿಸಿದ್ದರೂ, ಭವಿಷ್ಯದಲ್ಲಿ ಬಿಜೆಪಿ ಇಡೀ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಅಚಲ ವಿಶ್ವಾಸವನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಯಶಸ್ಸು ಕಂಡಾಗಲೆಲ್ಲಾ ನರೇಂದ್ರ ಮೋದಿ ಅವರೂ ಸೇರಿದಂತೆ ಅನೇಕ ನಾಯಕರು ವಾಜಪೇಯಿ ಅವರ ಈ ಪ್ರೇರಣಾದಾಯಿ ಸಾಲುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ.












