LatestMain PostNational

7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSCಯಲ್ಲಿ ಪಾಸ್

ಲಕ್ನೋ: ಭ್ರಷ್ಟಾಚಾರ ಪ್ರಕರಣವನ್ನು ಬಹಿರಂಗ ಪಡಿಸಿದಕ್ಕೆ 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿಯೊಬ್ಬರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

ರಿಂಕೂ ರಹೀ ಉತ್ತರ ಪ್ರದೇಶದ ಹಾಪುರ್‍ನವರು. ಇವರು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಸದ್ಯ ಇತ್ತೀಚೆಗೆ ನಡೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ 683 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

2008ರಲ್ಲಿ ಮುಜಾಫರ್‌ನಗರದಲ್ಲಿ ನಡೆದ ಸ್ಕಾಲರ್‍ಶಿಪ್‍ನಲ್ಲಿ 83 ಕೋಟಿ ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರಕರಣದಲ್ಲಿ 8 ಜನರ ಮೇಲೆ ಆರೋಪ ಹೊರಿಸಿ ಅವರಲ್ಲಿ ನಾಲ್ವರಿಗೆ 10 ವರ್ಷಗಳ ಜೈಲು ಶಿಕ್ಷೆ ಆಗಿತ್ತು. ಆದರೆ ಈ ಹಗರಣ ಬಹಿರಂಗವಾದ ಕೂಡಲೇ ರಿಂಕೂ ರಹೀ ಮೇಲೆ ಕೆಲ ದುಷ್ಕರ್ಮಿಗಳು 7 ಬಾರಿ ಗುಂಡು ಹಾರಿಸಿದ್ದರು. ಇದರಿಂದಾಗಿ ಅವರ ಮುಖ ವಿರೂಪಗೊಂಡು, ಅವರು ದೃಷ್ಟಿ ಹಾಗೂ ಶ್ರವಣವನ್ನು ಕಳೆದುಕೊಂಡಿದ್ದರು.ಆದರೂ ಛಲ ಬಿಡದ ಅವರು ರಾಜ್ಯ ಚಾಲಿತ ಐಎಎಸ್ ಕೋಚಿಂಗ್ ಸೆಂಟರ್‍ನ ನಿರ್ದೇಶಕರಾಗಿ ಹಲವು ವರ್ಷಗಳಿಂದ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಅವರು ಕಲಿಸಿದ್ದಾರೆ. ಇದನ್ನೂ ಓದಿ: ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

ಈ ಬಗ್ಗೆ ಮಾತನಾಡಿದ ಅವರು, ನನ್ನ ವಿದ್ಯಾರ್ಥಿಗಳು ಯುಪಿಎಸ್‍ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಅವರ ಪ್ರಚೋದನೆಯಿಂದಾಗಿ ನಾನು ಇದನ್ನು ಮಾಡಿದ್ದೇನೆ. ಇದಕ್ಕೂ ಮೊದಲು 2004ರಲ್ಲಿ ನಾನು ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೆ. ನನಗೆ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿದೆ. ಸ್ವಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ನಡುವೆ ಘರ್ಷಣೆಯಾದರೆ, ನಾನು ಸಾರ್ವಜನಿಕ ಹಿತಾಸಕ್ತಿಯನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

Leave a Reply

Your email address will not be published. Required fields are marked *

Back to top button