ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Upendra) ಕೂಡ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಉಪ್ಪಿ ನಟನೆಯ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ಮೂರು ವರ್ಷದಿಂದ ಉಪ್ಪಿ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದರು. ಅದು ಕೂಡ ಈ ವರ್ಷ ಈಡೇರಿದೆ. ಹೀಗಾಗಿ ಉಪ್ಪಿ ಮತ್ತು ಅಭಿಮಾನಿಗಳಿಗೆ ಈ ವರ್ಷ ಡಬಲ್ ಸಂಭ್ರಮ ತಂದಿದೆ. ಬೆಂಗಳೂರಿನ ಉಪ್ಪಿ ಮನೆಮುಂದೆ ಸಾವಿರಾರು ಅಭಿಮಾನಿಗಳು ನೆರೆದಿದ್ದು, ನೆಚ್ಚಿನ ನಟನ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.
Advertisement
ಹುಟ್ಟು ಹಬ್ಬಕ್ಕೆ (Birthday) ಬರುವಾಗ ಹಾರ, ತುರಾಯಿ, ಕೇಕ್ ಏನೂ ತರಬಾರದು ಎಂದು ಈ ಹಿಂದೆಯೇ ಅಭಿಮಾನಿಗಳಿಗೆ ಉಪ್ಪಿ ಹೇಳಿದ್ದರು. ಉಡುಗೊರೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದರು. ಎಲ್ಲರೊಂದಿಗೆ ಫೋಟೋ ತಗೆಸಿಕೊಳ್ಳುವ ಕುರಿತು ಮಾತನಾಡಿದ್ದರು. ಅಲ್ಲದೇ, ಸಮಾಜದ ಬಗ್ಗೆ 18 ಪದ ಮೀರದಂತೆ ಬರೆದುಕೊಂಡು ಬನ್ನಿ ಎಂದು ತಿಳಿಸಿದ್ದರು. ಉಪ್ಪಿ ಹೇಳಿದಂತೆ ಅಭಿಮಾನಿಗಳು ಈ ಕೆಲಸವನ್ನು ಮಾಡಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ
Advertisement
Advertisement
ಈ ಕುರಿತು ಮಾತನಾಡಿರುವ ಉಪೇಂದ್ರ, ಮೂರು ವರ್ಷದಿಂದ ನಾನೂ ಕೂಡ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಈ ಬಾರಿ ಅವರ ಜೊತೆ ಸೆಲೆಬ್ರೇಟ್ ಮಾಡುತ್ತಿರುವೆ. ಕಬ್ಜ ಸಿನಿಮಾದ ಟೀಸರ್, ಯುಐ ಚಿತ್ರ ಕ್ಯಾಮೆರಾದೊಳಗೆ ಕ್ಯಾಮೆರಾ ಇರೋ ಗ್ಲಿಂಪ್ಸ್ ರಿಲೀಸ್ ಮಾಡಿದ್ದೇವೆ. ಅಭಿಮಾನಿಗಳು ಮತ್ತು ಪ್ರಜಾಕೀಯ ಫಾಲೋ ಮಾಡುತ್ತಿರುವವರು ಸೇರಿದ್ದಾರೆ. ಎಲ್ಲರನ್ನೂ ನೋಡಿ ಖುಷಿ ಆಗುತ್ತಿದೆ’ ಎಂದಿದ್ದಾರೆ ಉಪ್ಪಿ.
Advertisement
ಕಬ್ಜ (Kabzaa) ಸಿನಿಮಾವನ್ನು ಕೆಜಿಎಫ್ ಚಿತ್ರಕ್ಕೆ ಹೋಲಿಸುತ್ತಿರುದು ಖುಷಿ ಆಗುತ್ತಿದೆ ಎಂದಿರುವ ಉಪೇಂದ್ರ, ಕೆಜಿಎಫ್ ತರಹ ಇನ್ನೊಂದು ಸಿನಿಮಾ ಬರ್ತಿದೆ ಅಂದರೆ, ಅದು ಹೆಮ್ಮೆ ಅಲ್ಲವೆ? ಆದರೂ, ಈ ಸಿನಿಮಾ ಬೇರೆ ರೀತಿ ಇದೆ. ಕಬ್ಜ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯ್ತಾ ಇರಬೇಕು ಎನ್ನುತ್ತಾರೆ ಉಪೇಂದ್ರ.