ಉಡುಪಿ: ಮಹಾಮಾರಿ ಕೊರೊನಾ ವೈರಸ್ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆತಂಕ ಹುಟ್ಟಿಸಿದೆ. ಒಂದೇ ದಿನ ನಾಲ್ಕು ಶಂಕಿತ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಸಂಜೆ ಶಿರ್ವ ಮೂಲದ ವ್ಯಕ್ತಿ ದಾಖಲಾಗಿದ್ದಾರೆ.
ಕಾಪು ತಾಲೂಕು ಶಿರ್ವ ಮೂಲದ 37 ವರ್ಷ ಪ್ರಾಯದ ಯುವಕ ಇತ್ತೀಚೆಗೆ ಕೊರೊನಾ ವೈರಸ್ ಕಾರಣಕ್ಕಾಗಿ ನಿರ್ಬಂಧಿತವಾಗಿದ್ದ ಜಪಾನಿ ಹಡಗಿನಲ್ಲಿ ನೌಕರಿಯಲ್ಲಿದ್ದರು. ವೈದ್ಯಕೀಯ ಪರೀಕ್ಷೆಯ ವೇಳೆ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗದ ಕಾರಣ ಬಿಡುಗಡೆಗೊಂಡು ದುಬೈಗೆ ತೆರಳಿ, ರಜೆಯಲ್ಲಿ ಊರಿಗೆ ವಾಪಸ್ ಆಗಿದ್ದರು.
Advertisement
Advertisement
ಶಂಕಿತ ವ್ಯಕ್ತಿಯಲ್ಲಿ ಕೆಮ್ಮು, ಶೀತ, ಜ್ವರದ ತೊಂದರೆ ಕಾಣಿಸಿಕೊಂಡಿಲ್ಲ. ಉಸಿರಾಟದ ತೊಂದರೆಯೊಂದಿಗೆ ಭೇದಿ ಹಾಗೂ ವಿಪರೀತ ಹೊಟ್ಟೆನೋವು ಇರುವ ಕಾರಣ ಶುಕ್ರವಾರ ಸಂಜೆ ಜಿಲ್ಲಾಸ್ಪತ್ರೆಗೆ ಬಂದು ಇಲ್ಲಿನ ಪ್ರತ್ಯೇಕಿತ ವಾರ್ಡ್‍ಗೆ ದಾಖಲಾಗಿದ್ದಾರೆ. ಗಂಟಲಿನ ದ್ರವ ಹಾಗೂ ರಕ್ತದ ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸುಧೀರ್ ಚಂದ್ರಸೂಡ ಮಾಹಿತಿ ನೀಡಿದರು.