ಬೀದರ್: ಮಾವಿನ ಹಣ್ಣು (Mangoes) ಸೇವಿಸಿ ಅಸ್ವಸ್ಥಗೊಂಡಿದ್ದ ಬೀದರ್ (Bidar) ಮೂಲದ ಇಬ್ಬರು ಸಹೋದರಿಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.
ಔರಾದ್ ತಾಲೂಕಿನ ಶೆಂಬೆಳ್ಳಿ ಮೂಲದ ಭವಾನಿ ವೈಜಿನಾಥ ಮೇತ್ರೆ (17) ಮತ್ತು ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ಸಹೋದರಿಯರು. ಜೂನ್ 9 ರಂದು ಮನೆಯಲ್ಲಿ ಊಟದ ಬಳಿಕ ತಾಯಿ ಇಂದುಮತಿ ಹಾಗೂ 5 ಜನ ಹೆಣ್ಣು ಮಕ್ಕಳು ಮಾವಿನ ಹಣ್ಣು ಸೇವಿಸಿದ್ದರು. ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥತರಾಗಿದ್ದರು. ತಕ್ಷಣ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಇದನ್ನೂ ಓದಿ: ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು
ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಹೋದರಿ ವಿಜಯಶ್ರೀ (19) ಸ್ಥಿತಿ ಗಂಭೀರವಾಗಿದೆ. ತಾಯಿ ಹಾಗೂ ಇನ್ನೊಬ್ಬ ಮಗಳು ಚೇತರಿಸಿಕೊಂಡಿದ್ದಾರೆ.
ಈ ಸಂಬಂಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸತ್ಯಾಂಶ ಬಹಿರಂಗವಾಗಲಿದೆ. ಇದನ್ನೂ ಓದಿ: ಮುಂಬೈನ ಒಂದೇ ಕುಟುಂಬದ ನಾಲ್ವರ ಸಾವಿಗೆ ಟ್ವಿಸ್ಟ್ – ಕಲ್ಲಂಗಡಿ ಹಣ್ಣಿನಲ್ಲಿತ್ತು ಇಲಿ ಪಾಷಾಣ
