– ವಿಧಿವಿಜ್ಞಾನ ವರದಿಯಿಂದ ಅಸಲಿ ಕಾರಣ ಬಯಲು
ಮುಂಬೈ: ಮಟನ್ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು (Watermelon) ತಿಂದಿದ್ದರಿಂದ ಫುಡ್ ಪಾಯಿಸನ್ ಆಗಿ ಮುಂಬೈನ (Mumbai) ಒಂದೇ ಕುಟುಂಬದ (Family) ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅವರು ಮೃತಪಟ್ಟಿರುವುದು ಕಲ್ಲಂಗಡಿ ಸೇವನೆಯಿಂದಲ್ಲ, ಬದಲಾಗಿ ಇಲಿ ಪಾಷಾಣದಿಂದ ಎಂಬುದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ.
ಮೃತರ ದೇಹದಲ್ಲಿ ಹಾಗೂ ಅವರು ತಿಂದಿದ್ದ ಕಲ್ಲಂಗಡಿ ಹಣ್ಣಿನ ಮಾದರಿಯಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ಝಿಂಕ್ ಫಾಸ್ಫೈಡ್ (Zinc Phosphite) ಎಂಬ ವಿಷಕಾರಿ ರಾಸಾಯನಿಕದ ಅಂಶಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯ ವೇಳೆ ಮೃತರ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಇದು ವಿಷಪ್ರಾಶನದ ಸ್ಪಷ್ಟ ಲಕ್ಷಣವಾಗಿದ್ದು, ಇದೀಗ ವಿಧಿವಿಜ್ಞಾನ ವರದಿಯು ಸಾವಿನ ಅಸಲಿ ಕಾರಣವನ್ನು ಬಯಲು ಮಾಡಿದೆ. ಇದನ್ನೂ ಓದಿ: ಬಡವರ ‘ಅನ್ನ’ಕ್ಕೆ ಕನ್ನ – ಗದಗದಲ್ಲಿ ಬೃಹತ್ ಪಡಿತರ ಅಕ್ಕಿ ದಂಧೆ ಪತ್ತೆ, 14 ಲಕ್ಷ ಮೌಲ್ಯದ ಅಕ್ಕಿ ಜಪ್ತಿ!
ಘಟನೆಯ ಹಿನ್ನೆಲೆ:
ಅಬ್ದುಲ್ಲಾ ಡೊಕಾಡಿಯಾ (45), ಪತ್ನಿ ನಸ್ರೀನ್ (35), ಮಕ್ಕಳಾದ ಝೈನಬ್ (13) ಮತ್ತು ಆಯೇಷಾ ಬಿರಿಯಾನಿ ಬಳಿಕ ಕಲ್ಲಂಗಡಿ ಹಣ್ಣು ತಿಂದು ತೀವ್ರ ವಾಂತಿ ಮತ್ತು ಭೇಧಿಯಿಂದ ಮೃತಪಟ್ಟಿದ್ದರು. ಈ ಕುಟುಂಬ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸಂಬಂಧಿಕರಿಗೆ ಔತಣಕೂಟ ಏರ್ಪಡಿಸಿತ್ತು. ರಾತ್ರಿ ಊಟಕ್ಕೆ ಮಟನ್ ಬಿರಿಯಾನಿ ಬಡಿಸಲಾಗಿತ್ತು. ಊಟ ಮುಗಿಸಿ ಸಂಬಂಧಿಕರು ತೆರಳಿದ ಬಳಿಕ, ಮಧ್ಯರಾತ್ರಿ ಕುಟುಂಬದ ನಾಲ್ವರು ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಾಲ್ವರಿಗೂ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲರೂ ಪ್ರಾಣಬಿಟ್ಟಿದ್ದರು. ಇದನ್ನೂ ಓದಿ: ಗಿಫ್ಟ್ ನೀಡುತ್ತೇನೆಂದು ಡಿವೋರ್ಸ್ ನೋಟಿಸ್ ಕಳುಹಿಸಿದ – ಮಗನ ಸಮಾಧಿ ಮುಂದೆ ಸೆಲೀನಾ ಜೇಟ್ಲಿ ಕಣ್ಣೀರು
ವಿಧಿವಿಜ್ಞಾನ ವರದಿಯಲ್ಲಿ ಏನಿದೆ?
ನಾಲ್ವರ ಸಾವಿಗೆ ಝಿಂಕ್ ಫಾಸ್ಫೈಡ್ (ಇಲಿಪಾಷಾಣ) ಕಾರಣ. ವೈದ್ಯರು ಮೃತರ ದೇಹ ಹಾಗೂ ಕಲ್ಲಂಗಡಿ ಹಣ್ಣು ಎರಡರಲ್ಲೂ ಈ ರಾಸಾಯನಿಕವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೇ ಕಳೆದ ವಾರ ನಡೆಸಲಾದ ಪ್ರಾಥಮಿಕ ಪರೀಕ್ಷೆಯಲ್ಲಿ ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಇದನ್ನೂ ಓದಿ: ರಾಜೀನಾಮೆ ನೀಡದೇ ಹೈಡ್ರಾಮಾ – ಮಮತಾ ಸರ್ಕಾರವೇ ವಜಾ
ಕಲ್ಲಂಗಡಿ ಹಣ್ಣಿಗೆ ಆಕಸ್ಮಿಕವಾಗಿ ಇಲಿಪಾಷಾಣ ಬೆರೆತಿದೆಯೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಣ್ಣಿನೊಳಗೆ ಇಂಜೆಕ್ಷನ್ ಮೂಲಕ ವಿಷವನ್ನು ಸೇರಿಸಿದ್ದಾರೋ ಎಂಬ ಆಯಾಮದಲ್ಲಿ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುತ್ತಾ ಟಿವಿಕೆ? – ಬೊಮ್ಮಾಯಿ ಕೇಸ್‌ಗೂ ಸರ್ಕಾರ ರಚನೆಗೆ ಏನು ಸಂಬಂಧ?

