ವಾಷಿಂಗ್ಟನ್: ಸಾಮಾಜಿಕ ಮಾಧ್ಯಮದ ಜನಪ್ರಿಯ ಟ್ವಿಟ್ಟರ್ ಲೋಗೊ (Twitter Logo) ಬದಲಾವಣೆಗೊಂಡಿದೆ. ಟ್ವಿಟ್ಟರ್‌ನ (Twitter) ‘ನೀಲಿ ಹಕ್ಕಿ’ (Blue Bird) ಲೋಗೊವನ್ನು ನಾಯಿ ಮರಿಯಾಗಿ (Doge) ಬದಲಾಯಿಸಿರುವುದಾಗಿ ಸಿಇಒ ಎಲೋನ್ ಮಸ್ಕ್ (Elon Musk) ತಿಳಿಸಿದ್ದಾರೆ.
— Elon Musk (@elonmusk) April 3, 2023
Advertisement
ಎಲೋನ್ ಮಸ್ಕ್ ಅವರ ಮನೆಯ ನಾಯಿ ‘ಶಿಬಾ ಇನು’ ಮರಿಯನ್ನು ಹಾಕಿದೆ. ಆ ಮರಿಗೆ ‘ಫ್ಲಾಕಿ’ ಎಂದು ಹೆಸರಿಡಲಾಗಿದೆ. ಹೀಗಾಗಿ ಟ್ವಿಟ್ಟರ್ ಲೋಗೊವನ್ನು ‘ಫ್ಲಾಕಿ’ ನಾಯಿ ಮರಿಯಾಗಿ ಬದಲಾಯಿಸಲಾಗಿದೆ. ಇದನ್ನೂ ಓದಿ: ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ
Advertisement
Advertisement
ಟ್ವಿಟ್ಟರ್ ಲಾಗಿನ್ ಆದ ಬಳಕೆದಾರರಿಗೆ ಅಚ್ಚರಿ ಕಾದಿತ್ತು. ನೀಲಿ ಹಕ್ಕಿ ಬದಲಾಗಿ ನಾಯಿ ಮರಿ ಲೋಗೊ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಟ್ವಿಟ್ಟರ್ ಲೋಗೊ ಬದಲಾಗಿರುವುದನ್ನು ಅನೇಕರು ಟ್ರೋಲ್ ಕೂಡ ಮಾಡಿದ್ದಾರೆ.
Advertisement
ಎಲೋನ್ ಮಸ್ಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟ್ವಿಟ್ಟರ್ ಖರೀದಿಸಿದ ನಂತರ ಮೈಕ್ರೋ-ಬ್ಲಾಗಿಂಗ್ ಸೈಟ್‌ಗೆ ಹೊಸ ನೀತಿಗಳು ಮತ್ತು ಬದಲಾವಣೆಗಳನ್ನು ತರುವ ಬಗ್ಗೆ ಆಗಾಗ್ಗೆ ಹೇಳುತ್ತಿದ್ದರು. ಅಂತೆಯೇ ಟ್ವಿಟರ್‌ಗೆ ಬದಲಾವಣೆಯೊಂದನ್ನು ತಂದಿದ್ದಾರೆ. ಟ್ವಿಟ್ಟರ್‌ನ ಸಾಂಪ್ರದಾಯಿಕ ‘ಬ್ಲೂ ಬರ್ಡ್’ ಲೋಗೊ ನಾಯಿ ಮರಿಯಾಗಿ ಬದಲಾವಣೆಗೊಂಡಿದೆ. ಇದನ್ನೂ ಓದಿ: ಪಾಕ್ ಸರ್ಕಾರಿ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ವೀಕ್ಷಿಸದಂತೆ ನಿರ್ಬಂಧ