Crime
ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

ತುಮಕೂರು: ಪತ್ನಿ ಅತ್ತೆ ಹಾಗೂ ಮಾವನ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತುರುವೇಕೆರೆ ತಾಲೂಕು ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.
ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸೆಲ್ಫಿ ವೀಡಿಯೋ ಮಾಡಿ ಕೀಟನಾಶಕ ಸೇವಿಸಿ ಆತ್ಮಹತೆಗೆ ಶರಣಾಗಿದ್ದಾನೆ. ಈ ಘಟನೆ ನವೆಂಬರ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೀಡಿಯೋದಲ್ಲಿ ಲೋಕೇಶ್ ಹೇಳಿದ್ದೇನು..?
ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ. ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಹೇಗೆ ಬದುಕಲಿ ಎಂದು ಲೋಕೇಶ್ ಅಳಲು ತೋಡಿಕೊಂಡಿದ್ದಾನೆ.
ವಿಡಿಯೋ ಮಾಡಿಟ್ಟು ಲೋಕೇಶ್ ಕೀಟನಾಶಕ ಸೇವಿಸಿದ್ದಾನೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಪೊಲೀಸರು ಪ್ರಕರಣದ ತನಿಖೆಯನ್ನೇ ಮಾಡುತ್ತಿಲ್ಲ ಅಂತ ಮೃತನ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.
