ಚೆನ್ನೈ: ವಿದೇಶ ಪ್ರವಾಸದಲ್ಲಿದ್ದ (Foreign Trip) ತಮಿಳಿನ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಾಲು ಮುರಿದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ.
ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದ ದಕ್ಷಿಣ ಭಾರತದ ಹೆಸರಾಂತ ಸಿನಿಮಾ ತಾರೆ ತ್ರಿಶಾ ಅಪಘಾತದಲ್ಲಿ (Accident) ಕಾಲು ಮುರಿದಿದ್ದು, ಸದ್ಯ ಮನೆಗೆ ಮರಳಿದ್ದಾರೆ. ಇದನ್ನೂ ಓದಿ: ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ನಟಿ ತಮ್ಮ ಕಾಲಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದು, ಅಪಘಾತವಾದ ಕಾರಣ ವೆಕೇಶನ್ನಿಂದ ವಾಪಸ್ ಬರಬೇಕಾಯಿತು ಎಂದಿದ್ದಾರೆ. ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಟಿಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್
ಎರಡು ದಶಕಗಳಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ತ್ರಿಶಾ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ವಯಸ್ಸು 40 ಸಮೀಪಿಸುತ್ತಿದ್ದರೂ ಯುವ ನಟಿಯರಿಗೂ ಕಮ್ಮಿಯಿಲ್ಲದ ನಟಿ, ಸ್ಟಾರ್ ಹೀರೋಯಿನ್ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿರುವ `ಪೊನ್ನಿಯನ್ ಸೆಲ್ವನ್’ (Ponniyin Selvan) ಭಾಗ-1 ಚಿತ್ರವು ಭರ್ಜರಿ ಪ್ರದರ್ಶನ ಕಾಣ್ತಿದ್ದು, ಈಗಾಗಲೇ ಸುಮಾರು 500 ಕೋಟಿ ಬಾಚಿಕೊಂಡಿದೆ.
ಮಲಯಾಳಂ ಸ್ಟಾರ್ ಮೋಹನ್ ಲಾಲ್ (Mohan Lal) ಅವರೊಂದಿಗೆ ನಟಿಸಿರುವ `ರಾಮ್’ ಮಲಯಾಳಂ (Malayalam) ಸಿನಿಮಾದ (Cinema) ಶೂಟಿಂಗ್ ಮುಗಿಸಿದ ತ್ರಿಶಾ ಯುರೋಪಿಯನ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಈ ವೇಳೆ ಕಾಲಿಗೆ ಪೆಟ್ಟಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ.