ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ (Car) ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಘಟನೆ ಚಿಕ್ಕಮಗಳೂರು (Chikkamagaluru) ನಗರದ ಕೋಟೆಕೆರೆಯಲ್ಲಿ ನಡೆದಿದೆ.
ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ವಿದ್ಯತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಬಳಿಕ ಕೆರೆಗೆ ಹಾಕಿದ್ದ ಕಬ್ಬಿಣದ ಬೇಲಿ ಮುರಿದುಕೊಂಡು ಕೆರೆಗೆ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದನ್ನೂ ಓದಿ: ಹನೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ – 9 ಮಂದಿಗೆ ಗಂಭೀರ ಗಾಯ
ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಕ್ರೇನ್ ಮೂಲಕ ಕೆರೆಯಿಂದ ಕಾರನ್ನು ಮೇಲೆತ್ತಿದ್ದಾರೆ. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸಿ.ಟಿ.ರವಿಯವರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: CNG ತುಂಬಿಸುವಾಗ ಕಾರಿನ ಸಿಲಿಂಡರ್ ಸ್ಫೋಟ – ಕಾರು ಛಿದ್ರ ಛಿದ್ರ


