ಚಾಮರಾಜನಗರ: ಎರಡು ಕಾರುಗಳ ನಡುವೆ ಭೀಕರ ಅಪಘಾತ (Accident) ಸಂಭವಿಸಿ 9 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹನೂರು (Hanur) ಪಟ್ಟಣದ ಹೊರವಲಯದಲ್ಲಿರುವ ಮಹದೇಶ್ವರ ಐಟಿಐ ಕಾಲೇಜಿನ ಬಳಿ ನಡೆದಿದೆ.
ಸುವರ್ಣ, ಲೋಕೇಶ್, ಶ್ರೇಯಾ, ರುಕ್ಮಿಣಿ ಮಂಜೇಶ್, ಭಾಗ್ಯಮ್ಮ, ಮಹಾದೇವ, ಮನ್ಸೂರ್, ಮಹಮ್ಮದ್ ದೊಫಿ, ನಿಜಾವುದ್ದಿನ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಏಳು ಮಂದಿಗೆ ತೀವ್ರ ಗಾಯಗಳಾಗಿದ್ದು, ಕೈಕಾಲು ಮುರಿದಿವೆ ಎಂದು ತಿಳಿದು ಬಂದಿದೆ. ಒಂದು ಕಾರಿನಲ್ಲಿದ್ದವರು ಮಲೆ ಮಹದೇಶ್ವರಕ್ಕೆ ತೆರಳುತ್ತಿದ್ದರು. ಇನ್ನೊಂದು ಕಾರಿನಲ್ಲಿದ್ದವರು ಕೊಳ್ಳೇಗಾಲದತ್ತ ತೆರಳುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಅಮೃತಸರ | LGBTQ ಪ್ರಭಾವಿ, ಮೇಕಪ್ ಆರ್ಟಿಸ್ಟ್‌ಗೆ ಗುಂಡಿಕ್ಕಿ ಹತ್ಯೆ – ತನಿಖೆ ಚುರುಕು
ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಆರ್ಕೆಸ್ಟ್ರಾ ನೋಡ್ತಿದ್ದ ವೇಳೆ ದುರಂತ – ಲೈಟ್ ಕಂಬ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರ

