ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸರ್ಕಾರಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಇದೆ. ಈ ಆಸ್ಪತ್ರೆಗೆ ಸುತ್ತಮುತ್ತಲಿನ ಜನರು ಹಲವು ಕಾರಣಗಳಿಗಾಗಿ ವಯಸ್ಸಾದ ತಂದೆ-ತಾಯಿಯರನ್ನು ಕರೆದುಕೊಂಡು ಬಂದು ದಾಖಲು ಮಾಡುತ್ತಾರೆ. ಆದ್ರೆ ಹುಷಾರಾದ ಬಳಿಕ ತಂದೆ-ತಾಯಿಯನ್ನು ವಾಪಸ್ ಕರೆದುಕೊಂಡು ಹೋಗದೇ ಇರುವುದು ವಿಷಾದನೀಯ ಸಂಗತಿ.
ಪ್ರತಿ ತಿಂಗಳು ಇದೇ ರೀತಿ ಇಬ್ಬರು ವಯೋವೃದ್ಧರು ಈ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ನೀಡುವ ಬನ್ ಹಾಗೂ ಹಾಲನ್ನು ಸೇವಿಸಿ ಬದುಕು ಸಾಗಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಕೆಲವರನ್ನು ಎನ್‍ಜಿಒ ನೆರವಿನಿಂದ ಧಾರವಾಡದ ವೃದ್ಧಾಶ್ರಮಕ್ಕೆ ಸೇರಿಸಲಾಗಿದೆ. ಈ ಆಸ್ಪತ್ರೆ ಸಿಬ್ಬಂದಿಗಳು ಕೂಡ ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮದೇ ಖರ್ಚಿನಲ್ಲಿ ಮೂಲಭೂತ ವಸ್ತುಗಳಾದ ಸೋಪು, ತಲೆಗೆ ಎಣ್ಣೆ ಕೊಡಿಸುತ್ತಿದ್ದಾರೆ. ನಮಗೆ ಎಲ್ಲಿಯಾದರೂ ವ್ಯವಸ್ಥೆ ಮಾಡಿಕೊಡಿ ಎನ್ನುವ ಧ್ವನಿ ಕಣ್ಣಲ್ಲಿ ನೀರು ತರಿಸುತ್ತಿದೆ.