ನವದೆಹಲಿ: ನೆಹರು, ಇಂದಿರಾ, ಸೋನಿಯಾ ಗಾಂಧಿ ಹೆಸರು ಹೇಳಿಕೊಂಡು ಮೂರ್ನಾಲ್ಕು ತಲೆಮಾರಿಗಾಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.
The senior Congress leader in Karnataka, Ramesh Kumar, has shed light on how the leaders of the party have looted the country and accumulated wealth that generations of their families can enjoy. The very existence of the party is based on corruption. pic.twitter.com/MJneHcngy6
— Pralhad Joshi (@JoshiPralhad) July 22, 2022
Advertisement
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ. ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯವರ ಹೆಸರಲ್ಲಿ ಮೂರು ತಲೆಮಾರಿಗಾಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್‍ನ ಸತ್ಯವನ್ನ ಸ್ವತಃ ರಮೇಶ್ ಕುಮಾರ್ ಬಹಿರಂಗಪಡಿಸಿದ್ದಾರೆ ಎಂದರು. ಇದನ್ನೂ ಓದಿ: ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಅಂತ ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ: ಮೊಯ್ಲಿ
Advertisement
ಕಾಂಗ್ರೆಸಿಗರು ಮೂರು-ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಸಂಪಾದನೆ ಮಾಡಿಟ್ಟಿದ್ದಾರೆ ಎಂದು ಸ್ವತಃ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಕುಮಾರ್ ವಾಸ್ತವ ಒಪ್ಪಿಕೊಂಡಿದ್ದಾರೆ.
ಭ್ರಷ್ಟಾಚಾರವು ಕಾಂಗ್ರೆಸ್‌ನ ಅವಿಭಾಜ್ಯ ಅಂಗ ಎಂಬುದು ಸಾಬೀತಾಗಿದೆ.
— Pralhad Joshi (@JoshiPralhad) July 22, 2022
Advertisement
ರಮೇಶ್ ಕುಮಾರ್ ಅವರು ಮಾಜಿ ಸ್ಪೀಕರ್. ಈ ಹಿಂದೆ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರು. ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿರುವವರು. ದೇಶವನ್ನ, ರಾಜ್ಯವನ್ನ ಕಾಂಗ್ರೆಸ್ ಲೂಟಿ ಮಾಡಿದೆ ಅಂತ ಅವರೇ ಈಗ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ಸತ್ಯ ಹೇಳಿದ್ದಾರೆ. ಈಗ ಕೊನೆ ಪಕ್ಷ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿ ಅವರ ವಿಚಾರಣೆ ಶಾಂತಿಯುತವಾಗಿ ನಡೆಯಲು ಕಾಂಗ್ರೆಸ್ ನವರು ಸಹಕರಿಸಲಿ ಎಂದು ಸಚಿವರು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಸದನದ ಕಲಾಪಕ್ಕೆ ಅಡ್ಡಿಪಡಿಸೋ ಮೂಲಕ ಕಾಂಗ್ರೆಸ್ ಸಂಸದರ ಹಕ್ಕು ಕಸಿಯುತ್ತಿದೆ: ಜೋಶಿ ಟೀಕೆ